ಬೇಸಿಗೆ ರಜೆಯ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 06.04.2015

 ಹಿಂದಿನ ಸಂಚಿಕೆಯಿಂದ… ಯಾವುದೇ ವಯೋಮಾನದವರು ಈ ಆಟವನ್ನು ಆಡಬಹುದು. ಕ್ರಿಕೆಟ್ಟಿನ ಆರ್ಭಟದಲ್ಲಿ ಈ ನಮ್ಮ ದೇಶೀಯ ಆಟಕ್ಕೆ ಉತ್ತೇಜನ ಕೊಡಲೇಬೇಕು. ಇನ್ನೊಂದು ರೀತಿಯ ಇದೇ ಮಾದರಿಯ ಆಟದಲ್ಲಿ ರಬ್ಬರ್ ಚೆಂಡಿನ ಬದಲಾಗಿ ಹಳೆಯ ಬಟ್ಟೆಯ ಚೂರುಗಳನ್ನು ಭದ್ರವಾಗಿ ಉಂಡೆೆ ಮಾಡಿ ಕಟ್ಟಿ ಹೊಲಿಗೆ ಹಾಕಿದ ಚೆಂಡನ್ನು ಉಪಯೋಗಿಸುತ್ತಾರೆ. ಲಗೋರಿಯ ಆಟದಂತೆ ಜೋಡಿಸಿದ ಕಲ್ಲುಗಳನ್ನು ಇಲ್ಲಿ ‘ಲಗ್ಗೆ’ ಎಂದು ಕರೆಯುತ್ತಾರೆ. ಎರಡು ತಂಡದಲ್ಲಿರುವ ಆಟಗಾರರಲ್ಲಿ ಒಂದು ತಂಡ ಬಟ್ಟೆಯ ಚೆಂಡಿನಿಂದ ಲಗ್ಗೆಗೆ ಹೊಡೆಯುತ್ತಾರೆ. ಒಬ್ಬೊಬ್ಬರಂತೆ ಸರದಿಯ ಪ್ರಕಾರ ಮೂರು ಬಾರಿ ಆಟಗಾರರು ಹೊಡೆಯಬೇಕು. […]

ವೈಜ್ಞಾನಿಕ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 17.03.2015

-ಶಿ.ನಾ. ಚಂದ್ರಶೇಖರ ವಿಜ್ಞಾನದಲ್ಲಿ ಆಸಕ್ತಿ ಇರುವ ಮಕ್ಕಳು ವಿಜ್ಞಾನದ ಕೆಲವು ವಿಶೇಷ ಕ್ರಿಯೆಗಳನ್ನು ಉಪಯೋಗಿಸಿಕೊಂಡು ವಿನೋದಕ್ಕಾಗಿ, ವೈಜ್ಞಾನಿಕ ಪ್ರಜ್ಞೆಯನ್ನು ಬಳಸುವ ಸಲುವಾಗಿ ಕೆಲವು ಆಟಗಳನ್ನು ಆಡಬಹುದು. ಈ ಆಟಗಳು ವಿಶೇಷ ಕುತೂಹಲ ಕೆರಳಿಸುವುದು ಮತ್ತು ತಾರ್ಕಿಕ ಚಿಂತನೆಯನ್ನು ಬೆಳೆಸುವುದು. ಕಾಗದದ ಮೀನನ್ನು ನೀರನಲ್ಲಿ ಬಿಟ್ಟಾಗ ಈಜುವಂತೆ ಮಾಡಬಹುದು. ದಪ್ಪವಾದ ಕಾಗದ ಅಥವಾ ತೆಳು ರಟ್ಟು ಕಾಗದದಲ್ಲಿ ಮೀನಿನ ಒಂದು ಆಕೃತಿಯನ್ನು ಕತ್ತರಿಸಬೇಕು. ಮೀನಿನ ಮಧ್ಯಭಾಗದಲ್ಲಿ ಒಂದು ಚಿಕ್ಕ ತೂತು ಅಲ್ಲಿಂದ ಬಾಲದವರೆಗೆ ಸುಮಾರು 2 ಮಿ.ಮೀ.ನಷ್ಟು ಅಗಲದ ಒಂದು […]

