ಚಿಂದಿಯಾಗಿದ್ದವಳು ಮಾಯಿಯಾದಳು!

ಚಿಂದಿಯಾಗಿದ್ದವಳು ಮಾಯಿಯಾದಳು!

ಮಹಿಳೆ - 0 Comment
Issue Date : 05.08.2015

  ಚಿಂದಿ ಆಕೆಯ ಹೆಸರು. ತಂದೆ-ತಾಯಿ ಇಟ್ಟ ಹೆಸರು ಸಿಂಧು ತಾಯಿ ಸಪ್ಕಾಲ್. ಆದರೆ ಆಕೆಯ ಬದುಕನ್ನು ಕಂಡ ವರೆಲ್ಲ ಆಕೆಯನ್ನು ಕರೆದದ್ದು ‘ಚಿಂದಿ’ ಎಂದೇ. ಅನಿಷ್ಟದ ಮಗುವೆಂಬ ಅನ್ವರ್ಥದೊಂದಿಗೇ ಹುಟ್ಟಿದ ಈ ಹೆಣ್ಮಗಳ ಬಗ್ಗೆ ಹೆತ್ತ ತಾಯಿಗೇ ತಾತ್ಸಾರ. ಹೆತ್ತಮ್ಮನ ತಿರಸ್ಕಾರದ ನೋಟ ತಂದೆಗೆ ಆಕೆಯ ಬಗೆಗಿದ್ದ ಅಲ್ಪ-ಸ್ವಲ್ಪ ಪ್ರೀತಿಯನ್ನೂ ಹೆಚ್ಚು ದಿನ ಉಳಿಯಗೊಡಲಿಲ್ಲ. 10ನೇ ವರ್ಷಕ್ಕೆ ತನಗಿಂತ 20 ವರ್ಷ ದೊಡ್ಡ ವರನನ್ನು ವರಿಸಿದ ಚಿಂದಿಯ ಬದುಕು ಅಕ್ಷರಶಃ ಚಿಂದಿಯೇ. ಪತಿಗೆ ಪತ್ನಿಯ ಮೇಲೆ […]

ಹೀಗೊಂದು ಔದ್ಯೋಗಿಕ ಕ್ರಾಂತಿ !

ಹೀಗೊಂದು ಔದ್ಯೋಗಿಕ ಕ್ರಾಂತಿ !

ಮಹಿಳೆ - 0 Comment
Issue Date : 28.07.2015

  ಬೊಳ್ಳಂ ರೇಣುಕಾ ಎಂಬ ಹುಡುಗಿ ಜೀವನ ಪ್ರೀತಿಯ ಆಗರ. ಶಾಲೆಗೆ ಹೋಗಲಿ, ಮನೆಯಲ್ಲಿರಲಿ ಪ್ರತಿಯೊಂದನ್ನೂ ಸಂಭ್ರಮಿಸುವ, ತುಂಬು ಉತ್ಸಾಹದಿಂದಲೇ ಕಲಿಕೆಯಲ್ಲಿ ತೊಡಗುವ ವ್ಯಕ್ತಿ ಆಕೆ. ಆದರೆ ದೈಹಿಕ ನ್ಯೂನತೆ ಆಕೆಯನ್ನು ಹಲವು ಅವಕಾಶಗಳಿಂದ ವಂಚಿತಳನ್ನಾಗಿ ಮಾಡಿತ್ತು. ಓದುವುದರಲ್ಲಿ ಮುಂದಿದ್ದರೂ, ಉತ್ತಮ ಕೆಲಸ ಪಡೆಯಬಲ್ಲ ಸಾಮರ್ಥ್ಯವಿದ್ದರೂ ಆಕೆಯ ದೈಹಿಕ ನ್ಯೂನತೆ ಈ ಎಲ್ಲಕ್ಕೂ ಹಲವು ಬಾರಿ ಅಡ್ಡಿಯಾಗಿತ್ತು. ಓದು ಮುಗಿಸಿ ಕೆಲಸಕ್ಕೆಂದು ಹುಡುಕುವಾಗ ಆಕೆ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ.  ತನ್ನಲ್ಲಿ ದೈಹಿಕ ನ್ಯೂನತೆೆಯನ್ನು ಸೃಷ್ಟಿಸಿದ ದೇವರ ಮೇಲೆ […]

ಬಾನೆತ್ತರದಲ್ಲಿದ್ದೇವೆ ನಾವು!

