ಸೂರ್ಯನಾಥ - ನಾನು ಕಂಡಂತೆ

ಸೂರ್ಯನಾಥ – ನಾನು ಕಂಡಂತೆ

ಚಂದ್ರಶೇಖರ ಭಂಡಾರಿ ; ಸ್ಮರಣೆ - 0 Comment
Issue Date : 03.11.2015

ಇಸವಿ 1953. ಬಂಟ್ವಾಳದಲ್ಲಿ ತಮ್ಮ ಹೈಸ್ಕೂಲು ಶಿಕ್ಷಣ ಪೂರೈಸಿ ಸೂರ್ಯನಾಥರು ಅದೇ ವರ್ಷ ಮಂಗಳೂರಿಗೆ ಬಂದಿದ್ದರು. ಆ ದಿನಗಳಲ್ಲಿ ಅವರೊಂದಿಗೆ ನನಗೆ ಪರಿಚಯವಾಗಿ, ಕ್ರಮೇಣ ಸ್ನೇಹ ಬೆಸೆದುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ. ನಾನಾಗ ದ್ವಿತೀಯ ಇಂಟರ್‌ಮೀಡಿಯಟ್‌ನಲ್ಲಿದ್ದೆ. ಅವರಿಗಿಂತ ಒಂದು ವರ್ಷ ಮುಂದೆ. ನಾವಿಬ್ಬರೂ ಓದುತ್ತಿದ್ದುದು ಬೇರೆ ಬೇರೆ ಕಾಲೇಜುಗಳಲ್ಲಿ. ನಮ್ಮ ವಿಷಯಗಳೂ ಭಿನ್ನ. ಅವರ ಅಧ್ಯಯನವಿದ್ದುದು ಮಾನವಿಕಶಾಸ್ತ್ರದಲ್ಲಿ, ನಾನು ವಿಜ್ಞಾನದ ವಿದ್ಯಾರ್ಥಿ. ಆದರೆ ನಿತ್ಯವೂ ಸಂಜೆ ಸಂಘದ ವಿದ್ಯಾರಣ್ಯ ಶಾಖೆಯಲ್ಲಿ ನಮ್ಮಿಬ್ಬರದೂ ಪರಸ್ಪರ ಭೇಟಿ, ಜತೆಗೂಡಿ […]

ಅದಮ್ಯ ಜೀವನೋತ್ಸಾಹದ ಅಪೂರ್ವ ಚೇತನ

ಅದಮ್ಯ ಜೀವನೋತ್ಸಾಹದ ಅಪೂರ್ವ ಚೇತನ

ಸ್ಮರಣೆ - 0 Comment
Issue Date : 08.10.2015

  – ದು.ಗು. ಲಕ್ಷ್ಮಣ ಅವರು ಬದುಕಿದ್ದುದು ಬರೋಬ್ಬರಿ 80 ವರ್ಷ. ಈ ಪೈಕಿ 60 ವರ್ಷಗಳಷ್ಟು ದೀರ್ಘಕಾಲ ಅವರು ಸಂಘದ ಪ್ರಚಾರಕರಾಗಿದ್ದರು. ತಮ್ಮ ಪದವಿ ಪಡೆದ ಬಳಿಕ, 60 ವರ್ಷಗಳನ್ನು ಸಂಘದ ಕೆಲಸಕ್ಕಾಗಿ ಸಂಪೂರ್ಣ ಸಮರ್ಪಿಸಿದ್ದರು. ಮೊನ್ನೆ ಅಪಘಾತವೊಂದು ಸಂಭವಿಸದಿದ್ದರೆ ಅವರು ಇನ್ನೂ ಕೆಲಕಾಲ ಬದುಕು ತ್ತಿದ್ದರೇನೋ. ಏಕೆಂದರೆ ವಯಸ್ಸು 80 ಆಗಿದ್ದರೂ ಅವರಿಗೆ ವೃದ್ಧಾಪ್ಯಕ್ಕೆ ಸಂಬಂಧಿಸಿದ ಯಾವ ಖಾಯಿಲೆಗಳೂ ಕಾಡಿರಲಿಲ್ಲ. ದೇಹ ಕೂಡ ಗಟ್ಟಿಮುಟ್ಟಾಗಿತ್ತು. 80ರ ಹರೆಯದಲ್ಲೂ ಅವರು ದ್ವಿಚಕ್ರ ವಾಹನವನ್ನು ರಾತ್ರಿ ವೇಳೆಯಲ್ಲೂ […]

ವೃಕ್ಷಾಃಸತ್ಪುರುಷಾ ಇವ...

