ಅನುಕರಣೆಯ ಆಟಗಳು

ಅನುಕರಣೆಯ ಆಟಗಳು

ಕ್ರೀಡೆ - 0 Comment
Issue Date : 15.07.2015

ಆಟಗಳು ಶಾರೀರಿಕ ವ್ಯಾಯಾಮಕ್ಕೆ, ಮನೋಲ್ಲಾಸಕ್ಕೆ ಸೂಕ್ತ ಮಾಧ್ಯಮ ಎಂಬುದು ನಮಗೆ ಗೊತ್ತಿರುವ ಸಂಗತಿ. ಹಾಗೆಯೇ ಆಟಗಳು ಹಲವು ಪ್ರಾಕೃತಿಕ ಅನುಕರಣೆಯಿಂದ ಉದ್ಭವವಾಗಿರುವುದು ಗೊತ್ತಿರುವ ಸಂಗತಿ. ಮಕ್ಕಳ ಅನೇಕ ಆಟಗಳು ನಮ್ಮ ಸುತ್ತಮುತ್ತಣ ಸಮಾಜದಿಂದ ಪುಷ್ಟಿಗೊಂಡಿದೆ. ಉತ್ತರಕನ್ನಡ ಜಿಲ್ಲೆಯ ಬಂಡಿಹಬ್ಬದ ಕಳಸಗಳ ಮೆರವಣಿಗೆಯಿಂದ ಪ್ರೇರಿತರಾಗಿ ಮಕ್ಕಳು ಎಳೆಯ ತೆಂಗಿನ ಗರಿಯ ಕಡ್ಡಿಗಳನ್ನು ಕಮಾನಿನಂತೆ ಚುಚ್ಚಿ, ಇನ್ನೊಂದು ಕಡ್ಡಿಯನ್ನು ಕಮಾನಿಗಿಂತ ತುಸು ಮೇಲಕ್ಕೆ ಹೋಗುವಂತೆ ಮಧ್ಯದಲ್ಲಿ ನೆಟ್ಟಗೆ ಚುಚ್ಚಿ, ತಟ್ಟಿಯನ್ನು ಹೆಣೆದಂತೆ ಅಡ್ಡ ಕಡ್ಡಿಗಳನ್ನು ಜೋಡಿಸಿ, ಮಧ್ಯದ ರಂಧ್ರಗಳಲ್ಲಿ ಹೂವನ್ನು […]

ಕಾಡಿನಲ್ಲಿ ಶಿಬಿರದ ತಯಾರಿ ಹೇಗೆ?

ಕಾಡಿನಲ್ಲಿ ಶಿಬಿರದ ತಯಾರಿ ಹೇಗೆ?

ಕ್ರೀಡೆ - 0 Comment
Issue Date : 04.07.2015

ಹಿಂದಿನ ವಾರದ ಅಂಕಣದಲ್ಲಿ ನಗರದ ಟ್ರಾಫಿಕ್ ಮಧ್ಯೆ ಮಕ್ಕಳು ಯಾವ ರೀತಿ ವ್ಯವಹರಿಸಬೇಕು ಎಂಬುದನ್ನು ತಿಳಿಸಿಕೊಡಲು ಪ್ರಯತ್ನ ಮಾಡಲಾಗಿದೆ. ಇನ್ನು ಯಾವುದೇ ವಾಹನ ಶಬ್ದವಿಲ್ಲದ ಕಾಡಿನಲ್ಲಿ ಶಿಬಿರಗಳನ್ನು ಏರ್ಪಡಿಸುವ ರೀತಿ ಮತ್ತು ಅಲ್ಲಿ ಯಾವ ರೀತಿಯ ಆಟಗಳನ್ನು ಆಡಬಹುದು ಎಂಬುದನ್ನು ಅರಿತುಕೊಳ್ಳೋಣ. ಮೊದಲ ಹಂತದಲ್ಲಿ ಅರಣ್ಯಗಳಲ್ಲಿ ಶಿಬಿರಗಳ ತಯಾರಿ ಹೇಗಿರಬೇಕು, ಅಲ್ಲಿ ನಮ್ಮ ಚಟುವಟಿಕೆಗಳು ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತೀ ಮುಖ್ಯ. ಪ್ರಾಚೀನ ಮಾನವನ ಸರಳ ಜೀವನ ರೀತಿಗಳೇ ಇಂದಿನ ಕಾಡಿನ ಶಿಬಿರದ ಜೀವನಕ್ಕೆ ತಳಹದಿ. ಬಿಸಿಲು, […]

