ನೇಪಾಳ ಭೂಕಂಪ - 1600 ಸ್ವಯಂಸೇವಕರಿಂದ ಪರಿಹಾರ ಕಾರ್ಯ

ನೇಪಾಳ ಭೂಕಂಪ – 1600 ಸ್ವಯಂಸೇವಕರಿಂದ ಪರಿಹಾರ ಕಾರ್ಯ

ರಾಜ್ಯಗಳು - 0 Comment
Issue Date : 29.05.2015

ಹೊಸದಿಲ್ಲಿ: ಭೂಕಂಪ ಪೀಡಿತ ನೇಪಾಳದಲ್ಲೀಗ 1600ಕ್ಕೂ ಅಧಿಕ ಆರೆಸ್ಸೆಸ್ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಈ ಪರಿಹಾರ ಕಾರ್ಯಗಳು ನಡೆಯುತ್ತಿದ್ದು, ಅಲ್ಲಿನ ಜನರು ಮತ್ತೆ ಬದುಕು ಕಟ್ಟಿಕೊಳ್ಳಲು ನೆರವಾಗಬೇಕಾಗಿದೆ ಎಂದು ಸೇವಾಭಾರತಿಯ ರಾಷ್ಟ್ರೀಯ ಅಧ್ಯಕ್ಷ ಸೂರ್ಯಪ್ರಕಾಶ್ ಟಾಂಕ್ ಮತ್ತು ಸೇವಾ ಇಂಟರ್‌ನ್ಯಾಷನಲ್‌ನ ಸಂಯೋಜಕ ಶ್ಯಾಮ್‌ಪರಾಂಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಭಾರತ ಮತ್ತು ನೇಪಾಳ ಶತಶತಮಾನಗಳ ಸಾಂಸ್ಕೃತಿಕ, ಐತಿಹಾಸಿಕ, ಸಾಮಾಜಿಕ ಸಂಬಂಧಗಳನ್ನು ಹೊಂದಿವೆ. ಈ ಸಂಕಷ್ಟದ ಸಂದರ್ಭದಲ್ಲಿ ಭಾರತ ನೇಪಾಳಕ್ಕೆ ನೆರವಾಗುವುದು ಅತ್ಯಂತ ಸಹಜ ಹಾಗೂ […]

ಭಾರತ ಪರಿಕ್ರಮ ಯಾತ್ರೆಗೆ 1000 ದಿನ

ಭಾರತ ಪರಿಕ್ರಮ ಯಾತ್ರೆಗೆ 1000 ದಿನ

ರಾಜ್ಯಗಳು - 0 Comment
Issue Date : 20.05.2015

ತೇಜಪುರ (ಅಸ್ಸಾಂ): ಭಾರತ ಪರಿಕ್ರಮ ಯಾತ್ರೆ 1000 ದಿನಗಳನ್ನು ಪೂರೈಸಿದೆ. ಸಂಘದ ಹಿರಿಯ ಪ್ರಚಾರಕರಾದ ಸೀತಾರಾಮ ಕೆದಿಲಾಯ ಅವರ ನೇತೃತ್ವದ ಈ ಯಾತ್ರೆ ಇದೀಗ ಅಸ್ಸಾಂ ರಾಜ್ಯದ ಗುವಾಹಟಿ ಸಮೀಪದ ತೇಜಪುರ ಜಿಲ್ಲೆಯನ್ನು ಪ್ರವೇಶಿಸಿದೆ. 67ರ ಹರೆಯದ ಕೆದಿಲಾಯರು ಇದುವರೆಗೆ 12,150 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಸಂಚರಿಸಿ ದಾಖಲೆ ಮಾಡಿದ್ದಾರೆ. ಭಾರತ ಪರಿಕ್ರಮ ಯಾತ್ರೆಯು 2012ರ ಆಗಸ್ಟ್ 9ರಂದು ಕನ್ಯಾಕುಮಾರಿಯಿಂದ ಆರಂಭಗೊಂಡಿತ್ತು. ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು 1000 ದಿನಗಳನ್ನು ಪೂರೈಸಿದ ಯಾತ್ರೆಯ ಈ ಸಂದರ್ಭದಲ್ಲಿ […]

