ಅದ್ದೂರಿಯ ಹಂಪಿ ಉತ್ಸವಕ್ಕೆ ತೆರೆ

ಅದ್ದೂರಿಯ ಹಂಪಿ ಉತ್ಸವಕ್ಕೆ ತೆರೆ

ಕರ್ನಾಟಕ - 0 Comment
Issue Date : 13.01.2014

ವಿಶ್ವವಿಖ್ಯಾತ ಹಂಪಿ ಉತ್ಸವ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ,ಬುಧವಾರ (ಜ.12) ಅಧಿಕೃತವಾಗಿ ತೆರೆ ಎಳೆಯಲಾಯಿತು. ಕೊನೆಯ ದಿನ ಸೇರಿದ್ದ ಸಹಸ್ರಾರು ಸಂಖ್ಯೆ ಪ್ರೇಕ್ಷಕರ ಸಮ್ಮುಖದಲ್ಲಿ ಕೇಂದ್ರ ರೈಲ್ವೆ ಸಚಿವ ಮಲ್ಲಕಾರ್ಜುನ ಖರ್ಗೆ ಉತ್ಸವದ ಸಮಾರೋಪ ಸಂಪನ್ನಗೊಳಿಸಿದರು. ಅಧಿಕ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಉತ್ಸವಕ್ಕೆ ಭೇಟಿ ನೀಡಿರುವುದು ವಿಶೇಷವಾಗಿತ್ತು. ಈ ಭಾಗದ ಜನರ ಬೇಡಿಕೆಯಂತೆ ಬೆಂಗಳೂರು ಮತ್ತು ಬಳ್ಳಾರಿ ನಡುವೆ ಇಂಟರ್ ಸಿಟಿ ರೈಲು ಸಂಚಾರ ಆರಂಭಿಸಲಾಗುವುದು.  ಕೊಟ್ಟೂರು-ಹರಿಹರ ರೈಲು ಓಡಾಟವನ್ನು ಮಾರ್ಚ್ ನಲ್ಲಿ ಆರಂಭಿಸಲಾಗುವುದು ಎಂದು ಮಲ್ಲಿಕಾರ್ಜುನ […]

ಅಬ್ಬಾ! ಎಂಟೇ ತಿಂಗಳಲ್ಲಿ ಅದೆಷ್ಟು ಬದಲಾವಣೆ!!

ಕರ್ನಾಟಕ - 0 Comment
Issue Date : 09.01.2014

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭದಲ್ಲಿ ತಾನು ಹೈಕಮಾಂಡ್ ಸಂಸ್ಕೃತಿಯ ವಿರುದ್ಧ ನಿಂತು ಹೊಸದಾದ ರಾಜಕೀಯ ನವಪಲ್ಲವಿಗೆ ನಾಂದಿ ಹಾಡುತ್ತಾರೆ ಎನ್ನುವ ಭ್ರಮೆ ಸೃಷ್ಟಿಸಿದ್ದು ನಿಜವೇ. ಆದರೆ ಅವರೇನು ಬರೀ ತಮಾಷೆ ಮಾಡಿದರಾ ಎನ್ನುವ ಅನುಮಾನ ಅವರ ಅನುಯಾಯಿಗಳಿಗೇ ಮೂಡುತ್ತಿದೆ. ಹೈಕಮಾಂಡ್ ವಿರುದ್ಧ ಸೆಡ್ಡು ಹೊಡೆದ ಮರು ಗಳಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನ ತನ್ನ ಕೈಬಿಟ್ಟು ಹೋಗುತ್ತದೆ ಎನ್ನುವುದು ಈಗ ಅವರಿಗೆ ಸ್ಪಷ್ಟವಾಗಿ ಅರ್ಥವಾಗಿದೆ. ಇದರ ಪರಿಣಾಮವೇ ಇದೀಗ ಹೊಸದಾಗಿ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು. ಅಕ್ರಮ ಗಣಿಗಾರಿಕೆ ವಿರೋಧಿಸಿ ವಿಪಕ್ಷ […]

