ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ

ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ

ಕರ್ನಾಟಕ - 0 Comment
Issue Date : 14.02.2014

ಮುಂದಿನ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಟೈಮ್ಸ್ ನೌ  ಸಿ –ವೋಟರ್ ಸಂಸ್ಥೆಯು ಚುನಾವಣೆ ಪೂರ್ವ ಸಮೀಕ್ಷೆ ನಡೆಸುವ ಮೂಲಕ ದೇಶದ ಸದ್ಯದ ರಾಜಕೀಯ ಚಿತ್ರಣ ತೆರೆದಿಟ್ಟಿದೆ. ಈಗೀನ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆ ನಡೆದರೆ ಯುಪಿಎ ತೀವ್ರ ಹಿನ್ನಡೆ ಕಾಣುವುದರೊಂದಿಗೆ  ಬಿಜೆಪಿ ಹಾಗೂ ಎನ್‍ಡಿಎ ಮೈತ್ರಿಕೂಟಕ್ಕೆ  ಭಾರಿ ಮುನ್ನಡೆ ದೊರಯಲಿದೆ ಎಂದು ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.  ಬಿಹಾರ್, ಗುಜರಾತ್, ದೆಹಲಿ, ಹರ್ಯಾಣ, ಛತ್ತೀಸ್‍ಗಡ್, ಜಾರ್ಖಂಡ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಒಟ್ಟು […]

ಜನರು ದೇವರ ಮೇಲೆ ಭಾರ ಹಾಕಲಿ ಎಂಬ ನಿರೀಕ್ಷೆ!

ಜನರು ದೇವರ ಮೇಲೆ ಭಾರ ಹಾಕಲಿ ಎಂಬ ನಿರೀಕ್ಷೆ!

ಕರ್ನಾಟಕ - 0 Comment
Issue Date : 10.02.2014

ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನತೆಯ ಆಶೀರ್ವಾದ ದೊರೆತು ಒಂಭತ್ತು ತಿಂಗಳಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸುಧಾರಣೆ ತಂದು ರಾಜ್ಯದ ಜನತೆಗೆ ಭದ್ರತೆಯ ಭಾವನೆ ಬಿತ್ತಲು ಇಷ್ಟು ಕಾಲ ಸಾಕಲ್ಲವೇ? ಆದರೆ ವಿಪರ್ಯಾಸ ನೋಡಿ! ಮುಖ್ಯಮಂತ್ರಿಗಳಿಗೆ ಇನ್ನೂ ಪೊಲೀಸ್ ಠಾಣೆಗಳಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದರೆ ರಾಜ್ಯದ ಜನರು ದೇವರ ಮೇಲೆ ಭಾರ ಹಾಕಿ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು ಅವರು ಬಯಸುತ್ತಿದ್ದಾರೇನು? ಮುಖ್ಯಮಂತ್ರಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುವುದು ಸಂಪ್ರದಾಯ. ಅಲ್ಲಿ […]

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ

ಕರ್ನಾಟಕ - 0 Comment
Issue Date : 07.02.2014

ಕರ್ನಾಟಕ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಫೆ. ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಂ.ಎ ಪೊನ್ನಪ್ಪ ತಿಳಿದರು. 2012 […]

