ಹುಬ್ಬಳ್ಳಿ: ಆರೆಸ್ಸೆಸ್‌ನಿಂದ ಸ್ವಚ್ಛತಾ ಕಾರ್ಯ

ಹುಬ್ಬಳ್ಳಿ: ಆರೆಸ್ಸೆಸ್‌ನಿಂದ ಸ್ವಚ್ಛತಾ ಕಾರ್ಯ

ಹುಬ್ಬಳ್ಳಿ - 0 Comment
Issue Date : 22.09.2014

ಹುಬ್ಬಳ್ಳಿ : ಹುಬ್ಬಳ್ಳಿ ನಗರದ ವಿವಿಧ ಉಪನಗರಗಳಲ್ಲಿ ಕಳೆದ ಸೆ.14ರಂದು ಆರ್‌ಎಸ್‌ಎಸ್ ಸ್ವಯಂಸೇವಕರಿಂದ ನಡೆದ ಸೇವಾ ಸಾಂಘಿಕ್‌ನಲ್ಲಿ ಸಂಘಸ್ಥಾನದ ಸುತ್ತಲಿನ ಪ್ರದೇಶಗಳನ್ನು ಸ್ವಚ್ಚಗೊಳಿಸಲಾಯಿತು. ವಿದ್ಯಾನಗರ ಉಪನಗರ ಸಾಂಘಿಕ್‌ನಲ್ಲಿ ಮಾತನಾಡಿದ ಜಿಲ್ಲಾ ಸೇವಾ ಪ್ರಮುಖ್ ಮುರಲಿ ಕುಲಕರ್ಣಿಯವರು, ‘ನಮ್ಮ ಮನೆಯನ್ನು ಶುಚಿಯಾಗಿರಿಸಿಕೊಳ್ಳುವಂತೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿರಿಸುವುದೂ ನಾಗರಿಕರಾದ ನಮ್ಮ ಕರ್ತವ್ಯವಾಗಿದೆ. ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ನುಡಿದರು. ವಿದ್ಯಾನಗರ ಉಪನಗರದ ಸ್ವಯಂಸೇವಕರು ಸಮುದಾಯ ಭವನ ಮತ್ತು ಸಾರ್ವಜನಿಕ ಆಟದ ಮೈದಾನವನ್ನು ಶುಚಿಗೊಳಿಸಿದರು. ಅಕ್ಕಿಹೊಂಡ ಉಪನಗರದ […]

ಸಮಾಜಕ್ಕಾಗಿಯೇ ಬದುಕಿದ ಬಿ.ಎಲ್.ಅಕ್ಕಿ

ಹುಬ್ಬಳ್ಳಿ - 0 Comment
Issue Date :

ನವಲಗುಂದ: ಸಮಾಜಕ್ಕಾಗಿ ಬದುಕಿದ ಸಂಘದ ಕಾರ್ಯಕರ್ತರಾಗಿದ್ದ ದಿವಂಗತ ಬಿ.ಎಲ್.ಅಕ್ಕಿ ಅವರ ಕುರಿತ ಸಂಸ್ಮರಣ ಸಂಚಿಕೆಯನ್ನು ಇಲ್ಲಿಗೆ ಸಮೀಪದ ಮಜ್ಜಿಗುಡ್ಡ ಗ್ರಾಮದಲ್ಲಿ ಬಿಡುಗಡೆಗೊಳ್ಳಿಸಲಾಯಿತು. ಸಮಾರಂಭದ ಸಾನಿಧ್ಯ ವಹಿಸಿದ್ದ ಗದುಗಿನ ಶ್ರೀ ತೊಂಟದಾರ್ಯ ಜಗದ್ಗುರುಗಳು ಅಕ್ಕಿಯವರು ಸಮಾಜ ಸೇವೆಯಲ್ಲಿ ಸಾಕ್ಷತ್ಕಾರ ಕಂಡ ಗಣ್ಯರು ಎಂದು ಪ್ರಶಂಸಿಸಿದರು. ಸಮಾರಂಭದಲ್ಲಿ ಹೂವಿನ ಶಿಡ್ಲಿಯ ವಿರಕ್ತಮಠದ ಚೆನ್ನವೀರಸ್ವಾಮಿಗಳು, ಹೊಸಳ್ಳಿಯ ಬೂದೀಶ್ವರ ಮಹಾಸ್ವಾಮಿಗಳು, ಎಸ್.ಎಸ್.ಹರ್ಲಾಪುರ, ಕೃತಿಕಾರ ಡಾ. ಎ.ಸಿ.ವಾಲಿ, ಎಂ.ಕೆ. ನಾಯಕ ಮೊದಲಾದವರು ಉಪಸ್ಥಿತರಿದ್ದರು. ನಿಂಗಪ್ಪ ನೀಲಪ್ಪ ಗುಡ್ಡದ ಅಧ್ಯಕ್ಷತೆ ವಹಿಸಿದ್ದರು. ದಿ. ಬಿ.ಎಲ್.ಅಕ್ಕಿಯವರು ಶಿಕ್ಷಕರಾಗಿ […]

