ಕೊಲ್ಯ ರಮಾನಂದ ಸ್ವಾಮೀಜಿ

ಕೊಲ್ಯ ರಮಾನಂದ ಸ್ವಾಮೀಜಿ

ಲೇಖನಗಳು ; ಸ್ಮರಣೆ - 0 Comment
Issue Date :

ಮಂಗಳೂರು : ಕೆಲ ದಿನಗಳ ಅನಾರೋಗ್ಯದಿಂದ ಬಳಲುತ್ತಿದ್ದ ಕೊಲ್ಯ ರಮಾನಂದ ಸ್ವಾಮೀಜಿ (66) ಯವರು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.ಮೇ 14 ರಂದು ಸಕ್ಕರೆಕಾಯಿಲೆಯಿಂದಾಗಿ ತೀವ್ರ ರಕ್ತದೊತ್ತಡ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಾಮೀಜಿಯವರು ಸ್ಪಂದಿಸುತ್ತಿದ್ದರಾದರೂ, ಮೇ 23ರ ಬೆಳಗ್ಗೆ ಹೃದಯಾಘಾತಕ್ಕೀಡಾದರು. ಬಳಿಕ ಅಪರಾಹ್ನ ಮತ್ತೊಮ್ಮೆ ತೀವ್ರ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದರು.ರಮಾನಂದ ಸ್ವಾಮೀಜಿಗಳು ಕಳೆದ 40 ವರ್ಷಗಳ ಹಿಂದೆ ಕೊಲ್ಯ ಕ್ಷೇತ್ರದಲ್ಲಿ ಮೂಕಾಂಬಿಕಾ ದೇವಸ್ಥಾನದ ಪ್ರತಿಷ್ಠಾಪನೆ ನಡೆಸಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ಕನ್ಯಾಕುಮಾರಿಯಿಂದ ಕಾಶಿ ಕ್ಷೇತ್ರದವರೆಗೆ 2 […]

ನಿಧನ ವಾರ್ತೆ

ಸ್ಮರಣೆ - 0 Comment
Issue Date :

ಗೋಪಾಲರಾವ್ ಜುಜಾರ್ ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಬ್ಬಳ್ಳಿಯ ಹಿರಿಯ ಕಾರ್ಯಕರ್ತ ಗೋಪಾಲರಾವ್ ಜುಜಾರ್(87) ಅವರು ಮೇ 6ರಂದು ನಿಧನ ಹೊಂದಿದರು. ಅವರು ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಗೋಪಾಲರಾವ್ ಅವರು ಅನೇಕ ವರ್ಷಕಾಲ ಸಂಘದ ಧಾರವಾಡ ವಿಭಾಗ ಕಾರ್ಯವಾಹಕರಾಗಿ ಕೆಲಸ ಮಾಡಿದ್ದರು. ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯನ್ನು ಸ್ಥಾಪಿಸುವುದರಲ್ಲಿ ಅವರ ಹೆಚ್ಚಿನ ಪರಿಶ್ರಮವಿದೆ. ತುರ್ತುಪರಿಸ್ಥಿತಿಯಲ್ಲಿ ಅವರು ಕಾರಾಗೃಹವಾಸವನ್ನೂ ಅನುಭವಿಸಿದ್ದರು.

ಬಲರಾಜ್‍ ಮಧೋಕ್‍

ಬಲರಾಜ್‍ ಮಧೋಕ್‍

ಸ್ಮರಣೆ - 0 Comment
Issue Date :

