ಪ್ರಾಮಾಣಿಕತೆಯ ಫಲ

ಪ್ರಾಮಾಣಿಕತೆಯ ಫಲ

ಕಿರಿಯರ ಲೋಕ - 0 Comment
Issue Date : 24.08.2015

ಊಹ್ಞೂಂ.. ಸಾಧ್ಯವೇ ಇಲ್ಲ. ಈ ತೇಜಸ್ವೀ ತರುಣನು ಬೇಡಿದ್ದನ್ನು ಕೊಡಲು ಸಾಧ್ಯವೇ ಇಲ್ಲ.. ಹಾಗೆ ಕೊಡದಿದ್ದರೆ ಕೊಟ್ಟ ಮಾತಿಗೆ ತಪ್ಪಿದ ಪಾಪ! ಆ ಪಾಪಕ್ಕೋ ಪ್ರಾಯಶ್ಚಿತ್ತವೇ ಇಲ್ಲ. ರೌರವದಂತಹ ನರಕ! ಸಹಿಸಲಸಾಧ್ಯ ನರಕ! ಈಗ ಏನು ಮಾಡುವುದೆಂದೇ ತಿಳಿಯದೇ ರಾಜ ಸದ್ಯುಮ್ನ ಚಿಂತೆಗೀಡಾಗಿದ್ದ. ಮಂತ್ರಿಗಳ ಎದುರು ಸಮಸ್ಯೆಯಿಟ್ಟ. ಈಗಾಗಲೇ ದಾನವಾಗಿ ಬೇಡಿದ್ದನ್ನು ತಪ್ಪದೇ ಕೊಡುವಿರೆಂದು ಮಾತುಕೊಟ್ಟಿರುವುದರಿಂದ ಆತನ ಬೇಡಿಕೆಯನ್ನು ಈಡೇರಿಸದೇ ವಿಧಿಯಿಲ್ಲ ಎಂದುಬಿಟ್ಟರು ಮಂತ್ರಿಗಳು.  ರಾಜಪುರೋಹಿತರು ಈ ಕುಮಾರ ಸಾಮಾನ್ಯನಲ್ಲ. ಅಪ್ರತಿಮ ಸಾಧಕ ತಪಸ್ವಿ. ತಪಸ್ವಿಗಳಿಗೆ ಊಹಿಸಲು […]

ನಿರಪರಾಧಿ ಮುಂಗುಸಿ

ನಿರಪರಾಧಿ ಮುಂಗುಸಿ

ಕಿರಿಯರ ಲೋಕ - 0 Comment
Issue Date : 17.08.2015

ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಜೊತೆಗೆ ಒಂದು ಪುಟ್ಟ ಮಗು. ಒಂದು ದಿನ ಸಂಜೆ ಮನೆಗೆ ಬರುವಾಗ ದಾರಿಯಲ್ಲಿ ಕಂಡ ಮುಂಗುಸಿಯೊಂದನ್ನು ಉಪಾಯದಿಂದ ಹಿಡಿದು ಮನೆಗೆ ತಂದ. ನಮ್ಮ ಮಗುವಿನೊಡನೆ ಆಟವಾಡಲು ಈ ಮುಂಗುಸಿ ಸಹಾಯವಾಗುತ್ತದೆ ಎಂದು ಹೆಂಡತಿಗೆ ಹೇಳಿದ. ಮಗು ಮತ್ತು ಮುಂಗುಸಿ ಜೊತೆ ಜೊತೆಯಲ್ಲಿ ಪ್ರೀತಿಯಿಂದ ಬೆಳೆಯುತ್ತಿದ್ದವು. ಒಂದು ದಿನ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ‘ಮುಂಗುಸಿ ತೊಟ್ಟಿಲ ಬಳಿಗೆ ಬರದ ಹಾಗೆ ನೋಡಿಕೊಳ್ಳಿರಿ. ನಾನು ಸಾಮಾನು ತರಲು ಹೊರಡುತ್ತಿದ್ದೇನೆ’ ಎಂದು ಹೆಂಡತಿ ಹೇಳುತ್ತಾ […]

ಯಾರಿಗೆ ‘ರತ್ನ’ ಬಿರುದು?