ಬಾನೆತ್ತರದಲ್ಲಿದ್ದೇವೆ ನಾವು!

ಮಹಿಳೆ - 0 Comment
Issue Date : 15.07.2015

ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಪುರುಷನಷ್ಟೇ ಸಮಾನ ಅವಕಾಶ ನೀಡಬೇಕು ಎಂಬ ಮಾತನ್ನು ಹಲವರ ಬಾಯಲ್ಲಿ ಕೇಳಿದ್ದೇವೆ. ಆದರೆ ವಾಸ್ತವ ಬೇರೆಯೇ. ಇಂದಿಗೂ ಭಾರತದ ಹಲವು ಸ್ತ್ರೀಯರು ಶಿಕ್ಷಣ, ಸಮಾನತೆ, ಸ್ವಾವಲಂಬನೆಗಾಗಿ ದಿನ ದಿನವೂ ಹೋರಾಡುತ್ತ ಹೈರಾಣಾಗುತ್ತಲೇ ಇದ್ದಾರೆ. ಆದರೆ ಈ ಎಲ್ಲ ಮಾತಿಗೆ ಅಪವಾದ ಎಂಬಂಥ ಸುದ್ದಿಯೊಂದಿದೆ. ಅದರ ಪ್ರಕಾರ ಭಾರತದಲ್ಲಿರುವ 5,050 ಪೈಲೆಟ್‌ಗಳಲ್ಲಿ 600 ಜನ ಪೈಲೆಟ್‌ಗಳು ಮಹಿಳೆಯರು! ವಿಶ್ವದಲ್ಲಿರುವ ಎಲ್ಲ ದೇಶಗಳಿಗಿಂತ ಭಾರತದಲ್ಲೇ ಮಹಿಳಾ ಪೈಲೆಟ್‌ಗಳ ಸಂಖ್ಯೆ ಹೆಚ್ಚಂತೆ. ಇದಕ್ಕೆ ಕಾರಣವೇನೆಂದು ಹುಡುಕಿದಾಗ ಕಂಡುಬಂದ […]

ಸೆಲ್ಫೀ ರವಾನಿಸಿದ ಮಾರ್ಮಿಕ ಸಂದೇಶ

ಸೆಲ್ಫೀ ರವಾನಿಸಿದ ಮಾರ್ಮಿಕ ಸಂದೇಶ

ಮಹಿಳೆ - 0 Comment
Issue Date : 10.07.2015

ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಸೆಲ್ಫಿ ವಿತ್ ಡಾಟರ್‌ನ ಹವಾ ಸೃಷ್ಟಿಯಾಗಿದೆ. ಹೆಣ್ಣು ಮಗುವಿನೊಡನೆ ಸೆಲ್ಫ್ಪಿ ತೆಗೆದುಕೊಂಡು ಸಾಮಾಜಿಕ ಜಾಲತಾಣ ಗಳಲ್ಲಿ ಅದನ್ನು ಅಪ್ಲೋಡ್ ಮಾಡುವ ಈ ಹೊಸ ಉಪಾಯಕ್ಕೆ ನಾಂದಿ ಹಾಡಿದ್ದು ಹರ್ಯಾಣದ ಪುಟ್ಟ ಹಳ್ಳಿಯೊಂದರ ಜಗ್ಲನ್ ಎಂಬ ವ್ಯಕ್ತಿ. ಹರ್ಯಾಣದಲ್ಲಿ ಮೊದಲಿನಿಂದಲೂ ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಪುರುಷರಿಗೆ ಹೋಲಿಸಿದರೆ ಕಡಿಮೆಯೇ ಇರುವುದು ಸೆಲ್ಫಿ ವಿತ್ ಡಾಟರ್ ಯೋಚನೆ ಹುಟ್ಟಿಕೊಳ್ಳು ವುದಕ್ಕೆ ಕಾರಣವಾದ ಅಂಶ. ಮೊದಲ ಬಾರಿಗೆ ಒಂದು ಸ್ಪರ್ಧೆಯೆಂಬಂತೆ ಆರಂಭ ವಾದ ಸೆಲ್ಫಿ […]

ಊರನ್ನೇ ಜಯಿಸಿದ ಜಯಾ!

ಊರನ್ನೇ ಜಯಿಸಿದ ಜಯಾ!

