ಹಿರಿಯ ವಿದ್ವಾಂಸ ಸುಬ್ರಹ್ಮಣ್ಯ

ಸ್ಮರಣೆ - 0 Comment
Issue Date : 16.09.2014

ಬೆಂಗಳೂರು: ನಾಡಿನ ಹಿರಿಯ ವಿದ್ವಾಂಸ, ಸಂಶೋಧಕ ಡಾ. ಕೆ.ಎನ್.ಸುಬ್ರಹ್ಮಣ್ಯ(90) ಅವರು ಸೆ. 6ರಂದು ನಿಧನರಾದರು. ಅವರಿಗೆ ಇಬ್ಬರು ಪುತ್ರರಿದ್ದಾರೆ.ಮೂಲತಃ ನಾಗಮಂಗಲದ ಅವರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಡಿ.ಎಲ್.ನರಸಿಂಹಾಚಾರ್ ಮಾರ್ಗದರ್ಶನದಲ್ಲಿ ವ್ಯಾಸ ಭಾರತ, ಪಂಪ ಭಾರತ ಹಾಗೂ ಕುಮಾರವ್ಯಾಸ ಭಾರತ ಸೇರಿದಂತೆ ಮಹಾಭಾರತ ಕೃತಿಗಳ ತೌಲನಿಕ ಅಧ್ಯಯನ ಮಾಡಿ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪಡೆದಿದ್ದರು. ಜಿ.ಎಸ್.ಶಿವರುದ್ರಪ್ಪ, ಎನ್.ಬಸವಾರಾಧ್ಯ, ಬ್ರಹ್ಮಪ್ಪ ಅವರಂಥ ಸಾಹಿತಿಗಳ ಸಹಪಾಠಿಯಾಗಿದ್ದ ಅವರು, ಕುವೆಂಪು ಅವರ ಪ್ರೀತಿಯ ಶಿಷ್ಯರಾಗಿದ್ದರು.ಸುಬ್ರಹ್ಮಣ್ಯ ಅವರಿಗೆ ಕನ್ನಡ, ಸಂಸ್ಕೃತ, ಹಿಂದಿ […]

ಕು.ಚಂ. ಗೋಪಾಲಕೃಷ್ಣ

ಸ್ಮರಣೆ - 0 Comment
Issue Date : 15.09.2014

ಶಿವಮೊಗ್ಗ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಮೊಗ್ಗ ತಾಲೂಕು ಸಂಘಚಾಲಕ್, ಹಿರಿಯ ವಕೀಲ ಹಾಗೂ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕು.ಚಂ.ಗೋಪಾಲಕೃಷ್ಣ (71) ತೀವ್ರ ಹೃದಯಾಘಾತದಿಂದ ಸೆ.6ರಂದು ತಡ ರಾತ್ರಿ ನಿಧನರಾದರು. ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಸಂಘದ ಪ್ರಾಂತ ಭೈಠಕ್‌ನಲ್ಲಿ ಪಾಲ್ಗೊಂಡಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಫಲಕಾರಿಯಾಗಲಿಲ್ಲ. ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಸೆ.7ರಂದು ರೋಟರಿ ಚಿತಾಗಾರದಲ್ಲಿ ನೆರವೇರಿತು. ಸಂತಾಪ […]

