ಬದುಕಿಗೆ ‘ದಾರಿ’ ಹುಡುಕಿದವರು!

ಬದುಕಿಗೆ ‘ದಾರಿ’ ಹುಡುಕಿದವರು!

ಮಹಿಳೆ - 0 Comment
Issue Date : 01.05.2015

ಕಾಲೋನಿಪಾರ ಎಂಬ ಹೆಸರನ್ನು ಬಹುಪಾಲು ಯಾರೂ ಕೇಳಿರಲಿಕ್ಕಿಲ್ಲ. ಹಾಗೆ ಕೇಳಿರದೆ ಇರುವುದಕ್ಕೆ ಕಾರಣವೂ ಇದೆ. ಏಕೆಂದರೆ ಈ ಹೆಸರಿನ ಹಳ್ಳಿಯೊಂದು ಹೊರಜಗತ್ತಿಗೆ ಪರಿಚಯವಾದ್ದೇ ತೀರಾ ಇತ್ತೀಚೆಗೆ. ಪಶ್ಚಿಮ ಬಂಗಾಳದ ಈ ಚಿಕ್ಕ ಹಳ್ಳಿ ಸುಂದರಬನ್ ಕಾಡಿನಿಂದ 10 ಕಿ.ಮೀ. ದೂರದಲ್ಲಿದೆ. ತೀರಾ ಹಿಂದುಳಿದ ಹಳ್ಳಿಯಾಗಿದ್ದು, ಈ ಹಳ್ಳಿಗೆ ಮೂಲ ಸೌಕರ್ಯಗಳೇ ಇಲ್ಲ. ಶಾಲೆ-ಆಸ್ಪತ್ರೆಗಳಿರಲಿ, ಮತ್ತೊಂದು ಊರಿಗೆ ತೆರಳುವುದಕ್ಕೆ ರಸ್ತೆಯೂ ಇರಲಿಲ್ಲ! ಒಂದೆಡೆ ಜಗತ್ತು ಅನೂಹ್ಯ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದರೆ ಮತ್ತೊಂದೆಡೆಯಲ್ಲಿ ಆರ್ಥಿಕ, ಸಾಮಾಜಿಕವಾಗಿ ತೀರಾ ಹಿಂದುಳಿದ ಹಳ್ಳಿಗಳೂ […]

ಮಾಂಗಲ್ಯ ಗುಲಾಮಗಿರಿಯ ಸಂಕೇತವಂತೆ!

ಮಾಂಗಲ್ಯ ಗುಲಾಮಗಿರಿಯ ಸಂಕೇತವಂತೆ!

ಮಹಿಳೆ - 0 Comment
Issue Date : 28.04.2015

ಅವಮಾನದ ಸಂಕೇತವಾಗಿದ್ದ ತಾಳಿಯನ್ನು ಕಿತ್ತೆಸೆಯುತ್ತಿದ್ದಂತೆಯೇ ಮನಸ್ಸು ನಿರಾಳವಾಯಿತು! ತಮಿಳುನಾಡಿನಲ್ಲಿ ದ್ರಾವಿಡ ಕಳಗಂ ಏರ್ಪಡಿಸಿದ್ದ ತಾಳಿ ಕಿತ್ತೆಸೆಯುವ ವಿಚಿತ್ರ, ಅಸಂಬದ್ಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬಳು ಹೇಳಿದ ಮಾತಿದು. ಮಹಿಳೆಯರು ಪುರುಷನಿಗೆ ಎಲ್ಲ ರೀತಿಯಿಂದಲೂ ಸಮಾನರು. ಆದರೆ ಅದನ್ನು ವ್ಯಕ್ತಪಡಿಸಲು ತಾಳಿಯೊಂದೇ ಅಡ್ಡಿಯಾಗುತ್ತಿತ್ತು. ಆದ್ದರಿಂದ ಅದನ್ನು ಕಿತ್ತೆಸೆದೆವು ಎಂಬ ಅವರ ಮಾತನ್ನು ಕೇಳಿದರೆ ನಗಬೇಕೋ, ಅಳಬೇಕೋ ಎಂಬುದೇ ಅರ್ಥವಾಗದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ಗೋಮಾಂಸ ವನ್ನು ತಿನ್ನುವ ಮೂಲಕ ಅದನ್ನು ನಿಷೇಧಿಸಿರುವ ಮಹಾರಾಷ್ಟ್ರ ಸರ್ಕಾರಕ್ಕೆ ತಿರುಗೇಟು ನೀಡುವ ಉದ್ದೇಶವಿತ್ತು. […]

ಪಾಠವಾಗದಿರಲಿ ಪಾಲಕರ ಬದುಕು!

