ಪಾಣಿಪತ್ ಪರಾಭವದ ಪರಿಶೀಲನೆ – 1556

ಇತಿಹಾಸ - 0 Comment
Issue Date : 01.03.2015

ಹಿಂದೂಸ್ಥಾನದ ಇತಿಹಾಸದ ಗತಿಯನ್ನು ನಿರ್ಧರಿಸಿದ ಕದನಗಳಲ್ಲಿ ಪ್ರಾಮುಖ್ಯವಾದುದೇ ಎರಡನೇ ಪಾಣಿಪತ್ ಕದನ (1556). ಮೊಗಲರ ಮರುಸ್ಥಾಪನೆಯೋ ಅಥವಾ ಹಿಂದು ಆಳ್ವಿಕೆಯ ಪುನರುತ್ಥಾನವೋ ಎಂಬ ನಿರ್ಣಾಯಕ ಪ್ರಶ್ನೆಯ ತೀರ್ಮಾನ ಪಾಣಿಪತ್‌ನಲ್ಲಿ ನಡೆದುಹೋಯಿತು. ಆ ತೀರ್ಮಾನ ಯಾರೂ ಮಾಡಿದುದಲ್ಲ, ಅಥವಾ ಅದು ಯಾರ ಸಾಧನೆಯೂ ಅಲ್ಲ – ಕೇವಲ ಅದೃಷ್ಟದ ಆಟ! ವಿಧಿಲಿಖಿತ ನಿರ್ಣಯ! ಯುದ್ಧಕ್ಕೇ ಬಾರದ ಅಕ್ಬರನಿಗೆ, ಅಸಾಧ್ಯ ವೀರಾಗ್ರಣಿ ಹೇಮೂವಿನ ವಿರುದ್ಧದ ಜಯ ದೈವದತ್ತವಾದ ಕೊಡುಗೆ! ಡಾ. ತ್ರಿಪಾಠಿಯವರು ಹೇಳುವಂತೆ ‘ಹೇಮೂವಿನ ಸೋಲು ಆಕಸ್ಮಿಕ ಮತ್ತು ಅಕ್ಬರನ […]

‘ವಿಕ್ರಮಾದಿತ್ಯ’ನಾದ ವೀರಾಗ್ರಣಿ ಹೇಮೂ (1501-1556)

ಇತಿಹಾಸ - 0 Comment
Issue Date : 25.02.2015

ಸಿ.ಎಸ್. ಶಾಸ್ತ್ರಿ ‘ವಿಕ್ರಮಾದಿತ್ಯ’ – ಈ ಹೆಸರೇ, ಸಾಹಸ, ಪರಾಕ್ರಮ ಮತ್ತು ಧರ್ಮರಕ್ಷಣೆಯ ಪ್ರತೀಕ. ಪ್ರಾಚೀನ ಕಥೆಗಳಲ್ಲೂ, ಇತಿಹಾಸದಲ್ಲಿಯೂ ಪ್ರಸಿದ್ಧವಾಗಿದ್ದ ಅವನ ಖ್ಯಾತಿ ಭಾರತೀಯರಲ್ಲಿ ರಕ್ತಗತವಾಗಿದೆ. ಅದನ್ನೇ ಪುನಃ ನೆನಪಿಸುವ ಪ್ರಯತ್ನ ಮಧ್ಯ ಯುಗದ ಭಾರತದ ಇತಿಹಾಸದಲ್ಲಿ ಆ ಮಹಾ ಹೇಮೂನಿಂದಾಯಿತು. ರಾಜಾ ಹೇಮಚಂದ್ರನಾದ ಅವನು ಜನಾದರಣೀಯನಾಗಿ ‘ಹೇಮೂ’ ಎಂದೇ ಸರ್ವರ ಪ್ರೀತಿ – ವಿಶ್ವಾಸಗಳಿಗೆ ಪಾತ್ರನಾಗಿದ್ದ. ಹೇಮೂ ಉತ್ಕರ್ಷ 1558ರ ವಿಕ್ರಮ ಶಕೆಯ ಅಶ್ಪಿನೀ ವಿಜಯದಶಮಿಯಂದು (ಕ್ರಿ.ಶ. 1501) ಅಲ್‌ವಾರ್‌ನ ಸಮೀಪದ ದಿಯೋಲಿ ಅಥವಾ ಮಾಚೇರಿ ಎಂಬಲ್ಲಿ ದೂಸರ್ […]

