ಶ್ರೀಲಂಕಾ – ಮಲೇಷ್ಯಾ

ಶ್ರೀಲಂಕಾ – ಮಲೇಷ್ಯಾ

ಜಗದ್ಗುರು ಭಾರತ - 0 Comment
Issue Date : 30.04.2015

ಭಾರತೀಯ ಸಂಸ್ಕೃತಿಯ ಒಂದು ಭಾಗದಂತೆಯೇ ಇರುವ ಶ್ರೀಲಂಕಾ, ಪ್ರಪ್ರಾಚೀನ ಕೃತಿ ರಾಮಾಯಣದಲ್ಲಿ ರಾವಣನ ಸ್ವರ್ಣ ಲಂಕೆಯೆಂದು ಉಲ್ಲೇಖಿತವಾಗಿದೆ. ನಾಗಾಗಳು ಈ ಪುಟ್ಟ ದ್ವೀಪದ ಮೂಲ ನಿವಾಸಿಗಳು. ಇವರು ವೈದಿಕ ಪದ್ಧತಿಯ ಅನುಚರರಾಗಿದ್ದು, ಪ್ರಕೃತಿಪೂಜಕರಾಗಿದ್ದರು. ಪೌರಾಣಿಕ ಯುಗದಲ್ಲಿ ಶ್ರೀಲಂಕೆಯಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಂಸ್ಕೃತ, ಪಾಲಿ ಮತ್ತು ಪ್ರಾಕೃತ ಭಾಷೆಗಳು ಚಾಲ್ತಿಯಲ್ಲಿದ್ದವು. ಇಲ್ಲಿನ ಬಹುತೇಕ ಪ್ರಾಚೀನ ಶಾಸನ ಹಾಗೂ ಗ್ರಂಥಗಳು ಪಾಲಿ ಭಾಷೆಯಲ್ಲಿಯೇ ಇವೆ. ಬೌದ್ಧ ಧರ್ಮಕ್ಕೆ ಮುನ್ನ ಈ ದ್ವೀಪರಾಷ್ಟ್ರದಲ್ಲಿ ಶೈವ ಸಿದ್ಧಾಂತವು ಉಛ್ರಾಯದಲ್ಲಿತ್ತು. ಲಂಕಾಧೀಶ ರಾವಣ […]

ಇಂಡೋನೇಷಿಯಾ

ಇಂಡೋನೇಷಿಯಾ

ಜಗದ್ಗುರು ಭಾರತ - 0 Comment
Issue Date : 30.04.2015

ಸಾವಿರಾರು ವರ್ಷಗಳ ಹಿಂದೆ ಇಂಡೋನೇಷಿಯಾದಲ್ಲಿ ದಕ್ಷಿಣ ಭಾರತದ ಬ್ರಾಹ್ಮಣ ಸಮುದಾಯಗಳು ನೆಲೆಸಿದ್ದನ್ನು ಅಲ್ಲಿಯ ಸಂಸ್ಕೃತ ಭಾಷೆ ಮತ್ತು ಹೆಸರುಗಳು ಸಾಬೀತುಪಡಿಸುತ್ತವೆ. ಕ್ರಿ.ಶ. 1ನೇ ಶತಮಾನದ ಕಾಲದ್ದೆನ್ನಲಾದ ರಾಮಾಯಣ ಹಾಗೂ ಮಹಾಭಾರತದ ಹಸ್ತಪ್ರತಿಗಳು ಇಲ್ಲಿ ದೊರಕಿವೆ. ಇವು ದಕ್ಷಿಣ ಭಾರತೀಯರು ಬಳಸುವ ಸಂಸ್ಕೃತ ಶೈಲಿಯಲ್ಲಿದೆ. ಈಗಲೂ ಅಲ್ಲಿ ಕೆಲವು ಇಸ್ಲಾಮ್ ಸಮುದಾಯಗಳು ಹಿಂದೂ ಹೆಸರುಗಳನ್ನಿಟ್ಟುಕೊಳ್ಳುತ್ತಾರೆ. ಇಂಡೋನೇಷಿಯಾದ ಅಧ್ಯಕ್ಷರಾಗಿದ್ದ ಸುಕರ್ಣೋ, ಅವರ ಮಗಳು ಮೇಘವತೀ ಸುಕರ್ಣೋಪುತ್ರಿ, ಅವರ ಮಗ ಸುಹಾರ್ತೊ ಕೆಲವು ಪ್ರಮುಖ ಉದಾಹರಣೆಗಳು. ಇಂಡೋನೇಷಿಯಾದ ಮೂಲ ನಿವಾಸಿಗಳು ಭಾರತೀಯ […]