ಸಂಚಾರಿ ನಿಯಮ ಪಾಲನೆ ಆಟ – 2

ಕ್ರೀಡೆ - 0 Comment
Issue Date : 29.06.2015

ಹಿಂದಿನ ವಾರದ ಅಂಕಣದಲ್ಲಿ ಪಾದಾಚಾರಿ ಮಾರ್ಗ ಇರುವ ರಸ್ತೆಗಳು ಹಾಗೂ ಪಾದಾಚಾರಿ ಇಲ್ಲದ ರಸ್ತೆಗಳ ಕುರಿತು ನಿಯಮ ಪಾಲನೆಗಳನ್ನು ಆಟದ ಮೂಲಕ ಯಾವ ರೀತಿ ಕಲಿಯಬಹುದು ಎಂಬ ಪರಿಚಯ ಮಾಡಿಕೊಂಡೆವು. ಈ ಆಟದ ನಿಯಮದಲ್ಲಿ ಪ್ರಥಮ ಚಿಕಿತ್ಸೆಯ ಮಾಡುವ ರೀತಿಯನ್ನು ಹೇಳಿಕೊಡಬೇಕು. ಅಡ್ಡ ರಸ್ತೆಗಳ ಸಂಧಿಸ್ಥಾನ ವಿಶೇಷವಾಗಿ ನಾಲ್ಕು ರಸ್ತೆಗಳು ಸೇರುವ ಸ್ಥಳದಲ್ಲಿ ರಸ್ತೆ ದಾಟುವುದು ಮಕ್ಕಳಿಗಷ್ಟೇ ಅಲ್ಲದೇ ದೊಡ್ಡವರಿಗೂ ತ್ರಾಸದಾಯಕ. ಈ ರೀತಿಯ ರಸ್ತೆಯಲ್ಲಿ ದಾಟುವುದು ಹೇಗೆ ಎಂಬುದನ್ನು ಆಟದ ಮೂಲಕ, ಗುಂಪುಗಳಲ್ಲಿ ನಿಯಮ ಪಾಲನೆ […]

ಸಂಚಾರಿ ನಿಯಮ ಪಾಲನೆ ಆಟ

ಸಂಚಾರಿ ನಿಯಮ ಪಾಲನೆ ಆಟ

ಕ್ರೀಡೆ - 0 Comment
Issue Date : 25.06.2015

ಆಟವೆಂಬುದು ಕೇವಲ ಶಾರೀರಿಕ ವ್ಯಾಯಾಮಕ್ಕೆ ಮಾತ್ರವಲ್ಲ. ಆಟ ಆಡುವವರು ಹಲವು ಸಂಗತಿಗಳನ್ನು ಕಲಿಯುವರು. ಮಕ್ಕಳು ಒಳ್ಳೆಯ ಗುಣಗಳನ್ನು ಕಲಿಯುವ ಪ್ರಯತ್ನ ಮಾಡುತ್ತಾರೆ. ಗುಂಪಿನಲ್ಲಿ ತನ್ನ ಸ್ವಭಾವ ಹೇಗಿರಬೇಕು ಎಂಬುದನ್ನು ಕಲಿಯುತ್ತಾರೆ. ಸ್ನೇಹಿತರೊಂದಿಗಿನ ಸಂಬಂಧಗಳು ಉತ್ತಮಗೊಳ್ಳುತ್ತವೆ. ಜೊತೆಗೆ ಸಹಜವಾಗಿ ವ್ಯಾಯಾಮ ಆಗುವುದರಿಂದ ಅವರ ಆರೋಗ್ಯವು ಉತ್ತಮಗೊಳ್ಳುತ್ತದೆ. ಹೀಗೆ ಆಟಗಳು ವಿವಿಧ ಪರಿಣಾಮಗಳನ್ನು ಬೀರುವುದರಿಂದ ಮಕ್ಕಳ ಮನಸ್ಸಿನಲ್ಲಿ ಆಟದ ಪ್ರಸಂಗಗಳು ಹೆಚ್ಚಿನ ಕಾಲ ಉಳಿಯುತ್ತವೆ. ಆಟಗಳು ಕಲಿಕೆಯ ಉತ್ತಮ ಸಂವಹನವಾಗಿಯೂ ಕೆಲಸ ಮಾಡುತ್ತವೆ. ಈ ವಾರದ ಅಂಕಣದಲ್ಲಿ ವಿದ್ಯಾರ್ಥಿಗಳು ಆಟಗಳ […]