ಕೊಡಗು ಸಮ್ಮೇಳನಕ್ಕೆ ತೆರೆ

ಕೊಡಗು ಸಮ್ಮೇಳನಕ್ಕೆ ತೆರೆ

ಕರ್ನಾಟಕ - 0 Comment
Issue Date : 10.01.2014

ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರು ದಿನವು ಕೊನೆಗೆ ಖಂಡನಾ ನಿರ್ಣಯ ಕೈಗೊಳ್ಳುವುದರೊಂದಿಗೆ ಸಂಪನ್ನವಾಯಿತು.  ಇದರೊಂದಿಗೆ ಕನ್ನಡ ನಾಡು ನುಡಿ, ಸ್ವಾಭಿಮಾನ,ಅಖಂಡತೆಗೆ ಧಕ್ಕೆ ತಂದಿರುವ ವಿಷಯಗಳ ಕುರಿತು 6 ನಿರ್ಣಯ ಕೈಗೊಳ್ಳಲಾಯಿತು. ಗುಡ್ಡ-ಬೆಟ್ಟಗಳು, ಕಡಿದಾದ ದಾರಿಗಳು, ಸೀಮಿತ ಸೌಲಭ್ಯಗಳ  ಕೊಡಗಿನಲ್ಲಿ ಅಖಿಲಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಹೇಗೆ ಆಗಬಹುದು ಎಂಬ ಆತಂಕ ಆರಂಭದಲ್ಲಿ ಕನ್ನಡಿಗರಲ್ಲಿ ಹುಟ್ಟಿದ್ದು […]

ಸಾಹಿತ್ಯ ಜಾತ್ರೆಯೊಂದಿಗೆ ಪ್ರವಾಸದ ಅನುಭವ|ಇಂದು ಸಂಪನ್ನಗೊಳ್ಳಲಿದೆ ಕನ್ನಡಾಂಬೆಯ ಜಾತ್ರೆ

ಕರ್ನಾಟಕ - 0 Comment
Issue Date : 09.01.2014

ಕವಿಗಳು ಬಣ್ಣಿಸಿರುವ ಪ್ರಕೃತಿಯ ರಮಣೀಯ ತಾಣ ಕೊಡಗಿನ ಮಡಿಕೇರಿಯಲ್ಲಿ ಸಾಹಿತ್ಯ ಸಂಭ್ರಮದ ಜಾತ್ರೆ ಎರಡನೇ ದಿನವನ್ನು ಪೂರೈಸಿದೆ. ಜನವರಿ 8ರಂದು ಸಾಹಿತ್ಯಜಾತ್ರೆ ನಡೆಯುತ್ತಿರುವ ಮಡಿಕೇರಿಯಲ್ಲಿ ಚಳಿ ತುಸು ಜೋರಾಗಿಯೇ ಇದ್ದರೂ ಜಾತ್ರೆಗೆ ಬರುವವರ ಸಂಖ್ಯೆ ಕಡಿಮೆ ಇರಲಿಲ್ಲ.  ಸಮ್ಮೇಳನಕ್ಕೆ ಬಂದ ಬಹುತೇಕ ಮಂದಿ ಮಡಿಕೇರಿಯ ಪ್ರಮುಖ ಆಕರ್ಷಣೀಯ ಕೇಂದ್ರಗಳಾಗಿರುವ ರಾಜಾಸೀಟ್, ಅಬ್ಬಿಫಾಲ್ಸ, ರಾಜರ ಗದ್ದುಗೆ ಮುಂತಾದೆಡೆ ತೆರಳುತ್ತಿದ್ದಾರೆ.  ನಗರದ ಎಲ್ಲಾ ಹೋಮ್‍ಸ್ಟೇಗಳು, ವಸತಿಗೃಹಗಳು ಈಗಾಗಲೇ ಭರ್ತಿಯಾಗಿವೆ.  ಕೊಡಗಿನ ಆತಿಥ್ಯ ಸ್ವಿಕರಿಸುತ್ತಿರುವ ಮಂದಿ ಸಂಭ್ರಮದಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.   ಅಭಿವೃದ್ಧಿ […]