ಬೇಸಿಗೆಯನ್ನೂ ಬಳಸಿ ಬೆಳೆಯೋಣ

ಸ್ವದೇಶೀ ಕ್ರೀಡೆ - 0 Comment
Issue Date : 16.03.2015

-ಶಿ.ನಾ. ಚಂದ್ರಶೇಖರ ಶಿವರಾತ್ರಿಯ ನಂತರ ಶಿವ ಶಿವ ಎಂದು ಚಳಿ ಓಡಿ ಹೋಗಿ ಬಿಸಿಲಿನ ತಾಪ ಶುರುವಾಗುತ್ತದೆ. ಈ ವಾರದ ಅಂಕಣದಲ್ಲಿ ಬೇಸಿಗೆಯಲ್ಲಿ ಆಡುವ ಕೆಲವು ಆಟಗಳನ್ನು ಪರಿಚಯ ಮಾಡಿಕೊಳ್ಳೋಣ. ಬೇಸಿಗೆಯಲ್ಲಿ ಧಗೆ ಹೆಚ್ಚು. ಸಮುದ್ರ, ನದಿ, ಸರೋವರ, ಕೆರೆ, ಕೊಳ – ಈ ರೀತಿಯ ನೀರಿನ ತಾಣಗಳಲ್ಲಿ ಈಜುವುದು, ನೀರಿನಾಟಗಳು ಬಹಳ ಹಿತಕಾರವಾದವು. ಸಮುದ್ರ ದಂಡೆಯಲ್ಲಿ ಆಡಬಹುದಾದ ಹಲವು ಬಗೆಯ ಗುಂಪು ಆಟಗಳು – ಚೆಂಡಿನ ಆಟ, ಬ್ಯಾಡ್ಮಿಂಟನ್ ಮುಂತಾದವು. ಆದರೆ ನೀರಿನ ಜೊತೆ ಆಡುವಾಗ ಎಚ್ಚರಿಕೆಯಿರಲಿ. […]

ಬೆಳದಿಂಗಳ ಆಟಗಳು

ಬೆಳದಿಂಗಳ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 01.03.2015

–ಶಿ.ನಾ. ಚಂದ್ರಶೇಖರ ಆಟಗಳು ಮನೋಲ್ಲಾಸ ಹಾಗೂ ವ್ಯಕ್ತಿತ್ವ ನಿರ್ಮಾ ಣದ ಹಲವು ಗುಣಗಳಿಗೆ ಸಹಕಾರಿಯಾಗುತ್ತದೆ. ಆಯಾ ಕಾಲಗಳಿಗೆ ಅನುಗುಣವಾಗಿಯೂ ಆಟಗಳನ್ನು ಆಡಬಹುದು. ಈ ರೀತಿಯ ಆಟಗಳಲ್ಲಿ ‘ಬೆಳದಿಂಗಳಿನಲ್ಲಿ ಆಡುವ ಆಟ’ಗಳನ್ನು ಪರಿಚಯ ಮಾಡಿಕೊಳ್ಳೋಣ. ಪೂರ್ಣಚಂದ್ರ ಇರುವ ಬೆಳದಿಂಗಳ ದಿನಗಳಲ್ಲಿ ಸ್ನೇಹಿ ತರು, ಕುಟುಂಬದವರು ಒಟ್ಟಿಗೆ ಸೇರುವುದನ್ನು ಈಗ ಲೂ ಕೆಲವೆಡೆ ನೋಡುತ್ತೇವೆ. ಬೆಳದಿಂಗಳ ರಾತ್ರಿಯಲ್ಲಿ ವಿಹಾರ, ವಿನೋದಗಳಲ್ಲಿ ಕಾಲ ಕಳೆಯುವುದುಂಟು. ಬೆಳದಿಂಗಳ ಊಟ ಎಲ್ಲ ಕಡೆ ಪ್ರಸಿದ್ಧ. ಈ ಸಮಯದಲ್ಲಿ ಹಲವು ಆಟಗಳನ್ನು ಆಡಲಾಗುತ್ತದೆ.  ಹೆಣ್ಣು ಮಕ್ಕಳು ‘ಕುಂಟುಬಿಲ್ಲೆ’ […]

