ಶಿಕ್ಷೆಯ ಅನುಭವ

ಶಿಕ್ಷೆಯ ಅನುಭವ

ಕಿರಿಯರ ಲೋಕ - 0 Comment
Issue Date : 08.05.2015

ಪರಮಹಂಸರೆಂಬ ಋಷಿಗಳು ಆಶ್ರಮ ವೊಂದನ್ನು ಕಟ್ಟಿಕೊಂಡು ವೇದಾಧ್ಯಯನ ಮಾಡುತ್ತಿದ್ದರು. ಅನೇಕ ಮಂದಿ ವಟುಗಳಿಗೆ ಸದ್ವಿದ್ಯೆಯನ್ನು ಕಲಿಸಿ ಅವರು ಲೋಕಕ್ಕೆ ಸನ್ಮಂಗಳ ಉಂಟುಮಾಡುವ ಹಾದಿಯಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತಿದ್ದರು. ಕಲಿಸುವಾಗ ತುಂಬ ತಾಳ್ಮೆ ವಹಿಸಿ ಮಮತೆಯಿಂದ ಬೋಧಿಸುತ್ತಿದ್ದರು. ಆದರೆ ವಿದ್ಯಾರ್ಥಿಗಳು ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದರೆ ಸೂಕ್ತ ದಂಡನೆ ವಿಧಿಸಿ ಬುದ್ಧಿ ಕಲಿಯುವಂತೆ ಮಾಡುತ್ತಿದ್ದರು.  ಪರಮಹಂಸರ ಶಿಷ್ಯರಲ್ಲಿ ದಂಡಕ ಎಂಬ ಕೀಟಲೆಯ ವಿದ್ಯಾರ್ಥಿ ಯಿದ್ದ. ಇನ್ನೊಬ್ಬರಿಗೆ ಏನಾದರೂ ಒಂದು ವಿಧದಿಂದ ತೊಂದರೆ ಕೊಡುವ ದುಷ್ಟ ಸ್ವಬಾವ ಅವನದಾಗಿತ್ತು. ಒಂದು ಸಲ […]

ಸುಕನ್ಯ ಸಮೃದ್ಧಿ ಖಾತೆ ಯೋಜನೆ

ಸುಕನ್ಯ ಸಮೃದ್ಧಿ ಖಾತೆ ಯೋಜನೆ

ಕಿರಿಯರ ಲೋಕ - 0 Comment
Issue Date : 06.05.2015

ಇದೊಂದು ಭಾರತದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪ್ರಾರಂಭವಾಗಿರುವ ಮೋದಿ ಕಾಲದ ಅತ್ಯುತ್ತಮ ಹಣಕಾಸು ಯೋಜನೆ. ಈ ಯೋಜನೆ ಮಗಳನ್ನು ಸುರಕ್ಷಿಸಿ, ಮಗಳನ್ನು ಓದಿಸಿ ಆಂದೋಲನದಡಿಯಲ್ಲಿ  ಲಿಂಗ ತಾರತಮ್ಯವನ್ನು ಕಡಿಮೆ ಗೊಳಿಸುವ ಹಾಗೂ ಹೆಣ್ಣುಮಕ್ಕಳಿಗೆ ಮತ್ತು ಅವರ ತಾಯಿ ತಂದೆಯರಿಗೆ ಸುರಕ್ಷೆಯನ್ನು ಒದಗಿಸುವ ಮಹತ್ವದ ಉದ್ದೇಶವನ್ನು ಹೊಂದಿರುವ ಯೋಜನೆ. ದೇಶದಲ್ಲಿ ಕಳೆದ ಮೇ ತಿಂಗಳಿನಲ್ಲಿ ಹೊಸ ಸರಕಾರ ಬಂದ ಲಾಗಾಯ್ತು ದೇಶದ ಗ್ರಾಮೀಣ ಜನರ, ಬಡವರ ಕೂಲಿ ಕಾರ್ಮಿಕರ ಸಣ್ಣ ಉದ್ದಿಮೆದಾರರ ಹಿತಕಾಯುವ, ಅವರಿಗೆ ಹಣಕಾಸು ಬೆಂಬಲ ನೀಡಬಲ್ಲ […]

