ಪ್ರದೀಪ್

ಪ್ರದೀಪ್

ಸ್ಮರಣೆ - 0 Comment
Issue Date : 09.02.2015

ನಮ್ಮ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ದು.ಗು. ಲಕ್ಷ್ಮಣರ ಪುತ್ರ ಪ್ರದೀಪ್ (18) ಇವರು ದಿನಾಂಕ 9ನೇ ಫೆಬ್ರವರಿಯಂದು ವಿಧಿವಶರಾಗಿರುತ್ತಾರೆ. ದಯಾನಂದ ಸಾಗರ ಕಾಲೇಜಿನ ವಿದ್ಯಾರ್ಥಿಯಾದ ಪ್ರದೀಪ್ ಸ್ನೇಹಿತರ ಜೊತೆ ಶನಿವಾರ ಬೆಳಿಗ್ಗೆಯಿಂದ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.  ಈ ಮಾಹಿತಿಯಿಂದ ಕನಕಪುರ ತಾಲ್ಲೂಕಿನ ಚುಂಚಿಫಾಲ್ಸ್ ಬಳಿ ಪತ್ತೆಯಾದ ಬೈಕ್  ಮತ್ತು ಮೃತರ ಬಟ್ಟೆ ಇವುಗಳನ್ನು ಸಂಬಂಧಿಕರು ಗುರುತಿಸಿದರು. ಪ್ರದೀಪ್ ಮತ್ತು ಸ್ನೇಹಿತರು ನದಿಯಲ್ಲಿ  ಈಜಾಡಲು ಹೋಗಿ ಮುಳುಗಿ ಸಾವನ್ನಪ್ಪಿರುತ್ತಾರೆ.  ಪ್ರದೀಪ್ ಅವರ ಸಾವಿಗೆ ವಿಕ್ರಮ ಬಳಗವು […]

ಡಾ. ಮಹೀಂದ್ರಕರ್

ಡಾ. ಮಹೀಂದ್ರಕರ್

ಸ್ಮರಣೆ - 0 Comment
Issue Date : 20.01.2015

ವಿಜಯಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಹಾಗೂ ಜನ ಸಂಘದ ಸ್ಥಾಪಕ ಸದಸ್ಯರಾಗಿದ್ದ ಡಾ. ಎಂ.ಡಿ. ಮಹೀಂದ್ರಕರ್ (90) ಅವರು ಡಿ. 23ರಂದು ಸ್ವಗೃಹದಲ್ಲಿ ನಿಧನರಾದರು. 1942ರಿಂದ ಅವರು ಸಂಘದ ಕಾರ್ಯ ಕರ್ತರಾಗಿ ವಿಜಯಪುರ ಜಿಲ್ಲೆಯಲ್ಲಿ ಸಂಘಕಾ ರ್ಯದ ಬೆಳವಣಿಗೆಗೆ ಕಾರಣರಾಗಿದ್ದರು. 1951ರಲ್ಲಿ ಭಾರತೀಯ ಜನಸಂಘದ ಸ್ಥಾಪಕ ಸದಸ್ಯರಾಗಿ ಜಿಲ್ಲೆಯಾದ್ಯಂತ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದರು. 1969ರಲ್ಲಿ ಜನಸಂಘದ ಕರ್ನಾಟಕ ಪ್ರಾಂತ ಅಧಿವೇಶನವನ್ನು ವಿಜಯಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಯಶಸ್ವಿಯಾಗಿ ನಡೆಯುವಂತೆ ಮಾಡುವಲ್ಲಿ ಇವರ ಪಾತ್ರ […]