ಶಾರೀರಿಕ ಅಶಕ್ತರಿಗೆ ಆಟಗಳು

ಕ್ರೀಡೆ - 0 Comment
Issue Date :

ವಿವಿಧ ವಯೋಮಾನದವರು ಆಡುವ ಆಟಗಳು ಬೇರೆ ಬೇರೆ ರೀತಿಯ ಆಟಗಳಾಗಿರುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವೊಮ್ಮೆ 35 ವರ್ಷಕ್ಕೇ ಆಟದಿಂದ ನಿವೃತ್ತರಾಗುವ ಪ್ರಸಂಗಗಳು ಅನೇಕ. ದೈಹಿಕ ಶಕ್ತಿ, ಸ್ಪರ್ಧಾತ್ಮಕತೆಯ ಕೊರತೆ ಇದರ ಹಿನ್ನೆಲೆಯಾಗಿರುತ್ತದೆ. ಅದೇ ರೀತಿ ಅಂಗವಿಕಲ ವ್ಯಕ್ತಿಗಳು ತಮ್ಮ ಮನೋಲ್ಲಾಸಕ್ಕೆ, ವ್ಯಾಯಾಮಕ್ಕೆ ಆಡುವುದು ಹೇಗೆ, ಯಾವ ಯಾವ ಸಂಗತಿಗಳನ್ನು ಗಮನಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಈ ವಾರದ ಅಂಕಣದಲ್ಲಿ ಪರಿಚಯಿಸುವ ಪ್ರಯತ್ನ ಇದು. ಜನಸಂಖ್ಯೆಯಲ್ಲಿ ವಿವಿಧ ರೀತಿಯ ಅಂಗವಿಕಲ ವ್ಯಕ್ತಿಗಳು ಗಮನಾರ್ಹ ಪ್ರಮಾಣದಲ್ಲಿದ್ದರೆ ಅವರ ಕೊರತೆಗಳನ್ನು ಗಮನದಲ್ಲಿಟ್ಟುಕೊಂಡು ಆಡುವುದು […]

ಚದುರಂಗ

ಚದುರಂಗ

ಕ್ರೀಡೆ - 0 Comment
Issue Date : 01.12.2014

ಪಗಡೆ, ಚೌಕಾಭಾರ ಆಟಗಳಲ್ಲಿರುವಂತೆ ಚದುರಂಗದಲ್ಲೂ ಕಾಯಿಗಳನ್ನೂ ಹೊಡೆಯಲು ಅವಕಾಶವಿೆ. ಆದರೆ ಆಟಗಾರ ಶತ್ರುವಿನ ಕಾಯಿಯನ್ನು ಹೊಡೆಯುವುದಕ್ಕಿಂತ ಅವನ ರಾಜನನ್ನು ಕಟ್ಟಿ ಹಾಕುವುದೇ ಮುಖ್ಯ ಸವಾಲು. ಅವನನ್ನು ಹೊಡೆಯಲು ಅನುಕೂಲಕರವಾದ ಜಾಗದಲ್ಲಿ ನಮ್ಮ ಕಾಯನ್ನು ಇಟ್ಟು, ಅದರಿಂದ ಇನ್ನೊಬ್ಬ ಆಟಗಾರ ತಪ್ಪಿಸಿಕೊಳ್ಳಲಾಗದಿದ್ದರೆ ಅವನು ಸೋತಂತೆ. ರಾಜನನ್ನು ಬಿಟ್ಟು ಮಿಕ್ಕ ಯಾವುದೇ ಕಾಯಿಯನ್ನು ಎದುರಾಳಿಯ ಯಾವ ಕಾಯಿಯಿಂದ ಹೊಡೆಯಬಹುದು? ಶತ್ರುವಿನ ಕಾಯಿ ಇರುವ ಮನೆ ಹೋದರೆ ಆ ಕಾಯಿಯನ್ನು ಹೊಡೆಯಬಹುದು. ಪದಾತಿ ಮಾತ್ರ ತನ್ನ ಎಡ ಬಲ ಮೂಲೆಯ ಮನೆಯಲ್ಲಿದ್ದರೆ […]

