ಘರ್ವಾಪಸಿ: ಒಂದು ಪವಿತ್ರ ಕಾರ್ಯ

ಘರ್ವಾಪಸಿ: ಒಂದು ಪವಿತ್ರ ಕಾರ್ಯ

ರಮೇಶ್ ಪತಂಗೆ - 0 Comment
Issue Date : 20.01.2015

ಆಗ್ರಾದಲ್ಲಿ 60 ಮುಸ್ಲಿಂ ಕುಟುಂಬಗಳ 387 ಜನ ತಮ್ಮ ಪೂರ್ವಜರ ಸನಾತನ ಧರ್ಮಕ್ಕೆ ಎಂದರೆ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ವ್ಯಾಪಕವಾಗಿ ಯೋಚಿಸಿದರೆ ಹಿಂದುಸ್ಥಾನದಲ್ಲಿ ವಾಸಿಸುವವರೆಲ್ಲ ಹಿಂದುಗಳು. ಹಿಂದುಸ್ಥಾನದ ಹಿಂದುಗಳ ಉಪಾಸನಾ ಪದ್ಧತಿಗಳು ಬೇರೆ ಬೇರೆಯೇ ಆಗಿವೆ. ಉಪಾಸನಾ ಪದ್ಧತಿಯ ಪ್ರಕಾರ ಭಾರತದಲ್ಲಿ ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಇಂತಹ ಉಪಾಸನಾ ಪದ್ಧತಿಗಳಲ್ಲಿ (ಇವನ್ನು ಸಾಮಾನ್ಯ ಭಾಷೆಯಲ್ಲಿ ಧರ್ಮ ಎನ್ನುತ್ತಾರೆ.) ಭಾರತದಲ್ಲಿ ಜನಿಸಿದ ಧರ್ಮಗುಂಪುಗಳು ಸೇರಿವೆ, ವಿದೇಶಗಳಲ್ಲಿ ಜನಿಸಿದ ಧರ್ಮಗುಂಪುಗಳೂ ಒಳಗೊಂಡಿವೆ. ಭಾರತೀಯ ಧರ್ಮಗುಂಪುಗಳಲ್ಲಿ ಜೈನ, ಬೌದ್ಧ, ಸಿಕ್ಖ್, […]

ಕಾಂಗ್ರೆಸ್ ಪುನರುಜ್ಜೀವನ : ಕೆಲವು ಪ್ರಶ್ನೆಗಳು

ರಮೇಶ್ ಪತಂಗೆ - 0 Comment
Issue Date : 25.01.2015

– ರಮೇಶ್ ಪತಂಗೆಕಾಂಗ್ರೆಸ್ಸಿನ ಪುನರುಜ್ಜೀವನ ಆಗುವುದುಂಟೇ? ಇದು ಇಂದು ರಾಜಕೀಯ ಕ್ಷೇತ್ರದಲ್ಲಿ ನಿರಂತರ ನಡೆಯುತ್ತಿರುವ ಚರ್ಚೆಯ ವಿಷಯ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸು ಭಾರೀ ಪರಾಭವಗೊಂಡಿತು. ಈ ಪಕ್ಷಕ್ಕೆ ಕೇವಲ 44 ಸ್ಥಾನಗಳು ದೊರಕಿದವು. ‘ಕಾಂಗ್ರೆಸ್‌ಮುಕ್ತ ಭಾರತ’ ಇದು ಬಿಜೆಪಿಯ ಘೋಷಣೆಯಾಗಿತ್ತು. ಜನತೆಯು ಕಾಂಗ್ರೆಸ್‌ಮುಕ್ತ ಭಾರತವನ್ನು ನಿರ್ಮಿಸುವ ದಿಶೆಯಲ್ಲಿ ಹೆಜ್ಜೆ ಹಾಕಿತು.  ಇದರ ಬಳಿಕ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಮತ್ತು ಕಾಶ್ಮೀರದ ಚುನಾವಣೆಗಳು ನಡೆದವು. ಎಲ್ಲ  ಕಡೆಗಳಲ್ಲೂ ಕಾಂಗ್ರೆಸ್ಸು ಪರಾಭವಗೊಂಡಿದೆ. ಈ ಪರಾಭವಗಳಿಂದ ಗಾಂಧಿ ಪರಿವಾರ ತುಂಬ […]

