ಭಾರತದ ಬಾವುಟಕ್ಕೆ ಬುದ್ಧನ ಬಾಂಧವ್ಯ

ಭಾರತದ ಬಾವುಟಕ್ಕೆ ಬುದ್ಧನ ಬಾಂಧವ್ಯ

ಮಹಿಳೆ - 0 Comment
Issue Date : 20.01.2015

1950 ಜನವರಿ 26. ಈ ದಿನ ಭಾರತ ಗಣರಾಜ್ಯವಾಯಿತು. ತ್ರಿವರ್ಣ ಧ್ವಜವು ರಾಷ್ಟ್ರದ ಸಂಕೇತವಾಯಿತು. ಬಾವುಟವು ಸ್ವತಂತ್ರ ಪ್ರವೃತ್ತಿಯ ಹಾಗೂ ಪ್ರತಿಷ್ಠೆಯ ಕುರುಹು. ಇದೊಂದು ಪವಿತ್ರವಾದ ವಸ್ತ್ರ ವಿಶೇಷ. ಎಲ್ಲಾ ಸ್ವತಂತ್ರ ರಾಷ್ಟ್ರಗಳೂ ತಮ್ಮದೇ ಆದ ಬಾವುಟವನ್ನು ಹೊಂದಿರುತ್ತವೆ. ಅದರ ಮೇಲೆ ಯಾವುದಾದರೂ ನಿರ್ದಿಷ್ಟವಾದ ಬಣ್ಣ ಅರ್ಥಪೂರ್ಣವಾದ ಚಿಹ್ನೆಗಳನ್ನು ಚಿತ್ರಿಸಿರುತ್ತಾರೆ. ಬಾವುಟಗಳು ನೋಡಲು ಸುಂದರವಾಗಿರಬೇಕು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಧ್ವಜವನ್ನು ರೂಪಿಸಿಕೊಂಡೆವು. 1947ರವರೆಗೂ ನಾವು ಬ್ರಿಟಿಷರಿಂದ ಆಳಿಸಿಕೊಳ್ಳುತ್ತಿದ್ದೆವು. ಬ್ರಿಟಿಷರ ಧ್ವಜ ಯಾನಿಯನ್ ಜಾಕ್. ಸ್ವಾತಂತ್ರ್ಯ ನಮಗೆ […]

ಕೆಎಸ್ ನ ಮತ್ತು ಹೆಣ್ಮನಸ್ಸಿನ ಕವಿತ್ವ

ಮಹಿಳೆ - 0 Comment
Issue Date : 25.01.2015

-ತೃಪ್ತಿ ಹೆಗ್ಡೆ ಪುರುಷರಿಗೆ ಎಂದಿಗೂ ಮಹಿಳೆಯರ ಸೂಕ್ಷ್ಮ ಮನಸ್ಸು ಅರ್ಥವೇ ಆಗುವುದಿಲ್ಲ ಎಂಬ ಕೂಗು ಎಂದಿನಿಂದಲೂ ಕೇಳಿಬರುತ್ತಿದೆ. ಆದರೆ ಒಬ್ಬ ಪುರುಷನೂ ಹೆಣ್ಮನಸ್ಸಿನ ಸೂಕ್ಷ್ಮತೆಯನ್ನು, ತುಮುಲಗಳನ್ನು, ಆತಂಕ, ಸಂಭ್ರಮಗಳನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಬಲ್ಲ… ಅರ್ಥ ಮಾಡಿಕೊಂಡಿದ್ದಷ್ಟೇ ಅಲ್ಲದೆ ಆ ಭಾವಗಳನ್ನೆಲ್ಲ ಹೆಣ್ಣಿಗಿಂತ ಸಮರ್ಥವಾಗಿಯೇ ವ್ಯಕ್ತಪಡಿಸಬಲ್ಲ ಎಂಬುದಕ್ಕೆ ಕೆಎಸ್‌ನರ ಹಲವು ಕವನಗಳು ನಿದರ್ಶನವಾಗಿ ಸಿಕ್ಕುತ್ತವೆ.  ಶಾನುಭೋಗರ ಮಗಳು ರತ್ನದಂಥ ಹುಡುಗಿಯಿಂದ ಹಿಡಿದು ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ… ಹಾಡಿನವರೆಗೂ ಹೆಣ್ಮನಸ್ಸು ಹಂತ ಹಂತವಾಗಿ ಬದಲಾವಣೆಗೆ ಹೊಂದಿಕೊಳ್ಳುವ, ಹುಟ್ಟಿದ ಮನೆಯಿಂದ ಆಚೆ […]

ಈ ಸಂಬಂಧಕ್ಕೆ ಏನೆನ್ನಬೇಕು?

