ಈ ಸಲದ್ದು ವಿಭಿನ್ನ ಚುನಾವಣೆ

ಈ ಸಲದ್ದು ವಿಭಿನ್ನ ಚುನಾವಣೆ

ಕರ್ನಾಟಕ - 0 Comment
Issue Date : 28.04.2014

ರಾಜ್ಯದಲ್ಲಿ ಲೋಕಸಭಾ ಚುನಾವಣೆಗಳು ಮುಗಿದ ಮೇಲೆ ಅಲ್ಲಲ್ಲಿ ಎರಡು ವಿಷಯಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಮೊದಲನೆಯದು, ಈ ಬಾರಿ ಮತದಾನಕ್ಕೆ ಜನರು ಸ್ವಲ್ಪ ಹೆಚ್ಚಿನ ಆಸಕ್ತಿ ತೋರಿದ್ದಾರೆ ಎನ್ನುವುದು. ಎರಡನೆಯದು, ಅಭ್ಯರ್ಥಿಯಾಗಿದ್ದವರ ವಿಶ್ವಾಸಾರ್ಹತೆಯ ಬಗ್ಗೆ ಜನರಿಗಿರುವ ಭಾವನೆಗಳ ಬಗ್ಗೆ. ಮೊದಲನೆಯ ಅಂಶ, ನಗರ ಪ್ರದೇಶವಾದ ಬೆಂಗಳೂರಿಗೆ ಅಷ್ಟಾಗಿ ಅನ್ವಯವಾಗುವುದಿಲ್ಲವೇನೋ.ಆದರೆ ಎರಡನೆಯ ಅಂಶದ ಬಗ್ಗೆ ಮಾತ್ರ ಈ ಬಾರಿ ಮತದಾರರು ಎಲ್ಲಾ ಕಡೆ ಬಹಳ ಗಮನಹರಿಸಿದ್ದಾರೆ ಎಂದೇ ತೋರುತ್ತಿದೆ. ಚುನಾವಣೆಗೆ ಸ್ಪರ್ಧಿಸಿರುವವರು ಯಾರು? ಅವರಿಗೂ, ರಾಜಕೀಯಕ್ಕೂ ಸಂಬಂಧ ಏನು? […]

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೊಂದು ಬಹಿರಂಗ ಪತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೊಂದು ಬಹಿರಂಗ ಪತ್ರ

ಕರ್ನಾಟಕ - 1 Comment
Issue Date : 24.04.2014

ಅತಿಹೆಚ್ಚು ಕೋಮುಗಲಭೆಗಳು ನಡೆದದ್ದು ಯಾರ ಆಳ್ವಿಕೆಯಲ್ಲಿ ಗೊತ್ತಾ? ಮಾನ್ಯ ಸಿದ್ದರಾಮಯ್ಯನವರಿಗೆ ನಮಸ್ಕಾರಗಳು. ನೀವು ಕೆಲವು ದಿನಗಳ ಹಿಂದೆ, ಭಾಜಪದ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ನರಹಂತಕ ಎಂದು ಘೋಷಿಸಿದ್ದಕ್ಕೆ ಸಂಬಂಧಿಸಿದಂತೆ ಈ ಪತ್ರ ಬರೆಯುತ್ತಿರುವೆ. ನಿಮ್ಮ ನರಹಂತಕ ಉದ್ಗಾರದ ಕುರಿತಾಗಿ ಭಾಜಪವು ಚುನಾವಣಾ ಆಯೋಗಕ್ಕೆ ದೂರು ನೀಡಿತು ಮತ್ತು ಚುನಾವಣಾ ಆಯೋಗವು ನಿಮಗೆ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ಸಿನ ಪರಂಪರೆಯಂತೆ ನೀವು ಕೂಡಾ ಚುನಾವಣಾ ಆಯೋಗ, ನ್ಯಾಯಾಲಯ ಇತ್ಯಾದಿಗಳಿಗೆಲ್ಲ ಹೆದರುವವರಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ನಿರೀಕ್ಷೆಯಂತೆಯೇ […]

ಫಲಿತಾಂಶ ಅನೇಕ ಪರಿಣಾಮಗಳಿಗೆ ನಾಂದಿಯಾಗಲಿದೆಯೇ ?

