ಸಹಕಾರ ಭಾರತಿಯ ಪ್ರಾಂತ ಸಮಾವೇಶ

ರಾಜ್ಯಗಳು - 0 Comment
Issue Date : 16.06.2014

ಬೊಕಾರೊ: ಸಹಕಾರ ಭಾರತಿಯ ಝಾರ್ಖಂಡ್ ಪ್ರಾಂತದ ಎರಡು ದಿನಗಳ ಸಮಾವೇಶ ಇಲ್ಲಿ ಜರುಗಿತು. ಪ್ರಾಂತದ 13 ಜಿಲ್ಲೆಗಳಿಂದ 600ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಮಾವೇಶವನ್ನು ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಬೋಬಡೆ ಉದ್ಘಾಟಿಸಿದರು. ಜಂಟಿ ಸಂಘಟನಾ ಕಾರ್ಯದರ್ಶಿ ಸತೀಶ್ ಮರಾಠೆ, ಸಂಘದ ಪ್ರಾಂತ ಸಂಘಚಾಲಕ್ ಜಗನ್ನಾಥ್ ಶಾಹಿ ಅವರೂ ಉಪಸ್ಥಿತರಿದ್ದರು. ದೇಶ ಹಾಗೂ ಸಮಾಜದ ಪ್ರಗತಿಗೆ ಸಾಮೂಹಿಕ ಪ್ರಯತ್ನ ಅತ್ಯಂತ ಅಗತ್ಯವೆಂದು ವಿಷ್ಣು ಬೋಬಡೆ ಹೇಳಿದರು. ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ಅತ್ಯುತ್ತಮ ಮಾರ್ಗವೆಂದು ಸಹಕಾರ […]

ಸೇವಾ ಭಾರತಿ ತರಬೇತಿ ಶಿಬಿರ

ರಾಜ್ಯಗಳು - 0 Comment
Issue Date : 16.06.2014

ಚೆನ್ನೈ: ತಮಿಳುನಾಡು ಪ್ರಾಂತದ ಸೇವಾ ಭಾರತಿ ವಾರ್ಷಿಕ ತರಬೇತಿ ಶಿಬಿರವು ಇಲ್ಲಿನ ಕೊರತ್ತೂರು ವಿವೇಕಾನಂದ ವಿದ್ಯಾಲಯದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿತು. ಶಿಕ್ಷಾರ್ಥಿಗಳು ಯೋಗ, ಕೋಲಾಟ, ಭಜನೆ, ಆಟಗಳು ಇತ್ಯಾದಿ ಚಟುವಟಿಕೆಗಳನ್ನು ಸಮಾರಂಭದಲ್ಲಿ ಪ್ರದರ್ಶಿಸಿದರು.ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸಾಯಿ ಸುಂದರ್ ಮಾತನಾಡಿ ವೈಯಕ್ತಿಕ ಶಕ್ತಿಗಿಂತ ಸಾಮೂಹಿಕ ಶಕ್ತಿಯಿಂದ ಹೇಗೆ ಸಮಾಜದಲ್ಲಿ ಪರಿವರ್ತನೆ ತರಬಹುದು ಎಂದು ವಿವರಿಸಿದರು.ಕ್ಷೇತ್ರ ಪ್ರಚಾರಕ್ ಪ್ರಮುಖ್ ಹೆಚ್.ಎಸ್. ಗೋವಿಂದ ಮಾತನಾಡಿ, ಆರೋಗ್ಯಶಾಲಿ ಸಮಾಜ ಏಕೆ ಇರಬೇಕು ಎಂದು ವಿವರಿಸಿದರು. ಸೇವೆಯೆಂಬುದು ಕೇವಲ ಅನುಕಂಪ ಆಧಾರಿತವಾಗಿರಕೂಡದು. ಆದರೆ ಅದೊಂದು […]