ಭಾರತೀಯ ಜನಸಂಘದ ಸ್ಥಾಪಕ ಸದಸ್ಯರೂ ಆರೆಸ್ಸೆಸ್‌ನ ಪ್ರಮುಖ ನಾಯಕರೂ ಆಗಿದ್ದ ಬಲರಾಜ್ ಮಧೋಕ್ (96) ಹೊಸದಿಲ್ಲಿಯ ಏಮ್ಸ್‌ನಲ್ಲಿ ಮೇ 2ರಂದು ಕೊನೆಯುಸಿರೆಳೆದರು. ಅವರು ಅನಾರೋಗ್ಯದ ಕಾರಣದಿಂದಾಗಿ ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 2 ಹಾಗೂ 4ನೇ ಸಂಸತ್ ಚುನಾವಣೆಗಳಲ್ಲಿ ದೆಹಲಿಯ ಎನ್‌ಸಿಟಿ ಮತ್ತು ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದ ಬಲರಾಜ್ ಅವರು 60 ಮತ್ತು 70ನೇ ದಶಕದ ಪ್ರಾರಂಭದ ದಿನಗಳು ರಾಜಕೀಯವಾಗಿ ಬಹಳ ಚಟುವಟಿಕೆಯಿಂದಿದ್ದ ಕಾಲ. 1920ರ ಫೆ. 25ರಂದು […]

ಕಾಶೀವಿಶ್ವನಾಥ ಶೆಟ್ಟಿ

ಕಾಶೀವಿಶ್ವನಾಥ ಶೆಟ್ಟಿ

ಸ್ಮರಣೆ - 0 Comment
Issue Date : 30.4.2016

ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಮತ್ತು ಬಿಜೆಪಿ ಧುರೀಣ ಬಿಎಸ್ ಕಾಶೀವಿಶ್ವನಾಥ ಶೆಟ್ಟಿ(62) ಅವರು ಕೆಲ ಕಾಲದ ಅಸ್ವಸ್ಥತೆಯ ಚಿಕಿತ್ಸೆ ನಂತರ ಏ. 27ರ ರಾತ್ರಿ ನಿಧನರಾದರು. ದಿವಂಗತ ಬಿ.ಎಸ್ ಶಿವಪ್ಪಶೆಟ್ಟರು ಮತ್ತು ಕಮಲಮ್ಮನವರ ಮಕ್ಕಳಾದ ಕಾಶೀವಿಶ್ವನಾಥ ಶೆಟ್ಟರು ಮೂಲತಹ ಹಾಸನ ಜಿಲ್ಲೆಯ ಬಸವಾಪಟ್ಟಣದವರಾಗಿದ್ದು ವೃತ್ತಿಯಿಂದ ಕೃಷಿಕರಾಗಿದ್ದರು. ಅಂದಿನ ದಿನಗಳಲ್ಲಿ ಬಡತನದ ಕಾರಣದಿಂದ ವಿದ್ಯಾಭ್ಯಾಸ ಮುಂದುವರೆಸಲಾರದೇ ಕೃಷಿಯಲ್ಲೇ ಕಾಯಕವನ್ನು ಕಂಡುಕೊಂಡಿದ್ದರು. ಕಳೆದ ಮೂರು ದಶಕಗಳ ಹಿಂದೆ ಮೈಸೂರಿನಲ್ಲಿ ಸಿಮೆಂಟ್ ವ್ಯಾಪಾರವನ್ನು ಪ್ರಾರಂಭಿಸಿ, ತಮ್ಮ ಸ್ವಂತ ಪರಿಶ್ರಮದಿಂದ […]

