ಅರಣ್ಯ ಕಾಯ್ದೆ ಮತ್ತು ಕೃಷಿಕ

ಶಿವಮೊಗ್ಗ - 0 Comment
Issue Date : 10.09.2014

ತೀರ್ಥಹಳ್ಳಿಯಲ್ಲಿ ಮಾಹಿತಿ ಕಾರ್ಯಾಗಾರ ತೀರ್ಥಹಳ್ಳಿ: ಕಾಡು ಉಳಿಯಬೇಕು, ರೈತರೂ ಚೆನ್ನಾಗಿ ಕೃಷಿ ಮಾಡಬೇಕು, ಕೃಷಿ ಮತ್ತು ಅರಣ್ಯ ಪರಸ್ಪರ ಸಹಕಾರಿಯಾಗಿರುವಂತೆ ನೋಡಿಕೊಳ್ಳುವ ನಮ್ಮ ದೇಶದ ಕಾನೂನು ಏನು ಹೇಳುತ್ತದೆ ಮತ್ತು ರೈತರ ಹಕ್ಕುಗಳೇನು ಎಂದು ತಿಳಿಸುವ ವಿಶೇಷ ಕಾರ್ಯಕ್ರಮ ತೀರ್ಥಹಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ಆವರಣದಲ್ಲಿ (ಸೆ.13ರಂದು ಶನಿವಾರ ಆರಂಭವಾಗಲಿದೆ) ನಡೆಯಲಿದೆ. ಒಂದು ದಿನದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಹಾಗೂ ಪ್ರಸ್ತುತ ಲೋಕ ಆದಾಲತ್‌ನ ಸದಸ್ಯರೂ […]

ಮುಷ್ಟಿ ಅಕ್ಕಿ  ಯೋಜನೆಯ ವಾರ್ಷಿಕೋತ್ಸವ

ಮುಷ್ಟಿ ಅಕ್ಕಿ ಯೋಜನೆಯ ವಾರ್ಷಿಕೋತ್ಸವ

ಶಿವಮೊಗ್ಗ - 0 Comment
Issue Date : 05.08.2014

ಶಿವಮೊಗ್ಗ: ಇಲ್ಲಿನ ಮಾತೆಯರು ನಡೆಸುತ್ತಿರುವ ಅನ್ನಪೂರ್ಣೇಶ್ವರಿ ಮುಷ್ಟಿಅಕ್ಕಿ ಯೋಜನೆಯ 6ನೇ ವಾರ್ಷಿಕೋತ್ಸವ ಜು. 20ರಂದು ಜರುಗಿತು. ವನವಾಸಿ ಕಲ್ಯಾಣ ಕೇಂದ್ರದ ಸಚ್ಚಿದಾನಂದ ಹೆಗಡೆ, ವೆಂಕಟೇಶ್ ಸಾಗರ್ ಹಾಗೂ ವೇದಾವತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮ ಭಟ್ ದಂಪತಿಗಳು ಉಪಸ್ಥಿತರಿದ್ದರು.ಶ್ರೀಮತಿ ರುಕ್ಮಿಣಿ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚ್ಚಿದಾನಂದ ಹೆಗಡೆಯವರು ವನವಾಸಿ ಜನರು ಹಿಂದಿನಿಂದಲೂ ದೇಶದ ಹಿತಕ್ಕಾಗಿ ಹೋರಾಟ ನಡೆಸಿದ ನಿದರ್ಶನಗಳನ್ನು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ಸುಮಾ ಮೂರ್ತಿ ಮುಷ್ಟಿಅಕ್ಕಿ ಯೋಜನೆ ನಡೆದ ಬಂದ ದಾರಿಯನ್ನು […]

