ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಸುಧಾರಣೆ ಸಾಧ್ಯವಿಲ್ಲ

ಕರ್ನಾಟಕ - 0 Comment
Issue Date : 18.08.2014

ಕರ್ನಾಟಕ ಲೋಕ(ಪ)ಸೇವಾ ಆಯೋಗವು ಇದೀಗ ಪ್ರಚಾರ ಪಡೆಯಲೇಬಾರದ ಕಾರಣಕ್ಕೆ ದೇಶವ್ಯಾಪಿ ಪ್ರಚಾರ ಗಿಟ್ಟಿಸುತ್ತಿದೆ.ದಿನದಿಂದ ದಿನಕ್ಕೆ ಕೆಪಿಎಸ್ಸಿಯಲ್ಲಿನ ಹಗರಣಗಳ ಬಗ್ಗೆ ದೂರುಗಳು,ಆರೋಪಗಳು, ಟೀಕೆಗಳ ಸುರುಳಿ ಬಿಚ್ಚಿಕೊಳ್ಳುತ್ತಲೇ ಇದೆ.ಕೆಪಿಎಸ್‌ಸಿ ಇರುವುದೇ ಕೆಲವರಿಗೆ ಅನುಕೂಲ ಮಾಡಿಕೊಡಲು ಎನ್ನುವ ಭಾವನೆಯಂತೂ ಈಗ ಸಾರ್ವತ್ರಿಕವಾಗಿ ಮೂಡಿದೆ.ಇದೇ ಕಾರಣಕ್ಕೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು ಏನೇ ಹೇಳಿದರೂ ಜನರು ಮಾತ್ರ ಇದನ್ನು ನಂಬುವ ಸ್ಥಿತಿಯಲ್ಲಿಲ್ಲ.ಅಷ್ಟೇ ಅಲ್ಲ,ಜನರಿಗೆ ದಿನದಿಂದ ದಿನಕ್ಕೆ ಗೊಂದಲವೇ ಹೆಚ್ಚುತ್ತಿದೆ.ಕೆಪಿಎಸ್ಸಿ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದ ಮೂಲ ಆಶಯಕ್ಕೆ ಈಗಿನ ವಿದ್ಯಮಾನಗಳಿಂದ ಯಾವುದೇ ಪ್ರಯೋಜನವೂ ಆಗುತ್ತಿಲ್ಲ […]

ಮತ್ತೊಂದು ದುರಂತ ತಪ್ಪಿಸುವ ನಂಬಿಕೆ ಸರ್ಕಾರಕ್ಕಿದೆಯೇನು?

ಕರ್ನಾಟಕ - 0 Comment
Issue Date : 11.08.2014

ಬಾಯಿ ತೆರೆದು ನಿಂತಿರುವ ನಿರುಪಯೋಗಿ ಕೊಳವೆ ಬಾವಿಗಳ ಬಗ್ಗೆ ಇದೀಗ ಭಾರೀ ಚರ್ಚೆ ನಡೆಯುತ್ತಿದೆ. ಇಂತಹ ಚರ್ಚೆ ಇದೇ ಮೊದಲೂ ಅಲ್ಲ, ಇದೇ ಕೊನೆಯೂ ಅಲ್ಲ. ಏಕೆಂದರೆ, ಮತ್ತೊಂದು ಬಾರಿ ಇಂತಹ ದುರ್ಘಟನೆ ನಡೆಯದಂತೆ ನೋಡಿಕೊಳ್ಳುವ ವಿಧಾನ ನಮಗಿನ್ನೂ ಅಭ್ಯಾಸವಾಗಿಲ್ಲ. ಅಲ್ಲೀವರೆಗೆ ಬರೀ ಮಾತನಾಡುವುದನ್ನು ಬಿಟ್ಟರೆ ನಮಗೆ ಯಾವುದೇ ಆಯ್ಕೆಗಳಿಲ್ಲ. ಹೀಗಾಗಿ ಸುದ್ದಿವಾಹಿನಿಗಳಲ್ಲಿ ಕೂಡ ಈ ತರಹದ ದುರಂತ ತಪ್ಪಿಸುವ ಕುರಿತಾಗಿ ನಡೆಯುವ ಚರ್ಚೆಗಳು ಯಾವ ಪರಿಣಾಮ ಬೀರುತ್ತವೆ ಎನ್ನುವ ಬಗ್ಗೆ ಪ್ರಾಯಶಃ ಚರ್ಚೆಗಳನ್ನು ಪ್ರಸಾರ ಮಾಡುವ […]

ಪ್ರಾಮಾಣಿಕತೆ ನಿಜವಾಗಿದ್ದರೆ ತನಿಖೆಗೇಕೆ ಹಿಂಜರಿಕೆ ?