ಮಹಿಳೆ - 0 Comment
Issue Date : 25.06.2015

ಪ್ರವಾಹ ಉಂಟುಮಾಡುವ ನದಿ ಕೂಡ ಪುಟ್ಟ ಹನಿಯಿಂದಲೇ ಆರಂಭವಾಗುತ್ತದೆ ಎಂಬಂತೆ ಸಮಾಜವನ್ನು ಬದಲಿಸಬಲ್ಲ ಕ್ರಾಂತಿ ಕೂಡ ಒಂದು ಚಿಕ್ಕ ನಿಸ್ವಾರ್ಥ ಸೇವೆಯಿಂದಲೇ ಆರಂಭ ವಾಗುತ್ತದೆ. ಅದಕ್ಕೊಂದು ಉತ್ತಮ ನಿದರ್ಶನ ಬಿಹಾರದ ಜಯಾ ದೇವಿ. ಬಿಹಾರದ ಕುಗ್ರಾಮವೆಂದೊಡನೆ ಮನಸ್ಸಿನಲ್ಲಿ ಮೂಡುವ ಚಿತ್ರ – ಅನಕ್ಷರತೆ, ಬಡತನ, ಬಾಲ್ಯ ವಿವಾಹ, ನಿರುದ್ಯೋಗ ಇತ್ಯಾದಿ. ಬಿಹಾರದ ಸರಧಿ ಎಂಬ ಈ ಹಳ್ಳಿ ಈ ಚಿತ್ರಣಕ್ಕೆ ಹೊರತಾಗೇನೂ ಇರಲಿಲ್ಲ. ಅದರಲ್ಲೂ ಬುಡಕಟ್ಟು ಪ್ರದೇಶವಾಗಿದ್ದರಿಂದ ನಕ್ಸಲ್ ಪೀಡಿತ ಪ್ರದೇಶವಾಗಿಯೂ ಗುರುತಾಗಿದ್ದು ಈ ಊರನ್ನು ಸಮಾಜ […]

ಜವಾಬ್ದಾರಿಯನ್ನು ಮರೆಸದಿರಲಿ ಪ್ರೀತಿ...

ಜವಾಬ್ದಾರಿಯನ್ನು ಮರೆಸದಿರಲಿ ಪ್ರೀತಿ…

ಮಹಿಳೆ - 0 Comment
Issue Date :

ಜೂನ್ ಬಂತೆಂದರೆ ಮಕ್ಕಳಿಗೆಲ್ಲ ತಲೆಬಿಸಿ ಶುರು. ಇನ್ನು ಮುಂದೆ ದಿನಾ ಮಣಭಾರದ ಬ್ಯಾಗ್ ಹೊತ್ತುಕೊಂಡು ಶಾಲೆಗೆ ಹೋಗಬೇಕು, ಮನೆಗೆ ಬರುತ್ತಲೇ ಹೋಂ ವರ್ಕ್ ತಲೆಬಿಸಿ ಎಂಬ ಯೋಚನೆಯಲ್ಲಿ ಮೇ ಅಂತ್ಯದ ಹೊತ್ತಲ್ಲೇ ಮಕ್ಕಳು ಮಂಕಾಗಿರುತ್ತವೆ. ಆದರೆ ಕೇವಲ ಮಕ್ಕಳು ಮಾತ್ರವಲ್ಲದೆ, ಇಂದು ಮಕ್ಕಳಿಗಿಂತ ಹೆಚ್ಚು ಅಮ್ಮಂದಿರೇ ತಲೆಬಿಸಿ ಮಾಡಿಕೊಳ್ಳುವುದು ಮಾಮೂಲಾಗಿದೆ. ದಿನವೂ ಬೇಗನೇ ಎದ್ದು ತಿಂಡಿ ಮಾಡಿ, ಮಕ್ಕಳನ್ನು ತಯಾರು ಮಾಡಿ ಕಳಿಸುವ ಹೊತ್ತಿಗೆ ಅಮ್ಮಂದಿರು ಸುಸ್ತೋ ಸುಸ್ತು! ಅಮ್ಮಂದಿರು ಶ್ರಮ ಕಡಿಮೆ ಮಾಡಿಕೊಂಡು, ಮನೆ ಜನರಿಗೆಲ್ಲ […]

