'ಮನ್‍ ಕೀ ಬಾತ್‍' ಅಲ್ಲ; ಈಗ ಬೇಕಾಗಿರುವುದು 'ಕಾಮ್‍ ಕೀ ಬಾತ್‍'!

‘ಮನ್‍ ಕೀ ಬಾತ್‍’ ಅಲ್ಲ; ಈಗ ಬೇಕಾಗಿರುವುದು ‘ಕಾಮ್‍ ಕೀ ಬಾತ್‍’!

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 03.12.2015

ಬಿಹಾರದ ಮಹಾಸಂಗ್ರಾಮ ದಲ್ಲಿ ನಿತೀಶಕುಮಾರ್ ಮತ್ತು ಲಾಲೂಪ್ರಸಾದ್‌ಯಾದವ್‌ವಿಜಯಿಯಾದರು, ನರೇಂದ್ರ ಮೋದಿ ಮತ್ತು ಅಮಿತ್ ಶಹಾರಿಗೆ ಪರಾಭವವಾಯಿತು. ವಿಜಯ ಗಳಿಸಿದವರ ಪಾಳಯದಲ್ಲಿ ಆನಂದವಿದ್ದರೆ, ಪರಾಭವ ಹೊಂದಿದವರ ಪಾಳಯದಲ್ಲಿ ದುಃಖವಿದೆ. ಇದು ತೀರಾ ಸ್ವಾಭಾವಿಕವೇ. ನಿತೀಶಕುಮಾರ್ ಮತ್ತು ಲಾಲೂಪ್ರಸಾದ್ ಅವರಿಗೆ ಹಾರ್ದಿಕ ಅಭಿನಂದನೆಗಳು !  ಅವರ ಮಹಾಮೈತ್ರಿಗೆ 243 ರಲ್ಲಿ 178 ಸ್ಥಾನಗಳು ಲಭಿಸಿವೆ. ಈ ರಾಜಕೀಯ ಯಶಸ್ಸು ಖಂಡಿತ ಅಭಿನಂದನೀಯ ಮತ್ತು ಪ್ರಶಂಸೆಗೆ ಪಾತ್ರವಾಗಿದೆ. ಪ್ರಜಾತಂತ್ರೀಯ ರಾಜ್ಯವ್ಯವಸ್ಥೆಯಲ್ಲಿ ಯಾರು ಆಡಳಿತ ನಡೆಸಬೇಕೆಂದು ಜನತೆ ನಿಶ್ಚಯಿಸುತ್ತದೆ. ಬಿಹಾರದ ಆಡಳಿತವನ್ನು ನಿತೀಶಕುಮಾರ್ […]

ಶಿವಸೇನೆಯಿಂದ ಬಹಿಷ್ಕಾರ;   ಆದರೆ ಕ್ಯಾರೇ ಎನ್ನುವರಾರು?

ಶಿವಸೇನೆಯಿಂದ ಬಹಿಷ್ಕಾರ; ಆದರೆ ಕ್ಯಾರೇ ಎನ್ನುವರಾರು?