ಬೆಲೂನ್ ಆಟ

ಬೆಲೂನ್ ಆಟ

ಸ್ವದೇಶೀ ಕ್ರೀಡೆ - 0 Comment
Issue Date : 25.02.2015

ಶಿ.ನಾ. ಚಂದ್ರಶೇಖರ ಬೆಲೂನನ್ನು ಕೋಲಿನಿಂದ ಹೊಡೆದು ದಾಟಿಸುವ ಆಟದಲ್ಲಿ 5 ಅಡಿಗಳ ಅಂತರದಲ್ಲಿ ಎರಡು ಗೆರೆಗಳನ್ನು ಎಳೆಯುತ್ತಾರೆ. ಆಟಗಾರರನ್ನು 2 ತಂಡಗಳಾಗಿ ವಿಂಗಡಿಸಿ ಎರಡು ಗೆರೆಗಳ ಮೇಲೆ ನಿಲ್ಲಿಸಬೇಕು. ಎರಡು ತಂಡದ ಆಟಗಾರರಿಗೆ ಬೇರೆ ಬೇರೆ ಬಣ್ಣದ ಬೆಲೂನನ್ನು ಕೊಡಬೇಕು. ಆಟ ಪ್ರಾರಂಭದ ಸೂಚನೆ ಸಿಕ್ಕಿದ ಕೂಡಲೇ ಮೊದಲನೆಯ ಆಟಗಾರನು ತನ್ನಲಿರುವ ಕೋಲಿನಿಂದ ಬೆಲೂನನ್ನು ಹೊಡೆದು ಎರಡನೆಯ ಆಟಗಾರನತ್ತ, ಎರಡನೆಯವನು ಮೂರನೆಯವನತ್ತ ಸಾಗಿಸಬೇಕು. ತಂಡದ ಕೊನೆ ಆಟಗಾರನಿಗೆ ತಲುಪಿದಾಗ ಅವನಿಂದ ತನ್ನ ಹಿಂದಿನವನಿಗೆ, ಅದರಿಂದ ಅವನ ಹಿಂದಿನವನಿಗೆ […]

ಬುದ್ಧಿ ಪ್ರಚೋದಕ ಆಟಗಳು

ಬುದ್ಧಿ ಪ್ರಚೋದಕ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 20.01.2015

ಈ ವಾರದಲ್ಲಿ ಪದಗಳು, ಅಕ್ಷರಗಳ ಜೊತೆ ಆಡುವ ಕೆಲವು ಆಟಗಳ ಪರಿಚಯ ಮಾಡಿಕೊಳ್ಳೋಣ. ಸಾಮಾನ್ಯವಾಗಿ ಈ ಆಟಗಳು ಒಳಾಂಗಣ ಆಟವಾಗಿ ಆಡಲು ಸೂಕ್ತವಾದುದು. ನಮ್ಮ ಭಾಷೆಯ ಮೇಲಿನ ತಿಳಿವಳಿಕೆಯನ್ನು ಹೆಚ್ಚಿಸುವಲ್ಲಿ ಈ ಆಟಗಳು ಪ್ರಯೋಜನಕಾರಿ. ಪದ ಜೋಡಣೆ ಇಂಗ್ಲಿಷಿನ 26 ಅಕ್ಷರಗಳನ್ನು ಚೌಕಾಕೃತಿಯ ಕಾಗದಗಳಲ್ಲಿ ಮುದ್ರಿಸಿ ಅವುಗಳಿಂದ ವಿವಿಧ ಪದಗಳನ್ನು ಜೋಡಿಸುವುದೇ ಪದ ಜೋಡಣೆ. ಈ ಆಟವನ್ನು ಇಬ್ಬರಿಂದ ಹಿಡಿದು ಆರು ಜನರವರೆಗೂ ಆಡಬಹುದು. ಮೊದಲಿಗೆ ಅಕ್ಷರಗಳ ಕಾಗದಗಳನ್ನೆಲ್ಲಾ ಗುಂಪು ಮಾಡಿ ಅಕ್ಷರಗಳನ್ನು ಕಾಣದಿರುವಂತೆ ಒಂದೆಡೆ ಇಡಬೇಕು. ಇರುವ ಅಕ್ಷರಗಳ ಮೇಲೆ […]

