ಹೆಲ್ಪ್ ನೇಪಾಳ್

ಪ್ರಚಲಿತ - 0 Comment
Issue Date : 07.05.2015

ನೇಪಾಳದಲ್ಲಿ ಸಂಭವಿಸಿದ ಭೂಕಂಪ ಇಡೀ ಜಗತ್ತನ್ನೂ ತಲ್ಲಣಗೊಳಿಸಿದ್ದು ಸುಳ್ಳಲ್ಲ. ಹಲವು ರಾಷ್ಟ್ರಗಳು ಪರಿಹಾರ ಕಾರ್ಯದಲ್ಲಿ ನೆರವು ನೀಡುತ್ತಿವೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳು ‘ಹೆಲ್ಪ್ ನೇಪಾಳ್’ ಎಂಬ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚುವುದಕ್ಕೆ ಮುಂದಾಗಿವೆ. ಇಷ್ಟು ದಿನ ಸಾಕಷ್ಟು ವಿವಾದಗಳಿಂದಲೇ ಹೆಸರಾಗಿದ್ದ ಸಾಮಾಜಿಕ ಜಾಲತಾಣಗಳು ಇಂದು ತಮ್ಮ ನಿಜವಾದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯವೇ ಸರಿ.ಈ ಆ್ಯಪ್ ಸಂಬಂಧಿಗಳನ್ನು ಕಳೆದುಕೊಂಡವರಿಗೆ ಹುಡುಕುವುದಕ್ಕೂ ಸಹಾಯವಾಗುವುದಲ್ಲದೆ, ಕ್ಷಣ ಕ್ಷಣದ ಮಾಹಿತಿಯನ್ನೂ ನೀಡಲಿದೆ. ಎಲ್ಲೆಲ್ಲಿ ಆಶ್ರಯ ತಾಣಗಳಿವೆ, ಎಲ್ಲಿ ಆಹಾರ […]

ಬೇಸಗೆಯ ಧಗೆಗೆ ಪರಿಹಾರ

ಪ್ರಚಲಿತ - 0 Comment
Issue Date : 07.05.2015

ಬೇಸಗೆಯ ಧಗೆಯಂತೂ ಇತ್ತೀಚೆಗೆ ಏರುತ್ತಿರುವ ವೇಗವನ್ನು ನೋಡಿದರೆ ನಿಜಕ್ಕೂ ಭಯವಾಗುತ್ತದೆ. ಜಾಗತಿಕ ತಾಪಮಾನ ದಲ್ಲಿ ಗಣನೀಯ ಪ್ರಮಾಣದಲ್ಲಾದ ಏರಿಕೆ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಮನುಷ್ಯ ರೇನೋ ಧಗೆ ನೀಗಿಸಲು ಬೇರೆ ಬೇರೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಪ್ರಾಣಿಗಳ ಕತೆ ಯೇನು? ಅವಕ್ಕೆಲ್ಲಿಂದ ಎಸಿ ಸೌಲಭ್ಯ ಸಿಕ್ಕೀತು?! ಆದರೆ ದೆಹಲಿಯ ವನ್ಯಧಾಮವೊಂದು ಪ್ರಾಣಿಗಳಿಗೆ ತಂಪು ನೀಡಲು ಮುಂದಾಗಿದೆ.ವನ್ಯಧಾಮದಲ್ಲಿ ಮಧ್ಯೆ ಮಧ್ಯೆ ನೀರಿನ ಕಾರಂಜಿಯನ್ನು ನಿರ್ಮಿಸಿ ನೀರು ನಿರಂತರವಾಗಿ ಚಿಮ್ಮುತ್ತಲೇ ಇರುವಂತೆ ನೋಡಿಕೊಳ್ಳಲಾಗುತ್ತಿರುವುದರಿಂದ ಸಂಪೂರ್ಣ ವನ್ಯಧಾಮವೂ ತಂಪಾಗಿರುತ್ತದೆ. ಅಲ್ಲದೆ ಪ್ರಾಣಿಗಳಿಗೆ […]

ಬಂತು ನೈಸರ್ಗಿಕ ಕೀಟನಾಶಕ!