ಕಿರಿಯರ ಲೋಕ - 0 Comment
Issue Date : 10.08.2015

‘ನಿಮ್ಮಲ್ಲಿ ಯಾರು ಎಲ್ಲರಿಗಿಂತ ಶ್ರೇಷ್ಠ ಕೆಲಸ ಮಾಡುತ್ತಾರೋ ಅವರಿಗೆ ಈ ಸಲದ ರತ್ನ ಬಿರುದು’ ಎಂದು ಆಚಾರ್ಯರು ಘೋಷಿಸಿದರು. ಸುದ್ದಿ ತಿಳಿದಾಗಲಿಂದ ಗುರುಕುಲದಲ್ಲಿ ಮಕ್ಕಳ ನಡುವೆ ಇದೇ ಚರ್ಚೆ ನಡೆದಿತ್ತು.  ರಾಜಪುರಿ ದೇಶದ ಗಡಿಭಾಗದ ದಟ್ಟಾರಣ್ಯದ ನಡುವೆ ಇದ್ದ ಶ್ರೀವಿದ್ಯಾ ಗುರುಕುಲ ದೇಶ-ವಿದೇಶಗಳಲ್ಲಿ ಅತ್ಯುತ್ತಮ ಶಿಕ್ಷಣಕ್ಕಾಗಿ ಹೆಸರು ವಾಸಿಯಾಗಿತ್ತು. ಬಿಲ್ವಿದ್ಯೆ, ಸಮರಕಲೆ, ರಾಜನೀತಿ, ಅರ್ಥಶಾಸ್ತ್ರ , ವ್ಯಾಕರಣ  ಇದೆಲ್ಲದರ ಜತೆ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಖ್ಯಾತಿ ಈ ಗುರುಕುಲಕ್ಕಿತ್ತು. […]

ಬೆಟ್ಟವನ್ನೆತ್ತಿದ ಧೀಮಂತ

ಬೆಟ್ಟವನ್ನೆತ್ತಿದ ಧೀಮಂತ

ಕಿರಿಯರ ಲೋಕ - 0 Comment
Issue Date : 06.08.2015

-ಪ. ರಾಮಕೃಷ್ಣಶಾಸ್ತ್ರಿ ನಂದ ಗೋಕುಲದಲ್ಲಿ ಗೋವಳರು ಪಶು ಪಾಲನೆಯನ್ನೇ ನಂಬಿಕೊಂಡು ಬದುಕಿದವರು. ಬೆಟ್ಟಗುಡ್ಡಗಳಿಗೆ ದನಕರುಗಳನ್ನು ಕರೆದುಕೊಂಡು ಹೋಗಿ ಹುಲ್ಲು ಮೇಯಿಸುವುದು, ಹಾಲು ತುಪ್ಪದ ಮಾರಾಟದಿಂದ ಜೀವನ ನಿರ್ವಹಣೆ ಮಾಡುವುದರಲ್ಲಿ ಅವರು ಕಾಲ ಕಳೆಯುತ್ತಿದ್ದರು. ಒಂದು ಸಲ ಅವರ ಮುಂದೆ ದೇವೇಂದ್ರನು ಕಾಣಿಸಿಕೊಂಡ. ‘‘ನೀವು ನಿಮ್ಮ ಪಶು ಪಾಲನೆಯು ಚೆನ್ನಾಗಿ ನಡೆಯಲು ಯಾವ ದೇವರನ್ನು ಆರಾಧಿಸುತ್ತಿದ್ದೀರಿ?’’ ಎಂದು ಕೇಳಿದ. ‘‘ಕ್ಷೀರ ಸಾಗರದಲ್ಲಿ ನೆಲೆಸಿರುವ ಮಹಾವಿಷ್ಣುವೇ ನಮಗೆ ಆರಾಧ್ಯ ದೈವ. ಅವನಿಗೆ ನಮ್ಮ ಪೂಜೆ ಸಲ್ಲುತ್ತದೆ’’ ಎಂದರು ಗೋವಳರು.  ‘‘ಕೂಡದು. […]

