ಮನನವಾಗದ ಮಹಾತ್ಮರ ಮನೋಗತ-1926

ಮನನವಾಗದ ಮಹಾತ್ಮರ ಮನೋಗತ-1926

ಇತಿಹಾಸ - 0 Comment
Issue Date : 16.02.2016

ಆಧುನಿಕ ಭಾರತದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಮೋಹನದಾಸ್ ಕರಮಚಂದ್ ಗಾಂಧಿಗೆ (1869-1948) ಜಾಗತಿಕ ಮಟ್ಟದಲ್ಲೇ ಬಲು ದೊಡ್ಡ ಸ್ಥಾನವಿದೆ. ಅವರನ್ನು ‘ಮಹಾತ್ಮ ಗಾಂಧೀಜಿ’ ಎಂದೇ ಕರೆಯಲಾಗಿ ಎಷ್ಟೋ ಜನರಿಗೆ ಅವರ ನಿಜವಾದ ಹೆಸರೇ ಗೊತ್ತಿಲ್ಲ! ‘‘ಗಾಂಧೀ’’ ಎಂಬ ಒಂದು ‘ಮಾಂತ್ರಿಕ ಹೆಸರು’ (magic name) ಯಾರನ್ನೂ ಕಣ್ಕಟ್ಟು ಮಾಡುವ ಪ್ರಭಾವವುಳ್ಳದ್ದಾಗಿರುವುದರಿಂದಾಗಿ ಆ ಹೆಸರನ್ನು ಗಾಂಧೀಜಿಯವರಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದವರು ಹಾಗೂ ಅವರ ತತ್ತ್ವಗಳಿಗೆ ಬದ್ಧರಾಗದವರು ದುರುಪಯೋಗ ಮಾಡಿಕೊಂಡು ಸ್ವಾರ್ಥಹಿತ ಸಾಧಿಸುತ್ತಾರೆ! ಗಾಂಧೀಜಿಯವರು ವೈವಿಧ್ಯಮಯ ವ್ಯಕ್ತಿತ್ವವುಳ್ಳ ಮಹಾಪುರುಷ. ಅವರ […]

ಸಿದ್ಧರಾಜ ಜಯಸಿಂಹನ ಮುಸಲ್ಮಾನ ಸಂರಕ್ಷಣೆ

ಸಿದ್ಧರಾಜ ಜಯಸಿಂಹನ ಮುಸಲ್ಮಾನ ಸಂರಕ್ಷಣೆ

ಇತಿಹಾಸ - 0 Comment
Issue Date : 06.02.2016

 ಭಾರತದ ಮಧ್ಯಯುಗದ ಇತಿಹಾಸದುದ್ದಕ್ಕೂ ಕಂಡುಬರುವ ಒಂದು ಸಾಮಾನ್ಯ ವಿಚಾರ, ಮುಸಲ್ಮಾನ ಆಡಳಿತಗಾರರಿಂದಾದ ಹಿಂದೂಗಳ ದಮನ ಮತ್ತು ಅದರೊಂದಿಗೆ ನಡೆದ ಧಾರ್ಮಿಕ ದೌರ್ಜನ್ಯ, ಬಲವಂತದ ಮತಾಂತರ, ಸ್ತ್ರೀ ಹಿಂಸೆ, ದೇವಾಲಯಗಳ ನಾಶ, ವಿಗ್ರಹ ಭಂಜನ ಮೊದಲಾದ ಅತಿರೇಕಗಳು. ಈ ರೀತಿಗಳಲ್ಲಿ ಹಿಂದುಗಳು ತುಳಿತಕ್ಕೊಳಗಾದರೂ, ಪರಕೀಯರ ಹಿಂಸಾಚಾರಗಳನ್ನು ಇತಿಹಾಸದುದ್ದಕ್ಕೂ ಸಹಿಸಿಕೊಂಡು ಬಂದಿರುವುದೇ ವಿಶೇಷ! ಸುಲ್ತಾನರು ಹಿಂದೂಗಳನ್ನು ನಡೆಸಿಕೊಂಡ ರೀತಿಗೆ ತೀರಾ ತದ್ವಿರುದ್ದ್ಧವಾದ ಒಂದು ದೃಷ್ಟಾಂತವನ್ನು ಗುಜರಾತಿನ ಸಿದ್ದರಾಜ ಜಯಸಿಂಹನ (1094-1143) ಕಾಲದಲ್ಲಿ ಕಾಣಬಹುದು. ಅದನ್ನು ಮುಸ್ಲಿಂ ಇತಿಹಾಸಕಾರರೇ ದಾಖಲಿಸಿರುವುದು ವಿಶೇಷ. […]