ಸಬಲೀಕರಣಕ್ಕೆ ಹೊಸ ಭಾಷ್ಯ

ಸಬಲೀಕರಣಕ್ಕೆ ಹೊಸ ಭಾಷ್ಯ

ಮಹಿಳೆ - 0 Comment
Issue Date : 05.06.2015

ಸುನಯನಾ ಒಬ್ಬ ವಕೀಲೆ. ಕೈತುಂಬ ಸಂಬಳ ಪಡೆವ ವೃತ್ತಿಗಿಂತ ಮನಸ್ಸಿಗೆ ನೆಮ್ಮದಿ, ಬದುಕಿಗೆ ಸಾರ್ಥಕತೆ ನೀಡುವ ಸೇವಾಕಾರ್ಯ ಮಾಡುವುದಕ್ಕೆ ಸದಾ ತುಡಿಯುತ್ತಿದ್ದ ಮಹಿಳೆ. ಜಗಮಗಿಸುವ ಮುಂಬೈನ ಬಣ್ಣದ ಬದುಕಿಗಿಂತ ಗುಜರಾತಿನ ಕುಗ್ರಾಮವೊಂದು ಆಕೆಯನ್ನು ಸೆಳೆದಿದ್ದು ಅಚ್ಚರಿಯೇ. ಕೈತುಂಬ ಸಂಬಳ ನೀಡುವ ವೃತ್ತಿ, ಸ್ವಂತದ್ದೊಂದು ಮನೆ, ಓಡಾಟಕ್ಕೊಂದು ಕಾರು, ಬೇಡಿಕೆಯನ್ನೆಲ್ಲ ಈಡೇರಿಸುವ ಪತಿ… ಇವಿಷ್ಟನ್ನೇ ಗುರಿಯಾಗಿ ಹೊಂದಿರುವ ಬಹುತೇಕ ಮಹಿಳೆಯರಂತೆ ಸುನಯನಾ ಎಂದಿಗೂ ಯೋಚಿಸಲಿಲ್ಲ. ವಿಭಿನ್ನವಾಗಿ ಏನನ್ನಾದರು ಮಾಡಬೇಕು. ಅದರಿಂದ ನಾಲ್ಕೈದು ಜನಕ್ಕಾದರೂ ಬದುಕುವುದಕ್ಕೆ ಸಹಾಯವಾಗಬೇಕು ಎಂಬ ಆಕೆಯ […]

ಬದುಕು ಬದಲಾಯ್ತು...

ಬದುಕು ಬದಲಾಯ್ತು…

ಮಹಿಳೆ - 0 Comment
Issue Date : 29.05.2015

ಕನಸು ದೊಡ್ಡದಾಗಿದ್ದರೆ ಗೆಲುವೂ ದೊಡ್ಡದಾಗಿರುತ್ತದೆ. ಆದರೆ ಕನಸೇ ಚಿಕ್ಕದಾದರೆ ಗೆಲುವಿನ ವ್ಯಾಪ್ತಿ ವಿಸ್ತಾರವಾಗಲಾರದು. ಮೊದಲು ದೊಡ್ಡ ಕನಸನ್ನು ಕಾಣುವುದನ್ನು ರೂಢಿಸಿಕೊಳ್ಳಿ. ಹಾಗೆ ಕನಸು ಕಾಣುವುದನ್ನು ಶಿಕ್ಷಣ ಕಲಿಸಿಕೊಡುತ್ತದೆ… ಇಂಥ ಮಾತುಗಳು ತೀರಾ ಅನಕ್ಷರಸ್ಥ ಜನರನ್ನು ತಕ್ಷಣಕ್ಕೆ ತಟ್ಟಲು ಸಾಧ್ಯವಿಲ್ಲ. ಏಕೆಂದರೆ ಈ ಮಾತಿನ ಅರ್ಥವಾಗಲಿ, ಆಳವಾಗಲಿ, ಅದರ ಉದ್ದೇಶವಾಗಲಿ ಅವರಿಗೆ ಅರ್ಥವಾಗುವುದಕ್ಕೆ ಸ್ವಲ್ಪ ಸಮಯ ಬೇಕು. ಆದರೆ ಓಡಿಶ್ಶಾದ ಮಯೂರ್‌ಭಂಜ್ ಎಂಬ ಬುಡಕಟ್ಟು ಜನರೇ ತುಂಬಿರುವ ಹಳ್ಳಿಯ ಜನರಿಗೆ ಈ ಮಾತನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. […]

ಮಕ್ಕಳಿಂದ ಕುಟುಂಬ ಯೋಜನೆಯ ಪಾಠ!

ಮಕ್ಕಳಿಂದ ಕುಟುಂಬ ಯೋಜನೆಯ ಪಾಠ!

