ಋಣಾತ್ಮಕ ಚಿಂತನೆಯಿಂದ ದೂರವಿರೋಣ

ಋಣಾತ್ಮಕ ಚಿಂತನೆಯಿಂದ ದೂರವಿರೋಣ

ಮಹಿಳೆ - 0 Comment
Issue Date : 18.04.2016

ಸುರೇಖಾ ಒಬ್ಬ ಗೃಹಿಣಿ. ಪತಿ, ಒಬ್ಬ ಮಗ, ಮಗಳ ಪುಟ್ಟ ಕುಟುಂಬ ಅವರದು. ಬೆಂಗಳೂರಿನಂಥ ಪ್ರಸಿದ್ಧ ನಗರದಲ್ಲಿ ಪುಟ್ಟದೊಂದು ಸ್ವಂತ ಮನೆ, ಕಾರು ಭವಿಷ್ಯಕ್ಕೆ ಬೇಕಾಗುವಷ್ಟು ಉಳಿತಾಯ… ಒಟ್ಟಿನಲ್ಲಿ ಸುಖೀ ಜೀವನಕ್ಕೆ ಏನೆಲ್ಲ ಬೇಕೋ ಎಲ್ಲವೂ ಇದೆ. ಮಕ್ಕಳೂ ಸದ್ಗುಣಿಗಳು, ಓದುವುದರಲ್ಲೂ ಮುಂದೆ. ದಿನ ಬೆಳಗ್ಗೆ ಪತಿಗೆ, ಮಕ್ಕಳಿಗೆ ತಿಂಡಿ ಮಾಡಿ, ಮಧ್ಯಾಹ್ನಕ್ಕೆ ಊಟಕ್ಕೊಂದಷ್ಟು ಕಟ್ಟಿಕೊಟ್ಟರೆ ಸಂಜೆಯವರೆಗೂ ಸುರೇಖಾ ವಿಶ್ರಾಂತಿ ತೆಗೆದುಕೊಳ್ಳಬಹುದು. ಅಥವಾ ಆಕೆಗೆ ಆಸಕ್ತಿ ಇರುವ ಯಾವುದಾದರೂ ಕೆಲಸ ಮಾಡಬಹುದು. ಆದರೆ ಬೆಳಗ್ಗೆಯಿಂದ ಸಂಜೆಯವರೆಗೂ ಸುರೇಖಾ […]

ಚಿಕ್ಕವರೆದುರಲ್ಲಿ ದೊಡ್ಡವರಾಗಬೇಕೇ?

ಚಿಕ್ಕವರೆದುರಲ್ಲಿ ದೊಡ್ಡವರಾಗಬೇಕೇ?

ಮಹಿಳೆ - 0 Comment
Issue Date : 09.04.2016

ಸುಶೀಲಾ ಒಬ್ಬ ಗೃಹಿಣಿ. ಪತಿ ಬಹುರಾಷ್ಟ್ರೀಯ ಕಂಪೆನಿಯೊಂದರ ನೌಕರ. ಬೆಂಗಳೂರಿನಂಥ ಮಹಾನಗರದಲ್ಲಿ ಸಂಸಾರ ಸಾಗಿಸಲು ಎಷ್ಟು ಹಣವಿದ್ದರೂ ಕಡಿಮೆಯೇ. ಆದ್ದರಿಂದ ಪತಿ ಸದಾ ತನ್ನ ವೃತ್ತಿಯಲ್ಲಿ ಬೆಳವಣಿಗೆ ಹೊಂದಿವುದರ ಬಗ್ಗೆ ಯೋಚಿಸುತ್ತಾನೆ. ಇತ್ತ ಮಕ್ಕಳು ಮತ್ತು ಹೆಂಡತಿಗೆ ಸಮಯ ನೀಡುವುದಕ್ಕೆ ಆತನ ಬಳಿ ಸಾಧ್ಯವಾಗುತ್ತಿಲ್ಲ. ಆದರೂ ಸಿಗುವ ಅಲ್ಪ ಸಮಯದಲ್ಲೇ ಪತ್ನಿ ಮತ್ತು ಮಕ್ಕಳೊಂದಿಗೆ ಖುಷಿಯಾಗಿರಲು ಪ್ರಯತ್ನಿಸುತ್ತಾನಾದರೂ ಅವರೇ ಆತನಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೇನೋ ಎಂದು ಆತನಿಗೆ ಹಲವು ಬಾರಿ ಅನ್ನಿಸುತ್ತದೆ. ಆದರೆ ಆ ಬಗ್ಗೆ ಸಿಕ್ಕಾಬಟ್ಟೆ ತಲೆಕೆಡಿಸಿಕೊಳ್ಳುವಷ್ಟು […]