ಇತಿಹಾಸ ತಿರುಚುವಿಕೆಗೆ ಶಾಸನಗಳ ಉತ್ತರ

ಇತಿಹಾಸ ತಿರುಚುವಿಕೆಗೆ ಶಾಸನಗಳ ಉತ್ತರ

ಇತಿಹಾಸ - 0 Comment
Issue Date : 12.02.2016

 ಭಾರತದ ಮಧ್ಯಯುಗದ ಇತಿಹಾಸವನ್ನು ತಿರುಚುವ ಪ್ರಯತ್ನ ಮತ್ತು ವಿಕೃತಗೊಳಿಸುವಿಕೆ ಅವ್ಯಾಹತವಾಗಿ ಕೆಲವು ಇತಿಹಾಸಕಾರರಿಂದ ಆಗುತ್ತಿರುವುದು ಗಮನಾರ್ಹ. ಆ ಕಾಲದಲ್ಲಿ ನಡೆದ ಒಂದು ಬಲುದೊಡ್ಡ ದುರಂತ ಹಿಂದೂಗಳ ದೇವಾಲಯಗಳ ನಾಶ. ನಮ್ಮಲ್ಲಿಯ ‘ಸೆಕ್ಯುಲರ್’ ಎಂದು ಕರೆಸಿಕೊಳ್ಳುವ ಒಂದು ವರ್ಗದ ಇತಿಹಾಸಕಾರರು ಹಿಂದೂ ದೇವಾಲಯಗಳ ನಾಶಕ್ಕೆ ನೀಡುವ ಎರಡು ಮುಖ್ಯ ಕಾರಣಗಳು ಯಾವುವೆಂದರೆ : 1. ಸಂಪತ್ತಿನ ಸೂರೆ ಮತ್ತು 2. ರಾಜಕೀಯ ಪ್ರೇರಣೆ. ಈ ಕಾರಣಗಳಿಗಿಂತಲೂ ಪ್ರಾಮುಖ್ಯವಾದ ಅಥವಾ ಏಕೈಕ ಕಾರಣವಾದ ಧಾರ್ಮಿಕ ಮತಾಂಧತೆಯನ್ನು ಉದ್ದೆೇಶಪೂರ್ವಕವಾಗಿಯೇ ಬಚ್ಚಿಡುವ ಪ್ರಯತ್ನವಾಗುತ್ತಿದೆ, […]