ಅತೀ ಎತ್ತರದ ಶಿಖರವೇರಿದ ಆಂಧ್ರದ ಅತೀ ಕಿರಿಯರು

ಅತೀ ಎತ್ತರದ ಶಿಖರವೇರಿದ ಆಂಧ್ರದ ಅತೀ ಕಿರಿಯರು

ರಾಜ್ಯಗಳು - 0 Comment
Issue Date : 16.06.2014

ಹೈದರಾಬಾದ್: ಆಂಧ್ರಪ್ರದೇಶದ ಇಬ್ಬರು ವಿದ್ಯಾರ್ಥಿಗಳು ಈಗ ಇಡೀ ಜಗತ್ತೇ ನಿಬ್ಬೆರಗಾಗುವಂತಹ ಸಾಹಸ ಪ್ರದರ್ಶಿಸಿದ್ದಾರೆ. 13ರ ಹರೆಯದ ಪೂರ್ಣ ಹಾಗೂ 16ರ ಹರೆಯದ ಆನಂದ ಕುಮಾರ್ ಎಂಬ ಇಬ್ಬರು 9ನೇ ತರಗತಿಯ ವಿದ್ಯಾರ್ಥಿಗಳು ಸಮುದ್ರ ಮಟ್ಟದಿಂದ 29,029 ಅಡಿ ಎತ್ತರವಿರುವ ಜಗತ್ತಿನ ಅತೀ ಎತ್ತರದ ವೌಂಟ್ ಎವರೆಸ್ಟ್ ಶಿಖರವೇರಿ ದಾಖಲೆ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಇಬ್ಬರು ಸಾಹಸಿಗರನ್ನು ಅಭಿನಂದಿಸಿದ್ದಾರೆ. ಆಂಧ್ರ ಪ್ರದೇಶದ ಕಮ್ಮಮ್ ಜಿಲ್ಲೆಯ ಬಡ ದಲಿತ ರೈತ ಕುಟುಂಬದಲ್ಲಿ ಜನಿಸಿದ ಪೂರ್ಣ ಎರಡು ಹೊತ್ತಿನ […]

ಹಿಂದೂ ಸಂಸ್ಕೃತಿ ಬಗ್ಗೆ ವಿಶ್ವಾಸವಿಲ್ಲದಿದ್ದರೆ ದೇಶ ಭಿಕಾರಿಯಾದೀತು

ಹಿಂದೂ ಸಂಸ್ಕೃತಿ ಬಗ್ಗೆ ವಿಶ್ವಾಸವಿಲ್ಲದಿದ್ದರೆ ದೇಶ ಭಿಕಾರಿಯಾದೀತು

ರಾಜ್ಯಗಳು - 0 Comment
Issue Date : 16.06.2014

ನಾಗಪುರ: ಗ್ರಾಮ ಸಂಸ್ಕೃತಿಯ ವಿಕಾಸ, ವಸುಧೈವ ಕುಟುಂಬಕಮ್ ಎಂಬ ಪ್ರಾಚೀನ ಚಿಂತನೆಗೆ ನೂತನತೆ ಜೋಡಿಸಿಕೊಂಡು ನಡೆಯಬೇಕು. ಹಿಂದೂ ಸಂಸ್ಕೃತಿ ಬಗ್ಗೆ ವಿಶ್ವಾಸವಿಲ್ಲದಿದ್ದರೆ ದೇಶ ಭಿಕಾರಿಯಾದೀತು. ಜಾತೀಯತೆ, ದುರ್ವ್ಯಸನಗಳಿಂದಾಗಿ ವಿನಾಶವಾದೀತು ಎಂದು ಆರ್ಟ್ ಆಫ್ ಲಿವಿಂಗ್‌ನ ಪ್ರಮುಖರಾದ ಶ್ರೀ ಶ್ರೀ ರವಿಶಂಕರ ಗುರೂಜಿ ಎಚ್ಚರಿಸಿದ್ದಾರೆ.ಜೂ. 12ರಂದು ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷ ಸಂಘಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ಭಾರತದ 125 ಕೋಟಿ ಜನತೆಯ ಹಿಂಜರಿಕೆಯ ಮಾನಸಿಕತೆಯನ್ನು ದೂರಗೊಳಿಸುವ ಅನಿವಾರ್ಯತೆ ಇದೆ. […]

ರಕ್ಷಣೆಗೆ ಶೇ. 100 ಎಫ್‌ಡಿಐ: ಆರೆಸ್ಸೆಸ್

ರಾಜ್ಯಗಳು - 0 Comment
Issue Date : 12.06.2014

ನಾಗಪುರ: ರಕ್ಷಣಾ ವಲಯಕ್ಕೆ ಶೇ. 100 ನೇರ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಡಿಐ)ಯ ಮೋದಿ ಸರ್ಕಾರದ ನಿರ್ಧಾರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಾಗತಿಸಿದೆ. ರಕ್ಷಣಾ ವಲಯ ಸ್ವಾವಲಂಬಿಯಾಗುವುದಕ್ಕೆ ಹಾಗೂ ದೇಶದ ಭದ್ರತೆಯನ್ನು ಬಲಪಡಿಸುವುದಕ್ಕೆ ಇದು ಸಹಕಾರಿಯಾಗಬಲ್ಲದು ಎಂದು ಸಂಘದ ಸಹಸರಕಾರ್ಯವಾಹ ಡಾ. ಕೃಷ್ಣಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇಲ್ಲಿ ನಡೆದ ತೃತೀಯ ವರ್ಷದ ಸಂಘಶಿಕ್ಷಾ ವರ್ಗದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿರದ್ದತಿಗೆ ಕುರಿತು ಮಾತನಾಡಿದ ಅವರು, ಈ ವಿಧಿಯನ್ನು ರದ್ದುಗೊಳಿಸುವುದರಲ್ಲಿ […]