ಕಾಡುವ ನೀರ್ಜಾ

ಕಾಡುವ ನೀರ್ಜಾ

ಮಹಿಳೆ - 0 Comment
Issue Date : 08.03.2016

ನೀರ್ಜಾ ಬ್ಯಾನಟ್ ಹೆಸರು ಈಗ ಅಪರಿಚಿತವಾಗಿ ಉಳಿದಿಲ್ಲ. ರಾಮ್ ಮಾಧ್ವಾನಿ ನಿರ್ದೇಶನದ ಸೋನಂ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ನೀರ್ಜಾ ಚಿತ್ರ ಬಿಡುಗಡೆಯಾದ ಮೇಲೆಯೇ ನೀರ್ಜಾ ಎಂಬ ಧೈರ್ಯವಂತ ಮಹಿಳೆಯೊಬ್ಬಳ ನೈಜಕತೆ ನಮಗೆಲ್ಲ ತಿಳಿದಿದ್ದು. ಅದೊಂದು ಚಿತ್ರ ಬರದಿದ್ದರೆ ಅತೀ ಕಿರಿಯ ವಯಸ್ಸಿನಲ್ಲಿ ಮರಣೋತ್ತರ ಅಶೋಕ ಚಕ್ರ ಪಡೆದ ಆ ಧೀರೆಯ ಹೆಸರು ನಮಗ್ಯಾರಿಗೂ ಪರಿಚಯವೇ ಆಗುತ್ತಿರಲಿಲ್ಲವೇನೋ! ಸೆ.5, 1986ರಲ್ಲಿ ಪಾಕಿಸ್ಥಾನದ ಕರಾಚಿಯಲ್ಲಿ ವಿಮಾನವೊಂದು ಹೈಜಾಕ್ ಆದಾಗ ಗಗನಸಖಿ ನೀರ್ಜಾ ತನ್ನ ಜೀವವನ್ನೂ ಒತ್ತೆಯಿಟ್ಟು 360 ಜನ […]

ನಮ್ಮ ಆಯ್ಕೆ ಯಾವುದು?

ನಮ್ಮ ಆಯ್ಕೆ ಯಾವುದು?

ಮಹಿಳೆ - 0 Comment
Issue Date : 22.02.2016

ಮೊನ್ನೆ ಮೊನ್ನೆ ಸಿಯಾಚಿನ್ನಿನ ಹಿಮದಡಿಯಲ್ಲಿ ಸಿಲುಕಿಯೂ ಪ್ರಾಣ ಉಳಿಸಿಕೊಂಡು ಬಂದಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರ ಕುರಿತ ಸುದ್ದಿಯನ್ನು ಉಸಿರು ಬಿಗಿ ಹಿಡಿದೇ ಕೇಳುತ್ತಿದ್ದ ಭಾರತೀಯರೆಲ್ಲ ಪ್ರತಿಕ್ಷಣ ಪ್ರಾರ್ಥಿಸಿದ್ದು, ದೇವರೇ ಅವರನ್ನು ಬದುಕಿಸಪ್ಪ ಎಂದೇ. ಆದರೆ ಆತ ಬದುಕಲಿಲ್ಲ. ನಮ್ಮ ಪ್ರಾಣವನ್ನು ಕೊಟ್ಟು ಮತ್ತೊಬ್ಬರ ಪ್ರಾಣ ಉಳಿಸುವುದಾದರೆ ಅವರಿಗೆ ನಾನೇ ಪ್ರಾಣ ನೀಡಲು ಸಿದ್ಧ ಎನ್ನುವ ಮಾತುಗಳು ಹಲವರ ಬಾಯಲ್ಲಿ ಬಂದಿದ್ದು ಸತ್ಯ. ಅದೇನು ಉದ್ವೇಗದ ಮಾತಾಗಿರಲಿಲ್ಲ. ನೈಜ ದೇಶಭಕ್ತನೊಬ್ಬನ ಬಗೆಗಿನ ಗೌರವದ ಭಾವ ಆ ಮಾತಲ್ಲಿ […]

ಮಹಿಳೆಯರು ಪರಿವರ್ತನೆಯ ಹರಿಕಾರರು...

