ಉಪಚುನಾವಣೆ ಫಲಿತಾಂಶ ಮತ್ತು ಹೊಸ ಮೈತ್ರಿಯ ಹಸಿವು

ಉಪಚುನಾವಣೆ ಫಲಿತಾಂಶ ಮತ್ತು ಹೊಸ ಮೈತ್ರಿಯ ಹಸಿವು

ರಮೇಶ್ ಪತಂಗೆ - 0 Comment
Issue Date : 22.09.2014

ನಾಲ್ಕು ರಾಜ್ಯಗಳ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಬಿಹಾರದಲ್ಲಿ 10 ಸ್ಥಾನಗಳಿಗೆ ನಡೆದ ಚುನಾವಣೆಗಳಲ್ಲಿ ಲಾಲೂ-ನಿತೀಶ್ ಮೈತ್ರಿಕೂಟಕ್ಕೆ 6 ಸ್ಥಾನಗಳು ದೊರಕಿವೆ. ಬಿಹಾರ, ಮಧ್ಯಪ್ರದೇಶ, ಪಂಜಾಬ್ ಮತ್ತು ಕರ್ನಾಟಕದಲ್ಲೂ ಉಪಚುನಾವಣೆಗಳು ನಡೆದವು. ಇದರಲ್ಲಿ ಕಾಂಗ್ರೆಸ್ ಮತ್ತು ಇತರ ಘಟಕಪಕ್ಷಗಳು 10 ಸ್ಥಾನಗಳನ್ನು ಗೆದ್ದವು. ಬಿಜೆಪಿಗೆ 7 ಸ್ಥಾನಗಳು ದೊರಕಿದವು. ಚುನಾವಣಾ ಫಲಿತಾಂಶ ಬಂದ ನಂತರ ವಾರ್ತೆಗಳ ಶೀರ್ಷಿಕೆ ಹೀಗಿದ್ದವು. ‘ಲೋಕಸತ್ತಾ’ದ ಶೀರ್ಷಿಕೆ ‘ಭಾಜಪಕ್ಕೆ ಹೊಡೆತ!’ ,ಇಂಡಿಯನ್ ಎಕ್ಸ್‌ಪ್ರೆಸ್‌ನ ಶೀರ್ಷಿಕೆ- ‘Bypolls give down and out Oppn a […]

ಬಂಧುತ್ವದ ಸಂಘಮಾರ್ಗ

ಬಂಧುತ್ವದ ಸಂಘಮಾರ್ಗ

ಭಾರತ ; ರಮೇಶ್ ಪತಂಗೆ - 0 Comment
Issue Date : 11.08.2014

ರಕ್ಷಾಬಂಧನವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಉತ್ಸವ. ಈ ದಿವಸ ಶಾಖೆಯಲ್ಲಿ ಮೊಟ್ಟಮೊದಲು ಧ್ವಜಕ್ಕೆ ರಕ್ಷೆಯನ್ನು ಕಟ್ಟುತ್ತಾರೆ, ಅನಂತರ ಸ್ವಯಂಸೇವಕರು ಪರಸ್ಪರ ರಕ್ಷೆ ಕಟ್ಟುತ್ತಾರೆ. ಪ್ರತಿವರ್ಷವೂ ಸಮಾಜ ಬಾಂಧವರ ನಡುವೆ ಹೋಗಿ ರಕ್ಷೆ ಕಟ್ಟುವ ಉಪಕ್ರಮವನ್ನೂ ಸ್ವಯಂಸೇವಕರು ಕೈಗೊಳ್ಳುತ್ತಾರೆ. ಸೋದರಿಯು ಸೋದರನಿಗೆ ರಕ್ಷೆ ಕಟ್ಟುವುದು ಸಮಾಜದಲ್ಲಿ ರೂಢಿಯಾಗಿದೆ. ಹೀಗಾಗಿ ಸಂಘದಲ್ಲಿ ಸ್ವಯಂಸೇವಕರು ಪರಸ್ಪರ ರಕ್ಷೆ ಕಟ್ಟುವ ಪದ್ಧತಿಯು ಆರಂಭವಾದಾಗ, ಇದು ಪ್ರಚಲಿತ ಪದ್ಧತಿಗಿಂತ ಏನೋ ಬೇರೆಯೆಂದು ಸ್ವಯಂಸೇವಕರಿಗೂ, ಸಮಾಜಕ್ಕೂ ಅನಿಸಿತು. ಸಮಾಜದ ನಡುವೆ ಹೋಗಿ ರಕ್ಷೆ ಕಟ್ಟುವ […]

ಆಡಳಿತ ಚಕ್ರ ಉರುಳುತ್ತಿದ್ದಂತೆ...

