ಸ್ವದೇಶವೇ ಚೆನ್ನ

ಸ್ವದೇಶವೇ ಚೆನ್ನ

ಮಹಿಳೆ - 0 Comment
Issue Date : 14.01.2016

ಅವ್ಯಕ್ತ ಸಂಕಟದಲ್ಲೇ ಅಪ್ಪ-ಅಮ್ಮನ ಮುಖ ನೋಡುತ್ತಿದ್ದಾಳೆ ದಿಶಾ. ಅಪ್ಪ-ಅಮ್ಮನ ಕಣ್ಣಲ್ಲೂ ನೀರು. ಮತ್ತೆ ಯಾವತ್ತು ಮಗಳನ್ನು ನೋಡುತ್ತೀವೋ ಎಂಬ ಬೇಸರದಲ್ಲೇ ಇಬ್ಬರೂ ಆಕೆಯತ್ತ ಕೈಬೀಸಿದ್ದಾರೆ. ಪತಿಯೊಂದಿಗೆ ವಿದೇಶಕ್ಕೆ ಹೊರಟ ಮಗಳ ಬಗ್ಗೆ ಒಂದು ಕಡೆ ಹೆಮ್ಮೆ, ಬಿಟ್ಟಿರಬೇಕಲ್ಲ ಎಂಬ ಆತಂಕ ಇನ್ನೊಂದು ಕಡೆ. ಮಗಳ ಮನಸ್ಸಲ್ಲೂ ಇದೇ ಹೊಯ್ದಾಟ. ಇತ್ತೀಚೆಗಂತೂ ವಿದೇಶದಲ್ಲಿರುವ ಹುಡುಗನನ್ನು ಮದುವೆಯಾಗುವುದು ಫ್ಯಾಷನ್ ಎಂಬಂತಾಗಿದೆ. ಅದರಿಂದಾಗಿ ತಮ್ಮ ಘನತೆಯೂ ಹೆಚ್ಚುತ್ತದೆ ಎಂಬ ಭಾವನೆ ವಧುವಿನ ತಂದೆ-ತಾಯಿಗಳಲ್ಲೂ ಇದೆ. ಮದುವೆಯಾದ ಹೊಸತರಲ್ಲಿ ಹಾಗೆ ಗಂಡನೊಂದಿಗೆ ವಿದೇಶಕ್ಕೆ […]

ಸಂಕ್ರಾಂತಿ ಬಂತು ನಾಡಿಗೆ...

ಸಂಕ್ರಾಂತಿ ಬಂತು ನಾಡಿಗೆ…

ಮಹಿಳೆ - 0 Comment
Issue Date : 05.01.2016

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ನಮಗೆ ಇಡೀ ವರ್ಷದ ಸಮಯದಲ್ಲಿ ಬರುವ ವ್ರತವನ್ನು ಆಚರಿಸುವಾಗ ಭಕ್ತಿ, ಶ್ರದ್ಧೆ, ಸಂತೋಷದಿಂದ ಮನೆಯವರು, ಬಂಧು ಬಾಂಧವರು, ಆತ್ಮೀಯರು, ಹಿತೈಷಿಗಳು ಒಟ್ಟು ಸೇರಿ ಸುಖ ಸಂತೋಷಗಳನ್ನು ಪಡೆಯುತ್ತಾರೆ. ಮನಸ್ಸಿನಲ್ಲಿ ಶಾಂತಿ, ತೃಪ್ತಿ, ಧನ್ಯತೆಯನ್ನು ಪಡೆಯುತ್ತಾರೆ. ಹಿಂದೂ ಪಂಚಾಂಗದನ್ವಯ ವರ್ಷದ ಅವಧಿಯನ್ನು ತಿಂಗಳುಗಳನ್ನಾಗಿಯೂ, ತಿಂಗಳುಗಳನ್ನು ಋತುಗಳನ್ನಾಗಿಯೂ ವಿಂಗಡಿಸಿದ್ದಾರೆ. ಮಾಸಗಳು ಹನ್ನೆರಡು, ಋತುಗಳು ಆರು. ಚೈತ್ರ ವೈಶಾಖ ವಸಂತ ಋತು, ಜೇಷ್ಠ ಆಶಾಢ ಗ್ರೀಷ್ಮ ಋತು, ಶ್ರಾವಣ ಭಾದ್ರಪದ […]