ಹರಿಭಕ್ತ ತಾಮ್ರಧ್ವಜ

ಹರಿಭಕ್ತ ತಾಮ್ರಧ್ವಜ

ಕಿರಿಯರ ಲೋಕ - 0 Comment
Issue Date : 29.04.2015

ಮಹಾ ಧಾರ್ಮಿಕನೂ ಹರಿಭಕ್ತನೂ ಆದ ಮಯೂರಧ್ವಜನು ರತ್ನಪುರವನ್ನು ಆಳುತ್ತಿದ್ದನು. ಅವನಿಗೆ ಸಾತ್ವಿಕ ಶಿರೋಮಣಿಯೆನಿಸಿದ ತಾಮ್ರಧ್ವಜನೆಂಬ ಮಗನಿದ್ದ. ನಾರದನ ಮೂಲಕ ಶ್ರೀಕೃಷ್ಣನ ಮಹಿಮೆಗಳನ್ನು ಕೇಳಿದ್ದ ಅವರಿಬ್ಬರಿಗೂ ಶ್ರೀ ಕೃಷ್ಣನ ದರ್ಶನ ಪಡೆಯಬೇಕೆಂಬ ಮಹದಾಸೆಯಿತ್ತು. ಏಳು ಅಶ್ವಮೇಧಗಳನ್ನು ಅದಕ್ಕಾಗಿಯೇ ಮಾಡಿದಾಗಲೂ ಶ್ರೀಕೃಷ್ಣನನ್ನು ಕಾಣಲಿಲ್ಲ. ಆಗ ನಾರದನು, ‘‘ಎಂಟನೆಯ ಯಾಗವನ್ನು ಮಾಡಿದರೆ ನಿನ್ನ ಅಭೀಷ್ಟೆ ನೆರವೇರುತ್ತದೆ’’ ಎಂದು ಹೇಳಿದ. ಆ ಪ್ರಕಾರ ಮಯೂರಧ್ವಜನು ನರ್ಮದಾ ನದಿಯ ತೀರದಲ್ಲಿ ಯಾಗದ ಸಿದ್ಧತೆ ನಡೆಸಿದ. ಆ ವೇಳೆಗೆ ಪಾಂಡವರ ಅಶ್ವಮೇಧ ಯಾಗದ ಕುದುರೆಯು ರತ್ನಪುರವನ್ನು […]

 ಮೃತ್ಯುವನ್ನು ಸೋಲಿಸಿದ ಮಾರ್ಕಂಡೇಯ

ಮೃತ್ಯುವನ್ನು ಸೋಲಿಸಿದ ಮಾರ್ಕಂಡೇಯ

ಕಿರಿಯರ ಲೋಕ - 0 Comment
Issue Date : 19.04.2015

ಮೃಕಂಡು ಎಂಬ ಮುನಿಗೆ ಮರುದ್ವತಿ ಎಂಬ ಸತಿಯಿದ್ದಳು. ಅವರಿಗೆ ಹಲವಾರು ವ್ರತೋಪವಾಸಗಳನ್ನು ಆಚರಿಸಿದರೂ ಮಕ್ಕಳಾಗಿರಲಿಲ್ಲ. ಮಕ್ಕಳಿಲ್ಲದವನಿಗೆ ಸಾಯುಜ್ಯವಿಲ್ಲ ಎಂಬುದನ್ನು ಅರಿತ ಮೃಕಂಡುವು ಶಿವನನ್ನು ಕಠಿಣ ತಪಸ್ಸಿನಿಂದ ಒಲಿಸಿಕೊಂಡು ಸಂತಾನವಾಗುವ ವರವನ್ನು ಬೇಡಿದ. ಶಿವನು, ‘‘ಮುನಿಯೇ, ನಿನಗೆ ದುರಾಚಾರಿಯಾಗಿದ್ದುಕೊಂಡು ಚಿರಕಾಲ ಬಾಳುವ ಮಗನು ಬೇಕೋ, ಸಚ್ಚರಿತ್ರನಾಗಿದ್ದರೂ ಅಲ್ಪಾಯುಷಿಯಾದ ಕುವರನು ಬೇಕೋ? ಸದ್ಗುಣವಂತನಾದ ಮಗನು ಬೇಕಿದ್ದರೆ ಅವನು ಹದಿನಾರು ವರ್ಷ ಮಾತ್ರ ಬದುಕುತ್ತಾನೆ’’ ಎಂದು ಕೇಳಿದ. ದುರಾಚಾರಿಯಾದ ಮಗನನ್ನು ಮೃಕಂಡು ಇಷ್ಟಪಡಲಿಲ್ಲ. ‘‘ ದೇವಾ, ಪಾಪಿಯಾದ ಮಗನು ಎಷ್ಟು ಸಮಯ […]

