ಬೆನ್ನ ಮೇಲೆ ಹೊತ್ತ ಭಾರ

ಬೆನ್ನ ಮೇಲೆ ಹೊತ್ತ ಭಾರ

ಕಿರಿಯರ ಲೋಕ - 0 Comment
Issue Date : 05.01.2016

ಓರ್ವ ಋಷಿ ಹಿಮಾಲಯದ ತಪ್ಪಲಿನಲ್ಲಿ ಒಂದು ಆಶ್ರಮ ಕಟ್ಟಿಕೊಂಡು ವಾಸಮಾಡಿಕೊಂಡಿದ್ದ. ಜನರ ದುಃಖವನ್ನು, ಸಮಸ್ಯೆಯನ್ನು ಪರಿಹರಿಸುವುದೇ ಅವನ ಮುಖ್ಯ ಧೇಯವಾಗಿತ್ತು. ಅದಕ್ಕಾಗಿ ಆತ ತನ್ನ ಬೆಳಗಿನ ಹೊತ್ತನ್ನು ತಪೋನುಷ್ಠಾನಕ್ಕೂ, ಮಧ್ಯಾಹ್ನದ ಹೊತ್ತನ್ನು ಸಾಂತ್ವನಪರ ಉಪದೇಶಕ್ಕೂ ಮೀಸಲಾಗಿಟ್ಟಿದ್ದ. ಒಂದು ದಿನ ಓರ್ವ ದುಃಖಿತ ಧನಿಕ ವ್ಯಕ್ತಿ ಬಂದು ತನ್ನ ಅಳಲು ತೋಡಿಕೊಂಡು ಹೇಳಿದ ‘‘ನನಗೆ ಸುಖ ಶಾಂತಿಯೆಂಬುದೇ ಇಲ್ಲ. ಸಂಸಾರದಲ್ಲಿ ಸೋತು ಹೋಗಿದ್ದೇನೆ. ಇದಕ್ಕೇನು ಪರಿಹಾರ?’’ ಎಂದು. ಋಷಿ ಆತನಿಗೆ ಮರುದಿನ ಮುಂಜಾನೆ ಬರಹೇಳಿದ. ಅಂತೆಯೇ ಆತ ಮರುದಿನ […]

ಧೈರ್ಯವೇ ಸರ್ವತ್ರ ಸಾಧನ

ಧೈರ್ಯವೇ ಸರ್ವತ್ರ ಸಾಧನ

ಕಿರಿಯರ ಲೋಕ - 0 Comment
Issue Date : 02.01.2016

ಸರ್ದಾರ್ ಪಟೇಲರು ಆಗಿನ್ನೂ ಬಾಲ್ಯಾವಸ್ಥೆಯಲ್ಲಿ ಇದ್ದರು. ಚಿಕ್ಕಂದಿನಲ್ಲಿ ಯಾವುದಕ್ಕೂ ಅಂಜುತ್ತಿರಲಿಲ್ಲ. ಇವರ ಧೈರ್ಯವನ್ನು ನೋಡಿ ಸಮಾಜದ ಜನರು ಬೆರಗಾಗುತ್ತಿದ್ದರು. ಚಿಕ್ಕಂದಿನಲ್ಲಿ ಅವರ ಬದುಕಿನಲ್ಲಿ ದುರ್ಘಟನೆಯೊಂದು ನಡೆಯಿತು. ಅವರು ಹೇಗೆ ಅದನ್ನು ನಿಭಾಯಿಸಿದರು ಎಂಬುದು ಕುತೂಹಲಕರ. ಪಟೇಲರ ಕೈ ತೋಳಿನ ಮೇಲೆ ಒಂದು ಪುಟ್ಟ ಗಾಯವಾಯಿತು. ಕ್ರಮೇಣ ಆ ಗಾಯ ದೊಡ್ಡದಾಗುತ್ತಾ ಬಂತು. ಅದನ್ನು ಗುಣಪಡಿಸಲು ಸುಲಭಸಾಧ್ಯವಾಗಿರಲಿಲ್ಲ. ವೈದ್ಯರುಗಳೂ ಕೈ ಚೆಲ್ಲಿ ಕುಳಿತರು. ಪಟೇಲರು ನೋವನ್ನು ಸಹಿಸುತ್ತಲೇ ಧೈರ್ಯದಿಂದ ಬಂದಿದ್ದೆಲ್ಲಾ ಬರಲಿ ನೋಡೋಣ ಎನ್ನುತ್ತಿದ್ದರು. ಒಬ್ಬ ಅನುಭವಿ ವೈದ್ಯರು […]