ವೃಕ್ಷಾಃಸತ್ಪುರುಷಾ ಇವ…

ಸ್ಮರಣೆ - 0 Comment
Issue Date : 08.10.2015

-ರಮಾನಂದ ಆಚಾರ್ಯ ‘ವೃಕ್ಷಾಃ ಸತ್ಪುರುಷಾ ಇವ…’ ಎಂಬ ಮಾತಿನಂತೆ, ತೆಂಗಿನ ಮರ, ಮಾವಿನ ಮರ, ಹಲಸಿನ ಮರ ಇತ್ಯಾದಿ ಮರಗಳು ಫಲಗಳನ್ನೀಯುವುದು ಸ್ವಂತಕ್ಕಲ್ಲ, ಸ್ವತಃ ಬಿಸಿಲಿನ ಝಳ ಸಹಿಸಿ ನೆರಳು ನೀಡುವುದು ದಾರಿಹೋಕರಿಗೆ ತಂಪಾಗಲೆಂದು. ತೆಂಗಿನ ಮರವಂತೂ ಈ ದೃಷ್ಟಿಯಿಂದ ಕಲ್ಪವೃಕ್ಷವೆನಿಸಿದೆ. ವೃಕ್ಷಗಳಂತೆ ಗೋವಿನ ಮಹಿಮೆಯೂ ಇಂತಹದೇ. ಇಂತಹ ಸತ್ಪುರುಷರು ಕೀರ್ತಿಗೆ ಹಾತೊರೆಯದೆ ಇಲ್ಲಿ ಜನಿಸಿದ್ದರಿಂದಲೇ ಇದು ಪುಣ್ಯಭೂಮಿ. ಅಂತಹ ಕೀರ್ತಿಶೇಷರೆನಿಸಿದವರು ಸೆ. 16ರಂದು ವಿಧವಶರಾದ ಕೆ.ಎಸ್. ನಾಗಭೂಷಣ ಭಾಗವತ್ ಅವರು. ಸ್ವಯಂಸೇವಕರಿರಲಿ, ಇತರ ಪರಿಚಿತರಿರಲಿ, ಅವರ ಮನೆಗಳಲ್ಲಿ […]

ದಣಿವರಿಯದ ದುಡಿಮೆಗಾರ

ದಣಿವರಿಯದ ದುಡಿಮೆಗಾರ

ಸ್ಮರಣೆ - 0 Comment
Issue Date : 08.10.2015

   – ಕಾ.ಶ್ರೀ. ನಾಗರಾಜ ಮನ್ಮಥ ಸಂವತ್ಸರದ ಆರಂಭದಿಂದ ಗಣೇಶ ಚತುರ್ಥಿವರೆಗೆ, ಕೇಶವಕೃಪಾಕ್ಕೆ ಸತತ ಸೂತಕದ ಛಾಯೆ; ಚಕ್ರವರ್ತಿ ತಿರುಮಗನ್, ನ. ಕೃಷ್ಣಪ್ಪ, ನಾಗಭೂಷಣ ಭಾಗವತ್ ಇವರುಗಳ ನಿರ್ಜೀವ ಕಳೇಬರಕ್ಕೆ ವಿದಾಯ ನೀಡಿ ಮನಃಕ್ಲೇಶದಿಂದ ತೊಳಲುವ ಅಸಹಾಯಕ ಮನಸ್ಥಿತಿ.  1955ರ ಜನವರಿಯಲ್ಲಿ ಬಿಎಸ್ಸಿ ಮುಗಿಸಿದ ನಾಗಭೂಷಣ ಸಂಘ ಪ್ರಚಾರಕರಾಗಿ ಹೊರಟರು. ಶ್ರೀರಂಗಪಟ್ಟಣ ಅವರ ಕಾರ್ಯಕ್ಷೇತ್ರ. ಅಂದಿನ ದಿನಗಳಿಂದಲೂ ನನಗೆ ಅವರು ಪರಿಚಿತರು. 2015 ಸೆಪ್ಟೆಂಬರ್ 16ರವರೆಗೆ ಅವರ ಕಾರ್ಯಕ್ಷೇತ್ರಗಳು ಬದಲಾಗುತ್ತಲೇ ಇದ್ದು, ಅವರೊಬ್ಬ ಪರಿಶ್ರಮಿ, ನಿಷ್ಠಾವಂತ, ಅವಿರತ, […]

