ಅಹಂಕಾರ ಸಲ್ಲದು

ಅಹಂಕಾರ ಸಲ್ಲದು

ಕಿರಿಯರ ಲೋಕ - 0 Comment
Issue Date : 15.10.2015

ಪುರಾಣ ಕಾಲದಲ್ಲಿ ನಹುಷ ಎಂಬ ಅಸಾಮಾನ್ಯ ಪರಾಕ್ರಮಿಯಿದ್ದ. ಅವನು ದೇಶ ದೇಶಗಳ ಮೇಲೆ ದಂಡೆತ್ತಿ ಹೋಗಿ ತನ್ನ ತೋಳ್ಬಲದಿಂದ ಆ ದೇಶಗಳ ಅರಸರನ್ನು ಗೆದ್ದುಕೊಂಡು ಚಕ್ರವರ್ತಿಯಾದ. ನೂರು ಅಶ್ವಮೇಧಗಳನ್ನು ಮಾಡಿ ಪುಣ್ಯ ಸಂಪಾದಿಸಿದ. ಆ ಸಮಯದಲ್ಲಿ ದೇವಲೋಕದಲ್ಲಿದ್ದ ಇಂದ್ರನು ವೃತ್ರಾಸುರನೆಂಬ ರಾಕ್ಷಸನನನ್ನು ವಜ್ರಾಯುಧದಿಂದ ಹೊಡೆದು ಸಂಹರಿಸಿದ. ವೃತ್ರಾಸುರನ ತಂದೆ ಬ್ರಾಹ್ಮಣನಾದ ಕಾರಣ ಇಂದ್ರನಿಗೆ ಬ್ರಹ್ಮಹತ್ಯಾ ಪಾತಕವು ಆವರಿಸಿಕೊಂಡಿತು. ಪಾತಕದಿಂದ ಮುಕ್ತಿ ಪಡೆಯುವವರೆಗೂ ಅವನಿಗೆ ಸುರಲೋಕದ ಪಟ್ಟದಲ್ಲಿ ಅಧಿಕಾರ ನಡೆಸಲು ಅವಕಾಶವಿರಲಿಲ್ಲ. ಇಂದ್ರನು ಭೂಲೋಕಕ್ಕೆ ಬಂದು ಮಾನಸ ಸರೋವರದಲ್ಲಿದ್ದ […]

ಯಾರಿಗೂ ಹೇಳಬೇಡ

ಯಾರಿಗೂ ಹೇಳಬೇಡ

ಕಿರಿಯರ ಲೋಕ - 0 Comment
Issue Date : 13.10.2015

ಎಂ. ಬಾಬುಶೆಟ್ಟಿ, ನಾರಾವಿ ಉತ್ತರ ಭಾರತದ ಗುಡ್ಡಗಾಡು ಪ್ರದೇಶದಲ್ಲಿ ಬಾಬಾ ಭಾರತಿ ಎಂಬ ಸಂತರೊಬ್ಬರಿದ್ದರು. ಊರೂರು ಸುತ್ತುತ್ತ ಬಡವರು, ರೋಗಿಗಳು, ನೊಂದವರು, ನಿರ್ಲಕ್ಷಿತರು, ದಲಿತರು – ಇವರೆಲ್ಲರಿಗೆ ಕೈಲಾದ ಸೇವೆ ಮಾಡು ವುದು, ಬದುಕಿನಲ್ಲಿ ಭರವಸೆ ತುಂಬುವುದು ಅವರ ದಿನಚರಿ. ಪ್ರೀತಿಯೊಂದನ್ನು ಬಿಟ್ಟರೆ ಅವರಲ್ಲಿ ಇನ್ನೇನೂ ಇರಲಿಲ್ಲ. ಚಿಕ್ಕ ಗುಡಿಸಲೊಂದರಲ್ಲಿ ಒಂಟಿ ಬದುಕು ನಡೆಸುತ್ತಿದ್ದ ಈ ಸಾಧುವಿನ ಸಂಗಾತಿ ಎಂದರೆ ‘ಸುಲ್ತಾನ್’ ಎಂಬ ಹೆಸರಿನ ಅತ್ಯಂತ ಸುಂದರವಾದ ಬಿಳಿ ಕುದುರೆ. ಗುಡ್ಡಗಾಡು ಪ್ರದೇಶದಲ್ಲಿ ತಮಗೆ ಬೇಕಾದಲ್ಲಿಗೆ ಸಂಚರಿಸಲು […]

