ಪರದೆಯ ಹಿಂದಿನ ಸತ್ಯ!

ಪರದೆಯ ಹಿಂದಿನ ಸತ್ಯ!

ರಾಜ್ಯಗಳು - 0 Comment
Issue Date : 06.05.2014

ಸಾರ್ವಜನಿಕವಾಗಿ ದೇವರ ಮಗನಂತೆ ಕಾಣಿಸಿಕೊಳ್ಳುವ ಹಲವರ ಸತ್ಯಕತೆಯೇ ಬೇರೆ. ಇತ್ತೀಚೆಗೆ ಕೇರಳದ ಕ್ಯಾಥೋಲಿಕ್ ಚರ್ಚ್ ಒಂದರಲ್ಲಿ ಲೈಂಗಿಕ ಹಗರಣದ ಆರೋಪಕ್ಕೆ ತುತ್ತಾಗಿ ಸಿಕ್ಕಿಹಾಕಿಕೊಂಡ ಪಾದ್ರಿಯೊಬ್ಬ ಈ ಮಾತಿಗೆ ಪೂರಕವೆನ್ನಿಸಿದ್ದಾನೆ. ದಿನವೂ ಬೆಳಗಾದರೆ ತಾನು ಜೀಸಸ್‌ನ ಮಗ… ತನ್ನಿಂದ ಮಾತ್ರವೇ ಉದ್ಧಾರ ಸಾಧ್ಯ ಎಂದು ಮಣ ಮಣ ಎನ್ನುತ್ತಿದ್ದವನು ಚರ್ಚಿಗೆ ಆಗಮಿಸಿದ್ದ ಒಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ ಘಟನೆ ನಡೆದಿದೆ. ಹೊಸ ಬಟ್ಟೆ ನೀಡುವುದಾಗಿ ಆಮಿಷವೊಡ್ಡಿ ಆಕೆಯನ್ನು ಪ್ರತಿದಿನವೂ ಚರ್ಚಿಗೆ ಕರೆಸಿಕೊಳ್ಳುತ್ತಿದ್ದ ಪಾದ್ರಿ ಆಕೆಯನ್ನು ಲೈಂಗಿಕವಾಗಿ […]

ಈರೋಡ್‌ನಲ್ಲಿ ಸಂಘಶಿಕ್ಷಾ ವರ್ಗ

ರಾಜ್ಯಗಳು - 0 Comment
Issue Date : 05.05.2014

ಈರೋಡ್: ಉತ್ತರ ತಮಿಳುನಾಡು ಪ್ರಾಂತದ ಪ್ರಥಮ ವರ್ಷದ ಸಂಘಶಿಕ್ಷಾ ವರ್ಗವನ್ನು ಏ. 27ರಂದು ಇಲ್ಲಿ ಪೆರೂರು ಮಠದ ಸ್ವಾಮಿ ಮರುಧಾಚಲ ಅಡಿಗಳರ್ ಉದ್ಘಾಟಿಸಿದರು. ಇಲ್ಲಿನ ಕೊಂಬುಕಲ್ವಿ ನಿಲಯಂ ಆವರಣದಲ್ಲಿ 20 ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ 200ಕ್ಕೂ ಹೆಚ್ಚು ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದಾರೆ.ಜ್ಯೋತಿ ಬೆಳಗಿಸಿ ಶಿಬಿರ ಉದ್ಘಾಟಿಸಿದ ಸ್ವಾಮೀಜಿಯವರು ಇಂದಿನ ಸಮಾಜದಲ್ಲಿ ಬಾಹ್ಯ ಬೆದರಿಕೆಗಳೊಂದಿಗೆ ಆಂತರಿಕ ಬೆದರಿಕೆಗಳೂ ಇವೆ. ಅವನ್ನು ನಿವಾರಿಸುವಲ್ಲಿ ಶಾರೀರಿಕ ಹಾಗೂ ಮಾನಸಿಕ ತರಬೇತಿಯನ್ನು ಸ್ವಯಂಸೇವಕರಿಗೆ ನೀಡುವ ಅಗತ್ಯವಿದೆ. ಸಂಘ ಇಂತಹ ಶಿಬಿರಗಳ ಮೂಲಕ ಈ […]

