ಟಿಪ್ಪು ಹೆಸರಿಡುವ ಮುನ್ನ ಆಲೂರರನ್ನು ಅರಿಯೋಣ

ಟಿಪ್ಪು ಹೆಸರಿಡುವ ಮುನ್ನ ಆಲೂರರನ್ನು ಅರಿಯೋಣ

ಲೇಖಕರು - 0 Comment
Issue Date :

-ಪು. ರವಿವರ್ಮ ಕುಲಪುರೋಹಿತರನ್ನು ನೆನೆಯದಿದ್ದೊಡೆ ಕನ್ನಡ ನಾಡು ಉಳಿಯುವುದೆಂತು…? ಸುಮಾರು 12 ವರ್ಷಗಳ ಕೆಳಗೆ ರಾಜ್ಯಮಟ್ಟದ ಸ್ಪರ್ಧೆಯ ಅಂತಿಮ ಸುತ್ತಿನ ಕಡೇ ಪ್ರಶ್ನೆಗೆ ಉತ್ತರಿಸಲಾಗದೆ ಆ ಸ್ಪರ್ದೆಯಲ್ಲಿ ಸೋತಿದ್ದೆ. ಕ್ವಿಜ್ ಮಾಸ್ಟರ್ ಕೇಳಿದ ಆ ಪ್ರಶ್ನೆಯನ್ನು ನಾನಿಂದು ಮರೆತಿಲ್ಲ. ‘ಕನ್ನಡ ಪುರೋಹಿತ ಎಂದು ಯಾರನ್ನು ಕರೆಯುತ್ತೇವೆ?’ ಎಂಬ ಆ ಪ್ರಶ್ನೆಗೆ ಇತರೆ ಯಾವ ತಂಡಗಳು ಉತ್ತರಿಸಲಿಲ್ಲ. ಅಲ್ಲಿದ್ದ ಸಭಿಕರಲ್ಲು ಯಾರಿಗೂ ಈ ಪ್ರಶ್ನೆಯ ಉತ್ತರ ತಿಳಿದಿರಲಿಲ್ಲ. ಕಡೆಗೆ ಕ್ವಿಜ್ ಮಾಸ್ಟರ್ ‘ಕರ್ನಾಟಕ ಏಕೀಕರಣದ ರೂವಾರಿ ಇವರು’ ಎಂಬ […]

ಹಿಂದು ಜೀವನದ ಒಂದು ಒಗಟು

ಲೇಖನಗಳು ; ಹೊ.ವೆ.ಶೇಷಾದ್ರಿ - 0 Comment
Issue Date : 30.05.2015

ವ್ಯಕ್ತಿ ವಂದ್ಯ ಸಮಾಜ ವರ್ಜ್ಯ – ಹೀಗೇಕೆ? ಹಿಂದುವಿನ ಜೀವನ ಇದು ಒಂದು ವಿಚಿತ್ರ ಒಗಟಾಗಿದೆ. ಲೋಕವಂದ್ಯ – ವ್ಯಕ್ತಿಗತವಾಗಿ ಅವನ ವೇದಾಂತಕ್ಕೆ ಲೋಕದಾದ್ಯಂತ ಪೂಜ್ಯತೆ ಇದೆ. ಯೋಗ, ಪ್ರಾಣಾಯಾಮ, ಆಸನಗಳಲ್ಲಿ ಲೋಕಕ್ಕೆಲ್ಲ ಅವನೇ ಗುರು. ಭಗವದ್ಗೀತೆ-ಉಪನಿಷತ್ತುಗಳ ತವರಿನ ಮಗನೆಂದು ಅವನಿಗೆ ಅಸಾಮಾನ್ಯ ಗೌರವ. ವಿಜ್ಞಾನದ ಹೊಡೆತಕ್ಕೆ ಮಿಕ್ಕ ಮತ, ದರ್ಶನಗಳು ತತ್ತರಿಸಿ ಬಿದ್ದರೂ, ಅವನ ಧರ್ಮ, ದರ್ಶನಗಳು ಮಾತ್ರ ಅಚಲವಾಗಿ ನಿಂತಿವೆಯಲ್ಲ ಎಂದು ಲೋಕದ ಚಿಂತಕರೆಲ್ಲ ಅವನತ್ತ ಕಣ್ಣರಳಸಿ ನೋಡುತ್ತಾರೆ. ಸಿರಿ-ಸಮೃದ್ಧಿಗಳಲ್ಲಿ, ಭೋ-ವಿಲಾಸಗಳಲ್ಲಿ ಹೊರಳಾಡುವಂತಹರಿಗೂ ಇಂದು […]

