ಹಿಂದು ನಾಯಕರ ಹತ್ಯೆಗೆ ಫತ್ವಾ

ಹಿಂದು ನಾಯಕರ ಹತ್ಯೆಗೆ ಫತ್ವಾ

ರಾಜ್ಯಗಳು - 0 Comment
Issue Date : 05.08.2014

ಚೆನ್ನೈ: ಹಿಂದು ನಾಯಕರನ್ನು ಹತ್ಯೆ ಮಾಡುವುದಾಗಿ ಬರೆದ ಬೆದರಿಕೆ ಪತ್ರವೊಂದು ಇಲ್ಲಿನ ಹಿಂದು ಮುನ್ನಣಿ ಪ್ರಧಾನ ಕಾರ್ಯಾಲಯಕ್ಕೆ ಅಂಚೆ ಮೂಲಕ ಬಂದು ತಲುಪಿದೆ. ರಾಜ್ಯದ ವಿವಿಧ ಜಿಲ್ಲೆಗಳ (ಚೆನ್ನೈ, ತಂಜಾವೂರ್, ಕೊಯಮತ್ತೂರು, ತಿರುಚಿ, ವಿರುಧಾನಗರ್, ತಿರುಪುರ್, ತಿರುನಲ್ವೇಲಿ ಮತ್ತು ಶಿವಗಂಗೆ) ಹಿಂದು ನಾಯಕರ ಹೆಸರಿನ ಮೊದಲ ಅಥವಾ ಕೊನೆಯ ಅಕ್ಷರವನ್ನು ಪತ್ರದಲ್ಲಿ ನಮೂದಿಸಲಾಗಿದೆ. ಈ ಬೆದರಿಕೆ ಪತ್ರವನ್ನು ಕೇರಳದ ಪಾಲಕ್ಕಾಡ್‌ನಲ್ಲಿ ಅಂಚೆಗೆ ಹಾಕಲಾಗಿದೆ. ಈ ಪತ್ರ ತಲುಪಿದ ಬಳಿಕ ಹಿಂದು ಮುನ್ನಣಿಯ ನಗರ ಕಾರ್ಯದರ್ಶಿ ಇಳಂಗೋವನ್ ಇತರ […]

ಸ್ಮೃತಿ ಮಂದಿರಕ್ಕೆ ಡಾ. ಕಲಾಂ ಭೇಟಿ

ಸ್ಮೃತಿ ಮಂದಿರಕ್ಕೆ ಡಾ. ಕಲಾಂ ಭೇಟಿ

ರಾಜ್ಯಗಳು - 0 Comment
Issue Date : 05.08.2014

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಹೆಡಗೇವಾರ್ ಅವರ ಸ್ಮೃತಿ ಮಂದಿರಕ್ಕೆ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಜು. 31ರಂದು ಭೇಟಿ ನೀಡಿ ಗೌರವ ಸಲ್ಲಿಸಿದರು. ಡಾ. ಕಲಾಂ ಅವರ ಜೊತೆ ವಿಜ್ಞಾನ ಭಾರತಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜಯಕುಮಾರ್, ಸಂಘದ ಪಶ್ಚಿಮ ಕ್ಷೇತ್ರ ಪ್ರಚಾರಕ್ ರವೀಂದ್ರ ಜೋಶಿ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.  