ಕರ್ನಾಟಕ - 0 Comment
Issue Date : 04.08.2014

ಸನ್ಮಾನ್ಯ ಸಿದ್ದರಾಮಯ್ಯನವರೇ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಡೀನೋಟಿಫಿಕೇಷನ್ ಮೂಲಕ ದೊಡ್ಡ ಹಗರಣ ನಡೆದಿದೆ ಎಂದು ವಿರೋಧ ಪಕ್ಷದ ನಾಯಕರಾಗಿದ್ದಾಗ ನೀವು ವಿಧಾನಸಭೆಯಲ್ಲಿ ನಡೆಸಿದ ಹೋರಾಟ ಆಗಲೇ ನಿಮಗೆ ಮರೆತು ಹೋಗಿದೆಯೇ? ನೀವು ಕೇವಲ ಈಗಿನ ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಮೇಲೆ ಆರೋಪ ಮಾಡುವ ಮೂಲಕ ಬಾಯಿ ಮುಚ್ಚಿಸುವ ಯತ್ನ ಮಾಡುತ್ತಿದ್ದೀರಾ? ಡೀನೋಟಿಫಿಕೇಷನ್ ಮಾಡುವ ಉದ್ದೇಶವೇ ಯಾರಿಗೋ ಲಾಭ ಮಾಡಿಕೊಡುವುದು ಇಲ್ಲವೇ ಸ್ವತಃ ಲಾಭ ಮಾಡಿಕೊಳ್ಳುವುದು ಎಂದು ನೀವು ಭಾವಿಸಿರುವುದೇ ನಿಜವಾದರೆ ನಿಮ್ಮ ಅವಧಿಯಲ್ಲಿ ನಡೆದಿರುವ […]

ಮಂತ್ರಿಗಿರಿಗೆ ಕಾಂಗ್ರೆಸ್‍ನಲ್ಲಿ ಲಾಬಿ ಪುನರಾವರ್ತನೆ

ಕರ್ನಾಟಕ - 0 Comment
Issue Date : 28.07.2014

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಈಗ ಪ್ರಶ್ನಾತೀತ ನಾಯಕ ಎನ್ನುವವರು ಯಾರೂ ಉಳಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ಹೈಕಮಾಂಡಿನ ಪ್ರಶ್ನಾತೀತ ನಾಯಕ ಎಂದು ಭಾವಿಸಿರಬಹುದೇ ಹೊರತು ಪಕ್ಷದ ಶಾಸಕರ ನೆಚ್ಚಿನ ನಾಯಕನಂತೂ ಆಗಿ ಉಳಿದಲ್ಲ. ಇದಕ್ಕೆ ಕೆಲವು ಹಿರಿಯ ಶಾಸಕರ ಒಂದು ಗುಂಪು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ಮಾಡುವಂತೆ ಒತ್ತಡ ಹೇರಿರುವುದೇ ಸಾಕ್ಷಿ. ಮುಖ್ಯಮಂತ್ರಿಯಾದವರಿಗೆ ತನ್ನ ಸಂಪುಟದಲ್ಲಿ ಯಾರಿರಬೇಕು ಎನ್ನುವುದನ್ನು ನಿರ್ಧರಿಸುವ ಸ್ವಾತಂತ್ರ್ಯ ಇರಬೇಕು. ಆದರೆ ಕೆಲವು ಶಾಸಕರೇ, ಒಂದೂವರೆ ವರ್ಷಗಳಿಂದ ಇಲಾಖೆಗಳ ಮೇಲೆ […]

ಅರಣ್ಯ ರಕ್ಷಣೆ: ಚರ್ಚೆಗಿಂತ ಗಂಭೀರ ಯತ್ನ ಬೇಕಲ್ಲವೇ?