ಪ್ರಚಲಿತ - 0 Comment
Issue Date : 07.05.2015

ಯಾವುದೇ ಕಾಯಿಲೆ ಇರಲಿ, ವೈದ್ಯರ ಸಲಹೆ ಮಾತ್ರ ಒಂದೇ. ತಾಜಾ- ಹಣ್ಣು ತರಕಾರಿಗಳನ್ನು ತಿನ್ನಿ. ಸ್ವಸ್ಥವಾಗಿರಿ. ಆದರೆ ಈಗೀಗ ತಾಜಾ ಹಣ್ಣು ತರಕಾರಿಗಳೇ ಸಿಗದಿರುವಾಗ ಆರೋಗ್ಯ ಹೇಗೆ ಸ್ವಾಸ್ಥ್ಯಪೂರ್ಣವಾಗಿರುತ್ತದೆ? ಎಲ್ಲ ಆಹಾರ ಪದಾರ್ಥಗಳ ಮೇಲೂ ಕೀಟ ನಾಶಕ ಸಿಂಪಡಿಸುವುದಲ್ಲದೆ, ಭೂಮಿಗೂ ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ತಿನ್ನುವ ಆಹಾರವೇ ವಿಷಯುಕ್ತವಾಗುತ್ತಿದೆ. ಹೀಗಿರುವಾಗ ಲಂಡನ್ನಿನ ಕೆಲ ವಿಜ್ಞಾನಿಗಳ ನೈಸರ್ಗಿಕ ಕೀಟನಾಶಕಗಳನ್ನು ಸಿದ್ಧಪಡಿಸುವುದಕ್ಕೆ ತೊಡಗಿದ್ದಾರೆ.ಸಸ್ಯಗಳ ಮೇಲೆ ದಾಳಿ ನಡೆಸುವ ಕೀಟಗಳು ಸಾಮಾನ್ಯವಾಗಿ ಅವುಗಳ ವಾಸನೆಯನ್ನು ಗುರುತು ಹಿಡಿದು ದಾಳಿ ನಡೆಸುತ್ತವೆ. ಕೀಟನಾಶಕಗಳು […]

ಎಂಥ ಅಪರೂಪ ಈ ಚಿಟ್ಟೆ?

ಎಂಥ ಅಪರೂಪ ಈ ಚಿಟ್ಟೆ?

ಪ್ರಚಲಿತ - 0 Comment
Issue Date : 07.05.2015

ಚಿಟ್ಟೆಗಳ ಬದುಕು ಒಂದಷ್ಟು ದಿನದ್ದಾಗಿರಬಹುದು. ಆದರೆ ಅಷ್ಟೇ ದಿನ ಅವು ಬದು ಕುವ ರೀತಿ ಮಾತ್ರ ಆದರ್ಶಪ್ರಾಯ. ಬಣ್ಣ ಬಣ್ಣದ ರೆಕ್ಕೆ, ಆಕರ್ಷಕ ಚಿತ್ತಾರ ದೈವೀ ಸೃಷ್ಟಿಯ ವಿಸ್ಮಯ ದ ಬಗ್ಗೆ ಅಚ್ಚರಿ ಮೂಡಿಸುತ್ತದೆ. ತನ್ನ ಪಾಡಿಗೆ ತಾನಿ ದ್ದುಕೊಂಡು ಹೂವಿನ ಮಕರಂದ ಹೀರಿ, ಬದುಕು ನಡೆಸುವ ಚಿಟ್ಟೆಗಳನ್ನು ಇಷ್ಟಪಡದವರ‌್ಯಾರು? ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಚಿಟ್ಟೆ ಆಕರ್ಷಣೆಯ ಕೇಂದ್ರಬಿಂದುವೇ. ಚಿಟ್ಟೆಗಳಲ್ಲಿ ಸಾಕಷ್ಟು ಪ್ರಭೇದಗಳಿವೆ. ಅವುಗಳಲ್ಲಿ ಹಲವು ಇಂದಿಗೂ ಗುರುತಿಗೆ ಸಿಕ್ಕಿಲ್ಲದಿರಬಹುದು. ಏಕೆಂದರೆ ಇಂದಿಗೂ ಹಲವೆಡೆ ಹೊಸ […]

ಎಂಥಾ ಸುದ್ದಿ

ಎಂಥಾ ಸುದ್ದಿ

ಪ್ರಚಲಿತ - 0 Comment
Issue Date :

