ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ವಿಧಿವಶ

ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ವಿಧಿವಶ

ಸ್ಮರಣೆ - 0 Comment
Issue Date : 03.03.2014

ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಬಂಗಾರು ಲಕ್ಷ್ಮಣ್ (74) ಅವರು ಮಾ.1 (ಶನಿವಾರ) ರಂದು ಹೈದ್ರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ, ಮೂವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಮಾ. 17ರಂದು 75ನೇ ವರ್ಷಕ್ಕೆ ಕಾಲಿರಿಸಲಿದ್ದ  ಲಕ್ಷ್ಮಣ್ ಕೆಲ ಸಮಯದಿಂದ  ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.  ಶನಿವಾರ ಸಂಜೆ ಸಾವು ಹೃದಯಾಘಾತದ ರೂಪದಲ್ಲಿ ಎರಗಿ ಬಂದಿತ್ತು. ಆಂಧ್ರಪ್ರದೇಶದ ದಲಿತ ಕುಟುಂಬವೊಂದರಲ್ಲಿ ಜನಿಸಿದ್ದ ಲಕ್ಷ್ಮಣ್ ಎಳವೆಯಲ್ಲೇ ರಾಜಕೀಯ ರಂಗದಲ್ಲಿ ಕಾಲಿರಿಸಿದ್ದರು. 1996ರಲ್ಲಿ […]

ಸಿ. ಆರ್. ಸಿಂಹ ಇನ್ನಿಲ್ಲ

ಸಿ. ಆರ್. ಸಿಂಹ ಇನ್ನಿಲ್ಲ

ಸ್ಮರಣೆ - 0 Comment
Issue Date : 01.03.2014

ಕನ್ನಡ ನಾಡು ಕಂಡ ಶ್ರೇಷ್ಠ ರಂಗಕರ್ಮಿ, ನಿರ್ದೇಶಕ, ಸಿನಿಮಾ ನಟ ಸಿ. ಆರ್. ಸಿಂಹ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಫೆ. 29 ರಂದು ಮಧ್ಯಾಹ್ನ ನಿಧನರಾದರು. ಪ್ರಾಸ್ಟೇಟ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ಚಿಕಿತ್ಸೆಗಾಗಿ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 72 ವರ್ಷ ವಯಸಾಗಿತ್ತು. ಪತ್ನಿ, ಪುತ್ರ, ಪುತ್ರಿ ಸಹೋದರ ಶ್ರೀನಾಥ್ ಸೇರಿದಂತೆ ಅಪಾರ ರಂಗಾಸಕ್ತರನ್ನು ಅಗಲಿದ್ದಾರೆ. ಹೆಸರಿನಲ್ಲಿ ಸಿಂಹ ಇದ್ದರೂ ಸೌಮ್ಯ ಸ್ವಭಾವದ  ಸಿ.ಆರ್. ಸಿಂಹ ತಮ್ಮ ನಿರ್ದೇಶನ, ನಟನೆಯಿಂದ ರಾಜ್ಯದ ಮನೆ – […]

ಸಾಹಿತಿ ಪ್ರೇಮಾಭಟ್ ಪತಿ ಶ್ರೀನಿವಾಸ್ ನಿಧನ

ಸ್ಮರಣೆ - 0 Comment
Issue Date : 26.02.2014

ಸಾಹಿತಿ, ಕತೆಗಾರ್ತಿ ಪ್ರೇಮಭಟ್ ಅವರ ಪತಿ ಶ್ರೀನಿವಾಸ ಭಟ್ (80) ಅವರು ಮಂಗಳವಾರ ಸಂಜೆ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಶ್ರೀನಿವಾಸಭಟ್ ಅವರು ಕೃಷಿ ವಿಶ್ವವಿದ್ಯಾಲಯದಲ್ಲಿ ಅಧಿಕಾರಿಯಾಗಿ ನಿವೃತ್ತರಾದ ಬಳಿಕ ಪ್ರೇಮಾಸಾಯಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆ ಸ್ಥಾಪಿಸಿ ಹಲವಾರು ಲೇಖಕರ ಪುಸ್ತಕಗಳನ್ನು ಹೊರತಂದಿದ್ದರು.  ಶ್ರೀನಿವಾಸ ಭಟ್ ಅವರು ಪತ್ನಿ ಪ್ರೇಮಾಭಟ್, ಇಬ್ಬರು ಪುತ್ರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.  