ಮಹಿಳೆ - 0 Comment
Issue Date : 25.01.2015

-ಇಂದುಮತಿ ಅವಳಿಗೆ 23 ವರ್ಷ. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದಾಳೆ. ನೋಡುವುದಕ್ಕೆ ಚೆನ್ನಾಗಿದ್ದಾಳೆ. ವಯಸ್ಸಿಗೆ ತಕ್ಕ ಲವಲವಿಕೆಯ ವರ್ತನೆಯಿಂದಾಗಿ ಕಚೇರಿಯಲ್ಲಿ ಎಲ್ಲರಿಗೂ ಬೇಕಾದವಳಾಗಿದ್ದಾಳೆ. ಕೆಲವರಿಗೆ ಅವಳ ಬಗ್ಗೆ ಅಸೂಯೆಯೂ ಇಲ್ಲದಿಲ್ಲ. ಆದರೆ ಅವಳಿಗೆ ಇವೆಲ್ಲ ಲೆಕ್ಕಕ್ಕಿಲ್ಲ. ಅಗತ್ಯಕ್ಕಿಂತ ಹೆಚ್ಚೇ ಚೆಲ್ಲು ಚೆಲ್ಲಾಗಿ ವರ್ತಿಸುವ ಅವಳು ಕಚೇರಿ ಮುಖ್ಯಸ್ಥನ ಕಣ್ಣಿಗೆ ಬೀಳದಿದ್ದಾಳೆಯೇ? ಅವಳನ್ನು ಮಾತನಾಡಿಸುವುದಕ್ಕೆಂದೇ ದಿನವೂ ಏನಾದರೊಂದು ನೆಪ ಹುಡುಕುತ್ತಾನೆ. ಆಗಾಗ ಕರೆದು ಮಾತನಾಡುತ್ತಾನೆ. ಅದ್ಹೇಗೋ ಫೋನ್ ನಂಬರ್ ಸಹ ಪಡೆಯುತ್ತಾನೆ. ಒಂದೆರಡು ಮೆಸೇಜ್‌ನಿಂದ ಆರಂಭವಾಗುವ ಮಾತುಕತೆ ಕೊನೆ ಕೊನೆಗೆ […]

ದಾಳಿಕೋರನೇ ನಾಚಿಕೆಕೊಳ್ಳುವಂಥ ಬದುಕು!

ದಾಳಿಕೋರನೇ ನಾಚಿಕೆಕೊಳ್ಳುವಂಥ ಬದುಕು!

ಮಹಿಳೆ - 0 Comment
Issue Date : 15.01.2015

ಮೊನ್ನೆ ಮೊನ್ನೆ ದೆಹಲಿಯಲ್ಲಿ 30 ವರ್ಷದ ವೈದ್ಯೆಯ ಮೇಲೆ ನಡೆದ ಆ್ಯಸಿಡ್ ದಾಳಿ ಮತ್ತೊಮ್ಮೆ ಆತಂಕ ಮೂಡಿಸಿತ್ತು. ಪ್ರೇಮ ನಿರಾಕರ ಣೆಯ ಪ್ರತೀಕಾರವಾಗಿ ಹಿಂದಿನಿಂದಲೂ ಆ್ಯಸಿಡ್ ದಾಳಿಗಳು ನಡೆಯುತ್ತಲೇ ಇವೆ. ಹೀಗೆ ತಾನೇ ಪ್ರೀತಿ(?)ಸಿದ ಹುಡುಗಿಯ ಮೇಲೆ ಆ್ಯಸಿಡ್ ಎರಚಿ ವಿಕೃತ ಆನಂದ ಪಡುವವರ ಮನಸ್ಸು ಎಷ್ಟು ಅಮಾನವೀಯವಾಗಿರಬಹುದು?! ಇದೇ ಸುದ್ದಿಯ ಬಗ್ಗೆ ಓದುವಾಗ ಹತ್ತು ವರ್ಷದ ಹಿಂದೆ ನಡೆದ ಆ್ಯಸಿಡ್ ದಾಳಿ ಘಟನೆಯ ಸುದ್ದಿಯೂ ಕಣ್ಣಿಗೆ ಬಿತ್ತು. ಹಸೀನಾ ಹುಸೇನ್ ಎಂಬ ಯುವತಿಯ ಮೇಲೆ 1999 […]

ಚಿಗುರೆಲೆಯೂ ಹಣ್ಣೆಲೆಯಾಗಬೇಕು !