ಹೇಮೂ ಮೂಲದ ಸತ್ಯಾನ್ವೇಷಣೆ

ಹೇಮೂ ಮೂಲದ ಸತ್ಯಾನ್ವೇಷಣೆ

ಇತಿಹಾಸ - 0 Comment
Issue Date : 20.01.2015

‘ಇತಿಹಾಸ’ – ಘಟಿಸಿದ ಘಟನೆಗಳ ದಾಖಲೆ. ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅವುಗಳಲ್ಲಿ ಪ್ರಾಮುಖ್ಯಾದ ಘಟನೆಗಳನ್ನು ಮಾತ್ರ ಇತಿಹಾಸದಲ್ಲಿ ದಾಖಲಿಸಲಾಗುತ್ತಿದೆ. ಘಟನೆಗಳು ಅರ್ಥಪೂರ್ಣವಾಗುವುದು ಅವುಗಳಿಗೆ ಮತ್ತು ವ್ಯಕ್ತಿಗಳಿಗೆ ಇರುವ ಸಂಬಂಧದಲ್ಲಿ. ಹಾಗಾಗಿ ವ್ಯಕ್ತಿಗಳ ಪಾತ್ರವೂ ಇತಿಹಾಸವನ್ನು ರೂಪಿಸುವಲ್ಲಿ ಪ್ರಧಾನವಾಗಿದೆ. ಥಾಮಾಸ್ ಕಾರ್ಲೈಲ್ ಇತಿಹಾಸವನ್ನು ‘ಮಹಾಪುರುಷರ ಜೀವನಚರಿತ್ರೆ’ ಎಂದಿರುವುದೂ ಇದಕ್ಕಾಗಿಯೇ. ಶಿವಾಜಿ, ನೆಪೋಲಿಯನ್ ಮೊದಲಾದ ಕೆಲವು ವ್ಯಕಿಗಳು ಇತಿಹಾಸವನ್ನು ನಿರ್ಧರಿಸುವವರಾಗಿದ್ದಾರೆ. ಅಂತಹವರಲ್ಲಿ, ಮಧ್ಯಯುಗದ ಭಾರತದ ಇತಿಹಾಸದಲ್ಲಿ ಮಿಂಚಿನಂತೆ ಮೇಲೆದ್ದು ಮರೆಯಾದ ಓರ್ವ ವೀರಾಗ್ರಣಿ, ‘ಹೇಮೂ’ ಎಂದೇ ಪ್ರಖ್ಯಾತನಾದ ‘ರಾಜಾ […]