ವೀರಸೈನಿಕರ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ

ವೀರಸೈನಿಕರ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ

ಕರ್ನಾಟಕ - 0 Comment
Issue Date : 08.01.2014

ಜ.7 ರಂದು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜ ಅವರು ನಾಡಿನ ಆರುಕೋಟಿ ಜನರ ಅಂತರಾಳದ ಬಯಕೆ, ತವಕ ತಲ್ಲಣಗಳನ್ನು ತಮ್ಮ ಭಾಷಣದಲ್ಲಿ ತೆರೆದಿಟ್ಟರು. ನಾಡು ಒಡೆಯುವ ಶಕ್ತಿಗಳ ವಿರುದ್ಧ ಗುಡುಗಿದರು.  ಕನ್ನಡನಾಡನ್ನು ಒಡೆಯುವ, ಶಾಂತ ಕರುನಾಡಿನಲ್ಲಿ ಅಶಾಂತಿ ಹುಟ್ಟಿಸುವಂತಹ ಕೃತ್ಯಗಳು ಎಂದಿಗೂ ಆಗಬಾರದು.  ಕನ್ನಡನಾಡಿನಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇರುವಂತಾಗಲಿ…. ಎಂದು ಕನ್ಡಡದ ಮನಗಳಿಗೆ ಕಿವಮಾತು ನುಡಿದರು.   ಕರ್ನಾಟಕದ ಜೀವನದಿ ಕಾವೇರಿಯ ತವರು ನೆಲ, ಕನ್ನಡ ನಾಡು-ನುಡಿಗೆ, ರಾಷ್ಟ್ರ ರಕ್ಷಣೆಗೆ […]

ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಟ್ಟ ಮುಖ್ಯಮಂತ್ರಿ

ಕರ್ನಾಟಕ - 0 Comment
Issue Date : 06.12.2013

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ಹೈಕಮಾಂಡ್ ಒತ್ತಡಕ್ಕೆ ಮಣಿದು, ಇದುವರೆಗೆ ತಾನು ಪ್ರತಿಪಾದಿಸಿದ್ದೆಲ್ಲವೂ ಬರಿದೇ ಸುಳ್ಳು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಳಂಕಿತರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಹೊಸದರಲ್ಲಿ ಹೇಳಿದ್ದೇ ಹೇಳಿದ್ದು. ಆದರೆ ಈಗ ಕಳಂಕದ ಆರೋಪ ಹೊತ್ತಿರುವ ಹಿರಿಯ ಶಾಸಕರಾದ ಡಿ.ಕೆ.ಶಿವಕುಮಾರ್ ಹಾಗೂ ರೋಶನ್‌ಬೇಗ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದ್ದೇಕೆ? ಈ ಪ್ರಶ್ನೆಯನ್ನು ಸಹಜವಾಗಿಯೇ ಯಾರು ಬೇಕಾದರೂ ಅವರಿಗೆ ಕೇಳಬಹುದು.ಶಿವಕುಮಾರ್ ಹಾಗೂ ರೋಶನ್‌ಬೇಗ್ ಇಬ್ಬರೂ ಕಾಂಗ್ರೆಸ್‌ನಲ್ಲಿ ಪ್ರಭಾವೀ ನಾಯಕರು. ಅವರಿಗೆ ಹೈಕಮಾಂಡ್‌ನ ನಾಯಕರೊಂದಿಗೆ […]