ಕರ್ನಾಟಕ - 0 Comment
Issue Date : 21.07.2014

ರಾಜ್ಯದಲ್ಲಿ ಅರಣ್ಯ ಬೆಳೆಸುವ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ದೂರುಗಳು ಬಹಳ ವರ್ಷಗಳಿಂದಲೂ ಇದೆ. ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಹೆಕ್ಟೇರ್‌ಗಟ್ಟಲೆ ಅರಣ್ಯ ಬೆಳೆಸುವ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಾರೆ. ಸರ್ಕಾರದಲ್ಲಿರುವವರಿಗೂ ಅಧಿಕಾರಿಗಳು ಸಿದ್ಧಪಡಿಸಿದ ಕಡತಗಳಲ್ಲಿನ ವಿವರ ಗೊತ್ತಿರುವುದಿಲ್ಲ. ಒಂದೇ ವರ್ಷದಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಯುತ್ತದೆ ಎಂದರೆ ಬೇಡ ಎನ್ನುವುದು ಅರಣ್ಯ ವಿರೋಧಿಗಳ ಲಕ್ಷಣ ಎನ್ನುವ ದೃಷ್ಟಿಯಿಂದ ಅಂತಹ ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕಿಬಿಡುತ್ತದೆ. ನಂತರದ ಸ್ಥಿತಿ ಎಲ್ಲರಿಗೂ ಗೊತ್ತಿದೆ. ವಿಧಾನಸಭೆಯಲ್ಲಿ ಅರಣ್ಯದ ಸ್ಥಿತಿ ಗತಿ ಬಗ್ಗೆ ಚರ್ಚೆಗಳು, […]

ಇಚ್ಛಾಶಕ್ತಿ ಇದ್ದರೆ ಸಮಸ್ಯೆಗೆ ಪರಿಹಾರವೂ ಇದೆ

ಕರ್ನಾಟಕ - 0 Comment
Issue Date : 14.07.2014

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸತ್ಯಕ್ಕಾಗಿ ಹುತಾತ್ಮ ಪಟ್ಟ ಸಿಗುವುದಾದರೆ ಸಿಗಲಿ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಸಹಜವಾಗಿ ಸಂಚಲನ ಮೂಡಿಸಿದೆ. ಸಿ.ಡಿ ಬಹಿರಂಗಗೊಳ್ಳದೇ ಇದ್ದಿದ್ದರೆ ಕುಮಾರಸ್ವಾಮಿ ಅವರು ಇದೇ ತೀರ್ಮಾನ ಕೈಗೊಳ್ಳುತ್ತಿದ್ದರೇ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದಕ್ಕೆ ಅವರೇ ಉತ್ತರಿಸಬೇಕಾಗಿದೆ.ಇಂದು ರಾಜಕಾರಣ ಎನ್ನುವುದು ಹಣ ಮಾಡುವ ದಂಧೆ ಎನ್ನುವುದು ಮೊದಲಿನಿಂದಲೂ ಎಲ್ಲರಿಗೂ ಅರ್ಥವಾಗಿದೆ. ಆದರೆ ಇದೇ ಮೊದಲ ಬಾರಿಗೆ, ರಾಜ್ಯದ ಮುಖ್ಯಮಂತ್ರಿಯಾಗಿದ್ದವರೊಬ್ಬರು ತಮ್ಮದೇ ಶಾಸಕರು ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೇಟ್ ಬಯಸುವವರಿಂದ ತಲಾ ಒಂದು […]

