ಚಿಂತನಕ್ಷಣ -7

ಹೊ.ವೆ.ಶೇಷಾದ್ರಿ - 0 Comment
Issue Date : 12.07.2014

ನಾರಿ ‘ನಾರಿ’ಯಾಗದಿದ್ದಲ್ಲಿ ‘ಮಾರಿ’ ಆದಾಳು ನಾರಿ ಲೋಕಕ್ಕೆ ನಿಸರ್ಗವೇ ಒಂದು ಉಚ್ಚತಮ ಪಾತ್ರ ಕಲ್ಪಿಸಿದೆ, ಸ್ವಭಾವಜನ್ಯವಾಗಿಯೇ ಸರ್ವೋಚ್ಛ ಮಾನವೀಗುಣಗಳನ್ನು ತನ್ನಲ್ಲಿ ಅರಳಿಸಿಕೊಳ್ಳುವ ಅವಕಾಶವನ್ನು ನಿಸರ್ಗ ಅವಳಿಗೆ ಕಲ್ಪಿಸಿಕೊಟ್ಟಿದೆ, ಎನ್ನುವ ಮಾತನ್ನು ಈ ಹಿಂದೆ ಕಂಡೆವು. ಒಂದು ದೃಷ್ಟಿಯಿಂದ ನಿಸರ್ಗ ಅವಳ ಪರವಾಗಿ ಪಕ್ಷಪಾತವನ್ನೇ ತೋರಿದೆ. ಓರ್ವ ಕವಿಯಂತೂ ತಾಯಿಯ ಕುರಿತಾಗಿ “ದೇವರು ಮನುಷ್ಯನ ಭೌತಿಕ ಕಣ್ಣುಗಳಿಗೆ ಕಾಣುವಂತೆ ತೋರ್ಪಡಿಸಿಕೊಳ್ಳಲೆಂದೇ ತಾಯಿಯ ರೂಪ ತಾಳಿ ಬರುತ್ತಾನೆ” ಎಂದು ವರ್ಣಿಸುವವರೆಗೂ ಹೋಗಿದ್ದಾನೆ. ‘ಮಾತೃ ದೇವೋಭವ…’ ಎನ್ನುವ ವಚನದಲ್ಲಿ ವೇದಗಳು ಸಾರಿರುವ […]

ಚಿಂತನಕ್ಷಣ – 6

ಹೊ.ವೆ.ಶೇಷಾದ್ರಿ - 0 Comment
Issue Date : 11.07.2014

ಭಾರತದ ನಾರಿ : ‘ಆಧುನಿಕತೆ’ಯಲ್ಲ, ಮಾನವತೆ’ಯ ಮೂರ್ತಿ !  ‘ಮನೆ’ಯನ್ನು ಪ್ರೀತಿ-ಸೇವೆಗಳ ಧಾಮವಾಗಿ ಸ್ತ್ರೀ ಮಾಡಿಯಾಳು, ಮಕ್ಕಳು ಮುದುಕರು ಬೀದಿಪಾಲಾಗದಂತೆ ನೋಡಿಕೊಂಡಾಳು, ಮನೆ ಒಡೆಯದಂತೆ ಎಚ್ಚರ ವಹಿಸಿಯಾಳು ಎನ್ನುವ ಮಾತನ್ನು ಒಪ್ಪೋಣ. ಪಾಶ್ಚಾತ್ಯ ಸಮಾಜಗಳಲ್ಲಿ ಕುಟುಂಬ-ಮಕ್ಕಳು-ಮುದುಕರಿಗೆ ಒದಗಿರುವ ದುರ್ಗತಿಯಿಂದ ಭಾರತದ ನಾರಿ ಅವರನ್ನು ಪಾರು ಮಾಡಿದ್ದಾಳೆ ಎನ್ನುವ ಮಾತನ್ನೂ ಒಪ್ಪೋಣ, ಆದರೆ ಈ ರೀತಿ ಉಳಿದೆಲ್ಲರಿಗೋಸ್ಕರ ತನ್ನನ್ನು ತಾನು ತಿಕ್ಕಿ ತೇದುಕೊಂಡು ಆಹುತಿ ನೀಡುವುದರಲ್ಲಿ ಅವಳಿಗೆ ಬಂದ ಭಾಗ್ಯವೇನು? ಅನ್ಯರ ಚಿಂತೆ-ಹಿತ ಸಾಧನೆಯಲ್ಲೇ ಮುಳುಗಿದ್ದಲ್ಲಿ ಅವಳಿಗೆಲ್ಲಿಯ ಸುಖ? […]

