2017ಕ್ಕೆ ಚಂದ್ರಯಾನ 2 ಉಪಗ್ರಹ ಉಡಾವಣೆ : ಇಸ್ರೊ

ಸಾಧನೆ - 0 Comment
Issue Date : 11.01.2014

ಚಂದ್ರಯಾನ 1ರ ಯಶಸ್ಸಿನಿಂದಾಗಿ ಸ್ಪೂರ್ತಿಗೊಂಡಿರುವ ಇಸ್ರೊ ಚಂದ್ರಯಾನ 2 ಉಪಗ್ರಹ  ಉಡಾವಣೆಗೆ ಮಂದಾಗಿದೆ. 2016 ಅಥವಾ 2017ರ ವೇಳೆಗೆ ಜಿಎಸ್‍ಎಲ್‍ವಿ ಉಡಾವಣೆ ಮಾಡಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ಜ. 10 ರಂದು ತಿಳಿಸಿದ್ದಾರೆ. ಚಂದ್ರನಲ್ಲಿ ಪ್ರಯೋಗಗಳನ್ನು ನಡೆಸಲು ಚಂದ್ರಯಾನ 2ರ ಅವಶ್ಯವಿದೆ ಎಂದು ಅವರು ತಿಳಿಸಿದ್ದಾರೆ. ಸ್ವದೇಶಿ ನಿರ್ಮಿತ ಉಡಾವಣಾ ವಾಹನ ಅಭಿವೃದ್ಧಿಪಡಿಸುವ ಕುರಿತು ಮೇ 2012ರಲ್ಲಿ ಅಧ್ಯಯನ ನಡೆಸಲಾಯಿತು. ಇದಕ್ಕೆ ಗುಣಾತ್ಮಕ ಪ್ರತಿಕ್ರಿಯೆ ದೊರೆತ ಬಳಿಕ ಈ ಯೋಜನೆ ಮುಂದುವರಿಸಲು ನಿರ್ಧರಿಸಲಾಯಿತು ಎಂದು […]

ಜಿಎಸ್‍ಎಲ್‍ವಿ – ಡಿ5 ಯಶಸ್ವಿ ಉಡಾವಣೆ

ಜಿಎಸ್‍ಎಲ್‍ವಿ – ಡಿ5 ಯಶಸ್ವಿ ಉಡಾವಣೆ

ಸಾಧನೆ - 0 Comment
Issue Date : 08.01.2014

  ಇತ್ತೀಚೆಗಷ್ಟೇ ಮಂಗಳಯಾನ ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ತರ ಸಾಧನೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಇದೀಗ ಮತ್ತೊಂದು ದಾಖಲೆ ನಿರ್ಮಿಸಿದೆ. ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ವಿಫಲವಾಗಿದ್ದ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅವಳವಡಿಕೆಯ ಜಿಎಸ್‍ಎಲ್‍ವಿ-ಡಿ5 ರಾಕೆಟ್ 3ನೇ ಬಾರಿಗೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಮೂಲಕ ಕ್ರಯೋಜೆನಿಕ್ ತಂತ್ರಜ್ಞಾನ ಹೊಂದಿದ ವಿಶ್ವದ ಅಮೆರಿಕ, ರಶ್ಯಾ, ಜಪಾನ್, ಚೀನಾ ಮತ್ತು ಫ್ರಾನ್ಸ್ ರಷ್ಟ್ರಗಳ ನಂತರ 6ನೇ ದೇಶ ಭಾರತ ಎಂಬ ಐತಿಹ್ಯಕ್ಕೂ ಕಾರಣವಾಗಿದೆ. […]

ಲತಾ ಮಂಗೇಶ್ಕರ್‌ಗೆ ಯಶ್ ಛೋಪ್ರಾ ಪ್ರಶಸ್ತಿ

ಸಾಧನೆ - 0 Comment
Issue Date : 22.10.2013

ಹಿಂದಿ ಚಿತ್ರರಂಗಕ್ಕೆ ನೀಡಿರುವ ಕೊಡುಗೆಗಾಗಿ ಖ್ಯಾತ ಹಿನ್ನಲೆ ಗಾಯಕಿ ಲತಾಮಂಗೇಶ್ಕರ್ ಅವರಿಗೆ ಯಶ್ ಛೋಪ್ರಾ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಶ್ ಛೋಪ್ರಾ ಸ್ಮರಣಾರ್ಥ ನೀಡುತ್ತಿರುವ ಮೊದಲ ವರ್ಷದ ಪ್ರಶಸ್ತಿ ಇದಾಗಿದೆ. ಜನಪ್ರಿಯ ಚಿತ್ರಗಳಾದ ವಿಜಯ್, ಚಾಂದಿನಿ ಮತ್ತು ಲಮ್ಹೆ ಮೊದಲಾದ ಚಿತ್ರಗಳ ನಿರ್ಮಾಪಕ, ಕೈಗಾರಿಕೋದ್ಯಮಿ ಟಿ. ಸುಬ್ರಮಣಿ ರೆಡ್ಡಿ ಅವರು ಪ್ರಶಸ್ತಿ ಪ್ರಕಟಿಸಿದರು.  

