ಶಾಸಕರೇಕೆ ದೂರುತ್ತಾರೆ ?

ಶಾಸಕರೇಕೆ ದೂರುತ್ತಾರೆ ?

ಕರ್ನಾಟಕ - 0 Comment
Issue Date : 23.06.2014

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಎರಡು ವರ್ಷಗಳು ಪೂರ್ತಿಗೊಳ್ಳುವ ಮುನ್ನವೇ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಿನ್ನಮತದ ಬಿಸಿ ಎದುರಿಸಬೇಕಾದ ಸಂದರ್ಭ ಒದಗಿಬಂದಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಅಂತಹುದೇ ಪರಿಸ್ಥಿತಿ ಕೇವಲ ಒಂದೇ ವರ್ಷದಲ್ಲಿ ಬಂದಿದೆಯೇ ಎನ್ನುವ ಅನಮಾನ ಜನರಿಗೆ ಮೂಡಿದ್ದರೆ ಆಶ್ಚರ್ಯವೇನಿಲ್ಲ. ಆಗಲೂ ಯಡಿಯೂರಪ್ಪ ನಾಯಕತ್ವ ವಿರುದ್ಧ ಸಿಡಿದೆದ್ದಿದ್ದ ಒಂದು ಗುಂಪು ನಂತರ ರಾಜಿಯಾಗಿತ್ತು. ಈಗಲೂ ಅತೃಪ್ತ ಶಾಸಕರನ್ನು ಸಮಾಧಾನಪಡಿಸುವ ಕೆಲಸ ನಡೆದಿರಬಹುದು. ಆದರೆ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಮಾತ್ರ ಹೇಳುವುದು […]

ಲಂಕಾ ಪ್ರವಾಸ: ಜೆ.ಡಿ.ಎಸ್ ಪಕ್ಷ ಸಂಘಟನೆ ಪ್ರಯಾಸ!

ಲಂಕಾ ಪ್ರವಾಸ: ಜೆ.ಡಿ.ಎಸ್ ಪಕ್ಷ ಸಂಘಟನೆ ಪ್ರಯಾಸ!

ಕರ್ನಾಟಕ - 0 Comment
Issue Date : 16.06.2014

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷ ಒಂದು ರೀತಿಯ ವಿಪ್ಲವ ಎದುರಿಸುತ್ತಿದ್ದರೆ ಇಂದು ಅನೇಕ ಪ್ರಾದೇಶಿಕ ಪಕ್ಷಗಳ ಪರಿಸ್ಥಿತಿಯೂ ತೀರಾ ಆಶಾದಾಯಕವಾಗೇನೂ ಇಲ್ಲ. ಸುಮಾರು 30 ವರ್ಷಗಳ ಅಂತರದಲ್ಲಿ ಬಹುತೇಕ ರಾಜ್ಯಗಳು ಪ್ರಾದೇಶಿಕ ಪಕ್ಷಗಳ ಸಲುವಾಗಿ ಸಾಕಷ್ಟು ಬೆಲೆ ತೆತ್ತಿವೆ. ಇಂದು ಕೇಂದ್ರದಲ್ಲಿ ಒಂದೇ ರಾಷ್ಟ್ರೀಯ ಪಕ್ಷದ ಆಡಳಿತ ಜಾರಿಯಾಗಿರುವುದು ಬಹುತೇಕ ಪ್ರಾದೇಶಿಕ ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.ಒಂದೆಡೆ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಸಕಾರಾತ್ಮಕ ಬೆಳವಣಿಗೆಯನ್ನು ಸ್ವಾಗತಿಸುತ್ತಲೇ ತಮ್ಮದೇನೂ ಪಾತ್ರವಿಲ್ಲದೇ ಕೇಂದ್ರ ಸರ್ಕಾರ ರಚನೆಯಾಗಿರುವುದರಿಂದ ಉಂಟಾಗಿರುವ ಹಿನ್ನಡೆಯನ್ನೂ […]

ರಾಜ್ಯಸಭೆ, ಮೇಲ್ಮನೆಗೆ ಉದ್ಯಮಿಗಳೇ ಏಕೆ?

ರಾಜ್ಯಸಭೆ, ಮೇಲ್ಮನೆಗೆ ಉದ್ಯಮಿಗಳೇ ಏಕೆ?