ಪಾಠವಾಗದಿರಲಿ ಪಾಲಕರ ಬದುಕು!

ಮಹಿಳೆ - 0 Comment
Issue Date : 14.04.2015

ಪತಿ ಪತಿಯಾಗಿರುವುದು ಪತ್ನಿಯ ಮೇಲಿನ ಪ್ರೀತಿಗಾಗಿ ಅಲ್ಲ, ಆಕೆಯ ಆತ್ಮದ ಮೇಲಿನ ಪ್ರೀತಿಗಾಗಿ. ಪತ್ನಿ ಪತ್ನಿಯಾಗಿರುವುದೂ ಪತಿಯ ಮೇಲಿನ ಪ್ರೀತಿಗಾಗಿ ಅಲ್ಲ. ಆತನ ಆತ್ಮದ ಮೇಲಿನ ಪ್ರೀತಿಗಾಗಿ ಎಂಬ ಸಾಲು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುತ್ತದೆ. ಅಂದರೆ ಇಂದೋ, ನಾಳೆಯೋ ಕೊನೆಯಾಗುವ ದೇಹವನ್ನು ಪ್ರೀತಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಆ ಪ್ರೀತಿಯಲ್ಲಿ ವ್ಯಾಮೋಹವಿದೆ, ವಿಷಯ ಸುಖಗಳ ಬಗೆಗಿನ ಸೆಳೆತವಿದೆ. ಆದರೆ ಚೈತನ್ಯ ಸ್ವರೂಪಿಯಾದ ಆತ್ಮನನ್ನು ಪ್ರೀತಿಸುವುದೇ ನಿಜವಾದ ಪ್ರೀತಿ. ಅದು ಕೊನೆತನಕ ಬಾಳುತ್ತದೆ. ಪ್ರಾಪಂಚಿಕ ಸುಖಗಳೆಲ್ಲ ಅಳಿದ ಮೇಲೂ […]

ನನ್ಣ ಆಯ್ಕೆ ಸ್ವೇಚ್ಛಾಚಾರವಾಗಬಾರದಲ್ಲವೇ?

ನನ್ಣ ಆಯ್ಕೆ ಸ್ವೇಚ್ಛಾಚಾರವಾಗಬಾರದಲ್ಲವೇ?

ಮಹಿಳೆ - 0 Comment
Issue Date : 13.04.2015

ನನ್ನ ದೇಹ, ನನ್ನ ಮನಸ್ಸು… ನನ್ನ ಆಯ್ಕೆ. ನಾನಿಷ್ಟಪಟ್ಟ ಬಟ್ಟೆಯನ್ನು ತೊಡುವುದು, ಅಥವಾ ಏನನ್ನೂ ತೊಟ್ಟುಕೊಳ್ಳದಿರುವುದು ಎಲ್ಲವೂ ನನ್ನ ಆಯ್ಕೆ… ಮದುವೆಯಾಗುವುದು, ಬಿಡುವುದು, ಮದುವೆಗೆ ಮೊದಲೇ ಲೈಂಗಿಕ ಸಂಬಂಧ ಹೊಂದುವುದು, ಮದುವೆಯಾದ ಮೇಲೂ ಪರಪುರುಷನೊಡನೆ ಸಂಬಂಧವಿಟ್ಟುಕೊಳ್ಳುವುದು ಎಲ್ಲವೂ ನನ್ನ ಆಯ್ಕೆ. ಕಾಲಹರಣಕ್ಕಾಗಿ ಪ್ರೀತಿಸುವುದು ಅಥವಾ ಶಾಶ್ವತವಾಗಿ ಪ್ರೀತಿಸುವುದು ಎಲ್ಲವೂ ನನ್ನ ಆಯ್ಕೆ. ಹಣೆಯ ಮೇಲೆ ಸಿಂಧೂರ, ಬೆರಳಿಗೆ ಉಂಗುರ ಧರಿಸುವುದು, ನನ್ನ ಹೆಸರಿನೊಂದಿಗೆ ನಿನ್ನ ಅಡ್ಡಹೆಸರನ್ನು ಸೇರಿಸಿಕೊಳ್ಳುವುದು ಅಥವಾ ಬಿಡುವುದು ಎಲ್ಲವೂ ನನ್ನ ಆಯ್ಕೆ… ಎಲ್ಲ ದಿಕ್ಕಿನಿಂದಲೂ […]