ವಿಯೆಟ್ನಾಂ: 4 ಸಾವಿರ ವರ್ಷಗಳ ಹಿಂದಿನ ವಿಷ್ಣುಮೂರ್ತಿ ಪತ್ತೆ

ವಿಯೆಟ್ನಾಂ: 4 ಸಾವಿರ ವರ್ಷಗಳ ಹಿಂದಿನ ವಿಷ್ಣುಮೂರ್ತಿ ಪತ್ತೆ

ರಾಜ್ಯಗಳು - 0 Comment
Issue Date : 28.07.2014

ಹೊಸದಿಲ್ಲಿ: ಪಕ್ಕಾ ಕಮ್ಯುನಿಸ್ಟ್ ದೇಶವಾಗಿರುವ ವಿಯೆಟ್ನಾಂನಲ್ಲಿ ಇತ್ತೀಚೆಗೆ ನಡೆಸಲಾದ ಸಂಶೋಧನೆಗಳು ಹಿಂದೂ ಧರ್ಮ, ವೈದಿಕ ಸಂಸ್ಕೃತಿಯ ಬಗ್ಗೆ ಹೊಸ ಬೆಳಕು ಚೆಲ್ಲಿವೆೆ. ಹಿಂದೂ ಧರ್ಮದ ಸತ್ಯ, ಸತ್ವ, ಪ್ರಾಚೀನತೆಗಳನ್ನು ಆಧಾರಗಳೊಂದಿಗೆ ಎತ್ತಿ ಹಿಡಿದಿದೆ.ವಿಯೆಟ್ನಾಂನಿಂದ ಬಂದ ಇತ್ತೀಚಿನ ಸುದ್ದಿಯ ಪ್ರಕಾರ ಭಗವಾನ್ ವಿಷ್ಣುವಿನ ಪ್ರಾಚೀನ ಮನೋಜ್ಞ ಶಿಲ್ಪ ಅಲ್ಲಿ ಪತ್ತೆಯಾಗಿದೆ. ಅದು ಸುಮಾರು 4 ಸಹಸ್ರ ವರ್ಷಗಳಷ್ಟು ಪ್ರಾಚೀನ ಕಾಲದ್ದು ಎಂದು ಭಾವಿಸಲಾಗಿದೆ. ಅಕೃತ ಕಮ್ಯುನಿಸ್ಟ್ ಸಿದ್ಧಾಂತ ಹೊಂದಿದ್ದರೂ ವಿಯೆಟ್ನಾಂ ಸರ್ಕಾರ ಇತ್ತೀಚೆಗೆ ಪ್ರಾಚೀನ ಧಾರ್ಮಿಕ ಪರಂಪರೆಗೆ ಮಹತ್ವ […]

ವಿಹಿಂಪ ಆಸರೆ: ಪಾಕ್ ಹಿಂದು ಯುವತಿಯ ವಿವಾಹ

ವಿಹಿಂಪ ಆಸರೆ: ಪಾಕ್ ಹಿಂದು ಯುವತಿಯ ವಿವಾಹ

ರಾಜ್ಯಗಳು - 0 Comment
Issue Date : 28.07.2014

ಹೊಸದಿಲ್ಲಿ: ವಿಶ್ವ ಹಿಂದು ಪರಿಷತ್‌ನ ದೆಹಲಿ ಘಟಕವು ಪಾಕಿಸ್ಥಾನದ ಹಿಂದು ಯುವತಿಯೊಬ್ಬಳ ವಿವಾಹವನ್ನು ನೆರವೇರಿಸಿದೆ. ದೆಹಲಿಯಲ್ಲಿ ಸಂತ್ರಸ್ತರಾಗಿ ವಾಸಿಸುತ್ತಿರುವ ಕುಟುಂಬದ ಯುವತಿ ಈಕೆ. ಜಿಹಾದಿಗಳಿಂದ ತಪ್ಪಿಸಿಕೊಂಡು ಭಾರತಕ್ಕೆ ಆಶ್ರಯ ಕೋರಿ ಬಂದಿರುವ ಹಲವಾರು ಪಾಕ್ ಹಿಂದು ಕುಟುಂಬಗಳು ದೆಹಲಿಯಲ್ಲಿ ಆಶ್ರಯ ಪಡೆದಿವೆ. ಜುಲೈ 10ರಂದು ಕಾಂಝವಾಲದಲ್ಲಿನ ಫಾರಂ ಹೌಸ್‌ನಲ್ಲಿ ನಡೆದ ಮದುವೆಗೆ ಅನೇಕ ಗಣ್ಯರು ಆಗಮಿಸಿ ವಧೂವರರನ್ನು ಹಾರೈಸಿದರು. ವಧು ಗೋಪಾನಿ ಫರೀದಾಬಾದ್‌ನ ಯುವಕನನ್ನು ವರಿಸಿದ್ದಾಳೆ. ಆತ ಕೂಡ ಪಾಕಿಸ್ಥಾನದಿಂದ ಬಂದ ನಿರಾಶ್ರಿತ ಹಿಂದು.ಭಗಿನಿ ನಿವೇದಿತಾ ಸೇವಾ […]