ಮಥುರೆಯ ಮೇಲಿನ ಮುಸಲ್ಮಾನರ ಅಟ್ಟಹಾಸ

ಮಥುರೆಯ ಮೇಲಿನ ಮುಸಲ್ಮಾನರ ಅಟ್ಟಹಾಸ

ಇತಿಹಾಸ - 0 Comment
Issue Date : 04.02.2016

ಇತಿಹಾಸವನ್ನು ತಿರುಚುವ, ಮರೆಮಾಚುವ ಹಾಗೂ ಅದಕ್ಕೆ ವಿಕೃತ ರೂಪ ನೀಡುವ ಪ್ರಯತ್ನ ಬಹುಶಃ ಭಾರತದ ಇತಿಹಾಸದಲ್ಲಿದ್ದಂತೆ ಇನ್ನೆಲ್ಲೂ ಇರಲಾರದು. ಅದರಲ್ಲೂ ಪ್ರಾಚೀನ ಮತ್ತು ಮಧ್ಯಯುಗದ ಇತಿಹಾಸವನ್ನು ವಿಶೇಷವಾಗಿ ವಿರೂಪಗೊಳಿಸಲಾಗಿದೆ. ಭಾರತದಲ್ಲಿಯ ಒಂದು ವರ್ಗದ ‘ಇತಿಹಾಸಕಾರ’ರು ನೈಜ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅವರು ಮಾರ್ಕ್ಸ್‌ವಾದೀ, ಎಡಪಂಥೀಯ, ‘ನೆಹರೂಮಾನಸಿಕತೆಯ’ (Nehruvian) ‘ಸೆಕ್ಯುಲರ್’ ಎಂದು ಕರೆಸಿಕೊಳ್ಳುವ, ಅಲ್ಪಸಂಖ್ಯಾತರ ಓಲೈಕೆಯ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ವರ್ಗದವರಾಗಿದ್ದಾರೆ. ಅಂತಹ ‘ಇತಿಹಾಸಕಾರ’ರಿಗೆ ಪ್ರಸಿದ್ಧಿಗೆ ಬರಲು ‘ಹೆಸರಾಂತ’ರಾಗಲು ಇತಿಹಾಸದಲ್ಲಿ ಶ್ರಮಪಟ್ಟು ಕೃಷಿಮಾಡಬೇಕಾದ ಅಗತ್ಯವಿಲ್ಲ. ಅವರಿಗೆ ಅನುಕೂಲಕರವಾದ […]

ರುಜುವಾತಾದ ರುದ್ರಮಹಾಲಯ

ರುಜುವಾತಾದ ರುದ್ರಮಹಾಲಯ

ಇತಿಹಾಸ - 0 Comment
Issue Date : 28.01.2016

ಭಾರತದ ಮಧ್ಯಯುಗದ ಇತಿಹಾಸದಲ್ಲಿ ಸುಲ್ತಾನರ ಹಾಗೂ ಮೊಗಲರ ಆಳ್ವಿಕೆಯಲ್ಲಿ ಅಸಂಖ್ಯಾತ ಹಿಂದೂ ದೇವಾಲಯಗಳನ್ನೂ, ಸಾಂಸ್ಕೃತಿಕ ಕೇಂದ್ರಗಳನ್ನೂ ನಾಶಮಾಡದಿರುವುದಕ್ಕೆ ನಮ್ಮಲ್ಲಿಯ ಐತಿಹಾಸಿಕ ಸ್ಮಾರಕಗಳು ಜ್ವಲಂತ ಸಾಕ್ಷಿಯಾಗಿವೆ. ಆಮೇಲೆ, ಅವುಗಳನ್ನು ಮುಸಲ್ಮಾನರ ಮಸೀದಿಗಳಾಗಿಯೂ, ಮಂದಿರಗಳಾಗಿಯೂ, ನೆಲೆಗಳಾಗಿಯೂ ಮಾಡಲಾಯಿತು. ಅಂತಹ ಒಂದು ನಿದರ್ಶನಕ್ಕೆ ಸಾಕ್ಷಿಯಾಗಿದೆ ಗುಜರಾತಿನ ‘ರುದ್ರಮಹಾಲಯ’. ಗುಜರಾತಿನ ಅಹಮ್ಮದಾಬಾದ್‌ನಿಂದ ಸುಮಾರು 64 ಮೈಲುಗಳಷ್ಟು ಉತ್ತರಕ್ಕೆ ಸಿದ್ಧಾಪುರ (ಸಿದ್‌ಪುರ್) ತಾಲೂಕು ಪಟ್ಟಣವಿದೆ. ಅದು ಹಿಂದಿನ ರುದ್ರಮಹಾಲಯ ಸಂಕೀರ್ಣಕ್ಕೆ ಸೇರಿದುದಾಗಿದೆ. ಸಿದ್ದಾಪುರದ ಪ್ರಾಚೀನ ಹೆಸರು ‘ಶ್ರೀಸ್ಥಳ’ ಎಂದಾಗಿತ್ತು. ಆಧುನಿಕ ಕಾಲಮಾನ 12ನೇ ಶತಮಾನದಲ್ಲಿ […]

