ಉದಾರತೆಯ ಉದಾಸೀ ಸಂಪ್ರದಾಯ- ಭಾಗ 2

ಉದಾರತೆಯ ಉದಾಸೀ ಸಂಪ್ರದಾಯ- ಭಾಗ 2

ಇತಿಹಾಸ - 0 Comment
Issue Date :

ಸನಾತನ ಧರ್ಮದ ಪರಮಗುರಿಯೇ ಮೋಕ್ಷಸಾಧನೆ. ಮೋಕ್ಷದ ಗುರಿ ಹೊಂದಲು ಜ್ಞಾನ-ಕರ್ಮ-ಭಕ್ತಿಗಳೆಂಬ ಮೂರು ಮಾರ್ಗಗಳನ್ನು ನಮ್ಮ ಪ್ರಾಚೀನ ಪ್ರಾಜ್ಞರು ನೀಡಿರುತ್ತಾರೆ. ಅವುಗಳಲ್ಲಿ ಯಾವುದೇ ಒಂದು ಮಾರ್ಗದ ಅನುಷ್ಠಾನವೂ ಅಂತಿಮ ಗುರಿ ಸೇರಲು ಸಹಕಾರಿಯಾಗಿದೆ. ಮಧ್ಯಯುಗದ ಭಾರತದ ಇತಿಹಾಸದಲ್ಲಿಯ ಒಂದು ವಿಶೇಷ ಧಾರ್ಮಿಕ-ಸಾಮಾಜಿಕ ಬೆಳವಣಿಗೆಯೇ ‘ಭಕ್ತಿ ಪಂಥ’ದ ಅಥವಾ ‘ಭಕ್ತಿ ಚಳುವಳಿಯ’ ಬೆಳವಣಿಗೆ. ಗುರು ನಾನಕರ (1469-1538) ನೇತೃತ್ವದಲ್ಲಿ ಅರಳಿದ ಭಕ್ತಿ ಚಳುವಳಿ ಮುಂದೆ ಸಿಖ್ ಪಂಥದ ಸ್ಥಾಪನೆಗೆ ನಾಂದಿಯಾಯಿತು. ನಾನಕಪುತ್ರ ಶ್ರೀ ಬೀಬಾ ಚಂದ್ರಾಚಾರ್ಯರು (1496-1629) ಭಕ್ತಿಪಂಥವನ್ನು ಅದರದೇ […]

ಉದಾರತೆಯ ಉದಾಸೀ ಸಂಪ್ರದಾಯ - ಭಾಗ I

ಉದಾರತೆಯ ಉದಾಸೀ ಸಂಪ್ರದಾಯ – ಭಾಗ I

ಇತಿಹಾಸ ; ಲೇಖನಗಳು - 0 Comment
Issue Date : 06.06.2016

ಭಾರತೀಯ ಸಂಸ್ಕೃತಿಯ ವೈವಿಧ್ಯಮಯ ಇತಿಹಾಸದಲ್ಲಿ ಅದೆಷ್ಟೋ ಪಂಥಗಳು, ಸಂಪ್ರದಾಯಗಳು ತಮ್ಮದೇ ಆದ ಕೊಡುಗೆಗಳಿಂದ ಇಲ್ಲಿಯ ಸಾಂಸ್ಕೃತಿಕ-ಧಾರ್ಮಿಕ ಜೀವನವನ್ನು ಶ್ರೀಮಂತಗೊಳಿಸಿವೆ. ಇಲ್ಲಿ ಹಿಂದೂ, ಜೈನ, ಬೌದ್ಧ, ಸಿಖ್ಖ ಎಂಬ ಪಂಥ ಭೇದವಿಲ್ಲದೆ (ಮತಭೇದವಲ್ಲ) ಆತ್ಮಸಾಕ್ಷಾತ್ಕಾರವನ್ನರಸುವ ಋಷಿ-ಮುನಿಗಳು, ಸಾಧು-ಸಂತರೂ, ಸನ್ಯಾಸಿ-ವಿರಾಗಿಗಳೂ ತಮ್ಮ ಜೀವನಧರ್ಮವನ್ನೂ, ಅಧ್ಯಾತ್ಮಿಕ ಚಿಂತನೆಗಳನ್ನೂ ಮಾನವ ಸುಖದರ್ಶನಕ್ಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಉದಾಸೀ ಸಂಪ್ರದಾಯದ ವೈಶಿಷ್ಟ್ಯವನ್ನು ಡಾ. ಸತೀಶ್.ಕೆ.ಕಪೂರ್ ಅವರು ವಿಶ್ಲೇಷಿಸಿದ್ದಾರೆ. (“The Udasi Tradition,’  Bhavans Journal, May 14, 2014) ‘ಉದಾಸೀ’ ಶಬ್ದವೇ ಸೂಚಿಸುವಂತೆ ಅದು […]