ಶವ ಸಂಸ್ಕಾರದಲ್ಲಿ ಚಿತ್ರ – ವಿಚಿತ್ರಗಳು

ಮಹಿಳೆ - 0 Comment
Issue Date : 02.01.2016

ಪುರಂದರ ದಾಸರ ಹಾಡೊಂದು ಹೀಗಿದೆ. ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ ಶಾಸನವ ಬರೆಸಿ ಬಿನ್ನಣದಿ ಮನೆಕಟ್ಟಿ ಕೋಟೆಕೊತ್ತಳವಿಕ್ಕಿ ಚೆನ್ನಿಗನ ಅಸುವಳಿಯೆ ಹೊರಗೆ ಹಾಕುವರು ದೇಹಕ್ಕೂ, ಶವಕ್ಕೂ, ಸಿಗುವ ಮನ್ನಣೆಗಳೇ ಬೇರೆ, ಬೇರೆ. ಜಾತಸ್ಯ ಮರಣಂ ಧೃವಂ, ಗರ್ಭದಿಂದ ಗೋರಿಯವರೆಗೂ ಈ ವ್ಯವಹಾರ, ಈ ಜೀವನ ನಶ್ವರ, ನೀರಮೇಲಣ ಗುಳ್ಳೆ ಈ ಸಂಸಾರ – ಈ ಎಲ್ಲಾ ಪ್ರಸಿದ್ಧ ನಾಣ್ಣುಡಿಗಳೆಲ್ಲವೂ ಸಾವನ್ನು ಕುರಿತದ್ದೇ ಆಗಿದೆ. ಮರಣದ ನಂತರ ಪ್ರಾಣ ಹೋಗುತ್ತದೆ. ಉಸಿರು ನಿಲ್ಲುತ್ತದೆ. ಆಗ ದೇಹ ಶವವಾಗುತ್ತದೆ. […]

ಇವರೇ ನಿಜವಾದ ಸಮಾಜಸೇವಕರು

ಇವರೇ ನಿಜವಾದ ಸಮಾಜಸೇವಕರು

ಮಹಿಳೆ - 0 Comment
Issue Date : 25.12.2015

ನಮ್ಮದು ಮಧ್ಯಮವರ್ಗದವರೇ ಹೆಚ್ಚಾಗಿ ವಾಸಿಸುವ ಬಡಾವಣೆ. ಹೆಚ್ಚಿನ ಏರುಪೇರುಗಳಿಲ್ಲದ ಜೀವನ ಎಲ್ಲರದೂ. ಅವರವರ ಪಾಡಿಗೆ ನಿಯಮಿತವಾಗಿ ಕಾಲ ಕಳೆಯುವ ವಿಧಾನಗಳನ್ನು ರೂಪಿಸಿಕೊಂಡು ಕಾಲ ಕಳೆಯುತ್ತಾರೆಯೇ ಹೊರತು, ಇನ್ನೊಬ್ಬರ ವಿಷಯಕ್ಕೆ ತಲೆಹಾಕುವುದಿಲ್ಲ ಇಂತಹ ಸಮಾಜದಲ್ಲಿ ಸದ್ದುಗದ್ದಲವಿಲ್ಲದೆ, ಪ್ರಶಸ್ತಿ ಪುರಾವೆಗಳಿಲ್ಲದೆ ಜೀವನವನ್ನು ಸೇವೆಯಾಗಿ ಮಾರ್ಪಡಿಸಿಕೊಂಡವರು ಕೆಲವರಿದ್ದಾರೆ. ಅವರಿಗೆ ಇದು ತಮ್ಮ ಜೀವನೋಪಾಯವೆಂಬ ಭಾವನೆಯಿದೆಯೇ ಹೊರತು ತಮ್ಮಿಂದ ಆಗುತ್ತಿರುವ ಅನುಕೂಲಗಳ ಬಗ್ಗೆ ಹೆಮ್ಮೆಯೇನೂ ಇಲ್ಲ. ಇಂಥ ನಾಲ್ಕಾರು ಮಂದಿಯ ಚಿತ್ರ ಇಲ್ಲಿದೆ. ಬೆಳಗಿನ ಜಾವಕ್ಕೇ ಬಂದು ಮನೆಯ ಮುಂದೆ ರಸ್ತೆಯನ್ನೆಲ್ಲ ಗುಡಿಸುವ […]

