ಶ್ರೀಮಾತೆ ಶಾರದಾದೇವಿಯವರ ಜನ್ಮದಿನ

ಶ್ರೀಮಾತೆ ಶಾರದಾದೇವಿಯವರ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 21.12.2013

ಶ್ರೀಮಾತೆ ಶಾರದಾದೇವಿಯವರು ಬಂಗಾಳದ ಜಯರಾಮವಟಿ ಎಂಬ ಗ್ರಾಮದಲ್ಲಿ 22 ನೇ ಡಿಸೆಂಬರ್ 1853ರಂದು ಜನಿಸಿದರು. ಸರಳ ಸ್ವಭಾವದ ಅವರ ತಂದೆ ರಾಮಚಂದ್ರ ಮುಖ್ಯೋಪಾಧ್ಯಾಯ ಮತ್ತು ತಾಯಿ ಶ್ಯಾಮಾಸುಂದರಿಯರದು, ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. 5 ವರ್ಷದ ಶಾರದೆಯ ಮದುವೆ 23 ವರ್ಷದ ಶ್ರೀರಾಮಕೃಷ್ಣರೊಂದಿಗಾಯಿತು. ಈ ಸಮಯದಲ್ಲಿ ಶ್ರೀ ರಾಮಕೃಷ್ಣರು ಹಲವಾರು ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದ್ದರು. ತಮ್ಮ 18ನೇ ವಯಸ್ಸಿನಲ್ಲಿ ಶಾರದಾದೇವಿಯವರು, ಶ್ರೀರಾಮಕೃಷ್ಣರು ಅರ್ಚಕರಾಗಿದ್ದ ದಕ್ಷಿಣೇಶ್ವರದ ಕಾಳೀ ಮಂದಿರಕ್ಕೆ ಆಗವಿಸಿದರು. ಅವರನ್ನು ಪ್ರೀತಿ ಮತ್ತು ಆದರದಿಂದ ಬರಮಾಡಿಕೊಂಡ ಶ್ರೀರಾಮಕೃಷ್ಣರು, ಲೌಕಿಕ ಮತ್ತು ಆಧ್ಯಾತ್ಮಿಕ […]

ಕ್ರಾಂತಿಕಾರಿ ನೀಲಕಂಠ ಬ್ರಹ್ಮಚಾರಿ

ಕ್ರಾಂತಿಕಾರಿ ನೀಲಕಂಠ ಬ್ರಹ್ಮಚಾರಿ

ವ್ಯಕ್ತಿ ಪರಿಚಯ - 0 Comment
Issue Date : 04.12.2013

ಕ್ರಾಂತಿಕಾರಿ ನೀಲಕಂಠ ಬ್ರಹ್ಮಚಾರಿಗೆ ನಲವತ್ತು ವರ್ಷ ವಯಸ್ಸಾಗುವ ಹೊತ್ತಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹದಿನೇಳು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದಿದ್ದರು. ಅವರೆಂದರೆ ಬ್ರಿಟಿಷ್ ಸರ್ಕಾರಕ್ಕೆ ನಡುಕ. ಮುಂದೆ ಅವರು  ಸಂನ್ಯಾಸಿಯಾಗಿ ಸದ್ಗುರ್ ಓಂಕಾರ್ ಅದರು. 1889ರ ಡಿಸೆಂಬರ್ 4ರಂದು ಆಗಿನ ಮದರಾಸ್ ಪ್ರಾಂತದ ತಂಜಾವೂರು ಜಿಲ್ಲೆಯ ಶಿರ್ಕಾಲಿ ಪಟ್ಟಣ್ಣದಲ್ಲಿ ಜನಿಸಿದರು. ತಂದೆ ಶಿವರಾಮಕೃಷ್ಣ ಅಯ್ಯರ್, ತಾಯಿ ಸುಬ್ಬಲಕ್ಷ್ಮಿ. ಇವರು ಜಮೀನ್ದಾರರಾಗಿದ್ದರು. ಬಾಲ್ಯವನ್ನು ಹಳ್ಳಿಯ ವಾತಾವರಣದಲ್ಲಿ ಕಳೆದ ನೀಲಕಂಠ ಶಿರ್ಕಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಆದರೆ ಪ್ರೌಢ ಶಾಲೆಗೆ ಅವರ […]