ನಿರಂತರ ಕಾರ್ಯಶೀಲ ನಾಗಭೂಷಣ

ನಿರಂತರ ಕಾರ್ಯಶೀಲ ನಾಗಭೂಷಣ

ಸ್ಮರಣೆ - 0 Comment
Issue Date : 08.10.2015

ಸಂಘದ ಹಿರಿಯ ಪ್ರಚಾರಕರಾಗಿದ್ದ ನ. ಕೃಷ್ಣಪ್ಪನವರನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಮತ್ತೊಬ್ಬ ಹಿರಿಯ ಪ್ರಚಾರಕ ಕೆ. ಎಸ್. ನಾಗಭೂಷಣ ಅವರನ್ನು ಕಳೆದುಕೊಳ್ಳುವ ದೌರ್ಭಾಗ್ಯ ಸ್ವಯಂಸೇವಕರದ್ದಾಗಿದೆ. ನಾಗಭೂಷಣ ಎಂದ ಕೂಡಲೇ ಥಟ್ಟನೆ ನೆನಪಿಗೆ ಬರುವುದು ಎಂದಿಗೂ ಬತ್ತದ ಅವರ ಜೀವನೋತ್ಸಾಹ, ಲವಲವಿಕೆ, ಕಾರ್ಯತತ್ಪರತೆ. ದೇಶದಾದ್ಯಂತ ಹರಡಿರುವ ಸಂಘದ ಕಾರ್ಯಾಲಯಗಳಲ್ಲಿ ಬೆಂಗಳೂರಿನ ಕೇಶವಕೃಪಾ ದೇಶಕ್ಕೆಲ್ಲ ಮಾದರಿ ಎನಿಸುವಂತಿದ್ದರೆ ಅದರ ಹಿಂದೆ ಹತ್ತಾರು ವರ್ಷಗಳ ಕಾಲ ಅದರ ಉಸ್ತುವಾರಿ ವಹಿಸಿದ್ದ ನಾಗಭೂಷಣರ ಕೈವಾಡವಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಎಂಭತ್ತರ ದಶಕದಲ್ಲಿ ನಾಗಭೂಷಣ […]

ದಣಿವರಿಯದ ಕ್ರಿಯಾಶೀಲ ಸಾಧಕ ನಮ್ಮ ನಾಗಭೂಷಣ

ದಣಿವರಿಯದ ಕ್ರಿಯಾಶೀಲ ಸಾಧಕ ನಮ್ಮ ನಾಗಭೂಷಣ

ಸ್ಮರಣೆ - 0 Comment
Issue Date : 08.10.2015

ಸಂಘದ ಶಾಖೆಗಳಲ್ಲಿ ನಾವು ಹಾಡುವ ಒಂದು ಹಿಂದಿ ಹಾಡು ನೆನಪಾಗುತ್ತಿದೆ. ‘ಸಂಘ ಕಿರಣ ಘರ ಘರ ದೇನೇ ಕೋ ಅಗಣಿತ ನಂದಾದೀಪ ಜಲೇ… ಮೌನ ತಪಸ್ವಿ ಸಾಧಕ ಬನಕರ ಹಿಮಗಿರಿ ಸಾ ಚುಪ ಚಾಪ ಗಲೇ’ – ಯಾವುದೇ ಸದ್ದು ಗದ್ದಲವಿಲ್ಲದೆ ಪ್ರಚಾರ ಪ್ರಸಿದ್ಧಿಗಳ ಹಿಂದೆ ಬೀಳದೆ ಜೀವನವಿಡೀ ಸಂಘಕಾರ್ಯ ಮಾಡಮಾಡುತ್ತಾ ಜೀವನಯಾತ್ರೆ ಮುಗಿಸುವ ಸ್ವಯಂಸೇವಕರ ವರ್ಣನೆ ಈ ಹಾಡಿನಲ್ಲಿದೆ. ಇವರು ಸಂಘದ ಕಿರಣಗಳನ್ನು ಮನೆ ಮನೆಗೆ ಮುಟ್ಟಿಸಲೆಂದೇ ಎಣ್ಣೆ ಮುಗಿಯುವ ತನಕ ಉರಿದು ಬೆಳಕನ್ನು ಹರಡುವ […]