ಅತ್ತೆಯ ನಿರ್ಣಯ

ಅತ್ತೆಯ ನಿರ್ಣಯ

ಕಿರಿಯರ ಲೋಕ - 0 Comment
Issue Date : 05.08.2015

‘‘ಮೂವರಿಗೂ ಒಂದೊಂದು ಚೀಲ ಭತ್ತ ಕೊಡುತ್ತೇನೆ. ಇನ್ನೊಂದು ವರುಷದ ನಂತರ ನಾನು ಕೇಳಿದಾಗ ಅದನ್ನು ಮರಳಿ ಕೊಡುವ ಜವಾಬ್ದಾರಿ ನಿಮ್ಮದು’’ ಎಂದು ತನ್ನ ಸೊಸೆಯರಿಗೆ ಹೇಳಿದಳು ಶಾಂತಮ್ಮ. ಬುದ್ಧಿವಂತೆಯಾದ ಆಕೆ ಹಾಗೆ ಭತ್ತ ಕೊಡುತ್ತಿದ್ದದ್ದು ಸುಮ್ಮನೆ ಅಲ್ಲ, ಬಲವಾದ ಕಾರಣವಿತ್ತು. ಇಷ್ಟು ವರುಷಗಳ ಕಾಲ ಮಕ್ಕಳುಮರಿ ತುಂಬಿದ್ದ ಆ ದೊಡ್ಡ ಕೂಡು ಕುಟುಂಬದ ಜವಾಬ್ದಾರಿ ಹೊತ್ತು ನಿಭಾಯಿಸಿದ್ದವಳು ಆಕೆ. ಈಗೀಗ ವಯಸ್ಸಾದಂತೆ ಶಕ್ತಿ ಕಡಿಮೆಯಾಗಿತ್ತು, ಎಲ್ಲವನ್ನೂ ನೋಡಿಕೊಳ್ಳು ವುದು ಕಷ್ಟವೆನಿಸುತ್ತಿತ್ತು. ತೋಟದ ಕೆಲಸವನ್ನೇನೊ ಗಂಡು ಮಕ್ಕಳು ಮಾಡು […]

ಜಾಣನೇ ಮಂತ್ರಿಯಾದ

ಜಾಣನೇ ಮಂತ್ರಿಯಾದ

ಕಿರಿಯರ ಲೋಕ - 0 Comment
Issue Date : 28.07.2015

ಕೃಷ್ಣ ದೇವರಾಯನು ವಿಜಯನಗರದ ಪಟ್ಟವೇರುವ ಮೊದಲು ಆಳುತ್ತಿದ್ದ ರಾಜನ ಮಂತ್ರಿಯು ತೀರಿಕೊಂಡ. ಹೊಸ ಮಂತ್ರಿಯನ್ನು ಅವನ ಬುದ್ಧಿವಂತಿಕೆಯ ಪರೀಕ್ಷೆಯಿಂದಲೇ ಆಯ್ದುಕೊಳ್ಳಬೇಕೆಂದು ರಾಜನು ಒಂದು ಉಪಾಯ ಮಾಡಿದ. ಒಂದು ಹಲಗೆಯ ಮೇಲೆ ಅಡ್ಡವಾಗಿ ಒಂದು ಗೆರೆಯನ್ನು ಬರೆದ. ಈ ಗೆರೆಯನ್ನು ಸ್ವಲ್ಪವೂ ಅಳಿಸದೆ ಚಿಕ್ಕದು ಮಾಡಬೇಕು ಎಂದು ಕೆಳಗೆ ಸೂಚಿಸಿದ. ದೂತರನ್ನು ಕರೆದು, ‘‘ಈ ಹಲಗೆಯನ್ನು ಹೊತ್ತುಕೊಂಡು ರಾಜ್ಯದ ಮೂಲೆಮೂಲೆಗೂ ಹೋಗಿ. ಇದನ್ನು ತೋರಿಸಿ. ಈ ಸಮಸ್ಯೆಯನ್ನು ಬಿಡಿಸಿದವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ’’ ಎಂದು ಆಜ್ಞಾಪಿಸಿದ. ದೂತರು ಹಲಗೆಯೊಂದಿಗೆ […]

ಮೋಸ ಹೋದ ಮೂರ್ಖ!

ಮೋಸ ಹೋದ ಮೂರ್ಖ!

