ಚಿಂತನಕ್ಷಣ – 12

ಹೊ.ವೆ.ಶೇಷಾದ್ರಿ - 0 Comment
Issue Date : 19.07.2014

ಕಮ್ಯುನಿಸ್ಟರ ಧರ್ಮಸಂಕಟ – 2 ಪ್ರ : ಗೊರ್ಬೆಚೆವ್‍ರವರು ಎದುರಿಸುತ್ತಿರುವ ಧರ್ಮಸಂಕಟ ಎಂತಹುದು ? ಸುಧಾರಣೆಗಳನ್ನು ತರುವಲ್ಲಿ ಅವರಿಗೆ ಯಾವ ಅಡೆತಡೆಗಳಿದ್ದಾವು ? ಕಮ್ಯುನಿಸ್ಟ್ ಸರ್ವಾಧಿಕಾರಿಯ ಕೈ ತಡೆಯುವರಾರು ? ಉ : ತುರ್ತಾಗಿ ಅವರು ಎದುರಿಸಬೇಕಾಗಿ ಬಂದಿರುವ ಸಂದಿಗ್ಧ ಪರಿಸ್ಥಿತಿಗೆ ಕಾರಣ ಅವರ ಪಕ್ಷದೊಳಗಿನಿಂದ ಹಾಗೂ ಕಾರ್ಮಿಕರಿಂದ ಸಿಡಿದೆದ್ದಿರುವ ವಿರೋಧ. ಗೊರ್ಬೆಚೆವ್‍ರ ಸ್ಥಿತಿ ಹಿಂದೆ ಸ್ಟಾಲಿನ್‍ರದಂತಿಲ್ಲ. ತನ್ನ ಪಕ್ಷದೊಳಗಿನ ತನ್ನ ವಿರೋಧಿಗಳನ್ನೆಲ್ಲ ಸಾರಾಸಗಟು ನಿರ್ನಾಮಗೊಳಿಸಿದವ ಸ್ಟಾಲಿನ್. ಚಿತ್ರಹಿಂಸೆ, ಸಾಮೂಹಿಕ ಹತ್ಯೆ, ಗುಲಾಮಿ ಶಿಬಿರಗಳೇ ಅಂದು ಸ್ಟಾಲಿನ್ […]

ಚಿಂತನಕ್ಷಣ -11

ಹೊ.ವೆ.ಶೇಷಾದ್ರಿ - 0 Comment
Issue Date : 18.07.2014

ಕಮ್ಯುನಿಸ್ಟರ ಧರ್ಮಸಂಕಟ-1 ಪ್ರಶ್ನೆ: ರಷ್ಯದಲ್ಲಿ ಸುಧಾರಣೆಯ ಹೊಸ ಗಾಳಿ ಬೀಸುತ್ತಿದೆ ಎನ್ನುವ  ಸುದ್ದಿಗಳು ಒಂದೇ ಸಮನೆ ಬರುತ್ತಿವೆಯಲ್ಲ, ಅವು ನಿಜವೇ? ಅಥವಾ ಕಮ್ಯುನಿಸ್ಟ್ ಪ್ರಚಾರ ತಂತ್ರದ ಅದೂ ಒಂದು ವೈಖರಿಯೇ? ಪ್ರಪಂಚದ ಜನಕ್ಕೆ ಕಮ್ಯುನಿಸಂನಲ್ಲೂ ವಿಚಾರಮಂಥನಕ್ಕೆ ಅವಕಾಶವಿದೆ, ಬದಲಾವಣೆಯಾಗುತ್ತಿವೆ ಎಂದು ತೋರಿಸುವ  ಸಲುವಾಗಿಯೇ? ಉತ್ತರ : ಅವೇನೂ ಬರೇ ಪ್ರಚಾರ ಅಲ್ಲ. ನಿಜಸ್ಥಿತಿಯದೇ ಸುದ್ದಿಗಳು ಅವು. ಪ್ರಚಾರ ಮಾಡಿ ಪ್ರಪಂಚದ ಜನರನ್ನು ಮರಳು ಮಾಡುತ್ತಿದ್ದ ಕಾಲ ಆಗಿ ಹೋಯಿತು.  ಕಳೆದ 70 ವರ್ಷಗಳ‍ಲ್ಲಿನ ರಷ್ಯದಲ್ಲಿನ ಕಮ್ಯುನಿಸಂ ಪ್ರಯೋಗದ […]