ಅಂ.ರಾ. ಶ್ರೀ ಕೃಷ್ಣ ಕೇಂದ್ರಕ್ಕೆ ಭೂಮಿಪೂಜೆ

ಅಂ.ರಾ. ಶ್ರೀ ಕೃಷ್ಣ ಕೇಂದ್ರಕ್ಕೆ ಭೂಮಿಪೂಜೆ

ರಾಜ್ಯಗಳು - 0 Comment
Issue Date : 05.05.2014

ಕೊಡಕ್ಕರ (ಕೊಚ್ಚಿ): ಅಂತಾರಾಷ್ಟ್ರೀಯ ಶ್ರೀಕೃಷ್ಣ ಕೇಂದ್ರ (ಐಎಸ್‌ಕೆ)ಕ್ಕೆ ಏ. 16ರಂದು ಕಂಚಿ ಆಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ಅವರು ಭೂಮಿಪೂಜೆ ನೆರವೇರಿಸಿದರು. ಮಧ್ಯ ಕೇರಳದ ಕೊಚ್ಚಿ-ತ್ರಿಶ್ಶೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವೃಂದಾವನದ ರೀತಿಯಲ್ಲಿ ಈ ಶ್ರೀಕೃಷ್ಣ ಕೇಂದ್ರವನ್ನು ನಿರ್ಮಿಸುವ ಯೋಜನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸ್ವಾಮಿ ಆತ್ಮಸ್ವರೂಪಾನಂದ ಅವರು ಕೇರಳದ 43 ನದಿಗಳಿಂದ ಸಂಗ್ರಹಿಸಲಾಗಿದ್ದ ಪವಿತ್ರ ನೀರನ್ನು ಗಂಗಾ ಜಲದೊಂದಿಗೆ ಬೆರೆಸಿ ಭೂಮಿಯ ಮೇಲೆ ಸಿಂಪಡಿಸಿದರು. ಈ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸಮಾರಂಭವನ್ನು ಕೊಚ್ಚಿ ದೇವಸ್ವಂ ಬೋರ್ಡ್‌ನ ಮುಖ್ಯಸ್ಥರಾದ […]

ಅನಂತಪದ್ಮನಾಭ ದೇಗುಲದ ನೂತನ ಸಮಿತಿ ಹಿಂದು ಪ್ರತಿನಿಧಿಗಳ ಸೇರ್ಪಡೆಗೆ ಆಗ್ರಹ

ಅನಂತಪದ್ಮನಾಭ ದೇಗುಲದ ನೂತನ ಸಮಿತಿ ಹಿಂದು ಪ್ರತಿನಿಧಿಗಳ ಸೇರ್ಪಡೆಗೆ ಆಗ್ರಹ

ರಾಜ್ಯಗಳು - 0 Comment
Issue Date : 05.05.2014

ತಿರುವನಂತಪುರ: ಸುಪ್ರೀಂಕೋರ್ಟ್ ನಿರ್ದೇಶಿಸಿದ ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ಕ್ಷೇತ್ರದ ನೂತನ ತಾತ್ಕಾಲಿಕ ಸಮಿತಿಯಲ್ಲಿ ಇಲ್ಲಿನ ರಾಜಕುಟುಂಬ ಮತ್ತು ಹಿಂದೂ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕಾಗಿತ್ತೆಂದು ಹಿಂದು ಐಕ್ಯ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮ್ಮನಂ ರಾಜಶೇಖರನ್ ಅಭಿಪ್ರಾಯ ಪಟ್ಟಿದ್ದಾರೆ.ಹಲವು ಶತಮಾನಗಳಿಂದ ದೇವರ ಸಂಪತ್ತು ಮತ್ತು ತಿರುವಾಭರಣಗಳನ್ನು ಸಂರಕ್ಷಿಸಿಕೊಂಡು ಬಂದಿರುವ ರಾಜ ಕುಟುಂಬವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಸರಿಯಲ್ಲ. ಇದುವರೆಗಿನ ಆಡಳಿತದಲ್ಲಿ ಏನಾದರೂ ಲೋಪಗಳಾಗಿದ್ದಲ್ಲಿ ಅದರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡು ಅಪರಾಧಿಗಳನ್ನು ಶಿಕ್ಷಿಸಬೇಕು. ಆದರೆ ಅದರ […]