ಅಸಹಿಷ್ಣುತೆಯ ಅನುಭವ ನನಗೆ ಎಂದಿಗೂ ಆಗಿಲ್ಲ

ಅಸಹಿಷ್ಣುತೆಯ ಅನುಭವ ನನಗೆ ಎಂದಿಗೂ ಆಗಿಲ್ಲ

ಮಹಿಳೆ - 0 Comment
Issue Date : 10.12.2015

ಮುಸ್ಲಿಂ ವೈದ್ಯೆ ಡಾ. ಸೋಫಿಯಾ ಅಂತರಂಗದ ನುಡಿ ಕಳೆದ ಒಂದೆರಡು ತಿಂಗಳಿಂದ ಭಾರತದಲ್ಲಿ  ಅಸಹಿಷ್ಣುತೆಯ  ವಾತಾವರಣ ಇದೆ ಎಂಬ ಪೊಳ್ಳು ಸೃಷ್ಟಿ ಆಗುತ್ತಲೇ ಇರುವ ಸಂದರ್ಭದಲ್ಲಿ, ಭಾರತದಲ್ಲೇ ನೆಲೆಸಿ ಉದ್ಯೋಗವನ್ನೂ ಮಾಡುತ್ತಿರುವ  ಓರ್ವ ಮುಸ್ಲಿಂ ಮಹಿಳೆಯಾಗಿ ನನ್ನ ನಿಲುವು ತಿಳಿಸುವುದಕ್ಕೆ ಇಚ್ಛಿಸುತ್ತೇನೆ. ಇದನ್ನು ಬರೆಯಬೇಕೆಂದು ಕೆಲ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಈಗ ಆ ಪೊಳ್ಳು ಸೃಷ್ಟಿಯ ಜಲಪ್ರಳಯವು ತಲೆ ಮುಳುಗುವಷ್ಟು ನೀರುಕ್ಕಿಸಿದೆ ಎಂದು ಅನಿಸುತ್ತಿರುವುದರಿಂದ ಈಗಲೇ ಸೂಕ್ತವೆಂದು ಬರೆದಿದ್ದೇನೆ.  ನಾನೋರ್ವ ಮುಸ್ಲಿಂ ಮಹಿಳೆ. ಬೆಂಗಳೂರಿನಲ್ಲಿ ಸ್ವಂತ ಸುಸಜ್ಜಿತ ಕ್ಲಿನಿಕ್ ಇಟ್ಟುಕೊಂಡು […]

ಮಗಳೇಕೆ ಮದುವೆಗೆ ಹಿಂಜರಿಯುತ್ತಾಳೆ?

ಮಗಳೇಕೆ ಮದುವೆಗೆ ಹಿಂಜರಿಯುತ್ತಾಳೆ?

ಮಹಿಳೆ - 0 Comment
Issue Date : 10.12.2015

ಭಾರತೀಯರು ಪರದೇಶಿಗಳಿಗಿಂತ ವಿಭಿನ್ನವಾಗಿ ಕಾಣಲು ಕಾರಣವೇನು? ನಮಗಿರುವ ಆ ವಿಭಿನ್ನತೆಯಾದರೂ ಯಾವುದು? ನಮ್ಮ ಸಮಾಜದ ಶಕ್ತಿ ಎಂದು ನಾವು ನಂಬಿರುವುದೇನನ್ನು? ಹೀಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡರೆ ಸಿಗುವ ಉತ್ತರ ಒಂದೇ. ಅದು ಮದುವೆ. ಒಂದು ಮಂಗಲಕರ ಮೈತ್ರಿ. ಸ್ವರ್ಗದಲ್ಲಿ ನಿಶ್ಚಯವಾಗುವ ಸಂಬಂಧ. ಸಮಾಜ ಬದುಕಿನ ಮುಖ್ಯ ಅಂಗ. ಕೌಟುಂಬಿಕ ಜೀವನದ ಬೇರು. ಸಂಸ್ಕೃತಿಯ ಜೀವಾಳ. ಯಾವ ದೇಶದಲ್ಲಿ ಅದಕ್ಕೆ ಮಹತ್ವ ಇಲ್ಲವೋ ಅದನ್ನು ಮನಗಂಡು ಪರಂಪರೆಯನ್ನು ಗಟ್ಟಿಗೊಳಿಸಿಕೊಂಡ ಶ್ರೇಷ್ಠ ಪರಂಪರೆ ಭಾರತದ್ದು. ವಿವಾಹ […]