ಕರ್ನಾಟಕ - 0 Comment
Issue Date : 09.06.2014

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಆಯಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ನಡೆಸಿರುವ ತೆರೆಮರೆಯ ಕಸರತ್ತು ಗಮನಿಸಿದ್ದೀರಾ? ವಿಧಾನ ಸಭೆಯಲ್ಲಿ ಪಕ್ಷಗಳ ಬಲಾಬಲದ ಪ್ರಕಾರ ಪರಿಷತ್‌ಗೆ ನಾಮಕರಣ ಮಾಡುವ ಸಂಪ್ರದಾಯ ಮೊದಲಿನಿಂದಲೂ ಇದೆ. ಇದು ಹೊಸದೇನಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಒಂದು ದುರದೃಷ್ಟಕರ ಬೆಳವಣಿಗೆಯನ್ನು ನಾವು ಗಂಭೀರವಾಗಿ ಪರಿಗಣಿಸಲೇ ಬೇಕೆನಿಸುತ್ತದೆ. ಉದ್ಯಮಿಗಳು ಜನ ಪ್ರತಿನಿಧಿಸಭೆಗಳಿಗೆ ಹಿಂಬಾಗಿಲಿನಿಂದ ಪ್ರವೇಶಿಸುವ ಚಾಳಿ ಹೆಚ್ಚಿದೆ.ಎಲ್ಲಾ ಪಕ್ಷಗಳಿಗೂ ಈ ಚಾಳಿ ಹಬ್ಬಿದೆ ಎನ್ನುವುದೇ ವಿಪರ್ಯಾಸ. ಪ್ರತೀ ಬಾರಿಯಂತೆ ತಮ್ಮ ಅಧಿಕೃತ […]

ಉತ್ತರಕೊಪ್ಪದಲ್ಲಿ 'ವನಯೋಗಿ ಭವನ' ಉದ್ಘಾಟನೆ

ಉತ್ತರಕೊಪ್ಪದಲ್ಲಿ ‘ವನಯೋಗಿ ಭವನ’ ಉದ್ಘಾಟನೆ

ಕರ್ನಾಟಕ - 0 Comment
Issue Date : 05.06.2014

ಎರಡು ದಶಕಗಳ ಹಿಂದಿನ ಘಟನಾವಳಿ. ಭಟ್ಕಳ ತಾಲೂಕಿನ ಉತ್ತರಕೊಪ್ಪ ಎಂಬ ವನವಾಸಿ ಹಳ್ಳಿ. ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸೀ ತಾಣ ಮುರ್ಡೇಶ್ವರದಿಂದ ಪೂರ್ವಕ್ಕೆ 20 ಕಿ.ಮೀ. ದೂರ. ದುರ್ಗಮ ದಾರಿ.ತಲುಪಲು ಸುವ್ಯವಸ್ಥಿತ ಮಾರ್ಗವಿಲ್ಲ. ರಸ್ತೆ ಎಂಬ ಹೆಸರಿನ ಹಾದಿಯಲ್ಲಿ ಬೇಸಿಗೆಯಲ್ಲಿ ಮಾತ್ರ ವಾಹನ ಸಂಚಾರ ಸಾಧ್ಯ. ಮಳೆಗಾಲದಲ್ಲಿ ಒಂದಷ್ಟು ದೂರ ಕಾಲ್ನಡಿಗೆ ಅನಿವಾರ್ಯ.ಮಾರ್ಗದ ಇಕ್ಕೆಲಗಳಲ್ಲಿ ಘನಘೋರ ಕಾಡು. ನಾಗರಿಕ ಸಮಾಜದಿಂದ ಸಂಪೂರ್ಣ ಪ್ರತ್ಯೇಕಗೊಂಡ ಸ್ಥಿತಿ. ಯಾರ ಗಮನಕ್ಕೂ ಬಾರದೇ ಒಳಗಿಂದೊಳಗೇ ಮತಾಂತರ ಮಾಡಲು ಹೇಳಿ ಮಾಡಿದಂಥ ಸನ್ನಿವೇಶ. […]

ಮಹಾಪ್ರಮಾದ: ಈಗ ಮಾತ್ರ ಜಾಣ ವೌನ!

ಮಹಾಪ್ರಮಾದ: ಈಗ ಮಾತ್ರ ಜಾಣ ವೌನ!