ಶಿವಾಜಿಯ ಕಣ್ಣು ತೆರೆಸಿದ ಸದ್ಗುರು ರಾಮದಾಸರು

ಶಿವಾಜಿಯ ಕಣ್ಣು ತೆರೆಸಿದ ಸದ್ಗುರು ರಾಮದಾಸರು

ಇತಿಹಾಸ - 0 Comment
Issue Date : 20.01.2016

ಇತಿಹಾಸ-ಪುರಾಣಗಳಲ್ಲಿ ಮಹಾಕಾರ್ಯಗಳ ಸಾಧನೆಗಳಲ್ಲಿ ಮಹಾಪುರುಷರ ಪಾತ್ರ ಇರುವುದು ಯಾವಾಗಲೂ ಗೋಚರಿಸುತ್ತದೆ. ರಾಮಾಯಣದಲ್ಲಿ ಶ್ರೀರಾಮಚಂದ್ರನ ಸಾಧನೆಗಳ ಹಿಂದೆ ವಿಶ್ವಾಮಿತ್ರ ಮಹರ್ಷಿಗಳ ಮತ್ತು ಮಹಾಭಾರತದಲ್ಲಿ ಪಾಂಡವರ ಜಯದ ಹಿಂದೆ ಶ್ರೀಕೃಷ್ಣನ ಪಾತ್ರದ ಸ್ಪಷ್ಟ ಚಿತ್ರಣವಿದೆ. ಹಾಗೆಯೇ, ಇತಿಹಾಸದಲ್ಲಿ ಮೌರ್ಯ ಸಾಮ್ರಾಜ್ಯ ಸ್ಥಾಪನೆಗೆ ಆರ್ಯ ಚಾಣಕ್ಯನ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಗುರು ವಿದ್ಯಾರಣ್ಯರ ಮತ್ತು ಮರಾಠಾ ಸಾಮ್ರಾಜ್ಯ ಸ್ಥಾಪನೆಗೆ ಗುರು ಸಮರ್ಥ ರಾಮದಾಸರ ನಿರ್ದೇಶನ ಹಾಗೂ ಅನುಗ್ರಹ ದೊರೆತಿತ್ತು. ರಾಜಕೀಯ ಶಕ್ತಿಯ ಹಿಂದೆ ಅದಕ್ಕೆ ಪೂರಕವಾಗಿ ಒಂದು ಆಧ್ಯಾತ್ಮಿಕ ಶಕ್ತಿ ಕ್ರಿಯಾಶಕ್ತಿಯಾಗಿ […]

ಸಹೃದಯತೆಯ ಶಿವಾಜಿ ಮಹಾರಾಜ

ಸಹೃದಯತೆಯ ಶಿವಾಜಿ ಮಹಾರಾಜ

ಇತಿಹಾಸ - 0 Comment
Issue Date : 14.01.2016

ಇತಿಹಾಸ ಕಂಡ ವೈವಿಧ್ಯಮಯ ವ್ಯಕ್ತಿತ್ವದ ಮಹಾಶಯರಲ್ಲಿ ಛತ್ರಪತಿ ಶಿವಾಜಿ (1627-1680) ಓರ್ವನಾಗಿದ್ದಾನೆ. ಅರಿಶಾರ್ದೂಲನಾದ ಶಿವಾಜಿ ವಜ್ರದಂತೆ ಎಷ್ಟು ಕಠೋರನಾಗಿದ್ದನೋ ಹಾಗೆಯೇ ಹೂವಿನಂತೆ ಹೃದಯಾಳು ಆಗಿದ್ದನು. ಅಂತಹ ಅನೇಕ ಪ್ರಸಂಗಗಳು ಮರಾಠಿಗರ ಮೌಖಿಕ ಸಾಹಿತ್ಯದ ಕಥಾವಸ್ತುವಾಗಿದೆ (Aeworth ‘Ballads of the Marathas’). ಶಿವಾಜಿಯ ರಾಜಕೀಯ ಪ್ರವೇಶವಾದುದು ಬಿಜಾಪುರದ ಸುಲ್ತಾನನ ವಿರುದ್ಧದ ಕಾರ್ಯಾಚರಣೆಯೊಂದಿಗೆ. 1657-62 ರ ಮಧ್ಯೆ ಶಿವಾಜಿ ಬಿಜಾಪುರದ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿದ. ಮುಸ್ಲಿಂ ಇತಿಹಾಸಕಾರ ಕಾಫೀಖಾನ್ ಶಿವಾಜಿಯನ್ನು ‘‘ದಖ್ಖನದ ಪ್ರಬಲ ಬಂಡಾಯಗಾರ’’ ಎಂದು ಕರೆದರೂ […]