'ಸಸ್ಯವಿಜ್ಞಾನಿ' ಜಗದೀಶಚಂದ್ರ ಬೋಸ್

‘ಸಸ್ಯವಿಜ್ಞಾನಿ’ ಜಗದೀಶಚಂದ್ರ ಬೋಸ್

ವ್ಯಕ್ತಿ ಪರಿಚಯ - 0 Comment
Issue Date : 29.11.2013

ಗಿಡಗಳಿಗೂ ನಮ್ಮ ಹಾಗೆಯೇ ನೋವು ಉಂಟು. ಇದನ್ನು ಜಗತ್ತಿಗೆ ತಿಳಿಸಿಕೊಟ್ಟವರು ಭಾರತದ ವಿಜ್ಞಾನಿ ಜಗದೀಶಚಂದ್ರ ಬೋಸ್. ಬೋಸರು 1858ರ ನವೆಂಬರ್ 30ರಂದು ಡಕ್ಕಾ ಜಿಲ್ಲೆಯ ಫರೀದ್ ಪುರ ಎಂಬಲ್ಲಿ ಜನಿಸಿದರು. ತಂದೆ ಭಗವಾನ್ ಚಂದ್ರ ಬೋಸ್ ಫರೀದ್. ಅವರು ಬಡಜನರಿಗೆ, ಕಷ್ಟದಲ್ಲಿರುವವರಿಗೆ, ಬಿಡುಗೈಯ ಸಹಾಯ ಮಾಡುತ್ತಿದ್ದರು.  ಜಗದೀಶಚಂದ್ರರ ಬಾಲ್ಯದಲ್ಲಿ ಹಣವಂತರೂ, ವಿದ್ಯಾವಂತರೂ, ಪಾಶ್ವಾತ್ಯ ಸಂಸ್ಕೃತಿಯ ಕಡೆಗೇ ವಾಲುತ್ತಿದ್ದ ಕಾಲ. ಆದರೆ ತಂದೆ ಮಗನನ್ನು ಆಂಗ್ಲ ಶಾಲೆಗೆ ಸೇರಿಸದೆ, ಬಂಗಾಳಿ ಶಿಕ್ಷಣ ಕೊಡಿಸಿದರು. ಪುಟ್ಟ ಜಗದೀಶಚಂದ್ರನಿಗೆ ತಾನು ಕಂಡ […]

ಕನಕದಾಸರ ಜಯಂತಿ ನ.20

ವ್ಯಕ್ತಿ ಪರಿಚಯ - 0 Comment
Issue Date : 19.11.2013

  ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ (1509-1609) ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡಭಾಷೆಯ ಪ್ರಸಿದ್ಧ ಕವಿಗಳು, ಮತ್ತು ಪುರಂದರದಾಸರೊಂದಿಗ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ಸೋತ ಅವರಿಗೆ ಉಪರತಿ ಉಂಟಾಗಿ ಹರಿ ಭಕ್ತರಾದರಂತೆ. ಕನಕದಾಸರ ಊರು ಹಾವೇರಿ ಜಿಲ್ಲೆಯ ಕಾಗಿನೆಲೆಯ ಬಾಡಾ ಗ್ರಾಮ. ಕನಕದಾಸರ ಕೀರ್ತನೆಗಳು ಕಾಗಿನೆಲೆಯ ಕೇಶವನಿಗೆ ಅರ್ಪಿತವಾಗಿರುವುದನ್ನು ಗಮನಿಸಬಹುದು. ಜನಪ್ರಿಯ ನಂಬಿಕೆಯಂತೆ, ಕನಕದಾಸರು ಕುರುಬ ವಂಶಕ್ಕೆ ಸೇರಿದವರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು […]