ಪಾಣಿಪತ ರಣ ವಿಕ್ರಮ, ‘ವಿಕ್ರಮಾದಿತ್ಯ’ – 1556

ಇತಿಹಾಸ - 0 Comment
Issue Date : 25.01.2015

-ಸಿ.ಎಸ್.ಶಾಸ್ತ್ರೀ ಇತಿಹಾಸ ಪ್ರಸಿದ್ಧ ರಣಾಂಗಣವಾದ ಪಾಣಿಪತದಲ್ಲಿ ನಡೆದ ಮೂರು ನಿರ್ಣಾಯಕ ಕದನಗಳು (1526- 1556-1761) ಭಾರತದ ಇತಿಹಾಸದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವು. ಅವು ಭಾರತದ ಇತಿಹಾಸದ ಗತಿಯನ್ನೇ ಬದಲಾಯಿಸಿದವು. ಮೊದಲನೇ ಪಾಣಪತ ಕದನದಲ್ಲಿ  (1526) ಬಾಬರ ಇಬ್ರಾಹಿಂ ಲೋದಿಯನ್ನು ಸೋಲಿಸಿ ಭಾರತದಲ್ಲಿ ಮೊಗಲರ/ಮುಘಲರ ಆಳ್ವಿಕೆಯನ್ನು  ಸ್ಥಾಪಿಸಿದ. 1540ರಲ್ಲಿ ಹುಮಾಯೂನನ ಸೋಲಿನೊಂದಿಗೆ ಮೊಗಲರ ಆಳ್ವಿಕೆ ಹಿಂದೂಸ್ಥಾನದಲ್ಲಿ ಕೊನೆಗೊಂಡಿತು. 1555ರಲ್ಲಿ ಹುಮಾಯೂನ ಪುನಃ ದೆಹಲಿಯಲ್ಲಿ ಮೊಗಲರ ಆಡಳಿತವನ್ನು ಮರುಸ್ಥಾಪನೆ ಮಾಡಿದ ಮತ್ತು 26 ಜನವರಿ 1556ರಲ್ಲಿ ಅಲ್ಲೇ ಸಾವಿಗೀಡಾದ. […]

ಮರೆತುಹೋದ ಪ್ರಾಚೀನ ವೈದ್ಯಕೀಯ ನೀತಿಧರ್ಮ

ಇತಿಹಾಸ - 0 Comment
Issue Date : 25.01.2015

-ಸಿ.ಎಸ್. ಶಾಸ್ತ್ರೀ ಪ್ರಾಚೀನ ಭಾರತದ ಜ್ಞಾನದ ಆಗರವಾದ ವೇದಗಳು ಅನೇಕ ಶಾಸ್ತ್ರಗಳಿಗೂ, ಜ್ಞಾನದ ವಿಭಾಗಗಳಿಗೂ, ಕಲಿಕೆಯ ವಿಷಯಗಳಿಗೂ ಮೂಲವಾಗಿದ್ದವು. ವೈದ್ಯಕೀಯ ಶಾಸ್ತ್ರ, ‘ಆಯುರ್ವೇದ’ವಾಗಿ ಉಪವೇದವಾಗಿ ಪ್ರಧಾನವಾಗಿತ್ತು. ಅದು ಶರೀರಶಾಸ್ತ್ರದ, ಔಷಧಿಜ್ಞಾನದ, ಶಸ್ತ್ರಚಿಕಿತ್ಸೆಯ, ಔಷಧೋಪಚಾರದ ಬಗ್ಗೆ ಅಧ್ಯಯನ ಮಾಡಿ ನಿರ್ದಿಷ್ಟ ಪಥದಲ್ಲಿ ಸಾಗಿತ್ತು. ಪ್ರಾಚೀನ ಭಾರತದ ವೈದ್ಯಕೀಯ ಜ್ಞಾನವನ್ನೂ, ವೈದ್ಯಕೀಯ ಗ್ರಂಥಗಳನ್ನೂ ಕಂಡು ವಿದೇಶೀಯರೂ ಬೆರಗಾಗಿದ್ದರು! ಅಂತಹ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯೊಂದಿಗೆಯೇ ವೈದ್ಯರು ಉದ್ಯೋಗದ ಅನುಸರಣೆಯಲ್ಲಿ ಪಾಲಿಸಬೇಕಾದ ಕಟ್ಟುನಿಟ್ಟಿನ ಕರ್ತವ್ಯಗಳಿದ್ದವು. ವೈದ್ಯವೃತ್ತಿ ಧಾರ್ಮಿಕ ಜೀವನವೆಂದೇ ಪರಿಗಣಿಸಲ್ಪಟ್ಟಿತ್ತು. ‘ವೈದ್ಯನೇ ನಾರಾಯಣ, […]

