ನೇಪಾಳದ ಲುಂಬಿನಿಯಲ್ಲಿ ಪುರಾತನ ಬೌದ್ಧ ಮಂದಿರ ಪತ್ತೆ

ನೇಪಾಳದ ಲುಂಬಿನಿಯಲ್ಲಿ ಪುರಾತನ ಬೌದ್ಧ ಮಂದಿರ ಪತ್ತೆ

ದೇವಸ್ಥಾನಗಳು - 0 Comment
Issue Date : 27.11.2013

ವಿಶ್ವ ಪರಂಪರೆ ತಾಣಗಳಲ್ಲೊಂದಾಗಿರುವ ಬುದ್ಧನ ಜನ್ಮಸ್ಥಳವೆಂದೇ ಬಹು ಹಿಂದಿನಿಂದಲೂ ಪ್ರಚಲಿತವಾಗಿರುವ ನೇಪಾಳದ ಲುಂಬಿನಿಯಲ್ಲಿನ ಮಾಯಾದೇವಿ ದೇವಸ್ಥಾನದೊಳಗೆ ನಡೆಸಲಾದ ಉತ್ಖನನದಲ್ಲಿ ಸರಣಿ ಇಟ್ಟಿಗೆ ಮಂದಿರಗಳ ಕೆಳಗೆ ಈ ಹಿಂದೆಂದೂ ಕಂಡರಿಯದ ಕ್ರಿ.ಪೂ. ಆರನೇ ಶತಮಾನದ ಕಟ್ಟಿಗೆಯ ರಚನೆಯೊಂದು ಪತ್ತೆಯಾಗಿದೆ.  ಕಟ್ಟಿಗೆಯ ರಚನೆಯ ಮಧ್ಯಭಾಗದಲ್ಲಿ ಖಾಲಿ ಸ್ಥಳವೊಂದಿದ್ದು ಅದರ ತಳದಲ್ಲಿ  ಪುರಾತನ ಮರವೊಂದರ ಬೇರುಗಳು ಇದ್ದು, ಈ ಖಾಲಿ ಸ್ಥಳದಲ್ಲಿ ಹಿಂದೆ ಮರವಿದ್ದಿರಬೇಕು ಎನ್ನುವುದು ಪುರಾತತ್ವ ಶಾಸ್ತ್ರಜ್ಞರ ಅಭಿಮತ. ಲುಂಬಿನಿಯನ್ನು ಗೌತಮ ಬುದ್ಧನ ಜನ್ಮಸ್ಥಳವೆಂದು ನಂಬಿದ್ದ ಲಕ್ಷಾಂತರ ಭಕ್ತರು ಯಾತ್ರಾರ್ಥಿಗಳಾಗಿ […]