ಆಡಳಿತ ಚಕ್ರ ಉರುಳುತ್ತಿದ್ದಂತೆ…

ರಮೇಶ್ ಪತಂಗೆ - 0 Comment
Issue Date : 04.08.2014

ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನ ಅವರ ಬಗ್ಗೆ ಭಾರೀ ಆರೋಪ, ಟೀಕೆಗಳಾಗುತ್ತಿದ್ದವು. ಆರೋಪ ಮತ್ತು ಟೀಕೆಗಳ ಸ್ವರವು ಕ್ರಮೇಣ ಬದಲಾಯಿಸಿದಂತೆ ತೋರುತ್ತದೆ. 2002ರ ದಂಗೆಗಳಲ್ಲಿ ಮೋದಿಯವರ ಕೈವಾಡವಿದೆ, ಅವರು ಮುಸಲ್ಮಾನರನ್ನು ಕೊಲೆಗೈದರು ಎಂಬಲ್ಲಿಂದ ಆರೋಪಗಳು ಶುರುವಾದವು. ಮುಂದೆ ಅದರಲ್ಲಿ ಬದಲಾವಣೆಗಳಾದವು ಹಾಗೂ ಮೋದಿ ಸರ್ವಾಧಿಕಾರಿ ಪ್ರವೃತ್ತಿಯವರು, ಅವರು ವಿರೋಧವನ್ನು ಸಹಿಸಲಾರರು, ಆತ್ಮಕೇಂದ್ರಿತರು, ಅವರಲ್ಲಿ ಪ್ರತೀಕಾರ ಮನೋಭಾವವಿದೆ ಇತ್ಯಾದಿ ಆರೋಪಗಳು ಶುರುವಾದವು. ಅದಕ್ಕೆ ಗುಜರಾತಿನ ಉದಾಹರಣೆ ನೀಡತೊಡಗಿದರು. ಗುಜರಾತಿನಲ್ಲಿ ಅಡ್ವೊಕೇಟ್ ಪಟೇಲರು ಮೋದಿ ವಿರೋಧದ ನೇಗಿಲು ಹಿಡಿದಿದ್ದಾರೆ. ಅವರ […]

ಅವ್ಯಾಪಾರೇಷು ವ್ಯಾಪಾರ

ಅವ್ಯಾಪಾರೇಷು ವ್ಯಾಪಾರ

ರಮೇಶ್ ಪತಂಗೆ - 0 Comment
Issue Date : 28.07.2014

ಯಾರೊಂದಿಗೆ ಸಂಬಂಧ ಬೇಡವೋ ಅಂತಹನೊಂದಿಗೆ ಸಂಬಂಧವಿಟ್ಟುಕೊಂಡರೆ, ವ್ಯಾಪಾರ ಮಾಡಬಾರದೋ ಅಂತಹನೊಂದಿಗೆ ವ್ಯಾಪಾರ ಮಾಡಿದರೆ , ಬೇಡವಾದ ಕೆಲಸ ಮಾಡಿದರೆ ಅದನ್ನು ಮಾಡುವವನ ಬಗ್ಗೆ ‘ಅವ್ಯಾಪಾರೇಷು ವ್ಯಾಪಾರ’ ಎನ್ನುತ್ತಾರೆ. ಡಾ. ವೇದಪ್ರತಾಪ ವೈದಿಕ್ ಇಂದು ಅವ್ಯಾಪಾರೇಷು ವ್ಯಾಪಾರದಿಂದಾಗಿ ಭಾರತದೆಲ್ಲೆಡೆ ಸುದ್ದಿಯಲ್ಲಿದ್ದಾರೆ. ಆತ ಒಬ್ಬ ಪತ್ರಕರ್ತರು. ಪತ್ರಕರ್ತರ ಕೆಲಸವು ಸ್ವತಃ ಎಂದೂ ಸುದ್ದಿಯಾಗುವುದಲ್ಲ, ಆದರೆ ಕೆಲವರಿಗೆ ತಾವು ನಿರಂತರ ಪ್ರಸಿದ್ಧಿಯ ಬೆಳಕಿನಲ್ಲಿರಬೇಕೆಂದು ಅನಿಸುತ್ತದೆ. ಎಂದೇ ಅವರು ಕಂಡದ್ದೆಲ್ಲಾ ಚೇಷ್ಟೆಗಳನ್ನು ಮಾಡುತ್ತಾರೆ. ಒಬ್ಬ ಸುಭಾಷಿತಕಾರ ಹೇಳುತ್ತಾರೆ, ಘಟಮ್ ಭಿದ್ಯಾತ್ ಪಟಮ್ ಛಿದ್ಯಾತ್ಕುರ್ಯಾತ್ […]