ಕಿರಿಯರ ಲೋಕ - 0 Comment
Issue Date : 25.06.2015

ಒಂದು ಊರಿನಲ್ಲಿ ರೈತನೊಬ್ಬನಿದ್ದ. ಟೈಫಾಯ್ಡ್ ಜ್ವರದಿಂದ ನರಳುತ್ತಾ ಸಾವು ಎಂದು ಬರುತ್ತದೆಯೋ ಎಂದು ನಿರೀಕ್ಷಿಸುತ್ತಿದ್ದ. ಸದಾ ದೇವರನ್ನು ಧ್ಯಾನಿಸುತ್ತಿದ್ದ. ಹತ್ತಿರದಲ್ಲೇ ತಿರುಪತಿ ಇದ್ದು ವೆಂಕಟರಮಣನನ್ನು ಆಗಾಗ್ಗೆ ಹೋಗಿ ಸಂದರ್ಶಿಸುತ್ತಿದ್ದ. ಒಂದು ದಿನ ಈ ರೈತನಿಗೆ ಒಂದು ಯೋಚನೆ ಹೊಳೆಯಿತು. ತನ್ನಲ್ಲಿದ್ದ ಹೋರಿ ಗಟ್ಟಿಮುಟ್ಟಾಗಿದ್ದು ಕೆಲಸಕ್ಕೆ ಯೋಗ್ಯವಾಗಿತ್ತು. ಅದರ ಬೆಲೆ ಏನು ಇಲ್ಲವೆಂದರೂ ನಾಲ್ಕು ಸಾವಿರ ರೂ.ಗಳಿಗೂ ಮಿಕ್ಕಿತ್ತು. ಔಷಧೋಪಚಾ ರಕ್ಕೆ ಹಣ ಬೇಕಾಗಿದ್ದು ದರಿಂದ ಅದನ್ನು ಮಾರಲು ಯೋಚಿಸಿ ದೇವರನ್ನು ಪ್ರಾರ್ಥಿಸಿದನು. ‘ನನ್ನ ರೋಗವನ್ನು ನೀನು ವಾಸಿ […]

ಪೃಥ್ವಿಯ ಹುಟ್ಟು

ಪೃಥ್ವಿಯ ಹುಟ್ಟು

ಕಿರಿಯರ ಲೋಕ - 0 Comment
Issue Date :

ಭರತಖಂಡವನ್ನು ಆಳಿದ ಪೃಥು ಎಂಬ ಚಕ್ರವರ್ತಿ ಪ್ರಜೆಗಳ ಸುಖಕ್ಕಾಗಿ ಹಗಲಿರುಳೂ ಶ್ರಮಿಸುತ್ತಿದ್ದ. ಆಗೊಂದು ದಿನ ರೈತರು ಅವನ ಬಳಿಗೆ ವಿಚಿತ್ರವಾದ ಸುದ್ದಿಯೊಂದಿಗೆ ಬಂದರು. ‘‘ಒಡೆಯಾ, ಎಲ್ಲರ ಹೊಟ್ಟೆಗೆ ಅನ್ನ ಬೆಳೆಯಲು ಬೀಜವನ್ನು ಭೂಮಿಗೆ ಬಿತ್ತಿದೆವಾದರೆ ಅದು ಮೊಳಕೆಯೊಡೆಯುವುದಿಲ್ಲ. ಬದಲಾಗಿ ಭೂಮಿಯೇ ಬಾಯ್ತೆರೆದು ಎಲ್ಲ ಬೀಜಗಳನ್ನೂ ಗುಳಮ್ಮನೆ ನುಂಗುತ್ತ ಇದೆ’’ ಎಂದು ಅವರು ದೂರಿಕೊಂಡರು. ಪೃಥುವಿಗೆ ಅಸಾಧ್ಯ ಕೋಪ ಬಂತು. ಬಿತ್ತಿದ ಬೀಜ ಗಿಡವಾಗಿ ಕಾಳುಗಳನ್ನು ಕೊಡುವ ಬದಲು ತಾನೇ ಅದನ್ನು ನುಂಗುತ್ತಿದ್ದರೆ ಪ್ರಜೆಗಳಿಗೆ ಬದುಕುವುದೇ ಕಷ್ಟವಾಗಬಹುದು. ಇಂಥ […]