ಅರ್ಧ ಶರೀರವೇ ನಿಷ್ಕ್ರಿಯ;ಆದರೂ ಬತ್ತದ ಜೀವನೋತ್ಸಾಹ

ಅರ್ಧ ಶರೀರವೇ ನಿಷ್ಕ್ರಿಯ;ಆದರೂ ಬತ್ತದ ಜೀವನೋತ್ಸಾಹ

ಕಿರಿಯರ ಲೋಕ - 0 Comment
Issue Date : 25.12.2015

ಆಕೆ ಎರಡೂ ಕಂಕುಳಗಳ ಕೆಳಗೆ ಕ್ಲಚ್‌ಗಳ ಆಧಾರದಲ್ಲಿ ನಡೆದು ಹೊರಬಂದಳು. ಮತ್ತು ಹೇಳಿದಳು: ‘‘ಹಿಂದೆ ಹೇಗಿದ್ದೆನೋ ಅದಕ್ಕಿಂತ ಉತ್ತಮತರದ ವ್ಯಕ್ತಿಯಾಗಿ ನಾನು ಹೊರಬರುತ್ತಿದ್ದೇನೆ.’’ ಸೊಂಟದ ಕೆಳಗಿನ ಸಂಪೂರ್ಣ ಚಲನೆಯನ್ನು ಕಳೆದುಕೊಳ್ಳಬಹುದೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು. ಆಸ್ಪತ್ರೆಯಲ್ಲಿ ವರ್ಷಗಳಷ್ಟು ಕಾಲ ಇರಬೇಕಾಗಬಹುದೆಂದೂ ವೈದ್ಯರು ಅಭಿಪ್ರಾಯ ಪಟ್ಟಿದ್ದರು. ಆದರೆ ಕೇವಲ ಎರಡೇ ತಿಂಗಳಲ್ಲಿ ಆಕೆ ಆಸ್ಪತ್ರೆಯಿಂದ ಹೊರಬಂದಿದ್ದಳು. ಅದಕ್ಕೆ ಕಾರಣ ಅವಳ ಅಸೀಮ ಮನೋಬಲ, ಜೀವನೋತ್ಸಾಹ. ಒಲಿಂಪಿಕ್ಸ್ ಈಜು ಸ್ಪರ್ಧೆಗಳಲ್ಲಿ 1996ರಲ್ಲಿ 4 ಹಾಗೂ 2006ರಲ್ಲಿ 2 ಒಟ್ಟು 6 […]

ತಾಯಸೇವೆಗೆ ಒಲಿದ ವಿಠೋಬ

ತಾಯಸೇವೆಗೆ ಒಲಿದ ವಿಠೋಬ

ಕಿರಿಯರ ಲೋಕ - 0 Comment
Issue Date : 10.12.2015

ಮಹಾರಾಷ್ಟ್ರದ ಒಂದು ಪಟ್ಟಣ. ಅಲ್ಲಿ  ಶ್ರೀಕೃಷ್ಣನ ಪರಮಭಕ್ತನೊಬ್ಬನಿದ್ದ. ಭಗವಾನ್ ಶ್ರೀಕೃಷ್ಣನ ಅನಂತ ನಾಮಗಳಲ್ಲಿ ವಿಠೋಬ ಎಂಬುದೂ ಒಂದು ನಾಮ. ಭಕ್ತ ನಿರಂತರವಾಗಿ ವಿಠೋಬನ ಧ್ಯಾನದಲ್ಲಿ ನಿರತನಾಗಿರುತ್ತ ತನ್ನ ಕಾಯಕವನ್ನು ಮಾಡುತ್ತಿದ್ದ. ಭಕ್ತನ ಶ್ರದ್ಧೆ, ಧ್ಯಾನ, ಪರಮಭಕ್ತಿಗಳಿಂದ ಸಂಪ್ರೀತನಾದ ಶ್ರೀಕೃಷ್ಣ, ಭಕ್ತನಿಗೆ ದರ್ಶನ ಕೊಡಲು ಆಲೋಚಿಸಿದ. ಅದೊಂದು ದಿನ ಸಂಜೆ ಕತ್ತಲು ಆವರಿಸುತ್ತಿದ್ದಂತೆೆ ಭಕ್ತನಿದ್ದಲ್ಲಿಗೆ ಬಂದ. ಆ ಸಮಯದಲ್ಲಿ ಭಕ್ತ ತಾಯಿಯ ಕಾಲುಗಳನ್ನು ಒತ್ತುತ್ತ್ತಿದ್ದ. ಭಕ್ತನ ತಾಯಿ ಸಾಯುವ ಸ್ಥಿತಿಯಲ್ಲಿದ್ದಳು. ಆಕೆಗೆ ನಿದ್ದೆ ಬರುತ್ತಿರಲಿಲ್ಲ. ಅವಳ ಸೇವೆಯಲ್ಲಿ ತಲ್ಲೀನನಾಗಿರುವ […]