ಚಿಂತನಕ್ಷಣ – 5

ಹೊ.ವೆ.ಶೇಷಾದ್ರಿ - 0 Comment
Issue Date : 10.07.2014

ಇದೆಂತಹ ಸ್ತ್ರೀ ದಾಸ್ಯ?-3  ಸರಕಾರ ‘ಹೃದಯ’ ಒದಗಿಸೀತೇ? ಇನ್ನೂ ಒಂದು ಉದಾಹರಣೆ. ಸ್ವತಃ ನನ್ನ ಕಣ್ಣೆದುರಿಗೇ ನಡೆದದ್ದು. ಅಮೆರಿಕೆಯಲ್ಲಿ ಒಂದೆಡೆ ನಮ್ಮ ಮಿತ್ರನೊಬ್ಬನ ಮನೆಯಲ್ಲಿ ತಂಗಿದ್ದೆ. ಬೆಳಿಗ್ಗೆ ಮುಂದಿನ ಪ್ರಯಾಣಕ್ಕೆ ಹೊರಡಬೇಕು. ಆದರೆ ಮಿತ್ರ ಬೆಳಗಾದರೂ ಎದ್ದಿರಲಿಲ್ಲ. ಕಾಣಲು ಅವನ ಕೋಣೆಗೆ ಹೋದಾಗ ನರಳುತ್ತಾ ಮಲಗಿದ್ದ. ರಾತ್ರಿಯೆಲ್ಲಾ ವಿಪರೀತ ಹೊಟ್ಟೆ ನೋವು, ಹೊರಳಾಡುತ್ತಾ ಕಳೆದಿದ್ದನಂತೆ. ಏಕೆ? ಏನೂ ಚಿಕಿತ್ಸೆ ಮಾಡಲಿಲ್ಲವೆ? ಎಂದೆ. ಸುಮ್ಮನಿದ್ದ. ಬಹುಶಃ ಹೆಂಡತಿಯನ್ನೂ ಎಬ್ಬಿಸಿರಲಿಲ್ಲ. ಅವನ ಹೆಂಡತಿ-ಓರ್ವ ಅಮೆರಿಕನ್ ಮಹಿಳೆ. ಅವಳ ಸಹಾಯದಿಂದ ಮಿತ್ರನನ್ನು […]

ಚಿಂತನಕ್ಷಣ – 4

ಹೊ.ವೆ.ಶೇಷಾದ್ರಿ - 0 Comment
Issue Date : 09.07.2014

ಇದೆಂತಹ ‘ಸ್ತ್ರೀದಾಸ್ಯ’ !- 2 ನಿಜವಾದ ಶಾಲೆ ಯಾವುದು? ಮನೆಯೋ, ಶಾಲೆಯೋ? ಹಿಂದಿನ ‘ಚಿಂತನ ಕ್ಷಣ’ದಲ್ಲಿ ಕಂಡ ಉದಾಹರಣೆಗಳ ಬೆನ್ನುಹಿಂದೆಯೇ ಇನ್ನೊಂದು ನಿದರ್ಶನ ಕೇಳಿದೆ. ಈಚೆಗಷ್ಟೇ ಇಂಗ್ಲೆಂಡಿನಿಂದ ತರುಣ ದಂಪತಿಗಳಿಬ್ಬರು ಬೆಂಗಳೂರಿಗೆ ಬಂದಿದ್ದರು. ‘ಸೇವಾ ಇನ್ ಆಕ್ಯನ್’ (ಹಿಂ. ಸೇ. ಪ್ರತಿಷ್ಠಾನದ ಒಂದು ಅಂಗಸಂಸ್ಥೆ) ನವರು ಕೈಗೊಂಡಿರುವ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣದ ವೈಶಿಷ್ಟ್ಯಗಳನ್ನು ಅಭ್ಯಾಸಿಸಲೆಂದೇ ಬಂದಿದ್ದವರು ಅವರು. ಅದೇ ವಿಷಯದಲ್ಲಿ ಸಂಶೋಧಕ ವಿದ್ವಾಂಸರು, ಗಂಡ ವಿಲಿಯಂ ಸ್ವಾನ್ ಅವರು ತಾವು ಕಂಡ ಬುದ್ಧಿಮಾಂದ್ಯದ ಒಂದು ಸಂದರ್ಭ ಹೇಳಿದರು. […]