ಸೇವೆಯಲ್ಲೇ ಸಾರ್ಥಕತೆ

ಸೇವೆಯಲ್ಲೇ ಸಾರ್ಥಕತೆ

ಮಹಿಳೆ - 0 Comment
Issue Date : 06.04.2015

ಮನುಷ್ಯ ಆರೋಗ್ಯಕರವಾಗಿ ಬದುಕುವುದಕ್ಕೆ ಮುಖ್ಯವಾಗಿ ಬೇಕಿರುವುದು ಸ್ವಚ್ಛತೆ. ಆದರೆ ಇಂದು ಹಲವರಿಗೆ ಸ್ವಚ್ಛತೆಯ ಅರಿವಿಲ್ಲ. ಇಂದಿಗೂ ಗ್ರಾಮೀಣ ಪ್ರದೇಶದ ಹಲವು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಸಹ ಇಲ್ಲ. ಭಾರತದ ಅಭಿವೃದ್ಧಿಯ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಿರುವ ಸಂಗತಿಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವಿಲ್ಲದ್ದೂ, ಇದೇ ಕಾರಣಕ್ಕಾಗಿ ಹಲವಾರು ರೋಗಗಳನ್ನು ಬರಮಾಡಿಕೊಳ್ಳುತ್ತಿರುವುದೂ ಒಂದು ಕಾರಣ. ಎಷ್ಟೋ ಹಳ್ಳಿಗಳಲ್ಲಿ ಅನುಕೂಲವಿದ್ದರೂ ಬೇಕೆಂದೇ ಶೌಚಾಲಯಗಳನ್ನು ಕಟ್ಟಿಸದವರನ್ನು ಕಾಣಬಹುದು. ಆರೋಗ್ಯದ ಬಗೆಗಿನ ಇಂಥ ನಿಷ್ಕಾಳಜಿಯಿಂದಾಗಿ ಇಂದು ಹಲವು ಮಾರಣಾಂತಿಕ ಕಾಯಿಲೆಗಳು ನಮ್ಮನ್ನು ಸುತ್ತುತ್ತಿವೆ. ಎಳೆ ವಯಸ್ಸಿನಲ್ಲೇ ಹಲವು […]

ಸಂಬಂಧ ಮುರಿಯುವವರಿದ್ದಾರೆ ಜೋಕೆ!

ಮಹಿಳೆ - 0 Comment
Issue Date : 17.03.2015

-ಶಶಿಕಲಾ ಹುಡುಗಂಗೆ ಅಮ್ಮ ಇದ್ದಾಳಂತಾ..? ಹಾಗಾದ್ರೆ ಹುಷಾರಮ್ಮ… ಮದುವೆಗೂ ಮೊದಲು ಹಲವರು ಹುಡುಗಿಗೆ ನೀಡುವ ಎಚ್ಚರಿಕೆ ಇದು. ಅತ್ತೆಯಲ್ಲಿ ಮತ್ತೊಬ್ಬ ಅಮ್ಮನನ್ನು ನೋಡುವ ಆಕೆಯ ಯೋಚನೆಯನ್ನು ಇಂಥ ನಕಾರಾತ್ಮಕ ಮಾತುಗಳು ಮಸುಕು ಮಾಡಿಬಿಡುತ್ತವೆ. ಇಷ್ಟು ದಿನ ‘ಅತ್ತೆ’ ಎಂಬ ವ್ಯಕ್ತಿತ್ವದ ಬಗ್ಗೆ ಇಲ್ಲದ ಭಯ, ಆತಂಕ ಇದ್ದಕ್ಕಿದ್ದಂತೆ ಹುಟ್ಟಿಕೊಂಡು ಎದುರಾಗಬಹುದಾದ ದುರಂತಕ್ಕೆ ಅದಾಗಲೇ ಸಜ್ಜಾಗುವುದಕ್ಕೆ ತೊಡಗುತ್ತಾಳೆ. ಅತ್ತೆಯೊಂದಿಗೆ ಇಂತಿಷ್ಟೇ ಅಂತರ ಕಾಯ್ದುಕೊಳ್ಳಬೇಕು, ಹೀಗೇ ಇರಬೇಕು, ಕೆಲವು ವಿಷಯಗಳಲ್ಲಿ ನಿಷ್ಠುರವಾಗಲೇಬೇಕು ಎಂಬಿತ್ಯಾದಿ ಭಾವನೆಗಳನ್ನೇ ಗಟ್ಟಿ ಮಾಡಿ ಕೊಳ್ಳತೊಡಗುತ್ತಾಳೆ. ಅತ್ತೆ […]