ಚಿಂತನಕ್ಷಣ – 10

ಹೊ.ವೆ.ಶೇಷಾದ್ರಿ - 0 Comment
Issue Date : 17.07.2014

ಈ ‘ನಾಗಪಾಶ’ದಿಂದ  ಮುಕ್ತ ಆಗುವುದೆಂತು? ಮಕ್ಕಳ ಅಪಹರಣದ ಸುದ್ದಿ ಇಂದು ಹೊಸದೇನೂ ಅಲ್ಲ. ಶ್ರೀಮಂತ ಮನೆ ಮಕ್ಕಳನ್ನು  ಅಪಹರಿಸಿಕೊಂಡು  ಹೋಗಿ  ಅವರ ಮುಕ್ತಿಗಾಗಿ ಒತ್ತೆಹಣದ  ಶರತ್ತು ಒಡ್ಡುವುದು, ಅದು ಈಡೇರದಿದ್ದರೆ  ಮಕ್ಕಳನ್ನು  ಕತ್ತರಿಸಿಹಾಕುವುದು; ಸಣ್ಣ ಹೆಣ್ಣುಮಕ್ಕಳನ್ನು  ಅತ್ಯಾಚಾರಕ್ಕೆ ಗುರಿಪಡಿಸಿ  ಅವರ ಹೆಣ ಬಿಸಾಡುವುದು; ಮಕ್ಕಳ ಕಣ್ಣನ್ನು ಇಂಗಿಸಿ ಅಥವಾ ಅಂಗ ಊನ ಮಾಡಿ ಹಣ ಕೂಡಿಸಲು  ಭಿಕಾರಿಗಳಾಗಿ  ಅವರನ್ನು  ಬಳಸಿಕೊಳ್ಳುವುದು, ಮಕ್ಕಳನ್ನು  ದೇವಿಯರಿಗೆ ಬಲಿ ಕೊಡುವುದು ಇಂತಹ ಭಯಾನಕ ಘಟನೆಗಳೆಲ್ಲವೂ  ಇಂದು ಸಾಕಷ್ಟು  ಪ್ರಚಾರಗೊಂಡೇ ಇವೆ. ಎಂದೇ […]

ಚಿಂತನಕ್ಷಣ -9

ಹೊ.ವೆ.ಶೇಷಾದ್ರಿ - 0 Comment
Issue Date : 16.07.2014

ಭಗವಂತನ ಬಳಿ ಸಾರುವಾಗ ಏಪ್ರಿಲ್ 28 ರಂದು ಪತ್ರಿಕೆಗಳಲ್ಲಿ ‘ದೇವಸ್ಥಾನದಲ್ಲಿ ರಾಷ್ಟ್ರಪತಿಯವರ ಅಂಗಿಯಿಂದ ಚಕಮಕಿ’ ಎನ್ನು ವ ಶೀರ್ಷಿಕೆಯಲ್ಲಿ ಪ್ರಸಿದ್ಧಗೊಂಡ ಸುದ್ದಿ ಇದು. ತಮಿಳುನಾಡಿನ ಚಿದಂಬರಂನಲ್ಲಿ ನಡೆದ ಘಟನೆ ಇದು. “ಇಲ್ಲಿನ ನಟರಾಜ ದೇವಸ್ಥಾನದ ಒಳಕ್ಕೆ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ತಮ್ಮ ಅಂಗಿ ಧರಿಸಿಯೇ ಪ್ರವೇಶಿಸಿದ್ದರಿಂದ ವಿವಾದವೊಂದು ಸಿಡಿಯಿತು. ಶ್ರೀ ವೆಂಕಟರಾಮನ್ ಅವರು ಆಗಮಿಸುತ್ತಿದ್ದಂತೆ ಅವರಿಗೆ ಪೂರ್ಣಕುಂಭದೊಂದಿಗೆ ಸ್ವಾಗತ ನೀಡಲಾಯಿತು. ಆದರೆ ಅವರು ತಮ್ಮ ಅಂಗಿಯೊಂದಿಗೇ ಮೂಲ ಸ್ಥಾನಕ್ಕೆ ಪ್ರವೇಶಿಸಲು ಹೊರಟಾಗ ಕೆಲವು ಪೂಜಾರಿಗಳು ‘ಇದು […]