ಮಕ್ಕಳ ದಿನಾಚರಣೆ - ಚಾಚಾ ನೆಹರೂ ಅವರ ಜನ್ಮದಿನ

ಮಕ್ಕಳ ದಿನಾಚರಣೆ – ಚಾಚಾ ನೆಹರೂ ಅವರ ಜನ್ಮದಿನ

ವ್ಯಕ್ತಿ ಪರಿಚಯ - 2 Comments
Issue Date : 14.11.2013

ಜವಾಹರ್ ಲಾಲ್ ನೆಹರು ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. ‘‘ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಾರೆ’’ ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ. ನವೆಂಬರ್ […]

ನಂ.12 ಪಾಂಡುರಂಗ ಮಹದೇವ ಬಾಪಟ್ ಜನ್ಮ ದಿನ

ವ್ಯಕ್ತಿ ಪರಿಚಯ - 0 Comment
Issue Date : 12.11.2013

ಭಾರತವನ್ನು ಗುಲಾಮಗಿರಿಯಲ್ಲಿಟ್ಟ ಪರದೇಶ ಸರ್ಕಾರದ ವಿರುದ್ಧ ಹೋರಾಡಿದ ಧೀರರು. ವಿದ್ಯಾರ್ಥಿಯಾಗಿದ್ದಾಗಲೆ ‘ದೇಶದ ದಾಸ್ಯ ಮುಕ್ತಿಗೆ ನನ್ನ ಪ್ರಾಣ ಮೀಸಲು’ ಎಂದು ಮಾಡಿದ ಪ್ರತಿಜ್ಞೆಯನ್ನು ಪಾಲಿಸಿ, ಸೆರೆಮನೆ ಕಂಡರು. ಅವರ ನಾಯಕತ್ವವನ್ನು ಮೆಚ್ಚಿ ದೇಶ ಅವರನ್ನು ‘ಸೇನಾಪತಿ ಬಾಪಟ್ ’ ಎಂದು ಕರೆಯಿತು. ಸ್ವತಂತ್ರ ಭಾರತದಲ್ಲಿ ಹರಿಜನರ, ದೀನದಲಿತರ ಸೇವೆಯಲ್ಲಿ ಹಣ್ಣಾದರು. ಪಾಂಡುರಂಗ ಮಹದೇವ ಬಾಪಟ್ ಅವರು ಅಹಮದ್‍ನಗರ ಜಿಲ್ಲೆಯ ಪಾರನೇರ್‍ನಲ್ಲಿ 1880ರ ನವೆಂಬರ್ 12 (ಕಾರ್ತೀಕಾ ಶುದ್ಧ ಏಕಾದಶಿ) ರಂದು ಜನಿಸಿದರು. ತಂದೆ ಮಹದೇವಪಂತರು. ಸಿರಿತನದಲ್ಲಿ ಕೂಡ […]

