ಹೊಸ ಪ್ರಭೇದ ಪತ್ತೆ

ಹೊಸ ಪ್ರಭೇದ ಪತ್ತೆ

ರಾಜ್ಯಗಳು - 0 Comment
Issue Date : 16.07.2014

ಅಸ್ಸಾಮಿನ ಮನಾಸ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ವನ್ಯಮೃಗಗಳ ಕುರಿತು ಸಂಶೋಧನೆಯೊಂದು ನಡೆಯುತ್ತಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ಕಂಡುಬಂದ ಹೊಸ ಪ್ರಭೇದಗಳು ಎಲ್ಲರ ಅಚ್ಚರಿಗೆ ಕಾರಣವಾಗಿವೆ. ಭಾರತೀಯ ವನ್ಯಜೀವನ ಸಂಸ್ಥೆ, ಆರ್ಯ ವಿದ್ಯಾಪೀಠ ಕಾಲೇಜ್, ಗುವಾಹಟಿ ವಿವಿ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಎನ್‌ಜಿಒ ಒಂದರ ಸಹಕಾರದಲ್ಲಿ ನಡೆಸಲಾದ ಸಂಶೋಧನೆಯಿಂದ ಜಗತ್ತಿಗೆ ಪರಿಚಯವೇ ಇಲ್ಲದ, ಯಾವ ಪುಸ್ತಕದಲ್ಲೂ ಇಲ್ಲದ ಹಲವು ವಿಭಿನ್ನ ಪ್ರಭೇದದ ಜೀವಿಗಳು ಇಲ್ಲಿವೆ ಎಂಬುದು ಗಮನಕ್ಕೆ ಬಂದಿದೆ. ಸುಮಾರು 20 ಉಭಯಚರ ಮತ್ತು 35 ಸರೀಸೃಪಗಳ ಹೊಸ ಪ್ರಭೇದಗಳು ಪತ್ತೆಯಾಗಿದ್ದು, […]

ಸೈಬರ್ ಜಾಗೃತಿ ಆಂದೋಲನ!

ಸೈಬರ್ ಜಾಗೃತಿ ಆಂದೋಲನ!

ರಾಜ್ಯಗಳು - 0 Comment
Issue Date : 16.07.2014

ರೋಗಗಳ ಜಾಗೃತಿಗೆ, ಸಾಮಾಜಿಕ ಜಾಗೃತಿಗೆ ಆಂದೋಲನಗಳು ನಡೆಯುವುದು ಸಾಮಾನ್ಯ. ಆದರೆ ಇದೀಗ ಹೊಸ ಟ್ರೆಂಡ್ ಆರಂಭವಾಗಿದೆ. ಮನುಷ್ಯನ ವೈಚಾರಿಕತೆಯ ಮಟ್ಟ, ತಂತ್ರಜ್ಞಾನಗಳ ವ್ಯಾಪಕ ಬಳಕೆ, ತೋರುಬೆರಳ ತುದಿಯಲ್ಲಿ ಸಿಗುವ ಅಂತರ್ಜಾಲ ಸೌಲಭ್ಯ ಮುಂತಾದವುಗಳಿಂದ ಇಡೀ ಜಗತ್ತೇ ಅಂಗೈಗೆ ಬಂದು ಕೂತಿರುವುದು ಸಂತಸಕ್ಕೆ ಬದಲಾಗಿ ಮನುಷ್ಯನಿಗೆ ಗಂಡಾಂತರವನ್ನೇ ತಂದೊದಗಿದೆ. ಆಯುಧ, ರಕ್ತಪಾತಗಳ ಮುಂತಾದ ಭಯಾನಕ ಅಪರಾಧಗಳ ಜಾಗವನ್ನೀಗ ಸೈಬರ್ ಕ್ರೈಮ್ ಅಪಹರಿಸಿಕೊಂಡಿದೆ. ಈ ನಿಟ್ಟಿನಲ್ಲಿ ಜೇಮ್‌ಶೇಡ್‌ಪುರದ ಪೊಲೀಸರು, ಟಾಟಾ ಮೋಟಾರ್ಸ್‌ ಸಹಯೋಗದಲ್ಲಿ ಸೈಬರ್ ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿದ್ದಾರೆ. ಪೊಲೀಸ್ […]