ಪ್ರಜಾರಾಜ್ಯದಲ್ಲಿ ಪ್ರಜಾಪ್ರತಿನಿಧಿಗಳು ಮಾತ್ರ ಪ್ರಧಾನಿಗಳಾಗಬೇಕು

ಪ್ರಜಾರಾಜ್ಯದಲ್ಲಿ ಪ್ರಜಾಪ್ರತಿನಿಧಿಗಳು ಮಾತ್ರ ಪ್ರಧಾನಿಗಳಾಗಬೇಕು

ಕರ್ನಾಟಕ - 0 Comment
Issue Date : 05.02.2014

ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಸಂವಿಧಾನಕ್ಕನುಗುಣವಾಗಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳ ಪ್ರಜಾರಾಜ್ಯ ಆಡಳಿತ ನಮ್ಮ ದೇಶದಲ್ಲಿ 1952ರಿಂದ ಅಸ್ತಿತ್ವದಲ್ಲಿದೆ. ಭಾರತದ ಲೋಕಸಭೆಗೆ ಚುನಾಯಿತರಾದವರು ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳಾಗಿ, ಮಂತ್ರಿಗಳಾಗಿ ಈ ದೇಶದ ಆಡಳಿತ ಹಾಗೂ ಅಭಿವೃದ್ಧಿಯನ್ನು ಸಾಧಿಸಬೇಕಾಗುತ್ತದೆ. ಆಡಳಿತ ಹಾಗೂ ಅಭಿವೃದ್ಧಿಗಾಗಿ ವೆಚ್ಚ ಮಾಡಬೇಕಾದ ಹಣವನ್ನು ಹಾಘೂ ಈ ವೆಚ್ಚಕ್ಕೆ ಬರಬೇಕಾದ ಹಣವನ್ನು ಪಡೆಯಲು ಪ್ರತಿವರ್ಷ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಬಜೆಟ್ ಮಂಡಿಸಿ ಈ ಬಜೆಟ್ ಲೋಕಸಭೆಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಚರ್ಚೆಯಾಗಿ ಲೋಕಸಭೆಯ ಅಂಗೀಕಾರ ಪಡೆದು […]

ಇನ್ಪೋಸಿಸ್ ನಾರಾಯಣಮೂರ್ತಿ-ಸುಧಾಮೂರ್ತಿಗೆ ‘ಬಸವಶ್ರೀ ಪ್ರಶಸ್ತಿ’

ಇನ್ಪೋಸಿಸ್ ನಾರಾಯಣಮೂರ್ತಿ-ಸುಧಾಮೂರ್ತಿಗೆ ‘ಬಸವಶ್ರೀ ಪ್ರಶಸ್ತಿ’

ಕರ್ನಾಟಕ - 0 Comment
Issue Date : 03.02.2014

ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವೇ ರಾಜ್ಯದತ್ತ ತಿರುಗಿ ನೋಡುವಂತೆ ಸಾಧನೆ ಮಾಡಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರಿಗೆ ಶ್ರೀ ಮುರುಘಾಮಠದಿಂದ ನೀಡುವ 2013ನೇ ಸಾಲಿನ ‘ಬಸವಶ್ರೀ ಪ್ರಶಸ್ತಿ’ಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು. ಸುಧಾಮೂರ್ತಿಯವರು ಕೊಟ್ಟ ನೆರವು ಬಳಸಿಕೊಂಡು ನಾರಾಯಣಮೂರ್ತಿಯವರು ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ವಿಶ್ವ ನಾಡಿನತ್ತ ತಿರುಗುವಂತೆ ಮಾಡಿದ್ದಾರೆ.  ಇಂತಹ ಸಾಧಕರಿಗೆ ಬಸವಶ್ರೀ ಪ್ರಶಸ್ತಿ ನೀಡುತ್ತಿರುವುದು ಸ್ತುತ್ಯಾರ್ಹ.  ಹಿಂದೆ ಬಸವಣ್ಣನವರು ಇಂತಹ ಸಾಧಕರಿಗೆ ಕಾಯಕ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು.  ಈಗ ಶ್ರೀ ಮುರುಘಾ ಶರಣರು ಇಂತಹ […]

ಓಟಿಗಾಗಿ ಏನೆಲ್ಲ ತಂತ್ರಗಾರಿಕೆ!

ಓಟಿಗಾಗಿ ಏನೆಲ್ಲ ತಂತ್ರಗಾರಿಕೆ!