ರಮೇಶ್ ಪತಂಗೆ ; ಲೇಖನಗಳು - 1 Comment
Issue Date : 03.11.2015

ಬಿಜೆಪಿಯು ಶಿವಸೇನೆಗೆ ಕವಡೆಯ ಕಿಮ್ಮತ್ತೂ ನೀಡುತ್ತಿಲ್ಲ, ಈ ಸಂಗತಿ ಹೊಸದೇನಲ್ಲ. ಶಿವಸೇನೆಯನ್ನು ತಲೆಯ ಮೇಲೆ ಕೂರಿಸಿಕೊಳ್ಳ ಬಾರದೆಂದು ಹೇಳುವ ಕಾರ್ಯಕರ್ತರ ವರ್ಗವು 30-35 ವರ್ಷಗಳಿಂದ ಬಿಜೆಪಿಯಲ್ಲಿದೆ. ಆದರೆ ಅವರ ಮಾತು ಕೇಳುವ ನಾಯಕರಿರಲಿಲ್ಲ. ಈಗ ಆ ನಾಯಕರೂ ಇಲ್ಲ, ಆದರೆ ಕಾರ್ಯಕರ್ತರಿದ್ದಾರೆ. ಅಲ್ಲದೆ ಕಾರ್ಯಕರ್ತರ ಮಾತು ಕೇಳುವ ನಾಯಕರೂ ಇದ್ದಾರೆ. ಈ ರೀತಿಯ ಸಂಬಂಧ ಮುಂದುವರಿ ಯುವವರೆಗೂ ಇಂದಿನ ಪರಿಸ್ಥಿತಿಯೇ ಇರುವುದು.  ನಮ್ಮಂತಹ ಸಾಮಾನ್ಯ ಜನ ಅನೇಕ ವಿಷಯಗಳಿಂದ ಗಾವುದ ದೂರವಿರುತ್ತಾರೆ. ಅದರಲ್ಲಿನ ಒಂದು ವಿಷಯ, ಪ್ರಸಿದ್ಧಿ. […]

ಶ್ರೀಗುರೂಜಿಯವರ ಛಾಯಾರೂಪ ಪಂ. ದೀನದಯಾಳ್‌ಜಿ

ಶ್ರೀಗುರೂಜಿಯವರ ಛಾಯಾರೂಪ ಪಂ. ದೀನದಯಾಳ್‌ಜಿ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 30.10.2015

ಪಂ. ದೀನದಯಾಳ್ ಉಪಾಧ್ಯಾಯರಿಗೆ ರಾಜಕಾರಣದಲ್ಲೇನೂ ಆಸಕ್ತಿಯಿರಲಿಲ್ಲ. ಅವರಿಗೆ ಸಂಘಕಾರ್ಯದಲ್ಲಿ ಅಪಾರ ಆಸಕ್ತಿಯಿತ್ತು. ರಾಜಕಾರಣದಲ್ಲಿ ಅಧಿಕಾರ ಗಳಿಸಲು ಮಹತ್ವಾಕಾಂಕ್ಷೆ ಹೊಂದಿರಬೇಕು ಹಾಗೂ ಅಧಿಕಾರ ಹೇಗೆ ದಕ್ಕೀತೆಂದು ಊಹೆಗಳ ಗೋಪುರ ಕಟ್ಟಬೇಕು, ಅದಕ್ಕಾಗಿ ಅನೇಕ ಹೊಯ್ದಾಟ, ಕಸರತ್ತು  ಮಾಡಬೇಕು. ರಾಜಕಾರಣ ಸದಾ ತನ್ನ ರೂಪ ಬದಲಾಯಿಸುತ್ತ  ಇರುತ್ತದೆ. ಅದು ಚಂಚಲ ಸ್ವರೂಪದ್ದು. ನಮ್ಮ ಪೂರ್ವಜರು ಅದನ್ನು ‘ವಾರಾಂಗನೇವ ನೃಪನೀತಿಃ  ಅನೇಕರೂಪಾಃ’ ಎಂದು ವರ್ಣಿಸಿದ್ದಾರೆ. ದೀನದಯಾಳ್‌ಜಿ ಅಂತರ್ಬಾಹ್ಯ ಸಾತ್ವಿಕರಾಗಿದ್ದರು.   ಪಂ.  ದೀನದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿಯ ವರ್ಷವಿದು. ಪಂಡಿತ್‌ಜಿಯವರಿಗೆ ಲಭಿಸಿದ್ದು ಅಲ್ಪಾ […]