ಸಿಡಿದ ಕ್ರಾಂತಿಯ ಕಿಡಿ  ಖುದಿರಾಮ ಬೋಸ್ - 1908

ಸಿಡಿದ ಕ್ರಾಂತಿಯ ಕಿಡಿ ಖುದಿರಾಮ ಬೋಸ್ – 1908

ಇತಿಹಾಸ ; ಲೇಖನಗಳು - 0 Comment
Issue Date : 30.05.2016

-ಸಿ.ಎಸ್‍.ಶಾಸ್ತ್ರೀ ಭಾರತದಲ್ಲಿ ಬ್ರಿಟಿಷರು ಹಂತ ಹಂತವಾಗಿ ಬೆಳೆದು ಅವರ ಸಾಮ್ರಾಜ್ಯಶಾಹೀ ಪ್ರಭಾವವನ್ನು ದೇಶದಾದ್ಯಂತ ವಿಸ್ತರಿಸುವಲ್ಲಿ ಸಫಲರಾದಾಗ, ರಾಷ್ಟ್ರಪ್ರೇಮೀ ದೇಶಬಂಧುಗಳು ಮಾತೃಭೂಮಿಯ ದಾಸ್ಯವಿಮೋಚನೆಗಾಗಿ ಕ್ರಾಂತಿಕಾರೀ ಮಾರ್ಗ ಕೈಕೊಂಡರು. 1905ರಲ್ಲಿ ಕರ್ಜನ್ ಬಂಗಾಳದ ವಿಭಜನೆ ಮಾಡಿದಾಗ, ಅದರ ವಿರುದ್ಧ ದೇಶದಾದ್ಯಂತ ಚಳುವಳಿಗಳಾದವು. 1908ರ ವೇಳೆಗೆ ಕ್ರಾಂತಿಕಾರೀ ಬಂಗಾಳೀ ತರುಣರು ಪ್ರತೀಕಾರದ ಮಾರ್ಗ ಅನುಸರಿಸಿದರು. ಆಗ ಬ್ರಿಟಿಷ್ ಸಿ.ಐ.ಡಿ.(Criminal Inteligence Dept.) ವಿಭಾಗದವರು ಕ್ರಾಂತಿಕಾರೀ ಚಟುವಟಿಕೆಗಳನ್ನು ಅಮೂಲಾಗ್ರವಾಗಿ ಹತ್ತಿಕ್ಕಲು ಹೆಣಗಾಡಿದರು. ಆ ಕ್ರಾಂತಿಯ ಒಂದು ಸ್ಫೋಟ ನಡೆಸಿದವನೇ ಖುದಿರಾಮ್ ಬೋಸ್(1889-1908). arsid2372845 […]