ಬಹುಮಾನ

ಬಹುಮಾನ

ಕಿರಿಯರ ಲೋಕ - 0 Comment
Issue Date : 08.10.2015

ಬೆಳಗ್ಗೆ ಮೇಷ್ಟರು ಶಾಲೆಗೆ ಬರುವ ಹಾದಿಯಲ್ಲಿ ಮಕ್ಕಳು ಗುಂಪುಗೂಡಿ ಹಣ ಖರ್ಚು ಮಾಡುವ ವೈಖರಿಯನ್ನು ನೋಡಿದ್ದರು. ಕೆಲವರು ಐಸ್‌ಕ್ಯಾಂಡಿ ಖರೀದಿ ಮಾಡಿ ಚೀಪುತ್ತಿದ್ದರು. ಇನ್ನು ಕೆಲವರು ನೆಲಗಡಲೆ ತೆಗೆದುಕೊಂಡು ತಿನ್ನುತ್ತ ಅಲ್ಲೇ ಸುಲಿದು ಸಿಪ್ಪೆಯನ್ನು ರಸ್ತೆಯ ಪಕ್ಕದಲ್ಲೇ ಚೆಲ್ಲುತ್ತಿದ್ದರು. ಕುರುಕಲು ತಿಂಡಿ ತಿಂದು ಪ್ಲಾಸ್ಟಿಕ್ ಚೀಲಗಳನ್ನು ಕಂಡಲ್ಲಿ ಎಸೆದು ಖುಷಿಪಡುತ್ತ ಶಾಲೆಗೆ ತಲಪುತ್ತಿದ್ದರು. ಅಂದು ಮೇಷ್ಟರು ತರಗತಿ ಆರಂಭವಾಗುತ್ತಲೇ ಮಕ್ಕಳಿಗೆ ಒಂದು ವಿಷಯವನ್ನು ಬೋಧಿಸಿದರು, ‘‘ನಾವು ನಮ್ಮ ಬದುಕಿನಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಏನನ್ನೂ ಮುಗಿಸಬಾರದು. ಉಳಿತಾಯ ಎಂಬುದು ಜೀವನದಲ್ಲಿ […]

ಯಜ್ಞಾಶ್ವವನ್ನು ಬಿಡಿಸಿತಂದ ಅಂಶುಮಂತ

ಯಜ್ಞಾಶ್ವವನ್ನು ಬಿಡಿಸಿತಂದ ಅಂಶುಮಂತ

ಕಿರಿಯರ ಲೋಕ - 0 Comment
Issue Date : 22.09.2015

ಸೂರ್ಯವಂಶದ ರಾಜನಾದ ಸಗರ ಚಕ್ರವರ್ತಿಯ ಮೊಮ್ಮಗನೂ ಅಸಮಂಜಸನ ಮಗನೂ ಆದ ಅಂಶುಮಂತ ಸದ್ಗುಣಿಯೂ, ನಿರಹಂಕಾರಿಯೂ, ಪರಾಕ್ರಮಿಯೂ ಆಗಿದ್ದ. ಸಗರ ಚಕ್ರವರ್ತಿಯ ರಾಜಧಾನಿ ಅಯೋಧ್ಯೆ. ಔರ್ವ ಮಹರ್ಷಿ ಈತನ ಗುರು. ಭೂಮಂಡಲವನ್ನು ಆಳುತ್ತಿದ್ದ ಸಗರ ಚಕ್ರವರ್ತಿ ಅದಾಗಲೇ 99 ಯಾಗವನ್ನು ಪೂರೈಸಿದ್ದು ನೂರನೇ ಅಶ್ವಮೇಧ ಯಾಗವನ್ನು ಮಾಡಲು ಗುರುಗಳಿಂದ ಅನುಮತಿ ಪಡೆದು ಪ್ರಾರಂಭ ಮಾಡಿದ. ಅಂಶುಮಂತನ ರಕ್ಷಣೆಯಲ್ಲಿ ಯಜ್ಞಾಶ್ವ ಹೊರಟಿತು.   ನೂರು ಯಾಗ ಪೂರೈಸಿದವನು ಸ್ವರ್ಗದ ಇಂದ್ರಪದವಿಯನ್ನು ಪಡೆಯಲು ಅರ್ಹನಾಗುತ್ತಾನೆಯಾದ ಕಾರಣ ಎಲ್ಲಿ ತನ್ನ ಪದವಿಗೆ ಕುತ್ತು ಬರುತ್ತದೋ […]