ಅಮ್ಮಂದಿರ ಆದ್ಯ ಕರ್ತವ್ಯ

ಮಹಿಳೆ - 0 Comment
Issue Date : 16.03.2015

-ಪದ್ಮಾಮುರ್ತಿ, ಅರಸೀಕೆರೆ ಮಗಳಿಗೆ ಮದುವೆ ಗೊತ್ತಾದರೆ ಹೆಚ್ಚು ಸಂಭ್ರಮ – ಸಂತೋಷ ಪಡುವವಳು ತಾಯಿ. ಆದರೆ ಮದುವೆ ಹತ್ತಿರ ಬರುತ್ತಿದ್ದಂತೆ ಆತಂಕ ಮತ್ತು ದುಃಖಿಸುವವಳೂ ತಾಯಿಯೇ. ಮುಖದಲ್ಲಿ ಬೇಸರ – ಚಿಂತೆ – ವ್ಯಥೆ ಎಲ್ಲಾ… ನಿಜ ತಾಯಿ ಎಂದರೇ ಇದೇ ತಾನೇ. ಮಗಳ ಮದುವೆ ಯಾವಾಗಲೋ ಎಂದು ಚಿಂತಿಸುತ್ತಿದ್ದವಳು ಮದುವೆ ಹತ್ತಿರವಾಗುತ್ತಿದ್ದಂತೆ ಸಪ್ಪಗಾಗಿಬಿಡುತ್ತಾಳೆ. 20-22 ವರ್ಷ ಮುದ್ದಾಗಿ ಸಾಕಿದ ಮಗಳು ಹೊರಟುಬಿಡುವಳು. ಮೊದಲಿನ ಸಾಮೀಪ್ಯ, ಮಮತೆ, ವಿರಹತೆಯನ್ನು ಹೇಗೆ ನಿಭಾಯಿಸಲಿ? ಅವಳನ್ನು ಬಿಟ್ಟು ಮನೆಯಲ್ಲಿ ಯಾವ […]

ಅಕ್ಕ ಎಂಬ ಅಕ್ಕರೆಯ ಸೆಲೆ

ಮಹಿಳೆ - 0 Comment
Issue Date : 01.03.2015

-ತೃಪ್ತಿ ಹೆಗಡೆಅಕ್ಕ ಹಲವರ ಜೀವನದಲ್ಲಿ ಮತ್ತೊಬ್ಬ ಅಮ್ಮನ ಪಾತ್ರವನ್ನೇ ವಹಿಸಿದ್ದಾಳೆ. ನಮಗಿಂತ ಮೂರ‌್ನಾಲ್ಕು ವರ್ಷ ದೊಡ್ಡವಳಾದರೂ ಆತ್ಮೀಯ ಸ್ನೇಹಿತೆಯಂತೆ ವರ್ತಿಸಿದ್ದಾಳೆ. ಅಪ್ಪ-ಅಮ್ಮ ಬೈದಾಗ ಮೈದಡವಿ ಸಂತೈಸಿದ್ದಾಳೆ, ತಪ್ಪು ಮಾಡುವ ಸಂದರ್ಭದಲ್ಲೆಲ್ಲ ಎಚ್ಚರಿಸಿದ್ದಾಳೆ,ತಿದ್ದಿದ್ದಾಳೆ. ರಸ್ತೆ ದಾಟುವಾಗ ಜೋಪಾನ ವಾಗಿ ಕೈಹಿಡಿದಿದ್ದಾಳೆ, ಅತ್ತಾಗ ಮುದ್ದಿಸಿದ್ದಾಳೆ, ಅಧಿಕ ಪ್ರಸಂಗವೆನ್ನಿಸುವ ಸಂದರ್ಭದಲ್ಲೆಲ್ಲ ಗದರಿದ್ದಾಳೆ, ನಮ್ಮೊಂದಿಗೆ ತಾನೂ ಚಿಕ್ಕವಳಾಗೆ ತುಂಟಾಟವಾಡಿದ್ದಾಳೆ… ತವರು ತೊರೆದು ಪತಿಯ ಮನೆಗೆ ತೆರಳುವಾಗ ನಮ್ಮೆಲ್ಲರ ಕಣ್ಣಲ್ಲೂ ನೀರು ಹರಿಸಿದ್ದಾಳೆ. ಅವಳನ್ನು ಬಿಟ್ಟಿರುವ ಬದುಕನ್ನು ಕಲ್ಪನೆಯನ್ನೂ ಮಾಡಿಕೊಳ್ಳಲಾಗದಷ್ಟರ ಮಟ್ಟಿಗೆ ಅನಿರ್ವಚನೀಯ ಎನ್ನಿಸುವಂಥ […]

ಅಶ್ಲೀಲತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಲೇಪನ!

