ಕೃಷಿ ಅಭಿವೃದ್ಧಿಗೆ ತಾತ್ಸಾರ ಸರಿಯಲ್ಲ

ಕೃಷಿ ಅಭಿವೃದ್ಧಿಗೆ ತಾತ್ಸಾರ ಸರಿಯಲ್ಲ

ಕೃಷಿ - 0 Comment
Issue Date : 30.12.2013

ರಾಜ್ಯದ ಕೃಷಿಕ ಶ್ರಮಜೀವಿ. ದಣಿವರಿಯದ ದುಡಿಮೆಗಾರ. ವರ್ಷದಲ್ಲಿ 365ದಿನ ವಿರಾಮವಿಲ್ಲದೆ ದುಡಿಯುವ ಧೀಮಂತ. ಬಿಸಿಲು, ಮಳೆ, ಛಳಿಯೆನ್ನದೆ ಕೃಷಿಕಾರ್ಯ ನಿರ್ವಹಿಸಬೇಕು. ದುಡಿಮೆಯಲ್ಲಿ ಲಾಭವಿಲ್ಲದೆ ಪ್ರತಿ ವರ್ಷ ಸಾಲ ಮಾಡಲೇಬೇಕು. ಸಹಕಾರಿ ಸಾಲ ಸಾಕಷ್ಟು ಸಿಗದೆ ಹಾಗೂ ಎಷ್ಟೂ ಸಿಗದೆ ಸಾಹುಕಾರಿ ಸಾಲಕ್ಕೆ ಹೆಚ್ಚಿನ ಬಡ್ಡಿಕೊಟ್ಟು ಮೊರೆ ಹೋಗಲೇಬೇಕು. ಕೃಷಿಕನ ಸೇವೆ ಅಗತ್ಯ ಹಾಗೂ ಅನನ್ಯ. ರಾಜ್ಯದ 6.11ಕೋಟಿ ಜನತೆಗೆ ಆಹಾರಧಾನ್ಯ, ಎಣ್ಣೆ ಕಾಳು, ಧಾನ್ಯ, ಸಕ್ಕರೆ, ಹಾಲು ಇತ್ಯಾದಿ ಏನೆಲ್ಲ ಪೂರೈಸಲೇಬೇಕು. ಬಟ್ಟೆಬರೆಗಾಗಿ ಹತ್ತಿ ಬೆಳೆಯಲೇಬೇಕು. ಸಕ್ಕರೆಗಾಗಿ […]

ನೈಸರ್ಗಿಕ ಕೃಷಿ

ನೈಸರ್ಗಿಕ ಕೃಷಿ

ಕೃಷಿ - 2 Comments
Issue Date : 03.12.2013

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಖಡಕಲಾಟ ಗ್ರಾಮದಲ್ಲಿ ಭೂಮಿಗೆ ರಸಗೊಬ್ಬರ ಹಾಕದೆ, ಸ್ವಲ್ಪವೂ ಕೀಟನಾಶಕ ಸಿಂಪಡಿಸದೆ  ಗೃಹೋಪಯೋಗಕ್ಕೆ ಬೇಕಾದ ಸತ್ವಯುತ ತರಕಾರಿ, ಆಹಾರಧಾನ್ಯಗಳನ್ನು ಸಮೃದ್ಧವಾಗಿ ಬೆಳೆಯುತ್ತಿರುವ ದಿವಾಕರ ಹರಿದಾಸರ ಸಾಧನೆ ಕೃಷಿಯನ್ನು ಅವಲಂಬಿಸಿರುವವರಿಗೆ ಮಾದರಿಯಾಗಿದೆ.  ಸುಮಾರು 30 ವರ್ಷಗಳಿಂದ  ಶೂನ್ಯ ಬಂಡವಾಳದಿಂದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು ಅಲ್ಪ ನೀರಿನಲ್ಲಿ ಬಂಪರ್ ಬೆಳೆ ಬೆಳೆಯುತ್ತಿದ್ದಾರೆ. ನೈಸರ್ಗಿಕ ಕೃಷಿ ಪುಸ್ತಕಗಳನ್ನು ಓದಿ ಮೂರು ಎಕರೆ ಭೂಮಿಯಲ್ಲಿ ಸುಮಾರು 50 ಜಾತಿಯ ವಿವಿಧ ಗಿಡಮರಗಳಾದ ಸೋಯಾ, ಅವರೆ, ಬಿಳಿಜೋಳ, ಈರುಳ್ಳಿ, ಬೆಳ್ಳುಳ್ಳಿ, […]

ತೆಂಗು – ಏಕೆ ಬೇಕು ಪರ್ಯಾಯ?