ಉತ್ತರಾಖಂಡ: ವಿವೇಕಾನಂದ ಆರೋಗ್ಯ ಪ್ರಕಲ್ಪಕ್ಕೆ ಭೂಮಿಪೂಜೆ ಪ್ರತಿಯೊಬ್ಬ ವೈದ್ಯರೂ ವನವಾಸಿಗಳಿಗಾಗಿ ಕನಿಷ್ಠ 10 ದಿನ ನೀಡಲಿ: ಡಾ.ಕೃಷ್ಣಗೋಪಾಲ್

ಉತ್ತರಾಖಂಡ: ವಿವೇಕಾನಂದ ಆರೋಗ್ಯ ಪ್ರಕಲ್ಪಕ್ಕೆ ಭೂಮಿಪೂಜೆ ಪ್ರತಿಯೊಬ್ಬ ವೈದ್ಯರೂ ವನವಾಸಿಗಳಿಗಾಗಿ ಕನಿಷ್ಠ 10 ದಿನ ನೀಡಲಿ: ಡಾ.ಕೃಷ್ಣಗೋಪಾಲ್

ರಾಜ್ಯಗಳು - 0 Comment
Issue Date : 05.05.2014
ಚೀನಾದೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ

ಚೀನಾದೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ

ರಾಜ್ಯಗಳು - 0 Comment
Issue Date : 21.04.2014

ಭುವನೇಶ್ವರ: ಚೀನಾ ದೇಶವನ್ನು ಓಲೈಸುವುದರಿಂದ ಯಾವುದೇ ಸಮಸ್ಯೆ ಪರಿಹಾರವಾಗದು. 1950ರಲ್ಲಿ ಟಿಬೆಟ್ಟನ್ನು ಚೀನಾದ ವಶಕ್ಕೆ ಕೊಟ್ಟ ಬಳಿಕವೂ ಚೀನಾದ ಜೊತೆಗೆ ಭಾರತದ ಬಾಂಧವ್ಯ ಉತ್ತಮಗೊಂಡಿಲ್ಲ. ಭಾರತ ಚೀನಾದೊಂದಿಗೆ ವ್ಯವಹರಿಸುವಾಗ ತಾನು 125 ಕೋಟಿ ಜನಸಂಖ್ಯೆ ಹೊಂದಿದ ಬಲಶಾಲಿ ರಾಷ್ಟ್ರ ಎಂಬಂತೆ ವರ್ತಿಸಬೇಕು ಎಂದು ಭಾರತ-ಟಿಬೆಟ್ ಸಹಯೋಗ್ ಮಂಚ್ ಅಧ್ಯಕ್ಷ ಡಾ.ಕುಲದೀಪ್ ಅಗ್ನಿಹೋತ್ರಿ ಹೇಳಿದರು.ಟಿಬೆಟಿಯನ್ನರಿಗೆ ತಮ್ಮ ಸ್ವಾತಂತ್ರ್ಯ ಮರಳಿ ಪಡೆಯಲು ಭಾರತ ಸರ್ಕಾರ ಸಹಕಾರ ನೀಡಬೇಕು ಎಂದೂ ಅಗ್ನಿಹೋತ್ರಿ ಆಗ್ರಹಿಸಿದರು. ಮುಂದಿನ ಶ್ರಾವಣ ಮಾಸದ ಸಂದರ್ಭದಲ್ಲಿ ಚೀನಾದ ಕಬಂಧ […]