ಹೋರಾಟದ ಕಿಚ್ಚು ಹಚ್ಚಿದ ನಾಣಯ್ಯ

ಹೋರಾಟದ ಕಿಚ್ಚು ಹಚ್ಚಿದ ನಾಣಯ್ಯ

ಸ್ಮರಣೆ - 0 Comment
Issue Date : 30.4.2016

ಮಡಿಕೇರಿ: ಕೊಡಗಿನ ಜನತೆಯಲ್ಲಿ ದೇಶಭಕ್ತಿ ಹಾಗೂ ಹೋರಾಟದ ಕಿಚ್ಚು ಹಚ್ಚಿದ ಕೊಕ್ಕಂಡ ಡಿ.ನಾಣಯ್ಯ ಅವರು ಏ.16ರಂದು ವಿಧಿವಶರಾಗಿದ್ದಾರೆ. ಮೂಲತಃ ದೇಶಭಕ್ತಿ, ಹೋರಾಟದ ಮನೋಭಾವದ ಕೊಡವ ಕುಟುಂಬದಲ್ಲಿ ಜನಿಸಿದ್ದ ನಾಣಯ್ಯ ಅವರು 60ರ ದಶಕದಲ್ಲಿ ಕೊಡಗಿನಲ್ಲಿದ್ದ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಹಾಗೂ ಸ್ವತಂತ್ರ ಪಕ್ಷಗಳ ಕಾರ್ಯವೈಖರಿಯಿಂದ ಬೇಸತ್ತಿದ್ದರು. ಇದೇ ಸಂದರ್ಭ ರಾಷ್ಟ್ರಮಟ್ಟದಲ್ಲಿ ಜನಸಂಘವನ್ನು ಮುನ್ನಡೆಸುತ್ತಿದ್ದ ದೀನದಯಾಳ್ ಉಪಾಧ್ಯಾಯರು ಕೇರಳದ ಕ್ಯಾಲಿಕಟ್‌ನಲ್ಲಿ ರಾಷ್ಟ್ರೀಯ ಅಧಿವೇಶನವನ್ನು ಆಯೋಜಿಸಿದ್ದರು. ಈ ಅಧಿವೇಶನಕ್ಕೆ ಕೊಡಗಿನಿಂದ ನಾಣಯ್ಯ ಅವರು ತಮ್ಮ ಕೆಲವು ಸ್ನೇಹಿತರನ್ನು ಕರೆದುಕೊಂಡು […]

ಸಂಘಕ್ಕೆ ತನ್ನನ್ನು ಒಪ್ಪಿಸಿಕೊಂಡು ಬೆಳೆದ ಅನಂತ

ಸಂಘಕ್ಕೆ ತನ್ನನ್ನು ಒಪ್ಪಿಸಿಕೊಂಡು ಬೆಳೆದ ಅನಂತ

ಸ್ಮರಣೆ - 0 Comment
Issue Date : 22.02.2016

ಇತ್ತೀಚೆಗೆ ಅಂದರೆ ಫೆಬ್ರವರಿ 11ರಂದು (ಪಂ. ದೀನದಯಾಳ್‌ಜೀ ಉಪಾಧ್ಯಾಯರ ಬಲಿದಾನದ ದಿನ) ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೈಸೂರಿನ ಹಿರಿಯ ಸ್ವಯಂಸೇವಕ ಅನಂತಪದ್ಮನಾಭರು. ಇಹಲೋಕವನ್ನು ತ್ಯಜಿಸಿ ಹೋದರು. ಅವರೊಡನೆ ನನ್ನ ಸಂಪರ್ಕ, ಸಂಬಂಧ 60 ವರ್ಷಗಳಷ್ಟು ಹಿಂದಿನದು. ಈ ಸಂಬಂಧವನ್ನು ಮೆಲಕು ಹಾಕುವಾಗ ಅನಂತರ ಜೀವನಯಾತ್ರೆಯ ನೆನಪಾಗುತ್ತದೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಲೌಕಿಕತೆಯ ಒಂದು ಮಗ್ಗುಲಿನ ಒಳದರುಶನವಾಗುತ್ತದೆ. ‘‘ಸಂಘಕ್ಕೆ ತನ್ನನ್ನು ಒಪ್ಪಿಸಿಕೊಂಡ ಸಾಮಾನ್ಯ ವ್ಯಕ್ತಿಯಲ್ಲಿಯೂ ಸಂಘವು ಅಮೋಘವಾದ ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಮತ್ತು ತಾನೂ ಏನನ್ನಾದರೂ ಸಾಧಿಸಬಲ್ಲೆ ಎಂಬ […]