ನಮೋ ಮಾಸ್ಟರ್ ಸ್ಟ್ರೋಕ್

ನಮೋ ಮಾಸ್ಟರ್ ಸ್ಟ್ರೋಕ್

ರಮೇಶ್ ಪತಂಗೆ - 0 Comment
Issue Date : 25.01.2015

ಪ್ರಧಾನಿ ನರೇಂದ್ರ ಮೋದಿಯವರ ಆಮಂತ್ರಣವನ್ನು ಸ್ವೀಕರಿಸಿ ಅಮೆರಿಕದ  ರಾಷ್ಟ್ರಪ್ರಮುಖ  ಬರಾಕ್ ಒಬಾಮಾ  ಗಣರಾಜ್ಯದಿನೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿದೇಶಾಂಗ ಧೋರಣೆಯ ವಿಷಯದಲ್ಲಿ ಇದು ನರೇಂದ್ರ ಮೋದಿಯವರ ಮಾಸ್ಟರ್ ಸ್ಟ್ರೋಕ್ ಎನ್ನಲಾಗುತ್ತದೆ. ವಿದೇಶಾಂಗ ವ್ಯವಹಾರ ಮತ್ತು ಧೋರಣೆಯ ಕುರಿತು ಇಂಗ್ಲಿಷಿನಲ್ಲಿ ‘ಡಿಪ್ಲೊಮಸಿ’ ಎಂಬ ಶಬ್ದವಿದೆ. ಅದೇ ರಾಜತಾಂತ್ರಿಕತೆ. ನರೇಂದ್ರ ಮೋದಿಯವರ ಅಮೆರಿಕ ಬಗೆಗಿನ ವಿದೇಶಾಂಗ ಧೋರಣೆಯು ಸಕಾರಾತ್ಮಕ ದಿಶೆಯಲ್ಲಿ ಮುಂದೆ ಸಾಗುತ್ತಿದೆ. ಇದಕ್ಕೆ ಡಾ. ಮನಮೋಹನ ಸಿಂಗ್‌ರು ಅಡಿಪಾಯ ಹಾಕಿದ್ದಾರೆ. ಹೀಗಾಗಿ ಈ ಡಿಪ್ಲೊಮಸಿಯ ಶ್ರೇಯಸ್ಸಿನ ಪಾಲು ಡಾ. […]

ಶಬ್ದಗಳೂ ಮೂಕವಾದಾಗ....

ಶಬ್ದಗಳೂ ಮೂಕವಾದಾಗ….

ರಮೇಶ್ ಪತಂಗೆ - 0 Comment
Issue Date : 20.01.2015
ತಾಯಿ-ಮಗನ ನೆಹರೂ ಪುರಾಣ

ತಾಯಿ-ಮಗನ ನೆಹರೂ ಪುರಾಣ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 10.12.2014

ಭಾರತದ ಪ್ರಥಮ ಪ್ರಧಾನಿ ಪಂ. ಜವಾಹರಲಾಲ್ ನೆಹರೂ ಅವರ 125ನೆ ಜಯಂತಿಯನ್ನು ಕಾಂಗ್ರೆಸ್ಸು ನವೆಂಬರ್ 14ರಂದು ಆಚರಿಸಿತು. ‘ಕಾಂಗ್ರೆಸ್ಸು’ ಎಂದು ಉದ್ದೇಶಪೂರ್ವಕ ಹೇಳಲು ಕಾರಣವಿದೆ, ಜನತೆಯ ಸ್ತರದಲ್ಲಿ ಪಂ. ನೆಹರೂ ಜಯಂತಿಗೆ ಏನೂ ಪ್ರತಿಕ್ರಿಯೆಯಿರಲಿಲ್ಲ. ಡಾ. ಅಂಬೇಡ್ಕರರ ಜಯಂತಿಯನ್ನು ದೇಶದೆಲ್ಲೆಡೆ ಆಚರಿಸುವ ಆ ಉತ್ಸಾಹ, ಪಂ. ನೆಹರೂ ಜಯಂತಿಯ ಸಮಯದಲ್ಲಿ ಎಂದೂ ಇರುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೆಹರೂ ಜಯಂತಿಯು ಸರ್ಕಾರದ ಕಾರ್ಯಕ್ರಮವಾಗಿರುತ್ತಿತ್ತು. ನರೇಂದ್ರ ಮೋದಿ ಸರ್ಕಾರವು ನೆಹರೂ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸದೆ ಇದ್ದುದರಿಂದ ಕಾಂಗ್ರೆಸ್ಸು ಕೆರಳಿತು. […]

ಎಲ್ಲಕ್ಕೂ ದೊಡ್ಡ ರಾಜಕೀಯ ವ್ಯಂಗ್ಯ

ಎಲ್ಲಕ್ಕೂ ದೊಡ್ಡ ರಾಜಕೀಯ ವ್ಯಂಗ್ಯ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 25.11.2014