ಬುಗುರಿ ಆಟ – 2

ಸ್ವದೇಶೀ ಕ್ರೀಡೆ - 0 Comment
Issue Date : 25.01.2015

– ಶಿ.ನಾ. ಚಂದ್ರಶೇಖರ ಈ ವಾರದಲ್ಲಿ ಬುಗುರಿಯ ಇನ್ನೆರಡು ಆಟವನ್ನು ತಿಳಿದುಕೊಳ್ಳೋಣ ತಲಾರಿ ಆಟ  ಈ ಆಟವನ್ನು ಎಷ್ಟು ಜನರು ಬೇಕಾದರೂ ಆಡಬಹುದು. ಆಟದಲ್ಲಿ ಸೋತವರ ಬುಗುರಿಗೆ ಗೆದ್ದವರು ತಮ್ಮ ಬುಗುರಿಯ ಮೊಳೆಯಿಂದ ಹೊಡೆದು ‘ಗುಳಿ’ ಬೀಳಿಸುತ್ತಾರೆ. ಈ ರೀತಿ ಗುಳಿ ಬೀಳಿಸುವುದಕ್ಕೆ ‘ಗುನ್ನ’ ಎನ್ನುತ್ತಾರೆ. ‘ಗುನ್ನ’ ಹೊಡೆದು ಸೋತವರ ಬುಗುರಿಯನ್ನು ಸೀಳಿ ಹಾಕಲು ಕೆಲವರು ಬುಗುರಿ ಮೊಳೆಗಳನ್ನು ಚೂಪಾಗಿ ಅಥವಾ ಚಪ್ಪಟೆಯಾಗಿ ಮಾಡಿಕೊಂಡಿರುತ್ತಾರೆ. ಆಟಗಾರ ತಮ್ಮ ಬುಗುರಿಗೆ ಗುನ್ನ ಬೀಳಿಸದ ಹಾಗೆ ಆಡುವುದೇ ಈ ಆಟದ ಚಮತ್ಕಾರ. […]

ಬುಗುರಿ ಆಟ

ಬುಗುರಿ ಆಟ

ಸ್ವದೇಶೀ ಕ್ರೀಡೆ - 0 Comment
Issue Date : 25.01.2015

ಗ್ರಾಮೀಣ ಆಟಗಳಲ್ಲಿ ಕ್ರಿಕೆಟ್ ಆಟದ ಆರ್ಭಟದ ನಡುವೆ ಈಗಲೂ ಉಳಿದಿರುವ ಆಟ ‘ಬುಗುರಿ ಆಟ.’ ಹೆಚ್ಚಿನ ಖರ್ಚಿಲ್ಲದ ಆಟ. ಗುರಿಯನ್ನು ತಲುಪುವುದು ಹೇಗೆ ಎಂದು ಪರಿಚಯಿಸುವ ಆಟ. ಆಟಕ್ಕೆ ಬೇಕಾದುದು ಕೇವಲ ಒಂದು ಬುಗುರಿ ಮತ್ತು ಅದನ್ನು ತಿರುಗಿಸಿಲು ಒಂದು ಚಾಟಿ. ಬಾಲಕರು ಹಾಗೂ ಕಿಶೋರರಿಗೆ ಮೆಚ್ಚಿನ ಆಟ. ಕೆಲವು ದೊಡ್ಡವರೂ ಅವರೊಡನೆ ಸೇರುವುದೂ ಉಂಟು. ಬುಗುರಿಯನ್ನು ವರ್ತುಲಾಕಾರವಾಗಿ ಮರದಿಂದ ಮಾಡಿರುತ್ತಾರೆ. ಇದರ ಕೆಳಗೆ ಒಂದು ಇಂಚು ಉದ್ದವಿರುವ ಒಂದು ಮೊಳೆ ಅಳವಡಿಸಲಾಗಿರುತ್ತದೆ. ಬುಗುರಿ ತಿರುಗುವುದು ಈ ಮೊಳೆಯ […]

