ವಿಯೆಟ್ನಾಂ

ವಿಯೆಟ್ನಾಂ

ಜಗದ್ಗುರು ಭಾರತ ; ಲೇಖನಗಳು - 0 Comment
Issue Date : 27.04.2015

 ವಿಯೆಟ್ನಾಂ  ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಕಂಡುಬರುವ ಚಪ್ಪನ್ನಾರು ದೇಶಗಳಲ್ಲಿ ಚಂಪಾ ದೇಶವೂ ಒಂದು. ಇದು ಒಂದು ವಿಯೆಟ್ನಾಮ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ.  ಚಾಮ್ ಹಾಗೂ ನಾಗ ಜನಾಂಗೀಯರು ಈ ದೇಶದ ಮೂಲ ನಿವಾಸಿಗಳು.  ಚಾಮ್ ಪಂಥೀಯರ ಬಹುತ್ವದ ಕಾರಣದಿಂದ ಈ ದೇಶಕ್ಕೆ ಚಂಪಾ ಎಂಬ ಹೆಸರು ಬಂದಿತೆಂದು ಪ್ರತೀತಿ ಇದೆ.  ನಾಗ ಹಾಗೂ ಚಾಮ್ – ಎರಡೂ ಪಂಥೀಯರನ್ನು ಪ್ರತಿನಿಧಿಸುವ ಸಲುವಾಗಿ ಇದು ನಾಗರ ಚಂಪಾ ಎಂದೂ ಕರೆಯಲ್ಪಡುತ್ತಿತ್ತು.  ಕ್ರಿ.ಶ. 2ನೇ ಶತಮಾನದಲ್ಲಿಯೇ ಇಲ್ಲಿಯ ಮೂಲನಿವಾಸಿಗಳು ಹಿಂದೂ […]

ಗಾಂಧಾರ

ಗಾಂಧಾರ

ಜಗದ್ಗುರು ಭಾರತ ; ಲೇಖನಗಳು - 0 Comment
Issue Date : 25.04.2015

 ಗಾಂಧಾರ ಇಂದಿನ ಪಾಕಿಸ್ತಾನ ಹಾಗೂ ಈಶಾನ್ಯ ಆಫ್ಘಾನಿಸ್ತಾನಗಳುದ್ದಕ್ಕೂ ವ್ಯಾಪಿಸಿಕೊಂಡಿದ್ದ ರಾಷ್ಟ್ರವಾಗಿತ್ತು.  ಗಾಂಧಾರ ದೇಶವು ಕ್ರಿ.ಶ. 5ನೇ ಶತಮಾನದವರೆಗೂ ಉಛ್ರಾಯದಲ್ಲಿದ್ದು, ಹಿಂದೂ ಸಂಸ್ಕೃತಿಯ ನೆಲೆಯಾಗಿತ್ತು.  ಅಂದಿನ ಗಾಂಧಾರವೇ ಇಂದು ಕಂದಹಾರ್ ಆಗಿದೆ.  ಇಂದಿನ ಪೇಷಾವರ ಹಾಗೂ ಟೆಕ್ಸೀಲಾ ಪಟ್ಟಣಗಳು ಪ್ರಾಚೀನ ಕಾಲದ ಪುರುಷಪುರ ಹಾಗೂ ತಕ್ಷ ಶಿಲಾ ನಗರಗಳೇ ಆಗಿವೆ.  ತಕ್ಷಶಿಲಾ ಆ ಕಾಲದ ಅತ್ಯುನ್ನತ ಶಿಕ್ಷಣ ಕೇಂದ್ರಗಳಲ್ಲಿ ಪ್ರಮುಖವಾಗಿತ್ತು.  ರಾಮಾಯಣ ಮಹಾಭಾರತಗಳಲ್ಲಿ ಗಾಂಧಾರ ದೇಶದ ಉಲ್ಲೇಖವಿದೆ.  ಕುರುಕುಲದ ಸೊಸೆಯಾಗಿ ಬಂದ ಗಾಂಧಾರಿ ಇದೇ ದೇಶದವಳು.  ಕುಶಾನ ವಂಶದ […]

