ಕೋಲಾರದಲ್ಲಿ ಪಥ ಸಂಚಲನ

ಕೋಲಾರ - 0 Comment
Issue Date : 13.10.2014

ಕೋಲಾರ: ವಿಜಯದಶಮಿ ಪ್ರಯುಕ್ತ ಕೋಲಾರ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿ ಸ್ವಯಂಸೇವಕರು ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. 140 ಮಂದಿ ಸ್ವಯಂಸೇವಕರು ಪಥ ಸಂಚಲನ ದಲ್ಲಿ ಪಾಲ್ಗೊಂಡಿದ್ದು, ಸಾರ್ವಜನಿಕರು ಮನೆಗಳ ಮುಂದೆ ರಂಗೋಲಿ ಬರೆದು, ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ತುಮಕೂರು ವಿಭಾಗ ಸಂಪರ್ಕ ಪ್ರಮುಖ್ ಪ್ರಕಾಶ್‌ರಾಜ್ ವಿಜಯದಶಮಿ ಉತ್ಸವದ ಮಹತ್ವ ಹಾಗೂ ಸಂಘ ನಡೆದು ಬಂದ ದಾರಿ ಇತ್ಯಾದಿ ಕುರಿತು ಮಾತನಾಡಿದರು.