ಮಹಿಳೆಯರು ಪರಿವರ್ತನೆಯ ಹರಿಕಾರರು…

ಮಹಿಳೆ - 0 Comment
Issue Date : 16.02.2016

ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಕರಣವೊಂದು ವಿಚಾರಣೆಗೆ ಬಂದಿತ್ತು. ರಿಚಾ ಶರ್ಮ ಎಂಬ ಪೊಲೀಸ್ ಅಧಿಕಾರಿಗೆ ವಯಸ್ಸು ಹೆಚ್ಚಾಗಿರುವ ಕಾರಣ ಅವರನ್ನು ಡೆಪ್ಯುಟಿ ಸೂಪರಿಂಟೆಂಡೆಂಟ್ ಹುದ್ದೆಗೆ ಆರಿಸಲು ಛತ್ತೀಸ್‌ಗಢ ಸರ್ಕಾರ ಒಪ್ಪದಿದ್ದ ಕಾರಣ ಆಕೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವಿಚಾರಣೆಯನ್ನು ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಆಕೆಯನ್ನು ಉನ್ನತ ಹುದ್ದೆಗೆ ನೇಮಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತು. ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದ ಮಾತುಗಳು ಉಲ್ಲೇಖನೀಯ. ಭಾರತೀಯ ಮಹಿಳೆಯರು ಪರಿವರ್ತನೆಯ ಹರಿಕಾರರು ಎಂಬ ಮಾತನ್ನು ಇದೇ ಸಂದರ್ಭದಲ್ಲಿ ನ್ಯಾಯಾಲಯ […]

ವಿಧವೆಯರ ಸಮ್ಮುಖದಲ್ಲಿ ಮದುವೆ!

ವಿಧವೆಯರ ಸಮ್ಮುಖದಲ್ಲಿ ಮದುವೆ!

ಮಹಿಳೆ - 0 Comment
Issue Date : 06.02.2016

ಅಜ್ಜಿ, ಮುಂದಿನ ವಾರ ನನ್ ಮದ್ವೆ. ಆಶೀರ್ವಾದ ಮಾಡಿ ಎನ್ನುತ್ತ ಅವರ ಕಾಲಿಗೆ ನಮಸ್ಕರಿಸಿದೆ. ನಾ ನಿನ್ನ ನೋಡುವಾಗ ಎಷ್ಟು ಪುಟ್ಟ ಹುಡುಗಿ ಆಗಿದ್ದೆ, ಈಗ ಮದ್ವೆ ಆಗೋ ಎತ್ತರಕ್ಕೆ ಬೆಳದಿದ್ದೀಯಾ… ಚೆನ್ನಾಗಿ ಬಾಳ್ರಮ್ಮ ಇಬ್ರೂ. ದೇವ್ರ ಒಳ್ಳೇದು ಮಾಡ್ಲಿ… ಎನ್ನುತ್ತ ತುಂಬು ಮನಸ್ಸಿನಿಂದ ಆಶೀರ್ವದಿಸಿ, ನನ್ನ ತಲೆಯ ಮೇಲೆ ತಮ್ಮ ಎರಡೂ ಕೈ ಇಟ್ಟರು ಅಜ್ಜಿ. ನಮಸ್ಕರಿಸಿ ಆಮಂತ್ರಣ ನೀಡುವುದಕ್ಕೆಂದು ಮುಂದಾಗುತ್ತಲೇ ಅಮ್ಮ ಏನೋ ಹೇಳುವುದಕ್ಕೆ ತಡೆದರು. ಅಷ್ಟರಲ್ಲಿ ಅಜ್ಜಿಯೇ, ಇದನ್ನ ನಾನು ತಗೋಳೋ ಹಾಗಿಲ್ಲಮ್ಮ. […]

ನನ್ನೊಳಗಿನ ಯೋಚನೆ ನನ್ನೇ ಸುಡುವ ಬಗೆ!

ನನ್ನೊಳಗಿನ ಯೋಚನೆ ನನ್ನೇ ಸುಡುವ ಬಗೆ!