ಸಮಾನ ಹಕ್ಕು

ಸಮಾನ ಹಕ್ಕು

ಕಿರಿಯರ ಲೋಕ - 0 Comment
Issue Date : 10.12.2015

ಮಹಿಳೆಯರಿಗೆ ದೇವತೆಗಳ ಕಾಲದಿಂದಲೂ ಸಮಾನತೆಯ ಹಕ್ಕನ್ನು ಕೊಡಲಾಗಿದೆೆ. ಅದಕ್ಕೆ ಬ್ರಹ್ಮ, ವಿಷ್ಣು, ಮಹೇಶ್ವರರೇ ಸಾಕ್ಷಿ. ಶಾರದಾದೇವಿ ಒಂದು ದಿನ ತನ್ನ ಪತಿ ಬ್ರಹ್ಮನನ್ನು ಕೇಳಿದಳು: ‘‘ನಾನು ನಿಮ್ಮ ಜೊತೆಯೇ ಇರಬೇಕು, ಜೊತೆಯಲ್ಲಿಯೇ ಓಡಾಡಿಕೊಂಡು ಇರಬೇಕು’’. ‘‘ಅಯ್ಯೋ, ಅದಕ್ಕೇನಂತೆ? ನಿನ್ನನ್ನು ನನ್ನ ನಾಲಿಗೆಯಲ್ಲಿಯೇ ಇರಿಸಿಕೊಳ್ಳುತ್ತೇನೆ. ಆಗಬಹುದೋ?.’’ ಶಾರದೆಯು ಈ ಮಾತಿನಿಂದ ಸಂತೋಷಗೊಂಡಳು. ಈ ವಿಚಾರ ಕ್ರಮೇಣ ಲಕ್ಷ್ಮಿಗೆ ತಿಳಿಯಿತು. ತಕ್ಷಣವೇ ವೈಕುಂಠದಲ್ಲಿ  ನಾರಾಯಣನನ್ನು ಕೇಳಬೇಕೆಂದು ತೀರ್ಮಾನಿಸಿದಳು. ‘‘ಶ್ರೀಹರಿ, ಬ್ರಹ್ಮದೇವನು ತನ್ನ ಪತಿ ಶಾರದೆಯನ್ನು ಸದಾ ತನ್ನ ನಾಲಿಗೆಯಲ್ಲೇ ಇಟ್ಟುಕೊಂಡಿರುತ್ತಾನಂತೆ. ಹಾಗೆಂದು […]

ಮಾನವ ಜೀವವೆಂಬ ಅಮೂಲ್ಯ ರತ್ನ

ಮಾನವ ಜೀವವೆಂಬ ಅಮೂಲ್ಯ ರತ್ನ

ಕಿರಿಯರ ಲೋಕ - 0 Comment
Issue Date : 10.12.2015

ವಸಿಷ್ಠರ ಗುರುಕುಲ. ಅಲ್ಲಿ ಹಲವು ಶಿಷ್ಯರು. ಅವರಲ್ಲಿ ಒಬ್ಬ ಮಂದಬುದ್ಧಿಯವ. ಎಲ್ಲರೂ ಹೀಗಳೆಯುವರೇ. ಗುರುಗಳು ಇದನ್ನು ಸಹಿಸಲಿಲ್ಲ. ‘ಯಾರೂ ಹೀನರಲ್ಲ. ಎಲ್ಲರಲ್ಲಿ ಯಾವುದೋ ಶಕ್ತಿ ಇದ್ದೇ ಇರುತ್ತದೆ. ಅದು ಒಬ್ಬೊಬ್ಬರಲ್ಲಿ ಒಂದೊಂದು. ಕೆಲವರಲ್ಲಿ ಮೊದಲೇ ಪ್ರಕಟ. ಇನ್ನುಳಿದವರಲ್ಲಿ ಸೂಕ್ತ ಸಮಯ ಬಂದಾಗ ಹೊರಹೊಮ್ಮುತ್ತದೆ. ಕಾಲ ಬಂದಾಗ ಎಲ್ಲವೂ ಆಗುತ್ತದೆ. ಅದಕ್ಕಾಗಿ ಕಾಯುವ ತಾಳ್ಮೆ ನಮಗಿರಬೇಕು’. ವಸಿಷ್ಠರ ಮಾತು ಉಳಿದ ಶಿಷ್ಯರ ಕಣ್ಣು ತೆರೆಸಿತು. ಗುರುಗಳೆದುರು ಆತನನ್ನು ಗೋಳುಹುಯಿದುಕೊಳ್ಳುವುದು ನಿಂತಿತಷ್ಟೇ.   ಇದನ್ನೆಲ್ಲ ಆ ಮಂದಬುದ್ಧಿಯ ಶಿಷ್ಯ ಲೆಕ್ಕಿಸನು. […]