 ವಿಶ್ವ ವಿಖ್ಯಾತ  ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಇನ್ನಿಲ್ಲ

ವಿಶ್ವ ವಿಖ್ಯಾತ ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಇನ್ನಿಲ್ಲ

ಸ್ಮರಣೆ - 0 Comment
Issue Date : 28.08.2014

ಪುಣೆ: ವಿಶ್ವ ಪ್ರಸಿದ್ಧ ಯೋಗ ಗುರು, ಕರ್ನಾಟಕದ ಕೋಲಾರ ಜಿಲ್ಲೆಯ ಬೆಳ್ಳೂರು ಕೃಷ್ಣಮಾಚಾರಿ ಸುಂದರ ರಾಜ ಅಯ್ಯಂಗಾರ್ ಅವರು ಆ.20ರಂದು ಇಲ್ಲಿ ದೈವಾಧೀನರಾದರು. 96 ವರ್ಷ ವಯಸ್ಸಿನ ಅವರು ಪುತ್ರ ಹಾಗೂ ಪುತ್ರಿಯರನ್ನು ಅಗಲಿ ದ್ದಾರೆ. ಉಸಿರಾಟದ ತೊಂದರೆ ಹಾಗೂ ಹೃದಯ ಬಡಿತ ಹೆಚ್ಚಾದ ಹಿನ್ನೆಲೆಯಲ್ಲಿ ಆ. 12ರಂದು ಅವರನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಲಾರ ಜಿಲ್ಲೆಯ ಬೆಳ್ಳೂರಿನಲ್ಲಿ 1918ರ ಡಿ.14ರಂದು ಜನಿಸಿದ್ದ ಬಿ.ಕೆ.ಎಸ್.ಅಯ್ಯಂಗಾರ್ ಅವರು ತಮ್ಮ ಯೋಗದ ಮೂಲಕ ವಿಶ್ವಾದ್ಯಂತ ಜನಪ್ರಿಯರಾಗಿದ್ದರು. ಚೀನಾ, ಯುರೋಪ್, ಅಮೆರಿಕದ […]

ಮಿತ್ರವಿಂದಮ್ಮ

ಸ್ಮರಣೆ - 0 Comment
Issue Date : 11.08.2014

ಕೋಲಾರ: ಚಿಂತಾಮಣಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮಾರ್ಗದರ್ಶಿಗಳಾಗಿರುವ, ಮಿತ್ರಾ ಬೆಂಜಾಯಿನ್ ವರ್ಕ್ಸ್‌ನ ಮಾಲಿಕ ಎನ್.ಎನ್.ವಿ. ಸ್ವಾಮಿ (ನಾಮಾ ವೆಂಕಟರಮಣಸ್ವಾಮಿ)ಯವರ ಧರ್ಮಪತ್ನಿ ಎನ್.ವಿ. ಮಿತ್ರವಿಂದಮ್ಮ (75) ಅವರು ವಿಧಿವಶರಾದರು. ಅವರು ಪತಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮಿತ್ರವಿಂದಮ್ಮ ಅವರ ನಿಧನಕ್ಕೆ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕೃ. ನರಹರಿ, ಶಿಕ್ಷಣ ತಜ್ಞ ಯು. ಭೀಮರಾವ್ ಮತ್ತು ಬಿಜೆಪಿಯ ಜಿಲ್ಲಾ ಅಧ್ಯಕ್ಷ ಜೆ.ಎಸ್. ಪಾರ್ಥಸಾರಥಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶುಭಂ ಸಾಳುಂಕೆ

ಶುಭಂ ಸಾಳುಂಕೆ

ಸ್ಮರಣೆ - 0 Comment
Issue Date : 11.08.2014

ಬಾಗಲಕೋಟೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಹಾಗೂ ವಿಕ್ರಮ ಯುವಕ ಮಂಡಳದ ಸದಸ್ಯರಾಗಿದ್ದ ಶುಭಂ ವಿಠಲರಾವ್ ಸಾಳುಂಕೆ (18) ಅವರು ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಜು. 25ರಂದು ನಿಧನರಾದರು.ಮೃತರು ತಾಯಿ, ಮೂವರು ಸಹೋದರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅದೇ ದಿನ ಸಂಜೆ ನಡೆದ ಅಂತಿಮ ಯಾತ್ರೆಯಲ್ಲಿ ಸಮಾಜದ ಬಂಧು ಭಗಿನಿಯರು, ಸಂಘ ಪರಿವಾರದ ಕಾರ್ಯಕರ್ತರು, ಮತ್ತಿತರ ಆಪ್ತೇಷ್ಟರು ಪಾಲ್ಗೊಂಡಿದ್ದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಅಂತ್ಯದರ್ಶನ ಮಾಡಿ […]

