ಹಾಸನದಲ್ಲಿ ಯೋಧರ ಸ್ಮರಣೆ

ಹಾಸನ - 0 Comment
Issue Date : 05.08.2014

ಹಾಸನ: ಹಾಸನದ ಹೇಮಾವತಿ ಪ್ರತಿಮೆಯ ಮುಂದೆ ಕಾರ್ಗಿಲ್ ವಿಜಯದ 15ನೇ ವರ್ಷಾಚರಣೆ ಮತ್ತು ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ಜಿಲ್ಲೆಯ ಯೋಧರ ಸಂಸ್ಮರಣ ಕಾರ್ಯಕ್ರಮವನ್ನು ಸ್ಥಳೀಯ ಯುವ ಬ್ರಿಗೇಡ್ ಹಮ್ಮಿಕೊಂಡಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನದ ವೇದಭಾರತಿಯ ಸಂಯೋಜಕರಾದ ಹರಿಹರಪುರಶ್ರೀಧರ್ ಅವರು ಕಾರ್ಗಿಲ್ ಸಮರದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಪಾಕಿಸ್ಥಾನಿ ಸೈನಿಕರು ಉಗ್ರರ ವೇಷದಲ್ಲಿ ಭಾರತದ ಗಡಿಯೊಳಗೆ ನುಸುಳಿದ ಬಗ್ಗೆ ದನಗಾಹಿ ಬಾಲಕರು ಸೈನ್ಯಕ್ಕೆ ಮೊದಲ ಮಾಹಿತಿಯನ್ನು ನೀಡಿ ದೇಶಭಕ್ತರೆನಿಸಿಕೊಂಡರೆಂದು ತಿಳಿಸಿ ಇಂದಿನ ವಿದ್ಯಾವಂತರೆನಿಸಿಕೊಂಡ ಯುವಕರು ಈ ಬಾಲಕರಿಂದ […]

ಹಾಸನದಲ್ಲಿ ಪರಿಸರ ಜಾಗೃತಿ ಯಜ್ಞ

ಹಾಸನದಲ್ಲಿ ಪರಿಸರ ಜಾಗೃತಿ ಯಜ್ಞ

ಹಾಸನ - 0 Comment
Issue Date : 23.06.2014

ಹಾಸನ: ಎಂ. ಕೃಷ್ಣಾ ಅಂಧಮಕ್ಕಳ ಶಾಲೆಯಲ್ಲಿ ಜೂ.15ರಂದು ಸ್ಪಂದನ ವೇದಿಕೆ ಮತ್ತು ವೇದ ಭಾರತಿಯ ಸಹಯೋಗದೊಡನೆ ಪರಿಸರ ಜಾಗೃತಿ ಕಾರ್ಯಕ್ರಮದ ನಿಮಿತ್ತ ಪರಿಸರ ಜಾಗೃತಿ ಯಜ್ಞ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ವೇದಭಾರತಿಯ ಸದಸ್ಯರುಗಳಿಂದ ಅಗ್ನಿಹೋತ್ರ ನಡೆಯಿತು. ಎಲ್ಲಾ ಅಂಧಮಕ್ಕಳೂ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸುವಾಗ ಆನಂದ ಪರವಶರಾದರು. ಉತ್ತಮ ಪರಿಸರಕ್ಕಾಗಿ ಅಗ್ನಿಹೋತ್ರದ ಲಾಭವನ್ನು ವೇದಭಾರತಿಯ ಸಂಯೋಜಕರಾದ ಹರಿಹರಪುರ ಶ್ರೀಧರ್ ಅವರು ತಿಳಿಸುತ್ತಾ, ಅಗ್ನಿಹೋತ್ರದ ಮಂತ್ರಗಳಿಂದ ಅಂತರಂಗ ಶುದ್ಧಿಯಾದರೆ ಅಗ್ನಿಹೋತ್ರದಲ್ಲಿ ಬಳಸುವ ತುಪ್ಪ, ಸಮಿತ್ತು ಮತ್ತು […]

ವಿಕ್ರಮ ಓದುಗರ ಸಮಾವೇಶ

ಹಾಸನ - 0 Comment
Issue Date : 16.01.2014

‘ವಿಕ್ರಮ’ ಸಾಪ್ತಾಹಿಕದ ನಿಯಮಿತ ಓದುಗರ  ಸಮಾವೇಶವು ಹಾಸನ ಜಿಲ್ಲೆಯ ಹೊಯ್ಸಳ ನಗರದ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿರುವ “ಈಶಾವಾಸ್ಯಂ” (ಹರಿಹರಪುರ ಶ್ರೀಧರ ಅವರ ಮನೆ) ಯಲ್ಲಿ ಜ. 18 ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮವು ನಡೆಯಲಿದೆ. ಪತ್ರಿಕೆಯ ಕುರಿತು ನಿಮ್ಮ ಅನಿಸಿಕೆ, ಸಲಹೆಗಳನ್ನು ತಿಳಿದುಕೊಳ್ಳಲು ಓದುಗರ ಸಮಾವೇಶವನ್ನು  ಏರ್ಪಡಿಸಲಾಗಿದೆ.