ಮೌನ ಕೊನೆಗೂ ಮಾತಾಯ್ತು....

ಮೌನ ಕೊನೆಗೂ ಮಾತಾಯ್ತು….

ಮಹಿಳೆ - 0 Comment
Issue Date : 15.10.2015

   – ಸುಭೇಂದು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಗೋಪಿಪುರ ಎಂಬ ಹಳ್ಳಿ. ಅಲ್ಲಿನ ಪುರುಷರಿಗೆ ಮಹಿಳೆಯರೆಂದರೆ ತಾತ್ಸಾರ ಭಾವ. ಮನೆಕೆಲಸ, ಮನೆಜನರ ಆರೈಕೆ ಬಿಟ್ಟರೆ ಮಹಿಳೆಯರಿಗೆ ಬೇರೆ ಜ್ಞಾನವಿಲ್ಲ ಎಂಬ ಭಾವ ಅವರದು. ಸುತ್ತಮುತ್ತಲ ಎಷ್ಟೋ ಹಳ್ಳಿಗಳು ಅಕ್ಷರ ಜ್ಞಾನ ಪಡೆದು ಮುಂದುವರಿದರೂ ಇಲ್ಲಿನ ಪುರುಷರಿಗೆ ಮಾತ್ರ ಮಹಿಳೆಯರಿಗೆ ಅಗತ್ಯ ಹಕ್ಕು ನೀಡುವ ಯೋಚನೆ ಎಂದಿಗೂ ಬಂದಿರಲಿಲ್ಲ. ಪುರುಷರಿಗೆ ಅಧಿನವಾಗಿರಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದುಕೊಂಡೇ ಅಲ್ಲಿನ ಮಹಿಳೆಯರೆಲ್ಲ ಬದುಕುತ್ತಿದ್ದರು. ಊರಿನ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ವಿಷಯ ಮಾತನಾಡಬೇಕೆಂದರೂ […]

ಸಾವನ್ನು ಗೆದ್ದವಳು!

ಸಾವನ್ನು ಗೆದ್ದವಳು!

ಮಹಿಳೆ - 0 Comment
Issue Date : 13.10.2015

ಮಗು ಹುಟ್ಟಿದೊಡನೆ ಸಂತಸ ಪಡುವ ಅದೃಷ್ಟ ಆ ತಂದೆ – ತಾಯಿ ಗಳಿಗಿರಲಿಲ್ಲ. ಏಕೆಂದರೆ ಆಕೆ ಹುಟ್ಟುತ್ತಲೇ ಹೃದಯದಲ್ಲೊಂದು ರಂಧ್ರವನ್ನು ಹೊಂದಿದ್ದಳು. ಅಷ್ಟೇ ಅಲ್ಲ ಶ್ವಾಸಕೋಶದ ಅಪ್ರಾಪ್ತ ಬೆಳವಣಿಗೆ, ಪಾರ್ಶವಾಯುವಿನ ಸಮಸ್ಯೆಗೂ ತುತ್ತಾಗಿದ್ದ ಈ ಹೆಣ್ಣು ಮಗುವಿಗೆ ವೈದ್ಯರು ನೀಡಿದ ಗಡುವು 100 ಗಂಟೆ ಮಾತ್ರ! ಮುದ್ದಾದ ಮಗು ಹುಟ್ಟುವ ಮೊದಲೇ ಅಲ್ಪಾಯುಷ್ಯದ ಹಣೆಪಟ್ಟಿ ಕಟ್ಟಿಕೊಂಡು ಬಂದಿದ್ದರ ಬಗ್ಗೆ ಅಪ್ಪ-ಅಮ್ಮಂಗೆ ಹೇಳತೀರದ ನೋವು. ಇನ್ನೆಷ್ಟು ಹೊತ್ತ್ತು ಬದುಕಲಾರಳು ಎಂಬುದು ಗೊತ್ತಿದ್ದರೂ ಆಕೆಯನ್ನು ಆರೈಕೆ ಮಾಡುವಲ್ಲಿ ಪಾಲಕರು ಹಿಂದೆ […]

ಅತ್ತೆಯೇ ಅಮ್ಮನಾಗಿ....

ಅತ್ತೆಯೇ ಅಮ್ಮನಾಗಿ….