ಕರ್ನಾಟಕ - 0 Comment
Issue Date : 03.02.2014

ನಮಗೆ ಗೊತ್ತಿದೆ, ರಾಜಕೀಯ ಪಕ್ಷಗಳು ಚುನಾವಣೆ ಬಂತೆಂದರೆ ಏನೆಲ್ಲಾ ನಾಟಕ ಆರಂಭಿಸುತ್ತವೆ ಎನ್ನುವುದು.ರಾಜ್ಯದಲ್ಲಿರುವ ಮಠಗಳನ್ನು ನಿಯಂತ್ರಿಸುವ ಕಾಯಿದೆಯೊಂದನ್ನು ತರಲು ಹೊರಟಿದ್ದ ಕಾಂಗ್ರೆಸ್ ಸರ್ಕಾರ ಈಗ ಹಿಂದಡಿ ಇಟ್ಟಿದೆ. ಅದೇ ರೀತಿ ಅಡುಗೆ ಅನಿಲ ಸಬ್ಸಿಡಿಗೆ ಆಧಾರ್ ಗುರ್ತಿನ ಚೀಟಿ ಕಡ್ಡಾಯ ಎಂದು ಇದುವರೆಗೂ ಹೇಳುತ್ತಿದ್ದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದೀಗ ರಾಗ ಬದಲಿಸಿದೆ. ರಾಜಕೀಯ ಪಕ್ಷಗಳ ವಿಚಾರದಲ್ಲೂ ಅದೆಷ್ಟು ರಾಜಿ ಮಾಡಿಕೊಳ್ಳುವುದು ಶುರುವಾಗಿದೆ ನೋಡಿ,ಎಲ್ಲವೂ ಚುನಾವಣೆಯ ಮಹಿಮೆ! ಹಿಂದೂ ಧಾರ್ಮಿಕ ದತ್ತಿ ಕಾಯಿದೆಗೆ ತಿದ್ದುಪಡಿ ತಂದು […]

ಏಕತೆಯೇ ಭಾರತದ ಬೃಹತ್ ಶಕ್ತಿ

ಏಕತೆಯೇ ಭಾರತದ ಬೃಹತ್ ಶಕ್ತಿ

ಕರ್ನಾಟಕ - 0 Comment
Issue Date : 01.02.2014

ಪರಿವರ್ತನೆಗಾಗಿ ಯುವ ಜನತೆ ಎಂಬ ಘೋಷ ವಾಕ್ಯದೊಂದಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 33 ನೇ ರಾಜ್ಯ ಸಮ್ಮೇಳನಕ್ಕೆ ಹುಬ್ಬಳ್ಳಿಯ ಬಿವಿಬಿ ಇಂಜೀನಿಯರಿಂಗ್ ಕಾಲೇಜಿನಲ್ಲಿಂದು ಚಾಲನೆ ನೀಡಲಾಯಿತು. ಸುಂದರ ಹಿನ್ನೆಲೆಯ ವಿನ್ಯಾಸದಲ್ಲಿ ಸಜ್ಜುಗೊಂಡಿದ್ದ ದಿ.ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ , ಪೂಜ್ಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮೀನಾ ಚಂದಾವರಕರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಮೀನಾ ಚಂದಾವರಕರ್, ಮಾನವ ಸಂಪನ್ಮೂಲದಲ್ಲಿ ಎರಡನೇಯ ಸ್ಥಾನದಲ್ಲಿರುವ ಭಾರತ […]

ರಾಜಕೀಯ ಸಮೀಕರಣಕ್ಕೆ ಹೊಸ ವ್ಯಾಖ್ಯಾನ

ರಾಜಕೀಯ ಸಮೀಕರಣಕ್ಕೆ ಹೊಸ ವ್ಯಾಖ್ಯಾನ

ಕರ್ನಾಟಕ ; ರಾಜ್ಯ ರಾಜಕೀಯ - 0 Comment
Issue Date : 28.01.2014

ರಾಜ್ಯದಲ್ಲಿನ ಹೊಸ ರಾಜಕೀಯ ಬೆಳವಣಿಗೆ, ಮುಂಬರುವ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ನೇರವಾಗಿ ಪರಿಣಾಮ ಬೀರುವ ಸ್ಪಷ್ಟ ಸೂಚನೆಗಳು ಈಗ ಸಿಗುತ್ತಿವೆ. ಬಿಜೆಪಿಯಿಂದ ಹೊರಹೋಗಿ ತಮ್ಮದೇ ಪಕ್ಷ ಕಟ್ಟಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಈಗ ವಾಪಸ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಇದರಿಂದ ಪಕ್ಷಕ್ಕೆ ಹಾಗೂ ಸ್ವತಃ ಯಡಿಯೂರಪ್ಪ ಅವರಿಗೂ ಹೆಚ್ಚಿನ ಲಾಭವಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯುವುದು ನಿಶ್ಚಿತ. ಸಮರಾಂಗಣದಲ್ಲಿ ಹೇಗೆ […]

ಅಬಕಾರಿ ಇಲಾಖೆ ಎಂದರೆ ಚಿನ್ನದ ಮೊಟ್ಟೆ ಇಡೋ ಕೋಳಿನಾ?