ಥೈಲ್ಯಾಂಡ್ - ಫಿಲಿಫೈನ್ಸ್

ಥೈಲ್ಯಾಂಡ್ – ಫಿಲಿಫೈನ್ಸ್

ಜಗದ್ಗುರು ಭಾರತ - 0 Comment
Issue Date : 30.04.2015

ಥಾಯ್ ಜನರ ದೈನಂದಿನ ಬದುಕಿನಲ್ಲಿ ಸಂಸ್ಕೃತದ ಹೆಸರು ಮತ್ತು ನುಡಿಗಟ್ಟುಗಳು ಚಾಲ್ತಿಯಲ್ಲಿರುವುದು. ಅವರಲ್ಲಿ ಹಿಂದೂ ಧರ್ಮ ಅದೆಷ್ಟು ಹಾಸುಹೊಕ್ಕಾಗಿದೆ ಅನ್ನುವುದನ್ನು ಸಾರುತ್ತದೆ. ಇಲ್ಲಿ ರಾಮಕಿನ್ ಎಂದು ಕರೆಸಿಕೊಳ್ಳುವ ರಾಮಾಯಣ, ರಾಷ್ಟ್ರೀಯ ಮಾನ್ಯತೆಯ ಕೃತಿಯಾಗಿದ್ದು, ವಿಶೇಷ ಸಂದರ್ಭಗಳಲ್ಲಿ ಅದನ್ನು ಅಭಿನಯಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಥಾಯ್ ಜನರು ರಾಮಾಯಣದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಶ್ಯಾಮ ದೇಶದ ಮುಖ್ಯ ನಗರವೊಂದಕ್ಕೆ ಅಯೋಧ್ಯೆಯ ನೆನಪಿಗಾಗಿ ಅಯುತ್ತಯ ಎಂದೇ ಹೆಸರಿಡಲಾಗಿತ್ತು. ಇಂದಿಗೂ ಅಲ್ಲಿ ರಾಷ್ಟ್ರದ ಮುಖ್ಯಸ್ಥರಾಗಿ ಅಧಿಕಾರ ವಹಿಸುವವರು ಪ್ರಮಾಣ ವಚನ ಸ್ವೀಕರಿಸುವುದು […]

ಜಪಾನ್ – ಕೊರಿಯಾ - ಸಿಂಗಾಪುರ

ಜಪಾನ್ – ಕೊರಿಯಾ – ಸಿಂಗಾಪುರ

ಜಗದ್ಗುರು ಭಾರತ - 0 Comment
Issue Date : 30.04.2015

ಜಪಾನ್ ದೇಶದ ಮೇಲೆ ಭಾರತದ ಪ್ರಭಾವ ಬೌದ್ಧ ಧರ್ಮಕ್ಕಿಂತಲೂ ಮುಂಚಿನದು. ಭಾರತವನ್ನು ಜಪಾನೀಯರು ತಮ್ಮ ಸಾಂಸ್ಕೃತಿಕ ತಾಯಿಯೆಂದು ಭಾವಿಸುತ್ತಾರೆ. ಭಾರತವನ್ನು ಜಪಾನೀಯರು ಕರೆಯುವುದು ತೆಂಜಿಕು ಎಂದು. ಇದರ ಅರ್ಥ ಅಕ್ಷರಶಃ ಸ್ವರ್ಗ ಎಂದು. ಇಲ್ಲಿನ ಜನಪ್ರಿಯ ಶಿಂಗಾನ್ ಪಂಥದ ಮೂಲ ಬೇರುಗಳು ಭಾರತದಲ್ಲಿದೆ. ನಮ್ಮ ತಾಂತ್ರಿಕ ಪಂಥವೇ ಅಲ್ಲಿ ಶಿಂಗಾನ್ ಹೆಸರಿನಿಂದ ಕರೆಯಲ್ಪಡುತ್ತದೆ. ಪ್ರಾಚೀನ ಜಪಾನ್ ಅವಶೇಷಗಳಲ್ಲಿ ಸಮುದ್ರ ಮಥನದ ಚಿತ್ರ ಕಂಡುಬಂದಿದೆ. ಜಪಾನೀ ಷಿಂಟೋ ಪಂಥದ ಸೃಷ್ಟಿ ಕಥನವು ಸಮುದ್ರಮಥನದಿಂದ ಆರಂಭವಾಗುತ್ತದೆ. ನಮ್ಮ ಮೇರು ಪರ್ವತವನ್ನು […]