ಬಹುಮುಖ ಪ್ರತಿಭೆಯ ಡಾ. ಸತ್ಯನಾರಾಯಣ ಶಾಸ್ತ್ರೀ

ಬಹುಮುಖ ಪ್ರತಿಭೆಯ ಡಾ. ಸತ್ಯನಾರಾಯಣ ಶಾಸ್ತ್ರೀ

ಸ್ಮರಣೆ - 0 Comment
Issue Date : 06.02.2016

ಮೂಲತಃ ಹೊಸಹಳ್ಳಿಯ ವೆಂಕಟೇಶ ಶರ್ಮಾ ಶಾಸ್ತ್ರೀ ಮತ್ತು ಸೀತಮ್ಮನವರ ಸೀಮಂತ ಪುತ್ರರಾದ ಡಾ. ಸತ್ಯನಾರಾಯಣಶಾಸ್ತ್ರಿಗಳು ಜನವರಿ 28ರಂದು ಲಂಡನ್ ನಗರದಲ್ಲಿ ದಿವಂಗತರಾದರೆಂದು ತಿಳಿಸಲು ವಿಷಾದ ವಾಗುತ್ತದೆ. ಶ್ರೀಯುತರು ಬಹುಮುಖ ಪ್ರತಿಭೆಯುಳ್ಳವರು. ಬಿ.ಎ. ಮತ್ತು ಎಂ.ಎ. (ಸಂಸ್ಕೃತ) ಪರೀಕ್ಷೆಗಳಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‌್ಯಾಂಕ್ ಪಡೆದವರಾಗಿದ್ದರು. 1970ರಲ್ಲಿ ಜಪಾನ್ ದೇಶದಲ್ಲಿ ನಡೆದ EXPO 70 ಮೇಳದಲ್ಲಿ ಕರ್ನಾಟಕ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಯಾಗಿ ಆಯ್ಕೆಯಾಗಿ ಭಾಗವಹಿಸಿದ್ದರು. ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸುಮಾರು 25 ವರ್ಷಗಳ ಕಾಲ ಸೇವೆ […]

ಸರಳ, ಸಜ್ಜನ ಬಿ.ಎನ್‍.ಶ್ರೀ.

ಸರಳ, ಸಜ್ಜನ ಬಿ.ಎನ್‍.ಶ್ರೀ.

ಸ್ಮರಣೆ - 0 Comment
Issue Date : 06.02.2016

ದಾನಕ್ಕಿಂತ ಮಿಗಿಲಾದ ಧರ್ಮವಿಲ್ಲ, ತೆಗೆದುಕೊಳ್ಳುವುಕ್ಕೆ ಮಾತ್ರ ಕೈಯೊಡ್ಡುವನು ಅತಿನೀಚ. ಮತ್ತೊಬ್ಬರಿಗೆ ಕೊಡುವುದಕ್ಕೆ ಯಾರು ಕೈಯನ್ನು ಎತ್ತುತ್ತಾರೋ ಅವರು ಮಾತ್ರ ಅತ್ಯುತ್ತಮರು, ಅರ್ಧ ಹೊಟ್ಟೆ ತುಂಬಿದರೂ ಚಿಂತೆಯಿಲ್ಲ ಕೊನೆಯ ಚೂರು ರೊಟ್ಟಿಯನ್ನ್ನಾದರೂ ಹಸಿದವನಿಗೆ ನೀಡಿ, ಇತ್ಯಾದಿ ನುಡಿಮುತ್ತುಗಳು ನಮ್ಮ ಧರ್ಮದ ಸಾರ. ಮೇಲಿನ ವಾಕ್ಯಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಜೀವನ ಪೂರ್ಣ ಅದೇ ಪಥದಲ್ಲಿ ನಡೆದು ಈಗ ನಮ್ಮೊಂದಿಗಿಲ್ಲದ ಆದರ್ಶ ವ್ಯಕ್ತಿ ಬಿ.ಎನ್.ವಿ.ಸುಬ್ರಮಣ್ಯಂ. ಬಡತನದಲ್ಲಿ ಬೆಳೆದು ಬಂದರೂ ಸೋಲೊಪ್ಪಿಕೊಳ್ಳದೆ ಸವಾಲಾಗಿ ಸ್ವೀಕರಿಸಿ ಅದನ್ನು ಮೆಟ್ಟಿ ಆರ್ಥಿಕ ಮತ್ತು ವೈಚಾರಿಕ […]