ಯುವಜನಕ್ಕೆ ಮಾರ್ಗದರ್ಶನ

ಎಸ್.ಗುರುಮೂರ್ತಿ ; ಲೇಖನಗಳು - 0 Comment
Issue Date : 05.05.2015

ಯುವಜನಕ್ಕೆ ಮಾರ್ಗದರ್ಶನ – ಆಧುನಿಕತೆಯ ಸೋಲು ಕೇವಲ ಶಿಸ್ತು ಪಾಲಿಸಬೇಕೆಂದು ಸೂಚಿಸಿದ್ದಕ್ಕಾಗಿ ತಮಿಳುನಾಡಿನ ತೂತುಕುಡಿಯ ಒಂದು ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ತಮ್ಮ ಪ್ರಿನ್ಸಿಪಾಲರನ್ನು ಕಡಿದು ಕೊಲೆಗೈದರೆನ್ನುವ ಸುದ್ದಿ ದೇಶವನ್ನು ಆಘಾತಕ್ಕೀಡು ಮಾಡಿದೆ. ದಶಕಗಳ ಹಿಂದೆ ಭಾರತ ಹೆಚ್ಚು ಸಂಪ್ರದಾಯನಿಷ್ಠ ಮತ್ತು ಕಡಿಮೆ ಆಧುನಿಕವಾಗಿದ್ದಾಗ ಇಂತಹ ವರ್ತನೆಯನ್ನು ಊಹಿಸುವುದಕ್ಕೂ ಸಾಧ್ಯವಿರಲಿಲ್ಲ. ಪುರುಷರು ಮತ್ತು ಮಹಿಳೆಯರನ್ನು ಸಂಪ್ರದಾಯದಿಂದ ತಮ್ಮ ವಶಕ್ಕೆ ತೆಗೆದುಕೊಂಡು ಅವರನ್ನು ನಾಗರಿಕರನ್ನಾಗಿ ಪರಿವರ್ತಿಸುವುದಾಗಿ ಆಧುನಿಕತೆ ಉದ್ಧಟತನದಿಂದ ಹೇಳಿಕೊಂಡಿದೆ. ಆದರೆ ಮೇಲೆ ಹೇಳಿದಂತಹ ಭೀಕರವಾದ ವ್ಯತ್ಯಸ್ತ […]