ಮಹಿಳೆ - 0 Comment
Issue Date : 20.01.2015

ತಲೆಯಲ್ಲಿ ಕೂದಲೊಂದು ಬೆಳ್ಳಗಾಗುತ್ತಿರುವ ಸೂಚನೆ ಸಿಕ್ಕುತ್ತಲೇ ಕಂಪಿಸುತ್ತೇವೆ. ಸೊಸೆ ಮಗುವಿಗೆ ಜನ್ಮ ನೀಡಿದ್ದಾಳೆಂಬ ಸುದ್ದಿ ಸಂಭ್ರಮ ನೀಡುವ ಮರೆಯಲ್ಲೇ ಆವರಿಸಿದ ವೃದ್ಧಾಪ್ಯವನ್ನೂ ನೆನಪಿಸಿ ಕೊಂಚ ದಿಗಿಲನ್ನೂ ಮೂಡಿಸುತ್ತದೆ. ಜನ್ಮದಿನ ಅದು ಸಂತಸ ನೀಡುವುದಕ್ಕಿಂತ ಹೆಚ್ಚಾಗಿ ವೃದ್ಧಾಪ್ಯ ಸಮೀಪಿಸುತ್ತಿರುವುದನ್ನು ಸೂಚಿಸಿ ಭಯ ಹುಟ್ಟಿಸುತ್ತದೆ. ನಿಜ, ವೃದ್ಧಾಪ್ಯ ಪ್ರತಿಯೊಬ್ಬ ವ್ಯಕ್ತಿಯೂ ಅನುಭವಿಸಲೇಬೇಕಾದ, ಸ್ವೀಕರಿಸಲೇಬೇಕಾದ ಅನಿವಾರ್ಯ ಸ್ಥಿತಿಯಾದರೂ ಅದನ್ನು ನಗುನಗುತ್ತಲೇ ಸ್ವೀಕರಿಸುವವರು ಎಷ್ಟು ಜನ? ಮಕ್ಕಳು ಮೊಮ್ಮಕ್ಕಳೊಂದಿಗೆ ನಗುನಗುತ್ತ ಕಳೆಯಬೇಕಾದ ವೃದ್ಧಾಪ್ಯ ಹಲವರ ಪಾಲಿಗೆ ದುರಂತವೆನ್ನಿಸಿದ್ದು ಗುಟ್ಟಿನ ವಿಷಯವೇನಲ್ಲ. ಈ ಶತಮಾನದಾದಿಯಿಂದ […]

ಸ್ವಚ್ಛಭಾರತಕ್ಕೆ ಮುನ್ನುಡಿ ಬರೆದವರು!

ಸ್ವಚ್ಛಭಾರತಕ್ಕೆ ಮುನ್ನುಡಿ ಬರೆದವರು!

ಮಹಿಳೆ - 0 Comment
Issue Date : 01.12.2014

ಮೋದಿಯವರ ಸ್ವಚ್ಛ ಭಾರತ ಅಭಿಯಾನ ದೇಶ-ವಿದೇಶಗಳಲ್ಲೂ ಸುದ್ದಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮೋದಿಯವರು ಇಂಥದೊಂದು ಅಭಿಯಾನ ಆರಂಭಿಸುವ ಮೊದಲೇ ಒರಿಸ್ಸಾದ ಹಳ್ಳಿಯೊಂದರ ಮಹಿಳೆಯರು ಅದಕ್ಕೆ ಮುನ್ನುಡಿ ಬರೆದಿದ್ದರು. ಆದರೆ ಅದು ಎಲ್ಲೂ ಸುದ್ದಿಯಾಗಲಿಲ್ಲವಷ್ಟೇ! ಇಲ್ಲಿನ ಗಂಜಾಂ ಎಂಬ ಜಿಲ್ಲೆಯ ಸ್ವಸಹಾಯ ಸಂಘದ ಮಹಿಳೆಯರಿಗೆ ಶುಚಿತ್ವವನ್ನು ಕಾಪಾಡದೆ ತಾವು ಪ್ರಗತಿ ಹೊಂದಲು ಸಾಧ್ಯವಿಲ್ಲವೆಂಬುದು ಅರಿವಿಗೆ ಬಂತು. ಬಯಲು ಮಲವಿಸರ್ಜನೆ ನಿಲ್ಲದೇ ರೋಗ ತಡೆ ಅಸಾಧ್ಯ ಎಂಬುದೂ ತಿಳಿಯಿತು. ಹಾಗೆಯೇ ಬದಲಾಗಬೇಕು ಎಂದು ಹಲುಬುತ್ತ ಕೂತರೆ ಪ್ರಯೋಜನವಿಲ್ಲ, […]

ನಮ್ಮ ಪ್ರಯಾಣ ಸುಖಕರವಾಗಲಿ!