ಆರ್.ಕೆ.ಶ್ರೀಕಂಠನ್ ವಿಧಿವಶ

ಆರ್.ಕೆ.ಶ್ರೀಕಂಠನ್ ವಿಧಿವಶ

ಸ್ಮರಣೆ - 0 Comment
Issue Date : 18.02.2014

ಕರ್ನಾಟಕ ಸಂಗೀತದ ದಿಗ್ಗಜ 94 ವರ್ಷ ವಯಸ್ಸಿನ ರುದ್ರಪಟ್ಟಣ ಕೃಷ್ಣಶಾಸ್ತ್ರಿ ಶ್ರೀಕಂಠನ್ ಅವರು ಸೋಮವಾರ (ಫೆ.17) ರಾತ್ರಿ ವಿಧಿವಶರಾಗಿದ್ದಾರೆ.   ಕರ್ನಾಟಕದ ಶೆಮ್ಮಂಗುಡಿ ಎಂದೇ ಪ್ರಸಿದ್ಧರಾದ ಶ್ರೀಕಂಠನ್‍ ಕರ್ನಾಟಕ ಸಂಗೀತದ ಪರಂಪರೆಯನ್ನೇ ಬೆಳೆಸಿದವರು.  ಸುಮಾರು 80 ವರ್ಷದ ಅವಧಿಯಲ್ಲಿ ಸಾವಿರಕ್ಕೂ ಅಧಿಕ ಸಂಗೀತ ಕಛೇರಿಯನ್ನು ನೀಡಿದ್ದಾರೆ.  ಶ್ರೀಕಂಠನ್ ಅವರ ಪುತ್ರ ಆರ್.ಕೆ.ರಮಾಕಾಂತ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಹಾಗೂ ಗಾಯಕರೂ ಹೌದು.  ಪ್ರಸಿದ್ಧ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್ ಇವರ ಪುತ್ರಿ. ಸಾಹಿತ್ಯ ಶುದ್ಧಿ, […]

ಶ್ರೀಜಿ ಎಂಬ ಅನಂತ ದಿವ್ಯಚೇತನ

ಶ್ರೀಜಿ ಎಂಬ ಅನಂತ ದಿವ್ಯಚೇತನ

ಸ್ಮರಣೆ - 0 Comment
Issue Date : 10.02.2014

ಬೆಂಗಳೂರಿನ ಜೆ.ಪಿ. ನಗರದ ಮೊದಲನೇ ಹಂತದಲ್ಲಿ ನವಮನ್ವಂತರ ಮೀರಾಂಬಿಕಾ ಶಾಲೆ ಇದೆ. ಶಾಲೆಯ ಆವರಣದೊಳಗೆ ಕಾಲಿಡುತ್ತಿದ್ದಂತೆ ದೇಹ ಮತ್ತು ಮನಸ್ಸಿಗೆ ತಂಪಾದ ಅನುಭವ. ಎಲ್ಲ ಶಿಕ್ಷಕರು, ಸಿಬ್ಬಂದಿಗಳು ಹಾಗೂ ಮಕ್ಕಳು ಒಂದೇ ಕುಟುಂಬದವರಂತೆ ಬೆರೆಯುವ ವಾತಾವರಣ. ಇಂತಹದೊಂದು ಶಾಲೆಯನ್ನು ಕಟ್ಟಿ ಬೆಳೆಸಿದವರು ಶ್ರೀಜಿ ಎಂದೇ ಪ್ರಸಿದ್ಧರಾದ ದಿವಂಗತ ಶ್ರೀನಿವಾಸ್ ಸಬನಿಸ್ ಅವರು.ಈ ಶಾಲೆಗೆ ಈ ವರ್ಷ 25ನೇ ವರ್ಷದ ರಜತ ಮಹೋತ್ಸವ ಸಂಭ್ರಮ. ಈ ಸಡಗರದಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡು, ಜನವರಿ 1ರಂದು ಪ್ರತಿವರ್ಷದಂತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು, […]