ನಗುಮೊಗದ ಮಗುವಿನಂತಹ ಮನಸ್ಸಿನ ಸ್ವಾಮೀಜಿ ಶ್ರೀ ಸುಧೀಂದ್ರತೀರ್ಥರು

ನಗುಮೊಗದ ಮಗುವಿನಂತಹ ಮನಸ್ಸಿನ ಸ್ವಾಮೀಜಿ ಶ್ರೀ ಸುಧೀಂದ್ರತೀರ್ಥರು

ಸ್ಮರಣೆ - 0 Comment
Issue Date : 04.02.2016

ಕಾಶೀಮಠ ಸಂಸ್ಥಾನ ಗುರುಪೀಠ ಪರಂಪರೆಯ 20ನೇ ಯತಿವರ್ಯ ಹಾಗು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದ ಆರಾಧ್ಯ ಗುರುಗಳಾಗಿದ್ದ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ(90) ಜ.17 ರಂದು ಮುಂಜಾನೆ ಹರಿದ್ವಾರದಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿ ನಾರಾಯಣ ಸನ್ನಿಧಾನ ಸೇರಿದ್ದು ಹಿಂದು ಸಮಾಜಕ್ಕೆ ಅಪಾರ ನಷ್ಟವನ್ನುಂಟುಮಾಡಿದೆ. ತುಂಬು ಜೀವನ ನಡೆಸಿದ್ದ ಸ್ವಾಮೀಜಿಯವರು 1944 ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. 1949 ರಲ್ಲಿ ತಮ್ಮ 23ನೇ ವಯಸ್ಸಿನಲ್ಲಿ ಪೀಠಾರೋಹಣ ಮಾಡಿ ಸಮಾಜವನ್ನು ಮುನ್ನಡೆಸಿದರು. ವೇದ, ಉಪನಿಷತ್ತು ಸೇರಿದಂತೆ ಅಪಾರ ಅಧ್ಯಯನ […]

ಹೀಗಿದ್ದರು ನಮ್ಮ ಹೆಚ್‍.ಎಸ್‍. ನಾರಾಯಣನ್‍

ಹೀಗಿದ್ದರು ನಮ್ಮ ಹೆಚ್‍.ಎಸ್‍. ನಾರಾಯಣನ್‍

ಸ್ಮರಣೆ - 0 Comment
Issue Date : 28.01.2016

ನಮ್ಮ ಸಂಸ್ಕೃತಿಯಲ್ಲಿ ಪ್ರತಿೂಂದು ವ್ಯಕ್ತಿಯನ್ನೂ ದೈವತ್ವಕ್ಕೇರಿಸುತ್ತೇವೆ. ಜ್ಞಾನ ನೀಡುವ ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿದರೆ ಜೀವ ರಕ್ಷಿಸುವ ವೈದ್ಯರನ್ನು ಸ್ಥಿತಿಕರ್ತನಾದ ನಾರಾಯಣನಿಗೆ ಹೋಲಿಸುತ್ತೇವೆ. ವೈದ್ಯ ನೀಡುವ ಔಷಧಿ ನಮಗೆ ಕೇವಲ ಘನ, ದ್ರವ ಪದಾರ್ಥವಲ್ಲ ಅದು ಗಂಗೆಗೆ ಸಮಾನ. ಅದಕ್ಕಾಗೇ ‘ಔಷಧಂ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ’ ಎಂದದ್ದು. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆಯಲ್ಲಿ ಮನೋವಿಜ್ಞಾನ ಪ್ರಾಧ್ಯಾಪಕರಾಗಿದ್ದ ಡಾ. ನಾರಾಯಣ್ ಅವರು ನೂರಾರು ವಿದ್ಯಾರ್ಥಿಗಳಿಗೆ ನೈಜವೈದ್ಯರಾಗುವ ಮಾರ್ಗ ತೋರಿದವರು. ಅವರು ವೈದ್ಯರಾದದ್ದೇ ಸಮಾಜ […]