ಚಿಂತನಕ್ಷಣ ಭಾಗ -8

ಹೊ.ವೆ.ಶೇಷಾದ್ರಿ - 0 Comment
Issue Date : 13.07.2014

ಭಾರತೀಯ ನಾರಿಯ ಗುಣವೈಭವವನ್ನು ಕಂಡಾಗ, ಅವಳ ಸಹನೆ, ತ್ಯಾಗ, ಸೇವಾಭಾವ, ಆತ್ಮಸಂಯಮ, ನಿಸ್ವಾರ್ಥ ಪ್ರೇಮ ಇಂತಹ ಉದಾತ್ತ ಗುಣಗಳನ್ನು ನೆನೆದಾಗ, ಮಾನವ ಜನಾಂಗದಲ್ಲಿ ಮಾನವತೆಯ ಆತ್ಮಜ್ಯೋತಿಯನ್ನು ನಿರಂತರವಾಗಿ ಉರಿಸಿಡುವ ಬೆಳಕಿನ ಬಾಳುವೆ ಅವಳದು ಎಂಬುದನ್ನು ಕಂಡು ತಲೆಬಾಗುವಂತಾದಾಗ, ಆಗ ಅಂತಹ ನಾರಿಯ ಬಗೆಗೆ ಭಾರತದ ಪುರುಷನ ಹೊಣೆಗಾರಿಕೆ ಏನಾದರೂ ಇಲ್ಲವೇ? ಕರ್ತವ್ಯ ಏನಾದರೂ ಇಲ್ಲವೇ? ಅವಳಿಂದ ಇನಿತೊಂದು ಉಪಕಾರ ಪಡೆದ ತಾನು ತೀರಿಸಬೇಕಾದ ಋಣ ಯಾವುದೂ ಇಲ್ಲವೇ? ಅವಳ ಮಗನಾಗಿ, ಸೋದರನಾಗಿ, ತಂದೆಯಾಗಿ, ಪತಿಯಾಗಿ ಅವಳಿಗೆ ನೆರವಾಗಿ […]

ಚಿಂತನಕ್ಷಣ -7

ಹೊ.ವೆ.ಶೇಷಾದ್ರಿ - 0 Comment
Issue Date : 12.07.2014

ನಾರಿ ‘ನಾರಿ’ಯಾಗದಿದ್ದಲ್ಲಿ ‘ಮಾರಿ’ ಆದಾಳು ನಾರಿ ಲೋಕಕ್ಕೆ ನಿಸರ್ಗವೇ ಒಂದು ಉಚ್ಚತಮ ಪಾತ್ರ ಕಲ್ಪಿಸಿದೆ, ಸ್ವಭಾವಜನ್ಯವಾಗಿಯೇ ಸರ್ವೋಚ್ಛ ಮಾನವೀಗುಣಗಳನ್ನು ತನ್ನಲ್ಲಿ ಅರಳಿಸಿಕೊಳ್ಳುವ ಅವಕಾಶವನ್ನು ನಿಸರ್ಗ ಅವಳಿಗೆ ಕಲ್ಪಿಸಿಕೊಟ್ಟಿದೆ, ಎನ್ನುವ ಮಾತನ್ನು ಈ ಹಿಂದೆ ಕಂಡೆವು. ಒಂದು ದೃಷ್ಟಿಯಿಂದ ನಿಸರ್ಗ ಅವಳ ಪರವಾಗಿ ಪಕ್ಷಪಾತವನ್ನೇ ತೋರಿದೆ. ಓರ್ವ ಕವಿಯಂತೂ ತಾಯಿಯ ಕುರಿತಾಗಿ “ದೇವರು ಮನುಷ್ಯನ ಭೌತಿಕ ಕಣ್ಣುಗಳಿಗೆ ಕಾಣುವಂತೆ ತೋರ್ಪಡಿಸಿಕೊಳ್ಳಲೆಂದೇ ತಾಯಿಯ ರೂಪ ತಾಳಿ ಬರುತ್ತಾನೆ” ಎಂದು ವರ್ಣಿಸುವವರೆಗೂ ಹೋಗಿದ್ದಾನೆ. ‘ಮಾತೃ ದೇವೋಭವ…’ ಎನ್ನುವ ವಚನದಲ್ಲಿ ವೇದಗಳು ಸಾರಿರುವ […]