ಮಹಿಳೆ - 0 Comment
Issue Date : 14.05.2015

ಬಿಹಾರ ಎಂದೊಡನೆ ನೆನಪಿಗೆ ಬರುವುದು ಅತಿಯಾದ ಬಡತನ, ಅನಕ್ಷರತೆ, ಜನಸಂಖ್ಯೆ, ಹಿಂಸೆ ಇತ್ಯಾದಿ. ದೇಶದ ಆಗುಹೋಗುಗಳ ಪರಿಚಯವಿಲ್ಲದೆ ಕೂಪ ಮಂಡೂಕಗಳಂತೆ ಅಲ್ಲಿನ ಜನ ಬದುಕುತ್ತಿರುವುದಕ್ಕೆ ಅಲ್ಲಿನ ಸರ್ಕಾರವೇ ಪ್ರಮುಖ ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಅಲ್ಲಿನ ಜನರಿಗೆ ಶಿಕ್ಷಣ, ಉದ್ಯೋಗ ನೀಡುವಂಥ ಯೋಜನೆಗಳನ್ನು ರೂಪಿಸುವಲ್ಲಿ ಅಲ್ಲಿನ ಸರ್ಕಾರಗಳು ವಿಫಲವಾಗುತ್ತಲೇ ಇವೆ. ರಾಜಕಾರಣಿಗಳ ಸ್ವಹಿತಾಸಕ್ತಿಯಿಂದಾಗಿ ಬಿಹಾರ ದಿನೇ ದಿನೇ ಸೊರಗುತ್ತಲೇ ಇದೆ. ಭಾರತದ ಉಳಿದೆಲ್ಲ ರಾಜ್ಯಗಳು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದರೆ ಹಿಂದುಳಿದ ರಾಜ್ಯ ಎಂಬ ಕುಖ್ಯಾತಿಯಲ್ಲೇ ದಿನದೂಡಬೇಕಾದ ಅಸಹಾಯಕತೆ ಬಿಹಾರದ್ದು. […]

ಸಮಾಜದಿಂದ ಸಮಾಧಿಗೆ ಸರಿದ ಸರೋಜಿನಿ

ಸಮಾಜದಿಂದ ಸಮಾಧಿಗೆ ಸರಿದ ಸರೋಜಿನಿ

ಮಹಿಳೆ - 0 Comment
Issue Date : 08.05.2015

 ಧೈರ್ಯ, ಉತ್ಸಾಹ, ಸೇವೆಗಾಗಿ ಹಂಬಲ, ಸಮಯದ ಸದುಪಯೋಗ, ಬಾಳನ್ನು ಸ್ವೀಕರಿಸುವ ಪರಿ – ಎಲ್ಲವನ್ನೂ ಬ್ರಹ್ಮಚಾರಿಣಿಯಾದ ಸರೋಜಿನಿ ಮಹಿಷಿಯವರಿಗೆ ಕಲಿಸಿದ ಗುರು ಮಂಕುತಿಮ್ಮನೆಂದೇ ತೋರುತ್ತದೆ.  ಬಹುಮುಖ ಪ್ರತಿಭೆಯುಳ್ಳವರು ಅಪರೂಪ. ಅಂತಹವರಲ್ಲಿ ಶ್ರೀಮತಿ ಸರೋಜಿನಿ ಮಹಿಷಿಯೂ ಒಬ್ಬರು. ಸಚಿವೆ, ಕಲಾವಿದೆ, ಸಾಹಿತಿ, ವಾಗ್ಮಿ, ಕವಯಿತ್ರಿ, ಸಮಾಜ ಸುಧಾರಕಿ, ಅನುವಾದಕಿ, ಭಾಷಾತಜ್ಞೆ, ಸಂಶೋಧಕಿ, ಸಂಪಾದಕಿ, ಎಲ್ಲಕ್ಕಿಂತ ಮಿಗಿಲಾಗಿ ಕನ್ನಡಿಗರ ಪರ ದನಿಯಾಗಿದ್ದ ಸರೋಜಿನಿಯವರು ಕಾಲಗರ್ಭಕ್ಕೆ ಸೇರಿ ಹೋದರು.  ಸುಂಸಂಕೃತ ಹಿನ್ನೆಲೆಯಿಂದ ಬಂದ ಇವರು ಧಾರವಾಡದ ವಕೀಲ ಬಿಂದುರಾವ್ ಮಹಿಷಿ ಮತ್ತು […]