ಮಹಿಳೆ - 0 Comment
Issue Date : 25.02.2015

ಎಐಬಿ ನಾಕೌಟ್ ಕಾರ್ಯಕ್ರಮವನ್ನು ನೋಡುತ್ತಿದ್ದ ಮಹಿಳೆಯರು ಮತ್ತು ಕೆಲ ಸೆಲೆಬ್ರಿಟಿಗಳನ್ನು ನೋಡುವಾಗ ಇವರೆಲ್ಲರಿಗಿಂತ ಹಣಕ್ಕಾಗಿ ನೀಲಿಚಿತ್ರಗಳಲ್ಲಿ ನಟಿಸುವ ನಟಿಯೇ ವಾಸಿ ಎನ್ನಿಸಿತು! ಹೀಗೆಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು. ನೀಲಿಚಿತ್ರಗಳಿಗಿಂತ ಕೀಳುಮಟ್ಟದ ಕಾರ್ಯಕ್ರಮವೆಂದರೆ ಅದು ಹೇಗಿದ್ದಿರಬಹುದು? ಸಾರ್ವಜನಿಕವಾಗಿ ಇಬ್ಬರು ವ್ಯಕ್ತಿಗಳನ್ನು ಅವಾಚ್ಯ ಶಬ್ದ, ಅಶ್ಲೀಲ ವಾಕ್ಯಗಳಿಂದ ಹಿಗ್ಗಾ ಮುಗ್ಗಾ ಥಳಿಸುವುದೇ ಕಾರ್ಯಕ್ರಮದ ಉದ್ದೇಶ. ಮೊನ್ನೆ ಮೊನ್ನೆ ನಡೆದ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಇಂಥ ಕಾರ್ಯಕ್ರಮಗಳು ಸಾರ್ವಜನಿಕ ಶಾಂತಿಯನ್ನು ಹಾಳು ಮಾಡುತ್ತವೆ, ಯುವಕರು ಹಾದಿ ತಪ್ಪುವಂತೆ ಮಾಡುತ್ತವೆ […]

ಪೀಜಿ ಪಜೀತಿ

ಪೀಜಿ ಪಜೀತಿ

ಮಹಿಳೆ - 0 Comment
Issue Date : 08.02.2015

       -ತೃಪ್ತಿ ಹೆಗಡೆ ಮೊದಲೆಲ್ಲ ದೂರದೂರಿಗೆ ಓದಲಿಕ್ಕೆಂದು ಹೋಗುವ ಮಕ್ಕಳಿಗೆ ಊಟಕ್ಕೆಂದು ವಾರಾನ್ನದ ವ್ಯವಸ್ಥೆಯಿತ್ತು. ಆಗ ಓದುತ್ತೇನೆಂದು ಮುಂದೆಬರುವ ಅನುಕೂಲವಿಲ್ಲದ ಮಕ್ಕಳನ್ನು ಕಂಡರೆ ಒಲವು ತೋರುವ ಜನರ ಸಂಖ್ಯೆಯೂ ಹೆಚ್ಚಿತ್ತು. ಆದರೆ ಇಂದು ಕಾಲ ಬದಲಾಗಿದೆ. ದೂರದೂರಿನಿಂದ ನಗರಗಳಿಗೆ ವಿದ್ಯಾಭ್ಯಾಸಕ್ಕಾಗಿಯೋ, ಕೆಲಸಕ್ಕಾಗಿಯೋ ಬರುವವರಿಗಾಗಿಯೇ ಹುಟ್ಟಿಕೊಂಡ ಪೇಯಿಂಗ್ ಗೆಸ್ಟ್ (ಪೀಜಿ) ನಿಜಕ್ಕೂ ವರದಾನವೇ ಸರಿ.  ಹಣ ಕೊಟ್ಟರೆ ಸಾಕು, ವಸತಿ, ಊಟಕ್ಕೇನೂ ಕೊರತೆಯಿಲ್ಲ. ಗುರುತು ಪರಿಚಯವಿಲ್ಲದ ಊರಲ್ಲಿ ಆತಂಕದಿಂದ ಬದುಕಬೇಕಾದ ಪರಿಸ್ಥಿತಿಯನ್ನು ಕೊಂಚಮಟ್ಟಿಗಾದರೂ ತಗ್ಗಿಸಿದ್ದು ನಿಸ್ಸಂದೇಹವಾಗಿ ಪೀಜಿಗಳೇ! ಆದರೆ […]