ಜಗದ್ಗುರು ಭಾರತ – 19

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 24.07.2014

ಪ್ರಾಚೀನ ಹಿಂದೂ ಕಾಲಜ್ಞಾನ-6 ಕಳೆದ ಲೇಖನದಲ್ಲಿ ಪ್ರಾಚೀನ ಭಾರತದ ಗಣ್ಯ ಚಿಂತಕರಾದ ಸಾಂಖ್ಯರು ‘ಕಾಲ’ದ ಕುರಿತಾಗಿ ಮಾಡಿದ ಚಿಂತನೆಯ ವೈಶಿಷ್ಟ್ಯಗಳನ್ನು ವಾಚಕರ ಗಮನಕ್ಕೆ ತರಲಾಗಿತ್ತು. ವೈದಿಕ ಋಷಿಗಳೂ, ಉಪನಿಷತ್ ಕಾಲದ ದ್ರಷ್ಟಾರರೂ ‘ಕಾಲ’ಕ್ಕೆ ದೈವಸ್ವರೂಪ ನೀಡಿದಂತೆ ಸಾಂಖ್ಯರು ನೀಡಲಿಲ್ಲವೆಂಬುದನ್ನು ಗಮನಿಸಿದೆವು. ಅಂತೆಯೇ ವೈಶೇಷಿಕ ಹಾಗೂ ಜೈನ ದಾರ್ಶನಿಕರು ಮಾಡಿದಂತೆ ‘ಕಾಲ’ವನ್ನು  ಸೃಷ್ಟಿಯ ಮೂಲತತ್ವಗಳಲ್ಲೊಂದು ಎಂದು ಸಾಂಖ್ಯರು ಪರಿಗಣಿಸಲಿಲ್ಲವೇಕೆ ಎಂಬುದನ್ನೂ ಕಂಡೆವು. “ಕಾಲವು ಬರಿಯ ಬುದ್ಧಿಯ ಕಲ್ಪನೆಯಿಂದ  ಹುಟ್ಟಿಕೊಂಡ ವಸ್ತುವೇ ವಿನಹ ಅದು ನೈಜ ಸತ್ಯವಲ್ಲ” ಎಂದು ವಾದಿಸಿದ್ದೂ […]

ಜಗದ್ಗುರು ಭಾರತ – 18

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 23.07.2014

 ಪ್ರಾಚೀನ ಹಿಂದೂ ಕಾಲಜ್ಞಾನ-5 ಹಿಂದಿನ ಲೇಖನದಲ್ಲಿ ಬೌದ್ಧ ಹಾಗೂ ಜೈನ ದಾರ್ಶಗಳನ್ನು  ಕಂಡೆವು. ಅದರಲ್ಲೂ ವಿಶೇಷವಾಗಿ  ಜೈನ  ಚಿಂತನೆಯಲ್ಲಿ ಆಧುನಿಕ ವಿಜ್ಞಾನಿಗಳಾದ ನ್ಯೂಟನ್ ಮತ್ತು ಐನ್‍ಸ್ಟೀನರ ಕಲ್ಪನೆಗಳಿಗೆ ಹೆಚ್ಚು ಕಡಿಮೆ ಹೋಲುವ  ಕೆಲವು  ಪರಿಕಲ್ಪನೆಗಳನ್ನು  ಗಮನಿಸಿದೆವು. ಈ ವಿಷಯದ ಕುರಿತಾಗಿ ಪ್ರಾಚೀನ ಭಾರತದ ಮಹತ್ವಪೂರ್ಣ ಚಿಂತಕರಲ್ಲಿ  ಗಣ್ಯರಾದ ಸಾಂಖ್ಯದಾರ್ಶನಿಕರ ಅಭಿಪ್ರಾಯವೇನು ಎಂಬುದನ್ನು ನಾವೀಗ ಗಮನಿಸೋಣ.1 ಸಾಂಖ್ಯರ ಕಾಲಚಿಂತನೆ ಸಾಂಖ್ಯರು  ‘ಕಾಲವು ಶಾಶ್ವತ’ ಎಂಬ ವೈದಿಕ ಋಷಿಗಳ ಸಿದ್ಧಾಂತವನ್ನು  ಮನ್ನಿಸುವವರಾಗಿರಲಿಲ್ಲ. ಆಧುನಿಕ ವಿಜ್ಞಾನಿಗಳಂತೆ ಪ್ರಕೃತಿಯ ಹೊರತಾಗಿ ಬೇರಾವ ಸೃಷ್ಟಿತತ್ವವೂ […]