ಫಲಿತಾಂಶ ಅನೇಕ ಪರಿಣಾಮಗಳಿಗೆ ನಾಂದಿಯಾಗಲಿದೆಯೇ ?

ಕರ್ನಾಟಕ - 0 Comment
Issue Date : 21.04.2014

ಬಹಳ ದಿನಗಳಿಂದಲೂ ಕುತೂಹಲಕ್ಕೆ ಕಾರಣವಾಗಿದ್ದ ಲೋಕಸಭಾ ಚುನಾವಣೆ ಕರ್ನಾಟಕದ ಮಟ್ಟಿಗಂತೂ ಮುಗಿದಿದೆ. ಇನ್ನು ಏನಿದ್ದರೂ ಮೇ 16ರಂದು ಹೊರಬೀಳುವ ಫಲಿತಾಂಶವನ್ನು ಕುತೂಹಲದಿಂದ ಕಾಯುವುದೊಂದೇ ದಾರಿ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಹುತೇಕ ಕಡೆಗಳಲ್ಲಿ ನೇರ ಸ್ಪರ್ಧೆಯಲ್ಲಿದ್ದರೂ ಅಲ್ಲಲ್ಲಿ ಜೆಡಿಎಸ್ ಕೂಡಾ ತನ್ನ ಅಸ್ತಿತ್ವ ಸಾಬೀತು ಮಾಡಲು ಈ ಸಲದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನುವುದು ವಿಶೇಷ. ಎಲ್ಲಾ ಪಕ್ಷಗಳ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದಾರೆಂದು ಪ್ರಚಾರದ ಮೂಲಕ ತಾನು ಅದಕ್ಕೆ ಪರ್ಯಾಯ ಎಂದು ಹೇಳಿಕೊಂಡ ಆಮ್ ಆದ್ಮಿ […]

ಸ್ಥಿರ ಸರ್ಕಾರ ಮಾತ್ರ ಅಲ್ಲ ; ಸಮರ್ಥ ನಾಯಕತ್ವವೂ ಮಹತ್ವದ್ದು

ಸ್ಥಿರ ಸರ್ಕಾರ ಮಾತ್ರ ಅಲ್ಲ ; ಸಮರ್ಥ ನಾಯಕತ್ವವೂ ಮಹತ್ವದ್ದು

ಕರ್ನಾಟಕ - 0 Comment
Issue Date : 14.04.2014

ನರೇಂದ್ರ ಮೋದಿ ಪ್ರಧಾನಿ ಆಗುತ್ತಾರಾ? ಅಥವಾ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶ ಹೊಂದಿರುವ ಇತರ ಎಲ್ಲಾ ಪಕ್ಷಗಳೂ ಸೇರಿ ಮೋದಿಗೆ ಅಡ್ಡಗಾಲು ಹಾಕುತ್ತಾರಾ? ಮೋದಿ ಈ ಬಾರಿ ಪ್ರಧಾನಿಯಾಗದೇ ಇದ್ದರೆ ಏನಾಗುತ್ತದೆ? ಮೋದಿ ಪ್ರಧಾನಿಯಾದರೆ ದೇಶದ ಸ್ಥಿತಿ ಹೇಗೆ ಬದಲಾಗುತ್ತದೆ? ರಾಹುಲ್ ಗಾಂಧಿಪ್ರಧಾನಿ ಹುದ್ದೆ ಏರುವ ಸಾಧ್ಯತೆ ಎಷ್ಟು? ಕಾಂಗ್ರೆಸ್ ಈ ಬಾರಿ ಮೂರಂಕೆಯ ಸ್ಥಾನಗಳನ್ನು ಗೆಲ್ಲುವುದಿಲ್ಲವೇ? ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬಹುಮತ ಗಳಿಸದೇ ಹೋದರೆ ತೃತೀಯ ರಂಗದ ಪ್ರಹಸನವನ್ನು ಮತ್ತೊಮ್ಮೆ ದೇಶದ ಜನರು […]

ಇನ್ನೂ ಸಂಯಮವನ್ನೇ ಕಲಿತಿಲ್ಲ ಎಂದ ಮೇಲೆ ...