ಎ.ಹೆಚ್. ಮೋರೆ

ಎ.ಹೆಚ್. ಮೋರೆ

ಸ್ಮರಣೆ - 0 Comment
Issue Date : 11.08.2014

ಬಾಗಲಕೋಟೆ: ಸ್ಟೇಟ್ ಬ್ಯಾಂಕಿನ ನಿವೃತ್ತ ನೌಕರ, ಮರಾಠಾ ಸಮಾಜದ ಹಿರಿಯ ಕಾರ್ಯಕರ್ತ ಹಾಗೂ ಶಾರದಾ ವಿದ್ಯಾಲಯದ ಸಂಸ್ಥಾಪಕ ಸದಸ್ಯರಾಗಿದ್ದ ಎ.ಹೆಚ್. ಮೋರೆ (72) ಅವರು ಜು. 28ರಂದು ನಿಧನರಾದರು.ಮೃತರು ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ‘ಮೋರೆ ಸರ್’ ಎಂದೇ ಚಿರಪರಿಚಿತರಾಗಿದ್ದ ಅವರು ಸದಾ ಚಟುವಟಿಕೆಯಿಂದಿದ್ದು ಸಹಕಾರ ಜೀವಿಯಾಗಿದ್ದರು.

ಅಗಲಿದ ಆಚಾರ್ಯರಿಗೆ ಭಾವಪೂರ್ಣ ನಮನ

ಸ್ಮರಣೆ - 0 Comment
Issue Date : 21.07.2014

ಬೆಂಗಳೂರು: ಇತ್ತೀಚೆಗೆ ದೈವಾಧೀನರಾದ ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಮುಖಂಡ ಆಚಾರ್ಯ ಗಿರಿರಾಜ ಕಿಶೋರ್ ಅವರಿಗೆ ವಿಶ್ವಹಿಂದೂ ಪರಿಷತ್ ಆಶ್ರಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾವಪೂರ್ಣ ನಮನ ಸಲ್ಲಿಸಲಾಯಿತು. ‘ಧರ್ಮಶ್ರೀ’ಯಲ್ಲಿ ನಡೆದ ಸಭೆಯಲ್ಲಿ ಪರಿಷತ್‌ನ ಹಿರಿಯ ಮುಖಂಡ ಬಾಬುರಾವ್ ದೇಸಾಯಿ ಅವರು ಮಾತನಾಡಿ, ಆಚಾರ್ಯ ಗಿರಿರಾಜ್ ಕಿಶೋರ್ ಅವರ ಮಿತ್ರಮಂಡಳಿ ಬಹಳ ವಿಶಾಲವಾಗಿತ್ತು. ಅನೇಕ ರಾಜಪರಿವಾರ ಹಾಗೂ ರಾಜ್ಯಪಾಲರ ಜೊತೆ ಅವರ ಒಡನಾಟ ಘನಿಷ್ಠವಾಗಿತ್ತು. ಎಬಿವಿಪಿ, ಜನಸಂಘ ಕ್ಷೇತ್ರದಲ್ಲಿ ಕಾರ್ಯ ಮಾಡಿದ ಅನುಭವ, ಜೊತೆಗೆ ಉತ್ತಮ ರಾಜಕಾರಣಕ್ಕೆ […]