ಮಹಿಳೆ - 0 Comment
Issue Date : 12.02.2016

ಹಲವರಿಗೆ ಅದೊಂದು ಅಭ್ಯಾಸ. ಯಾವುದೇ ವ್ಯಕ್ತಿಯನ್ನೇ ನೋಡಲಿ, ಅವನೊಳಗಿನ ಋಣಾತ್ಮಕ ಅಂಶವನ್ನೇ ಪತ್ತೆ ಮಾಡಿ ಅವನನ್ನು ತೆಗಳುವುದು. ಹೀಗೆ ಮತ್ತೊಬ್ಬರಲ್ಲಿ ಋಣಾತ್ಮಕವಾದದ್ದನ್ನೇ ಹುಡುಕುವವರು ತಮ್ಮೊಳಗೆ ತಾವು ಸಂತೃಪ್ತರೇ ಎಂದರೆ ಖಂಡಿತಕ್ಕೂ ಇಲ್ಲ. ಮತ್ತೊಬ್ಬರಲ್ಲಿ ಋಣಾತ್ಮಕವಾದದ್ದನ್ನೇ ಹುಡುಕುವ ಅಭ್ಯಾಸ ಮೊದ ಮೊದಲು ಮೋಜು ಅನ್ನಿಸಿದರೂ ಕ್ರಮೇಣ ಅದೇ ಚಟವಾಗುತ್ತದೆ. ಇದರಿಂದಾಗಿ ಹಾಗೆ ಯೋಚಿಸುವವರ ನೆಮ್ಮದಿ ಮಾತ್ರವಲ್ಲದೆ, ಅಂಥ ವ್ಯಕ್ತಿಗಳಿರುವ ಪರಿಸರವೇ ನೆಮ್ಮದಿ ಕಳೆದುಕೊಂಡಿರುವಂತಾಗುತ್ತದೆ. ಯಾವುದೋ ಒಬ್ಬ ಹುಡುಗಿ ನೋಡುವುದಕ್ಕೆ ಚೆನ್ನಾಗಿದ್ದಾಳೆ, ವಿದ್ಯಾವಂತೆ, ಬುದ್ಧಿವಂತೆ, ಎಲ್ಲರೂ ಇಷ್ಟಪಡುವಂಥ ಸ್ವಭಾವ. ಆಕೆಯನ್ನು […]

ಅಜ್ಜಿ ಎಂಬ ಆದರ್ಶ ಶಿಕ್ಷಕಿ

ಅಜ್ಜಿ ಎಂಬ ಆದರ್ಶ ಶಿಕ್ಷಕಿ

ಮಹಿಳೆ - 0 Comment
Issue Date : 04.02.2016

ಅಜ್ಜಿ ಎಂಬ ಪಾತ್ರಕ್ಕೆ ಪ್ರತಿಯೊಬ್ಬರ ಬದುಕಲ್ಲೂ ಮಹತ್ವದ ಸ್ಥಾನವಿದೆ. ಅಜ್ಜಿಯ ಗರಡಿಯಲ್ಲಿ ಪಳಗುವ ಅದೃಷ್ಟ ಸಿಕ್ಕವರು ಬದುಕಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ ಎಂಬಷ್ಟರ ಮಟ್ಟಿಗೆ ಅಜ್ಜಿ ಕಲಿಸುವ ಶಿಕ್ಷಣದ ಮೇಲೆ ಎಲ್ಲಿಲ್ಲದ ವಿಶ್ವಾಸ. ಅಜ್ಜಿ ಏನು ಎಲ್ಲವನ್ನೂ ಮಾತಿನಲ್ಲಿ ಹೇಳಿಯೇ ಕಲಿಸಿದವಳಲ್ಲ. ಕೆಲವೊಂದು ಆದರ್ಶವನ್ನು ತನ್ನ ವರ್ತನೆಯ ಮೂಲಕ ತೋರಿಸಿಕೊಟ್ಟಿದ್ದಾಳೆ. ಆಕೆ ಮಾಡುವ ಪ್ರತಿಯೊಂದು ಕೆಲಸವನ್ನೂ ಗಮನ ಕೊಟ್ಟು ನೋಡುತ್ತಿದ್ದರೆ ನಮ್ಮೊಳಗೂ ಆಕೆಯ ಆದರ್ಶ ತಾನೇ ತಾನಾಗಿ ಮೈಗೂಡುವಂತೆ ಅಜ್ಜಿ ನಿಗಾವಹಿಸಿದ್ದಾಳೆ. ಎಲ್ಲವನ್ನೂ ಬಾಯಿಮಾತಿನಲ್ಲಿ ಹೇಳಿಯೇ ಕಲಿಸಬೇಕೆಂದಿಲ್ಲ ಎಂಬುದನ್ನು […]

ಏಕಿಷ್ಟು ಇಂಗ್ಲಿಷ್‍ ವ್ಯಾಮೋಹ?

ಏಕಿಷ್ಟು ಇಂಗ್ಲಿಷ್‍ ವ್ಯಾಮೋಹ?