ಚಿಂತನಕ್ಷಣ – 3

ಹೊ.ವೆ.ಶೇಷಾದ್ರಿ - 0 Comment
Issue Date : 08.07.2014

ಅನುಜ ನನಗೆ ಕಲಿಸಿದ ಪಾಠ ಪ್ರೀತಿಯ ಅಮೃತ – ನಿನ್ನ ಹೆಸರು ಬೇರೆ ಏನೇ ಇರಲಿ, ನಾನಂತೂ ನಿನ್ನನ್ನು ಅಮೃತ ಅಂತಾನೆ ಕರೀತೇನೆ. ಏಕೆ ಅಂತೀಯಾ ? ಅಮೃತ ಅಂದರೆ ತುಂಬ ರುಚಿ, ಅದನ್ನು ಕುಡಿದರೆ ಯಾವ ರೋಗವೂ ಬರುವುದಿಲ್ಲ. ಸದಾ ಸಂತೋಷವಾಗಿ ಇರಬಹುದು. ಹಾಗೇ ನೀನೂ ಸದಾ ಆರೋಗ್ಯವಾಗಿ ಇರುವಂತೆ ಆಗಲಿ, ಆನಂದದಿಂದ ಇರುವಂತೆ ಆಗಲಿ, ಅಷ್ಟೇ ಅಲ್ಲ, ನಿನ್ನನ್ನು ನೋಡಿದವರೂ, ನಿನ್ನೊಂದಿಗೆ ಮಾತನಾಡುವವರೂ ಅದೇ ರೀತಿ ಸಂತೋಷಪಡುವಂತಾಗಲಿ. ಈಚೆಗೆ ರೈಲಲ್ಲಿ ದೆಹಲಿಗೆ ಹೋಗಿದ್ದೆ. ರೈಲಲ್ಲಿ […]

ಚಿಂತನಕ್ಷಣ – 2

ಹೊ.ವೆ.ಶೇಷಾದ್ರಿ - 0 Comment
Issue Date : 07.07.2014

ಕ್ಯಾಮರಾ ‘ಒಳಮುಖ’ದತ್ತ ತಿರುಗಿದಾಗ…. ಕಳೆದ ನವೆಂ. 25. ಗುರು ತೇಗ ಬಹಾದೂರರ ಬಲಿದಾನದ ಸ್ಮರಣೆ. ಲುಧಿಯಾನದಲ್ಲಿ ಸಾರ್ವಜನಿಕ ಸಮಾರಂಭ. ನಗರದ ಹಲವಾರು ಗಣ್ಯ ಸಿಖ್ ಬಂಧುಗಳು, ಹೆಸರಾಂತ ಕವಿಗಳು, ಇತಿಹಾಸ ಪಂಡಿತರಿಂದ ಭಾಷಣ-ಕಾವ್ಯವಾಚನ. ಕಾರ್ಯಕ್ರಮವನ್ನು ವರ್ಣರಂಜಿತಗೊಳಿಸಿದವರು, ನಿಹಾಂಗಸಿಖ್ಖರು. ‘ಸದಾ ಬಿಚ್ಚುಕತ್ತಿ, ತ್ರಿಶೂಲ, ಧನುರ್ಬಾಣ ಹೊತ್ತು ತಿರುಗುವವರು. ಸಮಾಜ, ಧರ್ಮಗಳ ರಕ್ಷಣೆಗಾಗಿ ನಿತ್ಯ ಸಿದ್ಧರಾಗಿದ್ದವರು-ಒಂದು ಕಾಲದಲ್ಲಿ. ಅದರ ಪ್ರತೀಕ ಆ ವೇಷ-ಭೂಷ. ಅವರ ಪೇಟಗಳೂ ಭಾರಿ, ಹಳದಿ ವರ್ಣ.ಸಣ್ಣ ಮಕ್ಕಳಿಗೂ ಅದೇ ವೇಷ, ಅದೇ ಶಸ್ತ್ರಗಳು. ಅವರದೂ 40-50 […]

ಚಿಂತನ ಕ್ಷಣ

ಹೊ.ವೆ.ಶೇಷಾದ್ರಿ - 0 Comment
Issue Date : 06.07.2014

ಒಳ ಮನಕೆ ಕೈಗನ್ನಡಿ ಹಿಡಿದಾಗ  ‘ಮಧ್ಯರಾತ್ರಿ ವೇಳೆಗೆ ವಿಜಯವಾಡಾ ಬರುತ್ತದೆ, ಎಸಿಯಲ್ಲಿ ಜಾಗ ಖಾಲಿ ಆಗುವ ಸಂಭವ ಇದೆ, ಬನ್ನಿ ನೋಡುವಾ ಎಂದಿದ್ದಾನೆ ಕಂಡಕ್ಟರ್. ಅಲ್ಲಿವರೆಗೆ ಇಲ್ಲೇ ಒಂದು ಕಡೆ ಕೂತಿರುತ್ತೇನೆ’ – ಎಂದರು, ಪ್ರಥಮ ದರ್ಜೆಯಲ್ಲಿದ್ದ ಓರ್ವ ಸಹ ಪ್ರವಾಸಿಗರು. ಸರಕಾರಿ ಅಧಿಕಾರಿ. ದಿಲ್ಲಿಯಿಂದ ಹೊರಟಿದ್ದರು – ನಮ್ಮೊಟ್ಟಿಗೇ. ಜತೆಗಿದ್ದ ಇನ್ನೋರ್ವ ಸರಕಾರಿ ಅಧಿಕಾರಿ ಪ್ರವಾಸಿಯೊಂದಿಗೆ ತಮಗೆ ಯಾವ ರೀತಿ ರೈಲಲ್ಲಿ ಬರ್ತ್ ಸಿಗಲಿಲ್ಲ, ಸರಕಾರ ಹೇಗೆ ಅಧಿಕಾರಿಗಳ ಹಿತ – ಅಹಿತವನ್ನು ಲೆಕ್ಕಿಸುವುದೇ ಇಲ್ಲ, […]