ಲವ್ ಜಿಹಾದ್ ಬಲೆಗೆ ಇನ್ನೊಬ್ಬ ಹಿಂದು ಯುವತಿ

ರಾಜ್ಯಗಳು - 0 Comment
Issue Date : 16.07.2014

ಕೋಝಿಕೋಡ್: 6 ತಿಂಗಳಿನಿಂದ ಮನೆಯಿಂದ ನಾಪತ್ತೆಯಾಗಿದ್ದ ಹಿಂದೂ ಯುವತಿಯೊಬ್ಬಳು ಇದೀಗ ಮುಸ್ಲಿಂ ಮತಕ್ಕೆ ಮತಾಂತರಗೊಂಡಿದ್ದಾಳೆಂದು ಸುದ್ದಿ. ಕೆಲವು ಜಿಹಾದಿ ರೋಮಿಯೋಗಳ ಹಿಡಿತಕ್ಕೆ ಸಿಲುಕಿ ಆಕೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ. ತಿರುವಳ್ಳ ನ್ಯಾಯಾಲಯದಲ್ಲಿ ಈ ಬಗ್ಗೆ ಇತ್ತೀಚೆಗೆ ಆಕೆ ನೀಡಿದ ಹೇಳಿಕೆಯನ್ನು ದಾಖಲಿಸಲಾಗಿದೆ. ಈ ಯುವತಿ ಇದಕ್ಕೂ ಮೊದಲು ಕೊಟ್ಟಾಯಂನಲ್ಲಿ ಇರುವ ಬಟ್ಟೆಗಳ ಶೋ ರೂಂನಲ್ಲಿ ಉದ್ಯೋಗಿಯಾಗಿದ್ದಳು. ಆಕೆಯನ್ನು ಅಬು ಎಂಬ ಮುಸ್ಲಿಂ ಯುವಕ ಅಲ್ಲಿಂದ ಹಾರಿಸಿಕೊಂಡು ಹೋಗಿದ್ದಾನೆಂದು ಹೇಳಲಾಗಿದೆ.  

ಹಿಂದು ಮುನ್ನಣಿ ಕಾರ್ಯಕರ್ತನ ಕೊಲೆ

ರಾಜ್ಯಗಳು - 0 Comment
Issue Date : 16.07.2014

ತಿರುನಲ್ವೇಲಿ: ತಮಿಳುನಾಡು ಪ್ರಾಂತದ ಹಿಂದು ಮುನ್ನಣಿಯ ನಗರ ಕಾರ್ಯದರ್ಶಿ ಜೀವ್‌ರಾಜ್ (38) ಅವರನ್ನು ಸಂಕರನ್ ಕೊವಿಲ್‌ನಲ್ಲಿ ಕೊಲೆ ಮಾಡಲಾಗಿದೆ. ಅವರ ಕುತ್ತಿಗೆ ಭಾಗದಲ್ಲಿ ಗಂಭೀರವಾದ ಗಾಯದಿಂದಾಗಿ ಸಾವಿಗೀಡಾಗಿದ್ದಾರೆ. ಪೊಲೀಸರು ಹಂತಕರ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ. ಹಿಂದೂ ಮುನ್ನಣಿಯ ಸ್ಥಾಪಕ ರಾಂ ಗೋಪಾಲನ್ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವುದಲ್ಲದೆ, ರಾಜ್ಯದಲ್ಲಿ ಹಿಂದೂ ಮುಖಂಡರ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ.