ಗಾಯಕ ಯಶವಂತ ಹಳಿಬಂಡಿ ಇನ್ನಿಲ್ಲ

ಗಾಯಕ ಯಶವಂತ ಹಳಿಬಂಡಿ ಇನ್ನಿಲ್ಲ

ಸ್ಮರಣೆ - 0 Comment
Issue Date : 23.01.2014

‘ಪಾತರಗಿತ್ತಿಯ ಪಕ್ಕ ನೋಡಿದೆನಾ ಅಕ್ಕ……’ ಗೀತೆಯ ಮೂಲಕ ಮನೆಮಾತಾಗಿದ್ದ ಸುಗಮ ಸಂಗೀತ ಕ್ಷೇತ್ರದ ಮೇರುಗಾಯಕ ಯಶವಂತ್ ಹಳಿಬಂಡಿ ಬುಧವಾರ ಬೆಳಗ್ಗೆ ಶ್ರೀನಿವಾಸ ನಗರದ ತಮ್ಮ ಸ್ವಗೃಹ ಪಾತರಗಿತ್ತಿಯಲ್ಲಿ ನಿಧನರಾದರು.  ಇವರಿಗೆ 64 ವರ್ಷ ವಯಸ್ಸಾಗಿತ್ತು. ಬೆಳಗ್ಗೆ 7.30ರ ವೇಳೆಗೆ ಮನೆಯಲ್ಲಿ ಹೃದಯಾಘಾತಕ್ಕೊಳಗಾದ ಯಶವಂತ ಹಳಿಬಂಡಿಯವರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.  ಮೃತರಿಗೆ ಪತ್ನಿ ಲಕ್ಮೀ, ಪುತ್ರರಾದ ಗಾಯಕ ಪಂಚಮ್ ಹಳಿಬಂಡಿ ಹಾಗೂ ಪ್ರೀತಂ ಹಳಿಬಂಡಿ, ಅಪಾರ ಅಭಿಮಾನಿಗಳು, ಶಿಷ್ಯರು ಇದ್ದಾರೆ. ಪಾತರಗಿತ್ತಿ ಪಕ್, ಅಳಿಯ ರಾಜ, […]

ಕ್ಯಾಂಪ್ಕೋ ಶಿಲ್ಪಿ ವಾರಣಾಸಿ ಸುಬ್ರಾಯ ಭಟ್

ಕ್ಯಾಂಪ್ಕೋ ಶಿಲ್ಪಿ ವಾರಣಾಸಿ ಸುಬ್ರಾಯ ಭಟ್

ಸ್ಮರಣೆ - 0 Comment
Issue Date : 19.01.2014

ಅದು 70ರ ದಶಕ. ಅಡಿಕೆಗೆ ಕಿಲೋಗೆ 3 ರೂ. ಅಕ್ಕಿಗೆ ಕಿಲೋಗೆ 5ರೂ.ಇದ್ದ ದಿನಗಳು. ಅಡಿಕೆ ಬೆಲೆ ಪಾತಾಳಕ್ಕೆ ಕುಸಿದು ಬೆಳೆಗಾರರು ಕಂಗಾಲಾಗಿದ್ದರು. ದ.ಕ.ಜಿಲ್ಲೆ , ಉ.ಕ.ಜಿಲ್ಲೆ, ಶಿವಮೊಗ್ಗ ಮತ್ತು ನೆರೆಯ ಕೇರಳದಲ್ಲಿ ಅಡಿಕೆ ಬೆಳೆಗಾರರ ಸ್ಥಿತಿ ಅತಂತ್ರವಾಗಿತ್ತು. ಖಾಸಗಿ ವ್ಯಾಪಾರಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಯಾರ್ಯಾರೋ ಗೊತ್ತೇ ಇಲ್ಲದ ದೂರದೂರಿನ ಮಾಫಿಯಾ ಮಾದರಿಯ ವ್ಯಾಪಾರಸ್ಥರು ನೀಡುವ ಬೆಲೆಯನ್ನೇ ಒಪ್ಪಿಕೊಳ್ಳಬೇಕಾದ ದೀನಸ್ಥಿತಿ. ಹಾಗೆಂದು ಅಡಿಕೆ ಇಂದು ನಿನ್ನೆಯದಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಹಿಂದು ಧಾರ್ಮಿಕ ವಿಧಿಗಳಲ್ಲಿ ಅಡಿಕೆಗೆ […]