ಟಿಬೆಟ್ – ಚೀನಾ

ಟಿಬೆಟ್ – ಚೀನಾ

ಜಗದ್ಗುರು ಭಾರತ - 1 Comment
Issue Date : 07.04.2015

   ಕ್ರಿ.ಪೂ. 3ನೇ ಶತಮಾನದಲ್ಲಿ ಆಗಿ ಹೋದ ಪ್ರಸಿದ್ಧ ಸಾಮ್ರಾಟ ಹುಆಂಗ್ ಟಿ ಆಸ್ಥಾನದಲ್ಲಿ ಬ್ರಹ್ಮ ಮತ್ತು ಖರು ಎಂಬ ಭಾರತೀಯ ವಿದ್ವಾಂಸರು ಪ್ರಸಿದ್ಧರಾಗಿದ್ದರು.  ಪ್ರಸ್ತುತ ಚಾಲ್ತಿಯಲ್ಲಿರುವ ಚೀನೀ ಲಿಪಿಯ ಮೂಲ ಪ್ರತಿಯನ್ನು ಆವಿಷ್ಕರಿಸಿದ್ದು ಈ ಬ್ರಹ್ಮ ಎಂಬಾತನೇ ಮುಂದೆ ಆತನ ಶಿಷ್ಯ ಚೀನಾದ ಸಾಂಗ್ ಷಿಯಾ ಅದನ್ನು ಅಭಿವೃದ್ಧಿಪಡಿಸಿ ಇಂದಿನ ರೂಪಕ್ಕೆ ತಂದನು. ಹಳದಿ ಚಕ್ರವರ್ತಿ ಎಂದೇ ಪ್ರಸಿದ್ಧನಾಗಿದ್ದ ಸಾಮ್ರಾಟ ಹುಆಂಗ್ ಟಿಯು ಶಸ್ತ್ರಾಸ್ತ್ರಗಳು, ಕಟ್ಟಡಗಳು, ಹೊಲ ಗದ್ದೆಗಳು, ಉಡುಗೆ ಶೈಲಿ ಮೊದಲಾದವನ್ನು ಪರಿಚಯಿಸುವ ಮೂಲಕ […]

ನೇಪಾಳ

ನೇಪಾಳ

ಜಗದ್ಗುರು ಭಾರತ - 0 Comment
Issue Date : 30.04.2015

  ನೇಪಾಳದ ಉತ್ತರಕ್ಕೆ ಟಿಬೆಟ್ ಇದ್ದರೆ, ಉಳಿದೆಲ್ಲ ದಿಕ್ಕುಗಳಲ್ಲೂ ಭಾರತವೇ ಇದೆ. ಸಾಂಸ್ಕೃತಿಕವಾಗಿಯೂ ಭಾರತೀಯತೆಯಿಂದ ಆವೃತವಾದ ದೇಶವಿದು.  ಇತ್ತೀಚಿನವರೆಗೂ ಏಕೈಕ ಹಿಂದೂ ರಾಷ್ಟ್ರವೆಂಬ ಹೆಮ್ಮೆಗೆ ಭಾಜನವಾಗಿದ್ದ ದೇಶವಿದು. ಈಗ ರಾಜಕೀಯವಾಗಿ ಜಾತ್ಯತೀತವಾಗಿದ್ದರೂ ನೇಪಾಳವು ಹಿಂದೂ ರಾಷ್ಟ್ರವೆಂದೇ ಗುರುತಿಸಲ್ಪಡುತ್ತದೆ.  2011ರ ಜನಗಣತಿಯಲ್ಲಿ ನೇಪಾಳದ ಶೇಕಡ 80ಕ್ಕೂ ಹೆಚ್ಚು ಜನರು ತಮ್ಮನ್ನು ಹಿಂದೂಗಳೆಂದು ಗುರುತಿಸಿಕೊಂಡಿದ್ದರು.  ನೇಪಾಳದ ಕಾಲಗಣನೆಯು ಹಿಂದೂ ಪಂಚಾಂಗದ ರೀತ್ಯಾ ವಿಕ್ರಮ ಶಕೆಯಿಂದಲೇ ಆರಂಭವಾಗುತ್ತದೆ ಮತ್ತು ಇದು ರಾಷ್ಟ್ರೀಯ ಮನ್ನಣೆ ಪಡೆದ ಅಧಿಕೃತ ಪದ್ಧತಿಯಾಗಿದೆ.  ಪಶುಪತಿ ಪುರಾಣದ ಪ್ರಕಾರ […]