ರಾಜೇಂದ್ರ ಸಿಂಹ ರೌತೇಲಾ

ಸ್ಮರಣೆ - 0 Comment
Issue Date : 16.07.2014

ರೌತೇಲಾಕೋಟ್ (ನೈನಿತಾಲ್): ಉತ್ತರಾಖಂಡದ ಪ್ರಾಂತ ಪ್ರಚಾರಕ ಡಾ. ಹರೀಶ್ ರೌತೇಲಾ ಅವರ ಹಿರಿಯ ಸಹೋದರ ರಾಜೇಂದ್ರ ಸಿಂಹ ರೌತೇಲಾ ಅವರು ಜೂ. 24ರಂದು ಲಕ್ನೋದ ಎಸ್‌ಜಿಪಿಐ ಆಸ್ಪತ್ರೆಯಲ್ಲಿ ಮೆದುಳಿನ ಖಾಯಿಲೆಯಿಂದಾಗಿ ಅಸುನೀಗಿದರು. ಅವರ ಅಂತಿಮ ಸಂಸ್ಕಾರವು ಜು. 5ರಂದು ಸ್ವಗ್ರಾಮದಲ್ಲಿ ಜರುಗಿತು.

ಕೆ. ಕೃಷ್ಣಮೂರ್ತಿ ಆಚಾರ್

ಕೆ. ಕೃಷ್ಣಮೂರ್ತಿ ಆಚಾರ್

ಸ್ಮರಣೆ - 0 Comment
Issue Date : 16.07.2014

ಜಗಳೂರು: ಕಳೆದ ಸುಮಾರು 40 ವರ್ಷಗಳಿಂದ ‘ವಿಕ್ರಮ’ ಪತ್ರಿಕೆಯ ಏಜೆಂಟರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ ಆಗಿದ್ದ ಕೆ. ಕೃಷ್ಣಮೂರ್ತಿ ಆಚಾರ್ (75) ಅವರು ಜು. 2ರಂದು ಇಲ್ಲಿ ನಿಧನರಾದರು.ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಜಗಳೂರಿನಲ್ಲಿ ವಿಕ್ರಮ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಕೃಷ್ಣಮೂರ್ತಿ ಆಚಾರ್ ಅವರ ಕೊಡುಗೆ ಹಿರಿದಾದುದಾಗಿದೆ.

ರಾಮ್ ಪ್ರಕಾಶ್ ಧಿರ್

ರಾಮ್ ಪ್ರಕಾಶ್ ಧಿರ್

ಸ್ಮರಣೆ - 0 Comment
Issue Date : 01.07.2014

ಯಾಂಗನ್ (ಮ್ಯಾನ್ಮಾರ್): ಮ್ಯಾನ್ಮಾರ್ ದೇಶದಲ್ಲಿ ಭಾರತೀಯ ಸ್ವಯಂಸೇವಕ ಸಂಘವನ್ನು ಕಟ್ಟಿ ಬೆಳೆಸಿದ ರಾಮ್ ಪ್ರಕಾಶ್ ಧಿರ್ (88) ಅವರು ಜೂ. 20ರಂದು ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.1926ರಲ್ಲಿ ಉತ್ತರ ಬರ್ಮಾದ ಮೊನಿವಾದಲ್ಲಿ ಜನಿಸಿದ ರಾಮ್ ಪ್ರಕಾಶ್ ಅವರ ತಂದೆ ನಂದ್‌ಲಾಲ್ ಒಬ್ಬ ಪ್ರಖ್ಯಾತ ವರ್ತಕರು ಹಾಗೂ ಸರ್ಕಾರಿ ಗುತ್ತಿಗೆದಾರರಾಗಿದ್ದರು. 9ನೇ ತರಗತಿವರೆಗೆ ಮೊನಿವಾದ ವೆಸ್ಲೆ ಮಿಷನರಿ ಸ್ಕೂಲ್‌ನಲ್ಲಿ ಓದಿದ ರಾಮ್ ಪ್ರಕಾಶ್ ಅನಂತರ 1942ರಲ್ಲಿ ಭಾರತಕ್ಕೆ ಬಂದು ಪಂಜಾಬ್ ವಿಶ್ವ ವಿದ್ಯಾಲಯದಲ್ಲಿ ತಮ್ಮ ಪದವಿಯನ್ನು ಪಡೆದರು. ಕಾಲೇಜು ದಿನಗಳಲ್ಲಿ […]