ಸೌದಿಯಲ್ಲಿ ಡಚ್ ಕಂಪೆನಿಗಳಿಗೆ ನಿಷೇಧ

ರಾಜ್ಯಗಳು - 0 Comment
Issue Date : 16.07.2014

ಹೊಸದಿಲ್ಲಿ: ಸೌದಿ ಅರೇಬಿಯಾ ಸರ್ಕಾರ ಡಚ್ ಕಂಪೆನಿಗಳ ಮೇಲೆ ನಿಷೇಧ ಹೇರಿದೆ. ಸೌದಿಯಲ್ಲಿ ಕಟ್ಟಡ ನಿರ್ಮಾಣದ ಗುತ್ತಿಗೆ ಹಿಡಿದಿರುವ ಡಚ್ ಕಂಪೆನಿಗಳು ಇದರಿಂದಾಗಿ ಕಂಗಾಲಾಗಿವೆ.ಅಷ್ಟಕ್ಕೂ , ಸೌದಿ ಸರ್ಕಾರ ಡಚ್ ಕಂಪೆನಿಗಳ ಮೇಲೆ ನಿಷೇಧ ಹೇರಿರುವುದಕ್ಕೆ ಆ ಕಂಪೆನಿಗಳು ಇಸ್ಲಾಂ ಬಗ್ಗೆ ಅಗೌರವ ತೋರುತ್ತಿವೆ ಎಂಬುದೇ ಕಾರಣವಂತೆ. ಹಾಲೆಂಡ್ ಮೂಲಕ ಸೌದಿ ಅರೇಬಿಯಾದ ರಾಯಭಾರಿಯು ಸೌದಿ ಸರ್ಕಾರವು ಜಗತ್ತಿನಾದ್ಯಂತ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಹಾಲೆಂಡ್ ಜೊತೆಗೆ 60 ದಶಲಕ್ಷ ರಿಯಾಲ್‌ನಷ್ಟು ವ್ಯವಹಾರವನ್ನು ಸೌದಿ ಸರ್ಕಾರ […]

ಶೇ.10-11 ಮುಸ್ಲಿಮರ ಓಟು ಬಿಜೆಪಿಗೆ

ರಾಜ್ಯಗಳು - 0 Comment
Issue Date : 16.07.2014

ಹೊಸದಿಲ್ಲಿ: ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 10-11ರಷ್ಟು ಮುಸ್ಲಿಮರು ಬಿಜೆಪಿಗೆ ಮತ ನೀಡಿದ್ದಾರೆಂದು ಹಿಂದುಸ್ಥಾನ್ ಎಕ್ಸ್‌ಪ್ರೆಸ್ ಎಂಬ ಉರ್ದು ಪತ್ರಿಕೆ ವರದಿ ಮಾಡಿದೆ. ಬಿಜೆಪಿ ಈ ಬಾರಿ ತನ್ನ ಚುನಾವಣಾ ಅಭಿಯಾನವನ್ನು ವ್ಯವಸ್ಥಿತವಾಗಿ ನಿರ್ವಹಿಸಿತು. ಅಭಿವೃದ್ಧಿ ಹಾಗೂ ಉತ್ತಮ ಆಡಳಿತದತ್ತ ಪ್ರಚಾರವನ್ನು ಕೇಂದ್ರೀಕರಿಸಿತ್ತು ಎಂದು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಮುಖ್ಯಸ್ಥ ಸಿರಾಜುದ್ದೀನ್ ಖುರೇಷಿ ಹೇಳಿದ್ದಾರೆ. ತಾನು 125 ಕೋಟಿ ಭಾರತೀಯರ ಹಿತವನ್ನು ಕಾಯುವೆ. ಇಡೀ ದೇಶದ ಅಭಿವೃದ್ಧಿ ನನ್ನ ಗುರಿ ಎಂದು ಮೋದಿ ಸ್ಪಷ್ಟಪಡಿಸಿದ್ದರು. […]