ಬ್ಟಿಟಿಷರ ವಿರುದ್ಧದ ಕ್ರಾಂತಿಕಾರಿ ಹೋರಾಟದ ಹಿನ್ನೆ

ಬ್ಟಿಟಿಷರ ವಿರುದ್ಧದ ಕ್ರಾಂತಿಕಾರಿ ಹೋರಾಟದ ಹಿನ್ನೆ

ಇತಿಹಾಸ ; ಲೇಖನಗಳು - 0 Comment
Issue Date : 16.5.2016

-ಸಿ.ಎಸ್.ಶಾಸ್ತ್ರೀ ಆಧುನಿಕ ಭಾರತದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧದ ಭಾರತೀಯರ ಹೋರಾಟದ ಇತಿಹಾಸ ಜಾಗತಿಕ ಮಟ್ಟದಲ್ಲೇ ಮನಸೆಳೆಯುವುದಾಗಿದೆ. ಅದೊಂದು ವಿಶಿಷ್ಟ ರೀತಿಯ ಹೋರಾಟದ ಮಾದರಿಯಾಗಿತ್ತು. ಅದು ಅಹಿಂಸಾತ್ಮಕ ಹಾಗೂ ಹಿಂಸಾಸ್ವರೂಪದ ಪ್ರತಿಭಟನೆಯಾಗಿತ್ತು. ಅದರಲ್ಲಿ ಅಸಂಖ್ಯಾತ ಜನರು ದೇಶಕ್ಕಾಗಿ ಪ್ರಾಣಾರ್ಪಣೆಗೈದುದರ ಪರಿಣಾಮವಾಗಿ ಇಂದು ನಾವು ಸ್ವತಂತ್ರರಾಗಿದ್ದೇವೆ. ಆ ಹೋರಾಟದ ಹಿನ್ನೆಲೆಗೆ ಒಂದು ಸುದೀರ್ಘ ಇತಿಹಾಸವಿದೆ. ವಾಸ್ಕೋ ಡಾ ಗಾಮ ಭಾರತಕ್ಕೆ ಜಲಮಾರ್ಗದ ಮೂಲಕ ಬರುವುದರೊಂದಿಗೆ ಯುರೋಪಿಯನ್ನರಿಗೆ ಭಾರತದ ವ್ಯಾಪಾರದಲ್ಲಿ ಆಸಕ್ತಿಯಾಯಿತು. ಆಧುನಿಕ ಶಕ 1600ರಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯ […]

1857ರ ದಲಿತ ವೀರಾಗ್ರಣಿಗಳು

1857ರ ದಲಿತ ವೀರಾಗ್ರಣಿಗಳು

ಇತಿಹಾಸ ; ಲೇಖನಗಳು - 0 Comment
Issue Date : 07.05.2016

-ಸಿ.ಎಸ್‍.ಶಾಸ್ತ್ರೀ 1857ರ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ದಲಿತರಿಗೆ ಭಾವನಾತ್ಮಕ ಬೆಸುಗೆಯಿದೆ. ಆ ಹೋರಾಟಕ್ಕೆ ಪ್ರೇರಣೆ ನೀಡಿದವರೇ ಅವರೆಂಬ ಹೆಮ್ಮೆ ಅವರಿಗಿದೆ. ಆ ದಲಿತ ನಾಯಕರ ಹೋರಾಟ ಅವರ ಯಾವುದೇ ಸ್ವಾರ್ಥಕ್ಕಾಗಿ ಆಗಿರಲಿಲ್ಲ. ಅದೊಂದು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟವಾಗಿತ್ತೆಂಬುದನ್ನು ದಲಿತ ಸಾಹಿತ್ಯ ತೋರಿಸುತ್ತದೆ. ದಲಿತ ಹೋರಾಟಗಾರರಲ್ಲೂ ಪ್ರಾಣಾರ್ಪಣೆಗೈದ ಅಸಂಖ್ಯಾತ ಜನರ ಹೆಸರುಗಳು ದಾಖಲಾಗದೇ ಹೋಗಿವೆ. ಅದರಲ್ಲಿ ಕೆಲವೇ ಕೆಲವು ಪ್ರಮುಖ ಹೆಸರುಗಳನ್ನು ದಲಿತವೀರರಾಗಿ ಇಂದು ‘ಕೆಳಸ್ತರದ ಇತಿಹಾಸ’ ಅಧ್ಯಯನದಲ್ಲಿ (Subaltern Studies) ಕಾಣಬಹುದು. (Badri Narayan, ‘Dalit […]