ಭಾರತವನ್ನು ನಮ್ಮದೇ ದೃಷ್ಟಿಯಿಂದ ನೋಡಬೇಕು : ಗೋವಿಂದಾಚಾರ್ಯ

ರಾಜ್ಯಗಳು - 0 Comment
Issue Date : 08.05.2015

ಸಿರ್‌ಮೌರ್ (ಮಧ್ಯಪ್ರದೇಶ): ಬೇರೆ ದೇಶಗಳ ಅಭಿ ವೃದ್ಧಿ ಯನ್ನು ನಕಲು ಮಾಡುವುದರಿಂದ ಭಾರತದ ಪ್ರಗತಿ ಸಾಧ್ಯವಿಲ್ಲ. ಇತರ ದೇಶಗಳಿಗೆ ಅಭಿವೃದ್ಧಿಯ ಮಾದರಿ ಕೊಡುಗೆಯನ್ನು ನೀಡಿದ್ದು ನಾವೇ. ಈಗ ಅದೇ ರೀತಿ ನಮ್ಮದೇ ಮಾದರಿಯನ್ನು ನಮ್ಮ ದೇಶದ ಅಭಿವೃದ್ಧಿಗಾಗಿ ಬಳಸಬೇಕಾಗಿದೆ. ಭಾರತವನ್ನು ನಮ್ಮದೇ ದೃಷ್ಟಿಯಿಂದ, ನಮ್ಮ ಕನ್ನಡಕಗಳಿಂದಲೇ ನೋಡಬೇಕಾಗಿದೆ ಎಂದು ಸ್ವದೇಶಿ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಪ್ರತಿಪಾದಿಸಿದ್ದಾರೆ. ಅವರು ಇಲ್ಲಿ ನಡೆದ ಶ್ರೀಕಾಂತ ಜೋಷಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದುಸ್ತಾನ ಸಮಾಚಾರ ಮತ್ತು ಇಲ್ಲಿನ ಪ್ರೆಸ್ ಕ್ಲಬ್ ಜಂಟಿಯಾಗಿ […]

ಗ್ರಂಥ ದೇವೋಭವ

ರಾಜ್ಯಗಳು - 0 Comment
Issue Date : 07.05.2015

ಚನ್ನೈ: ‘ಮನುಷ್ಯ’ ಎಂಬ ಸಂಸ್ಕೃತ ಭಾಷೆಯ ಸಣ್ಣ ಕಥೆಗಳ ಸಂಗ್ರಹವನ್ನು ಇಲ್ಲಿ ಏ.17 ರಂದು ಬಿಡುಗಡೆ ಮಾಡಲಾಗಿದೆ. ತಮಿಳುನಾಡು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಆರ್.ಎಸ್. ಕಣ್ಣನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂ ಡಿದ್ದರು. ಸಂಸ್ಕೃತ ಭಾರತಿ ಆಯೋಜಿಸಿದ್ದ ಇನ್ನೊಂದು ಕಾರ್ಯಕ್ರಮದಲ್ಲಿ ‘ಮಾತೃದೇವೋಭವ’ ಎಂಬ ಸಂಸ್ಕೃತದ ಸಣ್ಣ ಕಥೆಗಳ ಗ್ರಂಥವನ್ನು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಶ್ರೀಮತಿ ಪ್ರಭಾ ಶ್ರೀದೇವನ್ ಅವರು ಏ.19ರಂದು ಲೋಕಾರ್ಪಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಪ್ರಭಾ ಅವರು, ‘ನೆನ್ನೆ ವಿಮಾನದಲ್ಲಿ […]

ಭೂಕಂಪ ಪೀಡಿತರಿಗೆ ಪಾಕ್ ಗೋಮಾಂಸ!

ರಾಜ್ಯಗಳು - 0 Comment
Issue Date : 07.05.2015

ಕಂಠ್ಮಡು: ಭೂಕಂಪ ಪೀಡಿತ ನೇಪಾಳದಲ್ಲಿ ನಿರಾಶ್ರಿತರಾಗಿರುವ ಲಕ್ಷಾಂತರ ಜನರು ಹಸಿವಿನಿಂದ ಕಂಗೆಟ್ಟಿದ್ದು, ಜೀವ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೋಮಾಂಸ ನಿಷೇಧ ಕಾನೂನು ಜಾರಿಯಲ್ಲಿರುವ ಹಿಂದು ರಾಷ್ಟ್ರ ನೇಪಾಳಕ್ಕೆ ನೆರೆ ರಾಷ್ಟ್ರ ಪಾಕಿಸ್ಥಾನ ಕಳುಹಿಸಿದ್ದು, ಗೋಮಾಂಸದ ಪೊಟ್ಟಣ! ಪಾಕ್ ಕಳುಹಿಸಿರುವ ಆಹಾರ ಪೊಟ್ಟಣಗಳಲ್ಲಿ ಹಿಂದುಗಳಿಗೆ ಪವಿತ್ರವಾ ಗಿರುವ ಗೋವಿನ ಮಾಂಸ ಇರುವ ಪೊಟ್ಟಣಗಳಿರುವುದು ಬೆಳಕಿಗೆ ಬಂದಿದೆ. ಆ ಆಹಾರ ಪೊಟ್ಟಣಗಳನ್ನು ಮುಟ್ಟದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನದ ಈ ನಡೆಯಿಂದ ಸಾರ್ಕ್ ಸದಸ್ಯ ರಾಷ್ಟ್ರಗಳ ನಡುವೆ […]