ಪ್ರೊ.ಸತೀಶ್ಚಂದ್ರ ಮಿತ್ತಲ್‌ಗೆ ಡಾ. ಹೆಡಗೇವಾರ್ ಪ್ರಜ್ಞಾ ಸಮ್ಮಾನ್

ಪ್ರೊ.ಸತೀಶ್ಚಂದ್ರ ಮಿತ್ತಲ್‌ಗೆ ಡಾ. ಹೆಡಗೇವಾರ್ ಪ್ರಜ್ಞಾ ಸಮ್ಮಾನ್

ರಾಜ್ಯಗಳು - 0 Comment
Issue Date : 28.07.2014

ಹೊಸದಿಲ್ಲಿ: ಪ್ರಸಿದ್ಧ ಇತಿಹಾಸಕಾರ ಹಾಗೂ ರಾಷ್ಟ್ರೀಯ ಚಿಂತನೆಯ ಬರಹಗಾರ ಪ್ರೊ. ಸತೀಶ್ಚಂದ್ರ ಮಿತ್ತಲ್ ಅವರನ್ನು ಡಾ. ಹೆಡಗೇವಾರ್ ಪ್ರಜ್ಞಾ ಸಮ್ಮಾನ್ 2014 ಪುರಸ್ಕಾರ ನೀಡಿ ಗೌರವಿಸಲಾಗುವುದು.ಈ ಪುರಸ್ಕಾರವು 51 ಸಾವಿರ ರೂ. ನಗದು, ಸ್ಮರಣಿಕೆಯನ್ನು ಒಳಗೊಂಡಿದೆ. ಕೋಲ್ಕತ್ತಾದಲ್ಲಿ ಆಗಸ್ಟ್ 15ರಂದು ನಡೆಯಲಿರುವ ಸಮಾರಂಭದಲ್ಲಿ ಸಂಘದ ಸಹಸರಕಾರ್ಯವಾಹ ಡಾ. ಕೃಷ್ಣಗೋಪಾಲ್ ಅವರು ಸತೀಶ್ಚಂದ್ರ ಮಿತ್ತಲ್ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.ಮುಜಫರ್ ನಗರದ ಕಾಂಧ್ಲಾ ನಗರದಲ್ಲಿ 1938ರ ಜನವರಿ 1ರಂದು ಜನಿಸಿದ ಮಿತ್ತಲ್ ಕಳೆದ 38 ವರ್ಷಗಳ ಕಾಲ […]

ಜೈನ ಮುನಿಗಳ ಕಿವಿಮಾತು ಆರೆಸ್ಸೆಸ್‌ನಿಂದ ಕಲಿಯಿರಿ

ರಾಜ್ಯಗಳು - 0 Comment
Issue Date : 28.07.2014

ಹೊಸದಿಲ್ಲಿ: ಆರೆಸ್ಸೆಸ್ ಸ್ವಯಂಸೇವಕರ ಶಿಸ್ತು ಹಾಗೂ ನಿರ್ವಹಣಾ ಸಾಮರ್ಥ್ಯವನ್ನು ಪ್ರಶಂಸಿಸಿರುವ ತೇರಾಪಂಥದ ಜೈನ ಮುನಿ ಆಚಾರ್ಯ ಮಹಾಶ್ರಮನ್ ಅವರು ‘ಯಾರಾದರೂ ಉತ್ತಮ ಕಾರ್ಯಕರ್ತರಾಗಬೇಕಿದ್ದರೆ ಅವರು ಸಂಘವನ್ನು ನೋಡಿ ಕಲಿಯಲಿ’ ಎಂದು ಹೇಳಿದ್ದಾರೆ. ಇಲ್ಲಿ ಝಂಡೇವಾಲಾದ ಕೇಶವಕುಂಜ್‌ನಲ್ಲಿ ನಡೆದ ಸಂಘದ ಕಾರ್ಯಕರ್ತರು ಹಾಗೂ ತೇರಾಪಂಥದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘದೊಂದಿಗೆ ತೇರಾಪಂಥ ದೀರ್ಘ ಕಾಲದ ಸಂಬಂಧ ಹೊಂದಿದೆ ಎಂದರು. ಆಚಾರ್ಯ ಅವರಿಗೆ ಕೇಶವಕುಂಜದಲ್ಲಿ ಹಾರ್ದಿಕ ಸ್ವಾಗತ ಕೋರಲಾಯಿತು. ಸಂಘದ ಉತ್ತರ ಕ್ಷೇತ್ರ ಸಂಘಚಾಲಕ ಡಾ. ಬಜರಂಗಲಾಲ್ […]