ಜಗದ್ಗುರು ಭಾರತ – 17

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 20.07.2014

ಪ್ರಾಚೀನ ಹಿಂದೂ ಕಾಲಜ್ಞಾನ-4 ವೈದಿಕ, ಉಪನಿಷತ್ಕಾಲದ ಹಾಗೂ ವಿವಿಧ ದರ್ಶನಗಳ ಅನುಯಾಯಿಗಳು ‘ಕಾಲ’ವನ್ನು ಕಂಡು ವಿಶ್ಲೇಷಿಸಿದ ಬಗೆಯನ್ನು ಕುರಿತು ಹಿಂದಿನ ಲೇಖನದಲ್ಲಿ ಸ್ಥೂಲವಾಗಿ ತಿಳಿಸಲಾಯಿತು.  ಅವೈದಿಕ ಹಾಗೂ ಜೈನ ಹಾಗೂ ಬೌದ್ಧ ಚಿಂತಕರೂ ಈ ಕುರಿತು ವಿಶಿಷ್ಟ ರೀತಿಯಲ್ಲಿ ಚಿಂತಿಸಿದ್ದಾರೆ.  ಈ ವಿವಿಧ ಆಲೋಚನಾ ರೀತಿಗಳ(different approaches)  ಬಗ್ಗೆಯೇ ಒಂದು ಮಾತು. ಕೆಲವೊಮ್ಮೆ ಅವು ಪರಸ್ಪರ ವಿರುದ್ಧವಾಗಿ ತೋರುವುದರಿಂದ ಅವನ್ನು ಅವ್ಯವಸ್ಥಿತ ಚಿಂತನೆಯ (chaotic thinking)  ಫಲವೆಂದು ಬಗೆಯಬಾರದು. ಬದಲಿಗೆ ನಮ್ಮ ದೇಶದ  ಸುದೀರ್ಘ ಇತಿಹಾಸದಲ್ಲಿ, ವಿವಿಧ […]

ಜಗದ್ಗುರು ಭಾರತ -16

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 19.07.2014

ಪ್ರಾಚೀನ ಹಿಂದೂ ಕಾಲಜ್ಞಾನ-3 ವೈದಿಕಯುಗದ ಪ್ರಜ್ಞಾಚಕ್ಷು ಋಷಿಗಳು  ಕಾಲದ ಬಗ್ಗೆ   ಹೊಂದಿದ್ದ ಕಲ್ಪನೆಯನ್ನು  ಕುರಿತು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಲಾಗಿತ್ತು.  ಪ್ರತೀಕಾತ್ಮಕ (Metaphoric)ಭಾಷೆಯನ್ನು  ಬಳಸಿ ಕಾಲದ ನಿರಂತರ ಗತಿಯನ್ನೂ, ಶಾಶ್ವತತೆಯನ್ನೂ ಅವರು ಸೂಚಿಸಿದ್ದರೆಂದು  ತಿಳಿಸಲಾಗಿತ್ತು. ಅಷ್ಟೇ ಅಲ್ಲ,  ಸಾಮಾನ್ಯ ಸ್ಥಿತಿಯಲ್ಲಿ  ತಾನು ಮೀರಲಾಗದ ಕಾಲವನ್ನು,  ಪ್ರಜ್ಞೆ ಮತ್ತು ಪ್ರಯತ್ನ ಬಲದಿಂದ ಮೀರಿ,  ಮಾನವನು  ಕಾಲಾತೀತ ಸ್ಥಿತಿಯನ್ನು  ಮುಟ್ಟಲು  ಸಾಧ್ಯವೆಂಬ  ಸೂಚನೆಯೂ  ಅಥರ್ವಮಂತ್ರವೊಂದರಲ್ಲಿರುವುದನ್ನು  ವಾಚಕರ ಗಮನಕ್ಕೆ ತರಲಾಗಿತ್ತು. ಅಲ್ಲಿಂದ ಮುಂದುವರೆಯೋಣ.  ಕಾಲದ ಕುಂಭ ಅಥರ್ವವೇದದಲ್ಲಿ  ‘ಕಾಲ’ದ ಮೇಲ್ಗಡೆಯಲ್ಲಿ  ತುಂಬಿತುಳುಕುವ  ಪಾತ್ರೆಯೊಂದಿದೆ […]