ಕೆಎಲ್‍ಇಯಲ್ಲಿ ಕನ್ನಡ ಧ್ವನಿ

ಹುಬ್ಬಳ್ಳಿ - 0 Comment
Issue Date : 10.02.2014

ಹುಬ್ಭಳ್ಳಿ ಸುತ್ತಲಿನ 11 ಕಿ.ಮೀ. ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 21ರಂದು ಲೋಕಾರ್ಪಾಣೆಗೊಂಡ ನೂತನ ಎಫ್‍ಎಂ ಚಾನೆಲ್‍ ‘ಬಿವಿಬಿ ಸಮೂದಾಯ ಬಾನುಲಿ ಕೇಂದ್ರ’ದ ಮೂಲಕ ಹುಬ್ಬಳ್ಳಿ ಜನತೆ ಹತ್ತಾರು ವಿಶೇಷ ಕಾರ್ಯಕ್ರಮಗಳನ್ನು ತಮ್ಮ ರೇಡಿಯೋಗಳಿಂದ ಆಸ್ವಾದಿಸುತ್ತಿದ್ದಾರೆ.     ಈ ಸಮುದಾಯ ಬಾನುಲಿ ಕೇಂದ್ರ ತಲೆ ಎತ್ತಿರುವುದು ಕೆಎಲ್‍ಇ ಸಂಸ್ಥೆಯ ಬಿ.ವಿ.ಭೂಮರೆಡ್ಡಿ ಎಂಜಿನಿಯರಿಂಗ್‍ ಮತ್ತು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನ ಾವರಣದಲ್ಲಿ.  ಮನೋರಂಜನೆ ಶಿಕ್ಷಣ,ಆರೋಗ್ಯ, ಜಾನಪದ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಈ 90.4 ಫ್ರಿಕ್ವೆನ್ಸಿ ಎಫ್ಎಂ ಚಾನೆಲ್‍ನಲ್ಲಿ ಬಿತ್ತರಗೊಳ್ಳುತ್ತಿವೆ. ಇಲ್ಲಿ ಎಫ್ಎಂ ಬಾನುಲಿ ಕೇಂದ್ರಕ್ಕಾಗಿ […]