ರಾಷ್ಟ್ರಧರ್ಮ ಪ್ರತಿಷ್ಠಾಪನೆಗಾಗಿ

ಹೊ.ವೆ.ಶೇಷಾದ್ರಿ - 1 Comment
Issue Date : 29.10.2014

‘ನರನ ರೂಪದಲ್ಲಿ ನ ನಾರಾಯಣನನ್ನು ಪೂಜಿಸು’ ಎಂದರು ಶ್ರೀ ರಾಮಕೃಷ್ಣ ಪರಮಹಂಸರು. ತಮ್ಮ ಗುರುವಿನ ಅದೇ ಸೂತ್ರವನ್ನು ವಿಸ್ತರಿಸುತ್ತಾ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಘೋಷಿಸಿದರು. ‘ದೇವರನ್ನು ಕಾಣಲು ಎಲ್ಲೆಲ್ಲೋ ಅಲೆಯುವಿರೇಕೆ? ನಿಮ್ಮ ಕಣ್ಣೆದುರಲ್ಲೇ ಓಡಾಡುವ ಕೋಟಿ ಕೋಟಿ ಸಜೀವ ದೇವರುಗಳನ್ನು ಗುರುತಿಸಿ. ನಮ್ಮೀ ಸಾಮಾನ್ಯ ಜನ ಕೋಟಿಯ ಕೊಟ್ಟ ಕೊನೆಯ ಅಲ್ಪನೂ ಸಹ ನಿಮ್ಮ ಆರಾಧ್ಯ ದೇವನಾಗಲಿ… ಬರಲಿರುವ ಹಲವು ದಶಕಗಳವರೆಗೆ ನಿಮ್ಮ ಮಿಕ್ಕೆಲ್ಲ ದೇವ-ದೇವತೆಗಳನ್ನು ಕೊಠಡಿಯಲ್ಲಿ ಭದ್ರವಾಗಿ ಬೀಗ ಹಾಕಿಡಿ. ಇನ್ನು ನಮ್ಮೆಲ್ಲರಿಗೆ ಭಾರತ […]

ನಮ್ಮ ನಿಮ್ಮ ನಡುವೆ

ಹೊ.ವೆ.ಶೇಷಾದ್ರಿ - 0 Comment
Issue Date : 08.08.2014

ಪ್ರ : ಭಾರತ ಸರಕಾರ ಸಾಲ್ಮನ್ ರಷ್ದೀಯ ‘ಸೆಟನಿಕ್ ವರ್ಸಸ್‍’ ಗ್ರಂಥಕ್ಕೆ ಪ್ರತಿಬಂಧ ಹೇರಲು ಕಾರಣವೇನು? -ಶ್ರೀ ಕೆ. ಎಂ. ಕುಲಕರ್ಣಿ, ಆಳಂದ ಉ: ತಾನು  ಪ್ರತಿಬಂಧ ಹೇರಲು ಕಾರಣ ಏನೆಂದು ಸರಕಾರ ಈಗಾಗಲೇ ಡಂಗೂರ ಸಾರಿ ಹೇಳಿಕೊಂಡಿದೆ. ಆದರೆ ‘ಮುಸ್ಲಿಮರ ಮತೀಯ  ಭಾವನೆಗಳನ್ನು ನೋಯಿಸಬಾರದೆ’ಂಬ ಅವರ ಘೋಷಿತ  ಕಾರಣಕ್ಕೂ, ನಿಜವಾದ ಕಾರಣಕ್ಕೂ ಅಜಗಜಾಂತರ ಇದೆ. ಯಾವುದೇ ಸಣ್ಣ ಕುಂಟು ನೆಪ ಸಿಕ್ಕರೂ ಸಾಕೆಂದು  (ಉದಾ: ಮಹಮ್ಮದ್ ದಿ ಈಡಿಯಟ್ – ಕತೆ) ಕಾಲು ಕೆರೆದು ಕಾದುಕೊಂಡಿರುವ […]