ತುಳಸಿ : ಇವಳು ಕೃಷ್ಣನರಸಿ

ತುಳಸಿ : ಇವಳು ಕೃಷ್ಣನರಸಿ

ಮಹಿಳೆ - 0 Comment
Issue Date : 03.12.2015

ನಮೋ ತುಳಸೀ ಕಲ್ಯಾಣೀ ನಮೋ ವಿಷ್ಣುಪ್ರಿಯೇ ಶುಭೇನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ ಪ್ರದಾಯಿನೀ॥ ಭಾರತೀು ಪರಂಪರೆಯಲ್ಲಿ ತುಳಸಿಯು ಅತಿ ಪವಿತ್ರವಾದ ದೇವತಾ ಗಿಡವೆಂಬ ಮನ್ನಣೆಯನ್ನು ಪಡೆದುಕೊಂಡಿದೆ. ನಮ್ಮ ಸಂಸ್ಕೃತಿಯಲ್ಲಿ ಬಹುದೇವತಾರಾಧನೆಗಳ ಜೊತೆಗೆ ಪ್ರಕೃತಿ ಆರಾಧನೆಯೂ ಹಾಸುಹೊಕ್ಕಾಗಿದೆ. ತುಳಸಿಯು ಧಾರ್ಮಿಕ ವಿಶೇಷತೆಯೊಂದಿಗೆ ಪರಿಸರದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಇದರ ಬೇರು, ಕಾಂಡ, ದಳ, ಬೀಜ, ಕಡ್ಡಿ ಎಲ್ಲವೂ ಪ್ರಯೋಜನಕಾರಿ. ಪೌರಾಣಿಕ, ಪ್ರಾಕೃತಿಕ ಮತ್ತು ಔಷಧೀಯ ಮಹತ್ವವನ್ನು ಪಡೆದಿರುವ ಗಿಡವಿದು. ಸಂಸ್ಕೃತದಲ್ಲಿ ವೈಷ್ಣವೀ, ವೃಂದಾ, ಸುಗಂಧಾ, ಗಂಧಹಾರಿಣೀ, ಅಮೃತಾ, ಪತ್ರಪುಷ್ಪ ಪವಿತ್ರಾ, […]

ಮಕ್ಕಳ ಮಮತೆಯ ಮಾವ ಮಂಗೇಶರಾಯರು

ಮಕ್ಕಳ ಮಮತೆಯ ಮಾವ ಮಂಗೇಶರಾಯರು

ಮಹಿಳೆ - 0 Comment
Issue Date : 28.11.2015

ಬಾಲ್ಯವೆಂದರೆ ಅತ್ಯಂತ ನಿರ್ಮಲ ಸ್ಥಿತಿಯಲ್ಲಿರುವ ಮಕ್ಕಳ ಮನಸ್ಸು ಅರಳುವ ಕಾಲ. ತಾವು ನೋಡುವ, ಕೇಳುವ, ಮತ್ತು ಕಲಿಯುವ ವಿಷಯಗಳನ್ನು ನೇರವಾಗಿ ಮನಸ್ಸಿಗೆ ತಂದುಕೊಂಡು ಅವುಗಳನ್ನು ನೆನಪಿನಾಳದಲ್ಲಿ ಇರಿಸಿಕೊಳ್ಳುವ ಕಾಲ. ಚಿಕ್ಕ ಮಕ್ಕಳ ಕಲಿಕೆಯ ವಿಧಾನಗಳು, ಮಾರ್ಗದರ್ಶಕ ಅಂಶಗಳು, ಕಲಿಯುವ ವಿಷಯಗಳು ಮುಂತಾದವುಗಳು ಅವರ ಮುಂದಿನ ಎಲ್ಲಾ ರೀತಿಯ ಬೌದ್ಧಿಕ ಚಟುವಟಿಕೆಗಳಿಗೆ ಮೂಲಾಧಾರವಾದ ಸೂತ್ರಗಳಾಗುತ್ತವೆ. ನವೋದಯ ಸಾಹಿತ್ಯದ ಪ್ರವರ್ತಕ ಪಂಜೆ ಮಂಗೇಶರಾಯರು ಮಕ್ಕಳ ಪದ್ಯಗಳ ರಚನಾಕಾರರೂ ಆಗಿದ್ದರು. ಮಕ್ಕಳ ಮನಸ್ಸಿನ ಎಳೆ ಎಳೆಯನ್ನು ಸೂಕ್ಷ್ಮವಾಗಿ ಬಲ್ಲವರಾಗಿದ್ದರು. ಕ್ರಿಯಾಶೀಲರಾದ ಮಕ್ಕಳಿಗೆ ನುಡಿಗಿಂತ […]

ಎಲ್ಲೆಲ್ಲೂ ಮಹಿಳಾ ದನಿ!

ಎಲ್ಲೆಲ್ಲೂ ಮಹಿಳಾ ದನಿ!