ತಮಿಳುನಾಡಿನಲ್ಲಿ ರಾಜಕೀಯ ಧ್ರುವೀಕರಣದ ಹೊಸ ಚಿತ್ರಣ

ರಾಜ್ಯಗಳು - 0 Comment
Issue Date : 21.04.2014

ಚೆನ್ನೈ: ತಮಿಳುನಾಡಿನಲ್ಲಿ ಹಿಂದೆಂದೂ ಕಾಣದ ಹೊಸ ಬಗೆಯ ರಾಜಕೀಯ ಧ್ರುವೀಕರಣದ ಚಿತ್ರಣ ಕಂಡುಬಂದಿದೆ. ಪಿಎಂಕೆ, ಎಂಡಿಎಂಕೆ ಪಕ್ಷಗಳು ಈಗ ಎನ್‌ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳಾಗಿವೆ. ಪುದುಚೆರಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ ನೇತೃತ್ವದ ಎನ್.ಆರ್.ಕಾಂಗ್ರೆಸ್‌ನ ಅಭ್ಯರ್ಥಿ ಹಾಗೂ ಪಿಎಂಕೆ ಅಭ್ಯರ್ಥಿ ಇಬ್ಬರೂ ಇದೀಗ ಚುನಾವಣಾ ಪ್ರಚಾರಕ್ಕೆ ನರೇಂದ್ರ ಮೋದಿಯ ಭಾವಚಿತ್ರಗಳನ್ನೇ ಬಳಸುತ್ತಿದ್ದಾರೆ. ಇತ್ತೀಚೆಗೆ ಎಂಡಿಎಂಕೆ ನಾಯಕ ವೈಕೊ ಬಿಜೆಪಿಯ ಕಾರ್ಯಕರ್ತರಿಗಾಗಿ ಭೋಜನ ಕೂಟವನ್ನು ತನ್ನ ನಿವಾಸದಲ್ಲಿ ಏರ್ಪಡಿಸಿದ್ದರು. ಪಿಎಂಕೆಯ ಡಾ.ರಾಮ್‌ದಾಸ್ ಕೂಡ ತೈಲಪುರಂನ ತನ್ನ ಫಾರ್ಮ್‌ಹೌಸ್‌ನಲ್ಲಿ ವೈಕೊ ಮತ್ತವರ ಅನುಯಾಯಿಗಳಿಗೂ […]

ಗೋರಕ್ಷಕರ ಬಗ್ಗೆ ಅಸಡ್ಡೆ!

ರಾಜ್ಯಗಳು - 0 Comment
Issue Date : 21.04.2014

ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ಇತ್ತೀಚೆಗಷ್ಟೇ ಅಕ್ರಮ ಗೋಸಾಗಣೆ ಮಾಡುತ್ತಿದ್ದ ಕೆಲ ಕಿಡಿಗೇಡಿಗಳನ್ನು ಹಿಂದುಪರ ಸಂಘಟನೆಗಳು ಹಿಡಿದಿದ್ದು ವರದಿಯಾಗಿತ್ತು. ಆದರೆ ಅದಾಗಿ ಒಂದು ವಾರ ಕಳೆಯುವಷ್ಟರಲ್ಲಿ ಮತ್ತೆ ಕೊಲ್ಹಾಪುರದಲ್ಲಿ ಅಕ್ರಮ ಗೋಸಾಗಣೆ ನಡೆದಿದೆ. ರಿಕ್ಷಾ ಒಂದರಲ್ಲಿ ಆರು ಎಳೆ ಕರುಗಳನ್ನು ಕೆಲ ಜಿಹಾದಿಗಳು ತುಂಬಿ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಹಿಂದುಪರ ಸಂಘಟನೆಯ ಕೆಲವರು ಅವರನ್ನು ತಡೆದಾಗ ಕಸಾಯಿಖಾನೆಗೆ ಅದನ್ನು ಕಳಿಸುತ್ತಿರುವುದು ಬೆಳಕಿಗೆ ಬಂತು.ಪೊಲೀಸರಿಗೆ ದೂರು ನೀಡಿ, ಅಕ್ರಮ ಗೋ ಸಾಗಣೆಯನ್ನು ತಡೆಯುವಂತೆ ಕೇಳಿದರೆ ಪೊಲೀಸರು ಅಸಡ್ಡೆ ಮಾಡುವ ಮೂಲಕ ತಾವೂ ಜಿಹಾದಿಗಳ […]