ಚಿಂತನಕ್ಷಣ – 19

ಹೊ.ವೆ.ಶೇಷಾದ್ರಿ - 0 Comment
Issue Date : 02.08.2014

ನಮ್ಮ ನಿಮ್ಮ ನಡುವೆ ಪ್ರ : ಗುರುಕಾಣಿಕೆಯನ್ನು ಅರ್ಪಿಸಲು ಅವಿಶ್ವಾಸ ವ್ಯಕ್ತಪಡಿಸುವವರಿಗೆ ಏನೆಂದು ಉತ್ತರಿಸಬೇಕು? -ಶ್ರೀ ಶಂಕರನಾರಾಯಣ, ಯಲ್ಲಾಪುರ ಉ : ಮೊಟ್ಟಮೊದಲಾಗಿ ಆ ‘ಗುರು’ ವಿಶ್ವಾಸ‍ಕ್ಕೆ ಯೋಗ್ಯ, ಎಂದು ಅವರಿಗೆ ಮನಗಾಣಿಸಬೇಕು.  ತಮ್ಮ  ಕಾಣಿಕೆ ಹಿರಿದಾದ ಕಾರ್ಯಕ್ಕೆ ವಿನಿಯೋಗ ಆಗಲಿದೆ, ಎನ್ನುವ ನಂಬಿಕೆ ಮೂಡಿದಾಗ ಅರ್ಪಿಸುವುದೇ ನಿಜವಾದ ಕಾಣಿಕೆ. ‘ಪಡೆ’ಯುವುದರಲ್ಲಲ್ಲ ‘ನೀಡು’ವುದರಲ್ಲಿದೆ ಬದುಕಿನ ಸಾರ್ಥಕ್ಯದ  ಗುಟ್ಟು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾದುದು ಎರಡನೆಯದು. ಇವೆರಡಕ್ಕಿಂತ ಮುಖ್ಯವಾದ ಸಂಗತಿಯೊಂದಿದೆ : ಆ ರೀತಿ ಇತರರಿಗೆ ತಿಳಿಸಿಕೊಡುವಂತಹರು ಆ […]

ಚಿಂತನಕ್ಷಣ – 18

ಹೊ.ವೆ.ಶೇಷಾದ್ರಿ - 0 Comment
Issue Date : 30.07.2014

ಶ್ರೀರಾಮಜನ್ಮಭೂಮಿ : ಇತ್ಯರ್ಥ ಹೇಗೆ? ಪ್ರ : ರಾಮಜನ್ಮಭೂಮಿಯ ವಿಷಯವನ್ನು  ಒಂದು ವಿವಾದವಾಗಿ ಕೆರಳಿಸಿರುವುದು ‘ಇಸ್ಲಾಮೀ ರಾಜಕಾರಣ’ ಎಂಬುದಕ್ಕೆ ಪುರಾವೆಗಳೇನಿವೆ? ಉ: ರಾಮಜನ್ಮಭೂಮಿಗೆ ‘ಬಾಬರೀ ಮಸೀದಿ’ ಎನ್ನುವ ಹೆಸರಲ್ಲಿ ರಚಿಸಿರುವ ಕ್ರಿಯಾ ಸಮಿತಿಯ ಮುಖ್ಯ ಸೂತ್ರಧಾರ ಶ್ರೀ ಶಹಾಬುದ್ದೀನ್ – ಪಕ್ಕಾ ರಾಜಕಾರಣಿ. ಆ ಪ್ರಶ್ನೆಯನ್ನು ತನ್ನ ಚುನಾವಣಾ ಪ್ರಚಾರದ ಬಂಡವಾಳವಾಗಿ ಮಾಡಿಕೊಂಡು ಮುಸಲ್ಮಾನರ ಮತೀಯ ಭಾವನೆಗಳನ್ನು ಬಡಿದೆಬ್ಬಿಸಿ ಲೋಕಸಭೆಗೆ ಗೆದ್ದು ಬಂದ ಜನತಾ ಪಕ್ಷದ ಹಿರಿಯ ಮುಂದಾಳು. ಮುಸ್ಲಿಂ ಮೌಲವಿಗಳನ್ನೆಲ್ಲ ಹಿಂದಕ್ಕೆ ಹಾಕಿ ತಾನೇ ಆ […]