ಚಿಂತನಕ್ಷಣ – 6

ಹೊ.ವೆ.ಶೇಷಾದ್ರಿ - 0 Comment
Issue Date : 11.07.2014

ಭಾರತದ ನಾರಿ : ‘ಆಧುನಿಕತೆ’ಯಲ್ಲ, ಮಾನವತೆ’ಯ ಮೂರ್ತಿ !  ‘ಮನೆ’ಯನ್ನು ಪ್ರೀತಿ-ಸೇವೆಗಳ ಧಾಮವಾಗಿ ಸ್ತ್ರೀ ಮಾಡಿಯಾಳು, ಮಕ್ಕಳು ಮುದುಕರು ಬೀದಿಪಾಲಾಗದಂತೆ ನೋಡಿಕೊಂಡಾಳು, ಮನೆ ಒಡೆಯದಂತೆ ಎಚ್ಚರ ವಹಿಸಿಯಾಳು ಎನ್ನುವ ಮಾತನ್ನು ಒಪ್ಪೋಣ. ಪಾಶ್ಚಾತ್ಯ ಸಮಾಜಗಳಲ್ಲಿ ಕುಟುಂಬ-ಮಕ್ಕಳು-ಮುದುಕರಿಗೆ ಒದಗಿರುವ ದುರ್ಗತಿಯಿಂದ ಭಾರತದ ನಾರಿ ಅವರನ್ನು ಪಾರು ಮಾಡಿದ್ದಾಳೆ ಎನ್ನುವ ಮಾತನ್ನೂ ಒಪ್ಪೋಣ, ಆದರೆ ಈ ರೀತಿ ಉಳಿದೆಲ್ಲರಿಗೋಸ್ಕರ ತನ್ನನ್ನು ತಾನು ತಿಕ್ಕಿ ತೇದುಕೊಂಡು ಆಹುತಿ ನೀಡುವುದರಲ್ಲಿ ಅವಳಿಗೆ ಬಂದ ಭಾಗ್ಯವೇನು? ಅನ್ಯರ ಚಿಂತೆ-ಹಿತ ಸಾಧನೆಯಲ್ಲೇ ಮುಳುಗಿದ್ದಲ್ಲಿ ಅವಳಿಗೆಲ್ಲಿಯ ಸುಖ? […]

ಚಿಂತನಕ್ಷಣ – 5

ಹೊ.ವೆ.ಶೇಷಾದ್ರಿ - 0 Comment
Issue Date : 10.07.2014

ಇದೆಂತಹ ಸ್ತ್ರೀ ದಾಸ್ಯ?-3  ಸರಕಾರ ‘ಹೃದಯ’ ಒದಗಿಸೀತೇ? ಇನ್ನೂ ಒಂದು ಉದಾಹರಣೆ. ಸ್ವತಃ ನನ್ನ ಕಣ್ಣೆದುರಿಗೇ ನಡೆದದ್ದು. ಅಮೆರಿಕೆಯಲ್ಲಿ ಒಂದೆಡೆ ನಮ್ಮ ಮಿತ್ರನೊಬ್ಬನ ಮನೆಯಲ್ಲಿ ತಂಗಿದ್ದೆ. ಬೆಳಿಗ್ಗೆ ಮುಂದಿನ ಪ್ರಯಾಣಕ್ಕೆ ಹೊರಡಬೇಕು. ಆದರೆ ಮಿತ್ರ ಬೆಳಗಾದರೂ ಎದ್ದಿರಲಿಲ್ಲ. ಕಾಣಲು ಅವನ ಕೋಣೆಗೆ ಹೋದಾಗ ನರಳುತ್ತಾ ಮಲಗಿದ್ದ. ರಾತ್ರಿಯೆಲ್ಲಾ ವಿಪರೀತ ಹೊಟ್ಟೆ ನೋವು, ಹೊರಳಾಡುತ್ತಾ ಕಳೆದಿದ್ದನಂತೆ. ಏಕೆ? ಏನೂ ಚಿಕಿತ್ಸೆ ಮಾಡಲಿಲ್ಲವೆ? ಎಂದೆ. ಸುಮ್ಮನಿದ್ದ. ಬಹುಶಃ ಹೆಂಡತಿಯನ್ನೂ ಎಬ್ಬಿಸಿರಲಿಲ್ಲ. ಅವನ ಹೆಂಡತಿ-ಓರ್ವ ಅಮೆರಿಕನ್ ಮಹಿಳೆ. ಅವಳ ಸಹಾಯದಿಂದ ಮಿತ್ರನನ್ನು […]