‘ಮಾಪಿಳ್ಳಾ ದಂಗೆ’-ಬೆಸೆಂಟ್ ಕಂಡಂತೆ (1921)

‘ಮಾಪಿಳ್ಳಾ ದಂಗೆ’-ಬೆಸೆಂಟ್ ಕಂಡಂತೆ (1921)

ಇತಿಹಾಸ - 0 Comment
Issue Date : 30.4.2016

ಒಂದನೇ ಜಾಗತಿಕ ಸಮರದಲ್ಲಿ (1914-18) ಜರ್ಮನಿಯ ಸೋಲಿನೊಂದಿಗೆ ಅದರ ಮಿತ್ರರಾಷ್ಟ್ರಗಳೂ ಸೋಲು ಅನುಭವಿಸಿದವು. ಅದರ ಪರಿಣಾಮವಾಗಿ ಟರ್ಕಿಯ ಸುಲ್ತಾನ ‘ಖಲೀಫ’ ಅಬ್ದುಲ್ ಮಜೀದ್ ಅವನ ಸಿಂಹಾಸನ ಮತ್ತು ಅಧಿಕಾರ ಕಳೆದುಕೊಂಡ. ಖಲೀಫ ಸಮಸ್ತ ಮುಸಲ್ಮಾನರ ಧಾರ್ಮಿಕ ಹಾಗೂ ರಾಜಕೀಯ ಅಧಿಪತಿ. ಟರ್ಕಿಯಲ್ಲಿ ಖಲೀಫನನ್ನು ಪದಚ್ಯುತಿ ಮಾಡಿದುದಕ್ಕೆ ಬ್ರಿಟಿಷರ ವಿರುದ್ಧ ಭಾರತದಲ್ಲಿ ನಡೆದ ಆಂದೋಲನವೇ ‘ಖಿಲಾಫತ್ ಚಳವಳಿ’. ಅದರ ನಾಯಕತ್ವವನ್ನು ಗಾಂಧೀಜಿಯವರೇ ವಹಿಸಿದ್ದರು. ಭಾರತದಲ್ಲಿ ಗಾಂಧೀಜಿಯವರಿಂದಾದ ಅನೇಕ ರಾಜಕೀಯ ಪ್ರಮಾದಗಳಲ್ಲಿ ಖಿಲಾಫತ್ ಚಳವಳಿಯು ಒಂದಾಗಿದೆ. ಆ ಖಿಲಾಫತ್ ಚಳವಳಿಯ […]

ದಲಿತ ವೀರಾಂಗನೆಯರು - 1857

ದಲಿತ ವೀರಾಂಗನೆಯರು – 1857

ಇತಿಹಾಸ - 0 Comment
Issue Date : 23.04.2016

-ಸಿ.ಎಸ್‍.ಶಾಸ್ತ್ರೀ ಭಾರತದ ಸ್ವಾತಂತ್ರ್ಯ ಹೋರಾಟ 1857ರಿಂದಲೇ ಪ್ರಾರಂಭವಾಯಿತೆಂಬುದಾಗಿ ತಿಳಿಯುವುದಾದರೆ ಅದರಲ್ಲಿ ಪಾಲ್ಗೊಂಡವರನ್ನು ದೇಶಭಕ್ತರಾಗಿ, ರಾಷ್ಟ್ರೀಯ ನಾಯಕರಾಗಿ ಕಾಣುವ ಐತಿಹಾಸಿಕ ಅನಿವಾರ್ಯತೆ ಕಂಡುಬರುತ್ತದೆ. ಆ ಸ್ವಾತಂತ್ರ್ಯ ಹೋರಾಟದ ಅಥವಾ ದಂಗೆಯ ಇತಿಹಾಸದಲ್ಲಿ ನಮಗೆ ಪರಿಚಿತರಾಗಿರುವುದು ಕೆಲವೇ ಕೆಲವು ಹೆಸರುಗಳು. ಆದರೆ, ಆ ಹೋರಾಟದಲ್ಲಿ ಅಸಂಖ್ಯಾತ ಜನರು ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತರು. ಅವರಲ್ಲಿ ಮೇಲ್‌ಸ್ತರದ ನಾಯಕರ ಹೆಸರು ಇತಿಹಾಸದಲ್ಲಿ ದಾಖಲೆಯಾಗಿದೆಯಾದರೆ, ಕೆಳಸ್ತರಗಳ, ದಲಿತರ ಹೆಸರುಗಳನ್ನು ಇತಿಹಾಸದಲ್ಲಾಗಲೀ ಅಥವಾ ದಾಖಲೆಗಳಲ್ಲಾಗಲೀ ಕಾಣಿಸಿಗುವುದು ಕಷ್ಟ. ಇತ್ತೀಚೆಗೆ, ದಲಿತರ ಪಾತ್ರ ಮತ್ತು ಕೊಡುಗೆಗಳ ಬಗ್ಗೆ ಸಾಕಷ್ಟು […]