ಕರ್ನಾಟಕ - 0 Comment
Issue Date : 02.06.2014

ಇದೇ ಪ್ರಕರಣ ಬೇರೆ ಸಂದರ್ಭದಲ್ಲಾಗಿದ್ದರೆ ಅನೇಕ ವಿಚಾರವಾದಿಗಳಿಂದ ಹಿಡಿದು ತಥಾಕಥಿತ ಜಾತ್ಯತೀತವಾದಿಗಳನ್ನು ಹಠಾತ್ತನೆ ಅಪ್ಪಟ ಪ್ರಜಾತಂತ್ರವಾದಿಗಳನ್ನಾಗಿ ಮಾಡಿಬಿಡುತ್ತಿತ್ತು.ಮುಖ್ಯಮಂತ್ರಿಯಾಗಿದ್ದವರು ಇನ್ನಷ್ಟು ಪ್ರೌಢ ನಡವಳಿಕೆ ತೋರಬೇಕಿತ್ತು, ಪ್ರಧಾನಿ ಅಂದರೆ ಅವರೇನು ಒಂದು ಪಕ್ಷದವರೇನಲ್ಲ, ನೂತನ ಪ್ರಧಾನಿ ಪ್ರಮಾಣವಚನ ಸ್ವೀಕಾರ ಎಂದರೆ ಅದು ದೇಶದ ಸಂಭ್ರಮಾಚರಣೆ ಎಂದೆಲ್ಲ ವಾದಕ್ಕೆ ನಿಲ್ಲುತ್ತಿದ್ದವರೆಲ್ಲಾ ಅದೇಕೋ ವೌನಕ್ಕೆ ಜಾರಿದ್ದರು. ಏಕೆಂದರೆ ಅವರಿಗೂ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗುವುದು ಸುತರಾಂ ಇಷ್ಟವಿಲ್ಲದ ವಿದ್ಯಮಾನ. ಆದ್ದರಿಂದಲೇ ಸಿದ್ದರಾಮಯ್ಯ ಅವರು ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸದೇ […]

ಜೆಡಿಎಸ್ ಭವಿಷ್ಯ ಅಷ್ಟು ಸುಗಮವಲ್ಲ

ಜೆಡಿಎಸ್ ಭವಿಷ್ಯ ಅಷ್ಟು ಸುಗಮವಲ್ಲ

ಕರ್ನಾಟಕ - 0 Comment
Issue Date : 27.05.2014

ಈ ಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯ ನಂತರ ಇಡೀ ದೇಶದ ರಾಜಕೀಯವು ಭಾರೀ ಪ್ರಮಾಣದಲ್ಲಿ ಸುಧಾರಣೆಯತ್ತ ದಾಪುಗಾಲು ಇಡುತ್ತಿದೆಯೇನೋ ಎನ್ನುವ ಸಂದೇಹ ಅನೇಕರಿಗೆ ಮೂಡಿದೆ. 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಗಳಿಗಿಂತ ಕಳಪೆ ಸಾಧನೆ ಮಾಡಿದೆ.ಇನ್ನೊಂದೆಡೆ ಪ್ರಾದೇಶಿಕ ಪಕ್ಷಗಳು ಪ್ರತೀ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳ ಮೇಲೆ ಸವಾರಿ ಮಾಡುವ ಪ್ರವೃತ್ತಿಗೂ ಈ ಬಾರಿ ಕಡಿವಾಣ ಬಿದ್ದಿದೆ. ಒಟ್ಟಾರೆ ದೇಶದ ಚಿತ್ರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಮುಂಬರುವ ವರ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ […]