ಹುಲಿಯ ಕೃತಘ್ನತೆ

ಹುಲಿಯ ಕೃತಘ್ನತೆ

ಕಿರಿಯರ ಲೋಕ - 0 Comment
Issue Date : 08.05.2015

ಕಪಿಲ ಎಂಬ ಒಬ್ಬ ಬ್ರಾಹ್ಮಣ ವ್ಯಕ್ತಿ ಪುರಾಣ ಶಾಸ್ತ್ರಗಳನ್ನು ಬಲ್ಲವ. ಅವನಿಗಿದ್ದ ಒಂದೇ ಒಂದು ಕೊರತೆ ಎಂದರೆ ಗರುಡ ವಿದ್ಯೆ ಕಲಿಯದೇ ಇರುವುದು. ಶತಾಯಗತಾಯ ಗರುಡ ವಿದ್ಯೆ ಕಲಿಯಲೇಬೇಕೆಂದು ಹಠತೊಟ್ಟ. ಒಬ್ಬ ಪ್ರಸಿದ್ಧ ಮಂತ್ರವಾದಿಯ ಬಳಿಗೆ ಹೋಗಿ ಕೈ ಮುಗಿದು ನಿಂತ. ಆತ ‘ಯಾರು ನೀನು? ಏಕೆ ಬಂದಿದ್ದೀ? ನನ್ನಿಂದ ನಿನಗೆ ಏನು ಆಗಬೇಕು?’ ಎಂದೆಲ್ಲ ಪ್ರಶ್ನಿಸಿದನು. ಕಪಿಲ, ‘ತಾನು ಗರುಡವಿದ್ಯೆ ಕಲಿಯಬೇಕೆಂಬ ಹೆಬ್ಬಯಕೆಯಿಂದ ಬಂದಿದ್ದೇನೆ. ಸತ್ತ ಪ್ರಾಣಿಗಳನ್ನು ಬದುಕಿಸುವ ಕಲೆ ನನಗೆ ಪ್ರಾಪ್ತವಾಗುವಂತೆ ಆಶೀರ್ವದಿಸಿರಿ’ ಎಂದು […]

ನಾಟಕದೊಳೊಂದು ಕಿರು ನಾಟಕ !

ನಾಟಕದೊಳೊಂದು ಕಿರು ನಾಟಕ !

ಕಿರಿಯರ ಲೋಕ - 0 Comment
Issue Date : 14.05.2015

ವಿವೇಕಾನಂದರ ಬಾಲ್ಯದಲ್ಲಿ ನಡೆದ ಒಂದು ಪುಟ್ಟ ಪ್ರಸಂಗ ಹೀಗಿದೆ: ಒಂದು ನಾಟಕ ನಡೆಯುತ್ತಿದ್ದು, ಪ್ರೇಕ್ಷಕರೆಲ್ಲಾ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ. ನರೇಂದ್ರನೂ (ವಿವೇಕಾನಂದರ ಪೂರ್ವ ನಾಮ) ನಾಟಕ ನೋಡಲು ಮಿತ್ರರೊಂದಿಗೆ ಭಾಗಿಯಾಗಿ ತದೇಕ ಚಿತ್ತದಿಂದ ಪಾತ್ರಧಾರಿಗಳ ಕಡೆ ನೋಡುತ್ತಾ ಕುಳಿತಿದ್ದಾನೆ. ನಾಟಕ ಪ್ರಾರಂಭವಾಗಿ ಅರ್ಧ ಗಂಟೆಯೂ ಮೀರಿಲ್ಲ, ಇದ್ದಕ್ಕಿದ್ದಂತೆಯೇ ಕೋರ್ಟಿನ ಒಬ್ಬ ಅಮೀನ ನಾಟಕದ ಮುಖ್ಯ ಪಾತ್ರಧಾರಿಯನ್ನು ದಸ್ತಗಿರಿ ಮಾಡಲು ವಾರಂಟ್ ಹಿಡಿದು ಸ್ಟೇಜ್ ಒಳಕ್ಕೆ ಸೀದಾ ನುಗ್ಗಿ ವ್ಯಕ್ತಿಯನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದ. ತಕ್ಷಣವೇ ‘‘ನಿನ್ನನ್ನು ಈಗಿಂದೀಗಲೇ […]