ಮೀಸಲಾತಿ: ಅಸಂಬದ್ಧ ಪ್ರಲಾಪ

ಮೀಸಲಾತಿ: ಅಸಂಬದ್ಧ ಪ್ರಲಾಪ

ರಮೇಶ್ ಪತಂಗೆ - 0 Comment
Issue Date : 15.10.2015

ರಾಷ್ಟ್ರಸಮೀಕ್ಷೆಗೆ ಹೆದರುವವರು ಪ್ರಗತಿ ಸಾಧಿಸಲಾರರು. ಅಲ್ಲದೆ ಅದು ಮುಗ್ಗರಿಸಲು ಸಮಯ ಹಿಡಿಯದು. ಸಾವಿರ-ಒಂದೂವರೆ ಸಾವಿರ ವರ್ಷ ಕಾಲ ನಾವು ಸಮೀಕ್ಷೆ ಮಾಡುವುದನ್ನು ಬಿಟ್ಟಿದ್ದೆವು. ಇದರ ಪರಿಣಾಮವಾಗಿ ಅಸ್ಪೃಶ್ಯತೆ ಬಹು ಬಿಗುವಾಯಿತು. ಜಾತಿಭೇದ ಬಹು ಕಟ್ಟುನಿಟ್ಟಾಯಿತು, ಸ್ತ್ರೀಯರ ಮೇಲಿನ ನಿರ್ಬಂಧಗಳು ಬಿಗುವಾದವು, ವಿದೇಶ ಸಂಚಾರ ನಿಷಿದ್ಧವಾಯಿತು ಹಾಗೂ ದೇಶವು ವಿಕೃತ ವಿಚಾರಗಳ ಒಂದು ಕಾರಾಗೃಹವಾಯಿತು. ಈಗ ಪುನಃ ಅಂತಹ ಪರಿಸ್ಥಿತಿ ಬರಲು ಬಿಡಬಾರದು. ಆದ್ದರಿಂದ ನಾವೇನೇ ಮಾಡುತ್ತಿರುವ ಬಗ್ಗೆ ಮುಕ್ತ ಚಿಂತನೆ ಮಾಡಬೇಕು.  ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ […]

ಸಮನ್ವಯ ಸಮಿತಿಯ ಬೈಠಕ್‍ ಎಂದರೇನು?

ಸಮನ್ವಯ ಸಮಿತಿಯ ಬೈಠಕ್‍ ಎಂದರೇನು?

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 08.10.2015

ಸಂಘವು ಬಿಜೆಪಿಯನ್ನು ನಡೆಸುತ್ತಿದೆ ಅಥವಾ ಸಂಘವು ದಿಲ್ಲಿಯ ಆಡಳಿತ ನಡೆಸುತ್ತಿದೆ ಎಂದು ಅನೇಕರು ಬುಡವಿಲ್ಲದ ಆರೋಪಗಳನ್ನು ಮಾಡಿದ್ದಾರೆ. ಇವೆಲ್ಲ ಮಂದಿಗೆ ಸಂಘವೆಂದರೇನು, ಸಂಘದ ಸಮನ್ವಯ ಸಮಿತಿಯ ಬೈಠಕ್ ಎಂದರೇನು ಎಂಬ ಮಾಹಿತಿಯು ಸೊನ್ನೆಯೇ. 10 ಜನಪಥ್‌ನಿಂದ ಸೋನಿಯಾ ಗಾಂಧಿಯವರು ರಿಮೋಟ್‌ಕಂಟ್ರೋಲ್ ಮೂಲಕ ಮನಮೋಹನ ಸಿಂಗ್‌ರ ಸರ್ಕಾರ ನಡೆಸಿದ್ದಂತೆಯೇ ಸಂಘವೂ ಮಾಡುತ್ತಿದೆ, ಎಂದು ಅವರಿಗೆ ಅನಿಸುತ್ತಿದೆ. ಮೋಹನಜಿ ಭಾಗವತ್ ಸಂಘದ ಪ್ರಮುಖರಾಗಿದ್ದು, ಅವರ ಬಳಿ ರಿಮೋಟ್‌ಕಂಟ್ರೋಲ್ ಇರುತ್ತದಂತೆ!   ವಸ್ತು ಸ್ಥಿತಿ ಹೀಗಿರುವುದಿಲ್ಲ. ದಿಲ್ಲಿಯಲ್ಲಿ  ಸೆಪ್ಟೆಂಬರ್ 2, 3, 4ರಂದು […]