ಗೋಮಾಂಸದಿಂದ ಕ್ಯಾನ್ಸರ್

ಗೋಮಾಂಸದಿಂದ ಕ್ಯಾನ್ಸರ್

ರಾಜ್ಯಗಳು - 0 Comment
Issue Date : 16.07.2014

ಹೊಸದಿಲ್ಲಿ: ಗೋಮಾಂಸ ತಿಂದರೆ ಕ್ಯಾನ್ಸರ್ ತಪ್ಪಿದ್ದಲ್ಲ. ಹಾಗೆಂದು ಬ್ರಿಟನ್‌ನಲ್ಲಿ ನಡೆದ ಸಂಶೋಧನೆಯೊಂದು ತಿಳಿಸಿದೆ. ಹಾರ್ವರ್ಡ್ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ, ಗೋಮಾಂಸ ತಿಂದವರಲ್ಲಿ ಹೆಚ್ಚು ಮಂದಿ ಎದೆಯ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ. ಸುಮಾರು 1 ಲಕ್ಷ ಗೋಮಾಂಸ ತಿಂದವರನ್ನು ಪರೀಕ್ಷಿಸಿ ಈ ಸಂಶೋಧನೆ ನಡೆಸಲಾಗಿದೆ. 2006ರಲ್ಲಿ ನಡೆಸಿದ ಸಂಶೋಧನೆಯೊಂದು ಇತರ ಪ್ರಾಣಿಗಳ ಮಾಂಸ ತಿಂದವರಲ್ಲಿ ಕ್ಯಾನ್ಸರ್ ಬರುತ್ತದೆಂದು ತಿಳಿಸಿತ್ತು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆಯೆಂದು ಸಂಶೋಧನೆಯ ವರದಿ. ತಜ್ಞರ ಪ್ರಕಾರ ದನ, ಎತ್ತು ಹಾಗೂ ಎಮ್ಮೆಯ […]

ವೈ.ಎಸ್. ರಾವ್: ಐಸಿಹೆಚ್‌ಆರ್‌ಗೆ ನೂತನ ಸಾರಥಿ

ವೈ.ಎಸ್. ರಾವ್: ಐಸಿಹೆಚ್‌ಆರ್‌ಗೆ ನೂತನ ಸಾರಥಿ

ರಾಜ್ಯಗಳು - 0 Comment
Issue Date : 07.07.2014

ಹೊಸದಿಲ್ಲಿ: ಖ್ಯಾತ ಸಂಶೋಧಕ ಹಾಗೂ ಇತಿಹಾಸ ವಿದ್ವಾಂಸ ಪ್ರೊ. ಯಲ್ಲಪ್ರಗಡ ಸುದರ್ಶನ್ ರಾವ್ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರೀಸರ್ಚ್‌ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಇದೀಗ ಇತಿಹಾಸ ಸಂಕಲನ ಯೋಜನೆಯ ಅಧ್ಯಕ್ಷರಾಗಿರುವ ರಾವ್ ಅವರು ಬಾಬಾ ಸಾಹೇಬ್ ಆಪ್ಟೆ ಮತ್ತು ಮೋರೋಪಂತ ಪಿಂಗಳೆ ಅವರ ಮಾರ್ಗದರ್ಶನದಲ್ಲಿ ಬೆಳೆದ ವ್ಯಕ್ತಿ. ಆಂಧ್ರದ ಮೆಹಬೂಬ್‌ನಗರ ಜಿಲ್ಲೆಯ ಕೊಲ್ಲಾಪುರದ ನಿವಾಸಿ. ಕಾಕತೀಯ ವಿ.ವಿ.ಯಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದ ರಾವ್, ನಿವೃತ್ತಿಯ ಬಳಿಕ ಹನಮೊಂದಾದಲ್ಲಿ ವಾಸವಾಗಿದ್ದಾರೆ. 8 ಮಂದಿ ಪಿ.ಹೆಚ್.ಡಿ. ಹಾಗೂ 15 ಮಂದಿ […]