ವಿಷ್ಣುವಿನ ತಂತ್ರ

ವಿಷ್ಣುವಿನ ತಂತ್ರ

ಕಿರಿಯರ ಲೋಕ - 0 Comment
Issue Date : 16.09.2015

-ಪ. ರಾಮಕೃಷ್ಣ ಶಾಸ್ತ್ರಿ ಕೃತಯುಗದಲ್ಲಿ ಒಬ್ಬ ರಾಕ್ಷಸನಿದ್ದ. ಅವನ ಹೆಸರು ವೃಕಾಸುರ. ಅವನಿಗೆ ಮೂರು ಲೋಕಗಳಿಗೂ ತಾನೇ ಒಡೆಯನಾಗಬೇಕೆಂಬ ಮಹದಾಶೆ ಇತ್ತು. ಅದಕ್ಕಾಗಿ ಅವನು ಕಠಿಣವಾಗಿ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡ. ಶಿವನು, ‘‘ನಿನ್ನ ಕಠಿಣವಾದ ತಪಶ್ಚರ್ಯೆಯಿಂದ ಸಂತುಷ್ಟನಾಗಿದ್ದೇನೆ. ನಿನಗೆ ನನ್ನಿಂದ ಏನಾಗಬೇಕಪ್ಪಾ? ಹೇಳು’’ ಎಂದು ಕೇಳಿದ. ವೃಕಾಸುರನು, ‘‘ನನ್ನ ಶತ್ರುಗಳನ್ನೆಲ್ಲ ಕೊಲ್ಲಬೇಕು. ಮೂರುಲೋಕಗಳಲ್ಲೂ ಅಜೇಯನಾಗಿ ಆಳಬೇಕೆಂಬ ಆಶೆಯಿದೆ. ಇದಕ್ಕಾಗಿ ಯುದ್ಧ ಮಾಡಿ ಸಾವು, ನೋವುಗಳಾಗುವುದು, ಕಾಲಹರಣ ಮಾಡುವುದು ನನಗೆ ಇಷ್ಟವಿಲ್ಲ. ನಾನು ಯಾರ ತಲೆಯ ಮೇಲೆ […]

ಜನಸೇವೆಯೇ ದೇವರ ಪೂಜೆ

ಜನಸೇವೆಯೇ ದೇವರ ಪೂಜೆ

ಕಿರಿಯರ ಲೋಕ - 0 Comment
Issue Date : 12.09.2015

-ಎ.ಕೆ.ಪಟ್ಟಾಭಿ ಒಮ್ಮೆ ಲೋಕಮಾನ್ಯ ಬಾಲ ಗಂಗಾಧರ ತಿಲಕ್‌ರವರು ಕಾಂಗ್ರೆಸ್ ಅಧಿವೇಶನದ ಪ್ರಯುಕ್ತ ಲಖ್ನೋಗೆ ಬಂದರು. ಅವರನ್ನು ಎಲ್ಲರೂ ಸ್ವಾಗತಿಸಿದರು. ಅವರು ವೃಥಾ ಕಾಡುಹರಟೆಯಲ್ಲಿ ಮುಳುಗದೆ ಬೆಳಗ್ಗಿನಿಂದ ರಾತ್ರಿ 12 ಘಂಟೆಯವರೆವಿಗೂ ಕೆಲಸದಲ್ಲಿ ತೊಡಗಿರುತ್ತಿದ್ದರು. ಊಟ ತಿಂಡಿಯ ನೆನಪೂ ಅವರಿಗೆ ಆಗುತ್ತಿರಲಿಲ್ಲ. ಅವರನ್ನು ಊಟಕ್ಕೆ ಬಲವಂತ ಮಾಡಿ ಎಬ್ಬಿಸಬೇಕಾಗುತ್ತಿತ್ತು. ಆ ದಿನವೂ ಹಾಗೆಯೇ ಆಯಿತು. ಎಷ್ಟೇ ಒತ್ತಾಯ ಬಂದರೂ ಕೆಲಸವು ಮುಗಿದ ನಂತರವೇ ಅವರಿಗೆ ಊಟದ ಬಗ್ಗೆ ನೆನಪು ಬಂದು ಊಟಕ್ಕೆ ಕುಳಿತರು. ‘‘ಕೆಲಸದ ಒತ್ತಡದಲ್ಲಿ ನಿಮಗೆ ದೇವರ ಪೂಜೆ […]