ಮಹಿಳೆ - 0 Comment
Issue Date : 03.11.2015

ಯಾವುದಾದರೂ ದೇಶಕ್ಕೆ ಮಹಿಳೆ ಅಧ್ಯಕ್ಷಳಾಗಿಯೋ, ಪ್ರಧಾನಿ ಯಾಗಿಯೋ ಆಯ್ಕೆಯಾದರೆ ಅದನ್ನು ಸಹಜ ಸುದ್ದಿ ಎಂಬಂತೆ ಯಾರೂ ನೋಡುವುದಿಲ್ಲ. ಮಾಧ್ಯಮಗಳೂ ಅದನ್ನು ಕೊಂಚ  ಹೈಲೈಟ್ ಮಾಡುತ್ತವೆ. ಸಹೋದ್ಯೋಗಿಗಳ ಮತ್ಸರದ ಜೊತೆಯಲ್ಲೇ ಸಹಸ್ರಾರು ಜನರ ಮೆಚ್ಚುಗೆಯೂ ಅಂಥವರ ಬತ್ತಳಿಕೆಯನ್ನು ಸೇರುತ್ತದೆ. ಜಗತ್ತು ಎಷ್ಟೇ ಮುಂದುವರಿದರೂ ಮಹಿಳೆಯರ ಸಾಧನೆಯನ್ನು ಪ್ರತ್ಯೇಕವಾಗಿಯೇ ಗುರುತಿ ಸುವುದಕ್ಕೆ, ಅದನ್ನು ಅಸಾಧಾರಣ ಎಂಬಂತೆ ಬಿಂಬಿಸುವುದಕ್ಕೆ ಸಕಾರಣವಿದೆ. ಮೊನ್ನೆ ಮೊನ್ನೆ ನೇಪಾಳದ ಮೊದಲ ರಾಷ್ಟ್ರಪತಿಯಾಗಿ ವಿದ್ಯಾದೇವಿ ಪಾಟೀಲ್ ಆಯ್ಕೆಯಾದಾಗಲೂ ಅಲ್ಲಿನ ಮಾಧ್ಯಮಗಳು ಮತ್ತು ಇಡೀ ದೇಶದ ಮಹಿಳೆಯರೂ ಸಂತಸಪಟ್ಟರು. […]

ಬದುಕು ಬದಲಿಸಿದ ಅಂತರ್ಜಾಲ

ಬದುಕು ಬದಲಿಸಿದ ಅಂತರ್ಜಾಲ

ಮಹಿಳೆ - 0 Comment
Issue Date : 30.10.2015

ಅಂತರ್ಜಾಲ ಎಂದೊಡನೆ ನಮ್ಮ ಮನಸ್ಸಿನಲ್ಲಿ ಋಣಾತ್ಮಕ ಭಾವನೆ ಮೂಡುವುದೇ ಹೆಚ್ಚು. ಈ ತಲೆಮಾರಿನ ಅತಿಅವಶ್ಯಗಳ ಪಟ್ಟಿಗೆ ಸೇರಿರುವ ಅಂತರ್ಜಾಲ ಮಾಹಿತಿಯ ಕಣಜವಾಗಿರುವ ಜೊತೆಯಲ್ಲೇ ಹಲವರ ಬದುಕನ್ನೂ ಬಲಿತೆಗೆದುಕೊಂಡ ಖಳನಾಯಕನೂ ಆಗಿದೆ. ಎಲ್ಲ ತಂತ್ರಜ್ಞಾನವೂ ಉತ್ತಮ ಉದ್ದೇಶ ವನ್ನಿಟ್ಟುಕೊಂಡೇ ಹುಟ್ಟಿಕೊಳ್ಳುತ್ತದೆ. ಆದರೆ ಅದನ್ನು ದುರ್ಬಳಕೆ ಮಾಡಿಕೊಳ್ಳುವ ಮನುಷ್ಯನ ಸ್ವಭಾವದಿಂದಾಗಿ ಹಲವು ತಂತ್ರಜ್ಞಾನ ಗಳು ಕುಖ್ಯಾತಿ ಪಡೆಯುವಂತಾಗಿದೆ. ಇದಕ್ಕೆ ಅಂತರ್ಜಾಲವೂ ಹೊರತಲ್ಲ. ನಗರ ಪ್ರದೇಶದ ಜನರಲ್ಲಿ ಅಂತರ್ಜಾಲದ ಉಪಯೋಗವೇನು ಹೊಸತಲ್ಲ. ಇತ್ತೀಚೆಗೆ ಗ್ರಾಮೀಣ ಪ್ರದೇಶದ ಜನರು ಸಹ ಅಂತರ್ಜಾಲದ ಬಳಕೆಯನ್ನು ಮಾಡಬಲ್ಲವರಾಗಿದ್ದಾರೆ. […]