ಇನ್ನೂ ಸಂಯಮವನ್ನೇ ಕಲಿತಿಲ್ಲ ಎಂದ ಮೇಲೆ …

ಕರ್ನಾಟಕ - 0 Comment
Issue Date : 09.04.2014

ರಾಜಕೀಯ ಮುಖಂಡರೆಂದರೆ ಜನ ಸಾಮಾನ್ಯರಿಗೆ ಯಾವ ರೀತಿಯ ಭಾವನೆ ಇದೆ ಎನ್ನುವುದು ಅದೆಷ್ಟೋ ಬಾರಿ ಬಹಿರಂಗವಾಗಿದೆ. ತಾವು ಮಾತ್ರವೇ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತಿರುವವರು, ಇತರರೆಲ್ಲಾ ರಾಜಕೀಯದಲ್ಲಿ ವ್ಯರ್ಥವಾಗಿ ಕಾಲಹರಣ ಮಾಡುವವರೇ ಎನ್ನುವ ಮನೋಭಾವ ಬಹುತೇಕ ರಾಜಕೀಯ ಮುಖಂಡರಲ್ಲಿ ಮನೆ ಮಾಡಿಬಿಟ್ಟಿದೆ. ಇದರಿಂದಾಗಿಯೇ ಸಾರ್ವಜನಿಕರ ಕಣ್ಣಿನಲ್ಲಿ ರಾಜಕೀಯ ನೇತಾರರ ವಿಶ್ವಾಸಾರ್ಹತೆ ಪಾತಾಳ ಕಂಡಿದೆ. ಇದನ್ನು ಸುಧಾರಿಸುವ ಆಸಕ್ತಿ ಯಾವುದೇ ರಾಜಕೀಯ ಪಕ್ಷ, ಅಥವಾ ಮುಖಂಡರಿಗೆ ಇಲ್ಲ. ಆದ್ದರಿಂದ ದಿನದಿಂದ ದಿನಕ್ಕೆ ರಾಜಕಾರಣಿಗಳು ಜನರೆದುರು ನಗೆಪಾಟಲಿಗೀಡಾಗುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಂತೂ […]

ಕುಟೀರದೊಳಗೊಂದು ಶಾಲೆ

ಕುಟೀರದೊಳಗೊಂದು ಶಾಲೆ

ಕರ್ನಾಟಕ - 1 Comment
Issue Date : 03.04.2014

ಈ ಚಿತ್ರವನ್ನು ನೋಡಿದರೆ ವಿಜ್ಞಾನ ತಂತ್ರಜ್ಞಾನಗಳು ದಿನೇದಿನೇ ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿರುವ 21 ನೇ ಶತಮಾನವು ಇನ್ನೂ ಮೂಢನಂಬಿಕೆಗಳಲ್ಲೇ ಮುಳುಗಿದೆಯೋ ಎಂದೆನ್ನಿಸದಿರದು. ಇದಕ್ಕೆ ಕಾರಣವಾದುದು ಚಿತ್ರದಲ್ಲಿ ಕಾಣುತ್ತಿರುವ ಕುಟೀರ. ತೆಂಗಿನಗರಿಗಳನ್ನು ಹೆಣೆದು ಮಾಡಿರುವ ಈ ಪುಟ್ಟ ಪರ್ಣಕುಟಿಯನ್ನು ನೋಡಿದರೆ ತ್ರೇತಾಯುಗಕ್ಕೋ ಅಥವಾ ದ್ವಾಪರಯುಗಕ್ಕೋ ಹೋಗಿಬಿಡುತ್ತದೆ ಮನಸ್ಸು. ವ್ಯಾಸ, ವಾಲ್ಮೀಕಿ, ವಿಶ್ವಾಮಿತ್ರ, ವಸಿಷ್ಠ ಮುಂತಾದ ಋಷಿಮುನಿಗಳು ಅರಣ್ಯದಲ್ಲಿ ತಪಸ್ಸನ್ನಾಚರಿಸಿ ತಮ್ಮ ಶಕ್ತಿ ಕ್ಷೇತ್ರವನ್ನಾಗಿ ಮಾಡಿಕೊಂಡ ಅದೆಷ್ಟೋ ಕಥೆಗಳು ಕ್ಷಣಕಾಲ ನಮ್ಮ ಸ್ಮೃತಿಪಟಲದಿಂದ ಮಿಂಚಿ ಮರೆಯಾಗುತ್ತವೆ. ಹಾಗಿದೆ ನಮ್ಮ ಭಾರತೀಯ ಸಂಸ್ಕೃತಿ. […]

ಸುಧಾರಣೆಗಾಗಿ ಬದಲಾವಣೆ ಬೇಕಲ್ಲವೇ?