ಸದ್ದು ಗದ್ದಲವಿಲ್ಲದ ಪ್ರೇರಣಾ ಸಾಂಘಿಕ್

ಸದ್ದು ಗದ್ದಲವಿಲ್ಲದ ಪ್ರೇರಣಾ ಸಾಂಘಿಕ್

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 12.03.2014

ಮಂಗಳೂರಿನಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ವಿಭಾಗ ಸಾಂಘಿಕ್ ಹೊಸ ವಿಕ್ರಮ ಸಾಧಿಸಿದ್ದು ಇತಿಹಾಸ. ನಿಮ್ಮ ತಾಲೂಕಿನಲ್ಲೂ ಇಂಥ ಪ್ರಯತ್ನ ಯಾಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದವರು ಹಿರಿಯರು. ಹಿರಿಯರ ಅಪೇಕ್ಷೆಯನ್ನು ಸೂಚನೆ ಎಂದರಿತು ಪಾಲಿಸುವುದು ಸಂಘ ಕಲಿಸಿದ ಪಾಠ. ಆಗಲ್ಲ ಅನ್ನಬಾರದು. ಗರ್ವ ಇರುವವರು, ಛಲ ಇರುವವರು ಯಾಕಾಗಲ್ಲ ಅಂತ ಯೋಚಿಸಬೇಕು ಮತ್ತು ಸವಾಲು ಸ್ವೀಕರಿಸಬೇಕು. ಬೈಠಕ್ ಸೇರಿದರು. ಗುರಿ ನಿಶ್ಚಯವಾಯಿತು. ವಿಧಿ- ನಿಷೇಧಗಳು ಚರ್ಚೆ ಆದವು. ಕರಪತ್ರ ಬೇಡ. ಜಾಹೀರಾತು ಬೇಡ. ಮೈಕ್ ಅನೌನ್ಸ್‌ಮೆಂಟ್ ಬೇಡ… […]

ಶಿಕ್ಷಣ, ಕೃಷಿ, ಸೇವಾ ಕ್ಷೇತ್ರಗಳಲ್ಲಿ ಹೊಂಬೆಳಕು

ಶಿಕ್ಷಣ, ಕೃಷಿ, ಸೇವಾ ಕ್ಷೇತ್ರಗಳಲ್ಲಿ ಹೊಂಬೆಳಕು

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 08.03.2014

‘ಸಂಘ ಕಾರ್ಯ’ದ ಫಲ ಸುತ್ತಣ ಸಮಾಜದಲ್ಲಿ ಪರಿವರ್ತನೆ ಕಾಣುವಂತಾಗುವುದು ‘ಪರಂವೈಭವಂ ನೇತು ಮೇತತ್‌ಸ್ವರಾಷ್ಟ್ರಂ’ ಎಂಬ ಪ್ರಾಥನೆಯ ಕನಸು ನನಸಾಗುವುದೆಂದರೆ ಇದೇ. ಇದಕ್ಕೆ ಮಾಧ್ಯಮ ಸ್ವಯಂಸೇವಕರು ಗುರಿ ಸಮಾಜ ಜಾಗೃತಿ ಸಂಘಟನೆ ಸಂಸ್ಕಾರದ ಮೂಲಕ ಸಜ್ಜನ ಶಕ್ತಿಯ ನಿರ್ಮಿತಿ. ಇದು ಸಂಘ ಕೈಗೊಂಡ ಸೇವಾ ಕಾರ್ಯದ ಹಿಂದಿರುವ ಸಂಗತಿ. ಸಮಾಜದ ಎಲ್ಲಾ ರಂಗ ಕ್ಷೇತ್ರಗಳಲ್ಲೂ ಹಿಂದುತ್ವದ ಹೊಂಬೆಳಕು ಬೀರುವ ಯತ್ನ ಇದು. ತೀರ್ಥಹಳ್ಳಿ ಸಹ ಇದಕ್ಕೆ ಹೊರತಾಗಿಲ್ಲ. ಶಿಕ್ಷಣ, ಧರ್ಮ, ಕೃಷಿ, ಹೀಗೆ ಹಲವು ಕ್ಷೇತ್ರಗಳಲ್ಲಿ ಇಲ್ಲಿ ಸೇವಾ […]