ಅಪಾರ್ಥ-ಅಪವಾದಕ್ಕೊಳಗಾದ ಪ್ರಾಚೀನ ವಿದ್ಯಾಜನೆ

ಅಪಾರ್ಥ-ಅಪವಾದಕ್ಕೊಳಗಾದ ಪ್ರಾಚೀನ ವಿದ್ಯಾಜನೆ

ಇತಿಹಾಸ - 0 Comment
Issue Date :

‘ಭಾರತದ ಇತಿಹಾಸವೆಂದರೆ ಅವಶ್ಯಕವಾಗಿ ಹಿಂದೂಗಳ ಇತಿಹಾಸ. ಮತ್ತು ಅವರ ಕೊಡುಗೆಯೇ ಅದನ್ನು ವೈಶಿಷ್ಟ್ಯಮಯವಾಗಿ ಮಾಡಿರುವುದು’ ಎಂದು ಮೈಕೆಲ್ ಎಡ್‌ವರ್ಡ್‌ಡೆಸ್ ಹೇಳಿರುವುದು ವಿಮರ್ಶಾತ್ಮಕವಾಗಿದೆ. ‘ಭಾರತದ ಇತಿಹಾಸ’ ಎಂದರೆ ಹಿಂದೂಗಳ ಇತಿಹಾಸ ಎಂಬುದು ಕೆಲವರ ಶೀಘ್ರ ಪ್ರತಿಕ್ರಿಯೆಗೊಳಗಾಗುವ (ಚ್ಝ್ಝಛ್ಟಿಜಜ್ಚಿ) ಹೇಳಿಕೆಯಾಗಿದೆ. ಇಲ್ಲಿ ‘ಹಿಂದೂ’ಗಳೆಂದರೆ ಮೂಲ ಭಾರತೀಯರು ಎಂದರ್ಥವಾಗಿದೆ. ಆರಂಭದಲ್ಲಿ, ಬ್ರಿಟಿಷ್ ಇತಿಹಾಸಕಾರರು ಭಾರತದ ಇತಿಹಾಸವನ್ನು, ‘ಹಿಂದುಯುಗ-ಮುಸ್ಲಿಂ ಯುಗ-ಬ್ರಿಟಿಷ್ ಯುಗ’ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಿದ್ದರು. ಹಿಂದೂ ಯುಗ ಎಂಬುದು ಪ್ರಾಚೀನ ಭಾರತಕ್ಕೆ ಸಂಬಂಧಿಸಿದ್ದಾಗಿದೆ. ಈ ಕಾಲಾವಧಿಯಲ್ಲಿ ಕಂಡುಬರುವುದೇ ಭಾರತದ ಇತಿಹಾಸದಲ್ಲಿಯ […]

ಮಹಮ್ಮದ್‍ ತುಘ್ಲಕನ "ಕೆಂಪು ಆಳ್ವಿಕೆ"

ಮಹಮ್ಮದ್‍ ತುಘ್ಲಕನ “ಕೆಂಪು ಆಳ್ವಿಕೆ”