ಅಳಿವಿನ ಅಂಚಿನಲ್ಲಿ ಅರುಣಾಚಲ ಸಂಸ್ಕೃತಿ

ಅಳಿವಿನ ಅಂಚಿನಲ್ಲಿ ಅರುಣಾಚಲ ಸಂಸ್ಕೃತಿ

ಇತಿಹಾಸ - 0 Comment
Issue Date : 15.01.2015

ಮಾನವನ ಇತಿಹಾಸದಲ್ಲಿ ಅತ್ಯಂತ ಪವಿತ್ರವಾಗಿರುವುದೇ ಸಾಂಸ್ಕೃತಿಕ ಮೌಲ್ಯಗಳು. ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳು ತಲೆಯೆತ್ತಿ, ಬೆಳೆದು, ನಾಶವಾಗಿರುವ ಇತಿಹಾಸ ನಮ್ಮ ಮುಂದಿದೆ. ಪ್ರಾಚೀನ ಚೀನಾ, ಈಜಿಪ್ಟ್, ಗ್ರೀಸ್, ರೋಮ್ ಸಂಸ್ಕೃತಿಗಳು ಈಗ ನಿರ್ನಾಮವಾಗಿರುವುದು  ಅತ್ಯಂತ ವಿಷಾದನೀಯ ವಿಚಾರ. ಅದಕ್ಕೆ ಅಪವಾದವಾಗಿರುವುದೇ ಭಾರತೀಯ ಸಂಸ್ಕೃತಿ. ‘ಭಾರತೀಯ ಸಂಸ್ಕೃತಿ’ ಎಂದರೆ ಬೊಟ್ಟು ಮಾಡಿ ತೋರಿಸಲು ಸಾಧ್ಯವಾಗುವಂತಹ ಏಕರೂಪೀ ಸಂಸ್ಕೃತಿಯಲ್ಲ. ಭಾರತದಲ್ಲಿ  ವಿವಿಧೆಡೆಗಳಲ್ಲಿ ಅನೇಕ ‘ಉಪ ಸಂಸ್ಕೃತಿ’ಗಳು ಈಗಲೂ ಇವೆ. ಅಂತಹ ಒಂದು ಸಂಸ್ಕೃತಿಯ ತವರೂರೇ ಅರುಣಾಚಲ ಪ್ರದೇಶ. ಆದರೆ, ಅರುಣಾಚಲದಲ್ಲಿಯ ಈಗಿನ […]

ಮತಾಂತರ ಪ್ರಚೋದನಾ ನೀತಿ - ವಿಧಾನಗಳು

ಮತಾಂತರ ಪ್ರಚೋದನಾ ನೀತಿ – ವಿಧಾನಗಳು

ಇತಿಹಾಸ - 0 Comment
Issue Date : 20.01.2015

ಭಾರತದಲ್ಲಿ ಹಿಂದೂ ಧರ್ಮದ ವಿರುದ್ಧ ಒಂದು ವ್ಯವಸ್ಥಿತವಾದ ಅಘೋಷಿತ ಸಮರ ಅದೆಷ್ಟೋ ವರ್ಷಗಳಿಂದ ನಡೆಯುತ್ತಲೇ ಇದೆ. ಇದರ ಬಗ್ಗೆ ವಿದೇಶೀಯರಿಗೆ ಸ್ಪಷ್ಟವಾದ ಅರಿವಿಲ್ಲ. ಇದರ ಪ್ರತ್ಯಕ್ಷ ಅನುಭವ ಪಡೆದ, ವಿದೇಶೀಯರಾದ ಸ್ಟೀಫನ್ ನ್ಯಾಪ್ 2001ರ ಜೂನ್‌ನಲ್ಲಿ ಭಾರತ ಸಂಚರಿಸಿ, ಕ್ರೈಸ್ತ ಮತಪ್ರಚಾರಕರ ಮತಾಂತರ ಕಾರ್ಯದ ಬಗ್ಗೆ ತಾವು ಕಂಡುಕೊಂಡ ಆತಂಕಕಾರಿ ವಿವರಗಳನ್ನು ದಾಖಲಿಸಿದರು.   ಅವರ ಸಂಚಾರದ ದಿನಗಳಲ್ಲಿ ಅವರು ಮುಂಬೈ, ನಾಗ್ಪುರ, ವಾರಂಗಲ್, ವಿಶಾಖಪಟ್ಟಣ, ವಿಜಯವಾಡ, ಹೈದ್ರಾಬಾದ್, ಬೆಂಗಳೂರು, ತಿರುವನಂತರಪುರಂ, ಚೆನ್ನೈ ಮೊದಲೆಡೆಗಳಲ್ಲಿ ಧಾರ್ಮಿಕ ಉಪನ್ಯಾಸ […]