‘ನಾವೆಲ್ಲರೂ ಮೊದಲು ಸೇವಿಕೆಯರು’

‘ನಾವೆಲ್ಲರೂ ಮೊದಲು ಸೇವಿಕೆಯರು’

ರಾಜ್ಯಗಳು - 0 Comment
Issue Date : 28.07.2014

ಹೊಸದಿಲ್ಲಿ: ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಷ್ಟ್ರಸೇವಿಕಾ ಸಮಿತಿಯು ಇಲ್ಲಿ ಜೂ. 30ರಂದು ಸನ್ಮಾನಿಸಿತು. ಅ.ಭಾ. ಸಹಕಾರ್ಯವಾಹಿಕ ಶ್ರೀಮತಿ ಆಶಾ ಶರ್ಮಾ, ಕ್ಷೇತ್ರ ನಿಧಿಪ್ರಮುಖ್ ಶ್ರೀಮತಿ ನಿರ್ಮಲಾ ಗುಪ್ತಾ ಸೇರಿದಂತೆ ದೆಹಲಿಯ ಹಲವು ಸೇವಿಕೆಯರು ಉಪಸ್ಥಿತರಿದ್ದರು. ಮೂವರು ಸನ್ಮಾನಿತ ಸೇವಿಕೆಯರನ್ನು ತಿಲಕ ಮತ್ತು ಆರತಿ ಮೂಲಕ ಸ್ವಾಗತಿಸಲಾಯಿತು. ರಾಷ್ಟ್ರ ಸೇವಿಕಾ ಸಮಿತಿಯ ಜೊತೆ ತಾವು ಹೇಗೆ ಸಂಬಂಧವನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದನ್ನು […]

ಕೆಮಗ್ಗ ನೇಕಾರರಿಗೆ ಠೇಂಗಡಿ ಸ್ಕೀಮ್‍

ಕೆಮಗ್ಗ ನೇಕಾರರಿಗೆ ಠೇಂಗಡಿ ಸ್ಕೀಮ್‍

ರಾಜ್ಯಗಳು - 0 Comment
Issue Date : 28.07.2014

ಅಹಮದಾಬಾದ್: ಕೈಮಗ್ಗ ಹಾಗೂ ಕುಶಲ ಕೈಗಾರಿಕೆ ನೌಕರರಿಗೆ ನೆರವಾಗಲು ಗುಜರಾತ್ ಸರ್ಕಾರ ‘ದತ್ತೋಪಂತ ಠೇಂಗಡಿ ಕಾರೀಗರ್ ವ್ಯಾಜ್ ಸಹಾಯ್ ಯೋಜನಾ’ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಿದೆ.ಸಂಘದ ಹಿರಿಯ ಪ್ರಚಾರಕ ಹಾಗೂ ಭಾರತೀಯ ಮಜ್ದೂರ್ ಸಂಘ ಮತ್ತು ಸ್ವದೇಶಿ ಜಾಗರಣ ಮಂಚ್ ಸಂಸ್ಥಾಪಕರಾಗಿದ್ದ ದತ್ತೋಪಂತ ಠೇಂಗಡಿ ಅವರ ಹೆಸರನ್ನು ಈ ಯೋಜನೆಗೆ ಇಡಲಾಗಿದೆ. ಗುಜರಾತ್ ಹಣಕಾಸು ಸಚಿವ ಸೌರಭ್ ಪಟೇಲ್ ಈ ಯೋಜನೆಯನ್ನು ಪ್ರಕಟಿಸಿ, ಇದು ಕುಶಲ ಕೈಗಾರಿಕೆ ಹಾಗೂ ಕೈಮಗ್ಗದ ನೌಕರರಿಗೆ ನೆರವಾಗಲಿದೆ ಎಂದರು. ವಿಶೇಷವಾಗಿ ಕಛ್ […]