ಮಹಿಳೆ - 0 Comment
Issue Date : 08.10.2015

ನೀನು ನನ್ನ ಸೊಸೆಯಲ್ಲ, ಮಗಳು…ಅತ್ತೆ ನನ್ನ ನೋಡಿದ ದಿನವೇ ಆಡಿದ ಆ ಮಾತು ಮನಸ್ಸಲ್ಲಿ ಹೆಚ್ಚೇನೂ ಸಂತಸ ಮೂಡಿಸಲಿಲ್ಲ. ಪರಿಚಯವಾಗುವ ಹೊಸತರಲ್ಲಿ ಎಲ್ಲರೂ ಹೀಗೆಯೇ ಎಂದು ಉಪೇಕ್ಷೆಯ ಭಾವದಲ್ಲೇ ಹಲುಬಿತ್ತು ಮನಸ್ಸು. ನಮಗೆ ಇರೋನು ಒಬ್ಬನೇ ಮಗ, ನೀನು ಚೆನ್ನಾಗಿ ನೋಡ್ಕೋಬೇಕಮ್ಮ ಎಂದು ಕಣ್ಣಲ್ಲಿ ಅಕ್ಕರೆ ತುಂಬಿ ಭಾವಿ ಅತ್ತೆ ಹೇಳುತ್ತಿದ್ದ ಮಾತಿಗೆ ಸುಮ್ಮನೇ ಗೋಣಲ್ಲಾಡಿಸುತ್ತಿದ್ದೆ. ಮೊದ ಮೊದಲು ಅತ್ತೆ ಮತ್ತು ನನ್ನ ನಡುವೆ ಹೆಚ್ಚೇನೂ ಮಾತುಕತೆಯಿಲ್ಲದೆ ಅವರನ್ನು ತೀರಾ ಆಪ್ತವಾಗಿ ನೋಡುವ ಪ್ರಮೇಯ ಹುಟ್ಟಲಿಲ್ಲ.  ಪದೇ […]

ಆಕೆಯ ಹೋರಾಟ ನಿರಂತರ

ಆಕೆಯ ಹೋರಾಟ ನಿರಂತರ

ಮಹಿಳೆ - 0 Comment
Issue Date : 22.09.2015

ಹಿಂಸೆ ಕೆಲವರ ಮನೋಭಾವವೇ ಆಗಿಬಿಟ್ಟಿರುತ್ತದೆ. ಇಂದಿನ ಕಾಲ ದಲ್ಲೂ ಹಲವು ಮನೆಗಳಲ್ಲಿ ಹೆಂಗಸರಿಗೆ ಕಿರುಕುಳ ನೀಡಿ, ಮಾನಸಿಕ – ದೈಹಿಕ ಹಿಂಸೆಗೆ ಗುರಿಮಾಡುವ ಮನಸ್ಥಿತಿ ಉಳಿದುಕೊಂಡಿದೆ ಎಂದರೆ ಅಚ್ಚರಿ ಯಾಗಬಹುದು. ಶಿಕ್ಷಣ, ಕಾನೂನು ಎಲ್ಲವೂ ಇದ್ದೂ ನಿರಂತರವಾಗಿ ಹಿಂಸೆಯನ್ನು ಅನುಭವಿಸುತ್ತಲೇ ಇರುವ ಹಲವು ಹೆಂಗಸರಿದ್ದಾರೆ.  ಪತ್ನಿ ಎಂದರೆ ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು, ಆಕೆಗೆ ಅವಳದೇ ಆದ ಆಸೆಗಳಿರಬಾರದು, ಇದ್ದರೂ ಅವನ್ನೆಲ್ಲ ತನಗೋಸ್ಕರ ಮರೆತುಬಿಡಬೇಕು. ತಾನು ನಿಲ್ಲು ಎಂದರೆ ನಿಲ್ಲಬೇಕು, ಕೂರು ಎಂದರೆ ಕೂರಬೇಕು. ಒಟ್ಟಿನಲ್ಲಿ ಆಕೆ […]