ಪಗಡೆ ಆಟ

ಪಗಡೆ ಆಟ

ಸ್ವದೇಶೀ ಕ್ರೀಡೆ - 0 Comment
Issue Date : 15.01.2015

ಪ್ರಾಚೀನ ಭಾರತಕಾಲದಿಂದಲೂ ಪರಿಚಿತವಾದ ಆಟ ಪಗಡೆಯಾಟ. ಈಗಲೂ ಸಾಕಷ್ಟು ಮನೆಗಳಲ್ಲಿ ಪಗಡೆಯ ಹಾಸುಗಳನ್ನು ಕಾಣಬಹುದು. ಮಹಾಭಾರತದ ಕತೆಗೆ ತಿರುವು ಕೊಟ್ಟ ಆಟ ಪಗಡೆಯಾಟ. ಇದನ್ನು ಆರ್ಷಕ್ರೀಡೆ ಎಂದು ಕರೆಯುತ್ತಾರೆ. ಮರ, ಮೂಳೆಯಿಂದ ಮಾಡಿದ ದಾಳಗಳನ್ನು ಆಟವಾಡಲು ಉಪಯೋಗಿಸುತ್ತಾರೆ. ಇದರಲ್ಲಿ ಎರಡು ರೀತಿಯ ದಾಳಗಳನ್ನು ಉಪಯೋಗಿಸುತ್ತಾರೆ. ಚೌಕಾಕೃತಿಯ ಆರು ಮುಖದ ದಾಳದಲ್ಲಿ 4 ಮುಖಗಳಲ್ಲಿ 1 ರಿಂದ 6 ರವರೆಗಿನ ಸಂಖ್ಯೆಗಳನ್ನು ಯಾವುದೇ ವಿರುದ್ಧ ಮುಖದ ಅಂಕೆಗಳನ್ನು ಕೂಡಿದಾಗ 7 ಬರುವಂತೆ ಕೆತ್ತಿರುತ್ತಾರೆ. ಆಯುತಾಕಾರದ ದಾಳಗಳು 4 ಮುಖವುಳ್ಳದಾಗಿದ್ದು 1,6 […]

ಟಗ್ ಆಫ್ ವಾರ್ (ಹಗ್ಗ ಎಳೆಯುವ ಆಟ)

ಸ್ವದೇಶೀ ಕ್ರೀಡೆ - 0 Comment
Issue Date : 20.01.2015

ಎಲ್ಲಾ ವಯೋಮಾನದವರು ಆಡಬಹುದಾದ ಆಟ ಹಗ್ಗ ಎಳೆಯುವ ಆಟ. ಈ ಆಟ ಮನೋರಂಜನಾತ್ಮಕವಾಗಿದ್ದರೂ ಶಾರೀರಿಕ ಶಕ್ತಿ ಹಾಗೂ ಸಾಮೂಹಿಕ ಪ್ರಯತ್ನವನ್ನು ಆಟಗಾರರಲ್ಲಿ ಗುರುತಿಸುವ ಆಟವಾಗಿದೆ. ಇದರಲ್ಲಿ ಹಲವು ಪ್ರಕಾರದ ಆಟಗಳಿವೆ. ಸಾಮಾನ್ಯವಾಗಿ 8 ಜನರಿರುವ ಎರಡು ತಂಡ ಆಡುವ ಆಟದಲ್ಲಿ 35 ಅಡಿ ಉದ್ದ, 4 ಅಂಗುಲ ಸುತ್ತಳತೆಯ ಹಗ್ಗ ಇರಬೇಕು. ಹಗ್ಗದ ಮಧ್ಯದಲ್ಲಿ ಒಂದು ಪಟ್ಟಿ. ಇದರ ಎರಡು ಕಡೆಗಳಲ್ಲಿ ಆರು ಅಡಿ ದೂರದಲ್ಲಿ ಒಂದೊಂದು ಪಟ್ಟಿ. ಇದನ್ನು ಗುರುತಿಗಾಗಿ ಕಟ್ಟಬೇಕು. ಇದಕ್ಕೆ ಸರಿಯಾಗಿ ನೆಲದ […]