ಇದು ಸೌರ ವಿಮಾನ! ಸದ್ಯಕ್ಕೆ ಎಲ್ಲೆಲ್ಲೂ ಸೌರ ಶಕ್ತಿಯದ್ದೇ ಸುದ್ದಿ. ವಿದ್ಯುತ್ ವ್ಯತ್ಯಯ ಹೆಚ್ಚಾಗುತ್ತಿದ್ದಂತೆಯೇ ಪರ್ಯಾಯ ಉಪಾಯವಾಗಿ ಕಂಡಿದ್ದು ಸೌರಶಕ್ತಿಯೇ. ಇದೀಗ ಹಲವು ಯಂತ್ರಗಳು ಸೌರಶಕ್ತಿಯಿಂದಲೇ ನಡೆಯುತ್ತಿರುವುದು ನಮಗೆಲ್ಲ ಗೊತ್ತು. ಗೀಜರ್, ಟಿವಿ, ಲೈಟ್ ಇತ್ಯಾದಿ ಎಲ್ಲವೂ ಇದೀಗ ಸೌರಶಕ್ತಿಯಿಂದಲೇ ಜೀವ ಪಡೆಯಬಹುದಾಗಿದೆ. ಹಲವು ಪ್ರೀದೇಶಗಳಲ್ಲಿ ಸೌರಶಕ್ತಿ ಘಟಕಗಳನ್ನೂ ಸ್ಥಾಪಿಸುವ ಮೂಲಕ ಶಕ್ತಿಯ ಸಂರಕ್ಷಣೆಗೂ ಸರ್ಕಾರ ಮುಂದಾಗಿದೆ. ಹೀಗಿರುವಾಗ ಸೌರ ವಿಮಾನವನ್ನು ತಯಾರಿಸಿ, ಯಶಸ್ವಿಯಾಗಿ ಹಾರಿಸುವ ಮೂಲಕ ಚೀನಾ ಜಗತ್ತೇ ತನ್ನತ್ತ ನೋಡುವಂತೆ ಮಾಡಿದೆ. ಹವಾಮಾನ ವೈಪರೀತ್ಯದ […]

ಎಂಥಾ ಸುದ್ದಿ

ಎಂಥಾ ಸುದ್ದಿ

ಪ್ರಚಲಿತ - 0 Comment
Issue Date : 24.04.2015

ಕ್ಯಾಮರಾ ಕಣ್ಣನ್ನು ಪತ್ತೆ ಮಾಡಿ! ಇದಂತೂ ಶಾಪಿಂಗ್ ಜಮಾನಾ. ಎಷ್ಟಿದ್ದರೂ ಕಡಿಮೆ ಎಂಬ ನಮ್ಮ ಕೊಳ್ಳುಬಾಕ ಮನಸ್ಥಿತಿಯಿಂದಾಗಿಯೇ ಹಲವು ಕಂಪೆನಿಗಳು ಲೆಕ್ಕ ಮಾಡಲೂ ಆಗದಷ್ಟು ಹಣ ಗಳಿಸಿವೆ. ಶಾಪಿಂಗ್ ಮಾಡುವಲ್ಲಿ ಮಹಿಳೆಯರದೇ ಮೇಲುಗೈ. ಅದರಲ್ಲೂ ಬಟ್ಟೆಯನ್ನು ಕೊಳ್ಳುವುದರಲ್ಲಿ ಅವರೆಂದಿಗೂ ಹಿಂದೆ ಬಿದ್ದಿಲ್ಲ. ಈಗೆಲ್ಲ ನಮ್ಮ ನಿಲುವಿಗೆ ಸರಿಹೊಂದುವ ಬಟ್ಟೆಯನ್ನು ಅಲ್ಲಿಯೇ ಧರಿಸಿ ನಂತರ ಖರೀದಿಸಬಹುದು. ಹೀಗೆ ಬಟ್ಟೆಯನ್ನು ಧರಿಸಿ ನೋಡುವುದಕ್ಕಾಗಿಯೇ ಬಟ್ಟೆ ಅಂಗಡಿಗಳಲ್ಲಿ ಕಂಡುಬರುವ ಟ್ರಯಲ್ ರೂಮ್‌ಗಳು ಎಷ್ಟು ಸುರಕ್ಷಿತ ಎಂಬುದು ಇತ್ತೀಚೆಗೆ ಎದ್ದಿದ್ದ ಪ್ರಶ್ನೆ. ಹಲವು […]