ನಮೋ ಬ್ರಿಗೇಡ್ ಸ್ವಾರ್ಥಕ್ಕಾಗಿ ಹುಟ್ಟಿರಲಿಲ್ಲ

ಕರ್ನಾಟಕ - 1 Comment
Issue Date : 22.05.2014

ಕರ್ನಾಟಕದ ಇದುವರೆಗಿನ ಚುನಾವಣೆಗಳನ್ನು ಅವಲೋಕಿಸಿದಾಗ ಈ ಬಾರಿಯ ಚುನಾವಣೆ ಹಲವು ವಿಶೇಷತೆಗಳನ್ನು ಕಂಡಿತು. ಪರಸ್ಪರ ಕೆಸರೆರಚಾಟಗಳು, ಗೊಂದಲಗಳು, ಕಾನೂನಿನ ಹಿಡಿತದಿಂದ ನುಸುಳುವ ತಂತ್ರಗಳನ್ನು ಹೆಣೆಯುವುದು, ಕೊನೆಗೆ ಕರ್ತವ್ಯ್ರಷ್ಟರಾಗಬಾರದೆಂದು ಮನಸ್ಸಿಲ್ಲದ ಮನಸ್ಸಿನಿಂದ ವೋಟು ಹಾಕುವುದು ಇವಿಷ್ಟೇ ಚುನಾವಣೆಗಳೆಂದು ಆಂದುಕೊಂಡಿದ್ದ ದೊಡ್ಡ ವರ್ಗವೊಂದು ಈ ಬಾರಿ ಕಾಣೆಯಾಗಿತ್ತು. ಅಂದರೆ ಇದುವರೆಗಿನ ಚುನಾವಣೆಗಳಿಗಿಂತ ಈ ಬಾರಿ ಮೊದಲ ಮತದಾರರು ಹೆಚ್ಚಿಗೆ ಕಂಡುಬಂದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಜನಾಂಗ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತು. ಹಲವು ವಿನೂತನ ಕಾರ್ಯಕ್ರಮಗಳು ಈ ಚುನಾವಣೆಯಲ್ಲಿ ಗಮನಸೆಳೆದವು. ಚುನಾವಣಾ ಘೋಷಣೆಗೂ […]

ರಾಜ್ಯದಲ್ಲೂ  ಮೋದಿ ಅಲೆ: ಕಾಂಗ್ರೆಸ್‍ ತರಗೆಲೆ

ರಾಜ್ಯದಲ್ಲೂ ಮೋದಿ ಅಲೆ: ಕಾಂಗ್ರೆಸ್‍ ತರಗೆಲೆ

ಕರ್ನಾಟಕ - 0 Comment
Issue Date : 19.05.2014

ಲೋಕಸಭಾ ಚುನಾವಣೆಯ ಫಲಿತಾಂಶ ಕೆರಳಿಸಿದ್ದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.ಆಡಳಿತಾರೂಢ ಯುಪಿಎ ದೇಶದಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟಿದೆ.ಮೋದಿ ಅಲೆಯ ಹೊಡೆತದಿಂದಾಗಿ ಕರ್ನಾಟಕದಲ್ಲಿ ಸರ್ಕಾರ ಇದ್ದರೂ ಕಾಂಗ್ರೆಸ್ ಪಕ್ಷ 9 ಸ್ಥಾನಗಳನ್ನು ಕಷ್ಟಪಟ್ಟು ಗೆದ್ದಿದೆ. ಉಳಿದಂತೆ ಬಿಜೆಪಿ 17 ಸ್ಥಾನಗಳನ್ನು ತನ್ನ ಒಗ್ಗಟ್ಟಿನ ಹೋರಾಟದಿಂದಲೇ ಪಡೆದುಕೊಂಡಿದೆ.ನಿರೀಕ್ಷೆಯಂತೆ ಜಾತ್ಯತೀತ ಜನತಾದಳ 2 ಸ್ಥಾನ ಗೆದ್ದು ತನಗಿರುವ ಸೀಮಿತ ಶಕ್ತಿಯನ್ನು ಪ್ರದರ್ಶಿಸಿದೆ.ರಾಜ್ಯದಲ್ಲಿ ಸರ್ಕಾರ ಇದ್ದ ಕಾರಣ ಕಾಂಗ್ರೆಸ್‌ಗೆ ಕಡೇ ಪಕ್ಷ ಇಷ್ಟಾದರೂ ಸಾಧನೆ ಸಾಧ್ಯವಾಗಿದೆ.ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಡಳಿತದಲ್ಲಿರುವ ಪಕ್ಷ ಹೊರತಾಗಿ ಬೇರೊಂದು […]