ಮಹಿಳೆ - 0 Comment
Issue Date : 27.11.2014

ಯಾಕಮ್ಮ, ತೂರಾಡ್ತೀಯಾ, ಸರಿಯಾಗಿ ನಿಂತ್ಕೊಳ್ಳೋಕಾಗಲ್ವಾ? ಎಂಬ ಪಕ್ಕದಲ್ಲಿ ನಿಂತ ಮಹಿಳೆಯ ದನಿಗೆ, ಅಯ್ಯೋ ನಾನು ಸರಿಯಾಗೇ ನಿಂತಿಲ್ವಾ? ನಿಂಗೆ ಕಣ್ಣು ಕಾಣಲ್ವಾ? ಎಂಬ ಮತ್ತೊಬ್ಬ ಮಹಿಳೆಯ ಮಾತೂ ಜೊತೆ ಸೇರಿ ಅಲ್ಲೊಂದು ಶೀತಲ ಸಮರ ಆರಂಭವಾಗಿರುತ್ತದೆ! ಇದು ಬಸ್ಸಿನಲ್ಲಿ ಪ್ರತಿದಿನ ಕಂಡುಬರುವ ಸಾಮಾನ್ಯ ದೃಶ್ಯ. ಇತ್ತೀಚೆಗೆ ಇಂಥ ದೃಶ್ಯಗಳು ಎಷ್ಟು ಮಾಮೂಲಾಗಿವೆ ಎಂದರೆ ಪಕ್ಕದಲ್ಲಿರುವ ಇಬ್ಬರು ಮಹಿಳೆಯರು ಜಗಳಕ್ಕೆ ನಿಂತರೆ ಬಸ್ಸಿನಲ್ಲಿರುವ ಉಳಿದವರೆಲ್ಲ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತಾರೆಯೇ ಹೊರತು ಇವರತ್ತ ಕಣ್ಣೆತ್ತಿಯೂ ನೋಡುವುದಿಲ್ಲ!ನಿಜ, ಬದುಕು ಅರ್ಥವಾಗಬೇಕೆಂದರೆ ಬಸ್ಸಿನಲ್ಲೊಮ್ಮೆ […]

ಇದು ಬಾಲಿಶತನದ ಪರಾಕಾಷ್ಠೆಯಲ್ಲವೇ?!

ಇದು ಬಾಲಿಶತನದ ಪರಾಕಾಷ್ಠೆಯಲ್ಲವೇ?!

ಮಹಿಳೆ - 0 Comment
Issue Date : 20.11.2014

ಮಹಿಳೆಯರು ಮತ್ತು ನಾಯಿಗಳಿಗೆ ಪ್ರವೇಶವಿಲ್ಲ! ಇಂಥದೊಂದು ವಿಚಿತ್ರ ನಿಯಮವನ್ನು ತಂದಿದ್ದು ಅಲಿಗಢ್ ಮುಸ್ಲಿಂ ವಿವಿ ! ಅಲ್ಲಿನ ಗ್ರಂಥಾಲಯಕ್ಕೆ ಮಹಿಳೆಯರು ಪ್ರವೇಶಿಸುವಂತಿಲ್ಲವಂತೆ! ಇದರೊಟ್ಟಿಗೆ ಕಾಶ್ಮೀರದ ಗಂದೇರ್‌ಬಲ್ ಕ್ಷೇತ್ರದಿಂದ ವಿಧಾನಸಭಾ ಚುನವಣೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಮೊಹಮ್ಮದ್ ಯೂಸಫ್ ಭಟ್ ತಮ್ಮ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ನಡೆದುಕೊಂಡ ರೀತಿಯೂ ಅಸಹ್ಯ ಮೂಡಿಸುತ್ತದೆ. ಈತ ವೈಯಕ್ತಿಕ ದಾಖಲೆಗಳನ್ನು ನೀಡುವಾಗ ಸಾಲದ ಬಗ್ಗೆ ಮಾಹಿತಿ ನೀಡಬೇಕಾದ ಜಾಗದಲ್ಲಿ ಅವಿವಾಹಿತ ಮಗಳ ಮದುವೆ ಎಂದು ಉಲಲ್ಲೇಖಿಸಿರುವ ಅಂಶ ಬೆಳಕಿಗೆ ಬಂದಿದೆ. ಈ ಎರಡೂ ವಿಚಿತ್ರ […]

ಎಲ್ಲಿದೆ ನ್ಯಾಯ?