ದುರ್ಗಾದೇವಿ - ಸನ್ಮಾರ್ಗದರ್ಶಕಿ

ದುರ್ಗಾದೇವಿ – ಸನ್ಮಾರ್ಗದರ್ಶಕಿ

ಮಹಿಳೆ - 0 Comment
Issue Date : 16.09.2015

ದಯಾರೂಪೇ ದಯಾದೃಷ್ಟೇ ದಯಾರ್ದ್ರೇ ದುಃಖಮೋಚನೀ ಸರ್ವಾಪತ್ತಾರಿಕೇ ದುರ್ಗೇ ಜಗದ್ಧಾತ್ರಿ ನಮೋಸ್ತುತೇ                                                               – ಜಗದ್ಧಾತ್ರಿ ಕಲ್ಪ ಹೇ ದುರ್ಗಾದೇವಿ, ನೀನು ದಯಾಸ್ವರೂಪಳು, ದಯಾದೃಷ್ಟಿಯುಳ್ಳವಳು, ದಯಾರ್ದ್ರ ಹೃದಯಳು, ದುಃಖವನ್ನು ನಾಶ ಮಾಡುವವಳು, ಸಮಸ್ತ ಆಪತ್ತುಗಳಿಂದಲೂ ಸಂರಕ್ಷಿಸುವವಳು ನೀನು; ಹೇ ಜಗದ್ಧಾತ್ರಿ […]

ಬಾರಮ್ಮ ಗೌರಿ, ಮಂಗಳಗೌರಿ

ಬಾರಮ್ಮ ಗೌರಿ, ಮಂಗಳಗೌರಿ

ಮಹಿಳೆ - 0 Comment
Issue Date : 12.09.2015

-ಪದ್ಮಾಮೂರ್ತಿ ಹರಿನ್ವಿತಾಮಿಂದು ಮುಖಿಂ ಸರ್ವಾಭರಣ ಭೂಷಿತಾ| ಮಿಮಲಾಗೀಂ ವಿಶಾಲಾಕ್ಷೇಂ ಚಿಂತಯಾಮಿ ಸತೀಂ ಶಿದಾಂ | ‘ಶಿವನೊಂದಿಗೆ ಇರುವವಳೂ, ಎಲ್ಲಾ ರೀತಿಯ ಆಭರಣಗಳನ್ನು ತೊಟ್ಟು ಕಂಗೊಳಿಸುತ್ತಿರುವಳೂ, ಶುದ್ಧವಾದ ಅವಯವಗಳಿಂದ ಕೂಡಿರುವವಳೂ, ವಿಶಾಲವಾದ ಕಣ್ಣುಗಳುಳ್ಳವಳೂ ಆದ ಆ ಶಿವನ ಪತ್ನಿಯಾದ ಗೌರಿ ದೇವಿಯನ್ನು ಧ್ಯಾನಿಸುತ್ತಿದ್ದೇನೆ.’ ಭಾದ್ರಪದ ಶುದ್ಧ ತದಿಗೆಯ ದಿವಸ ಆಚರಿಸುವ ಶ್ರೇಷ್ಠ ಹಬ್ಬವೇ ‘ಗೌರಿ ಹಬ್ಬ’ ಅಥವಾ ‘ಸ್ವರ್ಣ ಗೌರಿವ್ರತ’ ಎನ್ನುವುದು. ಸೌಭಾಗ್ಯ ಗೌರಿ, ಸಂಪತ್ ಗೌರಿ, ಮಂಗಳ ಗೌರಿ, ಮೌನ ಗೌರಿ,  ಗಜ ಗೌರಿ ಮುಂತಾದ ವ್ರತಗಳಲ್ಲಿ ಸ್ವರ್ಣ ಗೌರಿ […]

ಬಣ್ಣ ಮೆತ್ತಿಕೊಂಡ ಬದುಕು...!

ಬಣ್ಣ ಮೆತ್ತಿಕೊಂಡ ಬದುಕು…!