ಮಲೆನಾಡ ಮೂಲೆಯಲ್ಲಿ ಸದ್ದುಗದ್ದಲವಿಲ್ಲದ ಕ್ರಾಂತಿ

ಮಲೆನಾಡ ಮೂಲೆಯಲ್ಲಿ ಸದ್ದುಗದ್ದಲವಿಲ್ಲದ ಕ್ರಾಂತಿ

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 05.03.2014

ಬೆನಕ ಭಟ್ ತಮ್ಮ ಪತ್ನಿಯೊಂದಿಗೆ ಕೆಲವರು, ಈ ನಾಡಿನಲ್ಲಿ ಕ್ರಾಂತಿಯಾಗಬೇಕು; ಆಗಲೇ ಎಲ್ಲಾ ಸರಿಹೋದಿತು – ಎಂದು ವೇದಿಕೆಯ ಮೇಲಿಂದ ಬೊಬ್ಬೆ ಹೊಡೆಯುವವರಿದ್ದಾರೆ. ಆದರೆ ಕ್ರಾಂತಿಯಾಗಲು ಸ್ವತಃ ತಾವೇನೂ ಮಾಡುವ ಗೋಜಿಗೆ ಕೈಹಾಕಲಾರರು . ಇನ್ನೂ ಕೆಲವರು ಕ್ರಾಂತಿಯಾಗಬೇಕೆಂದು ಘೋಷಿಸುತ್ತಾ, ಆ ದಿಕ್ಕಿನಲ್ಲಿ ಕೊಂಚ ಯತ್ನ ನಡೆಸಿ, ಶೀಘ್ರಫಲ ದೊರೆಯದಿದ್ದಾಗ ಕೈಚೆಲ್ಲಿ ಕಳಿತು, ‘ಈ ಸಮಾಜವೇ ಸರಿಯಿಲ್ಲ’ ಎಂದು ತಮ್ಮ ವಿಫಲತೆಯನ್ನು ಸಮಾಜದ ಕೊರಳಿಗೆ ಕಟ್ಟುವವರೂ ಇದ್ದಾರೆ. ಮತ್ತೆ ಕೆಲವರು ಕ್ರಾಂತಿಯ ಯಾವ ಅಬ್ಬರದ ಘೋಷಣೆಯನ್ನೂ ಹಾಕದೆ, […]

ಸೇವಾಭಾರತಿ ಟ್ರಸ್ಟ್

ಸೇವಾಭಾರತಿ ಟ್ರಸ್ಟ್

ಶಿವಮೊಗ್ಗ - 0 Comment
Issue Date : 04.03.2014

ಸೇವಾಭಾರತಿ ಟ್ರಸ್ಟ್(ರಿ) ತೀರ್ಥಹಳ್ಳಿ ಹಿಂದು ಸೇವಾ ಪ್ರತಿಷ್ಠಾನದ ಸೇವಾವ್ರತಿಗಳ ಮೂಕ ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶಗಳಾದ ಕುಂದಾಪುರ ತಾಲೂಕಿನ ಅಮಾಸ್ಯೆಬೈಲು, ಹೊಸನಗರ ತಾಲೂಕಿನ ನಿಟ್ಟೂರು, ತೀರ್ಥಹಳ್ಳಿ ತಾಲೂಕಿನ ಆರಗ, ತೀರ್ಥಹಳ್ಳಿ, ಆಗುಂಬೆ, ಬಿದರಗೋಡು, ನರಸಿಂಹರಾಜಪುರ ತಾಲೂಕಿನ ನರಸಿಂಹರಾಜಪುರ, ಕೊಪ್ಪ ತಾಲೂಕಿನ ಅಗಳಗಂಡಿ, ಶೃಂಗೇರಿ ತಾಲೂಕಿನ ಕಿಗ್ಗಗಳಲ್ಲಿ ಸಂಸ್ಕಾರ ಪ್ರಧಾನ ಅನೇಕ ಸೇವಾ ಚಟುವಟಿಕೆಗಳನ್ನು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಮುಖ್ಯವಾಗಿ ದುರ್ಬಲ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರು ಮತ್ತು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಸೇವಾ […]

ನೆರೆ ಪರಿಹಾರ : ಸಂಘದ ವಿನೂತನ ಶೈಲಿ!

ನೆರೆ ಪರಿಹಾರ : ಸಂಘದ ವಿನೂತನ ಶೈಲಿ!