ಎಲ್ಲಿದೆ ನ್ಯಾಯ?

ಮಹಿಳೆ - 0 Comment
Issue Date : 11.11.2014

ವಿಬ್‌ಗಯಾರ್ ಶಾಲೆ, ಆರ್ಕಿಡ್, ಕೆಂಬ್ರಿಜ್ ಶಾಲೆಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ… ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ, ಶಾಲೆಗಳಲ್ಲಿ ಬಿಗಿಭದ್ರತೆ, ಅನಧಿಕೃತ ಶಾಲೆಗಳ ವಿರುದ್ಧ ಶಿಸ್ತು ಕ್ರಮ, ಘಟನೆಗೆ ಸಂಬಂಧಿಸಿ ಪ್ರಾಚಾರ್ಯರ ಬಂಧನ- ಬಿಡುಗಡೆ, ಪಾಲಕರ ಸಭೆ, ಮಡುಗಟ್ಟಿದ ಆತಂಕ, ಶಾಲೆಯ ಪ್ರತಿಯೊಬ್ಬ ಸಿಬ್ಬಂದಿಯ ಮೇಲೂ ಹದ್ದಿನ ಕ್ಣಿಡುವಂತೆ ಶಾಲಾ ಆಡಳಿತ ಮಂಡಳಿಗೆ ತಾಕೀತು, ಎಲ್ಲ ಶಾಲೆಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ… ಇವೆಲ್ಲ ಹೇಳಿಕೆಗಳೂ ದಿನ ದಿನವೂ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಆ ಘಟನೆ ಜನರ […]

ಬಹುಗುಣಯುಕ್ತ ನೆಲ್ಲಿಕಾಯಿ

ಬಹುಗುಣಯುಕ್ತ ನೆಲ್ಲಿಕಾಯಿ

ಮಹಿಳೆ - 0 Comment
Issue Date : 08.11.2014

 ನೆಲ್ಲಿಕಾಯಿಗೆ ಶ್ರೀಫಲ, ಧಾತ್ರಿ, ಆಮಲಕೀ, ಅಮೃತಾ, ಶಿವಾ, ಶಾಂತಾ, ವೃಷ್ಯಾ, ರೋಚನೀ ಮುಂತಾದ ಅನೇಕ ಹೆಸರುಗಳಿವೆ. ಧಾತ್ರಿದೇವಿಯು ನಮ್ಮನ್ನೆಲ್ಲ ಕಾಪಾಡುವ ಭೂಮಿತಾಯಿಯು ಅವಳೇ ನೆಲ್ಲಿ ಮರದ ಅಧಿಷ್ಠಾತೃದೇವತೆಯು.  ನೆಲ್ಲಿಯ ಕಾಯಿಗೆ ಇಷ್ಟೊಂದು ಪ್ರಾಶಸ್ತ್ಯ ಸಿಕ್ಕುವುದಕ್ಕೆ ಅದರ ಗುಣಗಳೇ ಕಾರಣ. ಹತ್ತು ಕಿತ್ತಳೆಹಣ್ಣುಗಳಿಗೆ ಸಮವಾಗುವಷ್ಟು ವಿಟಮಿನ್ ‘ಸಿ’ ಒಂದು ದಪ್ಪ ನೆಲ್ಲಿಕಾಯಿಯಲ್ಲಿ ಇರುತ್ತದೆಂದು ಹೇಳುತ್ತಾರೆ. ಅದಕ್ಕೆ ಇರುವ ಮೇಲೆ ಹೇಳಿರುವ ಹೆಸರುಗಳೂ ಇದನ್ನೇ ಸೂಚಿಸುತ್ತವೆ. ‘ಶ್ರೀಫಲ’ವೆಂದರೆ ಐಶ್ವರ್ಯ ವನ್ನು ನೀಡುವ ಫಲ. ಆರೋಗ್ಯಭಾಗ್ಯವೇ ಆತ್ಯುತ್ತಮ ವಾದ ಸಂಪತ್ತು. ಧಾತ್ರಿಯೆಂದರೆ […]