ಗೆಲ್ಲಬೇಕಿರುವುದು - ವೈಚಾರಿಕತೆಯ ಯುದ್ಧವನ್ನು

ಗೆಲ್ಲಬೇಕಿರುವುದು – ವೈಚಾರಿಕತೆಯ ಯುದ್ಧವನ್ನು

ರಮೇಶ್ ಪತಂಗೆ - 0 Comment
Issue Date : 21.07.2014

ಕಳೆದ ವಾರದಿಂದ ಯಾರಿಗೋ ಮಾರ್ಕ್ಸ್ ಸರ್ವಶ್ರೇಷ್ಠ ವಿಚಾರವಂತನೆನಿಸಿದರೆ, ಇನ್ನಾರಿಗೋ ಎಡ್ಮಂಡ್ ಬರ್ಕ್, ಮತ್ತಾರಿಗೋ ರೂಸೊ, ನಿತ್ಸೆ, ಮಹಾನ್ ಚಿಂತಕರೆನಿಸುತ್ತಾರೆ. ಪಾಶ್ಚಾತ್ಯ ಚಿಂತಕರು ಆಯಾ ಸಮಾಜಗಳ ದೃಷ್ಟಿಯಿಂದ ಚಿಂತಕರೇನೊ ಸರಿ. ಅವರನ್ನು ತಿರಸ್ಕರಿಸಬೇಕಾಗಿಲ್ಲ, ಆದರೆ ಅವರು ನಮ್ಮ ಆದರ್ಶರಾಗಲು ಸಾಧ್ಯವಿಲ್ಲ. ನಮ್ಮ ಪರಿಸ್ಥಿತಿ ಬೇರೆಯೇ, ನಮ್ಮ ಜೀವನಾದರ್ಶಗಳು ಬೇರೆಯೇ ಆಗಿವೆ. ಈ ವೈಚಾರಿಕ ಸಂಘರ್ಷ ಮಾಡುವ ಅನೇಕ ವೇದಿಕೆಗಳಿವೆ. ಸಾಹಿತ್ಯ ಕ್ಷೇತ್ರವು ಅದರಲ್ಲಿ ಒಂದು ಮಹತ್ವದ ವೇದಿಕೆ. ಸಾಹಿತಿಯು ಸಮಾಜದ ಮನಸ್ಸನ್ನು ರೂಪಿಸುತ್ತಾನೆ. ನಮ್ಮ ದೇಶದ ಸಮಾಜಮನಸ್ಸು ರಾಮಾಯಣ, […]

ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ ಶಿವಾಜಿ ಮಹಾರಾಜ್

ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ ಶಿವಾಜಿ ಮಹಾರಾಜ್

ಭಾರತ ; ರಮೇಶ್ ಪತಂಗೆ - 1 Comment
Issue Date : 16.06.2014

ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭವು ರಾಯಗಡ ದುರ್ಗದಲ್ಲಿ ಜರುಗಿತು. ಅದು ದಿ. 6 ಜೂನ್ 1674. ಈ ಘಟನೆ ನಡೆದು ಮುನ್ನೂರ ನಲ್ವತ್ತು ವರ್ಷಗಳಾಗುತ್ತಿದೆ. ಶಿವಾಜಿ ಮಹಾರಾಜರ ರಾಜ್ಯಾಭಿಷೇಕವು ಒಂದು ಯುಗಪ್ರವರ್ತಕ ಘಟನೆಯಾಗಿತ್ತು. ಮಹಾರಾಜ ಪೃಥ್ವೀರಾಜಸಿಂಗ್ ಚೌಹಾಣ್ ಬಳಿಕ ಭಾರತದಿಂದ ಹಿಂದೂ ಆಡಳಿತವು ಬಹುಮಟ್ಟಿಗೆ ಕೊನೆಗೊಂಡಿತ್ತು. ದಿಲ್ಲಿಯಲ್ಲಿ ಮೊಗಲರ ರಾಜ್ಯಭಾರವಿತ್ತು, ಮತ್ತು ದಕ್ಷಿಣದಲ್ಲಿ ಆದಿಲಶಾಹಿ, ಕುತುಬಶಾಹಿ ಮುಂತಾದ ಮುಸ್ಲಿಂ ರಾಜರು ರಾಜ್ಯವಾಳುತ್ತಿದ್ದರು. ಎಲ್ಲ ಕಡೆಗಳಲ್ಲಿಯೂ ಇವರ ಸರ್ದಾರ-ಸೇನಾಪತಿಗಳು ಹಿಂದುಗಳೇ ಆಗಿರುತ್ತಿದ್ದರು. ಎಂದರೆ, ಹಿಂದೂ […]

ಇದು ರಾಷ್ಟ್ರೀಯ ವಿಚಾರಗಳ ವಿಜಯ

ಇದು ರಾಷ್ಟ್ರೀಯ ವಿಚಾರಗಳ ವಿಜಯ

ರಮೇಶ್ ಪತಂಗೆ - 0 Comment
Issue Date : 09.06.2014

ಮತದಾನದ ಅಂತಿಮ ಹಂತ ಪೂರ್ಣಗೊಂಡ ಬಳಿಕ ಕೇವಲ ಒಂದೇ ಪ್ರಶ್ನೆಯಿತ್ತು, ದೇಶದಲ್ಲಿ ಮೋದಿಯ ಅಲೆಯಿದೆಯೇ ಅಥವಾ ಸುನಾಮಿ ಇದೆಯೇ? ಮೋದಿಯ ಅಲೆಯಿದ್ದ ಬಗ್ಗೆ ಯಾವ ಎರಡು ಮಾತೂ ಇರಲಿಲ್ಲ. ಪ್ರತಿಯೊಂದು ರಾಜ್ಯದಲ್ಲಿ ಮತದಾನದ ಪ್ರಮಾಣವು ಹತ್ತು-ಹದಿನೈದು ಶೇಕಡಾ ಹೆಚ್ಚಿದ್ದರಿಂದ, ದೇಶದಲ್ಲಿ ಮೋದಿಯ ಸುನಾಮಿಯಿದೆಯೆಂಬ ಊಹೆಯೆದ್ದಿತು. ಚುನಾವಣಾ ಫಲಿತಾಂಶವು ಅದಕ್ಕೆ ಮೊಹರೆಯೊತ್ತಿದೆ. ಆದರೂ ಮೋದಿ ಬಗ್ಗೆ ಅಪಪ್ರಚಾರ…ನರೇಂದ್ರ ಮೋದಿಯವರಿಗೆ ವಿಜಯವಾಗಿದ್ದು ಹೇಗೆ? ಈ ಕುರಿತು ಮಾಧ್ಯಮಗಳಲ್ಲಿ ವಿವಿಧ ಅಭಿಪ್ರಾಯಗಳು ಬರುತ್ತಿವೆ. ಕಾಂಗ್ರೆಸ್ ವಕ್ತಾರರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಲಾಲೂಪ್ರಸಾದ್ […]

ಡಾ. ಅಂಬೇಡ್ಕರ್ ಮಾರ್ಗ ಮತ್ತು ನರೇಂದ್ರ ಮೋದಿ

ಡಾ. ಅಂಬೇಡ್ಕರ್ ಮಾರ್ಗ ಮತ್ತು ನರೇಂದ್ರ ಮೋದಿ

ರಮೇಶ್ ಪತಂಗೆ - 0 Comment
Issue Date : 27.05.2014

ನರೇಂದ್ರ ಮೋದಿಯವರು ಸಾಮಾಜಿಕ ಸಮರಸತೆ ಕುರಿತ ಪುಸ್ತಕದ ಲೋಕಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡುತ್ತ ಹೇಳಿದರು, ‘‘ಡಾ. ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಇವರಿಬ್ಬರು ರಾಷ್ಟ್ರೀಯ ನಾಯಕರಿಗೆ ಸ್ವಾತಾಂತ್ರ್ಯಾನಂತರ ಯೋಗ್ಯ ಗೌರವ ಸಿಕ್ಕಿಲ್ಲ.’’ ನಮಗೆಲ್ಲ ಗೊತ್ತಿದೆ, ಸ್ವಾತಂತ್ರ್ಯಾನಂತರ ದೇಶದಲ್ಲಿ ನೆಹರೂ, ಗಾಂಧಿಮನೆತನದ ಅಧಿಕಾರ ಆರಂಭವಾಯಿತು ಹಾಗೂ ಎಲ್ಲ ಕಡೆಗಳಲ್ಲೂ ನೆಹರೂ ಮನೆತನದ ಸ್ತ್ರೀ – ಪುರುಷರ ಹೆಸರುಗಳನ್ನು ನೀಡುವ ಸರಣಿ ಶುರುವಾಯಿತು. ದೇಶದಲ್ಲಿ ಪಂ. ನೆಹರೂ, ಇಂದಿರಾ ಗಾಂಧಿ, ಸಂಜಯ ಗಾಂಧಿ, ರಾಜೀವ ಗಾಂಧಿಇವರಿಗಿಂತಲೂ ಶ್ರೇಷ್ಠರಾದ ರಾಜಕೀಯ ನಾಯಕರು […]