ತೊಳೆದ ಕೊಳೆ

ತೊಳೆದ ಕೊಳೆ

ಕಿರಿಯರ ಲೋಕ - 0 Comment
Issue Date :

ಶ್ರಾವಸ್ತಿಯಲ್ಲಿ ಕುಬೇರ ಎಂಬ ಶ್ರೇಷ್ಠಿ ಇದ್ದ. ಅವನು ವ್ಯಾಪಾರದಲ್ಲಿ ಹಣ ಗಳಿಸಿ ತುಂಬ ಉದಾರಿಯೂ ಆಗಿದ್ದ. ತನ್ನ ಮನೆಯ ಚಿನ್ನದ ಕಡಾಯಿಯಲ್ಲಿ ದಿನವೂ ಮಧ್ಯಾಹ್ನ ಭರ್ತಿ ಹಾಲುಪಾಯಸ ತಯಾರಿಸುತ್ತಿದ್ದ. ಬಡವರ ಮಕ್ಕಳನ್ನು ಕರೆದು ತಾನೇ ಹುಟ್ಟಿನಿಂದ ದೊನ್ನೆಗಳಿಗೆ ಪಾಯಸ ತುಂಬಿಸಿ ಹಂಚುತ್ತಿದ್ದ. ಮಕ್ಕಳು ತಿಂದು ತೇಗುವುದು ಕಂಡು ಆತ ತೃಪ್ತನಾಗುತ್ತಿದ್ದ. ಹೀಗಿರಲು ಒಂದು ದಿನ ಅನಾಯಾಸವಾಗಿ ಕುಬೇರ ತೀರಿಕೊಂಡ. ಅವನಿಗೆ ಇಬ್ಬರು ಗಂಡು ಮಕ್ಕಳಿದ್ದರು, ಅವರು ತಮ್ಮ ಹೆಂಡತಿಯರ ಮಾತಿಗೆ ಕಿವಿಗೊಟ್ಟು ಮನೆಯನ್ನು ಒಡೆಯಲು ಸಿದ್ಧರಾದರು. ತಂದೆ […]

ಶ್ರದ್ಧೆಯ ಮೊದಲ ಹೆಜ್ಜೆ

ಕಿರಿಯರ ಲೋಕ - 0 Comment
Issue Date : 06.04.2015

ಕಲಾನಿಕೇತನದ ಪ್ರಾಚಾರ್ಯರಾಗಿದ್ದ ನಂದಲಾಲ್ ಬಸು ಅವರು ಅದೆಷ್ಟೋ ಮಂದಿ ವಿದ್ಯಾರ್ಥಿಗಳಿಗೆ ತನ್ನಲ್ಲಿರುವ ಕಲೆಯ ಗುಟ್ಟನ್ನು ಧಾರೆಯೆರೆದವರು. ಅವರು ಒಮ್ಮೆಯೂ ವಿದ್ಯಾರ್ಥಿಗಳ ಮೇಲೆ ಕೋಪಿಸಿಕೊಂಡವರಲ್ಲ. ಪ್ರೀತಿಯಿಂದಲೇ ಕಲೆಯ ಬಗೆಯನ್ನು ಹೇಳಿಕೊಡುತ್ತಿದ್ದರು. ‘ಕಲಿಯುವುದರಲ್ಲಿ ಶ್ರದ್ಧೆಯೇ ಮುಖ್ಯ. ಆದರೆ ರೇಖೆಗಳ ವಿಷಯದಲ್ಲಿ ಮಾತ್ರ ಗಮನ ಹರಿಸುವುದು ಶ್ರದ್ಧೆಯಲ್ಲ. ನಮ್ಮ ಬದುಕಿನ ಎಲ್ಲ ಕೆಲಸಗಳಲ್ಲೂ ನಾವು ಸಮಾನವಾಗಿ ತೊಡಗುವುದು ಕೂಡ ನಮ್ಮ ಕಲೆಗೆ ಅದು ಸಹಾಯಕವಾಗುತ್ತದೆ’ ಎಂದು ಅವರು ಹೇಳುತ್ತಿದ್ದರು. ಕಲಾ ಶಾಲೆಗೆ ಒಬ್ಬ ಸಿರಿವಂತರ ಹುಡುಗ ಬಂದಿದ್ದ. ಅವನಿಗೆ ಕಸ ಗುಡಿಸಿ ಗೊತ್ತಿಲ್ಲ. […]