ಭಾರತದ ಯುವಕನಿಗೆ ವಿಶ್ವಸಂಸ್ಥೆ ಪುರಸ್ಕಾರ

ಸಾಧನೆ - 0 Comment
Issue Date : 12.10.2013

ತಂತ್ರಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತದ ಯುವಕ ವರುಣ್ ಅರೋರವರಿಗೆ ವಿಶ್ವಸಂಸ್ಥೆಯ ಪ್ರತೀಷ್ಠ ಪ್ರಶಸ್ತಿ ದೊರೆತಿದೆ. ಆಹಾರ ವ್ಯರ್ಥ ಮಾಡುವುದನ್ನು ತಗ್ಗಿಸುವುದು, ಸಮುದ್ರದಾಳದ ಜೀವಿಗಳ ರಕ್ಷಣೆ,  ವಲಸೆ ಇಂತಹ ಕ್ಷೇತ್ರಗಳಲ್ಲಿ ತಂತ್ರಜ್ಷಾನ ಬಳಸಿಕೊಂಡು ಸೇವೆ ಸಲ್ಲಿಸಿದವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಅಭಿವೃದ್ಧಿಯಿಂದಾಗಿ  ತಮ್ಮ ಸುತ್ತಲಿನ ಪರಿಸರದಲ್ಲಿ ಹಾಗೂ  ವಿಶ್ವದಾಧ್ಯಂತ ಉಂಟಾಗುವ ಸವಾಲುಗಳನ್ನು ಎದುರಿಸಲು ಈ ಯುವಕ ಶ್ರಮಿಸುತ್ತಿದ್ದಾರೆ ಎಂದು ಪ್ರಶಸ್ತಿ ನೀಡಿದ ಅಂತರಾಷ್ಟ್ರೀಯ ದೂರಸಂಪರ್ಕ ಮಂಡಳಿ ತಿಳಿಸಿದೆ.  

ಸಂಸ್ಕೃತ ಭಾರತಿಯ ಡಾ ವಿಶ್ವಾಸ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ

ಸಂಸ್ಕೃತ ಭಾರತಿಯ ಡಾ ವಿಶ್ವಾಸ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ

ಸಾಧನೆ - 0 Comment
Issue Date : 08.10.2013

ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ಡಾ.ವಿಶ್ವಾಸ ಅವರಿಗೆ2013ನೇ ಸಾಲಿನ ಕೇಂದ್ರ   ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಪುರಸ್ಕಾರ ದೊರೆತಿದೆ. ಸಂಸ್ಕೃತ ಭಾಷೆಯಲ್ಲಿ ಬಾಲ ಸಾಹಿತ್ಯಕ್ಕಾಗಿ ವಿಶ್ವಾಸ ಬರೆದ ‘ಮಾರ್ಜಾಲಸ್ಯ ಮುಂ ದೃಷ್ಟಂ’ ಎಂಬ ಸಣ್ಣನಾಟಕಗಳ ಸಂಗ್ರಹಕ್ಕೆ ಈ ಪ್ರಶಸ್ತಿ ದೊರೆತಿದೆ. ಮಂಗಳೂರಿನ ಮೊದಲ ಸಂಸ್ಕೃತ ಕುಟುಂಬ ಎಂಬ ಹೆಗ್ಗಳಿಕೆ ವಿಶ್ವಾಸ ಅವರ ಕುಟುಂಬಕ್ಕೆ ಸಲ್ಲುತ್ತದೆ. ಎಷ್ಟೋ ಸಂಸ್ಕೃತ ಮಾತನಾಡುವ ಕುಟುಂಬಗಳನ್ನು ಹುಟ್ಟು ಹಾಕುವಲ್ಲಿ ಡಾ. ವಿಶ್ವಾಸ ದಂಪತಿಗಳ ಪ್ರಯತ್ನವಿದೆ. 2010ರಲ್ಲಿ ಕೂಡ ಆವರಣ ಕೃತಿಯ ಸಂಸ್ಕೃತ […]

ನೆಹ್ವಾಲ್ ಗೆ ಪ್ರಶಸ್ತಿ

ನೆಹ್ವಾಲ್ ಗೆ ಪ್ರಶಸ್ತಿ

ಸಾಧನೆ - 0 Comment
Issue Date :

ಒಲಿಪಿಂಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಸೈನಾ ನೆಹ್ವಾಲ್ ಸ್ಪೋರ್ಟ್ ಇಲ್ಲಸ್ಟ್ರೇಟೆಡ್ ವರ್ಷದ ಕ್ರೀಡಾ ವ್ಯಕ್ತಿಗೆ ಪ್ರಶಸ್ತಿ ಮುಡಿಗೆರಿಸಿಕೊಂಡಿದ್ದಾರೆ. ಅಲ್ಲದೆ ಸೈನಾಗೆ ತರಬೇತಿ ನೀಡುತ್ತಿರುವ ಪುಲ್ಲೇಲಾ ಗೋಪಿಚಂದ್ ಅವರು ವರ್ಷದ ತರಬೇತುದಾರರ ಪ್ರಶಸ್ತಿಗೆ ಭಾಜನರಾಗಿದ್ದಾರೆ.