ಕಣ್ಣು ಕಳೆದ ಸಿಡಿಮದ್ದು

ಕಣ್ಣು ಕಳೆದ ಸಿಡಿಮದ್ದು

ಕಿರಿಯರ ಲೋಕ - 0 Comment
Issue Date : 03.12.2015

ಮಂಟೂರು ಎಂಬ ಪಟ್ಟಣದಲ್ಲಿ ತುಂಬ ಕಿಲಾಡಿಯಾದ ಹುಡುಗನೊಬ್ಬನಿದ್ದ. ಅವನ ಹೆಸರು ಕಪಾಲಿ ಎಂದು. ಬಹಳ ಹಟಮಾರಿಯಾದ ಆ ಹುಡುಗನಿಗೆ ಅವನು ಹೇಳಿದ್ದೇ ಹಟ. ಅಪ್ಪ ಅಮ್ಮ ಅವನ ತಾಳಕ್ಕೆ ತಕ್ಕಂತೆ ಕುಣಿಯಬೇಕು. ಇಲ್ಲವಾದರೆ ರಂಪ ರಾದ್ಧಾಂತ    ಮಾಡುತ್ತಿದ್ದ. ಹೀಗಿರುವಾಗ ದೀಪಾವಳಿ ಹಬ್ಬ ಬಂತು. ಮಾಲಿನ್ಯ ನಿಯಂತ್ರಣ ಮಂಡಳಿಯವರು ಮತ್ತು ವೈದ್ಯರುಗಳು ಸಿಡಿಮದ್ದಿನ ಅನಾಹುತಗಳ ಬಗ್ಗೆ ಪಾಂಪ್ಲೆಂಟು, ರೇಡಿಯೋ, ಟಿ. ವಿ. ಗಳ ಮೂಲಕ ಎಚ್ಚರಿಕೆ ನೀಡುತ್ತಲೇ ಇದ್ದರು. ಆದರೇನು? ದೊಡ್ಡ ದೊಡ್ಡ ಬಾಕ್ಸ ಬಾಕ್ಸಗಟ್ಟಳೆ ಪಟಾಕಿ, ಆಟಂ […]

ಆಗುವುದೆಲ್ಲ ಒಳ್ಳೆಯದಕ್ಕೆ

ಕಿರಿಯರ ಲೋಕ - 0 Comment
Issue Date : 28.11.2015

ಎಂಕಮ್ಮ ತೀರಾ ಬಡಕುಟುಂಬದಿಂದ ಬಂದವಳು. ಅವಳ ತಂದೆ ತಾಯಿಗಳಿಗೆ ಆರು ಮಂದಿ ಮಕ್ಕಳು. ಮೊದಲ ಮಗು ಹೆಣ್ಣಾಯಿತು. ಹೀಗೆ ಆಸೆಯ ಬೆನ್ನು ಬಿಡದೆಯೇ ಒಂದರ ಮೇಲೊಂದರಂತೆ ಐದು ಹೆಣ್ಣು ಮಕ್ಕಳಾದರು. ಆರನೆಯದಾದರೂ ಗಂಡು ಮಗುವಾಗಬೇಕೆಂದು ಗಂಡ-ಹೆಂಡತಿ ಇದ್ದ ದೇವರನ್ನೆಲ್ಲ ಬೇಡಿದರು, ಪ್ರಾರ್ಥಿಸಿದರು. ಕೊನೆಗೂ ಆರನೆಯ ಮಗುವೂ ಹೆಣ್ಣೇ ಆಯಿತು. ತಂದೆ ತಾಯಿಗಳಿಗೆ ಅದು ಬೇಡದ ಮಗುವಾಯಿತು. ಆದರೂ ದೊಡ್ಡದಾಯಿತು. ಎರಡು ವರ್ಷವಾಯಿತು, ಮೂರು ವರ್ಷವಾಯಿತು, ಮಗುವಿಗೆ ಮಾತಿಲ್ಲ. ಈ ಹೆಣ್ಣು ಮಗು ಏಕಾದರೂ ಹುಟ್ಟಿತೋ ಎಂಬ ತಾತ್ಸಾರದೊಂದಿಗೆ […]