ತಾಳ ತಪ್ಪಿದ ರೊಮಿಲಾ ಥಾಪರ್‍

ತಾಳ ತಪ್ಪಿದ ರೊಮಿಲಾ ಥಾಪರ್‍

ಇತಿಹಾಸ ; ಲೇಖನಗಳು - 0 Comment
Issue Date : 25.12.2015

ಇತಿಹಾಸಕ್ಕೂ ಒಂದು ತಾಳ-ಲಯವಿದೆ ಎಂದರೆ ಅಚ್ಚರಿಯಾಗಬಹುದು! ಸಂಗೀತ-ನೃತ್ಯಗಳಲ್ಲಿಯ ನಿಯತಗತಿಯನ್ನು ಸೂಚಿಸುವುದೇ ತಾಳ-ಲಯ. ತಾಳ ತಪ್ಪಿದರೆ ಸಂಗೀತವಾಗಲೀ ನೃತ್ಯವಾಗಲೀ ಅದರ ಮಾನ ಕಳೆದುಕೊಂಡು ಪರಿಹಾಸ್ಯಕ್ಕೊಳಗಾಗುವುದು. ಇತಿಹಾಸದಲ್ಲಿ ಸಂಗೀತ, ನೃತ್ಯ, ಕುಣಿತಗಳಿಲ್ಲ. ಆದರೆ, ಇತಿಹಾಸಾಧ್ಯಯನದಲ್ಲಿಯೂ ಒಂದು ಲಯಬದ್ಧತೆ (Rhythm) ಇದೆ. ಅದಕ್ಕೆ ಅದರದ್ದೇ ಆದ ಚೌಕಟ್ಟು – ನಿಯಮವಿದೆ. ಇತಿಹಾಸವನ್ನು ಮನಬಂದಂತೆ ನೋಡಲು ಅಥವಾ ಬರೆಯಲು ಸಾಧ್ಯವಿಲ್ಲ. ಅದಕ್ಕೆ ಚ್ಯುತಿಯಾದಾಗ ಇತಿಹಾಸವೂ ಅಪಹಾಸ್ಯಕ್ಕೆ ಒಳಗಾಗುವುದು. ಇದು ನಮ್ಮಂತಹ ವಿದ್ಯಾರ್ಥಿಗಳಿಂದಾದರೆ, ಅದು ಕ್ಷಮ್ಯ. ಬದಲಾಗಿ, ಪ್ರಸಿದ್ಧ ಇತಿಹಾಸಕಾರರಿಂದಾದರೆ, ಅದು ಅಕ್ಷಮ್ಯ!ದೆಹಲಿಯ ಜವಾಹರ್‌ಲಾಲ್ […]