ಚಿಂತನಕ್ಷಣ – 4

ಹೊ.ವೆ.ಶೇಷಾದ್ರಿ - 0 Comment
Issue Date : 09.07.2014

ಇದೆಂತಹ ‘ಸ್ತ್ರೀದಾಸ್ಯ’ !- 2 ನಿಜವಾದ ಶಾಲೆ ಯಾವುದು? ಮನೆಯೋ, ಶಾಲೆಯೋ? ಹಿಂದಿನ ‘ಚಿಂತನ ಕ್ಷಣ’ದಲ್ಲಿ ಕಂಡ ಉದಾಹರಣೆಗಳ ಬೆನ್ನುಹಿಂದೆಯೇ ಇನ್ನೊಂದು ನಿದರ್ಶನ ಕೇಳಿದೆ. ಈಚೆಗಷ್ಟೇ ಇಂಗ್ಲೆಂಡಿನಿಂದ ತರುಣ ದಂಪತಿಗಳಿಬ್ಬರು ಬೆಂಗಳೂರಿಗೆ ಬಂದಿದ್ದರು. ‘ಸೇವಾ ಇನ್ ಆಕ್ಯನ್’ (ಹಿಂ. ಸೇ. ಪ್ರತಿಷ್ಠಾನದ ಒಂದು ಅಂಗಸಂಸ್ಥೆ) ನವರು ಕೈಗೊಂಡಿರುವ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣದ ವೈಶಿಷ್ಟ್ಯಗಳನ್ನು ಅಭ್ಯಾಸಿಸಲೆಂದೇ ಬಂದಿದ್ದವರು ಅವರು. ಅದೇ ವಿಷಯದಲ್ಲಿ ಸಂಶೋಧಕ ವಿದ್ವಾಂಸರು, ಗಂಡ ವಿಲಿಯಂ ಸ್ವಾನ್ ಅವರು ತಾವು ಕಂಡ ಬುದ್ಧಿಮಾಂದ್ಯದ ಒಂದು ಸಂದರ್ಭ ಹೇಳಿದರು. […]

ಚಿಂತನಕ್ಷಣ – 3

ಹೊ.ವೆ.ಶೇಷಾದ್ರಿ - 0 Comment
Issue Date : 08.07.2014

ಅನುಜ ನನಗೆ ಕಲಿಸಿದ ಪಾಠ ಪ್ರೀತಿಯ ಅಮೃತ – ನಿನ್ನ ಹೆಸರು ಬೇರೆ ಏನೇ ಇರಲಿ, ನಾನಂತೂ ನಿನ್ನನ್ನು ಅಮೃತ ಅಂತಾನೆ ಕರೀತೇನೆ. ಏಕೆ ಅಂತೀಯಾ ? ಅಮೃತ ಅಂದರೆ ತುಂಬ ರುಚಿ, ಅದನ್ನು ಕುಡಿದರೆ ಯಾವ ರೋಗವೂ ಬರುವುದಿಲ್ಲ. ಸದಾ ಸಂತೋಷವಾಗಿ ಇರಬಹುದು. ಹಾಗೇ ನೀನೂ ಸದಾ ಆರೋಗ್ಯವಾಗಿ ಇರುವಂತೆ ಆಗಲಿ, ಆನಂದದಿಂದ ಇರುವಂತೆ ಆಗಲಿ, ಅಷ್ಟೇ ಅಲ್ಲ, ನಿನ್ನನ್ನು ನೋಡಿದವರೂ, ನಿನ್ನೊಂದಿಗೆ ಮಾತನಾಡುವವರೂ ಅದೇ ರೀತಿ ಸಂತೋಷಪಡುವಂತಾಗಲಿ. ಈಚೆಗೆ ರೈಲಲ್ಲಿ ದೆಹಲಿಗೆ ಹೋಗಿದ್ದೆ. ರೈಲಲ್ಲಿ […]