ಕೃಷಿ - 0 Comment
Issue Date : 15.11.2013

ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬೆಳೆಯು ಒಣಗುವಿಕೆ ಮತ್ತು ರೋಗ ಬಾಧೆಯಿಂದಾಗಿ ಉತ್ಪಾದನೆಯ ಪ್ರಮಾಣ ಕಡಿಮೆ ಆಗುತ್ತಿದೆ ಮತ್ತು ಉತ್ಪಾದನಾವೆಚ್ಚ ಹೆಚ್ಚಾಗುತ್ತಿರುವುದರಿಂದ ತೆಂಗಿನ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಬರದಿಂದಾಗಿ 2013-2014ರ ಸಾಲಿನಲ್ಲಿ 743 ಕೋಟಿ ನಷ್ಟವಾಗಿದೆ. ಆದ್ದರಿಂದ ಪರ್ಯಾಯ ಬೆಳೆಗಳತ್ತ ರಾಜ್ಯ ಸರ್ಕಾರ ತನ್ನ ಒಲವು ತೋರಿಸಿದೆ. ಪರ್ಯಾಯ ಬೆಳೆಗಳಾಗಿ ಮಾವು, ಹಲಸು, ದಾಳಿಂಬೆ, ಹುಣಸೆ, ಪೇರಳೆ, ಗೇರುಬೀಜ, ಮಾವು, ಕೋಕೋ ಇತ್ಯಾದಿ ಬೆಳೆಗಳನ್ನು ಬೆಳೆಯಬೇಕು. ಮಳೆಯ ಕೊರತೆ ಎದುರಿಸುತ್ತಿರುವ ಪ್ರದೇಶದಲ್ಲಿ ನೀರಾವರಿ ಸೌಲಭ್ಯವಿಲ್ಲದೇ ಇದ್ದರೇ […]

ಕೃಷಿ ಮೇಳ 2013

ಕೃಷಿ ಮೇಳ 2013

ಕೃಷಿ - 0 Comment
Issue Date : 09.11.2013

ರೈತರಿಗೆ ಬೇಕಾದ ಎಲ್ಲಾ ಮಾಹಿತಿ, ಸೌಲಭ್ಯಗಳು ಒಂದೇ ಸೂರಿನಡಿ ಸಿಗುವ ತಾಣವೇ ‘ಕೃಷಿ ಮೇಳ’.  ಕೃಷಿ ವಿಶ್ವವಿದ್ಯಾಲಯಕ್ಕೆ 50 ವರ್ಷಗಳು ತುಂಬಿದ ಸಂದರ್ಭದ ಹಿನ್ನೆಲೆಯಲ್ಲಿ  ನವೆಂಬರ್ 7ರಿಂದ 11 ರವರೆಗೆ ನಡೆಯಲಿರುವ ಕೃಷಿ ಮೇಳಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರವು (ಜಿಕೆವಿಕೆ) ಸಜ್ಜಾಗಿದೆ. ಮೇಳದ ವಿಶೇಷತೆ ಮೇಳದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ್ದಾಗಿದ್ದು, ದೇಶ ವಿದೇಶಗಳ ವಿವಿಧ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಯಂತ್ರೋಪಕರಣಗಳ ಪ್ರದರ್ಶನ ಸುಮಾರು 800 ಮಳಿಗೆಗಳ ಬೃಹತ್ ವಸ್ತು ಪ್ರದರ್ಶನ ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಬೆಳೆಗಳ […]