ಅರಳುತ್ತಿರುವ ಪ್ರತಿಭೆ

ಅರಳುತ್ತಿರುವ ಪ್ರತಿಭೆ

ಸಾಧನೆ - 0 Comment
Issue Date : 14.05.2015

ಚಿಕ್ಕಬಳ್ಳಾಪುರ: ಬೆಳೆಯುವ ಪೈರು ಬಗ್ಗೆ ಮೊಳಕೆಯಲ್ಲೇ ತಿಳಿಯಬಹುದೆಂದು ಹಿರಿಯರು ಹೇಳುತ್ತಾರೆ ಇದು ಇಲ್ಲಿನ ಪ್ರತಿಭೆ ಚಿನ್ಮಯಿ ಶಂಕರ್ ಮಠದ್‌ಗೆ ಸಲ್ಲುತ್ತದೆ. 17 ವರ್ಷದ ಚಿನ್ಮಯಿ ಶಂಕರ್ ಮಠದ್ ಅವರ ತಂದೆ ಪ್ರಸಿದ್ಧ ಗಾಯಕರು ಹಾಗೂ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ ಮಹಾಲಿಂಗಯ್ಯ, ಮಠದ್ ತಾಯಿ ತ್ರಿವೇಣಿ ಈರ‌್ವರೂ ಸಂಗೀತ ಆರಾಧಕರು. ಇನ್ನು ಮಗನ ಬಗ್ಗೆ ಹೇಳಬೇಕೆ? ಇದರೊಂದಿಗೆ ಆತ ಹಲವಾರು ರೀತಿಯ ಪ್ರತಿಭಾವಂತ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿ, ಎನ್‌ಸಿಸಿಯಲ್ಲಿ […]

ಪುಲ್ಲೇಲ ಗೋಪಿಚಂದ್‌ಗೆ ‘ಹಿಂದು ರತ್ನ’ ಪ್ರಶಸ್ತಿ

ಪುಲ್ಲೇಲ ಗೋಪಿಚಂದ್‌ಗೆ ‘ಹಿಂದು ರತ್ನ’ ಪ್ರಶಸ್ತಿ

ಸಾಧನೆ - 0 Comment
Issue Date : 08.05.2015

ಕರ್ಣಾವತಿ (ಅಹಮದಾಬಾದ್): ಹಿಂದು ಹೆಲ್ಪ್‌ಲೈನ್‌ನ ನಾಲ್ಕನೆಯ ವಾರ್ಷಿಕೋತ್ಸವದ ಅಂಗವಾಗಿ ‘ಹಿಂದು ರತ್ನ’ ಪುರಸ್ಕಾರವನ್ನು ಈ ಬಾರಿ ಬ್ಯಾಡ್ಮಿಂಟನ್ ದಂತಕಥೆಯಾಗಿರುವ ಖ್ಯಾತ ಬ್ಯಾಡ್ಮಿಂಟನ್ ಪಟು ಪುಲ್ಲೇಲ ಗೋಪಿಚಂದ್ ಅವರಿಗೆ ನೀಡಲಾಗಿದೆ. ಅದೇ ರೀತಿ ಕೃಷಿಕರಾದ ಡಾ. ಆರ್.ಕೆ. ಪಾಠಕ್ ಹಾಗೂ ಡಾ. ರಾಮ್ ಅವರಿಗೂ ‘ಹಿಂದು ರತ್ನ’ ಪ್ರಶಸ್ತಿ ನೀಡಲಾಗಿದೆ.  ಹಿಂದು ಸಮಾಜಕ್ಕೆ ಗಮನಾರ್ಹ ಸೇವೆ ಸಲ್ಲಿಸಿದವರಿಗೆ, ರಾಷ್ಟ್ರದ ಹಿರಿಮೆಯನ್ನು ಕಲೆ, ಸಂಸ್ಕೃತಿ, ವಿಜ್ಞಾನ, ಕೈಗಾರಿಕೆ, ಕ್ರೀಡೆ, ಅರ್ಥಕ್ಷೇತ್ರ, ಬುಡಕಟ್ಟು ಕಲ್ಯಾಣ ಮುಂತಾದ ಕ್ಷೇತ್ರಗಳಲ್ಲಿ ಎತ್ತಿಹಿಡಿದವರಿಗೆ ಈ ಪ್ರತಿಷ್ಠಿತ […]

ಗುಜರಾತಿನಲ್ಲೊಂದು ಸೂರ್ಯ ಸೈನಿಕ ಶಾಲೆ

ಗುಜರಾತಿನಲ್ಲೊಂದು ಸೂರ್ಯ ಸೈನಿಕ ಶಾಲೆ

ಸಾಧನೆ - 0 Comment
Issue Date : 20.04.2015

ಗುಜರಾತ್ ಸರ್ಕಾರ ಹಾಗೂ ಸೂರ್ಯ ಫೌಂಡೇಷನ್ ನಡುವಣ ಒಪ್ಪಂದದ ಪರಿಣಾಮವಾಗಿ ರಾಜಸ್ಥಾನ ಮತ್ತು ಗುಜರಾತಿನ ಗಡಿ ಪ್ರದೇಶದಲ್ಲೊಂದು ಸೈನಿಕ ಶಾಲೆ ಎದ್ದು ನಿಂತಿದೆ. ಅದೇ ಸೂರ್ಯ ಸೈನಿಕ ಶಾಲೆ. ಬುಡಕಟ್ಟು, ದಲಿತ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ನಿರ್ಮಿಸಲಾಗಿರುವ ಇದು ಒಂದು ವಸತಿ ಶಾಲೆ. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ, ಕ್ರೀಡಾ ಸೌಲಭ್ಯಗಳ ಜೊತೆಗೆ ಸೈನಿಕ ತರಬೇತಿಯನ್ನೂ ಈ  ಶಾಲೆ ಒದಗಿಸುತ್ತದೆ. ಆಧುನಿಕ ಕಂಪ್ಯೂಟರ್ ಶಿಕ್ಷಣ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರಗಳಿಗೆ ಸಂಬಂಧಿಸಿದ ಸುಸಜ್ಜಿತ ಪ್ರಯೋಗಾಲಯಗಳು ಈ […]

ಹಾರ್ವರ್ಡ್ ಕಾಲೇಜ್ ಡೀನ್ ಆದ ರಾಕೇಶ್ ಖುರಾನ

ಹಾರ್ವರ್ಡ್ ಕಾಲೇಜ್ ಡೀನ್ ಆದ ರಾಕೇಶ್ ಖುರಾನ

ಸಾಧನೆ - 0 Comment
Issue Date : 13.02.2014

ಇತ್ತೀಚಿನ ದಿನಗಳಲ್ಲಿ ಭಾರತೀಯ ಮೂಲದ ತಜ್ಞರು, ವೈದ್ಯರಿಗೆ ವಿದೇಶದಲ್ಲಿ ಹೆಚ್ಚು ಮನ್ನಣೆ ಸಿಗುತ್ತಿದೆ.  ಈ ಸಾಲಿಗೆ ಈಗ ಭಾರತೀಯ ಮೂಲದ ಶಿಕ್ಷಣ ತಜ್ಞ  ರಾಕೇಶ್ ಖುರಾನ ಸೇರುತ್ತಾರೆ. ಅವರು ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ಕಾಲೇಜಿನ ಡೀನ್ ಆಗಿ ನೇಮಕ ಗೊಂಡಿದ್ದಾರೆ. ಖುರಾನ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನ ನಾಯಕತ್ವ ಬೆಳವಣಿಗೆಗೆ ಸಂಬಂಧಿಸಿದ  ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ. ಜೊತೆಗೆ ಹಾರ್ವರ್ಡ್ ಕ್ಯಾಬೋಟ್ ಹೌಸ್ ನಲ್ಲಿ ಕಲೆ ಮತ್ತು ವಿಜ್ಞಾನ ವಿಭಾಗದಲ್ಲಿ  ಸಮಾಜಶಾಸ್ತ್ರದ ಪ್ರೊಫೆಸರ್ ಕೂಡ ಹೌದು. ಪದವಿಪೂರ್ವ […]

ಹಿಮ ಹಾದಿಯಲ್ಲಿ ವಿಶ್ವದಾಖಲೆ

ಸಾಧನೆ - 0 Comment
Issue Date : 12.02.2014

ಭೂಮಿಯ ದಕ್ಷಿಣ ತುತ್ತತುದಿ ಅಂಟಾರ್ಟಿಕಾದ ಅಮುಡ್‍ಸೆನ್ ಸ್ಕಾಟ್ ದಕ್ಷಿಣಧ್ರುವ ಪ್ರದೇಶವು 365 ದಿನವೂ ಮಂಜುಗೆಡ್ಡೆಯಿಂದ ಆವೃತ್ತವಾಗಿರುತ್ತದೆ.  ಇಂತಹ ಪ್ರದೇಶದಲ್ಲಿ ಮರಗಿಡ ಬೆಳೆಯುವುದಿಲ್ಲ.  ಹೀಗಾಗಿ ಹಿಮಜೀವಗಳು ಬಿಟ್ಟರೆ ಮನುಷ್ಯರು ಬದುಕೋದು ಕಷ್ಟ.  ಆದರೆ ಸಾಹಸಿಗಳಿಗೆ ಸ್ಫೂರ್ತಿಯ ತಾಣ.  ಸದಾ ಶೀತಗಾಳಿ ಬೀಸುವುದರಿಂದ ವಿಮಾನ, ಹೆಲಿಕಾಪ್ಟರ್ ಗಳು ಹಾರಾಡುವುದು ಕಷ್ಟ.  ಹೀಗಾಗಿ ಇಲ್ಲಿ ತಲುಪಬೇಕಾದರೆ ಸಾವಿರ ಕಿಲೋಮೀಟರ್ ದೂರದಲ್ಲಿ ವಾಹನದಿಂದ ಇಳಿದು, ಸ್ಕೇಟಿಂಗ್‍ ಮೂಲಕ ಎಚ್ಚರಿಕೆಯಿಂದ ಬರಬೇಕು.   ಇಲ್ಲಿಗೆ ಟ್ರಕ್ಕಿಂಗ್‍ ಹೊರಡುವ ಮುನ್ನವೇ ಆಕ್ಸಿಜನ್ ಟ್ಯಾಂಕ್ ಜೊತೆಗೆ ತಿಂಗಳಿಗೆ […]

ಸ್ಕೇಟಿಂಗ್‍ನಿಂದ ವಿಶ್ವದಾಖಲೆ ನಿರ್ಮಿಸಿದ ಪೋರ

ಸಾಧನೆ - 0 Comment
Issue Date : 12.02.2014

ಬೆಂಗಳೂರಿನ ಬಸವೇಶ್ವರ ನಗರದ ಪ್ಲೋರೆನ್ಸ್ ಶಾಲೆಯಲ್ಲಿ ಈಗಿನ್ನೂ ಎಲ್‍ಕೆಜಿ ಓದುತ್ತಿರುವ ಐದು ವರ್ಷದ ಗಗನ್‍ ವಿಶ್ವ ದಾಖಲೆ ಪಟ್ಟಿಯಲ್ಲಿ ತನ್ನ ಹೆಸರು ಬರುವಂತೆ ಸಾಧನೆಗೈದಿದ್ದಾನೆ.  ಸ್ಕೇಟಿಂಗ್‍ ವೀಲ್‍ಗಳನ್ನು ಕಟ್ಟಿಕೊಂಡ ಬಾಲಕ 300ಕ್ಕೂ ಅಧಿಕ ಮಂದಿ ಸಾಕ್ಷಿಯಾಗಿದ್ದ ಸ್ಥಳದಲ್ಲಿ ನಿಲ್ಲಿಸಿದ 39 ಟೊಯೋಟಾ ಕಾರುಗಳ ಅಡಿಯಲ್ಲಿ ಅಂದರೆ 69.2 ಮೀಟರ್‍ಗಳಷ್ಟು ಉದ್ದವನ್ನು ಕ್ರಮಿಸಲು ಆತ ತೆಗೆದುಕೊಂಡ ಕಾಲಾವಕಾಶ ಕೇವಲ 29 ಸೆಕೆಂಡುಗಳು. ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್‍ನ ಐವರು ತಾಂತ್ರಿಕ ಅಧಿಕಾರಿಗಳು ಈ ವೇಳೆ ಹಾಜರಿದ್ದರು.  ಮುಂದಿನ ಏಪ್ರಿಲ್ ವೇಳೆಗೆ ಗಿನ್ನಿಸ್ ಸಂಸ್ಥೆಯಿಂದ […]

ರೈತರ ಕಾರ್ಯ ಸುಗಮಮಾಡುವ ಯಂತ್ರ

ಸಾಧನೆ - 0 Comment
Issue Date : 12.02.2014

ಯಾವುದೇ ಅತ್ಯಾಧುನಿಕ ಸೌಲಭ್ಯಗಳಿಲ್ಲದೆ ಸೌರಶಕ್ತಿ ನೇಗಿಲು  ಯಂತ್ರ ಸಂಶೋಧಿಸಿರುವ ವಿದ್ಯಾರ್ಥಿನಿ ಪೂರ್ಣಿಮ ಕಲಿತಿರುವುದು ಕನ್ನಡ ಮಾಧ್ಯಮದಲ್ಲಿ. ಕಾನ್ವೆಂಟ್‍ ಶಿಕ್ಷಣದ ಜತೆಗೆ ಇಂಗ್ಲಿಷ್ ಭಾಷೆಯಿಂದ ಮಾತ್ರ ಬದುಕು ಸಾಧ್ಯ ಎಂದು ಬಹುತೇಕ ಮಂದಿ ಭ್ರಮೆಯಲ್ಲಿರುವ ಕಾಲವಿದು.   ರೈತರ ಮಕ್ಕಳೇನು ಸಾಧನೆ ಮಾಡಲು ಸಾಧ್ಯ ಎನ್ನುವ ಸಮಾಜದ ಲಘು ಭಾವನೆಯನ್ನು ಸುಳ್ಳು ಮಾಡಿರುವ ಸಾಧನೆ ಗ್ರಾಮೀಣ ಪ್ರತಿಭೆಗಳಲ್ಲಿ ಸ್ಫೂರ್ತಿ ಮೂಡಿಸುವಂಥದ್ದು.   ಹಳ್ಳಿಗಾಡಿನ ರೈತರು ಬೆವರು ಹರಿಸಿ, ಕೃಷಿ ಮಾಡಿ ಅದರಲ್ಲಿ ಏಳಿಗೆ ಕಾಣದೆ ನಗರದತ್ತ ಮುಖ ಮಾಡುತ್ತಿರುವ […]

ಮಣಿಪಾಲದಲ್ಲಿ ಕಲಿತ ಸತ್ಯ ಮೈಕ್ರೊಸಾಫ್ಟ್ ಸಿಇಓ

ಮಣಿಪಾಲದಲ್ಲಿ ಕಲಿತ ಸತ್ಯ ಮೈಕ್ರೊಸಾಫ್ಟ್ ಸಿಇಓ

ಭಾರತ ; ಸಾಧನೆ - 0 Comment
Issue Date : 05.02.2014

ಸತ್ಯ ನಾದೆಲ್ಲ ಕರ್ನಾಟಕದ ಮಣಿಪಾಲದಲ್ಲಿ ವ್ಯಾಸಂಗ ಮಾಡಿದ ಹೈದರಾಬಾದ್ ಸಂಜಾತ ಸತ್ಯ ನಾದೆಲ್ಲ ಅವರು ಬಿಲ್ ಗೇಟ್ಸ್ ಸಂಸ್ಥಾಪಿಸಿದ ಮೈಕ್ರೊಸಾಫ್ಟ್ ಕಂಪೆನಿಯ ನೂತನ ಸಿಇಒ ಆಗಿ ಹೊರಹೊಮ್ಮಿದ್ದಾರೆ. ವಿಶ್ವದ ಪ್ರತಿಷ್ಠಿತ ಹುದ್ದೆಗೆ ಭಾರತೀಯರೊಬ್ಬರು ನೇಮಕಗೊಳ್ಳುತ್ತಿರುವುದು  ಸಂಭ್ರಮದ ಸಂಗತಿ. 38 ವರ್ಷದ ಇತಿಹಾಸ ಹೊಂದಿರುವ ಕಂಪೆನಿಗೆ ನಾದೆಲ್ಲ 3ನೇ ಸಿಇಒ ಆಗಿದ್ದು, 22 ವರ್ಷದಿಂದ ಮೈಕ್ರೊಸಾಫ್ಟ್ ನ ವಿವಿಧ ವ್ಯವಹಾರಗಳಲ್ಲಿ ಕಾರ್ಯಕಾರಿ ಹುದ್ದೆ  ನಿರ್ವಹಿಸಿದ್ದಾರೆ. ಇದೇ ವೇಳೆ ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅಧ್ಯಕ್ಷ ಸ್ಥಾನ ತ್ಯಜಿಸಿದ್ದು ತಂತ್ರಜ್ಞಾನ […]

 ಕು. ಸೌಮ್ಯಳಿಗೆ ನ್ಯಾಶನಲ್ ಬೆಸ್ಟ್ ಎನ್.ಸಿ.ಸಿ ಕೆಡೆಟ್ ಪ್ರಶಸ್ತಿ

ಕು. ಸೌಮ್ಯಳಿಗೆ ನ್ಯಾಶನಲ್ ಬೆಸ್ಟ್ ಎನ್.ಸಿ.ಸಿ ಕೆಡೆಟ್ ಪ್ರಶಸ್ತಿ

ಸಾಧನೆ - 0 Comment
Issue Date : 29.01.2014

ಸೌಮ್ಯಾ ಹೆಗಡೆಗೆ ರಾಷ್ಟ್ರ ಪ್ರಶಸ್ತಿ: ಪ್ರಧಾನ ಮಂತ್ರಿಯಿಂದ ಪ್ರಶಸ್ತಿ ಸ್ವೀಕರಿಸಿದ ಸಂಘದ ಮನೆಯ ಹುಡುಗಿ, ಆರೆಸ್ಸೆಸ್ ಅಭಿನಂದನೆ  ಉತ್ತರ ಕನ್ನಡ ಜಿಲ್ಲೆಯ  ಸಿದ್ದಾಪುರ ತಾಲೂಕಿನ, ಕು.ಸೌಮ್ಯ ಹೆಗಡೆ ಇವರು ಈ ಸಾಲಿನ ಅತ್ಯುತ್ತಮ ಎನ್.ಸಿ.ಸಿ ಕೆಡೆಟ್ ಪ್ರಶಸ್ತಿಯನ್ನು ದಿನಾಂಕ 28.01.2014ರಂದು ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮಾನ್ಯ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರವರಿಂದ ಪಡೆದಿರುತ್ತಾರೆ. ಸೌಮ್ಯಾ ಹೆಗಡೆಯವರು ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ವ್ಯವಸ್ಥಾ ಪ್ರಮುಖ್ ಗಣಪತಿ ಹೆಗಡೆ ಇವರ ಸುಪುತ್ರಿ. ಈಕೆ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪ್ರಥಮ […]

ಕೊರಗ ಸಮುದಾಯದ ಬೆಳಕಿನ ಕಿರಣ ಸಬಿತಾ

ಕೊರಗ ಸಮುದಾಯದ ಬೆಳಕಿನ ಕಿರಣ ಸಬಿತಾ

ಸಾಧನೆ - 0 Comment
Issue Date : 14.01.2014

ಬ್ರಹ್ಮಾವರ ಎಂದ ತಕ್ಷಣ ನೆನಪಾಗುವುದು ಪಾಳು ಬಿದ್ದ ಸಕ್ಕರೆ ಕಾರ್ಖಾನೆ, ರೈತರಿಗೆ ಮಾರ್ಗದರ್ಶನ ನೀಡುವ ಕೃಷಿ ವಿಜ್ಞಾನ ಕೇಂದ್ರ. ಹೆಚ್ಚೆಂದರೆ ಆಕಾಶವಾಣಿಯ ಮರುಪ್ರಸಾರ ಕೇಂದ್ರ! ಈಗ ಬ್ರಹ್ಮಾವರದ ಪರಿಚಯಕ್ಕೆ ಸಬಿತಾ ಎಂಬ ಹೆಣ್ಣು ಮಗಳು ಸೇರ್ಪಡೆಯಾಗಿದ್ದಾಳೆ. ರಾಜ್ಯದಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಆದಿವಾಸಿ ಕೊರಗ ಸಮುದಾಯದಿಂದ ಬ್ರಹ್ಮಾವರದ ಸಬಿತಾ ಬೆಳಕಿನ ಕಿರಣವಾಗಿ ಹೊರಹೊಮ್ಮುತ್ತಿದ್ದಾರೆ. ಅಂದ ಹಾಗೆ ಸಬಿತಾ ಬ್ರಹ್ಮಾವರದ ಹುಡುಗಿಯಲ್ಲ. ಸಾಸ್ತಾನ  ಪಟ್ಟಣ ಪಂಚಾಯತ್‌  ಸರಹದ್ದಿನ ಗುಂಡ್ಮಿ ಅಂಬಾಗಿಲು ಕೊರಗ ಕಾಲನಿಯ ಹುಡುಗಿ. ಆದರೆ ದೂರದ ಊರುಗಳಿಗೆ […]