ಅರುಣಾಚಲದಲ್ಲಿ ಸಂಘಶಿಕ್ಷಾ ವರ್ಗ

ರಾಜ್ಯಗಳು - 0 Comment
Issue Date : 12.06.2014

ನಹರಲಗುನ್: ಅರುಣಾಚಲ ಪ್ರದೇಶದ ಸಂಘಶಿಕ್ಷಾ ವರ್ಗವು ಇಲ್ಲಿನ ಅಬೋತನಿ ವಿದ್ಯಾನಿಕೇತನದಲ್ಲಿ ಮೇ 12ರಂದು ಮುಕ್ತಾಯಗೊಂಡಿತು.ಅರುಣಾಚಲ ಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷ ಲಿಗುಟಚೋ ಮುಖ್ಯ ಅತಿಥಿಯಾಗಿ ಮಾತನಾಡಿ ಸಂಘದ ಚಟುವಟಿಕೆಗಳನ್ನು ಪ್ರಶಂಸಿಸಿದರು. ಭಾರತೀಯ ಸಂಸ್ಕೃತಿಯನ್ನು ರಾಜ್ಯದಲ್ಲಿ ಉಳಿಸಿ ಬೆಳೆಸಲು ತಾನು ಬದ್ಧನಾಗಿರುವುದಾಗಿ ಅವರು ಹೇಳಿದರು. ಸಂಘದ ಕ್ಷೇತ್ರ ಪ್ರಚಾರಕ ಉಲ್ಲಾಸ್ ಕುಲಕರ್ಣಿ ಮಾತನಾಡಿ, ಸಂಘ ಏನೆಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪತ್ರಿಕೆಗಳಲ್ಲಿ ಬರುವ ವರದಿಯಿಂದ ಸಂಘದ ಅರ್ಥವಾಗುವುದಿಲ್ಲ. ಇಂತಹ ಶಿಬಿರಗಳನ್ನು ನೋಡಿದಾಗಲೇ ಸಂಘದ ನೈಜಸ್ಥಿತಿ ಅರ್ಥವಾಗಬಲ್ಲದು ಎಂದರು. […]

ಜೂ. 12: ನಾಗಪುರ ಸಂಘಶಿಕ್ಷಾ ವರ್ಗ ಸಮಾರೋಪ

ರಾಜ್ಯಗಳು - 0 Comment
Issue Date : 12.06.2014

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷದ ಸಂಘಶಿಕ್ಷಾ ವರ್ಗದ ಸಮಾರೋಪ ಸಮಾರಂಭ ಜೂ. 12ರಂದು ಸಂಜೆ 6.30ಕ್ಕೆ ಇಲ್ಲಿನ ರೇಶಿಮ್ ಬಾಗ್ ಮೈದಾನದಲ್ಲಿ ನಡೆಯಲಿದೆ. ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಸರಸಂಘಚಾಲಕರಾದ ಡಾ. ಮೋಹನ್ ಭಾಗ್ವತ್ ಮುಖ್ಯ ಭಾಷಣ ಮಾಡಲಿದ್ದಾರೆ.ಮೇ 19ರಂದು ಇಲ್ಲಿ ಆರಂಭಗೊಂಡ ಸಂಘಶಿಕ್ಷಾ ವರ್ಗದಲ್ಲಿ ದೇಶದೆಲ್ಲೆಡೆಯಿಂದ 18-40ರ ವಯೋಮಾನದ ಒಟ್ಟು 717 ಸ್ವಯಂಸೇವಕರು ಪಾಲ್ಗೊಂಡಿದ್ದರು. ಶಿಬಿರವನ್ನು ಉದ್ಘಾಟಿಸಿದ ಆರೆಸ್ಸೆಸ್ ಸಹಸರಕಾರ್ಯವಾಹ ಡಾ. ಕೃಷ್ಣ […]