ನಾ ಹೋದರೆ ಹೋದೇನು

ನಾ ಹೋದರೆ ಹೋದೇನು

ಕಿರಿಯರ ಲೋಕ - 0 Comment
Issue Date : 03.11.2015

ಕನಕದಾಸರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಬ್ರಾಹ್ಮಣ ವಟುಗಳ ಜೊತೆ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ಪಾರಮಾರ್ಥವಿದ್ಯೆ (ಆಧ್ಯಾತ್ಮ)ಯನ್ನು ಹೆಚ್ಚಾಗಿ ಬ್ರಾಹ್ಮಣರ ಮಕ್ಕಳೇ ಕಲಿಯು ತ್ತಿದ್ದರು. ಗುರುಕುಲದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ಕನಕದಾಸರನ್ನು ಕೀಳು ಕುಲದವನೆಂದು ತುಚ್ಛ  ಭಾವನೆ ಯಿಂದ ಕಾಣುತ್ತಿದ್ದರು. ಆದರೆ ಕನಕದಾಸರು ಮಾತ್ರ ಪಾರಮಾರ್ಥ ವಿದ್ಯೆಗೆ ಯೋಗ್ಯತಾಸಂಪನ್ನರಿದ್ದರು. ಇದು ಅವರ ಗುರುಗಳಿಗೂ ತಿಳಿದಿತ್ತು. ಕನಕದಾಸರು ಗುರುಗಳ ಸನ್ನಿಧಿಗೆ ಬರುವ ಪೂರ್ವದಲ್ಲಿಯೇ, ತಮ್ಮ ಅನೇಕ ಗತ ಜನ್ಮಗಳಲ್ಲಿ ಮಾಡಿದ ನಿಷ್ಕಾಮ ಕರ್ಮದ ಪುಣ್ಯವಿಶೇಷ ದಿಂದ ತಮ್ಮ ಅಂತಃಕರಣವನ್ನು […]

ಚೌಡಿ ಮಾಡಿದ ಉಪಕಾರ

ಚೌಡಿ ಮಾಡಿದ ಉಪಕಾರ

ಕಥೆಗಳು ; ಕಿರಿಯರ ಲೋಕ - 0 Comment
Issue Date : 30.10.2015

ವಜ್ರಳ್ಳಿ ಎಂಬ ಊರಿನಲ್ಲಿ ನೆಡಿಗೆಮನೆ ಎಂಬ ಒಂದು ಬ್ರಾಹ್ಮಣರ ಕೇರಿಯಿತ್ತು.  ಗೋಪಾಲಭಟ್ಟರುಎಂಬ ಸದ್ಬ್ರಾಹ್ಮಣರೊಬ್ಬರು ಕುಟುಂಬ ಸಮೇತ ರೈತಾಪಿ ಮಾಡಿಕೊಂಡು ಜೀವನಯಾಪನೆ ಮಾಡುತ್ತಿದ್ದರು. ಹತ್ತಾರು ಎಕರೆ ಜಮೀನು ಇದ್ದರೂ ತೀವ್ರ ಬಡತನದಿಂದಾಗಿ ಸಾಗುವಳಿ ಮಾಡಲಾರದೆ ಕುನ್ನಡೆ ಬೈಲು ಎಂಬ ಹತ್ತು ಎಕರೆ ಗದ್ದೆ  ಹಾಳುಬಿದ್ದುಕೊಂಡೇ ಇತ್ತು. ಮನೆಯಲ್ಲಿ ಬಡತನವಿದ್ದುದರಿಂದ ಊಟಕ್ಕೂ ತತ್ವಾರ ಎಂಬ ಸ್ಥಿತಿ ಇತ್ತು. ಗೋಪಾಲಭಟ್ಟರನ್ನು ‘ಗೋಪಾಲಜ್ಜ’ ಎಂದೇ ಎಲ್ಲರೂ ಪ್ರೀತಿಯಿಂದ  ಕರೆಯುತ್ತಿದ್ದರು. ಅಷ್ಟಿಷ್ಟು ಮಂತ್ರ ಕಲಿತಿದ್ದರಿಂದ ಆಗೀಗ ಭಟ್ಟ  ಕಸುಬಿಗೂ ಹೋಗುತ್ತಿದ್ದರು. ಸಿಂಹತಿಂಗಳಿನಲ್ಲಿ ತಾಳೆಗರಿಯಲ್ಲಿದ್ದ ಪದ್ಯರೂಪದ […]