ಅಮಿತ್‌ಷಾ: ಬಿಜೆಪಿಯ ನೂತನ ಸಾರಥಿ

ಅಮಿತ್‌ಷಾ: ಬಿಜೆಪಿಯ ನೂತನ ಸಾರಥಿ

ರಾಜ್ಯಗಳು - 0 Comment
Issue Date : 16.07.2014

ಹೊಸದಿಲ್ಲಿ: ಈ ಬಾರಿ ಉತ್ತರ ಪ್ರದೇಶದಲ್ಲಿ ಮ್ಯಾಜಿಕ್ ಮಾಡಿದ ಬಿಜೆಪಿಯ ಅಭೂತಪೂರ್ವ ಗೆಲುವಿನ ರೂವಾರಿ ಅಮಿತ್‌ಷಾ ಅವರು ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರ ನಿಷ್ಠಾವಂತ ಬೆಂಬಲಿಗ ಅಮಿತ್‌ಷಾ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಪ್ರಯಾಣ ಆರಂಭಿಸಿದವರು. ‘ತನ್ನ ಸ್ವಸಾಮರ್ಥ್ಯದಿಂದಲೇ ಈಗ ಈ ಮಟ್ಟಕ್ಕೆ ಏರಿದ್ದಾರೆ. ಕಠಿಣ ಪರಿಶ್ರಮ ಹಾಗೂ ಗುರಿ ಸಾಧಿಸುವವರೆಗೂ ವಿರಮಿಸದ ಅವರ ಗುಣ ಪಕ್ಷಕ್ಕೆ ಮತ್ತಷ್ಟು ಯಶಸ್ಸನ್ನು ತಂದುಕೊಡುವ ವಿಶ್ವಾಸವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.1964ರಲ್ಲಿ ಮುಂಬೈನಲ್ಲಿ ಜನಿಸಿದ […]

ರಾಮ್ ಮಾಧವ್‌ಗೆ ಬಿಜೆಪಿ ಹೊಣೆಗಾರಿಕೆ

ರಾಮ್ ಮಾಧವ್‌ಗೆ ಬಿಜೆಪಿ ಹೊಣೆಗಾರಿಕೆ

ರಾಜ್ಯಗಳು - 0 Comment
Issue Date : 16.07.2014

ಮೋಹನ್‌ಖೇಡ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಹಾಗೂ ಅ.ಭಾ. ಸಹಸಂಪರ್ಕ ಪ್ರಮುಖ್ ಆಗಿದ್ದ ರಾಮ್ ಮಾಧವ್ ಅವರನ್ನು ಪಕ್ಷದ ಬಲವರ್ಧನೆಗಾಗಿ ಸಂಘವು ಬಿಜೆಪಿಗೆ ನೀಡಿದೆ.ಮೂರು ದಿನಗಳ ಕಾಲ ಮಹಾರಾಷ್ಟ್ರದ ಮೋಹನ್‌ಖೇಡದಲ್ಲಿ ನಡೆದ ಸಂಘದ ಪ್ರಾಂತ ಪ್ರಚಾರಕರ ಬೈಠಕ್‌ನಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ರಾಮ್ ಮಾಧವ್ ಅವರಿಗೆ ಬಿಜೆಪಿಯಲ್ಲಿ ಯಾವ ಹೊಣೆಗಾರಿಕೆ ಎಂಬುದನ್ನು ಪಕ್ಷವು ನಿರ್ಧರಿಸಲಿದೆ. ಇನ್ನೋರ್ವ, ಪಶ್ಚಿಮ ಉತ್ತರ ಪ್ರದೇಶದ ಕ್ಷೇತ್ರ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದ ಶಿವ ಪ್ರಕಾಶ್ ಅವರಿಗೂ ಬಿಜೆಪಿ ಜವಾಬ್ದಾರಿ ನೀಡಲಾಗಿದೆ.