ದುರ್ಗಾ ಮಲ್ಲೇಶ್ವರಂ ಸ್ವಾಮಿ ದೇಗುಲಕ್ಕೆ ಸರಸಂಘಚಾಲಕರ ಭೇಟಿ

ದುರ್ಗಾ ಮಲ್ಲೇಶ್ವರಂ ಸ್ವಾಮಿ ದೇಗುಲಕ್ಕೆ ಸರಸಂಘಚಾಲಕರ ಭೇಟಿ

ರಾಜ್ಯಗಳು - 0 Comment
Issue Date : 12.06.2014

ವಿಜಯವಾಡ: ಆರೆಸ್ಸೆಸ್ ಸರಸಂಘ ಚಾಲಕರಾದ ಮೋಹನ್ ಭಾಗವತ್ ಅವರು ಇಲ್ಲಿನ ದುರ್ಗಾಮಲ್ಲೇಶ್ವರಂ ಸ್ವಾಮಿ ವರ್ಲಾ ದೇವಸ್ಥಾನಕ್ಕೆ ಮೇ 23ರಂದು ಭೇಟಿ ನೀಡಿ ದರ್ಶನ ಪಡೆದರು. ಅವರೊಂದಿಗೆ ನರಸಾಪುರಂ ಸಂಸದ ಗೋಕರಾಜು ಗಂಗರಾಜು ಮತ್ತಿತರ ಪ್ರಮುಖರು ಇದ್ದರು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿ. ತ್ರಿನಾಥ ರಾವ್ ಸ್ವಾಗತಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರು ಸರಸಂಘಚಾಲಕರನ್ನು ಗೌರವಿಸಿ ಸನ್ಮಾನಿಸಿದರು. ಮೋಹನ್ ಭಾಗವತ್ ಅವರು ಗುಂಟೂರು ಜಿಲ್ಲೆಯ ಮಂಗಳ ಗಿರಿ ಸಮೀಪದಲ್ಲಿ ನಡೆಯುತ್ತಿರುವ ಸಂಘ ಶಿಕ್ಷಾ ವರ್ಗದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು.

ಗಂಗೋತ್ರಿಗೆ  ಭಾರತ ಪರಿಕ್ರಮ ಯಾತ್ರೆ

ಗಂಗೋತ್ರಿಗೆ ಭಾರತ ಪರಿಕ್ರಮ ಯಾತ್ರೆ

ರಾಜ್ಯಗಳು - 0 Comment
Issue Date : 02.06.2014

ಗಂಗೋತ್ರಿ: ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಅವರ ನೇತೃತ್ವದ ಭಾರತ ಪರಿಕ್ರಮ ಯಾತ್ರೆಯು ಮೇ 22ರಂದು ಉತ್ತರಾಖಂಡದ ಪವಿತ್ರ ಕ್ಷೇತ್ರ ಗಂಗೋತ್ರಿಗೆ ತಲುಪಿದೆ. ಈ ಮೂಲಕ ಈ ಯಾತ್ರೆಯು 651ನೇ ದಿನಕ್ಕೆ ಕಾಲಿಟ್ಟಂತಾಗಿದೆ. ಸೀತಾರಾಮ ಕೆದಿಲಾಯ ಅವರು ಪವಿತ್ರ ಹಿಂದೂ ಯಾತ್ರಾಸ್ಥಳವಾಗಿರುವ, ಭಾಗೀರಥಿ ನದಿ ದಡದಲ್ಲಿರುವ ಗಂಗೋತ್ರಿಗೆ ಮೇ 22ರಂದು ತಲುಪಿದರು. ಹಿಮಾಲಯ ಪರ್ವತ ಶ್ರೇಣಿಯ ಬುಡದಲ್ಲಿರುವ ಗಂಗೋತ್ರಿ ಸಮುದ್ರ ಮಟ್ಟದಿಂದ 3,100 ಮೀ. ಎತ್ತರವಿದೆ. ಗಂಗಾನದಿಯ ಉಗಮ ಸ್ಥಾನವೇ ಗಂಗೋತ್ರಿ. ಗಂಗಾಮಾತೆಯ ಪೀಠವೆಂದೂ ಇದನ್ನು […]

ಹೊಸ ಸರ್ಕಾರ ಜನರ ಆಶೋತ್ತರಗಳನ್ನು ಪೂರೈಸಲಿ: ಭಯ್ಯಜಿ ಜೋಶಿ

ರಾಜ್ಯಗಳು - 0 Comment
Issue Date : 20.05.2014

ಹೊಸದಿಲ್ಲಿ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಸರ್ಕಾರ ಜನರ ಆಶೋತ್ತರಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಭಯ್ಯಜಿ ಜೋಶಿ ಆಶಿಸಿದ್ದಾರೆ. ಕೋಟ್ಯಂತರ ಮತದಾರರು ಬದಲಾವಣೆಯನ್ನು ಬಯಸಿ ಮತಚಲಾಯಿಸಿದ್ದಾರೆ. ಈ ಬದಲಾವಣೆಯನ್ನು ತರುವುದು ಹೊಸ ಸರ್ಕಾರದ ಕರ್ತವ್ಯ. ದೇಶದ ಐಕ್ಯತೆ, ಸಾಮಾಜಿಕ, ಧಾರ್ಮಿಕ ಬೇಧಭಾವಗಳಿಂದ ದೂರವಾದ ಶೋಷಣಮುಕ್ತ ಹಾಗೂ ಸಾಮರಸ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ನೂತನ ಸರ್ಕಾರ ಯಶಸ್ವಿಯಾಗಲಿ ಎಂದವರು ಹಾರೈಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರ ಅತ್ಯಂತ ನಿರ್ಣಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಸಮಗ್ರ […]