ಹಣ್ಣಿನ ಸಾಕ್ಷಿ

ಹಣ್ಣಿನ ಸಾಕ್ಷಿ

ಕಿರಿಯರ ಲೋಕ - 0 Comment
Issue Date : 31.08.2015

ರವಿ, ರಂಗ ಕೆಳಗಿನಿಂದ ಒಂದಾದ ಮೇಲೊಂದು ಕಲ್ಲು ಗುರಿಯಿಟ್ಟು ಎಸೆದ ರಭಸಕ್ಕೆ ‘ಟಪ ಟಪ’ ಮಾವಿನ ಕಾಯಿಗಳು ಉದುರಿದವು. ಬೇಗನೇ ಎಲ್ಲವನ್ನೂ ಜೇಬಿನಲ್ಲಿ ತುಂಬಿಕೊಂಡು ಇಬ್ಬರೂ ಗೋಡೆ ಹಾರಿದರು. ಮರಳ ಗುಡ್ಡೆ ಮೇಲೆ ಕುಳಿತು ಹಣ್ಣಾದವುಗಳನ್ನು ಕಚ್ಚಿ ರಸ ಹೀರುತ್ತಾ ಕುಳಿತಾಗ ಕೇಳಿಬಂತು ಅಜ್ಜಿಯ ಗೊಣಗಾಟ.  ‘ಛೇ! ಅನ್ಯಾಯವಾಗಿ ಕಾಯಿ-ಹಣ್ಣು ಎಲ್ಲಾ ಕೆಡವಿದ್ದಾರೆ. ಕೇಳಿದ್ರೆ ಹಣ್ಣು ತಿನ್ನಲು ನಾನೇ ಕೊಡ್ತಿದ್ದೆ. ಅದು ಬಿಟ್ಟು ಈ ರೀತಿ ಕಲ್ಲು ಹೊಡೆದು,  ಕೊಂಬೆ ಮುರಿದು ದಾಂಧಲೆ ಮಾಡೋದು ಹೊಟ್ಟೆ ಉರಿಸುತ್ತೆ. […]

ತಾಯಿ ಮಾತು ನಡೆಸಿದ ಮಗ

ತಾಯಿ ಮಾತು ನಡೆಸಿದ ಮಗ

ಕಿರಿಯರ ಲೋಕ - 0 Comment
Issue Date : 31.08.2015

ಆ ದೃಶ್ಯವೇ ಹಾಗಿತ್ತು. ಎಂಥವರಿಗೂ ಭಯ ಮೂಡಿಸುವುದು. ಬಹು ದೊಡ್ಡ ಯಜ್ಞಕುಂಡ. ಎತ್ತರೆತ್ತರಕ್ಕೆ ಪುಟಿದೇಳುವ ಅಗ್ನಿಯ ಕೆನ್ನಾಲಿಗೆ. ಸುತ್ತ ಕುಳಿತ ಯಾಜಕರು ಸ್ವಾಹಾಕಾರ ಹೇಳಿ ಆಜ್ಯಾಹುತಿ ನೀಡುತ್ತಿದ್ದಂತೆಯೇ ಎಲ್ಲೆಲ್ಲಿಂದಲೋ ಹಿಂಡು ಹಿಂಡಾಗಿ ಬಂದು ಬೀಳುವ ಸರ್ಪಗಳು! ಹಲವು ಜಾತಿಯ ಹಾವುಗಳ ಮಾರಣ ಹೋಮ. ಆಹುತಿಯಾಗಿ ಉರಿದು ಹೋಗುವ ಅವುಗಳನ್ನು ಕಂಡರೂ ಯಜ್ಞಕರ್ತೃವಿನ ಮುಖದಲ್ಲಿ ತೃಪ್ತಿಯಿಲ್ಲ. ಇನ್ನೂ ಯಾವುದೋ ಸರ್ಪ ಮಾತ್ರವಲ್ಲ ಸರ್ಪಕುಲವೇ ಬಂದು ಬೀಳಲೆಂಬ ನಿರೀಕ್ಷೆ!  ತನ್ನ ತಂದೆಯ ಸಾವಿಗೆ ಕಾರಣನಾದ ಸರ್ಪ ಮಾತ್ರವಲ್ಲ ಇಡೀ ಸರ್ಪಕುಲವನ್ನೇ […]

ನಾ ನಿಮ್ಮೂರಿನ ಪಂಚೇತಿ ಪರವ್ವಾ!