ಅಡಗಿದ ದೇವರು

ಕಿರಿಯರ ಲೋಕ - 0 Comment
Issue Date : 06.04.2015

ಒಮ್ಮೆ ದೇವರು ಭೂಮಿಯ ಕಡೆಗೆ ನೋಡಿದ. ಕನಿಕರದಿಂದ ಅವನ ಮನಸ್ಸು ಕರಗಿತು. ಕರುಳು ಚುರ‌್ರೆಂದಿತು. ಮನುಷ್ಯರೆಲ್ಲರೂ ಪದ್ಮಾಸನ ಹಾಕಿ ಭಕ್ತಿಯಿಂದ ಕೈಜೋಡಿಸಿ ಕುಳಿತಿದ್ದಾರೆ. ಕಣ್ಮುಚ್ಚಿ ತನ್ನನ್ನೇ ಧ್ಯಾನಿಸುತ್ತಿದ್ದಾರೆ. ಪಾಪ, ಅದೆಷ್ಟು ಕಾಲದಿಂದ ಹೀಗೆ ದೈವಧ್ಯಾನದಲ್ಲಿ ತಲ್ಲೀನರಾಗಿದ್ದಾರೋ ಏನೊ! ಇವರಿಗೆ ಭಗವಂತನನ್ನು ಕಾಣುವ ಆಸೆ ಇನ್ನೆಷ್ಟು ಇರಲಿಕ್ಕಿಲ್ಲ! ದೇವರು ಹೀಗೆ ಯೋಚಿಸಿದ. ಧ್ಯಾನಮಗ್ನರಾದ ಭಕ್ತರ ಮುಂದೆ ತಾನೀಗ ಹೋದರೆ ಅವರೆಲ್ಲರೂ ಹರ್ಷಗೊಳ್ಳಬಹುದು. ನನ್ನ ಕಾಲಿಗೆರಗಿ ಆನಂದಾಶ್ರುಗಳಿಂದ ಕಾಲನ್ನು ತೊಳೆಯಬಹುದು, ಹಾಲು, ಹಣ್ಣುಗಳನ್ನು ತಂದು ರಾಶಿ ಹಾಕಿ ತಿನ್ನಲು ಒತ್ತಾಯಿಸಬಹುದು. ಆ […]

ಭಸ್ಮಾಸುರ

ಭಸ್ಮಾಸುರ

ಕಿರಿಯರ ಲೋಕ - 0 Comment
Issue Date : 17.03.2015

-ಎ.ಕೆ. ಪಟ್ಟಾಭಿ ಭಸ್ಮಾಸುರನಿಗೆ ಈಶ್ವರನಿಂದ ಒಂದು ವರ ಪ್ರಾಪ್ತಿಯಾ ಗಿತ್ತು. ಯಾರ ತಲೆಯ ಮೇಲೆ ಕೈ ಇಟ್ಟರೂ ತಕ್ಷಣವೇ ಅವರು ಸುಟ್ಟು ಬೂದಿಯಾಗುತ್ತಿದ್ದರು. ಈ ವರದಿಂದಾಗಿ ಭಸ್ಮಾಸುರನಿಗೆ ಅಹಂಕಾರ ಉಂಟಾಯಿತು. ಸಿಕ್ಕ ಸಿಕ್ಕವರ ತಲೆಯ ಮೇಲೆ ಕೈಯಿಡುವುದು, ಅವರೆಲ್ಲಾ ಸುಟ್ಟು ಬೂದಿಯಾಗುವುದು ಕಂಡು ಭಸ್ಮಾಸುರ ತನ್ನ ಸಮಾನ ಯಾರೂ ಇಲ್ಲವೆಂದು ಜಂಭದಿಂದ ಮೆರೆಯುತ್ತಿದ್ದ. ಒಮ್ಮೆ ಈ ವರವನ್ನು ಕೊಟ್ಟ ಶಿವನನ್ನೇ ಧ್ವಂಸ ಮಾಡಬೇಕೆಂದು ಯೋಚಿಸಿ ಶಿವನನ್ನು ಅಟ್ಟಿಸಿಕೊಂಡು ಓಡುತ್ತಾ ಅವನ ಶಿರದ ಮೇಲೆ ಕೈಯಿಡಲು ಮುಂದಾದ. ಈ […]