ಸುಧಾರಣೆಗಾಗಿ ಬದಲಾವಣೆ ಬೇಕಲ್ಲವೇ?

ಕರ್ನಾಟಕ - 0 Comment
Issue Date : 01.04.2014

ಚುನಾವಣೆಯ ಬಿಸಿ ಏರುತ್ತಿರುವಂತೆ ಬಿಸಿಲಿನ ಝಳವೂ ಹೆಚ್ಚುತ್ತಿದೆ. ಜೊತೆಗೆ ಅಭ್ಯರ್ಥಿಗಳಿಗೆ ತಲೆಬಿಸಿಯೂ ಹೆಚ್ಚಿದೆ. ಯಾವುದೇ ಅಭ್ಯರ್ಥಿಯೂ ಸೋಲುವ ಸಲುವಾಗಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ ಎನ್ನುವ ವಾಸ್ತವದ ನಡುವೆಯೂ 500ಕ್ಕೂ ಹೆಚ್ಚು ಮಂದಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಇವರಲ್ಲಿ ಕೆಲವರು ನಾಮಪತ್ರ ಹಿಂದಕ್ಕೆ ಪಡೆದಿರಬಹುದು.ಆದರೂ ರಾಜಕೀಯ ಪ್ರವೇಶಕ್ಕೆ ಇರುವ ಉತ್ಸಾಹ ಮತ್ತು ರಾಜಕೀಯದಲ್ಲಿ ಕಂಡುಬರುತ್ತಿರುವ ಆಸಕ್ತಿಯನ್ನು ಗಮನಿಸಿದರೆ ಮತದಾರರು ಹೊಂದಿರುವ ಸಿನಿಕತನಕ್ಕೆ ಇಂತಹ ಉತ್ಸಾಹವೇ ಮದ್ದೇನೋ ಎಂದು ಭಾವಿಸುವಂತಾಗುತ್ತದೆ. ರಾಜ್ಯದಿಂದ ಕೇವಲ 28 ಮಂದಿ ಸಂಸದರಾಗಿ ಆಯ್ಕೆಯಾಗಬೇಕು ಎನ್ನುವುದು […]

ಕಾಲ ಎಂದರೆ ಕೇವಲ ಕಾಲವಲ್ಲ

ಕಾಲ ಎಂದರೆ ಕೇವಲ ಕಾಲವಲ್ಲ

ಕರ್ನಾಟಕ ; ಲೇಖನಗಳು - 0 Comment
Issue Date : 28.03.2014

ವೇದ ಎಂದರೆ ವಿಜ್ಞಾನ. ಅದು ‘ಜ್ಞಾನಂ ವಿಜ್ಞಾನ ಸಹಿತಂ’. ಹಾಗೆಂದು ‘ಪುರಾಣಮಿತ್ಯೇವ ನ ಸಾಧು ಸರ್ವಂ’ ಎಂಬ ಕಾಳಿದಾಸನ ಮಾತು ಇಲ್ಲಿ ಅಸಂಗತವೇನಲ್ಲ. ಆದ್ದರಿಂದಲೇ ಕವಿ – ಋಷಿ (ನಾ ನೃಷಿಃ ಕುರುತೇ ಕಾವ್ಯಂ – ಋಷಿಯಲ್ಲದವ ಕಾವ್ಯ ರಚಿಸಲು ಸಾಧ್ಯವಿಲ್ಲ!) ಡಿವಿಜಿಯವರು ‘ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ’ ಎಂದಿದ್ದಾರೆ. ಹಳತನ್ನು ಹೊಸಬರಿಗೆ ಅರ್ಥವಾಗುವಂತೆ ಹೇಳಬೇಕಷ್ಟೇ! ನಮ್ಮ ಹಿರಿಯರು ತಮ್ಮ ಯಾವುದೇ ಕ್ರಿಯೆ – ಆಚರಣೆ – ಪದ್ಧತಿ ಪರಂಪರೆಗಳಿಗೂ ತಕ್ಕ ಆಧಾರವನ್ನು […]

"ಕಾಲನಿ ಅಲ್ಲ, 'ಹಿಂದು' ಪದ ಸರಿಯಲ್ಲ"