ನಿರಂತರ ಮೌನಕ್ಕೆ ಜಾರಿದ ಒಂದು ಮಹಾಚೇತನ

ನಿರಂತರ ಮೌನಕ್ಕೆ ಜಾರಿದ ಒಂದು ಮಹಾಚೇತನ

ಸ್ಮರಣೆ - 0 Comment
Issue Date : 31.08.2015

-ಸ. ಗಿರಿಜಾಶಂಕರ, ಚಿಕ್ಕಮಗಳೂರು ಅವ್ಯಕ್ತಾದೀನಿ ಭೂತಾನಿ ವ್ಯಕ್ತ ಮಧ್ಯಾನಿ ಭಾರತ ಅವ್ಯಕ್ತಾನಿಧಾನಾನೈವ ತತ್ರಕಾ ಪರಿವೇಧನ॥ ಹುಟ್ಟು ಅವ್ಯಕ್ತ, ಸಾವೂ ಅವ್ಯಕ್ತವೇ, ಆದರೆ ಇವರೆಡರ ಮಧ್ಯದ ಅವಧಿ ವ್ಯಕ್ತ; ಹಾಗಾಗಿ ಅದಕ್ಯಾಕೆ ವೇದನೆ ಎಂಬ ಗೀತೆಯ ಮಾತಿನ ಒಳ ಅರ್ಥಕ್ಕೆ ಹೋದರೆ ಈ ಸಮಾಜದಲ್ಲಿ ಹಲವು ಮಾರ್ಗ ಪ್ರವರ್ತಕರು ಸಾಧಿಸಿ ತೋರಿಸಿದವರು, ಸಮಾಜದ ಹಿತಕ್ಕೆ ಮುಡುಪಾದವರು, ಈ ರೀತಿ ತಮ್ಮದೇ ಹೆಜ್ಜೆಗುರುತುಗಳನ್ನು ಬಿಟ್ಟು ಹೋದವರೆಲ್ಲರೂ ಈ ವ್ಯಕ್ತ ಮಧ್ಯದಲ್ಲೇ ಸಾಧನೆ ಮಾಡಿ, ಜನಮಾನಸದಲ್ಲಿ ಪ್ರಾತಃಸ್ಮರಣೀಯರಾದವರು. ಆ ತುದಿಯಿಂದ ಈ ತುದಿಯವರಗೆ ಸವೆಸಿದ […]

ಬೆಂಕಿಯಲ್ಲಿ ಅರಳಿದ ಹೂವು

ಬೆಂಕಿಯಲ್ಲಿ ಅರಳಿದ ಹೂವು

ಸ್ಮರಣೆ - 0 Comment
Issue Date : 24.08.2015

ಹೆಸರು ರಾಜಾರಾಮ – ಸ್ವಭಾವ ಆತ್ಮಾರಾಮ. ಆದರ್ಶ ಗಂಡ, ಅತ್ಯುತ್ತಮ ತಂದೆ, ಹಲವರ ಆತ್ಮೀಯಮಿತ್ರ, ವಿದ್ಯಾರ್ಥಿಗಳ ಇಷ್ಟದ ಮೇಷ್ಟ್ರು, ಊರಿನ ಸಹಜ ಮುಖಂಡ, ಸಹಜ ತತ್ತ್ವಜ್ಞಾನಿ… ಹೀಗೆ ರಾಜಾರಾಮ ಆವರಿಸಿಕೊಂಡ ಬಗೆ ಕುಟುಂಬದಿಂದ ಸಮಗ್ರ ಸಮಾಜದವರೆಗೆ. ಇರುವುದರ ಮಹತ್ವ ಇಲ್ಲದಿರುವಿಕೆಯಿಂದ ವೇದ್ಯವಾಗುತ್ತದೆ ಎಂಬುದೊಂದು ವಕ್ತೋಕ್ತಿ. ಶಿವಮೊಗ್ಗದ ಮೈಲಾರಿ, ಹಿರಿಯೂರು ಕೃಷ್ಣಮೂರ್ತಿಗಳು ತೀರಿಕೊಂಡಾಗಲೇ ಈ ಮಾತಿನ ಅನುಭವವಾಗಿತ್ತು. ರಾಜಾರಾಮ ಇದೇ ಸಾಲಿಗೆ ಸೇರಿದ ಜೀವ. ತುರ್ತುಪರಿಸ್ಥಿತಿಯ ದಿನ ಶಿವಮೊಗ್ಗದ ಸತ್ಯಾಗ್ರಹದ ಮೊದಲ ತಂಡದಲ್ಲೇ ರಾಜಾರಾಮನ ಬಂಧನ. ಜೈಲಿನಲ್ಲೂ ನಿರಾಳ. ಅಲ್ಲೊಂದು ದಿನ […]