ಕಾರ್ಯಾಲಯದಿಂದ ಭರವಸೆಯ ಬೆಳಕು ದೊರೆಯಲಿ

ಕಾರ್ಯಾಲಯದಿಂದ ಭರವಸೆಯ ಬೆಳಕು ದೊರೆಯಲಿ

ರಾಜ್ಯಗಳು - 0 Comment
Issue Date : 07.07.2014

ಜಬುವಾ (ಮ.ಪ್ರ.): ಕಾರ್ಯಾಲಯದ ನಿರ್ಮಾಣ ಎಂದರೆ ಕಾರ್ಯದ ಲಯ ಆಗ ಬಾರದು. ಆದರೆ ಕಾರ್ಯದಲ್ಲಿ ಲಯಗಾರಿಕೆಯನ್ನು ಕಂಡುಕೊಳ್ಳಬೇಕು. ಸಮಾಜದ ವಿಭಿನ್ನ ಆಶೋತ್ತರಗಳ ಈಡೇರಿಕೆಯ ಭವನ ಇದಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಪ್ರತಿಪಾದಿಸಿದರು.ಅವರು ವನವಾಸಿಗಳೇ ಹೆಚ್ಚಾಗಿರುವ ಜಬುವಾದಲ್ಲಿ ಸಂಘದ ನೂತನ ಕಾರ್ಯಾಲಯ ‘ಜಾಗೃತಿ’ಯನ್ನು ಉದ್ಘಾಟಿಸಿ ಮಾತನಾಡಿದರು. ಈ ನೂತನ ಕಾರ್ಯಾಲಯಕ್ಕೆ ಆಗಮಿಸಿದವರಿಗೆ ಭರವಸೆಯ ಕಿರಣ ದೊರೆಯಬೇಕು. ಇಲ್ಲಿಗೆ ಬರುವ ಪ್ರತಿಯೊಬ್ಬರೂ ಪುರುಷಾರ್ಥದ ಪ್ರವೃತ್ತಿ ಬೆಳೆಸಿಕೊಂಡು ಹೋಗಬೇಕಾಗಿದೆ. ಸಂಘ ಹೊರಟಿರುವುದು ಇಂತಹ ಮಾನವೀಯ ಗುಣ […]

ರಾಂ ಪ್ರಕಾಶ್ ಧೀರ್‌ಗೆ ಶ್ರದ್ಧಾಂಜಲಿ

ರಾಂ ಪ್ರಕಾಶ್ ಧೀರ್‌ಗೆ ಶ್ರದ್ಧಾಂಜಲಿ

ರಾಜ್ಯಗಳು - 0 Comment
Issue Date : 07.07.2014

ಹೊಸದಿಲ್ಲಿ: ಮ್ಯಾನ್ಮಾರ್‌ನಲ್ಲಿ ಸಂಘದ ವರಿಷ್ಠ ಪ್ರಚಾರಕರಾಗಿದ್ದ ರಾಂ ಪ್ರಕಾಶ್ ಧೀರ್ ಅವರಿಗೆ ಇಲ್ಲಿ ಇತ್ತೀಚೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಂಘದ ಸಹಸರಕಾರ್ಯವಾಹ ಡಾ. ಕೃಷ್ಣಗೋಪಾಲ್ ಅವರು ಮ್ಯಾನ್ಮಾರ್‌ನಲ್ಲಿ ಹಿಂದು ಹಾಗೂ ಬೌದ್ಧ ಸಮಾಜದ ಜನರನ್ನು ಏಕಾತ್ಮ ಭಾವದಲ್ಲಿ ಪೋಣಿಸುವ ಅದ್ಭುತ ಕಾರ್ಯವನ್ನು ರಾಂ ಪ್ರಕಾಶ್‌ಜೀ ನಿರ್ವಹಿಸಿದ್ದರು. 1947ರಿಂದ 2014ರ ತನಕವೂ ರಾಂ ಪ್ರಕಾಶ್‌ಜೀ ಮ್ಯಾನ್ಮಾರ್‌ನಲ್ಲಿ ಪ್ರಚಾರಕರಾಗಿದ್ದರು. ಹೀಗೆ 66 ವರ್ಷಗಳ ಅವರ ಪ್ರಚಾರಕ ಜೀವನ ನಿಜಕ್ಕೂ ವೈಶಿಷ್ಟ್ಯಪೂರ್ಣವಾಗಿತ್ತು. ಒಂದೆಡೆ ವೇದಾಂತ ಪರಂಪರೆ, ಇನ್ನೊಂದೆಡೆ ಅವೈದಿಕ […]