ಕುಮಟಾದಲ್ಲಿ ಅರ್ಥಪೂರ್ಣ ಯುಗಾದಿ ಉತ್ಸವ

ಕುಮಟಾದಲ್ಲಿ ಅರ್ಥಪೂರ್ಣ ಯುಗಾದಿ ಉತ್ಸವ

ಉತ್ತರ ಕನ್ನಡ - 0 Comment
Issue Date : 21.04.2014

ಕುಮಟಾ: ಇಲ್ಲಿ ಯುಗಾದಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದರ ಅಂಗವಾಗಿ ಏರ್ಪಡಿಸಲಾದ ಮಾತಾ-ಪಿತೃ ಪೂಜನ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿತ್ತು. ಮಕ್ಕಳು ತಮ್ಮ ತಮ್ಮ ಮಾತಾ ಪಿತೃಗಳನ್ನು ಪೂಜಿಸಿದ್ದು ಅರ್ಥಪೂರ್ಣವಾಗಿ ನಮ್ಮ ಸಂಸ್ಕೃತಿಯನ್ನು ಬಿಂಬಿಸಿತು.ಭಾರತವು ಅನೇಕ ವರ್ಷ ಪಾಶ್ಚಿಮಾತ್ಯರ ಗುಲಾಮಗಿರಿಯಲ್ಲಿದ್ದರೂ ನಮ್ಮ ಸಂಸ್ಕೃತಿಯನ್ನು ಕಳೆದುಕೊಂಡಿರಲಿಲ್ಲ. ಭಾರತಕ್ಕೆ ಯಾವಾಗ ಸ್ವರಾಜ್ಯ ದೊರಕಿತೋ ಆಗಿನಿಂದ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ಜನರು ಭ್ರಮೆಗೆ ಒಳಗಾಗಿದ್ದು, ಈ ಭ್ರಮೆಯಿಂದ ಹೊರಬಂದು ಭಾರತೀಯ ಸಂಸ್ಕೃತಿಯನ್ನು ಉಳಿಸಿಬೆಳೆಸುವ ಕಾರ್ಯವಾಗಬೇಕು ಎಂದು ಕುಟುಂಬ ಪ್ರಬೋಧನದ ಪ್ರಮುಖರಾದ ಸು. ರಾಮಣ್ಣ ಹೇಳಿದರು.ಅವರು […]

ಕಾರವಾರದಲ್ಲಿ ಬಾಳಾಸಾಹೇಬ್ ದೇಶಪಾಂಡೆ ಜನ್ಮಶತಾಬ್ದಿ

ಕಾರವಾರದಲ್ಲಿ ಬಾಳಾಸಾಹೇಬ್ ದೇಶಪಾಂಡೆ ಜನ್ಮಶತಾಬ್ದಿ

ಉತ್ತರ ಕನ್ನಡ - 0 Comment
Issue Date : 03.02.2014

ಕಾರವಾರ: ವನವಾಸಿ ಕಲ್ಯಾಣ ಸಂಸ್ಥೆಯ ಕಾರವಾರ ಶಾಖೆ ಕಳೆದ ಜ.12ರಂದು ಸಂಸ್ಥೆಯ ಸಂಸ್ಥಾಪಕ ಬಾಳಾಸಾಹೇಬ್ ದೇಶಪಾಂಡೆ ಅವರ ಜನ್ಮ ಶತಾಬ್ದಿಯನ್ನು ಆಚರಿಸಿತು. ಈ ಸಂದರ್ಭದಲ್ಲಿ ‘ಸ್ನೇಹಮಿಲನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾನಪದ ಕೋಗಿಲೆ ಎಂದೇ ಹೆಸರಾದ ನಾಡೋಜ ಪ್ರಶಸ್ತಿ ಪುರಸ್ಕೃತ ವನವಾಸಿ ಮಹಿಳೆ ಸುಕ್ರಿ ಬೊಮ್ಮು ಗೌಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ವಕ್ತಾರರಾಗಿ ಆಗಮಿಸಿದ್ದ ರಾಜ್ಯಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ ಸಂಸ್ಥೆಯ ಹುಟ್ಟು, ಬೆಳವಣಿಗೆ, ಕಾರ್ಯವ್ಯಾಪ್ತಿ, ವನವಾಸಿಗಳ ಬದುಕಿನ ಸ್ಥಿತಿಗತಿ ಕುರಿತು ವಿವರಿಸಿದರು. ಸಂಸ್ಥಾಪಕ ಬಾಳಾಸಾಹೇಬ ದೇಶಪಾಂಡೆ ಭಾವಚಿತ್ರಕ್ಕೆ […]

ವಾರಕರಿ ಸಂತರ ಸಮಾವೇಶ

ವಾರಕರಿ ಸಂತರ ಸಮಾವೇಶ

ಉತ್ತರ ಕನ್ನಡ - 0 Comment
Issue Date : 11.12.2013

ಶಿರಸಿ: ಧಾರ್ಮಿಕ ಮನೋಭಾವದ ಜೊತೆಗೆ ವ್ಯಕ್ತಿಯು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದರೆ ಮಾತ್ರ ಧರ್ಮದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅಖಿಲ ಭಾರತ ಶ್ರದ್ಧಾ ಜಾಗರಣ ಪ್ರಮುಖ ದೆಹಲಿಯ ಸುರೇಶ ಕುಲಕರ್ಣಿ ಅಭಿಪ್ರಾಯಪಟ್ಟರು.ತಾಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಇತ್ತೀಚೆಗೆ ವನವಾಸಿ ಕಲ್ಯಾಣ ಆಶ್ರಯದಲ್ಲಿ ನಡೆದ ಪಂಢರಪುರ ವಾರಕರಿ ಸಂತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ ಅನ್ಯ ಧರ್ಮೀಯರು ಪ್ರಭುತ್ವ ಸಾಧಿಸುತ್ತಿದ್ದು, ಹಿಂದೂ ಧರ್ಮೀಯರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಧರ್ಮ ಸಂಘಟನೆ ಪ್ರತಿಯೊಬ್ಬರಿಂದ ಜಾಗೃತವಾಗಬೇಕಿದೆ ಎಂದರು. ಹಿಂದೂ ಧರ್ಮದ ಹಬ್ಬ, ಜಾತ್ರೆಗಳಲ್ಲಿ […]