ಸದ್ಗುರು ಶಿವಾನಂದ ಮೂರ್ತಿ

ಸದ್ಗುರು ಶಿವಾನಂದ ಮೂರ್ತಿ

ಸ್ಮರಣೆ - 0 Comment
Issue Date : 25.06.2015

ವಾರಂಗಲ್ (ತೆಲಂಗಾಣ):ಪ್ರಸಿದ್ಧ ಆಧ್ಯಾತ್ಮಿಕ ಗುರುಗಳಾಗಿದ್ದ ಸದ್ಗುರು ಕಂದುಕೂರು ಶಿವಾನಂದ ಮೂರ್ತಿ (87) ಅವರು ಜೂ. 10ರಂದು ಇಲ್ಲಿನ ತಮ್ಮ ಗುರುಧಾಮ್ ಆಶ್ರಮದಲ್ಲಿ ದೈವಾಧಿೀ ನರಾದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸದ್ಗುರು ಶಿವಾನಂದಮೂರ್ತಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸದ್ಗುರು ಶಿವಾನಂದಮೂರ್ತಿ ಅವರು 1928ರ ಡಿ. 21ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ಜನಿಸಿದರು. ಶಿವಾನಂದ ಮೂರ್ತಿ ಅವರು ಆಂಧ್ರ ವಿ.ವಿ.ಯ ಗೌವರ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದರು. ಅವರು ಶಿವಾನಂದ ಸಾಂಸ್ಕೃತಿಕ ಟ್ರಸ್ಟ್, ಆಂಧ್ರ ಸಂಗೀತ […]

ಕಣ್ಮರೆಯಾದ ‘ಚಕ್ಕಿ’ಗೆ ಒಂದು ಹನಿ ಕಣ್ಣೀರು

ಸ್ಮರಣೆ - 0 Comment
Issue Date :

‘ಚಕ್ಕೀ (ಚಕ್ರವರ್ತಿ ತಿರುಮಗನ್) ಎಂದೇ ಸಹಿ ಹಾಕುತ್ತಿದ್ದ ಕಣ್ಮರೆಯಾದ ಕಿರಿಯ ಗೆಳೆಯ, ಐದಡಿ ನಾಲ್ಕಂಗುಲ ವ್ಯಕ್ತಿಯಾದರೂ ಇಡೀ ಕರ್ನಾಟಕದಲ್ಲೇ ಸಾಹಿತ್ಯ ಹರಟೆ, ಭಾಷಣಗಳ ಅಧ್ವರ್ಯು ಎನಿಸಿದ ಹಿರೇಮಗಳೂರು ಕಣ್ಣನ್ (ಕಿರಿಯ ಸಹೋದರ) ಹೆಸರಿನ ವಾಚಾಳಿಗಿಂತ ಯಾವ ವಿಧಲ್ಲೂ ಎರಡನೆಯವನಾಗಿರಲಿಲ್ಲ ಎಂಬುದು ಆರಿಸಿದ ವ್ಯಕ್ತಿಗಳಿಗೆ ಮಾತ್ರ ಗೊತ್ತು. ಏಳು ಮಕ್ಕಳ ಕುಟುಂಬದ ಹಿರಿಯಣ್ಣ ಚಕ್ರವರ್ತಿ ತಿರುಮಗನ್ ಅವರ ಛಾಪು, ಪ್ರತಿಭೆಯೂ ಕಿರಿದಲ್ಲ, ಭಿನ್ನವಲ್ಲ. ಆದರೆ ಆಯಾಮಗಳು ಬೇರೆ ಬೇರೆ. ಪ್ರತಿಭೆ ಮತ್ತು ನವ ನಿರ್ಮೇಶಶಾಲಿನಿ ಪ್ರವೃತ್ತಿಗಳನ್ನು ಸಂಘಟನೆಯೊಂದರ ಶಿಸ್ತಿನೊಳಗೆ […]