ಪೂಜೆ – ಉತ್ಸವಗಳ ಸಾಮಾಜಿಕ ಪ್ರಭಾವ

ಭಾರತ ; ಹೊ.ವೆ.ಶೇಷಾದ್ರಿ - 1 Comment
Issue Date : 05.03.2014

ಭಾರತೀಯರು ಸಾರ್ವಜನಿಕವಾಗಿ ಸಂಭ್ರಮದಿಂದ ಆಚರಿಸುವ  ವಿನಾಯಕ ಚೌತಿ, ದುರ್ಗಾಪೂಜೆ ಮೊದಲಾದ  ಉತ್ಸವಗಳ ಶೈಲಿಯನ್ನೂ ಆಶಯವನ್ನೂ  ಕುರಿತು ಯೋಚಿಸಿದಲ್ಲಿ  ಅವುಗಳಿಗೆ ಆಧಾರವಾಗಿರುವ ಉದಾತ್ತ ಚಿಂತನೆಯೂ ಸೈದ್ಧಾಂತಿಕ ಹಿನ್ನೆಲೆಯೂ ಬೆರಗುಗೊಳಿಸುತ್ತವೆ. ಗಣೇಶೋತ್ಸವಗಳನ್ನು ತೆಗೆದುಕೊಂಡರೆ  ಈ ಉತ್ಸವ ದೇಶದ ಕೆಲವೆಡೆ-ಉದಾಹರಣೆಗೆ  ಮಹಾರಾಷ್ಟ್ರದಲ್ಲಿ – ಹೆಚ್ಚು ಜನಪ್ರಿಯ. ಹೈದರಾಬಾದಿನಲ್ಲಿಯೂ ಹನ್ನೊಂದು  ದಿವಸಗಳ ಅವಧಿಯಲ್ಲಿ  ಮೂರುಸಾವಿರಕ್ಕೂ  ಹೆಚ್ಚು ಸಾರ್ವಜನಿಕ ಉತ್ಸವಗಳು  ನಡೆಯುತ್ತವೆ.  ಕಡೆಯ ದಿನ  ಸಣ್ಣ, ದೊಡ್ಡ, ಬೇರೆ ಬೇರೆ ಗಾತ್ರದ ಎಲ್ಲ  ಗಣಪತಿಗಳನ್ನು ವಿಸರ್ಜನೆಗಾಗಿ ಕೆರೆಗೆ  ಬೃಹತ್ ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ.  ಇದಕ್ಕಾಗಿ ಎರಡು […]

ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆ

ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆ

ಇತಿಹಾಸ ; ಹೊ.ವೆ.ಶೇಷಾದ್ರಿ - 4 Comments
Issue Date :

ಇಂದಿಗೊಂದು ಕೈದೀವಿಗೆ – ಆ ಅಮರಗಾಥೆ ! ಶ್ರೀ ಹೊ.ವೆ. ಶೇಷಾದ್ರಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆಯನ್ನು ಸಾರವತ್ತಾಗಿ ಕಣ್ಣಿಗೆ ಕಟ್ಟಿಸಬಲ್ಲ ಒಂದು ಶಬ್ದ ಇದೆ: ‘ ಸ್ವರಾಜ್ಯ ಸಂಸ್ಥಾಪನೆ ! ‘ ಸ್ವರಾಜ್ಯ ಸಂಸ್ಥಾಪಕ ‘ – ಇದೇ ಶ್ರೀ ಶಿವಛತ್ರಪತಿಗೆ ಒಪ್ಪುವ ಎಲ್ಲಕ್ಕಿಂತ ಯಥಾರ್ಥವಾದ ಬಿರುದು. ಇಲ್ಲಿ ‘ಸ್ವರಾಜ್ಯ’ ಎನ್ನುವ 20 ನೆಯ ಶತಮಾನದ ಶಬ್ದವನ್ನು 17ನೆಯ ಶತಮಾನದ ಒಬ್ಬ ರಾಜನಿಗೆ ಅನ್ವಯಿಸುವುದು ಎಷ್ಟರ ಮಟ್ಟಿಗೆ ಸರಿ ? ‘ಸ್ವರಾಜ್ಯ ನನ್ನ […]