ದತ್ತೋಪಂತ ಠೇಂಗಡಿ ಇವರ ಜನ್ಮದಿನ ನ.10

ವ್ಯಕ್ತಿ ಪರಿಚಯ - 0 Comment
Issue Date : 08.11.2013

ದತ್ತೋಪಂತ  ಠೇಂಗಡಿ ಅವರು 1920 ನವೆಂಬರ್ 10ರ ದೀಪಾವಳಿಯಂದು ಜನನ. ಸ್ವಾತಂತ್ರ್ಯಸಮರದ ದಿನಗಳಲ್ಲಿ ಶಾಲಾಜೀವನ, ಮುಂದೆ ಕಾಲೇಜು ವಿದ್ಯಾರ್ಥಿ ಬದುಕಿನೊಡನೆಯೇ ಸೋಶಿಯಲಿಸ್ಟ ರಿಪಬ್ಲಿಕನ್ ಪಾರ್ಟಿಯ ನೇತೃತ್ವ.  ಮೂವತ್ತರ ದಶಕದಲ್ಲಿ ಸಂಘದ ಸಂಪರ್ಕ, 1941 ರಿಂದ ಪ್ರಚಾರಕ.  ಸಂಸ್ಕೃತ, ಮರಾಠಿ, ಇಂಗ್ಲೀಷ್, ಹಿಂದಿ ಇತ್ಯಾದಿ ಭಾಷೆಗಳಲ್ಲಿ ಪಾಂಡಿತ್ಯ, ದಾರ್ಶನಿಕ ಭಾಷ್ಯಕಾರ ಉಭಯಭೂಮಿಕೆಯನ್ನೂ ನಿರ್ವಹಿಸಿದ ಸಾಮರ್ಥ್ಯಶಾಲಿ.  ಕಮ್ಯೂನಿಸ್ಟ್ ಸಿದ್ಧಾಂತದ ಅಧ್ಯಯನ ಮಾಡಿ ಅಲ್ಲಿನ ಕಾರ್ಮಿಕ ಸಂಘಟನೆಯಲ್ಲೂ ಕಾಂಗ್ರೆಸ್ ಪಕ್ಕದ ಕಾರ್ಮಿಕ ಸಂಘಟನೆ (ಇಂಟಕ್)ಯಲ್ಲೂ ಕೆಲಸ ಮಾಡಿದ ಅನುಭವಿ.  ಅದೇ ಅನುಭವದಿಂದ ಭಾರತೀಯ […]

ಪೃಥ್ವಿರಾಜ್ ಕಪೂರ್ ರವರ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 03.11.2013

ರಂಗಭೂಮಿ  ಹಾಗೂ  ಚಲನಚಿತ್ರಗಳಲ್ಲಿ ಜೀವನವೀಡಿ ದುಡಿದು, ಪೃಥ್ವೀರಾಜ್ ಕಪೂರರು ಇಡೀ ದೇಶದಲ್ಲಿ ಖ್ಯಾತರಾದರು. ಈ ಕಲೆಗಳಿಗೆ ಮಹತ್ವದ ಸ್ಥಾನ ದೊರಕಿಸಿ ಕೊಟ್ಟರು. ಅವರು ‘ರಂಗಭೂಮಿ’-ಚಲನಚಿತ್ರ ಪಿತಾಮಹಾ. ಈ ರಂಗಗಳಲ್ಲಿ ಕಲೆ, ಶಿಸ್ತು, ವ್ಯವಸ್ಥೆ ಮತ್ತು ವಾಸ್ತವಿಕತೆಗಳನ್ನು ತಂದು ಕೊಟ್ಟ ಶ್ರೀಷ್ಠ ಕಲಾವಿದ- ಶ್ರೇಷ್ಠ ಮಾನವ. ತನ್ನನ್ನೂ ತನ್ನ ಕುಟುಂಬದ ಮೂರು ತಲೆಮಾರುಗಳನ್ನೂ ಕಲೆಗಾಗಿಯೇ ಮುಡಿಪಾಗಿಸಿದ ಅದ್ವೀತಿಯ ಕಲಾರಾಧಕ. ಪೆಷಾವರದ ಶ್ರೀಮಂತ ಪಠಾಣ ಕುಟುಂಬದಲ್ಲಿ ದಿವಾನ್ ಬಶೇಶರ್ ನಾಥ ಹಾಗೂ ವೈಷ್ಣೋದೇವಿಯ ಹಿರಿಯ ಮಗನಾಗಿ ಪೃಥ್ವೀರಾಜರು ನವಂಬೆರ್ 3, […]

ಮಂಜಯ್ಯ ಹೆಗ್ಗಡೆನ.2 ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 02.11.2013

 ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಸ್ಥಳವಾದ ಧರ್ಮಸ್ಥಳದ ಧರ್ಮದರ್ಶಿಗಳು. ಸರಳ ಜೀವನ, ಸರಳ ಸ್ವಭಾವ. ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳಿ ನೇರವಾಗಿ ಅವರ ದುಃಖದ ಭಾರವನ್ನು ಕಡಿಮೆ ಮಾಡಿದ ಹಿರಿಯರು. ಧರ್ಮಸ್ಥಳ ಮಂಜಯ್ಯ ಹೆಗ್ಗಡೆ ಎಂದೇ ಪ್ರಸಿದ್ಧರಾದ ಮಂಜಯ್ಯ ಹೆಗ್ಗಡೆಯವರು ನವೆಂಬರ್ 2, 1889ರಲ್ಲಿ ವಿಟ್ಲದಲ್ಲಿ ಜನಿಸಿದರು. ತಂದೆ ಚಕ್ಕಿತ್ತಡಿ ಅಣ್ಣಿ ಶೆಟ್ಟರು ಮತ್ತು ತಾಯಿ ಅನಂತಮತಿಯಮ್ಮನವರು. ಇವರಿಬ್ಬರು ದೇವತಾರಾಧನೆಯಲ್ಲಿ ಧರ್ಮಕಾರ್ಯಗಳಲ್ಲಿ ತತ್ಪರರಾಗಿ, ವ್ರತ ಪೂಜೆಗಳನ್ನು ನಡೆಸುತ್ತಿದ್ದರು. ತಾಯಿಯ  ಆಚಾರ ವಿಚಾರಗಳು, ಧಾರ್ಮಿಕ ವಿಧಿ ವಿಧಾನವು […]

ಚೈತನ್ಯಶೀಲ ಹಿಂದುತ್ವದ ಆರಾಧಕಿ ಭಗಿನಿ ನಿವೇದಿತಾ

ಚೈತನ್ಯಶೀಲ ಹಿಂದುತ್ವದ ಆರಾಧಕಿ ಭಗಿನಿ ನಿವೇದಿತಾ

ಭಾರತ ; ವ್ಯಕ್ತಿ ಪರಿಚಯ - 0 Comment
Issue Date : 28.10.2013

ಭಾರತದ ಪುನರುತ್ಥಾನಕ್ಕಾಗಿ ತನ್ನ ಸಾರಸರ್ವಸ್ವವನ್ನೂ ಅರ್ಪಿಸಿದ ಚೈತನ್ಯಶೀಲ ಹಿಂದುತ್ವದ ಆರಾಧಕಿ ಭಗಿನಿ ನಿವೇದಿತಾ  ಸ್ವಾಮಿ ವಿವೇಕಾನಂದರ ಮಾನಸಕನ್ಯೆ, ಭಗಿನಿ ‘ನಿವೇದಿತಾ’ಳ ಪೂರ್ವಾಶ್ರಮದ ಹೆಸರು ಮಾರ್ಗರೆಟ್ ಎಲಿಜಬೆತ್ ನೊಬಲ್ 1867ರ ಅಕ್ಟೋಬರ್ 28ರಂದು ಐರ್ಲೆಂಡಿನಲ್ಲಿ ಹುಟ್ಟಿದರು. ತಾಯಿ ಮೇರಿ ಇಸಬೆಲ್, ತಂದೆ ಸಾಮ್ಯುಅಲ್. ಅಪಾರವಾದ ಧೈರ್ಯ ಮತ್ತು ದೇಶಭಕ್ತಿ, ‘ಮಾನವ ಸೇವೆಯೇ ಭಗವಂತನ ಸೇವೆ’ ಎಂಬ ಆದರ್ಶಗಳನ್ನು ಬಾಲ್ಯದಿಂದಲೇ ಅವಳು ರೂಢಿಸಿಕೊಂಡಿದ್ದಳು.  ದೀನ ದಲಿತರ ಹಾಗೂ ಶ್ರೀಸಾಮಾನ್ಯರ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ವಿದೇಶಿ ಮಹಿಳೆ ಭಗಿನಿ ನಿವೇದಿತಾ ವಿಶ್ವ ಮಹಿಳಾ […]