  ನೂತನ ವರ್ಷದಲ್ಲಿ ನವೀನ ಪಕ್ಷವನ್ನು ಸ್ಥಾಪಿಸಲು ಜನತಾ ಪರಿವಾರವು ನಿಶ್ಚಯಿಸಿದ ವಾರ್ತೆಯು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಓದಿದೆ,  ಒಳ್ಳೆಯದೆನಿಸಿತು. ಲಾಲೂಪ್ರಸಾದ್, ನಿತೀಶ್‌ಕುಮಾರ್, ದೇವೇಗೌಡ, ಮುಲಾಯಂಸಿಂಗ್ ಯಾದವ್, ಶರದ್ ಯಾದವ್ ಇವರೆಲ್ಲ ಒಟ್ಟು ಸೇರಿದರು. ಅವರೆಲ್ಲ ತಮ್ಮ ತಮ್ಮ ಪಕ್ಷಗಳನ್ನು ವಿಸರ್ಜಿಸಿ, ಒಂದು ನೂತನ ಪಕ್ಷವನ್ನು ಸ್ಥಾಪಿಸಲು ನಿಶ್ಚಯಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವಾರ್ತೆಯಲ್ಲಿ ಇವೆಲ್ಲ ವಿಷಯಗಳು ಬಂದಿವೆ. ಮೂವರು ಯಾದವರು, ಒಬ್ಬ ಗೌಡ ಮತ್ತು ಒಬ್ಬ ಕುಮಾರ ಹೀಗೆ ಐದು ಮಂದಿ ಒಟ್ಟು ಸೇರಿದರು. ಇವರೆಲ್ಲ ಒಟ್ಟು […]

ನಕಲಿ ಗಾಂಧಿಭಕ್ತರು ಮತ್ತು ಮೋದಿ

ನಕಲಿ ಗಾಂಧಿಭಕ್ತರು ಮತ್ತು ಮೋದಿ

ರಮೇಶ್ ಪತಂಗೆ - 0 Comment
Issue Date : 18.11.2014

ಪ್ರಸಿದ್ಧ ವಿಜ್ಞಾನಿ ಐನ್‌ಸ್ಟೀನ್ ಅವರು ಮಹಾತ್ಮ ಗಾಂಧೀಜಿ ಬಗ್ಗೆ ಹೇಳಿದ್ದರು, ‘Generation to come, it may well be, will scare believe that such a man as this one ever in flesh and blood walked upon this earth.’ ಅದರ ಭಾವಾರ್ಥ ಹೀಗಿದೆ, ಮೂಳೆ-ಮಾಂಸಗಳ ಇಂತಹ ಮನುಷ್ಯ ಈ ಭೂಮಿಗೆ ಬಂದು ಹೋದ, ಎಂಬ ಬಗ್ಗೆ ಮುಂದಿನ ಅನೇಕ ಪೀಳಿಗೆಗಳಿಗೆ ಪ್ರಾಯಶಃ ನಂಬಿಕೆಯುಂಟಾಗದು. ಮಹಾತ್ಮ ಗಾಂಧೀಜಿಯ ಯೋಗ್ಯತೆ ತಿಳಿಯಲು […]

ಚಂಡಮಾರುತವೂ ಅಭಿವೃದ್ಧಿಯೂ

ರಮೇಶ್ ಪತಂಗೆ - 0 Comment
Issue Date : 07.11.2014

ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣೆಗಳ ತೀವ್ರ ಬಿರುಗಾಳಿಯಿದ್ದಂತೆಯೇ, ಒರಿಸ್ಸಾ ಮತ್ತು ಆಂಧ್ರಪ್ರದೇಶಗಳೂ ಚಂಡಮಾರುತಕ್ಕೆ ಸಿಲುಕಿದ್ದವು. ಮಹಾರಾಷ್ಟ್ರದ ಪ್ರಸಾರ ಮಾಧ್ಯಮಗಳ ದೃಷ್ಟಿಯಿಂದ ಅಲ್ಲಿಯ ಚುನಾವಣೆಯು ಬಹು ಮಹತ್ವದ್ದೆನಿಸಿತು ಹಾಗೂ ಆಂಧ್ರಪ್ರದೇಶದ ಹುಡ್‌ಹುಡ್ ಚಂಡಮಾರುತದ ವಾರ್ತೆಗಳಿಗೆ ಎರಡನೆ ಸ್ಥಾನ ಸಿಕ್ಕಿತು. ಆಂಧ್ರಪ್ರದೇಶದ ಇತಿಹಾಸವು, ‘ಎಂದಿನಂತೆ ಬರುತ್ತೆ ಮಳೆಗಾಲ’ ಎಂಬ ಉಕ್ತಿಯಂತೆ ‘ಎಂದಿನಂತೆ ಬರುತ್ತೆ ಚಂಡಮಾರುತ’ ಎಂಬ ಎಂದಿನಂಥ ವಿಷಯವೇ ಆದಂತಿದೆ. 1975ರಿಂದ 2014ರ ವರೆಗೆ ಆಂಧ್ರಪ್ರದೇಶಕ್ಕೆ 60 ಚಂಡಮಾರುತಗಳ ಹೊಡೆತ ಬಿದ್ದಿದೆ. 1977ರ ಚಂಡಮಾರುತದಲ್ಲಿ ಹತ್ತು ಸಾವಿರ ಜನ ಮೃತಪಟ್ಟರು […]