ಚದುರಂಗದ ಹಾಸು

ಚದುರಂಗದ ಹಾಸು

ಕ್ರೀಡೆ - 0 Comment
Issue Date : 26.11.2014

ಹಿಂದಿನ ವಾರದಲ್ಲಿ ಮೈದಾನದಲ್ಲಿ ಆಡುವ ಗೋಲಿಯಾಟದಲ್ಲಿ ಕೆಲವು ಮಜಲುಗಳನ್ನು ಪರಿಚಯ ಮಾಡಿಕೊಂಡೆವು. ಈ ವಾರದಲ್ಲಿ ನಮ್ಮ ದೇಶದ್ದೇ ಆದ ಪುರಾತನ ಒಳಾಂಗಣ ಆಟ ‘ಚದುರಂಗ’ದ ವಿವಿಧ ನಡೆಗಳ ಪರಿಚಯ ಮಾಡಿಕೊಳ್ಳೋಣ. ಚದುರಂಗದ ಹಾಸು ಒಂದು ಯುದ್ಧಭೂಮಿಯಂತೆ. ಅದರ ಕಾಯಿಗಳೇ ಸೈನ್ಯವಿದ್ದ ಹಾಗೆ. ಆ ಸೈನ್ಯದಲ್ಲಿ ರಾಜ, ಮಂತ್ರಿಯೊಂದಿಗೆ ಕುದುರೆ, ಆನೆ, ಒಂಟೆ, ಪದಾತಿಗಳ ಸೈನ್ಯವಿರುತ್ತದೆ. ಈ ರೀತಿಯ ಎರಡು ಸೈನ್ಯಗಳ ನಡುವೆ ಯುದ್ಧ ನಡೆಯುತ್ತದೆ. ಈ ಯುದ್ಧರೀತಿಯ ಆಟವನ್ನು ನಡೆಸುವವರು ಇಬ್ಬರು ಆಟಗಾರರು. ಯಾರ ಕಡೆಯ ರಾಜ […]

ಗೋಲಿಯಾಟ-2

ಕ್ರೀಡೆ - 0 Comment
Issue Date : 18.11.2014

ಇದೊಂದು ಗುರಿ ಎಸೆತದ ಗೋಲಿಯಾಟ. ಗೋಲಿಗಳಿಂದ ಗೋಪುರ ಕಟ್ಟಬೇಕು, ಒಬ್ಬ ಆಟಗಾರ ತನ್ನಲ್ಲಿರುವ ಗೋಲಿಗಳನ್ನು ಹತ್ತಿರ ಹತ್ತಿರ ಸಾಲು ಜೋಡಿಸಿ ಗೋಪುರ ರಚಿಸಬೇಕು. ಅದರ ಸುತ್ತ ಒಂದು ವೃತ್ತ ಎಳೆಯಬೇಕು. ಉಳಿದ ಆಟಗಾರರು ಒಂದು ನಿರ್ದಿಷ್ಟ ದೂರದಲ್ಲಿ ನಿಂತು ಒಬ್ಬರಾದ ಮೇಲೊಬ್ಬರಂತೆ ಗೋಪುರದ ಕಡೆಗೆ ಗೋಲಿ ಹೊಡೆಯಬೇಕು. ಒಬ್ಬ ಆಟಗಾರ ಎಷ್ಟು ಬಾರಿಯಾದರೂ ಹೊಡೆಯಬಹುದು. ಆದರೆ ಒಮ್ಮೆ ಹೊಡೆಯುವುದಕ್ಕೆ ಒಂದು ಗೋಲಿಯನ್ನು ಗೋಪುರ ಜೋಡಿಸಿದವನಿಗೆ ಕೊಡಬೇಕು. ಆಟಗಾರ ಹೊಡೆದಾಗ ಗೋಲಿಗಳಿಗೆ ಏಟು ಬಿದ್ದು, ವೃತ್ತದ ಗೆರೆಯಿಂದ ಎಷ್ಟು […]