ಮಾರ್ಕ್ಸ್ ತಿಳಿಯದ ಭವ್ಯ ಭಾರತ

ಮಾರ್ಕ್ಸ್ ತಿಳಿಯದ ಭವ್ಯ ಭಾರತ

ಇತಿಹಾಸ - 0 Comment
Issue Date : 12.11.2014

ಆಧುನಿಕ ಜಗತ್ತಿನ ಇತಿಹಾಸದಲ್ಲಿ ಕಾರ್ಲ್ ಮಾರ್ಕ್ಸ್ (1818-1883) ಮಾಡಿದ ಮೋಡಿ, ತೋರಿದ ದಾರಿ ಮತ್ತು ತೆಗೆದುಕೊಂಡ ನಿಲುವು ವಿಶಿಷ್ಟವಾದುದು. ಮಾರ್ಕ್ಸ್ ಮಹಾವಿದ್ವಾಂಸ ಮತ್ತು ಜಗತ್ತಿನ ಮೂಲೆ ಮೂಲೆಗೂ ತನ್ನ ಪ್ರಭಾವ ವಲಯವನ್ನು ವಿಸ್ತರಿಸಿದವ. ಆದರೆ, ಮಾರ್ಕ್ಸ್‌ನ್ನು ಸರಿಯಾಗಿ ತಿಳಿದುಕೊಳ್ಳದ ‘ಮಾರ್ಕ್ಸ್‌ವಾದಿ’ಗಳು ಅವನ ಹೆಸರಿನಲ್ಲಿ ಅವನ ಸಿದ್ಧಾಂತಕ್ಕೆ ಅಪಚಾರವೆಸಗುತ್ತಿದ್ದಾರೆ! ಈಗಿನ ಮಾರ್ಕ್ಸ್ ವಾದ ಕಾರ್ಲ್ ಮಾರ್ಕ್ಸ್ ಪ್ರತಿಪಾದಿಸಿದ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿದೆ! ಮಾರ್ಕ್ಸ್ ಮತ್ತು ವಿವೇಕಾನಂದರ ಹೋಲಿಕೆಯ ಅಧ್ಯಯನವೊಂದು ‘ಮಾರ್ಕ್ಸ್ ತನ್ನ ಚಿಂತನೆಯಿಂದ ಜಗತ್ತೇ ಕಂಪಿಸುವಂತೆ ಮಾಡಿದ್ದಲ್ಲಿ, ವಿವೇಕಾನಂದರು ತಮ್ಮ […]