ವಿಕ್ರಮ ಪತ್ರಿಕೆಯ ವಾರ್ಷಿಕೋತ್ಸವ

ವಿಕ್ರಮ ಪತ್ರಿಕೆಯ ವಾರ್ಷಿಕೋತ್ಸವ

ಕರ್ನಾಟಕ - 1 Comment
Issue Date : 12.07.2014

ಬೆಂಗಳೂರು: ವಿಕ್ರಮ ವಾರಪತ್ರಿಕೆಯ 67ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಕಛೇರಿಯಲ್ಲಿ  ಜುಲೈ 12ರ ಗುರುಪೂರ್ಣಿಮೆಯಂದು ನಡೆಯಿತು.  ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಸಂಘದ ಪ್ರಚಾರಕರಾಗಿರುವ ಚಂದ್ರಶೇಖರ ಭಂಡಾರಿಯವರು ಮಾತನಾಡುತ್ತಾ 1948ರ ಗುರುಪೂರ್ಣಿಮೆಯಂದು ಆರಂಭವಾದ ಪತ್ರಿಕೆ.  ಹಲವು ಏಳುಬೀಳುಗಳ ನಡುವೆ ವಿಕ್ರಮವು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಇದೊಂದು ಅಧ್ಯಯನಕ್ಕೆ ಯೋಗ್ಯವಾದ, ಧ್ಯೇಯ, ಆದರ್ಶಕ್ಕೆ ಪೂರಕವಾದ ಪತ್ರಿಕೆಯಾಗಿದೆ ಎಂದರು. ಇವರು ವಿಕ್ರಮವನ್ನು ಕಟ್ಟಿ ಬೆಳೆಸಿದಂತಹ ಹಿರಿಯರನ್ನು ಸ್ಮರಿಸಿದರು.  ಮಹನೀಯರ ಜೀವನ ಘಟನೆಗಳನ್ನು ಮೆಲುಕು ಹಾಕುತ್ತಾ ಶ್ರೀ ಬೆ.ಸು.ನಾ. ಮಲ್ಯರು ವಿಕ್ರಮದ ಬೆಳವಣಿಗೆಗಾಗಿ ಶ್ರಮಿಸಿದ […]

ನಮ್ಮ ಜನಪ್ರತಿನಿಧಿಗಳು ಹೀಗೇಕಾಗಿದ್ದಾರೆ ?

ನಮ್ಮ ಜನಪ್ರತಿನಿಧಿಗಳು ಹೀಗೇಕಾಗಿದ್ದಾರೆ ?

ಕರ್ನಾಟಕ - 0 Comment
Issue Date : 07.07.2014

ಇಂದಿನ ಜನಪ್ರತಿನಿಧಿಗಳಿಗೆ ಇರುವ ಸರ್ಕಾರೀ ಸವಲತ್ತುಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯಬೇಕಾದ ತುರ್ತು ಸಂದರ್ಭ ಇದೀಗ ಬಂದೊದಗಿದೆಯೇ? ಈ ಪ್ರಶ್ನೆಗೆ ಜನಪ್ರತಿನಿಧಿಗಳಿಂದ ಯಾವ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎನ್ನುವುದು ಸ್ಪಷ್ಟವಾಗಿ ನಮಗೆ ಗೊತ್ತಿದೆ. ಜನಪ್ರತಿನಿಧಿಗಳು ತಮಗೆ ಸರ್ಕಾರ ನೀಡುವ ಸವಲತ್ತಿನಿಂದಲೇ ಸಾರ್ವಜನಿಕರ ಹಿತ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಈಗ ನೀಡುತ್ತಿರುವ ಸವಲತ್ತು ಕಡಿಮೆ ಎಂದೇ ಕೆಲವರು ವಾದಿಸಬಹುದು.ಆದರೆ ಬಹುತೇಕ ಸಾರ್ವಜನಿಕರು ಇದಕ್ಕೆ ವ್ಯತರಿಕ್ತವಾದ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದು ಈಗ ಬಹಿರಂಗಗೊಂಡಿರುವ ಸತ್ಯ. ಈ ಪ್ರಶ್ನೆಯನ್ನು ಏಕೆ ಈಗ […]