ಹೀಗಿತ್ತು ಈ ಸೀಮೋಲ್ಲಂಘನ…

ರಮೇಶ್ ಪತಂಗೆ - 0 Comment
Issue Date : 20.10.2014

ಸಂಘಚಾಲಕ ಮೋಹನ್‌ಜಿ ಭಾಗವತ್ ಅವರ ವಿಜಯದಶಮಿಯ ಭಾಷಣವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಕೇಂದ್ರ ಸರ್ಕಾರವು ತೀರ್ಮಾನಿಸಿತು ಹಾಗೂ ಆ ಭಾಷಣವು ದೂರದರ್ಶನದ ಮೂಲಕ ಎಲ್ಲ ದೇಶವಾಸಿಗಳ ಮನೆ ಮನೆಗೂ ಮುಟ್ಟಿತು. ದೂರದರ್ಶನವು ಈ ಸೀಮೋಲ್ಲಂಘನ ಮಾಡಿತು. ಸ್ವಾತಂತ್ರ್ಯಾನಂತರ 67 ವರ್ಷಗಳಲ್ಲಿ ಇದು ಮೊದಲ ಬಾರಿಗೆ ನಡೆದಿದೆ. ಇದಕ್ಕೆ ಮುಂಚೆ ಸೀಮೋಲ್ಲಂಘನ ಮಾಡಲು ನಿಷೇಧವಿತ್ತು, ಅದನ್ನು ಮುರಿಯಲಾಯಿತು. ದೂರದರ್ಶನದಲ್ಲಿ ಈ ಭಾಷಣ ಪ್ರಸಾರ ಮಾಡಲು ತೀರ್ಮಾನಿಸಿದಾಗಲೇ ಈ ತೀರ್ಮಾನವನ್ನು ವಿರೋಧಿಸಲೂ ತೀರ್ಮಾನಿಸಲಾಗಿತ್ತು. ಶರದ್ ಪವಾರ್‌ರಿಗೆ ಪಿತ್ಥ ನೆತ್ತಿಗೇರಿತು ಮತ್ತು […]

ಬೇಕು ವಿಜಯದ ಜಿದ್ದು

ರಮೇಶ್ ಪತಂಗೆ - 0 Comment
Issue Date : 13.10.2014

ಶಿವಸೇನೆ-ಬಿಜೆಪಿ ಮೈತ್ರಿ ಮುರಿದಿದ್ದರಿಂದ ಅನೇಕರಿಗೆ ದುಃಖವಾಗಿದೆ. ನಾನೂ ಅವರಲ್ಲೊಬ್ಬ. ಮೈತ್ರಿ ಉಳಿಯಲೆಂದು ಶಕ್ಯವಾದಷ್ಟೂ ಯತ್ನಿಸಲಾಯಿತು, ಆದರೆ ಮೈತ್ರಿಯೇನೂ ಉಳಿಯಲಿಲ್ಲ. ಈಗ ಮೈತ್ರಿ ಭಂಗವಾಗಿದ್ದಕ್ಕೆ ದುಃಖಿಸುವುದರಲ್ಲಿ ಅರ್ಥವೇನಿಲ್ಲ. ಮೈತ್ರಿ ಭಂಗವಾಗಿದ್ದರ ಪೋಸ್ಟ್‌ಮಾರ್ಟಮ್ ಮಾಡುವುದರಲ್ಲೂ ಏನೂ ಅರ್ಥವಿಲ್ಲ. ರಾಜಕೀಯದ ಬಗ್ಗೆ ಯೋಚಿಸುವಾಗ ಇಂದಿನ ವಾಸ್ತವವೇನೆಂದು ಅವಲೋಕಿಸಿಯೇ ಮುಂದೆ ಸಾಗಬೇಕು. ಮೈತ್ರಿ ಆಗಿದ್ದೇಕೆ? ಈ ಪ್ರಶ್ನೆಗೆ ಉತ್ತರವೆಂದರೆ, ಆಗ ಮೈತ್ರಿಯ ಅವಶ್ಯಕತೆಯಿತ್ತು. ಇಂದು ಮೈತ್ರಿ ಮುರಿದಿದ್ದೇಕೆ? ಇದಕ್ಕೆ ಉತ್ತರ, ಇಂದು ಮೈತ್ರಿಯ ಅವಶ್ಯಕತೆ ಉಳಿದಿಲ್ಲ. ರಾಜಕಾರಣದ ಮೈತ್ರಿಯ ಕುರಿತು ಪಂಚತಂತ್ರದಲ್ಲಿ ಒಂದು […]