ಶಿವಮೊಗ್ಗ - 0 Comment
Issue Date : 04.03.2014

ತುಂಗೆ ಸೊಕ್ಕಿ ಉಕ್ಕಿ ಹರಿದು, ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ, ತೂದೂರು, ಮಂಡಗದ್ದೆ ಮುಂತಾದ ಗ್ರಾಮಗಳ ಜನರ ಪ್ರಾಣವೊಂದನ್ನುಳಿದು, ಮಿಕ್ಕೆಲ್ಲವನ್ನೂ ಕೊಚ್ಚಿಕೊಂಡು ಹೋದದ್ದು 1982ರ ಆಗಸ್ಟ್ ತಿಂಗಳಲ್ಲಿ. ನೊಂದವರಿಗೆ ಸರ್ಕಾರ ಹಾಗೂ ಸ್ಥಳೀಯ ಗ್ರಾಮಪಂಚಾಯಿತಿ ಮುಖ್ಯಸ್ಥರು ಸಕಾಲದಲ್ಲಿ ನೆರವು ನೀಡಿದುದು ಪ್ರಶಂಸಾರ್ಹವೇ. ರಾಷ್ಟ್ರೀಯ ಸ್ವಯಂಸೇವಕ ಸಂಘ ನೊಂದವರಿಗೆ ನೆರವು ನೀಡಿದ ಬಗೆ ಮಾತ್ರ ವಿನೂತನ; ಇದರಿಂದಾಗಿ ಈ ಬಂಧುಗಳ ಮನದಲ್ಲಿ ಸಂಘದ ನೆನಪು ಈಗ ಸದಾ ಹಸಿರು. ಕುರುವಳ್ಳಿ, ತೂದೂರು, ಮಂಡಗದ್ದೆಗಳಲ್ಲಿ ಸಂಭವಿಸಿದ ಪ್ರವಾಹ ದುರಂತದ ಸುದ್ದಿ ತಿಳಿದೊಡನೆ […]

ತುಂಗೆಯ ಜತೆಗೇ ಹರಿದಳು ಸಂಘದ ಗಂಗೆ

ತುಂಗೆಯ ಜತೆಗೇ ಹರಿದಳು ಸಂಘದ ಗಂಗೆ

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 04.03.2014

ಕೃ. ಸೂರ್ಯನಾರಾಯಣ ರಾವ್ ಮಲೆನಾಡಿನ ಮಡಿಲು ತೀರ್ಥಹಳ್ಳಿ ಅಂದಿನ ತೀರ್ಥರಾಜಪುರ. ತುಂಗೆ, ಶರಾವತಿ, ವಾರಾಹಿ, ಮಾಲತಿ,ಕುಶಾವತಿ ಮುಂತಾದ ನದಿಗಳು ನಿತ್ಯ ಜೋಗುಳ ಹಾಡುತ್ತಿದ್ದರೆ ಗಿಳಿ, ಕೋಗಿಲೆ, ಕಾಜಾಣ, ಟುವಟಾರ್, ಪಿಕಳಾರ, ನವಿಲುಗಳು ಕುಣಿದು ಕುಪ್ಪಳಿಸುತ್ತವೆ. ಹಲವು ಹೊಳೆ ಹಳ್ಳ, ಗುಡ್ಡ ಬೆಟ್ಟಗಳು ಸಹ್ಯಾದ್ರಿಯ ಸಾಲಿನಲ್ಲಿ ಗಗನಚುಂಬಿ ಮರಗಳ ಆಶ್ರಯ ತಾಣ. ಜೈನಮುನಿ ಕುಂದಕಂದರ ನೆನಪಿಸುವ ಕುಂದಾದ್ರಿ, ಮಾಂಡವ್ಯರ ನೆನಪಿನ ಮಂಡಗದ್ದೆ, ದೂರ್ವಾಸ ಕಥೆ ಹೇಳುವ ದೂರ್ವಾಸಪುರ, ‘ಭೀಮಬಲ’ದ ನೆನಪು ಮಾಡುವ ಭೀಮನಕಟ್ಟೆ ಯವನರನ್ನು ಸದೆಬಡಿದ ಕವಲೇದುರ್ಗ ಹೀಗೆ […]