ಕನ್ನಡಕ್ಕೆ ಕಾನೂನು ಕಂಟಕ

ಕನ್ನಡಕ್ಕೆ ಕಾನೂನು ಕಂಟಕ

ಕರ್ನಾಟಕ - 0 Comment
Issue Date : 13.05.2014

ಭಾಷಾ ಮಾಧ್ಯಮ ಕುರಿತಾದ ಸುಪ್ರೀಂಕೋರ್ಟ್ ತೀರ್ಪು ಕನ್ನಡ ಸಾರಸ್ವತ ಲೋಕವನ್ನು ಅಕ್ಷರಶಃ ಆತಂಕದ ಮಡುವಿನಲ್ಲಿ ಬಿದ್ದು ಒದ್ದಾಡುವಂತೆ ಮಾಡಿದೆ.ಕನ್ನಡ ಭಾಷೆಯಲ್ಲಿ ಅದೆಷ್ಟು ಲೇಖಕರು, ಕವಿಗಳು,ಸಾಹಿತಿಗಳು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರಿದ್ದಾರೋ ಅವರೆಲ್ಲರಿಗೆ ಕನ್ನಡ ಭಾಷೆ ಇಂತಹ ಸಂಕಷ್ಟಕ್ಕೆ ಸಿಲುಕಿರುವುದನ್ನು ಊಹಿಸಿಕೊಳ್ಳಲೂ ಆಗದಷ್ಟು ಸಂಕಟವಾಗುತ್ತಿದೆ.ತಾವು ಈವರೆಗೆ ಸೃಷ್ಟಿಸಿದ ಸಾಹಿತ್ಯಗಳಿಗೆ ಇರುವ ಓದುಗರು,ಅಭಿಮಾನಿಗಳು ಮುಂದೆಯೂ ಉಳಿಯುತ್ತಾರೆಯೇ ಎನ್ನುವ ಶಂಕೆ ಮೂಡಿದ್ದರೆ ಯಾವುದೇ ಅಚ್ಚರಿ ಇಲ್ಲ.ಸುಪ್ರೀಂ ಕೋರ್ಟ್ ತೀರ್ಪು ಅಂತಿಮ ಎಂದು ನಾವೀಗ ರಾಜ್ಯ ಸರ್ಕಾರದ ಮೇಲೆ ಭಾರ ಹಾಕಿ […]

ಕಳಚಿ ಬಿತ್ತೇ ಮುಖ್ಯಮಂತ್ರಿ ಮುಖವಾಡ?

ಕಳಚಿ ಬಿತ್ತೇ ಮುಖ್ಯಮಂತ್ರಿ ಮುಖವಾಡ?

ಕರ್ನಾಟಕ - 0 Comment
Issue Date : 05.05.2014

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರಿಸಿದ್ದ ಸ್ಪಚ್ಛ ಆಡಳಿತಗಾರ ಎನ್ನುವ ಮುಖವಾಡ ಕಳಚಿ ಬಿದ್ದಿದೆಯೇ? ಇಂತಹ ಸಂದೇಹವೊಂದು ಸಿದ್ದರಾಮಯ್ಯ ಅವರನ್ನು ಬಹಳಷ್ಟು ಸಮರ್ಥಿಸಿಕೊಂಡಿದ್ದವರಿಗೂ ಮೂಡಿದ್ದರೆ ಅಚ್ಚರಿಯೇನಿಲ್ಲ. ಸರ್ಕಾರ ನಡೆಸುವುದೇ ಬೇರೆ, ವಿರೋಧ ಪಕ್ಷಗಳಲ್ಲಿದ್ದಾಗ ಮಾತಾಡುವುದೇ ಬೇರೆ ಎನ್ನುವುದು ಈಗ ಸ್ವತಃ ಮುಖ್ಯಮಂತ್ರಿಗಳಿಗೇ ಅನುಭವಕ್ಕೆ ಬಂದಿದೆ ಎನ್ನುವುದನ್ನಾದರೂ ಅವರು ಒಪ್ಪಿಕೊಳ್ಳಲೇಬೇಕು. ಸರ್ಕಾರೀ ನೌಕರರ ವರ್ಗಾವಣೆ ದಂಧೆ ಎಂತಹ ಲಾಭದಾಯಕವಾದದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ.ಅದರಲ್ಲೂ ಹಿರಿಯ ಅಧಿಕಾರಿಗಳು ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಡೆಯುವುದಕ್ಕೆ ಮುನ್ನ ಎಂತೆಂತಹ ತೆರೆಮರೆಯ ವ್ಯವಹಾರಗಳು ನಡೆಯುತ್ತವೆ […]