ಅಬಕಾರಿ ಇಲಾಖೆ ಎಂದರೆ ಚಿನ್ನದ ಮೊಟ್ಟೆ ಇಡೋ ಕೋಳಿನಾ?

ಕರ್ನಾಟಕ - 0 Comment
Issue Date : 20.01.2014

ಆರ್ಥಿಕ ನಿರ್ವಹಣೆಯ ಸವಾಲನ್ನು ಎದುರಿಸುತ್ತಿರುವ ಯಾವುದೇ ಸರ್ಕಾರವೂ ಜನಪ್ರಿಯ ಯೋಜನೆಗಳಿಗೆ ಮಾಡುವ ವೆಚ್ಚ ತಗ್ಗಿಸುವ ಕುರಿತಾಗಿ ಯಾವತ್ತಾದರೂ ಯೋಚಿಸಿದ್ದಿದೆಯೇ? ಖಂಡಿತಾ ಇಲ್ಲ. ಏಕೆಂದರೆ ಸರ್ಕಾರಕ್ಕೆ ಅಬಕಾರಿ ಇಲಾಖೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಹೆಚ್ಚು ಭರವಸೆ ಇದೆ. ಯಾವುದೇ ಅಗ್ಗದ ಜನಪ್ರಿಯತೆಗೆ ಸರ್ಕಾರ ಮಾಡುವ ವೆಚ್ಚವನ್ನು ಸರಿದೂಗಿಸುವ ಶಕ್ತಿ ಇರೋದು ಕೇವಲ ಅಬಕಾರಿ ಇಲಾಖೆಗೆ ಮಾತ್ರ. ಆದ್ದರಿಂದಲೇ ಆಗಾಗ ಮದ್ಯಪಾನ ನಿಷೇಧದ ವಿಷಯ ಚರ್ಚೆಯಾಗುತ್ತದೆಯೇ ವಿನಾ ಅದು ಕಾರ್ಯರೂಪಕ್ಕೆ ಬರುವುದಿಲ್ಲ.     ಸಾರಾಯಿ ನಿಷೇಧ […]

ಮತ್ತೊಂದು ಕೊಡಗು ಸೃಷ್ಟಿ ನಮಗೆ ಸಾಧ್ಯವಿದೆಯೇ?

ಮತ್ತೊಂದು ಕೊಡಗು ಸೃಷ್ಟಿ ನಮಗೆ ಸಾಧ್ಯವಿದೆಯೇ?

ಕರ್ನಾಟಕ - 0 Comment
Issue Date : 13.01.2014

ಚಿಂತಕನೊಬ್ಬ ಮುಂದಿನ ಜನಾಂಗದ ಬಗ್ಗೆ ಚಿಂತಿಸುತ್ತಾನೆ. ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಚಿಂತಿಸುತ್ತಾನೆ ಎಂಬ ಮಾತಿದೆ. ಪಶ್ಚಿಮ ಘಟ್ಟ ಸಂರಕ್ಷಣೆಯ ವಿಷಯದಲ್ಲಿ ರಾಜಕಾರಣಿಗಳು ಮತ್ತು ಚಿಂತಕರ ನಡುವೆ ಈಗ ನಡೆಯುತ್ತಿರುವ ಸಂಘರ್ಷವನ್ನೇ ಇದಕ್ಕೆ ಉದಾಹರಿಸಬಹುದು.] ಮಡಿಕೇರಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜಾ ಅವರು ತಮ್ಮ ಭಾಷಣದಲ್ಲಿ ಕಸ್ತೂರಿ ರಂಗನ್‌ ವರದಿಯ ಬಗ್ಗೆ ಪ್ರಸ್ತಾಪಿಸಿದ್ದು ಕೊಡಗಿನ ಜನಪ್ರತಿನಿಧಿಗಳ ಸಿಟ್ಟಿಗೆ ಕಾರಣವಾಗಿಹೋಗಿದೆ. ಕಸ್ತೂರಿ ರಂಗನ್‌ ವರದಿ ಕೊಡಗಿನ ಜನರ ಪಾಲಿಗೆ ಮರಣ ಶಾಸನ ಎಂದು ಕೆಲವು ಶಾಸಕರು ಡಿಸೋಜಾ ಅವರು ಕ್ಷಮೆ ಕೋರಬೇಕು […]