ಸಂಸ್ಕೃತ ವಿ.ವಿ. ಕುಲಪತಿ ಆಯ್ಕೆ ವಿವಾದ

ಸಂಸ್ಕೃತ ವಿ.ವಿ. ಕುಲಪತಿ ಆಯ್ಕೆ ವಿವಾದ

ಕರ್ನಾಟಕ - 0 Comment
Issue Date : 03.07.2014

ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಾಲ್ಕು ವರ್ಷಗಳ ಹಿಂದೆ ಪ್ರಾರಂವಾಯಿತು. ಈ ಪೂರ್ವದಲ್ಲೇ ಸಂಸ್ಕೃತ ವಿ. ವಿ. ಬೇಕು-ಬೇಡ ಎಂಬ ಬಗ್ಗೆ ವಾಗ್ವಾದ ಬಹುಕಾಲ ನಡೆಯಿತು. ಆಗ ಜಾತ್ಯಾತೀತ ಹೆಸರಿನಲ್ಲಿ ಜಾತಿವಾದಿಗಳು, ಮೂಢನಂಬಿಕೆಯ ವಿರೋಧಿಚಳವಳಿಯ ಬುದ್ಧಿಜೀವಿಗಳು ಅತಾರ್ಕಿಕ ಸಂಸ್ಕೃತಿ ವಿರೋಧಿಗಳು, ವೇದ ವಿರೋಧಿಗಳು ಹಿಂದೂ ಸಂಸ್ಕೃತಿ ವಿರೋಧಿಗಳು, ಪಟ್ಟಭದ್ರರು. ಎಲ್ಲರೂ ಸೇರಿ ಸಂಸ್ಕೃತ ವಿ. ವಿ. ಬೇಡವೆಂದು ಕೂಗೆಬ್ಬಿಸಿದರು. ಆದರೆ ಆಗಿನ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್, ಅನಂತರ ಬಂದ ಹಂಸರಾಜ ಭಾರದ್ವಾಜ್ ಅಂದಿನ ಆಡಳಿತ ಬಿಜೆಪಿಯ ನಿರ್ಧಾರ ಹಾಗೂ […]

ಪಕ್ಷಾತೀತ ವಿಮರ್ಶೆ ಪರಂಪರೆ ಚಿರಾಯುವಾಗಲಿ

ಪಕ್ಷಾತೀತ ವಿಮರ್ಶೆ ಪರಂಪರೆ ಚಿರಾಯುವಾಗಲಿ

ಕರ್ನಾಟಕ - 0 Comment
Issue Date : 30.06.2014

ಜನ ಪ್ರತಿನಿಧಿಗಳು ಹೊಂದಿರುವ ಜನಪರ ಕಾಳಜಿ ತಿಳಿಯಬೇಕಾದರೆ ನಿರಂತರವಾಗಿ ನಡೆಯುತ್ತಿರುವ ವಿಧಾನ ಮಂಡಲದ ಕಲಾಪವನ್ನು ನಾವು ಗಮನಿಸಲೇಬೇಕು. ಅಲ್ಲಿ ಸರ್ಕಾರದ ವಿರುದ್ಧ ನಡೆಯುವ ಟೀಕೆ, ವ್ಯಂಗ್ಯ, ಆರೋಪ, ಇವೆಲ್ಲವೂ ಶಾಸಕರ ಜನಪರ ಕಾಳಜಿಯ ಲೇಪನವಿಲ್ಲದೇ ಹೊರಬರುವುದಿಲ್ಲ.ಆಗಾಗ ಕಾಲೆಳೆಯುವ, ರಾಜಕೀಯ ಟೀಕೆಗಳಿಗೂ ಸೀಮಿತವಾಗಿ ಕಲಾಪ ನಡೆಯುತ್ತದೆ ಎನ್ನುವ ಆರೋಪವಿದ್ದಾಗ್ಯೂ ಅನೇಕ ಉಪಯುಕ್ತ ಸಲಹೆಗಳು ಸರ್ಕಾರಕ್ಕೆ ಸಿಗುವುದೇ ಕಲಾಪದಲ್ಲಿ ಎನ್ನುವುದು ನಿಸ್ಸಂಶಯ. ಆದರೆ ಸರ್ಕಾರ ಮಾಡಿದ್ದೆಲ್ಲಾ ಒಳ್ಳೆಯದು ಎಂದು ಆಡಳಿತ ಪಕ್ಷದವರೂ, ಸರ್ಕಾರದ ತೀರ್ಮಾನದಿಂದ ಉಪಯೋಗವಾಗಿಲ್ಲ ಎಂದು ವಿರೋಧ ಪಕ್ಷದವರೂ […]