ಮಹಿಳೆ - 0 Comment
Issue Date : 28.01.2016

ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲದಲ್ಲಿಯಾಗಲೀ, ಅದರ ನಂತರದ ಆಸುಪಾಸಿನಲ್ಲಾಗಲೀ ನಮ್ಮ ದೇಶದಲ್ಲಿ ಇಂಗ್ಲೀಷ್ ವ್ಯಾಮೋಹ ಇಷ್ಟು ಇರಲೇ ಇಲ್ಲ. ನಾವು ಶಾಲೆಯಲ್ಲಿ ಓದುತ್ತಿದ್ದ ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಹೆಚ್ಚು ಮಕ್ಕಳು ಇರುತ್ತಿದ್ದರು. ಕನ್ನಡದಲ್ಲಿ ಓದಿದ ಮಕ್ಕಳು ಈಗ ವಿದೇಶಗಳಲ್ಲಿ ದೊಡ್ಡ ಹುದ್ದೆಗಳಲ್ಲಿಯೂ ಇದ್ದಾರೆ. ಇತ್ತೀಚೆಗೆ ಒಂದು ರೀತಿಯ ಅಂಟುಜಾಡ್ಯದಂತೆ ಈ ವ್ಯಾಮೋಹ ಹರಡುತ್ತಿರುವುದನ್ನು ಕಾಣುತ್ತೇವೆ. ಹಳ್ಳಿಯಿಂದ ಡೆಲ್ಲಿಯವರೆಗೆ ಇದಕ್ಕೆ ತುತ್ತಾಗದವರೇ ವಿರಳ. ಕೆಲವು ಉದಾಹರಣೆಗಳು ನಮ್ಮನ್ನು ಚಕಿತರನ್ನಾಗಿ ಮಾಡುತ್ತವೆ. ನಮ್ಮೂರಿನ ನಾರಾಯಣರಾಯರು ಹಳ್ಳಿಯಿಂದ ಬೆಂಗಳೂರಿನ ಮಗನ ಮನೆಗೆ […]

ಬದುಕು ಬದಲಿಸಿದ ಮೊಬೈಲ್‍

ಬದುಕು ಬದಲಿಸಿದ ಮೊಬೈಲ್‍

ಮಹಿಳೆ - 0 Comment
Issue Date : 20.01.2016

ಆಧುನಿಕ ಉಪಕರಣಗಳು ಮನುಷ್ಯನನ್ನು ಸೋಮಾರಿಯನ್ನಾಗಿ ಮಾಡುತ್ತಿವೆ ಎಂಬ ಕೂಗು ಎಲ್ಲೆಲ್ಲೂ ಕೇಳಿಬರುತ್ತಿದೆ. ಮನುಷ್ಯನ ಅನುಕೂಲಕ್ಕೆಂದು ತಯಾರಾದ ಉಪಕರಣಗಳು ಎಷ್ಟೋ ಸಂದರ್ಭದಲ್ಲಿ ಮನುಷ್ಯನಿಗೇ ಅಪಕಾರಿಯಾಗಿವೆ. ಅವುಗಳಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್‌ಗಳದ್ದು ಅಗ್ರಸ್ಥಾನ. ನಿಜಕ್ಕೂ ಆ ಉಪಕರಣಗಳೇ ಮನುಷ್ಯನಿಗೆ ಹಾನಿ ಮಾಡಿವೆಯೇ? ಅಥವಾ ಅವುಗಳ ಉಪಯೋಗದಲ್ಲಿ ಮನುಷ್ಯನೇ ಎಡವಿದ್ದಾನೋ ಎಂಬ ಚರ್ಚೆ ಏಳುತ್ತದೆ. ಒಳ್ಳೆಯದಕ್ಕೆ ಬಳಸಿಕೊಂಡರೆ ಪ್ರತಿಯೊಂದೂ ಒಳಿತನ್ನೇ ಮಾಡುತ್ತದೆ ಎಂಬುದಕ್ಕೆ ತಂತ್ರಜ್ಞಾನವೂ ಹೊರತಾಗಿಲ್ಲ. ಇದಕ್ಕೊಂದು ಉತ್ತಮ ನಿದರ್ಶನ ತಮಿಳು ನಾಡಿನ 1300 ಮಹಿಳೆಯರು. ಪ್ರತಿಯೊಬ್ಬರಿಗೂ ಸ್ಮಾರ್ಟ್ ಫೋನ್ ಅತ್ಯವಶ್ಯಕ […]