ಸಂಘವೇ ಅವರ ಜೀವನದ ಪ್ರಥಮ ಆದ್ಯತೆಯಾಗಿತ್ತು

ಸಂಘವೇ ಅವರ ಜೀವನದ ಪ್ರಥಮ ಆದ್ಯತೆಯಾಗಿತ್ತು

ಸ್ಮರಣೆ - 0 Comment
Issue Date : 12.01.2014

ಈ ಮಾತಿಗೆ ಒಂದು ಜೀವಂತ ಉದಾಹರಣೆಯಾಗಿದ್ದರು ಸ್ವರ್ಗೀಯ ಶ್ರೀ ಸೇತೂರಾಮರಾವ್.ದಾವಣಗೆರೆಯ ಹಿರಿಯ ಸ್ವಯಂಸೇವಕರೂ, ನಿವೃತ್ತ ಶಿಕ್ಷಕರೂ ಆಗಿದ್ದ ಸೇತೂರಾಮರಾವ್ (84) ರವರು ಡಿ.24ರಂದು ಸಂಜೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.ಸೇತೂರಾಮರಾಯರು ಮೊದಲ ತಲೆಮಾರಿನ ಸ್ವಯಂಸೇವಕರು. ಸ್ವಯಂಸೇವಕತ್ವ ಎಂಬುದು ಸರಳತೆ, ಬದ್ಧತೆ, ಕ್ರಿಯಾಶೀಲತೆ ಗುಣಗಳನ್ನು ಸ್ವಯಂಸೇವಕನಿಂದ ಬಯಸುತ್ತದೆ. ಈ ಎಲ್ಲ ಸದ್ಗುಣಗಳ ಜತೆ ಸಹಜ ಪ್ರೇಮದ ಭಂಡಾರವಾಗಿದ್ದರು ಸೇತೂರಾಮ ರಾಯರು. ಸಂಘವೇ ಅವರ ಜೀವನದಲ್ಲಿ ಪ್ರಥಮ ಆದ್ಯತೆಯ ಸಂಗತಿಯಾಗಿತ್ತು. ಆರೋಗ್ಯಪೂರ್ಣ ಶರೀರ ದೇವರು ಅವರಿಗೆ ನೀಡಿದ ಕೊಡುಗೆಯಾಗಿತ್ತು. ತಮ್ಮ […]

ಪ್ರೀತಿ ಹಣತೆಯಲ್ಲಿ ಅಕ್ಷರದ ಬೆಳಕು ಮೂಡಿಸಿದವರು...

ಪ್ರೀತಿ ಹಣತೆಯಲ್ಲಿ ಅಕ್ಷರದ ಬೆಳಕು ಮೂಡಿಸಿದವರು…

ಸ್ಮರಣೆ - 0 Comment
Issue Date : 5.01.2014

ತಾನು ಯಾವ ಜಾತಿಗೂ ಸೇರಿದವನಲ್ಲ. ನಾನು ಕರ್ನಾಟಕದ ಆಸ್ತಿ. ನನ್ನನ್ನು ಮಣ್ಣಿನಲ್ಲಿ ಹೂಳುವುದು ಬೇಡ. ನನ್ನ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿ. ಆ ಚಿತಾಭಸ್ಮವನ್ನು ಜೀವನದಿ ಕಾವೇರಿಯಲ್ಲಿ ತೇಲಿಬಿಡಿ ಸಾಕು… ತನ್ನ ಸ್ಮಾರಕ ನಿರ್ಮಿಸುವುದೂ ಬೇಡ… ರಾಷ್ಟ್ರಕವಿ ಜಿಎಸ್‌ಎಸ್ ತಮ್ಮ ಕುಟುಂಬದವರೆಲ್ಲರ ಬಳಿ ಆಗಾಗ ಹೇಳುತ್ತಿದ್ದ ಮಾತದು. ಅದನ್ನೇ ಅವರು ಪತ್ರದಲ್ಲೂ ಬರೆದಿದ್ದರು ಕೂಡ. ತನಗೆ ಸ್ಮಾರಕ ನಿರ್ಮಾಣ ಮಾಡುವುದು ಬೇಡ ಎಂದೂ ಅವರು ಆ ಪತ್ರದಲ್ಲಿ ಬರೆದಿದ್ದರು. ಜಿಎಸ್‌ಎಸ್ ಅವರಿಗೆ ಆಡಂಬರದಲ್ಲಾಗಲೀ, ತೋರುಗಾಣಿಕೆ ಗೌರವದಲ್ಲಾಗಲೀ ವಿಶ್ವಾಸವಿರಲಿಲ್ಲ. […]