ನಾ ನಿಮ್ಮೂರಿನ ಪಂಚೇತಿ ಪರವ್ವಾ!

ಕಿರಿಯರ ಲೋಕ - 0 Comment
Issue Date : 24.08.2015

  ನಮ್ಮೂರಿನ ಪಂಚೇತಿ ಪರವ್ವ ಎಂಥಾಕಿ ಅಂದ್ರ… ‘ಗೊಡ್ಡೆಮ್ಮಿ ಡುಬ್ಬಾ ಚಪ್ಪರಿಸಿ ಹಾಲು ಹಿಂಡಿಕೊಂಡು ಬರೂವಾಕಿ’! ಅಸನೇರಿ ಅಕಲವಂತಿ!! ಆಕಿ ಬೆಲ್ಲದಂತೆ ಮಾತಾಡಿದರೆ ಒಲ್ಲದ ಗಂಡಸರೂ ಚಂಚೀ ಚೀಲ ಬೆಚ್ಚಿ ಎಲಿ, ಅಡಕಿ, ಸುಣ್ಣಾ , ಕಾಚು ಕೊಟ್ಟು ತಲವಾದ ಮೀಸಿ ತಿರುವುತ್ತಿದ್ದರು. ಪಂಚೇತಿ ಪರವ್ವ ಎಂಥಾ ಚೂಟಿ ಅಂದ್ರ… ಎಂಥಾ ಲಬಾಡ ಗಂಡ್ಸು ಬಂದ್ರೂ ಲಟ್ಟೂಣಿಗೀಲಿಂದ ಇಕ್ಕರಿಸೂ ಖಡಕ್ ಹೆಣ್ಣು! ಆಕಿ ಹಾರೂ ಹಕ್ಕೀ ಪುಚ್ಚಾ ಎಣಿಸೂವಾಕಿ! ನಮ್ಮೂರಾಗ ಅಳೂ ಕೂಸು ಸೈತೇಕ… ‘ಪಂಚೇತಿ ಪರವ್ವಾ ಬಂದ್ಲೂ’ ಅಂದ್ರ […]

ಜಾಣ ಸಹೋದರರು

ಜಾಣ ಸಹೋದರರು

ಕಿರಿಯರ ಲೋಕ - 0 Comment
Issue Date : 24.08.2015

  ರಾಜಾಸ್ಥಾನದ ಒಂದು ಪುಟ್ಟ ರಾಜ್ಯ. ಜಸ್ವಂತ ಸಿಂಗ್ ಎಂಬ ಒಬ್ಬ ರಾಜ ಅದನ್ನಾಳುತ್ತಿದ್ದ. ಅವನಿಗೆ ಸುನೀತಿ ಎಂಬ ಓರ್ವ ಚತುರಮತಿಯಾದ ಮಂತ್ರಿಯಿದ್ದ. ಅವನ ಸಲಹೆಯಿಂದಾಗಿ ಜಸ್ವಂತ್ ಸಿಂಗ್‌ನ ಆಳ್ವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಒಂದುದಿನ ಆಕಸ್ಮಿಕವಾಗಿ ಮಂತ್ರಿ ಸುನೀತಿ ಅಕಾಲಮರಣಕ್ಕೆ ತುತ್ತಾದ. ಅವನು ಸಾಯುವಾಗ ರಾಜನಿಗೆ ನೂರಾ ಇಪ್ಪತ್ತು ವರಹಗಳನ್ನು ಸಾಲ ಕೊಡಬೇಕಾಗಿತ್ತು. ಸುನೀತಿಯ ಸ್ಥಾನಕ್ಕೆ ಬಂದ ದುರ್ಜಯ ಎಂಬ ಮಂತ್ರಿತುಂಬಾ ದುಷ್ಟನಾಗಿದ್ದ. ಆತ ಮಂತ್ರಿ ಸುನೀತಿ ಮಾಡಿದ ಸಾವನ್ನು ನೆನೆಪು ಮಾಡಿ ಅವನ ಮಕ್ಕಳಿಂದ […]