ಭಾರತಾಭಿಮಾನದ ಜರ್ಮನ್‍ ವಿದ್ವಾಂಸ

ಭಾರತಾಭಿಮಾನದ ಜರ್ಮನ್‍ ವಿದ್ವಾಂಸ

ಇತಿಹಾಸ - 0 Comment
Issue Date : 10.12.2015

ಇತಿಹಾಸಾಧ್ಯಯನಾಸ್ತಕರಿಗೆ ಭಾರತ ಒಂದು ಫಲವತ್ತಾದ ಕಾರ್ಯಕ್ಷೇತ್ರ. ಇದರಲ್ಲಿ ಜರ್ಮನ್ ವಿದ್ವಾಂಸರು ಬಹಳ ಆಸಕ್ತರಾಗಿ ಕೃಷಿ ಮಾಡಿದರು. ಭಾರತಶಾಸ್ತ್ರಾಧ್ಯಯನ (Indology) ಅವರ ಅಚ್ಚುಮೆಚ್ಚಿನ ಕ್ಷೇತ್ರವಾಗಿತ್ತು. ಆಧುನಿಕ ಕಾಲದಲ್ಲಿ ಭಾರತಶಾಸ್ತ್ರಾಧ್ಯಯನ ಮಾಡಿದ ಓರ್ವ ಪ್ರಸಿದ್ಧ ಜರ್ಮನ್ ಇತಿಹಾಸಕಾರರೇ ಹರ್ಮನ್ ಕುಲ್ಕೆ (Hermann Kulke) ಜರ್ಮನರ ಹೆಸರುಗಳನ್ನು ನಮಗೆ ಸರಿಯಾಗಿ ಓದಲು ಯಾ ಬರೆಯಲು ಬಾರದಿರುವುದು ಒಂದು ತೊಡಕಾಗಿದೆ. ಎಲ್ಲಾ ಜರ್ಮನೇತರರಿಗೂ ಈ ಕಷ್ಟ ತಪ್ಪಿದ್ದಲ್ಲ. ಹರ್ಮನ್ ಕುಲ್ಕೆ 1938ರಲ್ಲಿ ಬರ್ಲಿನ್‌ನಲ್ಲಿ ಜನಿಸಿದರು. 1988ರಿಂದ 2005ರ ತನಕ ಅವರು ಜರ್ಮನಿಯ ಕೀಲ್ […]

ಉಪವಾಸ ಸತ್ಯಾಗ್ರಹದ ಹುತಾತ್ಮ : ಜತಿನ್‌ದಾಸ್

ಉಪವಾಸ ಸತ್ಯಾಗ್ರಹದ ಹುತಾತ್ಮ : ಜತಿನ್‌ದಾಸ್

ಇತಿಹಾಸ - 0 Comment
Issue Date : 10.12.2015

-ಸಿ.ಎಸ್‍.ಶಾಸ್ತ್ರೀ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಉಗ್ರಗಾಮಿಗಳು ಮತ್ತು ಕ್ರಾಂತಿಕಾರಿಗಳು ತೋರಿದ ಸಾಹಸ, ತಾಳಿದ ಹಿಂಸೆ ಮತ್ತು ಅನುಭವಿಸಿದ ಯಾತನೆ ನಮ್ಮ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯ. ಅಂತಹ ದೇಶಭಕ್ತ ಸ್ವಾತಂತ್ರ್ಯವೀರರನ್ನು ಬ್ರಿಟಿಷರು ವಿವಿಧೆಡೆಗಳಲ್ಲಿ ಸೆರೆಮನೆಯಲ್ಲಿರಿಸಿ ಹಿಂಸಿಸುತ್ತಿದ್ದರು. ಗಾಂಧೀಜಿಯವರು ಚಳುವಳಿಯಲ್ಲಿ ತೋರಿದ ಒಂದು ದಾರಿ ಉಪವಾಸ ಸತ್ಯಾಗ್ರಹ. ಅವರದು ಪ್ರಾಮಾಣಿಕವಾದ ಉಪವಾಸ ಸತ್ಯಾಗ್ರಹವಾಗಿತ್ತು. ಆದರೆ, ಇಂದಿನ ದಿನಗಳಲ್ಲಿ ಹೊಟ್ಟೆತುಂಬ ಆಹಾರ ಸೇವಿಸಿ ‘ಉಪವಾಸ’ ಮಾಡುವವರಿದ್ದಾರೆ.’ ಸರದಿ ಉಪವಾಸ ಎಂಬುದು ಅದರ ಇನ್ನೊಂದು ಅವತಾರ ! ಇದೆಲ್ಲಾ ಇಂದಿನ ‘ಉಪವಾಸ’ […]