ನೂತನ ಪ್ರಧಾನಿಗೆ ಸವಾಲುಗಳು

ರಮೇಶ್ ಪತಂಗೆ - 0 Comment
Issue Date : 19.05.2014

ಈ ಲೇಖನ ಬರೆಯುತ್ತಿರುವಾಗ ಹದಿನಾಲ್ಕನೇ ಲೋಕಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾಗಿರಲಿಲ್ಲ. ಆದರೆ ಜನತೆಯ ನ್ಯಾಯಾಲಯದಲ್ಲಿ ಈ ಚುನಾವಣೆಗಳ ಫಲಿತಾಂಶ ಪ್ರಕಟವಾಗಿತ್ತು. ಒಂದು ವಿಷಯದಲ್ಲಿ ಎಲ್ಲ ರಾಜಕೀಯ ಸಮೀಕ್ಷಕರು ಹಾಗೂ ಖಾಸಗಿಯಾಗಿ ಮಾತನಾಡುವ ವಿವಿಧ ರಾಜಕೀಯ ನಾಯಕರ ಅಭಿಪ್ರಾಯವೆಂದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲಾರದು. ಕಾಂಗ್ರೆಸ್ ವಿರುದ್ಧ ಜನತೆಯಲ್ಲಿ ಪ್ರಚಂಡ ಅಸಂತೋಷವಿದೆ. ಅಲ್ಲದೆ ದೇಶದಲ್ಲಿ ನರೇಂದ್ರ ಮೋದಿಯ ಅಲೆಯಿದೆ. ಪ್ರಶ್ನೆಯಿಷ್ಟೆ, ಈ ಲೇಖನ ಬರೆಯುತ್ತಿದ್ದಾಗ ಮೋದಿಯ ಅಲೆಯಿತ್ತೇ ಅಥವಾ ಸುನಾಮಿಯಿತ್ತೇ? ಈ ಸಂಚಿಕೆಯು ಓದುಗರ ಕೈಗೆ ಬರುವಷ್ಟರಲ್ಲಿ […]

ಇಂಗ್ಲೆಂಡಿಗೂ ತಟ್ಟಿದ ಅಸ್ಮಿತೆಯ ಅಪಾಯ

ಇಂಗ್ಲೆಂಡಿಗೂ ತಟ್ಟಿದ ಅಸ್ಮಿತೆಯ ಅಪಾಯ

ಭಾರತ ; ರಮೇಶ್ ಪತಂಗೆ - 0 Comment
Issue Date : 05.05.2014

  ನಮ್ಮ ರಾಷ್ಟ್ರೀಯ ಅಸ್ಮಿತೆ ಯಾವುದು? ಈ ಪ್ರಶ್ನೆ ಕೇವಲ ಭಾರತಕ್ಕಷ್ಟೇ ಎದುರಾಗಿಲ್ಲ, ಈಗ ಇಂಗ್ಲೆಂಡಿಗೂ ಈ ಪ್ರಶ್ನೆ ಎದುರಾಗಿದೆ. ಭಾರತದ ಬಗ್ಗೆ ಯೋಚಿಸಿದರೆ ಇಲ್ಲಿಯ ಸಾಮಾನ್ಯ ವ್ಯಕ್ತಿಗೆ ತನ್ನ ಅಸ್ಮಿತೆ ಯಾವುದು? ಎಂಬ ಪ್ರಶ್ನೆ ಎಂದೂ ಎದುರಾಗಿಲ್ಲ. ಆತ ಒಮ್ಮೆ ತನ್ನನ್ನು ಮರಾಠಿ ಎನ್ನುವನು, ಒಮ್ಮೆ ಗುಜರಾತಿ ಎನ್ನುವನು, ಮತ್ತೆ ಜಾಟ್ ಎನ್ನುವನು, ಒಮ್ಮೆ ತಮಿಳಿಗ ಎಂದರೆ ಇನ್ನೊಮ್ಮೆ ದಲಿತ ಎನ್ನುವನು. ಇವೆಲ್ಲದರ ಅರ್ಥವೆಂದರೆ ಭಾರತೀಯ ಎಂದರೆ ಹಿಂದೂತನ- ಎರಡನೆ ಮೂರನೆಯದು ಯಾವುದೂ ಇಲ್ಲ. ಅಸ್ಮಿತೆ […]