ಬರ್ಮಾ – ಮಯನ್ಮಾರ್

ಬರ್ಮಾ – ಮಯನ್ಮಾರ್

ಜಗದ್ಗುರು ಭಾರತ ; ಲೇಖನಗಳು - 0 Comment
Issue Date : 30.04.2015

 ಬ್ರಿಟಿಷ್ ಅತಿಕ್ರಮಣಕ್ಕೆ ಮುನ್ನ ಭಾರತೀಯ ರಾಜವಂಶಗಳು ಬ್ರಹ್ಮದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ಉಲ್ಲೇಖಗಳಿವೆ.  ಇಲ್ಲಿನ ಪ್ರಪ್ರಾಚೀನ ವಿಷ್ಣು ಮಂದಿರದಲ್ಲಿ ದೊರೆತ ಶಾಸನದಲ್ಲಿ ದಕ್ಷಿಣ ಭಾರತದ ಸಂತಕವಿ ಕುಲಶೇಖರರ ಮುಕುಂದಮಾಲಾ ಸ್ತೋತ್ರ ಕಂಡುಬರುತ್ತದೆ.  ಪ್ಯು, ಮೋನ್ ಮತ್ತು ಭ್ರಮ್ಮ ಇಲ್ಲಿಯ ಮೂರು ಮುಖ್ಯ ಜನಜಾತಿಗಳು. ಈ ಮೂರೂ ಜಾತಿಗಳು ಭಾರತೀಯ ಸಂಸ್ಕೃತಿಯಿಂದ ಪ್ರೇರಿತವಾಗಿದ್ದವು.  ಭ್ರಮ್ಮ ಕುಲದವರ ಪ್ರಭಾವದಿಂದಲೇ ಭ್ರಮ್ಮದೇಶ (ಬ್ರಹ್ಮದೇಶ) ಎಂಬ ಹೆಸರು ಪಡೆದಿತ್ತು. ಈ ಜಾತಿಯವರು ಅಕ್ಷರಶಃ ಭಾರತೀಯ ಸಂಸ್ಕೃತಿಯ ಅನುಚರರಾಗಿದ್ದರು.  ಪ್ಯು ಜಾತೀಯರು ಭಾರತ ಹಾಗೂ ಚೀನಾ […]

ಈಜಿಪ್ಟ್ – ಗ್ರೀಕ್

ಈಜಿಪ್ಟ್ – ಗ್ರೀಕ್

ಜಗದ್ಗುರು ಭಾರತ - 0 Comment
Issue Date : 30.04.2015

 ಅಮುನ್, ತಲೆಯ ಮೇಲೆರಡು ಗರಿಗಳನ್ನು ಹೊಂದಿರುವ ನೀಲಿ ಚರ್ಮದ ದೇವತೆ. ಈತ ಜನಸಾಮಾನ್ಯರ ಜೊತೆ ಇರುತ್ತಿದ್ದ ಸರಳ ಹೃದಯಿ.  ಅಮುನ್, ಈಜಿಪ್ಷಿಯನ್ನರಿಗೆ ಪಾಲಿಗೆ ಮಹಾವಿಷ್ಣುವಿನಂತೆ ದೇವಾಧಿದೇವ. ಜಗನ್ನಿಯಾಮಕನೂ ನಿಯಂತ್ರಕನೂ ಆಗಿರುವನು.  ಈಜಿಪ್ಷಿಯನ್ನರಿಗೆ ನಮ್ಮ ದೇವಗಂಗೆಯಷ್ಟೇ ಮಹತ್ವದ ನೈಲ್ ನದಿ ಹುಟ್ಟುವುದು ಅಮುನ್ ದೇವನ ಪಾದಗಳ ತುದಿಯಲ್ಲಿ.  ಈಜಿಪ್ಷಿಯನ್ ಸೂರ್ಯ ದೇವತೆ ರಾನೊಡನೆ ಸಮೀಕರಿಸಿ ಅಮುನ್‌ನನ್ನು ಅಮುನ್ ರಾ ಎಂದೂ ಕರೆಯಲಾಗುತ್ತದೆ. ಇದು ಮೂಲತಃ ನಮ್ಮ ಸೂರ್ಯ ನಾರಾಯಣನ ಕಲ್ಪನೆ.  ಕರ್‌ನಕ್‌ನಲ್ಲಿ ವರ್ಷಕ್ಕೊಮ್ಮೆ ನೈಲ್ ಪ್ರವಾಹದ ಅವಧಿಯಲ್ಲಿ ಇಪ್ಪತ್ತೆಂಟು […]