ಭಾರತ ಪರಿಕ್ರಮಯಾತ್ರೆಗೆ 962ನೇ ದಿನ- ಅಸ್ಸಾಂ ರಾಜ್ಯಕ್ಕೆ ಪ್ರವೇಶ

ಭಾರತ ಪರಿಕ್ರಮಯಾತ್ರೆಗೆ 962ನೇ ದಿನ- ಅಸ್ಸಾಂ ರಾಜ್ಯಕ್ಕೆ ಪ್ರವೇಶ

ಪ್ರಚಲಿತ - 0 Comment
Issue Date : 20.04.2015

ಶ್ರೀರಾಮಪುರ(ಕೊಕ್ರಾಜಾರ್ ಜಿಲ್ಲೆ, ಅಸ್ಸಾಂ): ಆರೆಸ್ಸೆಸ್‌ನ ಹಿರಿಯ ಪ್ರಚಾರಕರಾದ ಸೀತಾರಾಮ ಕೆದಿಲಾಯ ನೇತೃತ್ವದ ಭಾರತ ಪರಿಕ್ರಮ ಯಾತ್ರೆಯು ಇದೀಗ ಅಸ್ಸಾಂ ರಾಜ್ಯಕ್ಕೆ ಪ್ರವೇಶಿಸಿದ್ದು, ಯಾತ್ರೆ ಪರಿಕ್ರಮಿಸಿದ 15ನೇ ರಾಜ್ಯ ಇದಾಗಿದೆ. ಮಾ. 30ರಂದು ಯಾತ್ರೆ ಇಲ್ಲಿಗೆ ಆಗಮಿಸಿತು. ಪ. ಬಂಗಾಳದ ಅಲಿಪುರ್‌ವಾರ್ ಜಿಲ್ಲೆಯ ಪಕಡಿಗುಡಿ ಗ್ರಾಮದಿಂದ ಯಾತ್ರೆ ಅಸ್ಸಾಂಗೆ ಪ್ರವೇಶಿಸಿತು. ನಿಗದಿತ ಕಾರ್ಯಕ್ರಮದ ಪ್ರಕಾರ, ಭಾರತ ಪರಿಕ್ರಮ ಯಾತ್ರೆಯು ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ಪ್ರದೇಶದ ಎಲ್ಲ ರಾಜ್ಯಗಳಲ್ಲಿ ಡಿಸೆಂಬರ್ 2015ರವರೆಗೆ ಸಂಚರಿಸಲಿದೆ. 2016ರ ಜನವರಿಯಲ್ಲಿ ಯಾತ್ರೆಯು ಮತ್ತೆ […]

ಹತ್ಯೆಯನ್ನು ಸಮರ್ಥಿಸಿಕೊಳ್ಳುವವರು

ಹತ್ಯೆಯನ್ನು ಸಮರ್ಥಿಸಿಕೊಳ್ಳುವವರು

ಪ್ರಚಲಿತ - 0 Comment
Issue Date : 19.04.2015

ಕೆಲವರ ವಿಕೃತ ಮನಸ್ಥಿತಿಯ ಬಗ್ಗೆ ಅಧ್ಯಯನ ಮಾಡಿದರೆ ಅಚ್ಚರಿಯಾಗಬಹುದು. ಅಂಥವರ ಮನಸ್ಸಿನಲ್ಲಿ ಆ ಮಟ್ಟಿನ ಕ್ರೌರ್ಯ ಹುಟ್ಟಿದ್ದು ಯಾಕೆಂದು ಪ್ರಶ್ನೆ ಏಳಬಹುದು. ತಮ್ಮ ಪ್ರತಿಯೊಂದು ಕೆಲಸವನ್ನೂ ಸಮರ್ಥಿಸಿಕೊಳ್ಳುವ ಅವರೆಲ್ಲ ತಾವು ಮಾಡಿದ ಹತ್ಯೆಯನ್ನೂ ಸರಿ ಎಂದೇ ವಾದಿಸುತ್ತಾರೆ. ಅದರಲ್ಲಿ ತಪ್ಪಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಅವರಲ್ಲಿರುವುದಿಲ್ಲ. ಈ ಕುರಿತಂತೆ ಇತ್ತೀಚೆಗೆ ಆಸ್ಟ್ರೇಲಿಯದ ಮೆಲ್ಬರ್ನ್‌ನಲ್ಲಿ ನಡೆದ ಸಂಶೋಧನೆಯೊಂದು ಅಧ್ಯಯನ ನಡೆಸಿದೆ.  ಈ ಸಂಶೋಧನೆಯಿಂದ ತಿಳಿದು ಬಂದ ಸಂಗತಿಯೆಂದರೆ ಕೆಲವರ ಮೆದುಳಿನ ಸ್ವರೂಪವೇ ವಿಕೃತಿಯನ್ನು ಪ್ರೋತ್ಸಾಹಿಸುವಂತಿರುತ್ತದೆಯಂತೆ. ಭಾವನೆಗಳನ್ನು ಸೃಷ್ಟಿಮಾಡುವ ಭಾಗಗಳು […]