ಮಹಿಳೆ - 0 Comment
Issue Date : 31.08.2015

ಹೆಣ್ಣಿಗೂ ಸೌಂದರ್ಯಕ್ಕೂ ಇರುವ ನಂಟು ಇಂದು ನಿನ್ನೆಯದಲ್ಲ. ವ್ಯಕ್ತಿತ್ವ ವಿಕಸನಕ್ಕಿಂತ ಸೌಂದರ್ಯ ಹೆಚ್ಚಿಸಿಕೊಳ್ಳುವುದಕ್ಕೆ ಹರಸಾಹಸ ಪಡುವ ಸಾಕಷ್ಟು ಹೆಂಗಸರಿದ್ದಾರೆ. ಬರುವ ಸಂಬಳವನ್ನೆಲ್ಲ ಸೌಂದರ್ಯ ಪ್ರಸಾಧನ ಕೊಳ್ಳುವುದಕ್ಕೆಂದೇ ಖರ್ಚು ಮಾಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಹೀಗೆ ಪ್ರತಿಕ್ಷಣ ಸೌಂದ ರ್ಯ ಪ್ರಜ್ಞೆಯಿಂದಲೇ ಬದುಕುವವರಲ್ಲಿ ಕೀಳರಿಮೆ ಅಥವಾ ಅಹಂಕಾರ ಇರುತ್ತದೆ ಎಂದು ಕೆಲ ಅಧ್ಯಯನಗಳು ಹೇಳಿವೆ. ಸುಂದರವಾಗಿಲ್ಲ ಎಂಬ ಕೀಳರಿಮೆಯಲ್ಲೇ ಪದೇ ಪದೇ ಕನ್ನಡಿ ನೋಡುವ ಮಹಿಳೆಯರು ಕೆಲವರಾದರೆ, ತಾನೇ ಸುಂದರಿ, ತನಗಿಂತ ಸುಂದರಿಯರಿಲ್ಲವೆಂದು ಇಡೀ ದಿನ ಕನ್ನಡಿ ನೋಡುವವರು ಮತ್ತಷ್ಟು […]

ಬೊಂಬೆಗಳ ದಿಬ್ಬಣ; ಅದನ್ನು ಜೋಡಿಸುವ ಹವಣ

ಬೊಂಬೆಗಳ ದಿಬ್ಬಣ; ಅದನ್ನು ಜೋಡಿಸುವ ಹವಣ

ಮಹಿಳೆ - 0 Comment
Issue Date : 24.08.2015

ಶ್ರಾವಣ – ಭಾದ್ರಪದ ಆಶ್ವಯುಜ ಮಾಸದಲ್ಲಿ ಹಬ್ಬಗಳ ದಿಬ್ಬಣವೇ ಮೇಳೈಸಿರುತ್ತದೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಪ್ರತಿವರ್ಷವೂ ನಿಗದಿಯಾದ ಸಮಯದಲ್ಲಿ ಬರುವ ವ್ರತವನ್ನು ಆಚರಿಸುವಾಗ ಭಕ್ತಿ, ಶ್ರದ್ಧೆ, ಶ್ರಮ, ಸಂತೋಷಗಳಿಂದ ಮನೆಯವರು, ಬಂಧು ಬಾಂಧವರು, ಆತ್ಮೀಯರು, ಹಿತೈಷಿಗಳು ಒಟ್ಟು ಸೇರಿ ಹಬ್ಬವನ್ನು ಆಚರಿಸಿ ಸುಖ ಸಂತೋಷಗಳನ್ನು ಪಡೆಯುತ್ತಾರೆ. ಇದು ಒಂದು ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆ, ಕ್ರಮದಿಂದ ಕೂಡಿರುತ್ತದೆ. ಮನೆಯ ಹೊರಗೆ, ಒಳಗೆ ಶುದ್ಧೀಕರಣ, ತೋರಣ, ರಂಗವಲ್ಲಿ, ಸ್ನಾನ, ಹೊಸಬಟ್ಟೆ ಧಾರಣೆ, […]