ಜಾತಿರಹಿತ ಸಮಾಜ ನಿರ್ಮಾಣಕ್ಕೆ  ಬದ್ಧರಾಗಿ: ಡಾ. ಕೃಷ್ಣಗೋಪಾಲ್

ಜಾತಿರಹಿತ ಸಮಾಜ ನಿರ್ಮಾಣಕ್ಕೆ ಬದ್ಧರಾಗಿ: ಡಾ. ಕೃಷ್ಣಗೋಪಾಲ್

ರಾಜ್ಯಗಳು - 0 Comment
Issue Date : 07.05.2015

ಡೆಹರಾಡೂನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ತಪಸ್ವಿಗಳಿದ್ದಂತೆ. ಅವರು ಯಾವಾಗಲೂ ದೇಶದ ಒಳಿತಿಗಾಗಿ ಯೋಚಿಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಡಾ. ಕೃಷ್ಣಗೋಪಾಲ್ ಹೇಳಿದರು. ಅವರು ಏ.19 ರಂದು ಇಲ್ಲಿ ಗಣವೇಷಧಾರಿ ಸ್ವಯಂಸೇವಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಜಾತಿರಹಿತ ಸಮಾಜವನ್ನು ನಿರ್ಮಿಸಲು ಇದು ಸಕಾಲವಾಗಿದೆ. ಸಮಾಜದಲ್ಲಿ ಅನೇಕ ಬಗೆಯ ಭಿನ್ನತೆಗಳಿರಬಹುದು. ಆದರೆ ಹಿಂದು ಎಂದಾಗ ಎಲ್ಲರೂ ಗೌರವಿಸುತ್ತಾರೆ. ಹಾಗಾಗಿ ಭಿನ್ನತೆಗಳನ್ನು ತೊರೆದು ನಾವೆಲ್ಲರೂ ಹಿಂದು ಎಂಬುದನ್ನು ಮರೆಯಕೂಡದು ಎಂದರು. ಸಮಾರಂಭದಲ್ಲಿ ಪ್ರಾಂತ ಸಂಘಚಾಲಕರಾದ ಚಂದ್ರಪಾಲ್ ನೇಗಿ […]

 ಭೂಕಂಪ ಪೀಡಿತರ  ನೆರವಿಗೆ ವಿಹಿಂಪ  ತ್ರಿ-ಸ್ತರೀಯ ಯೋಜನೆ

ಭೂಕಂಪ ಪೀಡಿತರ ನೆರವಿಗೆ ವಿಹಿಂಪ ತ್ರಿ-ಸ್ತರೀಯ ಯೋಜನೆ

ರಾಜ್ಯಗಳು - 0 Comment
Issue Date : 07.05.2015

ಹೊಸದಿಲ್ಲಿ: ನೇಪಾಳದ ಭೂಕಂಪ ಪೀಡಿತರ ನೆರವಿಗಾಗಿ ವಿಶ್ವ ಹಿಂದು ಪರಿಷತ್ ತ್ರಿ – ಸ್ತರೀಯ ಯೋಜನೆಯನ್ನು ಹಮ್ಮಿಕೊಂಡಿದೆ. 1. ಅನಾಥ ಮಕ್ಕಳಿಗಾಗಿ ವಸತಿ ಹಾಗೂ ಶಿಕ್ಷಣ: ಭೂಕಂಪದ ಪರಿಣಾಮವಾಗಿ ಅನೇಕ ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ವಿಶ್ವ ಹಿಂದು ಪರಿಷತ್ ಭಾರತದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿನಿಲಯ ಹಾಗೂ 50ಕ್ಕೂ ಹೆಚ್ಚು ಅನಾಥಾಲಯಗಳನ್ನು ನಿರ್ವಹಿಸುತ್ತಿದೆ. ಇಂತಹ ವಿದ್ಯಾರ್ಥಿ ನಿಲಯ ಹಾಗೂ ಅನಾಥಾಲಯಗಳಲ್ಲಿ ಭೂಕಂಪ ಪೀಡಿತರ ಅನಾಥ ಮಕ್ಕಳಿಗೆ ವಿಹಿಂಪ ವ್ಯವಸ್ಥೆ ಮಾಡಲಿದೆ. 2. ಮನೆ: ಭೂಕಂಪ ಪೀಡಿತರಲ್ಲಿ […]