ವಿ.ಆರ್. ಕೃಷ್ಣ ಅಯ್ಯರ್

ವಿ.ಆರ್. ಕೃಷ್ಣ ಅಯ್ಯರ್

ಸ್ಮರಣೆ - 0 Comment
Issue Date : 10.12.2014

ತಿರುವನಂತಪುರಂ: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾ ಧೀಶ ವಿ.ಆರ್. ಕೃಷ್ಣ ಅಯ್ಯರ್ (100) ಡಿ. 4ರಂದು ಕೊಚ್ಚಿಯಲ್ಲಿ ನಿಧನರಾದರು. ಅವರು ಕೇರಳದ ಕಮ್ಯೂನಿಸ್ಟ್ ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದರು. ವಿ.ಆರ್. ಕೃಷ್ಣ ಅಯ್ಯರ್ ಅವರು ಆರಂಭದಲ್ಲಿ ಕಮ್ಯುನಿಸ್ಟರ ಜೊತೆ ಗುರುತಿಸಿ ಕೊಂಡಿದ್ದರೂ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಅವರ ಸಂಬಂಧ ಆಪ್ತವಾಗಿತ್ತು. ಸಂಘದ ಸರಸಂಘಚಾಲಕ ಮೋಹನ್‌ಭಾಗವತ್ ಅವರನ್ನು 2013ರ ಅ. 21ರಂದು ಮನೆಗೆ ಕರೆಸಿಕೊಂಡು, ಅವರ ಜೊತೆ ದೇಶದ ಸಮಸ್ಯೆಗಳ ಬಗ್ಗೆ ಅಳವಾದ ವಿಚಾರ ವಿನಿಮಯ ಮಾಡಿದ್ದರು. […]

ವಿ. ಸುಂದರಂ

ವಿ. ಸುಂದರಂ

ಸ್ಮರಣೆ - 0 Comment
Issue Date : 18.11.2014

ಚೆನ್ನೈ: ಖ್ಯಾತ ವಿದ್ವಾಂಸ, ಗ್ರಂಥಕರ್ತ, ಲೇಖಕ ವಿ. ಸುಂದರಂ ಅವರು ನ. 7ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಐಎಎಸ್ ಅಧಿಕಾರಿಯಾಗಿ ನಿವೃತ್ತರಾಗಿದ್ದ ಅವರು ತಮಿಳುನಾಡು ಸರ್ಕಾರದಲ್ಲಿ 1966ರಿಂದ 1994ರವರೆಗೆ ಹಲವಾರು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ವಿ. ಸುಂದರಂ ಅವರು‘ಸೆಲ್ಯೂಟೇಷನ್ಸ್ ಟು ಗುರೂಜಿ ಗೊಲವಲ್ಕರ್’, ‘ರಾಮಸೇತು’, ‘ಬಂದೇ ಮಾತರಂ ಅಲ್ಬಂ’, ‘ಪ್ಯಾರಾಮೌಂಟ್‌ಕ್ರೈ ಫಾರ್ ಎ ಹಿಂದೂ ನೇಷನ್’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ವಿ. ಸುಂದರಂ ಅವರ ನಿಧನಕ್ಕೆ ಸಂಘದ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಹಿರಿಯ ಪ್ರಚಾರಕ ಕೆ. ಸೂರ್ಯನಾರಾಯಣರಾವ್, ಹಿಂದು […]

ಪಂಜಾಬ್ ವಿಶ್ವನಾಥ್

ಪಂಜಾಬ್ ವಿಶ್ವನಾಥ್

ಸ್ಮರಣೆ - 0 Comment
Issue Date : 18.11.2014

ಮಂಗಳೂರು: ಆರೆಸ್ಸೆಸ್‌ನ ಮಾಜಿ ಪ್ರಚಾರಕ, ‘ಪಂಜಾಬ್ ವಿಶ್ವನಾಥ್’ ಎಂದೇ ಜನಪ್ರಿಯರಾಗಿದ್ದ ವಿಶ್ವನಾಥ ಅವರು ಇಲ್ಲಿ ಅಲ್ಪಕಾಲದ ಅಸೌಖ್ಯದಿಂದ ನ. 7ರಂದು ನಿಧನರಾದರು. ಕಿಡ್ನಿ ವೈಫಲ್ಯಕ್ಕಾಗಿ ಅವರು ಚಿಕ್ಸಿತೆ ಪಡೆಯುತ್ತಿದ್ದರು. ವಿಶ್ವನಾಥ್ ಪಂಜಾಬ್ ಪ್ರದೇಶದಲ್ಲಿ 14 ವರ್ಷಗಳ ಕಾಲ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲಿಂದ ಮರಳಿದ ಬಳಿಕ ಮಂಗಳೂರಿನಲ್ಲಿ ನೆಲೆಸಿದ್ದರು. ಪ್ರಚಾರಕರಾಗಿದ್ದಾಗ ಅವರು ನರೇಂದ್ರಮೋದಿ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು. ಒಂದೇ ಸ್ಕೂಟರಿನಲ್ಲಿ ಕುಳಿತು ಇಬ್ಬರು ಸಂಘಕಾರ್ಯ ಬೆಳೆಸಲು ಪ್ರವಾಸ ಮಾಡಿದ ನಿದರ್ಶನಗಳು ಸಾಕಷ್ಟು. ಮೋದಿ ಗುಜರಾತಿನ ಮುಖ್ಯಮಂತ್ರಿಯಾದ […]