ಭಾರತದಲ್ಲಿ ಕಾಮನ್ ವೆಲ್ತ್ ಜ್ಯೋತಿಗೆ ಅದ್ದೂರಿ ಸ್ವಾಗತ

ಕ್ರೀಡೆ - 0 Comment
Issue Date : 12.10.2013

2014ರಲ್ಲಿ ಸ್ಕಾಟ್ಲೆಂಡ್ ನ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಜ್ಯೋತಿಯು ಅ.11ರಂದು ಭಾರತಕ್ಕೆ ಪ್ರವೇಶಿಸಿದೆ. ಭಾರತದ ಒಲಿಂಪಿಕ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಜ್ಯೋತಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿ, ಕ್ರೀಡಾಜ್ಯೋತಿಯ ಕಾಮನ್ ವೆಲ್ತ್  ರಾಷ್ಟ್ರಗಳ ಸಂಚಾರಕ್ಕೆ ಇಂಗ್ಲೆಂಡ್ ರಾಣಿ 2ನೇ ಎಲಿಜಬೆತ್, ಬಕ್ಕಿಂಗ್  ಹ್ಯಾಮ್ ಅರಮನೆಯಲ್ಲಿ ಚಾಲನೆ ನೀಡಿದ್ದರು.

ಭಾರತೀಯ ಕ್ರೀಡಾಜಗತ್ತಿಗೆ ಅವಮಾನ

ಕ್ರೀಡೆ - 0 Comment
Issue Date :

ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಮಾನತಿನಲ್ಲಿಟ್ಟಿದೆ. ಇದೊಂದು ಭಾರತೀಯ ಕ್ರೀಡಾಜಗತ್ತಿಗೆ ಆದ ಅವಮಾನವೇ ಸರಿ. ಐಒಸಿಯ ಈ ನಿರ್ಧಾರದಿಂದಾಗಿ ಭಾರತದ ಕ್ರೀಡಾಪಟುಗಳು ಒಲಿಂಪಿಕ್ ಕ್ರೀಡೆಗಳಲ್ಲಿ ಇನ್ನು ಮುಂದೆ ಭಾರತದ ಧ್ವಜದಡಿಯಲ್ಲಿ ಸ್ಪರ್ಧಿಸದೆ ಐಒಸಿ ಹೆಸರಿನಲ್ಲಿ ಸ್ಪರ್ಧಿಸಬೇಕಾಗುತ್ತದೆ. ಆದರೆ ಅಂತಾರಾಷ್ಟ್ರೀಯ ಒಲಿಂಪಿಕ್ ತತ್ತ್ವಗಳ ಪ್ರಕಾರ, ಯಾವುದೇ ರಾಷ್ಟ್ರದ ಒಲಿಂಪಿಕ್ ಸಂಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು. ಭಾರತದ ಒಲಿಂಪಿಕ್ ಸಂಸ್ಥೆ ಸರ್ಕಾರದ ಕ್ರೀಡಾ ನೀತಿಯಡಿಯಲ್ಲಿ ಚುನಾವಣೆ ನಡೆಸುತ್ತದೆ ಎಂಬುದು ಐಒಸಿ ಅಭಿಮತ.ಐಒಸಿಯ ತೆಗೆದುಕೊಂಡ ಇಂತಹ […]