ನೇಪಾಳ ಸಂತ್ರಸ್ತರಿಗೆ ನೆರವಾಗಿ: ಆರೆಸ್ಸೆಸ್ ಮನವಿ

ನೇಪಾಳ ಸಂತ್ರಸ್ತರಿಗೆ ನೆರವಾಗಿ: ಆರೆಸ್ಸೆಸ್ ಮನವಿ

ರಾಜ್ಯಗಳು - 0 Comment
Issue Date : 07.05.2015

ಹೊಸದಿಲ್ಲಿ: ಭೂಕಂಪ ಪೀಡಿತ ನೇಪಾಳದ ಸಂತ್ರಸ್ತರಿಗೆ ತಕ್ಷಣ ನೆರವು ನೀಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಷಿ ಸ್ವಯಂಸೇವಕರು ಹಾಗೂ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ. ಏ. 25ರಂದು ನೇಪಾಳ ಹಾಗೂ ಭಾರತದ ಕೆಲವು ಪ್ರದೇಶ ಗಳಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದಾಗಿ ಇಡೀ ಜಗತ್ತು ದಿಗ್ಭ್ರಮೆಗೊಂಡಿದೆ. ಪ್ರಕೃತಿಯ ಈ ಆರ್ಭಟದಿಂದ ಇಡೀ ಜನಜೀವನ ಸ್ತಬ್ಧಗೊಂಡಿದೆ. ನೇಪಾಳದಲ್ಲಂತೂ ಭೂಕಂಪದಿಂದ ಸಾವಿಗೀಡಾಗಿರುವ ಜನರ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ದಾಟುವ ನಿರೀಕ್ಷೆ ಕಂಡುಬರುತ್ತಿದೆ. ಇದೊಂದು ಕಲ್ಪನೆಗೂ ನಿಲುಕದ ದೊಡ್ಡ […]

ಜಾಹ್ನವಿ ಪತ್ರಿಕೆಯ ಸುವರ್ಣಮಹೋತ್ಸವ

ರಾಜ್ಯಗಳು - 0 Comment
Issue Date : 01.05.2015

ಹೊಸದಿಲ್ಲಿ: ಹಿಂದಿಯ ಪ್ರತಿಷ್ಠಿತ ಜಾಹ್ನವಿ ಪತ್ರಿಕೆಯ ಸುವರ್ಣಮಹೋತ್ಸವ ಸಮಾರಂಭಕ್ಕೆ ಆರೆಸ್ಸೆಸ್ ಸಹ ಸರಕಾರ್ಯವಾಹ ಡಾ. ಕೃಷ್ಣಗೋಪಾಲ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದಾಗಿ ಅನೇಕ ಪತ್ರಿಕೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಇಂತಹ ಪರಿಸ್ಥಿತಿಯಲ್ಲಿ ಜಾಹ್ನವಿಯಂತಹ ಪತ್ರಿಕೆಗಳಿಗೆ ಬೆಂಬಲ ಅಗತ್ಯ. ಹಿಂದು ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ಜಾಹ್ನವಿ ಪತ್ರಿಕೆಯ ಪಾತ್ರವನ್ನು ಮರೆಯುವಂತಿಲ್ಲ ಎಂದು ಹೇಳಿದರು. D ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಹಾಗೂ ಮಖನ್‌ಲಾಲ್ ಚತುರ್ವೇದಿ ಪತ್ರಕಾರಿತಾ ವಿಶ್ವ ವಿದ್ಯಾಲಯದ […]

‘ಜನಂ’ ಮಲೆಯಾಳಂ ವಾಹಿನಿ ಆರಂಭ

ರಾಜ್ಯಗಳು - 0 Comment
Issue Date : 01.05.2015

ಕೊಚ್ಚಿ: ಮನರಂಜನೆ ಹಾಗೂ ಸುದ್ದಿ ಬಿತ್ತರಿಸುವ ‘ಜನಂ’ ಟಿವಿಯೆಂಬ ಮಲೆಯಾಳಂ ಭಾಷೆಯ ವಾಹಿನಿ ಆರಂಭವಾಗಿದೆ. ರಾಷ್ಟ್ರೀಯ ವಿಚಾರಧಾರೆಯ ತಂಡವೊಂದು ಈ ವಾಹಿನಿಯ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಜ್ಯೋತಿ ಬೆಳಗಿಸಿ ವಾಹಿನಿಯನ್ನು ಉದ್ಘಾಟಿಸಿದರು. ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ ರಾಜ್ಯವರ್ಧನಸಿಂಗ್ ರಾಠೋಡ್ ವಾಹಿನಿಗೆ ಹಸಿರು ನಿಶಾನೆ ತೊರಿದರು. ಈ ಸಂದರ್ಭದಲ್ಲಿ ಸಂಘದ ಸರಕಾರ್ಯವಾಹ ಭಯ್ಯಾಜಿ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಮಾಧವ್, […]