ಹಿರಿಯರ ಹಾದಿಯ ಹೆಜ್ಜೆಗುರುತುಗಳು

ಹಿರಿಯರ ಹಾದಿಯ ಹೆಜ್ಜೆಗುರುತುಗಳು

ಕರ್ನಾಟಕ - 1 Comment
Issue Date : 30.12.2013

ಕಾರ್ಯ ಪ್ರವೃತ್ತನಾಗುವುದು ಮಾನವನ ಸಹಜ ಸ್ವಭಾವ. ವ್ಯಕ್ತಿಯೊಬ್ಬ ಎಂತಹ ಕಾರ್ಯವನ್ನು ಮಾಡುತ್ತಾನೆ, ಎಂತಹ ಕಾರ್ಯಕ್ಷೇತ್ರವನ್ನು ಆಯ್ದುಕೊಳ್ಳುತ್ತಾನೆ, ಆ ಕ್ಷೇತ್ರದಲ್ಲಿ ಎಷ್ಟು ಸಾಫಲ್ಯ ಪಡೆಯುತ್ತಾನೆ, ಎಂಬುದರ ಮೇಲೆ ವ್ಯಕ್ತಿಯ ಶಕ್ತಿ ಅಳೆಯಲ್ಪಡುತ್ತದೆ. ಸಾಧಕರಾದ ವ್ಯಕ್ತಿಗಳು ತಮ್ಮ ಸಾಮರ್ಥ್ಯವನ್ನು ತಮ್ಮ ಮಾರ್ಗಮಧ್ಯದಲ್ಲಿ ಆಗಾಗ ಅಳೆದುಕೊಳ್ಳಬೇಕಾಗುತ್ತದೆ. ಸಂಘದಲ್ಲಿ ರಾಷ್ಟ್ರಶಿಕ್ಷೆ, ರಾಷ್ಟ್ರದೀಕ್ಷೆ ಪಡೆದ ನಾವು ನಮ್ಮ ಆಸಕ್ತಿ ಅಭಿರುಚಿಗೆ ತಕ್ಕಂತೆ ಒಂದು ವಿಶಿಷ್ಟ ಕಾರ್ಯಕ್ಷೇತ್ರವನ್ನು ಆಯ್ದುಕೊಂಡು ಕಾರ್ಯಪ್ರವೃತ್ತರಾಗುತ್ತೇವೆ. ನಾವು ಪಡೆದ ದೀಕ್ಷೆ ನಮ್ಮನ್ನು ಪ್ರಾಚೀನ ಜ್ಞಾನವಿಜ್ಞಾನದ ಹೆಗ್ಗಳಿಕೆಗೆ ಪಕ್ಕಾಗುವಂತೆ ಮಾಡುವುದು ಸಹಜ. ನಾವು […]

ಕ್ಯಾಂಪ್ಕೋ ಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಇನ್ನಿಲ್ಲ

ಕ್ಯಾಂಪ್ಕೋ ಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಇನ್ನಿಲ್ಲ

ಕರ್ನಾಟಕ - 0 Comment
Issue Date : 28.11.2013

ಹಿರಿಯ ಸಹಕಾರಿ ಧುರೀಣರಾಗಿ ಸಾರ್ವಜನಿಕ ಹಾಗೂ ಶೈಕ್ಷಣಿಕವಾಗಿ ತೊಡಗಿಸಿಕೊಂಡು ಅಂತರ ರಾಜ್ಯಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ಹುಟ್ಟುಹಾಕಿ ಸ್ಥಾಪಕ ಅಧ್ಯಕ್ಷರಾಗಿ ಅದನ್ನು ಕಟ್ಟಿ ಬೆಳೆಸಿದ ಹಿರಿಯ ಚೇತನ ವಾರಣಾಶಿ ಸುಬ್ರಾಯ ಭಟ್ ಡಿ. 27 ರಂದು ಬೆಳಿಗ್ಗೆ ದ.ಕ. ಜಿಲ್ಲೆಯ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೇರಳದ ಗಡಿ, ಆಡ್ಯನಡ್ಕ ಎಂಬ […]

 ಕಸಾಪ: ಮುಂದೇನು ಮಾಡಬೇಕು?

ಕಸಾಪ: ಮುಂದೇನು ಮಾಡಬೇಕು?