ಇತಿಹಾಸ - 0 Comment
Issue Date : 08.03.2016

ದೆಹಲಿ ಸುಲ್ತಾನರ ಆಡಳಿತಾವಧಿ (1206-1526) ಕಂಡ ಒಂದು ವಿವಾದಾತ್ಮಕವಾದ ಆಡಳಿತ ಮಹಮ್ಮದ್ -ಬಿನ್-ತುಘಲಕನದಾಗಿತ್ತು.ಅವನು 1325 ರಲ್ಲಿ ದೆಹಲಿ ಸಿಂಹಾಸನವೇರಿದ. ಅವನ ಕಾಲದ ಇತಿಹಾಸದ ಮೇಲೆ ಕೆಲವು ಮುಸಲ್ಮಾನ ಇತಿಹಾಸಕಾರರ ಬರವಣಿಗೆಗಳಿವೆ. ಐಲ್ ಮುಸಾನೀಫ ಅಥವಾ ಸಿ. ಎಫ್. ಮೆಕೆಂಜ್ಸೀಯವರು ಬರೆದ ಹಿಂದೂಸ್ಥಾನದ ಮೇಲಿನ ಇತಿಹಾಸ ಕೃತಿ (IL Musannif, ‘The Romantic Land of Hind’) ಪ್ರಥಮ ಬಾರಿಗೆ 1907ರಲ್ಲಿ ಪ್ರಕಟವಾಗಿತ್ತು. ಅದರ ಮರುಮುದ್ರಣ 2012 ರಲ್ಲಿ ದೆಹಲಿಯಲ್ಲಾಯಿತು. (Logos Press-New Delhi) ಆ ಕೃತಿ ಅನೇಕ […]

ಟಿಪ್ಪು ಮತಾಂಧತೆಯ ಮೊಳಕೆ

ಟಿಪ್ಪು ಮತಾಂಧತೆಯ ಮೊಳಕೆ

ಇತಿಹಾಸ - 0 Comment
Issue Date : 22.02.2016

ಮಾನವಿಕ ಅಧ್ಯಯನ ಶಾಖೆಗಳಲ್ಲಿ ಒಂದಾದ ‘ಇತಿಹಾಸ’ ಇಂದು ಹಿಂದೆಂದಿಗಿಂತಲೂ ಹೆಚ್ಚು ಅತಂತ್ರವಾಗಿದೆ. ಉದ್ದೇಶ ಪೂರ್ವಕವಾಗಿ ಇತಿಹಾಸವನ್ನು ಕುಲಗೆಡಿಸುವ ಪ್ರಯತ್ನ ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಮುಂದುವರಿಯುತ್ತಿರುವಾಗ ‘ಯಾವುದು ಇತಿಹಾಸ’ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೂ ಆಗಬೇಕಾಗಿದೆ. ಇತ್ತೀಚೆಗೆ, ಇತಿಹಾಸದ ಗರ್ಭದಿಂದ ಒಮ್ಮಿಂದೊಮ್ಮೆಗೇ ಮೇಲೆದ್ದ ಟಿಪ್ಪೂ ಸುಲ್ತಾನನ ವ್ಯಕ್ತಿತ್ವ, ಸಾಧನೆ, ಇತ್ಯಾದಿಗಳ ಮೇಲೆ ಹೊಗಳಿಕೆ-ತೆಗಳಿಕೆಗಳಾಗುತ್ತಿರುವಾಗ, ವೃತ್ತಿಪರವಾಗಿರದ ಇತಿಹಾಸಕ್ತರು ಗೊಂದಲಕ್ಕೊಳಗಾಗುವುದೂ ಸಹಜ. ಟಿಪ್ಪುವನ್ನು ಸ್ವಾತಂತ್ರ್ಯವೀರ, ಸಜ್ಜನ, ಮತಸಹಿಷ್ಣು, ಜಾತ್ಯತೀ (Secular) ಭಾವನೆಯವ ಎಂದು ಕೊಂಡಾಡಲು ಕೆಲವು ಇತಿಹಾಸದ ಆಧಾರಗಳನ್ನು ಉಲ್ಲೇಖಿಸಲಾಗುತ್ತದೆ. […]