ಕಮ್ಯುನಿಸ್ಟರಿಗೂ ಬೇಕಾಗಿದೆ: ಧರ್ಮದ ಗುಳಿಗೆ

ಕಮ್ಯುನಿಸ್ಟರಿಗೂ ಬೇಕಾಗಿದೆ: ಧರ್ಮದ ಗುಳಿಗೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 22.09.2015

ಕೇರಳದ ಕಮ್ಯುನಿಸ್ಟ್ ಪಕ್ಷವು ಈ ವರ್ಷದ ಕೃಷ್ಣಜನ್ಮಾಷ್ಟಮಿ ಯಂದು ಬಾಲಗೋಪಾಲರ ಮೆರವಣಿಗೆ ನಡೆಸಿತ್ತು. ಭಾರತೀಯ ರಾಜಕಾರಣದ ಒಂದು ಚಮತ್ಕಾರವಿದು. ನಾಳೆ ಭಾರತೀಯ ಜನತಾ ಪಕ್ಷವು ಒಂದು ವೇಳೆ ಕಾರ್ಲ್ ಮಾರ್ಕ್ಸ್, ಲೆನಿನ್, ಮಾವೋ ಇವರ ಜಯಂತಿಯನ್ನು ಆಚರಿಸುವ ಕಾರ್ಯಕ್ರಮವನ್ನು ಏರ್ಪಡಿಸಿದಲ್ಲಿ ಏನಾದೀತು ? ಜಗತ್ತೆಲ್ಲ ನಿಬ್ಬೆರಗಾದೀತು. ಅಂತೆಯೇ ಕೇರಳದ ಕಮ್ಯುನಿಸ್ಟ್ ಪಕ್ಷವು ಕೃಷ್ಣಜನ್ಮಾಷ್ಟಮಿಯಂದು ಬಾಲಗೋಪಾಲರನ್ನು ಕೃಷ್ಣರ ರೂಪದಲ್ಲಿ ಸಿಂಗರಿಸಿ ಮೆರವಣಿಗೆೆ ನಡೆಸಲು ತೀರ್ಮಾನಿಸಿದಾಗ ಎಲ್ಲರಿಗೂ ಆಶ್ಚರ್ಯವಾಯಿತು.  ನಮ್ಮ ದೇಶದಲ್ಲಿ ಎರಡು ರೀತಿಯ ಕಮ್ಯುನಿಸ್ಟರಿದ್ದಾರೆ. ಒಂದು ಎಡ ಕಮ್ಯುನಿಸ್ಟರು […]