ಸ್ವಾತಂತ್ರ್ಯ ಸಮರದಲ್ಲಿ ಗ್ರಾಮೀಣ ಸಾಹಿತ್ಯ ಮತ್ತು ಕಾಯಕ

ಸ್ವಾತಂತ್ರ್ಯ ಸಮರದಲ್ಲಿ ಗ್ರಾಮೀಣ ಸಾಹಿತ್ಯ ಮತ್ತು ಕಾಯಕ

ಮಹಿಳೆ - 0 Comment
Issue Date : 10.08.2015

ಜಯ ಭಾರತ ಮಾತೆಗೆ ಜಯ ವಿಶ್ವ ಚೇತನಕೆ ಜಯತು ಜಯತು ಭಾರತಿ ಜಯತು ಜನ್ಮಭೂಮಿಗೆ ತ್ಯಾಗ ದಾನ ತಪೋಭೂಮಿ ರಾಗರಸದ ಕಲಾಭೂಮಿ ದವಸ ಧಾನ್ಯ ಬೆಳೆವ ಭೂಮಿ ಕಾಯಕ ಕೈಲಾಸ ಭೂಮಿ ಜಯ ಜಯ ಜಯ ಜನಪದ ಸಾಹಿತ್ಯವು, ಸಾಹಿತ್ಯದ ಪ್ರಕಾರಗಳಲ್ಲಿ ಒಂದಾಗಿದೆ. ಇದು ಶ್ರೀಸಾಮಾನ್ಯನ ಅನುಭವದ ಶ್ರೀಮಂತ ಭಂಡಾರ. ಸಹಸ್ರಾರು ವರ್ಷಗಳಿಂದ ಪರಂಪರಾನುಗತವಾಗಿ ಉಳಿದು ಬಂದ ಸಂಸ್ಕೃತಿಯು ಇದು. ಇದರಲ್ಲಿ,  ಜನಜೀವನದ ಸಾಮರಸ್ಯವಿದೆ. ಜನಪದರು ಮುಗ್ಧರು ಹಾಗೂ ಸರಳ ಜೀವಿಗಳು. ನಮ್ಮ ಗ್ರಾಮೀಣ ಜನತೆಯ ಸ್ವಾತಂತ್ರ್ಯ ಮಹಾಸಂಗ್ರಾಮಕ್ಕೆ ಅವರ ಕೊಡುಗೆಯನ್ನು ಅರಿಯುವುದೇ ಈ ಲೇಖನದ ಉದ್ದೇಶ. ಭಾರತದ ಸ್ವಾತಂತ್ರ್ಯವು ಸುಲಭವಾಗಿ […]

ಕೊನೆಗೂ ಶಿಕ್ಷಕಿಯಾದಳು!

ಕೊನೆಗೂ ಶಿಕ್ಷಕಿಯಾದಳು!

ಮಹಿಳೆ - 0 Comment
Issue Date : 06.08.2015

-ಶಾಂತಲಾ ಅಂತರ್ಜಾಲ ಇಂದು ಅತ್ಯವಶ್ಯಕಗಳ ಪಟ್ಟಿಯನ್ನು ಸೇರಿಕೊಂಡಿದೆ. ಅಂತರ್ಜಾಲದ ಮೇಲೆ ಅವಲಂಬಿತವಾಗದೆ ಬದುಕುವುದೆಂದರೆ ಹಲವರಿಗೆ ಸವಾಲೆನಿಸಿದೆ. ಯಾವೊಂದು ಚಿಕ್ಕ ಮಾಹಿತಿ ಬೇಕೆಂದರೂ ಅಂತರ್ಜಾಲದ ಮೊರೆಹೋಗುವ ಮಟ್ಟಿಗೆ ಬಹುತೇಕ ಜನರು ಅಂತರ್ಜಾಲದ ದಾಸರಾಗಿದ್ದಾರೆ. ಶೀಘ್ರವಾಗಿಯೇ ಮಾಹಿತಿ ಸಿಗುವಾಗ ಪುಸ್ತಕಕ್ಕಾಗಿ ಅಲೆದಾಡುವ, ಹುಡುಕುವ ಪ್ರಮೇಯವೇ ಇಲ್ಲ ಎಂಬುದೂ ಒಂದು ಭಾವನೆ. ನಿಧಾನವಾಗಿ ವಿಷಯ ಸಂಗ್ರಹಿಸುವ ತಾಳ್ಮೆಯೂ ಯಾರಲ್ಲೂ ಇಲ್ಲದಿರುವಾಗ ಸುಲಭವಾಗಿಯೇ ಇಷ್ಟೆಲ್ಲ ಮಾಹಿತಿ ಸಿಗುವುದನ್ನು ಬಿಟ್ಟುಬಿಡುವವರ‌್ಯಾರು? ಇಂದಿನ ಮಕ್ಕಳಿಗಂತೂ ಪಠ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂಶಯ ಬಂದರೂ ಮೊದಲು ನೆನಪಾಗುವುದೇ ಅಂತರ್ಜಾಲ. […]