ಕಾಂಬೋಡಿಯಾ

ಕಾಂಬೋಡಿಯಾ

ಜಗದ್ಗುರು ಭಾರತ - 0 Comment
Issue Date : 30.04.2015

 ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮಗಳಿಂದ ಪ್ರಭಾವಿತಗೊಂಡು ಶ್ರೀಮಂತ ಇತಿಹಾಸ ಬರೆದುಕೊಂಡಿದ್ದ ದೇಶಗಳಲ್ಲಿ ಕಾಂಬೋಡಿಯಾ ಕೂಡ ಒಂದು. ಇದರ ಪ್ರಾಚೀನ ಹೆಸರು ಕಾಂಬೋಜ.  ಕಾಂಬೋಡಿಯಾದ ಮೂಲ ನಿವಾಸಿಗಳು ನಾಗ ಜನಾಂಗದವರು. ಮೂಲತಃ ಪ್ರಕೃತಿ ಆರಾಧಕರು. ಕಾಲಾನಂತರದಲ್ಲಿ ಈ ಜನಾಂಗವು ವಿಷ್ಣುವನ್ನು ಮೂರ್ತಿ ರೂಪದಲ್ಲಿ ಪೂಜಿಸಲು ಆರಂಭಿಸಿತು.  ಕಾಂಬೋಡಿಯಾಕ್ಕೆ ಆ ಹೆಸರು ಬಂದಿದ್ದು ಭಾರತ ದೇಶದ ರಾಜಕುಮಾರ ಕಂಬೋಜನಿಂದ. ರಾಜಕುಮಾರಿಯನ್ನು ವರಿಸಿ ಅಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪಿಸಿ, ಕಾಂಬೋಜವನ್ನು ನಿರ್ಮಿಸಿದ ಖ್ಯಾತಿ ಅವನದು.  ಕಾಂಬೋಜ ಅಥವಾ ಕಾಂಬೋಡಿಯಾವನ್ನು ಮೊಟ್ಟಮೊದಲು […]

ಮಾಯಾ – ಇಂಕಾ

ಮಾಯಾ – ಇಂಕಾ

ಜಗದ್ಗುರು ಭಾರತ ; ಲೇಖನಗಳು - 0 Comment
Issue Date :

 ಕ್ರಿಸ್ತಪೂರ್ವ ಮೂರು ಸಹಸ್ರಮಾನಗಳಷ್ಟು ಪ್ರಾಚೀನ ಇತಿಹಾಸ ಹೊಂದಿರುವ ಮಾಯನ್ನರ ಕಾಲಮಾನ ಶುರುವಾಗುವುದು ಭಾರತೀಯರ ಪಂಚಾಂಗದಂತೆ ಕಲಿಯುಗದ ಆರಂಭಿಕ ಅವಧಿಯಲ್ಲಿ.  ಕಲಿಯುಗದ ಆರಂಭವೆಂದರೆ ದ್ವಾಪರ ಯುಗದ ಅಂತ್ಯಕಾಲ. ಈ ಅವಧಿಯಲ್ಲಿ ಅರ್ಜುನನು ನಡೆಸಿದ ದಂಡಯಾತ್ರೆಯಲ್ಲಿ ಆತ ಪಾತಾಳದ ನಾಗಕನ್ಯೆಯನ್ನು ಮದುವೆಯಾಗುವ ಉಲ್ಲೇಖವಿದೆ. ಈ ಪಾತಾಳವೇ ಇಂದಿನ ಮೆಕ್ಸಿಕೋ.  ಪಾತಾಳ ನಾಗಗಳ ಲೋಕ. ಮೆಕ್ಸಿಕನ್ನರ ಪೂರ್ವಜರು ನಾಗಾ ಜನಾಂಗದವರೇ. ಇವರು ಭಾರತದ ಈಶಾನ್ಯ ಭಾಗದಲ್ಲಿ ನೆಲೆಸಿದ್ದ ತಮ್ಮ ಜನಾಂಗದವರೊಡನೆ ಸಂಬಂಧ ಹೊಂದಿದ್ದರು.  ಮಾಯಾ ಸಂಸ್ಕೃತಿಯ ಅಧಿನಾಯಕ ಮಯಾಸುರ. ಈತ ಅಸುರರ […]