ಅಂಬೇಡ್ಕರ್ ವಿಚಾರಗಳನ್ನು ಸ್ಮರಿಸಿ

ಅಂಬೇಡ್ಕರ್ ವಿಚಾರಗಳನ್ನು ಸ್ಮರಿಸಿ

ರಮೇಶ್ ಪತಂಗೆ - 0 Comment
Issue Date : 12.09.2015

-ರಮೇಶ್‍ ಪತಂಗೆ ಪ್ರಜಾತಂತ್ರದಲ್ಲಿ ರಾಜಕೀಯ ಪಕ್ಷಗಳು ಅನಿವಾರ್ಯ ಎಂಬುದು ಡಾ. ಅಂಬೇಡ್ಕರರ  ಅಭಿಪ್ರಾಯವಾಗಿತ್ತು. ರಾಜಕೀಯ  ಪಕ್ಷಗಳಿಲ್ಲದೆ ಪ್ರಜಾತಂತ್ರೀಯ ರಾಜ್ಯಪದ್ಧತಿ ಅಸ್ತಿತ್ವದಲ್ಲಿರಲಾರದು. ಸಂಸದೀಯ ವ್ಯವಸ್ಥೆಯಲ್ಲಿ ಎರಡು ಪ್ರಬಲ ರಾಜಕೀಯ ಪಕ್ಷಗಳ ಅವಶ್ಯಕತೆಯಿದೆ. ರಾಜಕೀಯ ಪಕ್ಷಗಳು ಅಧಿಕಾರ ವಶಪಡಿಸಿಕೊಳ್ಳುವ ಧೋರಣೆ ಖಂಡಿತ ಇಟ್ಟುಕೊಳ್ಳಲಿ, ಆದರೆ ಪ್ರಜಾತಂತ್ರೀಯ ಆಡಳಿತದ ಬಗ್ಗೆ ಅವರ ನಿಷ್ಠೆಯಿರಬೇಕು. ಪ್ರಜಾತಂತ್ರವು ಚೆನ್ನಾಗಿ ನಡೆಯಲು ರಾಜಕೀಯ ಪಕ್ಷಗಳ ಅವಶ್ಯಕತೆಯಿದೆ. ಯಾವುದೇ ರಾಜಕೀಯ ಪಕ್ಷವನ್ನು ಶಾಶ್ವತವಾಗಿ ಮುಗಿಸುವೆವೆಂಬ ಮಾತು  ಪ್ರಜಾತಂತ್ರಕ್ಕೆ ತೀರಾ ಮಾರಕವಾಗಿದೆ.    ಸಂಸತ್ತಿನ  ಮಳೆಗಾಲದ ಅಧಿವೇಶನವು ಯಾವ  […]

ಕಾಂಗ್ರೆಸ್ಸು ಉತ್ತರಿಸಲೇಬೇಕು

ಕಾಂಗ್ರೆಸ್ಸು ಉತ್ತರಿಸಲೇಬೇಕು

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 31.08.2015

ಕಾಂಗ್ರೆಸ್ಸಿನ ರಾಜಕಾರಣವೆಲ್ಲ ದೇಶದ ಅಭಿವೃದ್ಧಿಗೆ ಕೇಡು ಬಗೆಯುವಂತ ಹದ್ದಾಗಿದೆ. ದೇಶಕ್ಕೆ ಅದೆಷ್ಟೋ ಜಟಿಲ ಸಮಸ್ಯೆಗಳು ಎದುರಾಗಿವೆ. ದಕ್ಷಿಣದ ಅನೇಕ ರಾಜ್ಯಗಳಲ್ಲಿ ಮಳೆಯ ಪ್ರಮಾಣ ಬಹು ಕಡಿಮೆಯೇ. ಕೆಲವೆಡೆ ಬರಗಾಲದ, ಇನ್ನು ಕೆಲವೆಡೆ ಅರೆಬರಗಾಲದ ಪರಿಸ್ಥಿತಿಯಿದೆ. ಇದು ಪ್ರಾಕೃತಿಕ ವಿಕೋಪವೇ. ಪಾಕಿಸ್ಥಾನದ ನೆಲದಿಂದ ಭಾರತದ ಮೇಲೆ ಭಯೋತ್ಪಾದಕ ಹಲ್ಲೆಗಳು ನಿಂತಿಲ್ಲ. ಅವುಗಳನ್ನು ಎದುರಿಸುವ ಬಗೆ ಹೇಗೆ? ಇದೊಂದು ರಾಷ್ಟ್ರೀಯ ಸಮಸ್ಯೆ. ಇದು ಯಾವ ಅರ್ಥದಲ್ಲೂ ಪಕ್ಷದ ಸಮಸ್ಯೆಯಲ್ಲ.   ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಕಾಂಗ್ರೆಸ್ಸು ತನ್ನ ಅಸಂಸದೀಯ ವ್ಯವಹಾರದಿಂದ […]