 ಶ್ರೀಮತಿ ಎಂ. ಕಾಮಾಕ್ಷಮ್ಮ

ಶ್ರೀಮತಿ ಎಂ. ಕಾಮಾಕ್ಷಮ್ಮ

ಸ್ಮರಣೆ - 0 Comment
Issue Date : 13.10.2014
ಪ್ರೊ. ಅಮಲ್‌ಕುಮಾರ್ ಬಸು

ಪ್ರೊ. ಅಮಲ್‌ಕುಮಾರ್ ಬಸು

ಸ್ಮರಣೆ - 0 Comment
Issue Date : 13.10.2014

ಕೊಲ್ಕತ್ತಾ: ಸಂಘದ ಹಿಂದಿನ ಪ್ರಾಂತ ಪ್ರಚಾರಕ, ಪ್ರಾಂತ ಕಾರ್ಯವಾಹ ಹಾಗೂ ಪ್ರಾಂತ ಸಂಘಚಾಲಕರಾಗಿದ್ದ ಪ್ರೊ. ಅಮಲ್‌ಕುಮಾರ್ ಬಸು ಸೆ. 10ರಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. 1939ರಲ್ಲಿ ಆರೆಸ್ಸೆಸ್‌ಗೆ ಸೇರ್ಪಡೆಯಾಗಿದ್ದ ಅವರು, ಆಗ ಕ್ಷೇತ್ರ ಪ್ರಚಾಕರಾಗಿದ್ದ ಏಕನಾಥ ರಾನಡೆಯವರ ಪ್ರಭಾವಕ್ಕೆ ಒಳಗಾಗಿದ್ದರು. 1948ರಲ್ಲಿ ರಾನಡೆಯವರು ಬಸು ಅವರನ್ನು ಪಶ್ಚಿಮಬಂಗಾಳದಿಂದ ಮಧ್ಯಪ್ರದೇಶಕ್ಕೆ ಕರೆದುಕೊಂಡು ಬಂದರು. ಜಬ್ಬಲ್‌ಪುರದಲ್ಲಿ ಅವರು ವಿಭಾಗ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ಬಸು ಅವರ ನಿಧನದ ಪ್ರಯುಕ್ತ ಶ್ರದ್ಧಾಂಜಲಿ ಸಭೆಯನ್ನು ಸೆ. 14ರಂದು […]

ಮಹಂತ ಯೋಗಿ ಅವೈದ್ಯನಾಥಜಿ

ಮಹಂತ ಯೋಗಿ ಅವೈದ್ಯನಾಥಜಿ

ಸ್ಮರಣೆ - 0 Comment
Issue Date : 06.10.2014

ಗೋರಖ್‌ಪುರ: ಬಿಜೆಪಿಯ ಮಾಜಿ ಸಾಂಸದ ಮಹಂತ ಯೋಗಿ ಅವೈದ್ಯನಾಥ ಅವರು ಸೆ.12ರಂದು ಗೋರಖ್‌ಪುರದಲ್ಲಿ ದೀರ್ಘ ಕಾಯಿಲೆಯಿಂದಾಗಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಗೋರಖ್‌ಪುರ ಧರ್ಮ ಪೀಠದ ಮುಖ್ಯಸ್ಥರಾಗಿದ್ದ ಅವರು 5ಬಾರಿ ಮಣಿರಾಮ್ ಅಸೆಂಬ್ಲಿ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅಲ್ಲದೆ 1970ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೋರಖ್‌ಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಪುನಃ 1989ರಲ್ಲಿ ಹಿಂದು ಮಹಾಸಭಾ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. 1991 ಮತ್ತು 1996ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಅಗಲಿದ ಅವೈದ್ಯನಾಥಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ […]