ನಮ್ಮ ಭಾರತ ಇಂದಿಗೂ ಬಂಗಾರದ ಗಣಿಯೇ: ರವಿಕುಮಾರ್

ನಮ್ಮ ಭಾರತ ಇಂದಿಗೂ ಬಂಗಾರದ ಗಣಿಯೇ: ರವಿಕುಮಾರ್

ಹುಬ್ಬಳ್ಳಿ - 0 Comment
Issue Date : 03

ಹುಬ್ಬಳ್ಳಿ: ನಮ್ಮ ರಾಷ್ಟ್ರದ ಒಟ್ಟು ಜನಸಂಖ್ಯೆಯ ಕೇವಲ ಶೇ.1ರಷ್ಟು ಜನ ವಿದೇಶಕ್ಕೆ ಕೆಲಸ ಅರಸಿ ಹೋಗುತ್ತಿದ್ದರೆೆ ಅದನ್ನೇಕೆ ಪ್ರತಿಭಾ ಪಲಾಯನ ಎನ್ನಬೇಕು? ನಾವು ಬಾಕಿ ಶೇ.99ರಷ್ಟು ಲಭ್ಯ ದೇಸಿ ಮಾನವ ಸಂಪನ್ಮೂಲವನ್ನು ಹೇಗೆ ರಾಷ್ಟ್ರದ ಅಭ್ಯುದಯಕ್ಕೆ ಬಳಸಬಹುದು ಎಂದು ಯೋಜಿಸುವುದು ಜಾಣತನವಲ್ಲವೇ? ಅಥವಾ ಅವರೆಲ್ಲ ನಿರುಪಯುಕ್ತರು ಎಂಬ ಭಾವನೆ ಏಕೆ ಬಲಗೊಳಿಸಬೇಕು?ಹಿಂದು ಸ್ವಯಂಸೇವಕ ಸಂಘದ ಅಂತಾರಾಷ್ಟ್ರೀಯ ಜಂಟಿ ಸಂಯೋಜಕ, ಚೆನ್ನೈ ಐಟಿಐ ಪದವೀಧರ ರವಿಕುಮಾರ ಜಿ. ಅಯ್ಯರ್ ಸಾತ್ವಿಕವಾಗಿ ಪ್ರಶ್ನಿಸಿದ್ದು ಹೀಗೆ. ನಗರದ ಬಿ.ವಿ.ಭೂಮರೆಡ್ಡಿ ತಾಂತ್ರಿಕ ಮತ್ತು […]

ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ

ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ

ಹುಬ್ಬಳ್ಳಿ - 0 Comment
Issue Date : 17.01.2014

ನಾಡಿನ ಖ್ಯಾತನಾಮ ಸಾಹಿತಿಗಳು ಭಾಗವಹಿಸಿ ಸಾಹಿತ್ಯ ವಿಮರ್ಶೆಗೈಯುವ ಧಾರವಾಡ ಸಾಹಿತ್ಯ ಸಂಭ್ರಮ ಶುಕ್ರವಾರ (ಜ.17) ದಿಂದ ಮೂರು ದಿನ ನಡೆಯಲಿದೆ.  ಭಾಷಣ, ದೀರ್ಘ ನಿರೂಪಣೆಗಳಿಗಿಂತ ಭಿನ್ನವಾಗಿರುವ ಈ ಸಂಭ್ರಮದಲ್ಲಿ 90 ಸಂಪನ್ಮೂಲ ವ್ಯಕ್ತಿಗಳು, ಕರ್ನಾಟಕ ಮತ್ತು ಹೊರರಾಜ್ಯದ 50 ವಿಶೇಷ ಆಹ್ವಾನಿತರು ಅಲ್ಲದೇ ಸ್ಥಳೀಯ 60 ಆಹ್ವಾನಿತರು ಭಾಗವಹಿಸಲಿದ್ದಾರೆ.  

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಭಾರತೀಯ ಶಿಕ್ಷಣ ವ್ಯವಸ್ಥೆ ಅಗತ್ಯ

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಭಾರತೀಯ ಶಿಕ್ಷಣ ವ್ಯವಸ್ಥೆ ಅಗತ್ಯ

ಹುಬ್ಬಳ್ಳಿ - 0 Comment
Issue Date : 30.12.2013

ಧಾರವಾಡ: ಸದೃಢ ಸಮಾಜ ಹಾಗೂ ರಾಷ್ಟ್ರದ ನಿರ್ಮಾಣಕ್ಕೆ ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯ ಅಗತ್ಯತೆಯನ್ನು ಗುರುತಿಸಿದ್ದ ಸ್ವಾಮಿ ವಿವೇಕಾನಂದರ ಕಲ್ಪನೆಯನ್ನು ಸಾಕಾರಗೊಳಿಸುವಿಕೆಯ ಪ್ರಯತ್ನವನ್ನು ವಿದ್ಯಾಭಾರತಿ ತನ್ನ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಸುತ್ತಿದೆ ಎಂದು ವಿದ್ಯಾಭಾರತಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕಾಶೀಪತಿ ಹೇಳಿದರು.ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಡಿ.21ರಂದು ನಡೆದ ವಿದ್ಯಾಭಾರತಿಯ ಎರಡು ದಿನಗಳ ಪ್ರಾಂತೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಸ್ತಾವಿಕವಾಗಿ ಮಾತನಾಡಿದ ಅವರು, ಐರೋಪ್ಯ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಿಂದ ಭಾರತ ಕೇಂದ್ರಿತ ಶಿಕ್ಷಣದತ್ತ ನಮ್ಮ ಶಿಕ್ಷಣ ಪದ್ಧತಿಯನ್ನು […]