ಎರಡು ದೇಶ, ಎರಡು ವಿಭಿನ್ನ ಸಂಸ್ಕೃತಿ

ಎರಡು ದೇಶ, ಎರಡು ವಿಭಿನ್ನ ಸಂಸ್ಕೃತಿ

ರಮೇಶ್ ಪತಂಗೆ - 0 Comment
Issue Date : 24.08.2015

ಭಾರತ ಮತ್ತು ಪಾಕಿಸ್ಥಾನಗಳು ಆಗಸ್ಟ್ 15ರಂದು ತಮ್ಮ ಸ್ವಾತಂತ್ರ್ಯದ 69ನೇ ವಾರ್ಷಿಕ ದಿವಸ ಆಚರಿಸಿವೆ. ‘ಟೇಲ್ ಆಫ್ ಟೂ ಸಿಟೀಸ್’ಇದು ಚಾರ್ಲ್ಸ್ ಡಿಕೆನ್ಸ್ ನ ಬಹು ಪ್ರಸಿದ್ಧ ಕಾದಂಬರಿ. ಈ ಕಾದಂಬರಿಯಲ್ಲಿ ಆತ ಫ್ರಾನ್ಸಿನ ರಾಜ್ಯಕ್ರಾಂತಿಯ ಮುಂಚೆ ಪ್ಯಾರಿಸ್ ಮತ್ತು ಲಂಡನ್ ನಗರಗಳ ಜನಜೀವನವನ್ನು ನಿರೂಪಿಸಿದ್ದಾನೆ. ಭಾರತ ಮತ್ತು ಪಾಕಿಸ್ಥಾನಗಳನ್ನು 69ನೇ ವರ್ಷದಲ್ಲಿ ತುಲನೆ ಮಾಡುವ ಒಂದು ಕಾದಂಬರಿಯನ್ನು ಪ್ರತಿಭಾವಂತ ಕಾದಂಬರಿಕಾರನೊಬ್ಬ ಬರೆಯಲು ಅಡ್ಡಿಯೇನಿಲ್ಲ. ನಾನೇನೂ ಕಾದಂಬರಿಕಾರನಲ್ಲ. ಹಾಗೆಂದೇ ಕಾದಂಬರಿಯ ರೂಪದಲ್ಲಿ ಬರೆಯದೆ 2015ರಲ್ಲಿ ಎರಡು ದೇಶಗಳ […]

ಭಾರತದ ವಿನಮ್ರ ಚಹರೆ

ಭಾರತದ ವಿನಮ್ರ ಚಹರೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 06.08.2015

ಎಪಿಜೆ ದೂರ ತೆರಳಿದ್ದಾರೆ. ಮೋಡವೊಂದು ತನ್ನೆಲ್ಲ ನೀರನ್ನು ಧರಣಿಗೆ ನೀಡಿ ಬರಿದಾಗುವಂತೆ ಎಪಿಜೆ ಹೊರಟು ಹೋಗಿದ್ದಾರೆ. ನೀರು ಎಂದರೆ ಜೀವನ, ಅದನ್ನು ಸಂಗ್ರಹಿಸಿಡಬೇಕು, ಕಾಪಾಡಿಕೊಂಡು ಬಳಸಬೇಕು ಹಾಗೂ ಜೀವನವನ್ನು ಸಮೃದ್ಧಗೊಳಿಸಬೇಕು. ಆತನ ಕನಸಿನ ಭಾರತವನ್ನು ನನಸಾಗಿಸುವುದೇ ಈ ಭಾರತಭಕ್ತನಿಗೆ ನಿಜವಾದ ಶ್ರದ್ಧಾಂಜಲಿ.  ಅವರಿಗಾಗಿ ಎರಡು ಹನಿ ಕಣ್ಣೀರು ಹರಿಸಬೇಕು, ಅಂತಹ ಭಾರತಮಾತೆಯ ಸುಪುತ್ರ ಎಪಿಜೆ ಅಬ್ದುಲ್ ಕಲಾಂ ಅವರ ಶೋಚನೀಯ ಮೃತ್ಯು ಸಂಭವಿಸಿದೆ. 84ರ  ವಯಸ್ಸಿನಲ್ಲಿ ಅವರು ನಮ್ಮನ್ನೆಲ್ಲ ಅಗಲಿದರು, ಅಕಾಲದಲ್ಲಿ ಹೋದರು ಎಂದೆಲ್ಲ ಅವರ ಬಗ್ಗೆ […]