“ಕಾಲನಿ ಅಲ್ಲ, ‘ಹಿಂದು’ ಪದ ಸರಿಯಲ್ಲ”

ಕರ್ನಾಟಕ ; ಚಂದ್ರಶೇಖರ ಭಂಡಾರಿ - 0 Comment
Issue Date : 25.03.2014

ಈ  ಶೀರ್ಷಿಕೆ ಕಂಡು ಇದೊಂದು ಸೆಕ್ಯುಲರ್ ಗಾದೆಯೋ ಒಗಟೋ ಇರಬೇಕೆಂದು ಅನಿಸಿರಬಹುದಲ್ಲವೇ? ಎರಡೂ ಅಲ್ಲ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಹೆಡಗೇವಾರರು (ಡಾಕ್ಟರ್‌ಜೀ) ಹೇಳಿದ ಮಾತು. ಪ್ರಸಂಗ ಹೀಗಿದೆ: ಸಂಘದ ಶಾಖೆ ಆರಂಭಿಸಲು ಅವರು ಮಹಾರಾಷ್ಟ್ರದಲ್ಲಿನ ನಾಸಿಕಕ್ಕೆ ಬಂದಿದ್ದ ಸಂದರ್ಭ. ಆಗ ಅವರು ಉಳಿದುಕೊಂಡಿದ್ದುದು ಶ್ರೀ ರಾಜಾಭಾಊ ಸಾಠೇ ಎಂಬೋರ್ವ ವಕೀಲರ ಮನೆಯಲ್ಲಿ. ಅವರೊಮ್ಮೆ ಅಲ್ಲಿನ ರಸ್ತೆಯಲ್ಲಿ ಓಡಾಡುತ್ತಿದ್ದಾಗ ಒಂದು ಕಡೆ ಅವರಿಗೆ ‘ಹಿಂದು ಕಾಲನಿ’ ಎಂಬ ಬೋರ್ಡ್ ಕಾಣಿಸಿತು. ಖಾಲಿಯಾಗಿದ್ದ ಜಾಗದಲ್ಲಿ ನಿವೇಶನಗಳನ್ನು […]

ಜೀವನದ ಆದರ್ಶ

ಕರ್ನಾಟಕ ; ಲೇಖನಗಳು - 0 Comment
Issue Date : 20.03.2014

ನಮ್ಮ ಸುತ್ತಲಿನ ಸಮಾಜದ ಜೀವನವನ್ನು ನಾವು ಸರ್ವೇ ಸಾಧಾರಣವಾಗಿ ನೋಡುತ್ತಿದ್ದೇವೆ. ಕೆಲವರು ಧನ ಸಂಪಾದನೆ ಮಾಡುತ್ತಾರೆ, ಕೆಲವರು ಹೆಸರು, ಕೀರ್ತಿ ಸಂಪದಿಸುತ್ತಾರೆ, ಇನ್ನೂ ಕೆಲವರು ಯಾವುದಾದರೊಂದು ಸಂಸ್ಥೆಯಲ್ಲಿ ಹಿರಿತನವನ್ನು ದೊರಕಿಸಿಕೊಳ‍್ಳುತ್ತಾರೆ, ಮತ್ತೂ ಕೆಲವರು ಯಾವುದಾದರೂ ಉದಮ್ಯದಲ್ಲಿ ಕೀರ್ತಿ ಗಳಿಸುತ್ತಾರೆ – ಈ ರೀತಿಯಲ್ಲಿ ಪ್ರತಿಯೊಬ್ಬರೂ ಸಹ ತಮಗೆ ಪ್ರತಿಷ್ಠೆ ಹಾಗೂ ಗೌರವ ಬರುವಂತಹ ಕಾರ್ಯವನ್ನು ಅಂಗೀಕರಿಸುತ್ತಾರೆ. ಕೆಲವರು ಫ್ಯಾಷನ್ ಮಾಡಲು, ಕೆಲವರು ದುಡ್ಡು ಮಾಡಲು, ಕೆಲವರು ಕೀರ್ತಿ ಗಳಿಸಲು ಹೀಗೆ ಬೇರೆ ಬೇರೆ ಬಗೆಯ ಆಲೋಚನೆಯಿಂದ ಸಾರ್ವಜನಿಕ […]