ತುಳಸಿ ವಿವಾಹ

ಹಬ್ಬಗಳು - 0 Comment
Issue Date : 14.11.2013

ಕಾರ್ತಿಕ ಮಾಸವೆಂದರೆ ಹಾಗೆ ಅದೊಂದು ಹಬ್ಬಗಳ ಸರಮಾಲೆ. ಎಲ್ಲೆಲ್ಲೂ ಸಡಗರ. ಒಂದಕ್ಕಿಂತ ಇನ್ನೊಂದು ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ತಿಂಗಳು ಪೂರ್ತಿ ಮನೆ ಮನಗಳಲ್ಲಿ ನವ ನವೋಲ್ಲಾಸದ ಸಡಗರ, ಉತ್ಸಾಹ ಕಂಡು ಬರುತ್ತದೆ. ಅಂದಹಾಗೆ ಇನ್ನೇನು ತುಳಸಿ ಹಬ್ಬ ಬಂದೇ ಬಿಟ್ಟಿತು. ತುಳಸಿ ವಿವಾಹವನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುತ್ತಾರೆ. ಕಾರ್ತಿಕ ಶುದ್ಧ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ಮುಗಿದು ಕೆಲದಿನಗಳ ಬಳಿಕ ನಾಡಿನೆಲ್ಲೆಡೆ ತುಳಸಿ ಮದುವೆಯನ್ನಾಚರಿಸುವುದು ವಾಡಿಕೆ. ತುಳಸಿ ವೃಂದಾವನಕ್ಕೆ ಮಂಟಪವನ್ನು ಕಟ್ಟಿ ಶ್ರೀಕೃಷ್ಣನ […]