ಭಗವದ್ಗೀತೆಗೆ ಅವಮಾನ: ಕ್ರಮಕ್ಕೆ ಹಿಂದು ಮುನ್ನಣಿ ಆಗ್ರಹ

ರಾಜ್ಯಗಳು - 0 Comment
Issue Date : 21.04.2014

ಚೆನ್ನೈ: ತಮಿಳುನಾಡಿನಲ್ಲಿ ಮಾ. 27ರಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಮಿಳು ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆ ಹೀಗಿತ್ತು: ‘ಇತರರನ್ನು ಪ್ರೀತಿಸಲು ಕಲಿಸುವ ಗ್ರಂಥ ಯಾವುದು?’ ಅದರ ಕೆಳಗೆ ಮೂರು ಆಯ್ಕೆಗಳು: 1.ಬೈಬಲ್, 2. ಭಗವದ್ಗೀತಾ, 3. ನನ್ನುಲ್. ಸರಿಯಾದ ಉತ್ತರ ಬೈಬಲ್ ಎಂದು ಬರೆಯಬೇಕಿತ್ತು. ಆದರೆ ಹಿಂದು ಮುನ್ನಣಿ ಸಂಘಟನೆಯು ಭಗವದ್ಗೀತೆ ಎಂಬುದು ತಪ್ಪು ಉತ್ತರ ಆಗುತ್ತದೆಂಬುದನ್ನು ಖಂಡಿಸಿ, ಅದು ಪವಿತ್ರ ಭಗವದ್ಗೀತೆಗೆ ಅವಮಾನ ಮಾಡಿದಂತಾಗಿದೆ ಎಂದು ಆರೋಪಿಸಿದೆ. ವಿದ್ಯಾರ್ಥಿಗಳ ಮನದಲ್ಲಿ ಇಂತಹ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿ […]

ನಕ್ಸಲ್ ಅಟ್ಟಹಾಸಕ್ಕೆ ಕನ್ನಡಿಗ ಯೋಧ ಬಲಿ

ನಕ್ಸಲ್ ಅಟ್ಟಹಾಸಕ್ಕೆ ಕನ್ನಡಿಗ ಯೋಧ ಬಲಿ

ರಾಜ್ಯಗಳು - 0 Comment
Issue Date : 21.04.2014

ಬಿಹಾರದಲ್ಲಿ ನಡೆಯುತ್ತಿದ್ದ ಲೋಕಸಭಾ ಚುನಾವಣೆಯ ವೇಳೆ ನಕ್ಸಲರು ಸಿಡಿಸಿದ ನೆಲಬಾಂಬ್‌ನಿಂದಾಗಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಅವರಿಬ್ಬರಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹನಿಯೂರು ಗ್ರಾಮದವರಾದ ಹೆಚ್.ಇ.ಸೋಮೇಗೌಡ (40) ಸಹ ಒಬ್ಬರು. ಕಳೆದ 23 ವರ್ಷಗಳಿಂದ ಸಿಆರ್‌ಪಿಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಇಲ್ಲಿಯವರೆಗೂ ಬಿಹಾರದ ಸಿಆರ್‌ಪಿಎಫ್ 131 ಬೆಟಾಲಿಯನ್ನಿನ ಹಿರಿಯ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಈರೇಗೌಡ ಮತ್ತು ಚೌಡಮ್ಮ ಎಂಬುವವರ ಪುತ್ರರಾದ ಸೋಮೇಗೌಡ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದವರು. ದ್ವಿತೀಯ ಪಿಯುಸಿ […]