ಕರ್ನಾಟಕ - 0 Comment
Issue Date : 25.12.2013

ಕನ್ನಡ ಸಾಹಿತ್ಯ ವಲಯ ರಾಜ್ಯ ಸರ್ಕಾರದ ವಿರುದ್ಧ ವ್ಯಕ್ತಪಡಿಸುತ್ತಿರುವ ಆಕ್ರೋಶ ಇತ್ತೀಚೆಗೆ ಸಾಕಷ್ಟು ಚರ್ಚೆಗೊಳಗಾಗಿದೆ. ಈಚೆಗೆ ನಡೆದ ಸಾಹಿತ್ಯಿಕ ಸಮಾರಂಭಗಳಿಗೆ ಸರ್ಕಾರದ ಕೆಲವು ಗಣ್ಯರು ಗೈರುಹಾಜರಾಗಿದ್ದು ಈ ಆಕ್ರೋಶ ಮತ್ತಷ್ಟು ಹೆಚ್ಚಲು ಕಾರಣ. ಸಾಹಿತ್ಯಕ್ಕೂ ರಾಜಕಾರಣಿಗಳಿಗೂ ಯಾವುದೇ ರೀತಿಯ ಸಂಬಂಧವೂ ಇಲ್ಲ. ಸರ್ಕಾರ ನಡೆಯುವುದು ರಾಜಕಾರಣಿಗಳ ನಿಯಂತ್ರಣದಲ್ಲಿ ಎನ್ನುವ ಒಂದೇ ಕಾರಣಕ್ಕೆ ಸರ್ಕಾರಗಳನ್ನು ಓಲೈಸುವುದು ಕನ್ನಡ ಸಾರಸ್ವತ ಲೋಕಕ್ಕೆ ಅನಿವಾರ್ಯವೇ ಆಗಿದೆ. ಇದು ನಿಜಕ್ಕೂ ದುರದೃಷ್ಟ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಇದೀಗ ಶತಮಾನದ […]

ಒಡೆಯರ್ ಸಾವು : ಸಾಂಸ್ಕೃತಿಕ ತಲ್ಲಣ, ರಾಜಭಕ್ತಿಯ ಉಲ್ಬಣ

ಒಡೆಯರ್ ಸಾವು : ಸಾಂಸ್ಕೃತಿಕ ತಲ್ಲಣ, ರಾಜಭಕ್ತಿಯ ಉಲ್ಬಣ

ಕರ್ನಾಟಕ - 0 Comment
Issue Date : 16.12.2013

1399 ರಿಂದ ಮೈಸೂರು ರಾಜಮನೆತನ ಅಥವಾ ಯದುವಂಶ ಅಥವಾ ಒಡೆಯರ ರಾಜ ಸಂತಾನ ಉತ್ತರದಿಂದ ಬಂದ ಯದುರಾಯರಿಂದ ಪ್ರಾರಂಭವಾಗಿದೆ. ಕನ್ನಡನಾಡಿನ ಈ ರಾಜಮನೆತನ ಕೊನೆಯದು. ಇಂದಿಗೆ 614 ವರ್ಷಗಳಾಗಿವೆ. ಉತ್ತರ -ದಕ್ಷಿಣದ ಮಧುರ ಬಾಂಧವ್ಯವೂ ಆಗಿತ್ತು. ಯದುರಾಯರಿಂದ ಜಯಚಾಮರಾಜೇಂದ್ರ ಒಡೆಯರ್‌ವರೆಗೆ ಒಟ್ಟು 25 ಮಂದಿ ಮೈಸೂರು ರಾಜ್ಯ ವನ್ನು ಅಂದರೆ ಇಂದಿನ ಕರ್ನಾಟಕವನ್ನು ಆಳಿದರು. ಈ ಪೈಕಿ ರಾಜತ್ವದ ಕೊನೆಯ ರಾಜ ಜಯಚಾಮರಾಜೇಂದ್ರರ ಮಗನೇ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್. ಇವರು ಡಿಸೆಂಬರ್ 10, 2013ರಂದು ಬೆಂಗಳೂರಿನ ವಿಕ್ರಂ […]