ಜಗದ್ಗುರು ಭಾರತ -15

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 18.07.2014

ಪ್ರಾಚೀನ ಹಿಂದೂ ಕಾಲಜ್ಞಾನ-2 ನಮ್ಮ ಪೂರ್ವಜರು ಗಗನ ವೀಕ್ಷಣೆಯಿಂದ ‘ಭೌತಕಾಲ’ದ (Physical time) ಬಗ್ಗೆ ತಮ್ಮ ಅರಿವನ್ನು ಹೇಗೆ ಕ್ರಮವಾಗಿ ಹೆಚ್ಚಿಸಿಕೊಂಡರೆಂಬುದನ್ನು  ಕಳೆದ ಲೇಖನದಲ್ಲಿ ತಿಳಿಸಲಾಗಿತ್ತು.  ಈ ಭೌತಕಾಲವನ್ನು  ಅಳೆಯಲು ನೆರವಾಗುವ  ವಿಶದ ಕೋಷ್ಟಕವೊಂದನ್ನು ಅವರು ರಚಿಸಿದ್ದಾರೆ. ಪ್ರಾಸಂಗಿಕ ಔಚಿತ್ಯದ ದೃಷ್ಟಿಯಿಂದ  ‘ಖಗೋಳ ವಿಜ್ಞಾನದ ಕ್ಷೇತ್ರದಲ್ಲಿ ಪ್ರಾಚೀನ ಭಾರತೀಯರ ಸಾಧನೆ’ಯ ಬಗ್ಗೆ ಮುಂದೆ ಬರೆಯುವಾಗ ಅದನ್ನು ವಿವರಿಸುತ್ತೇನೆ. ಕೇವಲ ಭೌತಶಾಸ್ತ್ರೀಯ ದೃಷ್ಟಿಯಿಂದ  ನಮ್ಮವರು ‘ಕಾಲ ಸ್ವರೂಪ’ದ ಬಗ್ಗೆ (Nature of time) ಆಲೋಚಿಸಿದ ರೀತಿಗಷ್ಟೇ  ಸದ್ಯಕ್ಕೆ  ನನ್ನ […]

ಜಗದ್ಗುರು ಭಾರತ – 14

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 17.07.2014

ಕಪಿಲಮುನಿಯ‘ಸಾಂಖ್ಯಶಾಸ್ತ್ರ’-7  ಪ್ರಾಚೀನ ಭಾರತೀಯ ಕಾಲಚಿಂತನೆ  ಕಳೆದ ಲೇಖನದಲ್ಲಿ ಆಧುನಿಕ ವೈಜ್ಞಾನಿಕರು ‘ದೇಶ’ ಮತ್ತು ‘ಕಾಲ’ಗಳ ಕುರಿತಾಗಿ ವ್ಯಕ್ತಪಡಿಸಿರುವ ಕಲ್ಪನೆಗಳನ್ನು ಸ್ಥೂಲವಾಗಿ ತಿಳಿಸಲು ಪ್ರಯತ್ನಿಸಲಾಗಿತ್ತು.  ವಿಜ್ಞಾನ ಕ್ಷೇತ್ರದಲ್ಲಿ ಎರಡು ಯುಗಗಳನ್ನು ಕಲ್ಪಿಸುವುದು ಈಗ ವಾಡಿಕೆಯಾಗಿದೆ.     ಕ್ರಿ. ಶ.  17 ಮತ್ತು 18ನೆಯ ಶತಮಾನಗಳನ್ನು ‘ನ್ಯೂಟನ್ ಯುಗ’ವೆಂದೂ, ಐನ್‍ಸ್ಟೀನ್ ಮಹಾಶಯನ  ಪ್ರತಿಭಾಸ್ಪರ್ಶದ ಫಲವಾಗಿ  ಹಳೆಯ ಜಾಡನ್ನು  ತೊರೆದು ಹೊಸ ದಿಕ್ಕಿಗೆ ವಿಜ್ಞಾನವು ತಿರುಗಿದ್ದರಿಂದಾಗಿ , 19ನೇ ಶತಮಾನವನ್ನು ‘ಐನ್‍ಸ್ಟೀನೋತ್ತರ ಯುಗ’ವೆಂದೂ ವಿಂಗಡಿಸಲಾಗುತ್ತದೆ.  ಐನ್‍ಸ್ಟೀನ್ ಪೂರ್ವದ ಭೌತಶಾಸ್ತ್ರೀಯ ಕಲ್ಪನೆ ಮತ್ತು ಸಿದ್ಧಾಂತಗಳಿಗೆ […]