ಡಾ.ಕೆ. ರಾಜೇಶ್ವರಿ ಗೌಡ

ಡಾ.ಕೆ. ರಾಜೇಶ್ವರಿ ಗೌಡ

ಸ್ಮರಣೆ - 0 Comment
Issue Date : 06.10.2014

ಬೆಂಗಳೂರು: ಕವಿ, ಸಾಹಿತಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ. ದೊಡ್ಡರಂಗೇ ಗೌಡ ಅವರ ಪತ್ನಿ ಡಾ. ಕೆ. ರಾಜೇಶ್ವರಿ ಗೌಡ (59) ಅವರು ಹೃದಯಾಘಾತದಿಂದ ಸೆ. 27 ರಂದು ನಿಧನರಾದರು. ಅವರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಬಸವನ ಗುಡಿಯ ಬ್ಯೂಗಲ್ ರಾಕ್ ರಸ್ತೆಯಲ್ಲಿರುವ ಬಿ.ಎಂ.ಎಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದ ಅವರು ಕಾಲೇಜಿನಲ್ಲಿರುವಾಗಲೇ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಅಸು ನೀಗಿದ್ದರು.ಕವಯತ್ರಿಯಾಗಿದ್ದ ರಾಜೇಶ್ವರಿ ಗೌಡ ಅವರು ‘ಕಾವ್ಯಾಂಜಲಿ’, […]

ಇಹಲೋಕಕ್ಕೆ ವಿದಾಯ ಹೇಳಿದ ಸವ್ಯಸಾಚಿ

ಇಹಲೋಕಕ್ಕೆ ವಿದಾಯ ಹೇಳಿದ ಸವ್ಯಸಾಚಿ

ಸ್ಮರಣೆ - 0 Comment
Issue Date : 22.09.2014

ಸೆ. 12ರಂದು ನಮ್ಮನ್ನಗಲಿದ ಚಿಕ್ಕಮಗಳೂರು ನಗರದ ಹಿರೇಮಗಳೂರು ಕೋದಂಡರಾಮ ದೇವಾಲಯದ ಹಿರಿಯ ಅರ್ಚಕ ಹಾಗೂ ನಿವೃತ್ತ ಶಾಲಾ ಶಿಕ್ಷಕ, ಸಾಹಿತಿ ಮತ್ತು ವೇದಶಾಸ್ತ್ರಪಾರಂಗತ ಸವ್ಯಸಾಚಿ ತಮ್ಮ 95 ವರ್ಷಗಳ ತುಂಬು ಜೀವನ ಪೂರ್ಣಗೊಳಿಸಿ ಸದಾ ಸಮಾಜಮುಖಿಯಾಗಿ ಬದುಕಿ ಬಾಳಿ ತಮ್ಮ 6 ಮಂದಿ ಪುತ್ರರನ್ನು ಅಗಲುವುದರ ಜೊತೆಗೆ, ಅಪಾರ ಶಿಷ್ಯವರ್ಗ ಹಾಗೂ ಅವರ ಅಭಿಮಾನಿಗಳನ್ನು ಅಗಲಿದ್ದಾರೆ. ಶಾಲಾ ಶಿಕ್ಷಕರಾಗಿದ್ದ ಅವರು ಲಕ್ಷ್ಮೀಶನ ತವರೂರಾದ ದೇವನೂರು ಲಕ್ಷ್ಮೀಕಾಂತ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದು, ನಂತರ ಹಿರೇಮಗಳೂರು ಕೋದಂಡ ರಾಮಚಂದ್ರಸ್ವಾಮಿ […]