ಶಾಲೆಗಳು ಸಾಮಾಜಿಕ ಉತ್ಥಾನದ ಕೇಂದ್ರಗಳಾಗಲಿ: ಭಯ್ಯಾಜಿ ಜೋಶಿ

ಶಾಲೆಗಳು ಸಾಮಾಜಿಕ ಉತ್ಥಾನದ ಕೇಂದ್ರಗಳಾಗಲಿ: ಭಯ್ಯಾಜಿ ಜೋಶಿ

ಪ್ರಚಲಿತ - 0 Comment
Issue Date : 14.04.2015

ಅಹಮದಾಬಾದ್: ಜಗತ್ತಿನ ಮುಂದೆ ವರ್ತಮಾನ ಕಾಲದಲ್ಲಿ ಎದುರಾಗಿರುವ ಹಲವು ಬಗೆಯ ಸವಾಲು ಗಳಿಗೆ ಭಾರತ ಪರಿಹಾರವನ್ನು ಒದಗಿಸುತ್ತಿದೆ. ಅನೇಕ ಬಗೆಯ ಸವಾಲುಗಳ ನಡುವೆಯೂ ನಾವು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ. ಇದಕ್ಕೆ ಕಾರಣ ನಮ್ಮ ವಿಕೇಂದ್ರಿತ ಸಾಮಾಜಿಕ ವ್ಯವಸ್ಥೆ. ನಮ್ಮ ಧಾರ್ಮಿಕ ಕ್ಷೇತ್ರಗಳ ಮೇಲೆ ಆಕ್ರಮಣಗಳು ನಡೆದಿವೆ. ಆದರೆ ನಮ್ಮ ಸಾಮಾಜಿಕ ಸಂರಚನೆಯ ಮೇಲೆ ಅದು ಯಾವುದೇ ದುಷ್ಪರಿಣಾಮ ಬೀರಿಲ್ಲ ಎಂದು ಆರೆಸ್ಸೆಸ್ ಸರಕಾರ್ಯವಾಹ ಭಯ್ಯಾಜಿ ಜೋಶಿ ಅವರು ಇಲ್ಲಿ ಸೇರಿದ್ದ ಸ್ವಯಂಸೇವಕರ ಸಮಾವೇಶವನ್ನುದ್ದೇಶಿಸಿ ಹೇಳಿದರು. ಸಂಘ […]

ಸಮಾಜವನ್ನು ನಮ್ಮ ಕುಟುಂಬದಂತೆ ಬಲಪಡಿಸಿ: ಭಾಗವತ್

ಸಮಾಜವನ್ನು ನಮ್ಮ ಕುಟುಂಬದಂತೆ ಬಲಪಡಿಸಿ: ಭಾಗವತ್

ಪ್ರಚಲಿತ - 0 Comment
Issue Date : 14.04.2015

ರಿದ್ದಿಪುರ (ಮಹಾರಾಷ್ಟ್ರ): ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಅಮರಾವತಿ ಜಿಲ್ಲೆಯ ಪ್ರಸಿದ್ಧ ರಿದ್ದಿಪುರ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ರಿದ್ದಿಪುರ ಗ್ರಾಮವು ಮಹಾನುಭಾವ ಪಂಥದ ಸ್ಥಾಪಕ ಚಕ್ರಧರಸ್ವಾಮಿ ಅವರು ಮರಾಠಿಯಲ್ಲಿ ಮೊದಲ ಪುಸ್ತಕ ರಚಿಸಿದ ಸ್ಥಳವೆಂದು ಖ್ಯಾತವಾಗಿದೆ. ಭಾರತದ ಶಕ್ತಿ ಇರುವುದೇ ಆಧ್ಯಾತ್ಮಿಕತೆಯಲ್ಲಿ. ಹಿಂದು ಸಂಸ್ಕೃತಿಯನ್ನು ಒಂದು ವಾಕ್ಯದಲ್ಲಿ ವಿವರಿಸಬಹುದು. ಆದರೆ ಅದನ್ನು ಪ್ರತಿನಿತ್ಯ ನಮ್ಮ ಜೀವನದಲ್ಲಿ ಪಾಲಿಸುವುದು ಅಷ್ಟು ಸುಲಭವಲ್ಲ. ಒಂದು ಪಂಥವನ್ನು ಗುರುತಿಸಲು ಹಿಂದು ಸಮಾಜಕ್ಕೆ 800 ವರ್ಷಗಳಷ್ಟು ದೀರ್ಘಕಾಲ ಬೇಕಾಯಿತು. ಇದರಿಂದಾಗಿ […]