ಚಿಂತನಕ್ಷಣ – 17

ಹೊ.ವೆ.ಶೇಷಾದ್ರಿ - 0 Comment
Issue Date : 26.07.2014

‘ತಮಸ್’ ಬಗ್ಗೆ ಮುಂಬೈ ಉಚ್ಚ ನ್ಯಾಯಾಲದಯದ ತೀರ್ಪು ಸರಿಯೇ? 1. ‘ತಮಸ್’ ಇತಿಹಾಸದ ಪುಟ ಎಂಬುದು ತೀರ್ಪಿನ ಮುಖ್ಯ ಗ್ರಹಿಕೆ. ಈ ಗ್ರಹಿಕೆ ಸರ್ವಥಾ ತಪ್ಪು. ‘ತಮಸ್’ ಒಂದು ಕಾದಂಬರಿ ಅಷ್ಟೆ. ಈ ಕಾದಂಬರಿ ಸಹ ಇತಿಹಾಸದಲ್ಲಿ ದಾಖಲೆಯಾದ ಯಾವ ಘಟನೆಯ ಮೇಲೆಯೂ ಆಧಾರಿತವಾಗಿಲ್ಲ. ಅದೊಂದು ಕಥಾಕಾರದ ಕಲ್ಪನಾಲೋಕದ ಭ್ರಾಮಕ ಸೃಷ್ಟಿ. ಕಾಲ್ಪನಿಕ ಕಥೆಯನ್ನೇ ಇತಿಹಾಸ ಎಂದು ತಪ್ಪರ್ಥಮಾಡಿಕೊಂಡಿರುವುದು ಈ ತೀರ್ಪಿನ ಮೂಲಭೂತ ದೋಷ. 2. “ತಮಸ್” ಆ ದುರಂತಮಯ ಕಾಲಖಂಡದ ಒಂದು ಒಳನೋಟ” ಎಂಬುದು ತೀರ್ಪಿನ […]

ಚಿಂತನಕ್ಷಣ – 16

ಹೊ.ವೆ.ಶೇಷಾದ್ರಿ - 0 Comment
Issue Date : 25.07.2014

‘ಅತ್ತೆ ಸೊಸೆಯ’ ಆ ದೃಶ್ಯದ ಅರ್ಥವೇನು? ಮಧ್ಯಾಹ್ನ ಮೂರರ ಸಮಯ. ದಿಲ್ಲಿಯ ಸಂಘ ಕಾರ್ಯಾಲಯದಲ್ಲಿದ್ದೆ. ದೂರವಾಣಿ ಗಂಟೆ ಬಾರಿಸಿತು. ಪ್ರಾಂತ ಸಂಘಚಾಲಕ ಪ್ರಕಾಶದತ್ತ ಭಾರ್ಗವರ ಮನೆಯಿಂದ ಸುದ್ದಿ ಮುಟ್ಟಿತು. ಖಾಯಿಲೆಯಲ್ಲಿದ್ದ ಅವರ ಮಗ ರವೀಂದ್ರದತ್ತರ ಸ್ಥಿತಿ ಉಲ್ಬಣಗೊಂಡಿದೆ ! ಕೂಡಲೇ ನಾವು ನಾಲ್ಕಾರು ಮಂದಿ ಆಸ್ಪತ್ರೆಗೆ ಧಾವಿಸಿದೆವು. ವಾರ್ಡ್ ಬಳಿ ತಲುಪುತ್ತಿದ್ದಂತೆ ಭಾರ್ಗವರು “ಸಾರಾ ಖೇಲ್ ಸಮಾಪ್ತ ಹೋಗಯಾ” ಅಂದರು-ನನ್ನ ಕೈ ಹಿಡಿದುಕೊಂಡು. ತಡೆದುಕೊಳ್ಳಲು ಯತ್ನಿಸಿದಷ್ಟೂ ಒಳಗಿನಿಂದ ಒತ್ತರಿಸಿಕೊಂಡು ಬರುತ್ತಿದ್ದ ಕಣ್ಣೀರಿನಿಂದ ಒದ್ದೆಯಾದ ಮುಖ. ಎಂಭತ್ತರ ಸನಿಹಕ್ಕೆ […]

ಚಿಂತನಕ್ಷಣ – 15

ಹೊ.ವೆ.ಶೇಷಾದ್ರಿ - 0 Comment
Issue Date : 24.07.2014

ನಮ್ಮ ನಿಮ್ಮ ನಡುವೆ ಪ್ರ : ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿ ಪ್ರಕಾರ ಪ್ರತ್ಯೇಕ ಸ್ಥಾನಮಾನ ಕೊಡಲಾಗಿದೆ. ಇದು ಏಕೆ? ಯಾವಾಗ ಇದು ಕೊನೆಗೊಳ್ಳುವುದು ?                                                                           […]