ಭಗೀರಥನ ಸಾಧನೆ

ಕಿರಿಯರ ಲೋಕ - 0 Comment
Issue Date : 16.03.2015

-ಪ. ರಾಮಕೃಷ್ಣ ಶಾಸ್ತ್ರಿ ಸಗರನೆಂಬಾತ ಸಜ್ಜನರನ್ನು ಬಾಧಿಸುತ್ತಿದ್ದ ರಾಜರನ್ನೆಲ್ಲಾ ಸೋಲಿಸಿ ಚಕ್ರವರ್ತಿಯಾದ. ತೊಂಬತ್ತೊಂಬತ್ತು ಅಶ್ವಮೇಧ ಯಾಗಗಳನ್ನು ಮಾಡಿದ. ಇನ್ನು ಒಂದು ಯಾಗ ಮಾಡಿದರೆ ಅವನು ಸ್ವರ್ಗದ ಒಡೆಯನಾಗಬಹುದೆಂದು ಹೆದರಿ ಇಂದ್ರನು ಯಾಗದ ಕುದುರೆಯನ್ನು ಅಪಹರಿಸಿ ಪಾತಾಳಲೋಕಕ್ಕೊಯ್ದು ಅಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲ ಮುನಿಯ ಹಿಂಬಾಗದಲ್ಲಿ ಕಟ್ಟಿ ಹಾಕಿದ. ಸಗರನಿಗೆ ಅರವತ್ತು ಸಾವಿರ ಮಂದಿ ಮಕ್ಕಳಿದ್ದರು. ಅವರು ಯಾಗದ ಕುದುರೆಯನ್ನು ಇಡೀ ಭೂಮಿಯಲ್ಲಿ ಹುಡುಕಿದರೂ ಸಿಗದೆ ಕಡೆಗೆ ಪಾತಾಳಲೋಕಕ್ಕೆ  ಹೋಗಿ, ಕುದುರೆಯನ್ನು ಕಂಡರು. ಕಪಿಲಮುನಿಯೇ ಕುದುರೆ ಕಳ್ಳನೆಂದು ಭಾವಿಸಿ ಅವನ […]

ದಾಸ್ಯ ವಿಮುಕ್ತಿ

ಕಿರಿಯರ ಲೋಕ - 0 Comment
Issue Date : 01.03.2015

-ಪ. ರಾಮಕೃಷ್ಣಶಾಸ್ತ್ರಿ ಕಶ್ಯಪ ಮುನಿಯ ಹಲವು ಪತ್ನಿಯರಲ್ಲಿ ಕದ್ರು ಮತ್ತು ವಿನತೆ ಎಂಬವರಿದ್ದರು. ಕದ್ರು ಸರ್ಪಕುಲದ ಮಾತೆಯಾಗಿದ್ದಳು. ಆದರೆ ವಿನತೆ ಇರಿಸಿದ್ದು ಎರಡೇ ಮೊಟ್ಟೆಗಳು. ಬಹುಕಾಲವಾದರೂ ಮೊಟ್ಟೆಗಳು ಒಡೆದು ಮಕ್ಕಳಾಗಲಿಲ್ಲ. ವಿನತೆ ಕುತೂಹಲದಿಂದ ಒಂದು ಮೊಟ್ಟೆಯನ್ನೊಡೆದಾಗ ಕಾಲುಗಳಿಲ್ಲದ ಅರುಣನೆಂಬ ಒಬ್ಬ ಮಗ ಹೊರಗೆ ಬಂದ. ಅವನು, ‘‘ಅಮ್ಮ, ಅವಸರದಿಂದ ಮೊಟ್ಟೆಯನ್ನು ಒಡೆದು ಕಾಲುಗಳ ಬೆಳವಣಿಗೆಯಾಗುವ ಮೊದಲೇ ನನ್ನ ಜನನಕ್ಕೆ ನೀನು ಕಾರಣಳಾದೆ. ಇದಕ್ಕಾಗಿ ನಿನಗೆ ದಾಸ್ಯವು ಪ್ರಾಪ್ತವಾಗುತ್ತದೆ. ಇನ್ನೊಂದು ಮೊಟ್ಟೆ ತಾನಾಗಿ ಒಡೆಯುವ ತನಕ ಕಾದಿರು. ಅದರಿಂದ […]