ದೇವರ ಆರಾಧನೆಯಿಂದ ಹೆಚ್ನಚಿ  ಫಲ ಲಭ್ಯ: ಶ್ರೀಗಳು

ದೇವರ ಆರಾಧನೆಯಿಂದ ಹೆಚ್ನಚಿ ಫಲ ಲಭ್ಯ: ಶ್ರೀಗಳು

ಶಿವಮೊಗ್ಗ - 0 Comment
Issue Date : 04.03.2014

ಹೊಸನಗರ: ಸಾಮೂಹಿಕವಾಗಿ ದೇವರನ್ನು ಆರಾಧಿಸುವುದರಿಂದ ಹೆಚ್ಚಿನ ಫಲವು ಲಭಿಸುವುದು ಎಂದು ಕೂಡ್ಲಿ ಶೃಂಗೇರಿ ಮಹಾಸಂಸ್ಥಾನದ ಡಾ. ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳವರು ಅಭಿಪ್ರಾಯಪಟ್ಟಿದ್ದಾರೆ. ಕಾರಣಗಿರಿ ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಸಿದ್ಧಿವಿನಾಯಕ ಸಭಾಭವನದಲ್ಲಿ ಸಹಸ್ರಾಧಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧರ್ಮಜಾಗರಣ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಧರ್ಮವನ್ನು ಆಚರಿಸುವುದರ ಮೂಲಕ ಅದನ್ನು ಉಳಿಸಬೇಕಾಗಿದೆ. ಧರ್ಮವೆಂದರೆ ಕೇವಲ ಪೂಜೆ ಪುನಸ್ಕಾರಗಳಷ್ಟೇ ಅಲ್ಲ. ಇನ್ನೊಬ್ಬರಿಗೆ ಹಿತವಾಗುವಂತೆ ಮಾಡುವ ಎಲ್ಲ ಒಳ್ಳೆಯ ಕೆಲಸಗಳೂ ಧರ್ಮವೇ. ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ಸಮಾಜದಲ್ಲಿ ಸಾಮರಸ್ಯ ಉಂಟಾಗಲು ಸಾಧ್ಯ […]

ಎಲ್ಲಾ ಮಾತೆಯರೂ ದುರ್ಗಾಮಾತೆಯಂತಾಗಬೇಕು: ಪೇಜಾವರಶ್ರೀ ಕರೆ

ಎಲ್ಲಾ ಮಾತೆಯರೂ ದುರ್ಗಾಮಾತೆಯಂತಾಗಬೇಕು: ಪೇಜಾವರಶ್ರೀ ಕರೆ

ಶಿವಮೊಗ್ಗ - 0 Comment
Issue Date : 03.02.2014

ಹಾದಿಗಲ್ಲು: ಮೋಸದ ಮತಾಂತರ, ಭಯೋತ್ಪಾದನೆ ಮಾಡುವ ಮತೀಯ ಶಕ್ತಿಗಳ ಆಕ್ರಮಣದಿಂದ ರಕ್ಷಣೆ ಪಡೆಯಲು ಎಲ್ಲ ಮಾತೆಯರೂ ದುರ್ಗಾ ಮಾತೆಯಂತಾಗಬೇಕು. ಭಾರತ ಮಾತೆಯಲ್ಲಿ ದುರ್ಗೆ, ಲಕ್ಷ್ಮೀ, ಸರಸ್ವತಿಯನ್ನು ಕಾಣಬೇಕೆಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ಕರೆ ನೀಡಿದರು.ಇಲ್ಲಿನ ಕಾರಣಿಕ ಕ್ಷೇತ್ರದಲ್ಲಿ ನಡೆದ ಮಹಾಗಣಪತಿ ಯಾಗ, ಶತ ಚಂಡಿಕಾ ಯಾಗ, ನಾಗಮಂಡಲ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ನಾವು ಒಟ್ಟಾಗಿ ಎಲ್ಲ ಭೇದ ಮರೆತು ಸಂಸ್ಕೃತಿ ಹೀಗಳೆಯುವ ರಕ್ಕಸರನ್ನು ಜಯಿಸಲು ಸಂಘಟಿತ ಶಕ್ತಿ ನಿರ್ಮಿಸುವುದು ಕಾಲದ ಅಗತ್ಯ ಎಂದೂ ಅವರು […]