ವೈದಿಕಯುಗದ ಇತಿಹಾಸದಲ್ಲಿ ಸಾಂಸ್ಕೃತಿಕ ಸಮಗ್ರತೆ

ಇತಿಹಾಸ - 0 Comment
Issue Date : 08.11.2014

ಭಾರತೀಯ ಸಂಸ್ಕೃತಿ-ನಾಗರಿಕತೆಯ ಇತಿಹಾಸದಲ್ಲಿ ವೈದಿಕಯುಗ (Vedic Age) ಒಂದು ಪ್ರಮುಖ ಕಾಲಘಟ್ಟ.ನಮ್ಮ ಸಂಸ್ಕೃತಿಯ ಮೂಲ ವೇದೋಕ್ತ ಜೀವನದಲ್ಲಿ ಅಡಕವಾಗಿದೆ.ಆ ಕಾಲದ ರಾಜಕೀಯ,ಸಾಮಾಜಿಕ ಹಾಗೂ ಧಾರ್ಮಿಕ ಜೀವನವನ್ನು ತಿಳಿದುಕೊಳ್ಳಲು ವೇದಗಳ ಮತ್ತು ವೈದಿಕ ಸಾಹಿತ್ಯದ ಅಧ್ಯಯನ ಸಹಕಾರಿಯಾಗಿದೆ. ವೈದಿಕ ಯುಗ ಇತಿಹಾಸದಲ್ಲಿ ವೈದಿಕ ಯುಗವನ್ನು ಋಗ್ವೇದ ಕಾಲ ಅಥವಾ ಆರಂಭಿಕ ವೈದಿಕ ಕಾಲ (Early Vedic Age) ಮತ್ತು ಉತ್ತರ ವೈದಿಕ ಕಾಲ (Later Vedic Age) ಎಂದು ವಿಂಗಡಿಸಲಾಗಿದೆ.’ಗಇ ಜ್ಞಾನದ ಆಗರ.ಅದು ಜ್ಞಾನ ನೀಡುವ ಮತ್ತು ಮೋಕ್ಷ […]

ಮಧ್ಯಯುಗದ ಇತಿಹಾಸ: ವಿವಾದಗಳ ಹುತ್ತ

ಮಧ್ಯಯುಗದ ಇತಿಹಾಸ: ವಿವಾದಗಳ ಹುತ್ತ

ಇತಿಹಾಸ - 0 Comment
Issue Date : 28.10.2014

‘ಇತಿಹಾಸ’- ‘ಅದು ಹೀಗೆ ನಡೆದಿತ್ತು’ ಎಂಬದನ್ನು ತೋರಿಸುವ ಕಲಿಕೆಯ ವಿಷಯವಾಗಿ ತಿಳಿದಾಗ ವಿಷಯಗಳ ವಿವರಣೆಯ ಮಹತ್ವ ಪ್ರಧಾನವಾಗಿ ಕಂಡು ಬರುತ್ತದೆ. ‘ಆಧಾರಗಳಿಲ್ಲದೆ ಇತಿಹಾಸವಿಲ್ಲ’ (No Source, No History) ಇದು ಇತಿಹಾಸದ ವೇದವಾಕ್ಯ. ಆ ಆಧಾರಗಳನ್ನು ಸಂಗ್ರಹಿಸಿ, ಅವುಗಳಿಗೆ ಅರ್ಥ ನೀಡಿ ಕಲೆ ಹಾಕಿದಾಗ ‘ಇತಿಹಾಸ’ ಮೂಡಿಬರುವುದಾಗಿದೆ. ಅಷ್ಟಾದರೂ, ಇತಿಹಾಸದ ವಿವರಣೆಯ (Interpretation) ಅಗತ್ಯವನ್ನು ಕಡೆಗಣಿಸುವಂತಿಲ್ಲ. ಮಧ್ಯಯುಗದ ಭಾರತದ ಇತಿಹಾಸವು ಅತ್ಯಂತ ವಿವಾದಾತ್ಮಕವಾದ ಕಾಲಾವಧಿಯದ್ದಾಗಿದೆ. ಇತಿಹಾಸಕಾರನ ದೃಷ್ಟಿಕೋನಕ್ಕೆ ಸರಿಯಾಗಿ ಇತಿಹಾಸ ಸ್ಪಂದಿಸುವಾಗ ಬೇರೆ ಬೇರೆ ರೀತಿಯ ವಿವರಣೆಗಳು […]