ಶಹೀದ್‌ ಭಗತ್‌ಸಿಂಗ್‌ ದಿನಾಚರಣೆ

ಹುಬ್ಬಳ್ಳಿ - 0 Comment
Issue Date : 21.10.2013

ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ವತಿಯಿಂದ ಹಳೆ ಹುಬ್ಬಳ್ಳಿಯ ಕೋಟಾರಗೇರಿ ಓಣಿಯಲ್ಲಿ ಹುತಾತ್ಮ ಭಗತ್‌ಸಿಂಗ್‌ ಅವರ 107ನೇ ಜಯಂತಿಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ಸಿದ್ದಾರೂಢ ನಿಂಬಣ್ಣ ಶೆಟ್ಟರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಮಹಾಪೌರ ಡಾ.ಪಾಂಡುರಂಗ ಪಾಟೀಲ್‌ ಅವರು ಭಗತ್‌ಸಿಂಗ್‌ ಜೀವನದ ರೋಚಕ ಘಟನೆಗಳನ್ನು ಮನಮುಟ್ಟುವಂತೆ ಹೇಳಿದರು. ಈಗಿನ ಯುವಜನತೆ ಭಗತ್‌ಸಿಂಗ್‌ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಶ್ರೀಮತಿ ರಾಧಾಬಾಯಿ ನಂದು ಸಪಾರೆ ಅವರು ಕರೆ ನೀಡಿದರು. ವಿಹಿಂಪ ಕರ್ನಾಟಕ ಉತ್ತರಪ್ರಾಂತ ಕಾರ್ಯದರ್ಶಿ ರಮೇಶ್‌ ಕುಲಕರ್ಣಿ, ಗಣು ಜರತಾರಘರ್, […]

ಮಕ್ಕಳ ಹಕ್ಕು ತಿಳಿಸಲು ಜಿನೆವಾಕ್ಕೆ ಕರ್ನಾಟಕದ ಹುಬ್ಬಳಿಯ ಬಾಲಕಿ

ಹುಬ್ಬಳ್ಳಿ - 0 Comment
Issue Date :

 ಸ್ವಿಜರ್ಲೆಂಡ್ ನ ಜಿನೆವಾದಲ್ಲಿ ಅ.10ರಂದು ನಡೆಯಲಿರುವ 66 ನೇ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಭಾರತದ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವರದಿ ಮಂಡಿಸಲು ಧಾರವಾಡ ತಾಲೂಕಿನ ಮಂಜುಳ ಮುನವಳ್ಳಿ ಆಯ್ಕೆಯಾಗಿದ್ದಾರೆ. Childrens alternative report to united nations commite on the rights of child  ಎಂಬ ಶಿರ್ಷಿಕೆಯ ವರದಿಯಲ್ಲಿ ಮಕ್ಕಳೆಂದರೆ ಯಾರು ಎಂಬ ಗೊಂದಲ ನಿವಾರಿಸುವುದರೊಂದಿಗೆ ಮಕ್ಕಳ ಬಗೆಗಿನ ತಾರತಮ್ಯ, ನಾಗರಿಕ ಹಕ್ಕು, ಸ್ವಾತಂತ್ರ್ಯ, ಶಿಕ್ಷಣದ ಹಕ್ಕು ಮೊದಲಾದ ವಿಷಯಗಳ ಕುರಿತಾಗಿ ವಿಚಾರ ಮಂಡನೆ […]