ಜಗದ್ಗುರು ಭಾರತ – 13

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 16.07.2014

ಭೌತಶಾಸ್ತ್ರದಲ್ಲಿ ಕಾಲ ದೇಶಾಧ್ಯಯನ ಕಪಿಲಮುನಿಯ ‘ಸಾಂಖ್ಯಶಾಸ್ತ್ರ’-6 ಭೌತಶಾಸ್ತ್ರದಲ್ಲಿ  ಕಾಲ-ದೇಶಗಳ ಅಧ್ಯಯನವು (Study of time and space) ಅತಿ ಮುಖ್ಯ ವಿಷಯಗಳಲ್ಲೊಂದು. ಬೆಳಕು, ಶಬ್ದ, ವಿದ್ಯುತ್ ಮುಂತಾದವು ಸೃಷ್ಟಿಯಲ್ಲಿನ ಶಕ್ತಿಯ ವಿವಿಧ ರೂಪಗಳು. ಆದರೆ ಅವು ವಿವಿಧವಾದರೂ ಅವೆಲ್ಲದಕ್ಕೂ ಸಾಮಾನ್ಯವಾದ ಗುಣವೊಂದಿದೆ.  ಅದೇ ವೇಗ(Speed). ಭೂಮಿಯ ಗುರುತ್ವಾಕರ್ಷಣೆಯೂ ಒಂದು ವೇಗವೇ.  ಈ ‘ವೇಗ’ವನ್ನರಿಯಲು ‘ಕಾಲ’ ಮತ್ತು ‘ದೇಶ’ಗಳೆರಡರ ಅರಿವೂ ಬೇಕಾಗುತ್ತದೆ. ಏಕೆಂದರೆ, ದೇಶದಲ್ಲಿ ಕಲ್ಪಿಸಲಾಗುವ ನಿರ್ದಿಷ್ಟ ಅಂತರವನ್ನು  ನಿರ್ದಿಷ್ಟ ಸಮಯದಲ್ಲಿ ಕ್ರಮಿಸುವ  ಕ್ರಿಯೆಯನ್ನೇ ‘ವೇಗ’ ಎನ್ನುವುದು. ಎಂದರೇನಾಯಿತು? […]

ಜಗದ್ಗುರು ಭಾರತ ಭಾಗ -12

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 13.07.2014

ಕಪಿಲಮುನಿಯ ‘ಸಾಂಖ್ಯಶಾಸ್ತ್ರ’ -5 ಆಧುನಿಕ  ವೈಜ್ಞಾನಿಕ ಮನೋಭಾವದವರಾದ ನಾವು, ನಮ್ಮ ಇಂದಿನ  ವೈಶ್ವಿಕ ಕಲ್ಪನೆಗೆ (World-view) ಸರಿಹೊಂದದಿರುವುದರಿಂದ ಸಾಂಖ್ಯರ ಸೃಷ್ಟಿ ವಿಜ್ಞಾನವನ್ನು  ತಿರಸ್ಕರಿಸುವೆವಾದರೂ ಅದರಲ್ಲಿ ಹುದುಗಿರುವ, ಆಧುನಿಕ ವಿಜ್ಞಾನಕ್ಕೂ ಸಮ್ಮತವಾದ ಅನೇಕ ಅಂಶಗಳಿಗಾಗಿ ಅವನ್ನು ಮೆಚ್ಚುವ , ಗೌರವಿಸುವ ಅಗತ್ಯವನ್ನು  ಹಿಂದಿನ  ಲೇಖನದಲ್ಲಿ  ಪ್ರತಿಪಾದಿಸಲಾಗಿತ್ತು.  ಅದಕ್ಕೆ ಇಂಬುಕೊಡುವ  ಇನ್ನೂ ಕೆಲವು ಸಂಗತಿಗಳನ್ನು  ನಾವೀಗ  ಪರಿಶೀಲಿಸೋಣ. ಶಕ್ತಿ – ದ್ರವ್ಯ ಸ್ಥಾಯಿತ್ವ,  ಸಾಂಖ್ಯ ಅಭಿಮತ ಪ್ರಕೃತಿಯಲ್ಲಿನ  ತ್ರಿಗುಣಗಳನ್ನು  ನಿರ್ಮಿಸಲೂ, ನಾಶಪಡಿಸಲೂ  ಸಾಧ್ಯವಿಲ್ಲ ಎಂಬುದು ಸಾಂಖ್ಯರ ಸ್ಪಷ್ಟ ಅಭಿಮತ.1 ಈ […]